Nov 242020
 

ವರ್ಣನೆಯ ವಸ್ತುಗಳು:

೧. ಮೋಡದ ಚಿಂತೆ

೨. ಕಾಣದ ಕೈ

೩. ಅತಿಶಯೋಕ್ತಿಯಿಂದ ಟ್ರಾಫಿಕ್ ಜಾಮ್ ವರ್ಣನೆ 

ರಥೋದ್ಧತದ ಸಮಸ್ಯೆ  

ಪ್ರಾಸವಿಲ್ಲದಿರೆ ಪದ್ಯಮೊಪ್ಪುಗುಂ 

ಇಂದ್ರವಜ್ರದ ಸಮಸ್ಯೆ

प्रासच्युतं पद्यमतीव रम्यं

  24 Responses to “ಪದ್ಯಸಪ್ತಾಹ ೪೨೩”

 1. (ಸೋತ್ಪ್ರಾಸ=exaggeration)
  ದೇಸಿಯೇನದಿರೆ ಮೇಣ್ ಸುಸಂಸ್ಕೃತಂ
  ಹಾಸುಬೀಸಿರಲುವೇಳ್ಕುಮುಕ್ತಿಯೊಳ್|
  ಸೂಸುವೋಲಿರುತೆ ಸಾಜಮನ್ನೆ, ಸೋತ್-
  ಪ್ರಾಸಮಿಲ್ಲದಿರೆ ಪದ್ಯಮೊಪ್ಪುಗುಂ||

 2. ಮೋಡದ ಚಿಂತೆ:
  ಅತ್ತಲದೊ ಭೂದೇವಿಯೊಣಗಿ ಕಂಗಾಲಾಗಿ
  ಕಿತ್ತುಬಂದಿಹುದವಳ ಚರ್ಮವಯ್ಯೋ|
  ಪೊತ್ತಿರುವೆನೀ ನೀರನವಳಿಗಾದೊಡಮಿಲ್ಲಿ
  ಕತ್ತೆತ್ತಿರುವ ಗಿರಿಯನೆಂತು ಪಾರ್ವೆಂ||

 3. ಕಾಣದ ಕೈ:
  ರಕ್ಷೆಯೋ ರೂಕ್ಷಮೋ ಕಾಂಬೆವೇಂ ರೀತಿಯನು
  ಚಕ್ಷುಗೋಚರವಲ್ಲದಿರ್ಪ ಕೈಯ|
  ದಕ್ಷತೆಯಿನಿಂ ನೋಳ್ಪೊಡರಿಯಬಲ್ಲೆವು ನಾವು
  ಪಕ್ಷವದುಮೆಂತೆಂದು ಕಾಂಬ ಕೈಯ||

 4. Traffic Jam: The earth revolves around the Sun @ 30 kmph
  ಮನಸಿನಿಂದಲ್ಲದೆಲೆ ದೇಹದಿಂ ಜೀವಿಪೆಯ
  ತಿನಿಸು-ಪೇಯವನಷ್ಟೆ ಮೈ ಕೇಳ್ವುದು|
  ಮುನಿಯದೆಲೆ ವಾಹನದ ಸಂದಣಿಯೊಳಗದೊ ನೋ-
  ಡಿನನ ಸುತ್ತುತ್ತಿರ್ಪೆ ತ್ರಿಂಶಜವದೊಳ್||

 5. ೨. ಕಾಣದ ಕೈ

  स्वप्नप्रलापं कुर्वाणः मातृस्पर्शाद्यथा शिशुः ।
  अजानन्नपि शान्तः स्यात् तथा पाति करो दिवः ॥

  The hand from heavens protects us – like child blabbering in sleep, calms by mother’s touch, without knowing that he was comforted.

  • यथा मातुः करस्पर्शः स्वप्ने प्रलपतश्शिशोः ।
   शमं दद्यात् तथा पायाददृश्यो भगवत्करः ॥

   May the hand of God protect us like the mother’s touch calming down the child blabbering in sleep – unseen but comforting.

 6. ಮೋಡದ ಚಿಂತೆ
  सोढ्वा व्यथाः, वितततीर्थचये वगाह्य
  तप्त्वाद्रिमौलिगहनेषु चिरं मयाप्ताः ।
  ताः कीदृशीं क्षितिगृहे स्थितिमाप्नुयुर्मे
  ह्यापस्सुता इत इता इति मेघचिन्ता ॥

  “I earned these water-daughters after going through so much pain, bathing in vast number of sacred rivers and toiling heard in deep mountain tops. Now they are departing. What kind of position would they acquire in their new land-home?!” – thus thinks an anxious cloud.

 7. ಸಮಸ್ಯಾಪೂರಣ:

  ತ್ರಾಸಮಿಲ್ಲದುಲಿದೋಷ್ಠ್ಯವರ್ಣಗಳ್
  ಭಾಸಮಪ್ಪುವವು ಗದ್ಯದೋಲ್ ಗಡಾ
  ನ್ಯಾಸಗೊಳ್ಳುದದುಮಿಂತುಮೆಂತುಟುಂ
  ಪ್ರಾಸಮಿಲ್ಲದಿರೆ ಪದ್ಯಮೊಪ್ಪುಗುಂ ?

 8. कश्चिद्यक्षो विलपति सतीजीवितालम्बनार्थी
  काचित् क्षेत्र-श्रमिक-विततिर्-याचते द्रोण-वृष्टिम् ।
  यन्ता हन्ताति-चल-पवनः किं मम श्रोष्यतीति
  प्रायश्-चिन्ता-शत-विदलितः खिन्नतां याति मेघः ॥

  ತನ್ನ ಮೇಲೆಯೇ ಜೀವವನ್ನು ಇಟ್ಟಿರುವ ಹೆಂಡತಿಯನ್ನುಳ್ಳ ಅವನಾವನೋ ಯಕ್ಷನು ವಿಲಪಿಸುತ್ತಿದ್ದಾನೆ (ಅವನ ಯೋಗಕ್ಷೇಮವನ್ನು ನಾನು ವಿಚಾರಿಸಬೇಕು). ಇನ್ನೊಂದೆಡೆ ಯಾವುದೋ ಒಂದು ಕೃಷಿಕರ ಗುಂಪು ಮಳೆಗಾಗಿ ನನ್ನನ್ನು ಯಾಚಿಸುತ್ತಿದೆ. ನನ್ನನ್ನು ನಿಯಂತ್ರಿಸುವವನಾದರೋ ಅತಿಯಾಗಿ ಚಲಿಸುವ ಪವನನು, ಅವನು ನನ್ನ ಮಾತನ್ನು ಕೇಳುತ್ತಾನೋ ಇಲ್ಲವೋ. ಹೀಗೆ ನೂರಾರು ಚಿಂತೆಗಳಿಂದ ಮೋಡವು ಪ್ರಾಯಶಃ ಖಿನ್ನವಾಗಿದೆ.

  • ಮೂರನೆಯ ಸಾಲನ್ನು ಹೀಗೆ ತಿದ್ದಿದರೆ ಇನ್ನೂ ಮೇಲೇನೋ –
   यन्ता हन्त! प्रकृतिचपलः किं मम श्रोष्यतीति

 9. ಸುಗಮಮಾಗಿರಲಾಗಮನಿರ್ಗಮಂ
  ಸೊಗಮೆನಿಪ್ಪುದು ದೇಹದ ಚರ್ಯೆಗಂ
  ಮಿಗಿಲೆನಲ್ ಮಲಬದ್ಧತೆ ಬಾಧಿಕುಂ
  ನಗರದೇವಿಗೆ ವಾಹನದೊಡ್ಡಿನಿಂ

  ಲೋಕಪ್ರಯೋಜನಕೆ ಸಲ್ವೊಡೆ ಸಂದುದಿಲ್ಲಂ
  ಸೌಕರ್ಯಮೆಂತೊ ತನುವರ್ಣದೆ, ಬೆಳ್ಪಿನಿಂದಂ
  ಲೋಕಕ್ಕೆ ವರ್ಷದುರು‌ಹರ್ಷಮೆ ಸಂದುದಿಲ್ಲಂ
  ಶ್ರೀಕೃಷ್ಣನಂತೆಸೆವೆನೆಂದೊಲವಾಂತುದಬ್ದಂ

  ಮಳೆಮೋಡವಾಗಿ ಲೋಕಪ್ರಯೋಜನವಾದರೆ ಮೈ ಬಣ್ಣ ಕಪ್ಪಾಗಿರುತ್ತದೆ. ಬೆಳ್ಳಗಾದರೆ ಅದರಿಂದ ಲೋಕಕ್ಕೆ ಮಳೆಯುಣಿಸಲಾಗದು. ಕೃಷ್ಣನಂತಾಗುವೆ ಎಂದಿತು ಮೋಡ.

 10. ಆವ ಕುಲದಲಿ ಜನ್ಮವೆತ್ತೆನೊ
  ಭಾವಿಸಲ್ ಮರಳೀವನೆಂದೊಡೆ
  ತೀವಿ ಬಂದುದು ಗಾಳಿ ಸೆಳೆಯುತ್ತೆನ್ನನೆತ್ತಣಮೊ
  ಆವು ಬಯಸುವುದೊಂದೆನಿಪ್ಪೊಡ-
  ಮಾ ವಿಧಿಯ ಕೈವಾಡಮಿನ್ನೊಂ-
  ದಾವಿಗೆತ್ತಣ ಪುರುಡೆನುತ್ತುಂ ನೊಂದುದಂಬುದವು

  ನಾನು ಜನಿಸಿ ಬಂದ ಕುಲಕ್ಕೆ ಮರಳಿ ಕೊಡೋಣ ಎಂದರೆ ಗಾಳಿ ಮತ್ತೆಲ್ಲಿಗೋ ತೇಲಿಸಿಕೊಂಡು ಹೋಯಿತು. ನಾವು ಬಯಸುವುದೊಂದಾದರೆ ವಿಧಿಯ ಕೈವಾಡ ಇನ್ನೊಂದು. ಅದರ ಮುಂದೆ ಆವಿಯದೇನು ನಡೆದೀತು?

 11. ಮೋಡದ ಚಿಂತೆ
  ಮೋಡದ ಚಿಂತೆಯ ಪಾಡೇಕೆ ನಮಗಿಂದು
  ಕೋಡಿಗಳಲ್ಲಿ ನೀರಿಲ್ಲ – ದಿರುವಾಗ
  ನೋಡಿ ತಾ ಗುಡುಗುತ್ತಿರುವಾಗ

  ಕಾಣದ ಕೈ
  ಹೊಡೆವುದೊ ಕಡಿವುದೊ ಕೆಡುಕನ್ನೆ ಕೊಡುವುದೊ
  ಮಿಡಿಯುತ್ತ ತಡವಿ ಸುಖಿಪುದೊ – ತಿಳಿಯದು
  ಬಿಡುಬಿಡು ಕಾಂಬ ಕೈ ಲೇಸು

  ಸಮಸ್ಯೆ
  1.
  ದೇಸಬಾಸೆಯೆನುತಿರ್ಪರೆಲ್ಲರ್ಗಂ
  ವೇಸಬೂಸಣಮೆನುತ್ತೆ ಪೇಳ್ವರ್ಗಂ
  ಘಾಸಿಗೈಯುತಿರೆ ಭಾಷೆಯನ್ನೆಗಂ
  ಪ್ರಾಸಮಿಲ್ಲದಿರೆ ಪದ್ಯಮೊಪ್ಪುಗುಂ
  2.
  ಬೋಸು…ಮಗನೆಯೆಂಬ ರೀತಿಯಾ
  ಪ್ರಾಸಮಿಲ್ಲದಿರೆ ಪದ್ಯಮೊಪ್ಪುಗುಂ

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)