Jan 122021
 

೧. ಪಾರದರ್ಶಕತೆ

೨. ತಾರೆಗಳ ಚಿಂತೆ

೩. ಸಮಸ್ಯೆ- ಸುಪಾರಿಯನೆ ಕೊಟ್ಟಳೈ ಪತಿಗೆ ಜಾರನಂ ಕೊಲ್ಲಿಸಲ್

(सुपारीं सा पत्ये दिशति निजजाराभिहतये)

೪. ಬರೆಯದ ಲೇಖನಿ

  2 Responses to “ಪದ್ಯಸಪ್ತಾಹ ೪೩೦”

  1. ಹಲಕೆಲರ ಚಿಂತೆಗಳಪರಿಹಾರ್ಯವಲ್ತೆ ಪೇಳ್
    ಬಲಿತೆಗೆದುಕೊಳ್ಳುವವು ಕೊಡವಿಕೊಳ್ಳದಿರೆ|
    ಖಿಲಗೊಳ್ಳದೆಂದಿಗುಂ, ತಾರೆಯದು ದೀರ್ಘಾಯು
    ನುಲಿದು ಚಿಂತೆಯೊಳು ಶೋಚಿಪುದು ಚಿರದೆ||
    (ತಾರೆಗಳು ಮಿಣುಕ್-ಮಿಣುಕ್ ಎನ್ನುವುದು, ಚಿಂತೆಯಲ್ಲಿ ಮುಳುಗಿ ರೆಪ್ಪೆಯಾಡಿಸುವ ಮನುಷ್ಯರಂತಿದೆ)

  2. ಪ್ರಸ್ತುತಕಾಲದ ಸಮೃದ್ಧಿಯಿಂದಾಗಿ, ತಂಗಳುಪೆಟ್ಟಿಗೆಯಲ್ಲಿಟ್ಟು(/ಶೀತಮಂಜೂಷ) ಒಂದಷ್ಟು ಸಾಮಾನು ಹಾಳು. ಒಲೆಯ ಮೇಲೆ ಸೀದು ಒಂದಷ್ಟು ಸಾಮಾನು ಹಾಳು. ಇಟ್ಟಲ್ಲಿಯೇ ಒಂದಷ್ಟು ಸಾಮಾನು ಹಾಳು – ಬರೆಯದ ಲೇಖನಿಗಳಂತೆ(/ವರ್ಣಾಂಕ).

    ಸಮೃದ್ಧಮಿರೆ ಕಾಲಮಿಂದಿಗಿಹುದೆಲ್ಲಮುಂ ಸೋವಿಯೇ
    ಜಮಾವಣೆಯಿನಿಂದೆ ಹಾಳೆನಿತೊ ಶೀತಮಂಜೂಷದೊಳ್|
    ಸಮಾಪ್ತಿಯನೆ ಪೊಂದಿತೈ ಎನಿತೊ ಚುಲ್ಲಿಕಾದಾಹದಿಂ
    ಕ್ರಮೇಣ ಕಿಡುಗೆಂತೊ ಮುಳ್ಳು-ಮಸಿಯಿದ್ದು ವರ್ಣಾಂಕಮೇ|| ಪೃಥ್ವೀ

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)