May 312021
 

ವರ್ಣನೆ:

೧. ಶಿವ ಪಾರ್ವತಿಯ  ಕಣ್ಣುಮುಚ್ಚಾಲೆ ಆಟ

೨. ಸಾವಿನ ದವಡೆ

೩. ಕಪಾಟು

ಸಮಸ್ಯೆ 

ಹರಿಕಂಠದೊಳಿರ್ಪಗರಲಮಚ್ಚರಿಯಲ್ಲಂ 

  22 Responses to “ಪದ್ಯಸಪ್ತಾಹ ೪೩೯”

 1. ಶಿವ ಪಾರ್ವತಿಯ ಕಣ್ಣುಮುಚ್ಚಾಲೆ ಆಟ:
  ಸತಿಪತಿಯರದೆಂದುಂ ಚರ್ಯೆಯೊಳ್ ತದ್ವಿರುದ್ಧರ್
  ಶ್ರುತಿಯದಿರದವರ್ಗಳ್ ಸಾರ್ಧನಾರೀಶರಿದ್ದೇಂ|
  ವ್ರತವೆನುವೊಲೆ ರುದ್ರಂ ಕಣ್ಣನೇಂ ಮುಚ್ಚಿದಾಗಳ್
  ಸತಿ ತೆರೆದಿರೆ ಕಣ್ಣಂ ಕಣ್ಣುಮುಚ್ಚಾಲೆಯೆಂತಯ್|| ಮಾಲಿನೀ

 2. ಸಾವಿನ ದವಡೆ
  ವೈದ್ಯರೆಂಬರ್ ಕಚ್ಚಿ ತಿನ್ನಿರನ್ನವನೆನುತೆ
  ಆದ್ಯತೆಯ ನೀಡರಾ ಮಾತಿಗಾರೂ|
  ಚೋದ್ಯವಲ್ತಿದು ಸಾವು ಕೂಡ ಲೆಕ್ಕಿಸದದನು
  ಸದ್ಯ! ಕೆಲರಿಂತು ಪಾರದರ ಹನುವಿಂ||

 3. ಕಪಾಟು
  ಗಳುವ ಮೇಲೊಂದು ಮೈಮೇಲೆ ಇನ್ನೊಂದನಿತೆ
  ಹಳತೆರಡು ಬಟ್ಟೆಯಿರೆ ಸರಳಜೀವನವು|
  ಅಳವರಿಯದಷ್ಟು ಬಟ್ಟೆಗಳಿರೆ ಕಪಾಟಿನೊಳು
  ಕೊಳೆತುಹೋಗುವುವಲ್ಲೆ ಹೊಸಬಟ್ಟೆಗಳ್||

 4. ಸಮಸ್ಯೆ
  ಗರಲಂ (green)ಪಚ್ಚೆಯನಾಗಿಸೆ
  ಹರಣಮನೆಲ್ಲಂ: ಕರಂಗಳೇಂ ಕಿವಿ-ಕಣ್ಣೇಂ|
  ಉರಮೇಂ, ತುಟಿಯೇಂ, ಕಾಲೇಂ
  (green)ಹರಿಕಂಠದೊಳಿರ್ಪ ಗರಲಮಚ್ಚರಿಯಲ್ಲಂ||

 5. ಶಿವ ಪಾರ್ವತಿಯ ಕಣ್ಣುಮುಚ್ಚಾಲೆ ಆಟ:

  ಶಿವಶಿವೆಯರಾಡಿದರು ಕಣ್ಣು ಮುಚ್ಚಾಲೆಯನು
  ಶಿವನ ಕಣ್ಮುಚ್ಚೆ ಜಗ ಬರಡಾಯಿತು
  ಶಿವೆಯಾಟದಲಿ ಜಗದಿ ಆನಂದ ಮರೆಯಾಯ್ತು
  ಅನಲಾಕ್ಷ ನಿಮೀಲನವ ಹರಗೈದನು

  • ಪ್ರಯತ್ನ ಸ್ತುತ್ಯ. ಮೂರನೆಯ ಪಾದದ ಔಚಿತ್ಯ ತಿಳಿಯಲಿಲ್ಲ. ನಾಲ್ಕನೆಯ ಪಾದದ ಎರಡನೆಯ ಗಣ ಲಗಾದಿಯಾಗಿದೆ; ಒಂದು ಮಾತ್ರೆ ಹೆಚ್ಚೂ ಇದೆ.

   • ಪಾರ್ವತಿಯು ಹ್ಲಾದಿನಿ ಶಕ್ತಿಯಾದ್ದರಿಂದ ಅವಳ ಕಣ್ಣುಗಳು ಮುಚ್ಚಿದೊಡನೆ ಜಗತ್ತೇ ನಿರಾನಂದವಾಯಿತೆಂಬ ಭಾವ. ಮುಂದಿನ ಪ್ರಯತ್ನಗಳಲ್ಲಿ ಮಾತ್ರೆಗಳ ಬಗ್ಗೆ ಹೆಚ್ಚಾಗಿ ಗಮನಿಸುತ್ತೇನೆ. ಧನ್ಯವಾದಗಳು.

    • ಸರಿ _/\_. ಮಾತ್ರಾಗಣಿತದಲ್ಲಿ ಆಗೀಗ ವ್ಯತ್ಯಾಸಗಳಾಗುತ್ತವೆ. ನೀವು ಪ್ರಾಸವನ್ನು ಗಮನಿಸಿಕೊಳ್ಳಿ, ಮತ್ತು ಇತರ ಛಂದಃಪ್ರಕಾರಗಳಾದ ಅಂಶ ಮತ್ತು ವೃತ್ತಗಳಲ್ಲಿ ಪದ್ಯರಚನೆ ಮಾಡಿ. ಇಲ್ಲೆ ಎಲ್ಲ ಪಾಠಗಳೂ ಇವೆ. ದಿನಕ್ಕೊಂದು ಪಾಠವನ್ನು (20 ನಿಮಿಷ) ಗಮನಿಸಿಕೊಂಡರಾಯಿತು.

 6. ಸಮಸ್ಯಾಪೂರಣ:
  ಧುರಮಂ ನಿಲಿಸಲ್ಕೆನುತುಂ
  ಕುರುಸಭೆಯೊಳ್ ನಿಂದು ಕೃಷ್ಣನುಲಿಯಲ್ಕರಮಂ
  ಜರೆದಂ ಧುರ್ಯೋಧನನೀ
  ಹರಿಕಂಠದೊಳಿರ್ಪ ಗರಳಮಚ್ಚರಿಯಲ್ಲಂ॥
  ಅರ – ಧರ್ಮ

 7. ಹರಗಂ ಮಂದಿರದೊಳ್ ಅಲಂ
  ಕರಿಸಲದರ್ಚಕ ಮಹೋದಯರ್ಗಳ್ ನಾರೀ
  ಶ್ವರವೋಲ್ ಕಾಣಲ್ಕೆ, ಮನೋ
  ಹರಿಕಂಠದೊಳಿರ್ಪಗರಲಮಚ್ಚರಿಯಲ್ಲಂ ।।

 8. ಸಮಸ್ಯೆ

  ಪರಿದೋಡುತ್ತಿಹ ನಾಗಂ
  ಗರಿಯದ ತೆರದೊಳ್ ನಖಾಗ್ರದೊಳ್ ಪಿಡಿದುಂ ತಾ|
  ಮುರಿಮುರಿದು ತೋಷದೊಳಗಿವ
  ಹರಿಕಂಠದೊಳಿರ್ಪ ಗರಲಮಚ್ಚರಿಯಲ್ಲಂ||

  ಹರಿ – ನವಿಲು

 9. ೧. ಶಿವ ಪಾರ್ವತಿಯ ಕಣ್ಣುಮುಚ್ಚಾಲೆ ಆಟ

  गूहाखेलनलीलिनावथ शिवावक्रीडतामेकदा
  पर्यायः प्रथमः शिवस्य तदभूत् देव्याक्षिणी मीलिते ।
  अप्राप्यात्मनिगूहनोदवसितं कुत्रापि सर्वात्मको
  sतिष्ठत् स प्रहसन् ह्यनन्यगतिकस्तत्रैव देव्याः पुरः ॥

  साम्बापि स्वकरैर्निगृह्य हसितं साम्बं तमित्यब्रवीत् –
  “अन्विष्यानघ मां निमील्य नयनानीशान किञ्चित् क्षणम्” ।
  सोsन्विष्याखिलमेदिनीं त्रिपुरहा श्रान्त्योपविष्टस्तदा
  प्राप्यैनामहसत् पुनः प्रियसतीं स्वार्धाङ्गगूढां हरः ।।

 10. ೨. ಸಾವಿನ ದವಡೆ

  मृत्युक्रकचदंष्ट्रेण कृत्ते जीवितपादपे ।
  दारु तद् द्वारतां याति नवीनेsन्यगृहाङ्गणे ।।

 11. ಕಪಾಟು

  प्राचीननूतनान्यस्तव्यस्तवस्तूनि सर्वशः ।
  पतन्ति स्मृतिवच्छीर्षे नोद्घाट्यन्तां कपाटिकाः ।।

  • ಸ್ತಮ್ಭನೇನ ಕಿಮರ್ಥಂ ವೈ ತರ್ಹಿ ಪೂರ್ಣಕಪಾಟಿಕಾನ್|
   ತಲ್ಪವತ್ತಾನಧಃ ಸ್ಥಾಪ್ಯ ವಸ್ತೂನುಧ್ಘಾಟಯ ತ್ವರಮ್||

 12. शिव-पार्वत्योः निलायन-क्रीडा:

  निगूहन-गवेषणे सरसलीलया क्रीडतोः
  जगत्-प्रभवकारिणोः विशति गह्वरं शङ्करे ।
  शिरोधृत-शशि-द्युति-प्रकट-काय-कान्तिर्-जटी
  विधास्यति विधुं द्रुतं सुम-सुगन्धि-धम्मिल्लके ॥

 13. शिव-पार्वत्योः निलायन-क्रीडा:

  अत्रायाता तत्र कच्चिन्नु दृष्टा
  गुल्मे गुप्ता स्यादितीशं ब्रुवाणा ।
  गंगा गौरीं लीलयान्वेषमाणं
  जल्पं जल्पं भर्तृसौख्यं समाप्नोत् ।

 14. शिव-पार्वत्योः निलायन-क्रीडा

  निलायनरतौ दृष्ट्वा पितरौ द्वादशेक्षणः ।
  छादयैतानि नेत्राणीत्युक्त्वाग्रजम् अरोदयत् ॥

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)