Nov 302020
ವರ್ಣನೆಯ ವಸ್ತುಗಳು:
೧. ಕೋಗಿಲೆಯು ಕೆಮ್ಮಿದಾಗ
೨. ಗರಿ(crisp)ಯಿರದ ಉದ್ದಿನ ವಡೆ
೩. ಹಳೆಯ ಕೈಗಡಿಯಾರ
ವಸಂತತಿಲಕದ ಸಮಸ್ಯೆ:
ಕಾರ್ಗಾಲಮಿಚ್ಚಿಸದ ಸೋಗೆಯೆ ಸಾಜಮಲ್ತೇ
ವರ್ಣನೆಯ ವಸ್ತುಗಳು:
೧. ಕೋಗಿಲೆಯು ಕೆಮ್ಮಿದಾಗ
೨. ಗರಿ(crisp)ಯಿರದ ಉದ್ದಿನ ವಡೆ
೩. ಹಳೆಯ ಕೈಗಡಿಯಾರ
ವಸಂತತಿಲಕದ ಸಮಸ್ಯೆ:
ಕಾರ್ಗಾಲಮಿಚ್ಚಿಸದ ಸೋಗೆಯೆ ಸಾಜಮಲ್ತೇ
೧. ಕೋಗಿಲೆಯು ಕೆಮ್ಮಿದಾಗ
ಮಾವಿನ ಚಿಗುರನು ತೀವುತೆ ತಿನ್ನುತೆ
ನೋವಿನ ಕೊರಳಿಂ ಕೆಮ್ಮಲು ಕೋಗಿಲೆ
ಭಾವಿಪರಲ್ತೆ ಕುಹುಯೆಂದು
೨. ಗರಿ(crisp)ಯಿರದ ಉದ್ದಿನ ವಡೆ
ವಡೆಯೆಂದೊಡೆ ಗರಿಯಿರ್ಕುಂ
ತಡಯದೆ ತಿಂಬರ್ಗೆ ಮೋದಮಂ ನೀಳ್ಗುಂ ದಲ್
ತಡಿಯಲ್ ಗರಿಯಂ ಕಳೆಗುಂ
ಕಡಿಯದ ಮೊಸರಿನೊಳಮಿಡುವುದೊಂದೇ ಮಾರ್ಗಂ
(ಗರಿಯಿರದ ವಡೆ ಅಂದರೆ ಮೊಸರು-ವಡೆಯೊಂದೇ )
೩. ಹಳೆಯ ಕೈಗಡಿಯಾರ
ಕಾಲದನುಸರಣೆಗೆನುತುಂ
ಕೀಲಿಕೆಯಂ ಕುಡುಗಮಲ್ತೆ ನಿಚ್ಚಂ ಜೀಯಂ
ಲೀಲೆಯಿನೆಸೆದಪ ತಿರುಪುಂ
ಕಾಲಪುರುಷನುಂ ಸನಾತನದ ಗಡಿಯಾರಂ
ಸಮಸ್ಯೆ:
ನೂರ್ಗಣ್ಗೆನೀರಪನಿಯೇ ದುಗುಡಂಗೊಳಲ್ಕಾಂ
ಬೋರ್ಗಲ್ಲಮೇಲೆ ಗರಿಬಿಚ್ಚುತೆ ಶುಷ್ಕಮಾಗಲ್
ಪಾರ್ಗೆಲ್ವೆನೆಂದೆ ಕುಣಿಗುಂ ಮಳೆಯೊಳ್ ಮಯೂರಂ,
ಕಾರ್ಗಾಲಮಿಚ್ಚಿಸದ ಸೋಗೆಯೆ ಸಾಜಮಲ್ತೇ
ಕೋಗಿಽಲೆಽ ಕೆಮ್ಮಽಲುಽಮಾಗಽಲುಽ ಕುಹುವೇನುಽ
ರಾಗಽವಽ ಪಾಡಽಲಾಗಽಲುಂ| ಕುಹುವೇನುಽ
ರೋಗಽ-ರಾಗಗಳೊಂದೇನೇ ಪೇಳ್!!
ಕೋಗಿಲೆಯದೇಂ ಗಾಯಕರದೇಂ
ರಾಗಗಾಯನಗೈವರೆಲ್ಲರು
ಪೋಗಿ ಕೆಮ್ಮಿ-ಕ್ಯಾಕರಿಸುಗಿವರಾಗಳೀಗಳ್ ಕಫವನು| (ಅರ್ಧಭಾಮಿನಿ)
(’ಅಂಗುಲಹುಳುವಿನ ಪರಕಾಯಪ್ರವೇಶ’ ಎಂಬ ಕವನದಲ್ಲಿ ಶ್ರೀ ಎ. ಕೆ. ರಾಮಾನುಜನ್ ಹೇಳಿದ್ದು – https://groups.google.com/g/sahaspandana/c/umAg8NHb2sc/m/9sEgjdthCQAJ)
ಮಾಮರದೆ ಕೋಗಿಲೆಯು ಕೆಮ್ಮಿರೆ
ತಾ ಮರದಿ ಕುಳಿತಿರ್ದ ಕಾಗೆಯು
ಭಾಮೆಯಿನ್ನಿವಳೆನಗಮಾದಳ್ ಕೇಳ್ವರಾರಿವಳ|
ಕಾಮಮಿಂತೀ ಕನಸ ಕಾಣುತೆ
ರಾಮೆ!ಯೆನುತಲಿ ಸಾರಲಾ ಪಿಕ
ಸಾಮಗಾನವ ಹಾಡುತಲಿ ತಾ ಹಾರಿತಲ ನಭಕೆ||
ಚೆನ್ನಾದ ಕಲ್ಪನೆ
ಹಳೆಯ ಗಡಿಯಾರ ಧಾರಕನಿಗೆ ಹೇಳಿದ್ದು:
ಹಳೆಯ ಗಡಿಯಾರವನು ಹಪಹಪಿಸಿ ಕೊಂಡೆಯೈ
ಪುಳಕವೀವುದು ಪುರಾತನವಸ್ತುಗಳ್|
ಕಳೆದ ಕಾಲವನೇನ ಬಲ್ಲೆನಾಂ, ಮಾತ್ರಮೇ
ತಿಳಿವೆನೆನ್ನಯ ಪುಟ್ಟಿನಿಂ ಕಾಲಮಂ||
ಗರಿಯೊಂದೆ ಗುಣವೇನು? ಹುದುಗಿರಲುಬೇಡವೇಂ?
ಪರಿಮಳವು ಮೇಣ್ ರುಚಿಯು ಬೇಕು ಕಾಳ್ಮೆಣಸ|
ಸುರುಚಿಯಿಲ್ಲದೆಲಿರ್ಪ ವಡೆಯೇನು ಖೀರೇನು
ತಿರುಪೆಯವನುಂ ತಿನ್ನ – ಹಾದಿರಂಪ||
ಸೋಗೆ=ಬೆಟ್ಟದಲ್ಲಿ ಸಿಕ್ಕುವ ದೊಡ್ಡ ಹುಲ್ಲು, ಕಾಶಿಹುಲ್ಲು ಎಂಬೊಂದು ತಳಿಯ ಇಂಥ ಹುಲ್ಲಿನಿಂದ ಗುಡಿಸಿಲಿಗೆ ತಾರಸಿಯನ್ನು ಮಾಡುತ್ತಾರೆ. ಕಬ್ಬಿನ ಓಣಗಿದ ಗರಿಗಳನ್ನೂ ಸೋಗೆ ಎನ್ನುತ್ತಾರೆ. ಕಬ್ಬು ಕಟಾವಾದಮೇಲೆ ಈ ಸೋಗೆಯನ್ನು ದನಗಳಿಗೆ ಮೇವಾಗಿ ಬಳಸಲು ಬಣವೆಯಾಗಿ ಸಂರಕ್ಷಿಸಬಹುದು. ತಾನು ಒದ್ದೆಯಾಗಿ ಕೊಳೆಯುವಂತಾಗಬಾರದೆಂದು ಬಣವೆ ಮಳೆಗಾಲವನ್ನು ಇಚ್ಛಿಸದು.
ದುರ್ಗಂಧ ಸೂಸುವುದು ಹುಲ್ಲದು ಶೀರ್ಣಗೊಳ್ಳಲ್
ನಿರ್ಗಂದಶೌಚದಿನದಿದ್ದೊಡಮಲ್ತೆ ಖಾದ್ಯಂ|
ನೂರ್ಗಾಲಮಾಕಳುಗಳಿಂಗೆನಿತೋ ಸುಪಿಂಡಂ(food)
ಕಾರ್ಗಾಲಮಿಚ್ಚಿಸದ ಸೋಗೆಯೆ ಸಾಜಮಲ್ತೇ||
ಕೋಗಿಲೆಗೆ ಕೆಮ್ಮಾದಾಗ
ಕೋಗಿಲೆಗಂ ಕೆಮ್ಮಾದೊಡೆ
ಬಾಗಿಸಿ ಕೊರಳನ್ನೆ ಕೆಮ್ಮಿ ರೆಕ್ಕೆಯೊಳೊರೆಸಲ್
ಸೋಗಂಬಟ್ಟಿತು ನಯದಿಂ
ಬೇಗನೆ ಬೆದರುತ್ತಲೇನುಮಾಗದ ತೆರದೊಳ್
ಗರಿಯಾದ ವಡೆ
ಅಗಿವಾಗ ಕರಕಿಲ್ಲ ಬಗೆವಾಗ ಹಿತವಿಲ್ಲ
ಮುಗಿದಾಗ ಸಂತೃಪ್ತಿಯದಿಲ್ಲ – ವಡೆಯಿಂತು
ಬಗೆದಾಗಲಿಡ್ಲಿ ತಾನೆಂದು
ಸಮಸ್ಯೆ
1.
ವರ್ಗಾಪವರ್ಗ ಪದಸಂಕರಮಾಗುವಾಗಳ್
ಮಾರ್ಗಂಗಳೊಳ್ ಪ್ರಚಲಿಕುಂ ಋತುಚಕ್ರಮುಂ ತಾಂ
ನೀರ್ಗಾಡದಾಗಿರೆ ಜಗತ್ಪ್ರಳಯಂಗೊಳುತ್ತುಂ
ಕಾರ್ಗಾಲಮಿಚ್ಛಿಸದ ಸೋಗೆಯೆ ಸಾಜಮಲ್ತೇ
2.
ವರ್ಗಂಗಳಿಲ್ಲದೊಡೆ ಪೆಣ್ಗಳ ಸಂಕುಲಂ ತಾಂ
ಕಾರ್ಗಾಲಮಿಚ್ಛಿಸದ ಸೋಗೆಯೆ ಸಾಜಮಲ್ತೇ
3.
ನೂರ್ಗಾಲ ಬಾಳಿಬದುಕಲ್ ಮಿಗೆ ಶೀತವಾತಂ
ಕಾರ್ಗಾಲಮಿಚ್ಛಿಸದ ಸೋಗೆಯೆ ಸಾಜಮಲ್ತೇ
ಹಳೆಯ ಕೈಗಡಿಯಾರ
ಮೊನ್ನೆಯ ಗಡಿಯಾರ ನಿನ್ನೆಗೆ ಪಳತಾಗಿ
ತನ್ನಂತೆ ತಾನೆ ಕರದಿಂದ – ಸರಿದತ್ತು
ಹೊನ್ನಾದ ಕಾಲ ಮುಗಿದತ್ತು