Sep 272021
 


ವರ್ಣನೆ-
೧. ಕುಟ್ಟಾಣಿ
೨. ಚಪ್ಪಲಿ & ಶೂ ಗಳ ಸಂವಾದ
೩. ಸಾಂಬ್ರಾಣಿಯ ಧೂಪ 

ಶಾಲಿನೀ ಛಂದಸ್ಸಿನ ಸಮಸ್ಯೆ
ಸತ್ಕಾರ್ಯಕ್ಕಂ ಸಜ್ಜನರ್ ಕಷ್ಟಮೀವರ್
सत्कार्यार्थं सज्जना रान्ति कष्टम् ।

  4 Responses to “ಪದ್ಯಸಪ್ತಾಹ ೪೪೦”

  1. ಬೂಟು:
    ಮೆಟ್ಟುವರು ಪಾದದೊಳೆ ದೂಡುವರು ಪಾದದೊಳೆ
    ಖೊಟ್ಟೆ ನಿನ್ನಯ ಬಾಳು ನೋಡೆಂದಿಗು|
    ಮುಟ್ಟುವರು ಕೈಗಳೊಳು ತೊಡುವಾಗ ನನ್ನ ಮ-
    (Shelf)ತ್ತಟ್ಟದೊಳಗಿರಿಸುವಾಗಿನ್ನೊಮ್ಮೆ ಕೇಳ್||

    ಚಪ್ಪಲಿ:
    ನನ್ನಂತೆ ನಾನಿರಲು ಬಿಡುವರೆಲ್ಲರು ನೋಡು
    ಬನ್ನಗೊಳಿಸರು ತಾವು ಎಂದೆಂದಿಗು|
    ತಿನ್ನಿಸುತೆ ಕಪ್ಪನ್ನು (Shoe polish) ನಿನಗವರು ಕುಂಚದಿಂ-(Brush)
    ದಿನ್ನಿಲ್ಲದಂತೆ ಚುಚ್ಚುತೆ ಹಿಂಸಿಪರ್||

  2. The airway surface liquid (ASL), often referred to as mucus, is a thin layer of fluid covering the luminal surface of the airway. The major function of mucus is to protect the lung through mucociliary clearance against foreign particles and chemicals entering the lung. It possess the protective functions such as anti-microbial…

    ಸಲೆ ಬಾಣಂತಿಯರೊಡ್ಡಿಕೊಂಡು ತನುವಂ ಸಾಂಬ್ರಾಣಿಧೂಪಕ್ಕಮೈ
    ಖಿಲಗೈವರ್ ಶಿಶುಜನ್ಮದಿಂದೊದಗಿಹಾ ದೇಹಾಂತಶೀತಂಗಳಂ|
    ಪುಲಕಂಗೊಳ್ಳುಗೆ ನೀನು ಘ್ರಾಣಿಸದಿರೈ ತದ್ಧೂಪಮಂ ಪೆರ್ಚಿನಿಂ
    ಸುಲಭಂ ತಾನಹುದಾಗಳಾಕ್ರಮಿಸೆ ಕೇಳ್ ನಿನ್ನಂ ಕರೋನಕ್ಕಮೈ||
    (Too much exposure to steam inhalation and fumigation erodes the mucus)

  3. ಸಮಸ್ಯಾಪೂರಣ:
    ಔತ್ಕಟ್ಯರ್ ಯಾರ್ ಸಂಪ್ರದಾಯಂಗಳೊಳ್ ಕಾಣ್
    ಉತ್ಕೃಷ್ಟರ್, ಗೈವರ್ ಸುಸಾಹಾಯ್ಯಮಂ ತಾಂ|
    ಸತ್ಕಾರ್ಯಕ್ಕಂ, ಸಜ್ಜನರ್ ಕಷ್ಟಮೀವರ್
    ಥೂತ್ಕಾರಂ ಗೈದಾ ದುರಾಚಾರಿಗಳ್ಗಂ||

  4. ಬೆಂಬಲವಿರಲು ಬೇಕು ಮನುಜಂಗೆ ಲೋಕದೊಳು
    ಸಂಬಾಳಿಸಲು ಜೀವಿತವ ದಿನದಿನ|
    ಉಂಬಲಾಗದು ಬಿರುಸ ಮುದಿತನದೆ ಕೈ ಬೇಕು
    ತಂಬುಲಕೆ ಕುಟ್ಟಾಣಿಯನು ಬಳಸಲು||

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)