May 262021
 

ವರ್ಣನೆ:

೧. ಸೋಲು

೨. ಹೂಕುಂಡ

೩. ಬತ್ತಿಹೋದ ಬಾವಿ

ಚಂಪಕಮಾಲೆಯ ಸಮಸ್ಯೆ:

ಅರಳದ ಪೂವಿಗಿಂ ಮಿಗಿಲೆನಲ್ಕಿರದೀ ಜಗದಾವ ಪುಷ್ಪಮುಂ

अविकसितप्रसूनमिह सर्वसुमेषु मनोहरं ननु

  12 Responses to “ಪದ್ಯಸಪ್ತಾಹ ೪೩೮”

  1. ಹೂಕುಂಡ:
    ತನ್ನ ಬಸುರಿಂದಿನಿತು ಘಮಘಮಿಪ ನವ ಸುಮನ
    ಬಂತೆಂಬ ಹಮ್ಮಿಲ್ಲ ಮೃತ್ಪಾತ್ರಕೆ
    ಮುದಿ ಹೂವು ಮಣ್ಸೇರಿ ಮತ್ತೆ ಕುಸುಮಿಪ ಪರಿಯ
    ನೋಳ್ಪ ಸಾಕ್ಷಿಯದೇನು ಕಿರಿಬೊಮ್ಮನೇ?

    • ಪದ್ಯಪಾನಕ್ಕೆ ಸ್ವಾಗತ. ಸುಮನ ಎಂದರೆ ಸುಮದ/ಹೂವಿನ ಎಂದೆ? ಕಿರಿಬೊಮ್ಮ ಎಂಬುದು ಅಂಕಿತವೆ? ಪದ್ಯದ ತಾತ್ಪರ್ಯವಾಗಲಿಲ್ಲ. ದಯವಿಟ್ಟು ವಿವರಿಸಿ. ಧನ್ಯವಾದ.

      • ಧನ್ಯವಾದಗಳು. ಹೂಕುಂಡ ಬ್ರಹ್ಮ ವಸ್ತುವಿನಂತೆ (ಕಿರಿಬೊಮ್ಮ). ತನ್ನಲ್ಲಿಯೇ ಹೂವುಗಳು ಹುಟ್ಟುತ್ತವೆ, ಅರಳುತ್ತವೆ ಮತ್ತೆ ಹೂವು ಬಾಡಿ ಕುಂಡದ ಒಡಲಲ್ಲಿ ಇರುವ ಮಣ್ಣಲ್ಲಿ ಸೇರಿಹೋಗಿ ಮತ್ತೊಂದು ಹೂವಿಗೆ ಗೊಬ್ಬರವಾದರೂ ಸಹ, ಕುಂಡ ಮಾತ್ರ ಸಾಕ್ಷೀ ಭೂತವಾಗಿ
        ಹೂವಿನ ಸೊಬಗನ್ನು, ಕಂಪನ್ನು ಸವಿಯದೆ, ಕಾರಣನೆಂದು ಮೆರೆಯದೆ, ಎಲ್ಲಕ್ಕೂ ಸಾಕ್ಷಿಯಾಗಿದೆ – ಎಂದು ಭಾವಾರ್ಥ.

        ತಪ್ಪಿದ್ದರೆ ಕ್ಷಮೆಯಿರಲಿ.
        ಆನಂದ ಶರ್ಮ

      • ಕಲ್ಪನೆ ಚೆನ್ನಿದೆ. ಕಿರಿಬೊಮ್ಮ ಎಂಬಲ್ಲಿ ಕಿರಿ ಎಂಬುದರ ಪ್ರಾಶಸ್ತ್ಯವೇನು? ಸುಮ ಎಂದರೆ ಹೂವು; ಸುಮನ ಎಂದರೇನು?

        • ಕಿರಿ ಬೊಮ್ಮ ಒಂದು pun ಅಷ್ಟೇ – ಏಕಮೇವಾದ್ವಿತೀಯಂ ಆಗಿದ್ದರೂ ಇನ್ನೊಂದು ಇದೆ ಅಂತ :-). ಮಣ್ಣು ಗುಡ್ಡೆಯ ಮೇಲೆ ಹತ್ತಿಯನ್ನು ಇಟ್ಟು ಮರಿ ಹಿಮಾಲಯ ಅಂದ ಹಾಗೆ. ಮತ್ತೆ ಸುಮನ ‘ ಸುಮವು ‘ ಆಗಬೇಕಿತ್ತು. Apologies.

      • ನೀವು ಪ್ರಾಸವನ್ನು ಪಾಲಿಸಿಲ್ಲ. ಒಂದಷ್ಟು ಪದ್ಯಗಳನ್ನು ಹೀಗೆಯೇ ಪ್ರಾಸರಹಿತವಾಗಿ ಅಭ್ಯಾಸಮಾಡಿ, ಬೇಗ ಪ್ರಾಸಬದ್ಧವಾಗಿ ರಚಿಸಲಾರಂಭಿಸಿ. ಶುಭಾಶಯಗಳು. ನಿಮ್ಮ ಪದ್ಯದ ಹೀಗೊಂದು ಪ್ರಾಸಸಹಿತ ಸವರಣೆ:

        ತನ್ನ ಬಸುರಿಂದನಿತು ಪುಷ್ಪಗಳನರಳಿಸಿಯು
        ಪನ್ನತಿಕೆ ಮೆರೆಯದೈ ಮೃತ್ಪಾತ್ರವು|
        ಬನ್ನಗೊಳ್ಳುತೆ ಹೂವು ಮತ್ತೆ ಕುಸುಮಿಪ ಪರಿಗೆ
        ಘನ್ನ ಸಾಕ್ಷಿಯ ಬೊಮ್ಮನಂತಿಹುದದು||

        ನಾನು ನಿಮ್ಮ ಪದ್ಯದ ಮೊದಲ ಪಾದದ ಹಯಪ್ರಾಸದಲ್ಲಿ (ನ್ನ) ಪದ್ಯವನ್ನು ರಚಿಸಿದ್ದೇನೆ. ನೀವು ಉಳಿದ ಎರಡು ರೀತಿಯ ಪ್ರಯತ್ನವನ್ನು ಮಾಡಬಹುದು: 2ನೆಯ ಪಾದದ ವೃಷಭಪ್ರಾಸ (ಂತ – ಎಂತೊ ಬಸುರಿಂ…), 3ನೆಯ ಪಾದದ ಸಿಂಹಪ್ರಾಸ (ದ – ಮುದದಿಂದೆ ಬಸುರಿಂದೆ…). 4ನೆಯ ಪಾದದ ಶರಭಪ್ರಾಸ (ಳ್ಪ) ದುಃಸಾಧ್ಯ.

        • ನಿಮ್ಮ ಪದ್ಯದ version ತುಂಬ ಚೆನ್ನಾಗಿದೆ. ನಾನು ಮತ್ತಷ್ಟು ಅಭ್ಯಾಸ ಮಾಡಿ ಪ್ರಯತ್ನಿಸುತ್ತೇನೆ. ಧನ್ಯವಾದ.

  2. ಬತ್ತಿಽದಽ ಮ್ಯಾಗೇಕೆಽ ಬಾವಿಽಯಽ ಕಂಡುಽ ನೀ-
    ನತ್ತತ್ತುಽ ದುಃಖಿಽಪೆಽಯಯ್ಯಽ|
    ಸುತ್ತಽಣಽ ಮರಗಽಳಲ್ಲವೆ ನೀರಽ ತಂದದ್ದೆ-
    ಲ್ಲಿತ್ತಯ್ಯೊಽ ಕಡಿವಾಗಽ ಗ್ಯಾನಽ|| ಸಾಂಗತ್ಯ

  3. ಸೋಲು: ಎಷ್ಟೋ ವೇಳೆ ಎದುರಾಳಿಯೇ ಇಲ್ಲದೆ ವೃಥಾ ಸೋತೆ ಸೋತೆ ಎಂದು ಭ್ರಮಿಸುವುದಾಗುತ್ತದೆ!

    ಸೋಲುಂಡೆಯೆಂದೆಂಬ ವಿಷಾದವೇಕಯ್
    ಬಾಲೋಚಿತಂ ದುಃಖವು ಪ್ರೌಢ ನೀನಯ್|
    ಆಲೋಚಿಸಯ್ ಸೋತಿಹೆಯೆನ್ನುತಾರ್ಗಂ
    ಮೂಲಾರಿ ಆರೊಬ್ಬರುಮಿಲ್ಲ ನೋಡಯ್!! ಇಂದ್ರವಜ್ರ

  4. ಹೂಕುಂಡ
    ಕುಡಿಸುತ್ತಲಿ ನೀರನಾವಗಂ
    ಕೊಡುವರ್ ಗೊಬ್ಬರಮನ್ನೆ ಹೇರಳಂ|
    ತಡೆದೊಮ್ಮೆಯು ಕಾಣರೆಂದಿಗುಂ
    ತುಡಿಯುತ್ತಿರ್ದಿಹೆ ಸೂರ್ಯಗೆಂದು ನಾಂ|| ವಿಯೋಗಿನಿ

  5. ಸಮಸ್ಯೆ:
    ನಿರುಕಿಸಲಂದಮಂ ಗಡಿರುವಂತಿಗೆ-ಕಾಕಡ-ಮಳ್ಳೆಪೂಗಳಂ
    ತ್ವರೆಯಿನವಂ ಜನಂ ಬಿಡಿಸಿಕೊಂಬರರಳ್ವುದದಪ್ಪ ಮುನ್ನಮೇ|
    ತರುಣಿಯರೇಂ ಕಿಶೋರಿ-ಹಿರಿಯರ್ ಮುಡಿವರ್ ಮಿಗೆ ಮಾರಿನಷ್ಟನುಂ (ಮಾರುದ್ದ)
    ಅರಳದ ಪೂವಿಗಿಂ ಮಿಗಿಲೆನಲ್ಕಿರದೀ ಜಗದಾವ ಪುಷ್ಪಮುಂ|| ಚಂಪಕಮಾಲೆ

Leave a Reply to ಹಾದಿರಂಪ Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)