Apr 202021
 

೧. ಮೊಂಡಾದ ಕತ್ತಿ

೨. ಹರಿದ ಮುಂಡಾಸು

೩. ಹಾಲಿನ ಕೆನೆ

೪. ಸಮಸ್ಯೆ:

ಕನ್ನಡ- ಜಲಪಾನಂ ಮಿಗಿಲೆಂಬರಲ್ತೆ ಸುರರೇ ಬೈಯುತ್ತೆ ಪೀಯೂಷಮಂ

ಸಂಸ್ಕೃತ- ಜಲಪಾನಂ ವರಮಿತ್ಯದೀರ್ಯ ವಿಭುದಾ ನಿಂದಂತಿ ನೂನಂ ಸುಧಾಂ 

  8 Responses to “ಪದ್ಯಸಪ್ತಾಹ ೪೩೪”

  1. सुरलोकेऽमित-भोग-सेवन-जडाः तेजोविहीनाः सुराः
    भवरोगैक-कषाय-मार्गण-रताः वैरिञ्च-यज्ञ-स्थले ।
    हिमजा-प्राप्त-सुवर्चसः प्रमुदिताः श्री-विश्वनाथार्चया
    जलपानं वरम्-इत्युदीर्य विबुधाः निन्दन्ति नूनं सुधां ॥

    (सुधायाः अपेक्षया गङ्गाजलम् एव वरम् इत्यर्थः)

    • वैरिञ्च-यज्ञ-स्थले – काश्यां दशाश्वमेध-घट्टे ब्रह्मणा यष्टम् इति प्रतीतिः ।

      • ಈ ವಿವರಣೆ ಕೊಟ್ಟದ್ದು ಒಳ್ಳೆಯದಾಯಿತು. ಅದೊಂದೇ ತೊಡಕಾಗಿದ್ದು ನನಗೆ. ವಿರಿಂಚಿ ಎಂದು ಹೊಳೆಯಲೇ ಇಲ್ಲ. ವೈರಿ ಎಂದಷ್ಟೇ ಯೋಚಿಸುತ್ತಿದ್ದೆ. ಉಳಿದೆಲ್ಲ ನನಗೂ ಅರ್ಥವಾಗುವಷ್ಟು ಸರಳವಾಗಿದೆ.

  2. ಅರುಣಾ-ಕುಂಜಲ = ಹಾಗಲಕಾಯಿ-ಗೊಜ್ಜು

    (ಊಟದ) ಎಲೆಯೊಳ್ ನಾನಾ ವಿಧಗಳಿರಲೇಂ ಭಕ್ಷ್ಯ-ಭೋಜ್ಯಂ-ಸುಜೋಷ್ಯಂ
    ಸಲೆ ಖಾದ್ಯಂ, ಮಾನಿಸರೆನಿತೊ ತಾಂ ಗೈಯುತುಂಬರ್ ಗಡೆಲ್ಲಂ|
    ಗಲಿತಂಗೊಳ್ಳಲ್ ರುಚಿಯು ಸುಧೆಯೊಳ್, ಸ್ವಾದುಖಾದ್ಯಾರುಣಾಕುಂ-
    ಜಲಮೆಂತೋ ಮೇಲೆನುತೆ ಸುಧೆಯಂ ಬೈವರೇನೆಂಬೆ ನಾಕರ್||

    ಕೀಲಕವನ್ನು ಮೊದಲೇ ಹೊಂದಿಸಿಕೊಂಡೆನಾದ್ದರಿಂದ, ಸಮಸ್ಯಾಪಾದವನ್ನು ಪ್ರಮದಾಕ್ರಾಂತಕ್ಕೆ ಅಳವಡಿಸಿಕೊಳ್ಳಬೇಕಾಯಿತು.

  3. ಮೊಂಡಾದ ಕತ್ತಿ:
    ಮೊನಚಿರಲ್ ಕತ್ತಿ ಯೋಧನಸಹಾಯ್ಯದೆ ತಾನೆ
    ತನುವ ಕತ್ತರಿಪ ವೈರಿಯ ಸುಲಭದೆ|
    ಕೊನೆಗಾಲ ಮೇಣ್ ಕೈಗಳನು (ವೈರಿಯ) ಹಿಡಿಯಬೇಕಿಬ್ಬ-
    ರನುವಾಗೆ ಕತ್ತರಿಸೆ ಮೊಂಡ್ಗತ್ತಿಯಿಂ||

  4. ಹಾಲಿನ ಕೆನೆ/ಶರ
    ಕುದಿವಂತೆ ಹಾಲು ಕುದ್ದೊಡಮೆಮ್ಮ ತನು-ಮನವು
    ಸದೆಬಡಿಯೆ ತೊಡಗುವೆವಧರ್ಮಿಗಳನು|
    ಕುದಿಯಿಳಿದು ಹಾಲಿನೊಳ ಸತ್ತ್ವಶರವಾಗೆ ನಾಂ
    ಹದದಿಂದೆ ಧರ್ಮಪಥಕೊಯ್ವೆವವರಂ||

  5. ಹರಿದ ಮುಂಡಾಸು:
    ಹರಿದ ಮುಂಡಾಸಿನೊಳು ಹರಕೆಲ್ಲಿ ಕಾಣುವುದು
    ನಿರಿಗೆಯಾಗಿಸಿ ಸುತ್ತಿಕೊಂಬೆವಲ್ತೆ|
    ಧರಿಸೆ ತೆಕ್ಕೆಯೊಳಂತೆ ಹಿಂಜಿರ್ಪ ಪಂಚೆಯನು
    (ಮೈ) ಪುರವಿನಿತು ಕಂಡೊಡೇಂ, ಹರಕು ಮರೆಯು!!

  6. ಸಮಸ್ಯೆ:

    ಖಲರೆಲ್ಲರ್ ಧರಣೀತಳಕ್ಕೆ ಬರಲೀ ಖಾನಾವಳೀಗೈದಿದರ್
    ಎಲೆಮೇಲಿರ್ದುದನೆಲ್ಲವನ್ನು ತಿನುತುಂ ಖಾರಕ್ಕೆ ಭೋರೆಂದಿಹರ್|
    ಛಲದಿಂದಂ ಸುರರನ್ನು ತಾವು ಕರೆಯಲ್ ತಿನ್ನುತ್ತೆ ಖಾದ್ಯಂಗಳಂ
    ಜಲಪಾನಂ ಮಿಗಿಲೆಂಬರಲ್ತೆ ಸುರರೇ ಬಯ್ಯುತ್ತೆ ಪೀಯೂಷಮಂ||

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)