Dec 072021
 

೧. ರಾಮಾಯಣದ ಇಷ್ಟದ ಪ್ರಸಂಗ
೨. ಸೀನು
೩. ಕಲ್ಲಿನ ವೀಣೆ

ಸಮಸ್ಯೆ:
(ಉತ್ಪಲಮಾಲೆ) ಬಂದುದು ಮುಪ್ಪಿನಲ್ಲಿ ತನುಪಾಟವಮೆಂತುಟೊ ಸಾಜಮೆಂಬವೊಲ್
(ಶಾರ್ದೂಲ) वार्धक्ये तनुपाटवं च समभूत् नैसर्गिकेनाध्वना

  5 Responses to “ಪದ್ಯಪಾನ ೪೪೬”

  1. ರಾಮಾಯಣಪ್ರಸಂಗಗಳೊಳಗೆ ನನಗೆಂತೊ
    ಆಮೋದವೆಂದರದು ಗುಹನ ಸಿದ್ಧಿ|
    ರಾಮ ತಾ ಪಾರಾಗಿಸುವನು ನರಮಾತ್ರರನು
    ರಾಮನನೆ ಪಾರುಗಾಣಿಸಿದ ಗುಹನು||

  2. ಹೊಸದಾಗಿ ಬರೆದ ಪದ್ಯಗಳಲ್ಲ, ಆದರೂ ಸಂದರ್ಭಕ್ಕೆ ತಕ್ಕದೆಂದು ಹಾಕುತ್ತಿದ್ದೇನೆ. ರಾಮ ಸೀತಾ ಲಕ್ಷ್ಮಣರು ಪಂಚವಟಿಗೆ ಬಂದ ಮೊದಲ ದಿನದ ವರ್ಣನೆ. _/|\_

    ತರುಣಿ ಹರಿಯುವ ನದಿಯ ನೋಡುತ
    ಲರುಹಿದಳು ತನ್ನಿನಿಯ ರಾಮಗೆ
    ಹರುಷ ತರುವೀ ತಾಣವಿದು ಬಲು ಸೊಗಸು ಕಾಣುತಿದೆ|
    ಸುರಗಿ ಹೂಗಳು ಬಿರಿದು ಸುತ್ತಲು
    ಪರಿಮಳವ ಹರಡಿಹವು ಕೇಳ್ ನಾ-
    ವಿರಲಿಕಿದುವೇ ಸೊಗದ ನೆಲೆಯಹುದೆಂದಳಾ ಸೀತೆ || 1 ||

    ಇಳೆಯ ತನುಜೆಯ ಕೂಡೆ ರಾಮನು
    ಬಳಿಯ ಗೋದಾವರಿಯ ದಡದ-
    ಲ್ಲಿಳಿದು ನಿಂತನು ಮೆಚ್ಚಿದನು ಎಡೆ ತಕ್ಕುದಹುದೆನುತ |
    ಉಳಿದಿರುವ ವನವಾಸ ಕಾಲವ
    ಕಳೆಯೆ ಸೊಗವಿದೆನುತಿರೆ ಸುತ್ತಣ
    ಗಿಳಿಯವಿಂಡುಗಳಳಿಸಮೂಹವು ಹರ್ಷ ತೋರಿದವು || 2 ||

    ಮಡದಿಯಾಸೆಯ ಕೇಳಿ ರಾಮನು
    ಸಡಗರವ ತೋರುತಲಿ ಲಕ್ಷ್ಮಣ
    ನೊಡನೆ ಅಲ್ಲೇ ಪರ್ಣಕುಟಿಯನು ನಿರ್ಮಿಸಲು ಹೇಳಿ |
    ಎಡದ ಕಡೆಯಲಿ ಗೌತಮೀ ನದಿ
    ಯೆಡೆಗೆ ಹೆಂಡತಿಯನ್ನು ಕರೆದೊ-
    ಯ್ದುಡುಗೊರೆಯನಿತ್ತಿಹನು ಮುಡಿಯಲಿ ಕೇದಗೆಯ ಹೂವ || 3 ||

    ಸುಗುಣಿ ಲಕ್ಷ್ಮಣನಣ್ಣನಾಣತಿ
    ತೆಗೆದು ಹಾಕುವುದುಂಟೆ? ಕೂಡಲೆ
    ಹೆಗಲ ಮೇಗಡೆ ಹೊತ್ತು ತಂದನು ರೆಂಬೆಕೊಂಬೆಗಳ |
    ಹಗಲು ಮೀರುವ ಮುನ್ನ ಕಟ್ಟುತ
    ಮುಗಿಸಿ ಹೊಸ ಕುಟಿಯನ್ನು ಕರೆದಿಹ
    ಹಗುರ ಮನದಲ್ಲಣ್ಣ ಅತ್ತಿಗೆಯನ್ನೊಳಕೆ ಬರಲು || 4 ||

  3. याचितुं दयिताहस्तं प्रयातः पितराविह ।
    विप्रानिव स्तुवे हंजे सद्वितीयः समेहि नः ।।

    “My parents are leaving now to ask for my beloved’s hand (for me). I pray to you as I pray to brāhmaṇas. O Sneeze! Please come to us with a second one!”
    In śakunaśāstra two brāhmaṇas and two sneezes are considered to portend success.

  4. ಅಂದರಿನೀ ದರಿಜೇರ್ಚು ಮಾರಾಜುವೇ!
    ಅದ್ದರಿನಿ ಜೇರ್ಚಮನಿ ಅಡುಗುತುಂಡಾವೇ!
    ನುವು ದಾಟಲೇಕ ಕಾದುಲೇ ರಾಮಯ ತಂಡ್ರಿ
    ನನು ದಯಜೂಡಗ ವಚ್ಚಾವು ರಾಮಯತಂಂಡ್ರಿ!!
    (ತೆಲುಗು ಚಿತ್ರಗೀತೆಯೊಂದರ,ನಿಮ್ಮ ಭಾವವ ಹೋಲುವ, ಸಾಲುಗಳು)

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)