Apr 052022
 

1) ಹೂಸ ಬಟ್ಟೆ ಸಿಕ್ಕಾಗ ಆಗುವ ಸಂತೋಷ

2) ಮಳೆಗಾಲದ ನದಿ

3) ಸಂಧಾನ

ಸಮಸ್ಯೆ:
(वसन्ततिलक)निन्द्यो बभूव सुचिरं गुरुरेष भूयान् 
(ಮಂಜುಭಾಷಿಣೀ )ಗುರುವಾದನಲ್ತೆ ಬಹುನಿಂದ್ಯನಾವಗಂ

  5 Responses to “ಪದ್ಯಸಪ್ತಾಹ ೪೪೯”

  1. ವಸಂತಂ ವರ್ಣವನ್ನಾನಾ ವಸನೋತ್ಕರಮಂ ಕುಡಲ್|
    ಜಸಂ ಚಿಗುರ್ವೆರಳ್ ತೋರಲ್ ಲಸದ್ವೃಂಕ್ಷಂಗಳೊಪ್ಪುಗುಂ||

    ವಸಂತನು ಕೊಟ್ಟ ಬಣ್ಣಬಣ್ಣದ ಹೊಸವಸ್ತ್ರಗಳನ್ನು ತೊಟ್ಟು ಚಿಗುರು ಬೆರಳುಗಳಿಂದ ಜಸವನ್ನು ತೋರುತ್ತಾ ವೃಕ್ಷಗಳು ಶೋಭಿಸುತ್ತಿವೆ.

  2. ಕೂಲಮಂ ಮೀರುತುಂ ಸಾಗಲ್ ಪಾಲಕರ್ಕಳನೊಪ್ಪದಾ
    ವ್ಯಾಳರಂ ಪೋಲುತುಂ ವರ್ಷಾಕಾಲದೀ ನದಿ ಸಾಗುಗುಂ||
    ಮೇರೆಯನ್ನು ಮೀರುತ್ತಾ ಸಾಗುವ ವರ್ಷಾಕಾಲದ ನದಿಯು ಹಿರಿಯರ ಮಾತನ್ನು ಕೇಳದೇ ಸಾಗುವ ದುಷ್ಟರಂತೆ ಕಾಣುತ್ತದೆ.

  3. ಸಂಧಾನ:
    ರಮಣಾಕಾಶನೊಳ್ ಸಿಟ್ಟಿಂದಮೆ ಕಾದಿರೆ ಭೂಮಿ ತಾಂ
    ಶಮನಂ ಗೆಯ್ದು ತಣ್ಪಿಂ ವರ್ಷಮೆ ಸಂಧಾನಕಾದುದಯ್||

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)