Mar 282022
 

೧. ಖಾಲಿಯಾದ ಆಭರಣದ ಪೆಟ್ಟಿಗೆ

೨. ಬಾಗಿದ ಬಾಳೆಯ ಗಿಡ

೩. ಹಿನ್ನೆಲೆ ಗಾಯನ 

೪. ಸಮಸ್ಯೆ

(ಮಂಜುಭಾಷಿಣೀ)ಒಣಗಿರ್ಪಮಲ್ಲಿಗೆಯ ಬಳ್ಳಿಯಂದಮಯ್

(मंजुभाषिणी)परिशुष्कमालतिलता मनौहरा 

  6 Responses to “ಪದ್ಯಸಪ್ತಾಹ ೪೪೮”

  1. रविचण्डहस्तपरिपीतसद्रसा
    तृषितालिपुञ्जमपि पुष्णती सुमैः।
    नवबीजदा भुवि लसत्यवर्षणे
    परिशुष्कमालतिलता मनोहरा ॥

    Here, the importance of hope is to be understood. The creeper though dried up in the absence of rains, is still standing and doing whatever possible. Therefore, it looks beautiful. This is the real beauty of the dried creeper.

  2. ಖಾಲಿಯಾದ ಆಭರಣದ ಪೆಟ್ಟಿಗೆ ಒಡವೆಗೆ ಹೇಳಿದ್ದು:

    ಪ್ರಮದೆಯರ ಕೊರಳೊಳೆಂತೋ ಮಿನುಗುತಿದ್ದೀಗ
    ಜಮೆಯಾದೆ ಸಂಪುಟದೆ ದೀರ್ಘಕಾಲ|
    ಕಮರಿರುವ ನಿನ್ನಂಗವನು ನೋಡಲಾರೆನಾಂ
    ಭ್ರಮಣಕಾಲವು ಬರಲಿ ಬೇಗಬೇಗ||

  3. ಖಾಲಿಯಾದ ಆಭರಣದ ಪೆಟ್ಟಿಗೆ:
    ಮನೆಯು ಸಾಲದೆ ಮುಳುಗೆ ಮಾರಾಟವಾಗುತ್ತೆ
    ಧನಮನರಸಿ ಪೋಗಲೊಡವೆ
    ಮನದಲ್ಲಿ ಸಿರಿ ಮರಳಿ ಬರ್ಪ ನಿರೀಕ್ಷೆಗೆ
    ಸ್ವನದಂತೆ ಸಾಕ್ಷಿ ನಾನಿರ್ಪೆ

    ಮನೆಯಲ್ಲಿ ಸಾಲವಾಗಿ ಒಡವೆಗಳೆಲ್ಲ ಮಾರಾಟವಾಗಿ ಹಣವನ್ನು ಅರಸಿಕೊಂಡು ಹೋದವು. ಆದರೆ ಹೋದ ಸಿರಿ ಬರುವುದೆಂಬ ಮನಸ್ಸಿನ ನಿರೀಕ್ಷೆಗೆ ಧ್ವನಿಯಂತೆ ಸಾಕ್ಷಿಯಾಗಿ ನಾನು ಇನ್ನೂ ಇದ್ದೇನೆ.(ಆಭರಣಗಳನ್ನು ಮಾರಿದರೂ ಅವನ್ನು ಮುಂದೆಂದಾದರೂ ಕೊಳ್ಳಲಾದೀತೆಂಬ ನಿರೀಕ್ಷೆಯಿಂದ ಪೆಟ್ಟಿಗೆಯನ್ನು ಮಾರಲಿಲ್ಲ)

  4. ಜೀವನಮೇ ತೀವಿದ ಮೈ
    ಭಾವಮೊ ಸರ್ವಾದರಾವಹಂ ನಿಜಪತನ
    ಕ್ಕಾವುದೆ ಭಯಮಂ ತೋರದೆ
    ಈವುದು ಪಿರಿಗೊನೆಯನೊಲ್ದು ಬಾಳೆಯೆ ಬಾಗಲ್||

    ಮೈಯೆಲ್ಲ ಜೀವನವೇ(ನೀರು) ತುಂಬಿದ ಬಾಳೆಯ ಮರದ ಭಾವವು ಎಲ್ಲರ ಆದರಕ್ಕೂ ಪಾತ್ರವಾಗುವಂಥದ್ದು. ತನ್ನ ಪತನವನ್ನೂ ಲೆಕ್ಕಿಸದೇ ಬಾಗಿದ ಬಾಳೆಯಮರವು ದೊಡ್ಡ ಬಾಳೆಗೊನೆಯನ್ನೇ ಕೊಡುತ್ತದೆ.

  5. ಉರುಳುಽವಽ ಮುನ್ನಽ ತಾ ಹೊರಳಽದೆಽಲಿರ್ಪುಽದೆಽ
    ಬೆರಗೇನುಽ ಬಾಳೆಽಗಿಡವಽದುಽ| ಎಂದಾರೆಽ
    ಬಿರುಸಾದಽ ಮರವಾಗುವುದೇನುಽ|| ತ್ರಿಪದಿ

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)