ನಾನು ಅನುಷ್ಟುಭ್ ಮತ್ತು ಸೀಸಪದ್ಯಕ್ಕೆ ಪ್ರಾಸವನ್ನು ಪಾಲಿಸುವುದಿಲ್ಲ.
ಸತಿ ಎಂದರೆ ಹೆಂಡತಿ ಎಂಬ ವಿಶೇಷಾರ್ಥವಲ್ಲದೆ ಹೆಣ್ಣು ಎಂಬ ಸಾಮಾನ್ಯಾರ್ಥವೂ ಇದೆಯಲ್ಲ.
ನೀವು ಶಬ್ದಾರ್ಥಕ್ಕೇ ನಿಂತಿರಿ. ಇಲ್ಲೊಬ್ಬರ ಪ್ರತಿಕ್ರಿಯೆ ಹೇಗಿತ್ತೆಂದರೆ:
ಕಾಲುಂಗುರವ ತೊಡುವ ಕಾಲವೊಂದಿತ್ತಂದು
ಡೌಲೇನ ಪೇಳ್ವೆನಿಂದಿನ ಪೆಣ್ಣಿನ|
ಕಾಲೇನು! ಕುತ್ತಿಗೆಯ ನೋಡಿಯುಂ ತಿಳಿಯದೈ
ಲೀಲೆಯಿಂ ತಾಳಿಯಂ ತೆಗೆದೈದುವರ್||
ಕಾಲುಂಗುರ-
ಚಿನ್ನದ ಕೈಯ್ಯುಂಗರಕಿಂ
ಮನ್ನಣೆಯಂ ಪಡೆದುದಲ್ತೆ ಬೆಳ್ಳಿಯೊಲೆಸೆದೀ
ದನ್ನೆಯ ಪಾದದಲಂಕೃತಿ
ತನ್ನಿರುವುವಿಂ ಕಜ್ಜಕಿನಿತು ದುಗುಡಂಗೊಡದೊಲ್
ಬೊಚ್ಚುಬಾಯ ನಗು-
ಮುನ್ನಂ ಪಾಲಿನ ಪಲ್ಗಂ
ಭಿನ್ನಮಿದಯ್ ನಗೆಯು ಪೊರೆವರಿಲ್ಲದೆ ಪೋಗಲ್
ಮನ್ನಣೆಯನುಭವಕಿರ್ದೊಡ-
ಮಿನ್ನೆವರಂ ಮುಗ್ಧವದನಮಾಶಿಪರಲ್ತೇ
ಕೇಶಾಲಂಕಾರ-
ತಲೆವೆಣ್ಗಂ ಜವ್ವನದೊಳ್
ಪೊಳೆಯುವ ಕರ್ವಟ್ಟೆಯಿಟ್ಟು ಕಾಲಂಗಳೆಯು-
ತ್ತಿಳಿಯುವ ವಯಮಾಗಲ್ ಹಾ
ತಳೆವುದು ಬರಿಮೈಯಿದೆಂತು ರಸಿಕಂ ಕಾಲಂ
ಸಮಸ್ಯೆ:
ನೇಮದಿಂ ಮಾರ್ಗದೊಳ್ ಪೋಗಲ್ ಭೂಮಿಗಾಸರೆಯಿರ್ಪನಂ
ವ್ಯೋಮದೊಳ್ ಪಿಡಿಯಲ್ಕಾಗಳ್ ಸೋಮನುಂ ಭೀಮನಾದಪಂ
ಭೂಮಿಗಾಸರೆಯಿರ್ಪನಂ – ಸೂರ್ಯನನ್ನ
ಸೋಮೋಪಿ ಭೀಮಾಯತೇ ಅನುಷ್ಟುಪ್ ಹೇಗಾದಾತು?
ಭೂಮಿಗಾಸರೆಯಿರ್ಪನಂ ಪಿಡಿಯ ಪೋದಂ ಅಣುಮನಲ್ತೇಂ? 😉
ನಮಸ್ಕಾರ ಜೀವೆಂ, ಹೇಗಿದ್ದೀರಿ? 🙂
ಅಣುವನುಂ ಮರ್ತೆ ಗ್ರಹಣಕಾಲದೊಳ್ ಚಂದ್ರನುಂ
ಕೇಶಾಲಂಕೃತಿಯೋ ಆ
ಕಾಶಾತ್ಪತಿತಾಂಬುರಾಶಿಯಂ ಪಿಡಿಯಲ್ ನಿಂ
ದೀಶನ ಕಚವಿಸ್ತೃತಿಯೋ
ಆ ಶಲ ತಲೆಯೇರ್ದು ನಿಂದ ಗತಿಯೋ ಸ್ಥಿತಿಯೋ
ಆಶಾಗಗನದಿ ತೇಲುತ
ಕೇಶಾಲಂಕಾರಮಹಿಯಪಾಂಗಿನೊಳಾಡಲ್
ಪಾಶಾಂಕುಷಮಂ ಪೋಲೆ ನಿ
ರಾಶಳ್ ಕಬರಿಯನೆ ಬಿರಿದು ನಡೆದಪಳಾಗಳ್
ತಿದ್ದುಪಡಿಯೊಂದಿಗೆ —
ಆಶಾಗಗನದಿ ತೇಲುತ
ಕೇಶಾಲಂಕಾರಮಹಿಯಪಾಂಗಿನೊಲಾಡಲ್
ಪಾಶಾಂಕುಶಮಂ ಪೋಲೆ ನಿ
ರಾಶಳ್ ಕಬರಿಯನೆ ಬಿರಿದು ನಡೆದಪಳಾಗಳ್
ತಿದ್ದುಪಡಿಯೊಂದಿಗೆ —
ಆಶಾಗಗನದಿ ತೇಲುತ
ಕೇಶಾಲಂಕಾರಮಹಿಯಪಾಂಗಿನೊಲಾಡಲ್
ಪಾಶಾಂಕುಶಮಂ ಪೋಲೆ ನಿ
ರಾಶಳ್ ಕಬರಿಯನೆ ಬಿರಿದು ನಡೆದಪಳಾಗಳ್
ಪದ್ಯಪಾನಕ್ಕೆ ಸ್ವಾಗತ. ಆರ ಕೇಶಾಲಂಕಾರಮ್? ಆರು ನಡೆದಪಳ್? ಪಾಶಾಂಕುಶಮಂ ಪೋಲ್ದುದೇಂ?
ಓರ್ವ ಬಾಲೆ ಮೈಮರೆತು ಕೇಶಾಲಂಕಾರ ಮಾಡಿಕೊಂದು ಕೊನೆಗೆ ನೋಡಿದರೆ ಅದು ಹಾವಿನ ತರಹ, ಮತು ಪಾಶಾಂಕುಶದಂತೆ ತೋರಿದ್ದರಿಂದ ಇದೆಲ್ಲ ಸಾಕು ಅಂತ ಜಡೆ ಬಿಚ್ಚಿ ನಡೆದಳು ….
’ಅಹಿಯಪಾಂಗಿನೊಲಾಡಲ್ – ಪಾಶಾಂಕುಶಮಂ ಪೋಲೆ’ ಎಂಬಲ್ಲಿ, ನೀವು ವಿವರಣೆಯಲ್ಲಿ ಹೇಳಿರುವ ’ಮತ್ತು’ ಪ್ರತೀತವಾಗುವುದಿಲ್ಲ. ಹಾಗಾಗಿ ಅರ್ಥಾಪತ್ತಿ. (ತೇಲುತೆ)
ಓ ಕಾಲುಂಗುರಮೇ ನಿ
ನ್ನಾ ಕಾಣ್ವಳಿಗಿತ್ತು ರಾಜ ಪೋದಪನಿಲ್ಲಂ
ಶಾಕುಂತಲಮೆಮಗೊದವಿತ
ಲಾ ಕಾವ್ಯೋದ್ಭವದ ಹೇತು ನಿನಗಿದೊ ನಮನಂ
clap clap
ಬರೆ ಮಾಧವ ಕಾಲಂ ಕಾಣ್ ಕೋಕಿಲಂ ಕೌಶಿಕೋಪಮಂ
ವಿರಹಾರ್ತರಿಗೇವೇಳ್ವೆಂ ಸೋಮನುಂ ಭೀಮನಾದಪಂ
ಸಮಸ್ಯಾಪೂರಣ:
ಶುಕ್ಲದಾದಿಯೊಳಿದ್ದೇಂ ತಾಂ ಕ್ಷೈಣ್ಯದಿಂ, ನಿತ್ಯವರ್ಧನಂ|
ಸಾರಿ ಹುಣ್ಣಿಮೆಯತ್ತಂ ದಲ್ ಸೋಮನುಂ ಭೀಮನಾದಪಂ||
ಕಾಲುಂಗುರ (ನಾಡಿನ್ಧಮ=goldsmith):
ನೋಡದೆಲೆ ಮೊದಲಿಂಗೆ ಪರಸತಿಯ ಪಾದಗಳ-
ನೀಡಾಗದಿರು ವಿಭ್ರಮೆಗಮೆಂದಿಗುಂ|
ನಾಡಿನ್ಧಮಂ ಗೈದ ಕಾಲುಂಗುರಂ ಗೈರೆ?
ಷೋಡಶಿಯನಾಗ ನೀಂ ತಲೆಯೆತ್ತಿ ಕಾಣ್||
ಪ್ರಾಸತ್ಯಾಗಮದೆಂತೀಗಳ್ ಕೈಕೊಂಡಿರ್ ಹಾದಿರಂಪರೆ |
ಹ್ರಾಸಮುಂ ವೃದ್ಧಿಯಂತಲ್ತೇಂ ಭೀಮನುಂ ಸೋಮನಪ್ಪನೇಂ ||
ಪರಸತಿ ಎಂದರೆ ವಿವಾಹಿತಳು ಅಂದ ಮೇಲೆ ಕಾಲುಂಗುರಂ ಗೈರಾಗುವ ಸಂದರ್ಭವೇ ಇಲ್ಲವಲ್ಲ?
ನಾನು ಅನುಷ್ಟುಭ್ ಮತ್ತು ಸೀಸಪದ್ಯಕ್ಕೆ ಪ್ರಾಸವನ್ನು ಪಾಲಿಸುವುದಿಲ್ಲ.
ಸತಿ ಎಂದರೆ ಹೆಂಡತಿ ಎಂಬ ವಿಶೇಷಾರ್ಥವಲ್ಲದೆ ಹೆಣ್ಣು ಎಂಬ ಸಾಮಾನ್ಯಾರ್ಥವೂ ಇದೆಯಲ್ಲ.
ನೀವು ಶಬ್ದಾರ್ಥಕ್ಕೇ ನಿಂತಿರಿ. ಇಲ್ಲೊಬ್ಬರ ಪ್ರತಿಕ್ರಿಯೆ ಹೇಗಿತ್ತೆಂದರೆ:
ಕಾಲುಂಗುರವ ತೊಡುವ ಕಾಲವೊಂದಿತ್ತಂದು
ಡೌಲೇನ ಪೇಳ್ವೆನಿಂದಿನ ಪೆಣ್ಣಿನ|
ಕಾಲೇನು! ಕುತ್ತಿಗೆಯ ನೋಡಿಯುಂ ತಿಳಿಯದೈ
ಲೀಲೆಯಿಂ ತಾಳಿಯಂ ತೆಗೆದೈದುವರ್||
ಸರಿಯಾಗಿ ಹೇಳಿದ್ದಾರೆ, ಅನುಭವಸ್ಥರಿರಬೇಕು