Apr 272021
೧. ಸಾಕು ಪ್ರಾಣಿ ಕಳೆದುಹೋದಾಗ
೨. ಬ್ರಹ್ಮಗಂಟು
೩. ಶ್ರೀಮಂತನ ಹಸಿವು
೪. ಸಮಸ್ಯೆ-
ಸ್ರಗ್ವಿಣೀ ಛಂದಸ್ಸಿನ ಸಮಸ್ಯೆ – ಕಂಸನೊಳ್ ಕೃಷ್ಣನೇ ಭಿಕ್ಷೆಯಂ ಬೇಡಿದಂ
ಶಾಲಿನೀಯಲ್ಲಿ ಸಂಸ್ಕೃತದ ಸಮಸ್ಯೆ – ಕಂಸೇ ಭಿಕ್ಷಾಂ ಯಾಚತೇ ಕೃಷ್ಣಸೂನುಃ
೧. ಸಾಕು ಪ್ರಾಣಿ ಕಳೆದುಹೋದಾಗ
೨. ಬ್ರಹ್ಮಗಂಟು
೩. ಶ್ರೀಮಂತನ ಹಸಿವು
೪. ಸಮಸ್ಯೆ-
ಸ್ರಗ್ವಿಣೀ ಛಂದಸ್ಸಿನ ಸಮಸ್ಯೆ – ಕಂಸನೊಳ್ ಕೃಷ್ಣನೇ ಭಿಕ್ಷೆಯಂ ಬೇಡಿದಂ
ಶಾಲಿನೀಯಲ್ಲಿ ಸಂಸ್ಕೃತದ ಸಮಸ್ಯೆ – ಕಂಸೇ ಭಿಕ್ಷಾಂ ಯಾಚತೇ ಕೃಷ್ಣಸೂನುಃ
ಸಾಕು-ಪ್ರಾಣಿಯು ಯಾವುದಕ್ಕೂ ಎದುರಾಡುವುದಿಲ್ಲ!
ಆಪ್ತರಸುನೀಗಲತ್ತೊಡಮನಿತರೊಳಗೆ ನಿ-
ರ್ಲಿಪ್ತರಾಗುವೆವಲ್ತೆ ಕರ್ಮವೆಂದು|
ಲುಪ್ತಮೆದುರಾಡಿರದ ಕ್ರೀಡಾಮೃಗವದಾಗೆ
ತಪ್ತರಾಗುವೆವು ನಿಲ್ಲದ ದುಃಖದೊಳ್||
ಬ್ರಹ್ಮಗಂಟು:
ಬೊಮ್ಮಗಂಟೆಂಬುದದು ಸುಖದಮೇಂ, ದುಃಖಮೇಂ,
ಜುಮ್ಮೆನುವ ಮದುವೆಯೇಂ, ಕರ್ಮವೆನುಗೇಂ||
ಬೊಮ್ಮಕಜ್ಜವು ಸೃಷ್ಟಿ, ಮದುವೆ ಹರಿಕಾರ್ಯವಿದು (ಇದು=ಬ್ರಹ್ಮಗಂಟು)
ಸುಮ್ಮನೆ ಅಶೋಕವನಿಕಾನ್ಯಾಯವು||
ಶ್ರೀಮಂತನ ಹಸಿವು:
ಹಾಳುಮೂಳನು ತಿಂಬ, ಯಾವಾಗಲೂ ತಿಂಬ,
ಕೂಳ ಹಸಿವನು ತಿಳಿಯ ಧನಿಕನೆಂದುಂ|
ಗೀಳೊಂದೆ ಜೀವಿತದೆ – ಹಣವ ಗಳಿಸುವುದವಗೆ
ಹೇಳಿರೀ ಹಸಿವ ನೀಗಿಸಲಕ್ಕುಮೆ??
“ಪಾಂಸುವಂದಾದರೈ ದೇವಕೀಸೂನುಗಳ್
ಶಂಸಮೇಂ? ಭೀತಿಯಿಂದೆನ್ನೆಗಂ ಬಾೞ್ವೆ ನೀಂ?
ಹಿಂಸೆಯಂ ವರ್ಜಿಪೊಲ್ ಮಾತ ನೀಡೆ”ನ್ನುತುಂ
ಕಂಸನೊಳ್ ಕೃಷ್ಣನೇ ಭಿಕ್ಷೆಯಂ ಬೇಡಿದಂ||
ಪದ್ಯದ ಮೊದಲನೇ ಸಾಲು ಅರ್ಥವಾಗಲಿಲ್ಲ.. ಪಾಂಸು ಅಂದರೆ ಧೂಳು. ಪಾಂಸುವಂದಾದರೈ ಅಂದರೇನು? ಕೊಂಚ ವಿವರಿಸಬಹುದೇ?
“ಕಂಸನೆ, ಅಂದು ನಿನ್ನ ಕೈಕೆಳಗೆ ದೇವಕೀಸೂನುಗಳ್ ಪಾಂಸುವಾದರು. ನೀನು ಮಾಡಿದ್ದು ಯೋಗ್ಯಕಾರ್ಯವೆ? ಸತತಭೀತಿಯಿಂದೆನ್ನೆಗಂ ಬಾೞ್ವೆ ನೀಂ? (ಇನ್ನಾದರೂ) ಹಿಂಸೆಯಂ ವರ್ಜಿಸಿರ್ಪೆ ಎಂದು ಮಾತು ಕೊಡು,” ಎಂದು ಕಂಸನೊಳ್ ಕೃಷ್ಣನೇ ಭಿಕ್ಷೆಯಂ ಬೇಡಿದ.
ಈಗ ಅರ್ಥವಾಯಿತು. ಧನ್ಯವಾದಗಳು.
ಸೂಕ್ತೇ ಕಾಲೇ ಪ್ರಾಪ್ತಗರ್ಭಾಷ್ಟಮೇsಸೌ
ಸಂಸ್ಕಾರಾಂಗಂ ಸಮ್ಯಗದ್ಯೋಪನೀತಃ
ಗತ್ವಾ ಗೇಹಾನ್ ಸನ್ನಿಕೃಷ್ಟಪ್ರದೇಶೇ (ನೆರೆಹೊರೆ)
(ಪಾತ್ರೆಯಲ್ಲಿ) ಕಂಸೇ ಭಿಕ್ಷಾಂ ಯಾಚತೇ ಕೃಷ್ಣಸೂನುಃ||
ಶ್ರೀಮಂತನ ಹಸಿವು
ಶ್ರೀಮತಾಂ ವಾ ದರಿದ್ರಾಣಾಂ ಬುಭುಕ್ಷಾ ಸಮವರ್ತಿನೀ |
ನ ವಾ ಧನಂ ನ ಮೃತ್ಪಾತ್ರಮನ್ನಮಿಚ್ಛತಿ ಸರ್ವಥಾ ||
ಸಾಕು ಪ್ರಾಣಿ ಕಳೆದುಹೋದಾಗ
ತಪ್ಪಿಸಿಕೊಂಡ ಲಾಕಪ್ಪಿನ ಕಳ್ಳನ
ಒಪ್ಪದೆ ಪಿಡಿಯೆ ಪೋಲಿಸು | ನಾಯಿಯು
ತಪ್ಪಿಸಿಕೊಂಡು ಓಡಿತ್ತು