Apr 272022
೧. ಬೆಕ್ಕು ಹಾರಿದಾಗ
೨. ಹಪ್ಪಳ
೩. ಬಿಚ್ಚದ ಧ್ವಜ
ಸಮಸ್ಯೆ:
ಪೂವಂ ಕುರಿದರಿದನಲ್ತೆ ರಸಿಕಾಗ್ರಣಿಯುಂ
रसिको मृद्नाति कुसुमसञ्चयमदयम्
೧. ಬೆಕ್ಕು ಹಾರಿದಾಗ
೨. ಹಪ್ಪಳ
೩. ಬಿಚ್ಚದ ಧ್ವಜ
ಸಮಸ್ಯೆ:
ಪೂವಂ ಕುರಿದರಿದನಲ್ತೆ ರಸಿಕಾಗ್ರಣಿಯುಂ
रसिको मृद्नाति कुसुमसञ्चयमदयम्
ಬಿಚ್ಚದ ಧ್ವಜ:
ನೆಲನಂ ಕಾಪಿಟ್ಟು ತನ್ನ
ತಲೆಯಂ ಕೊಟ್ಟ ಪತಿಯ ನೆನಪಂ ಬರಿಸಿತ್ತಾ |
ಮಲಗಿದ ವರ್ಣಧ್ವಜಮಾ
ಲಲನೆಗತಿಶೋಕಮನೀಯ್ದು ಕಾಡಿರ್ಪುದು ತಾಂ ||
ಯುದ್ಧದಲ್ಲಿ ತನ್ನ ಪ್ರಾಣವನ್ನು ಕಳೆದುಕೊಂಡ ಸೈನಿಕನ ನೆನಪಿಗಾಗಿ ಕೊಟ್ಟಿದ್ದ ಮಡಚಿದ ಧ್ವಜವು ಅವನ ಪತ್ನಿಗೆ ದುಃಖವನ್ನು ಕೊಟ್ಟಿತ್ತು.
ಪದ್ಯಭಾವ ಚೆನ್ನಾಗಿದೆ. ಕೆಲವು ಛಂದೋದೋಷಗಳಾಗಿವೆ.
ಕಂದದ ಪೂರ್ವೋತ್ತರಾರ್ಧಗಳಲ್ಲಿ 1,3,5 ಮತ್ತು 7 ನೇ ಗಣಗಳಲ್ಲಿ ಜಗಣ ಬರುವಂತಿಲ್ಲ.
ನಿಮ್ಮ ಪದ್ಯದಲ್ಲಿ – ಮೊದಲನೇ ಸಾಲಿನಲ್ಲಿ – ಪೂರ್ವಾರ್ಧದ ಮೂರನೇ ಗಣ ಜಗಣವಾಗಿದೆ(ನೆಲನಂ| ಕಾಪಿ| ಟ್ಟು ತನ್ನ – ಟ್ಟು ತನ್ನ ಎನ್ನುವುದು ಜಗಣವಾಗುತ್ತದೆ). ಹಾಗೆಯೇ ಉತ್ತರಾರ್ಧದ 5 ನೇ ಗಣ – ಲಲನೆಗತಿ ಶೋಕ ಎನ್ನುವಲ್ಲಿಯೂ ತಿ ಶೋಕ – ಜಗಣವಾಗುತ್ತದೆ.
ಅಂತೆಯೇ ಎರಡು ಮತ್ತು ನಾಲ್ಕನೇ ಸಾಲಿನ ಮೂರನೇ ಗಣವು ಜಗಣವೇ ಆಗಬೇಕು ಅಥವಾ ಸರ್ವಲಘುವೇ ಆಗಬೇಕು. ಒಂದೊಮ್ಮೆ ಸರ್ವಲಘುವಾದಲ್ಲಿ ಮೊದಲ ಮಾತ್ರಾಕ್ಷರದ ಬಳಿಕ ಯತಿ ಬರಬೇಕು. ನಿಮ್ಮ ಪದ್ಯವನ್ನೇ ಉದಾಹರಣೆಯಾಗಿ ತೆಗೆದುಕೊಳ್ಳುವುದಾದರೆ –
ಎರಡನೇ ಸಾಲಿನಲ್ಲಿ ಮೂರನೇ ಗಣ ಅಂದರೆ ‘ತಿ’ ಅಕ್ಷರದ ಬಳಿಕ ಯತಿ ಬರಬೇಕು(ತಿಯ ನೆನ – ಎನ್ನುವುದು ಸರ್ವಲಘುವಾದ್ದರಿಂದ). ನಾಲ್ಕನೇ ಸಾಲಿನ ಮೂರನೇ ಗಣ ನಿಯಮಾನುಸಾರಿಯಾಗಿಯೇ ಇದೆ.
ಕಂದಪದ್ಯದ ನಿಯಮಗಳಿಗಾಗಿ – http://padyapaana.com/?page_id=438
ಪದ್ಯವನ್ನು ಹೀಗೆ ಸವರಬಹುದು:
ನೆಲನಂ ಕಾಪಿಡೆ ತನ್ನಯ
ತಲೆಯಂ ಕೊಟ್ಟಿರ್ದ ಪತಿಯನೇ ನೆನಪಿಸುತುಂ|
ಮಲಗಿದ ವರ್ಣಧ್ವಜಮಾ
ಲಲನೆಗೆ ತಾಂ ಶೋಕಮಿತ್ತು ಕಾಡುತುಮಿರ್ಕುಂ||
ನಿಯಮಗಳನ್ನು ನೆನಪಿಟ್ಟುಕೊಂಡು ಮಾತ್ರೆಗಳನ್ನು ಲೆಕ್ಕಹಾಕಿ ಬರೆಯುವುದಕ್ಕಿಂತಲೂ ಮೇಲಿನ ಕೊಂಡಿಯಲ್ಲಿ ಹೇಳಿದ ಪುಸ್ತಕಗಳಿಂದ ಒಂದು ನೂರಾದರೂ ಕಂದಪದ್ಯಗಳನ್ನು ಓದಿ ಗತಿಯನ್ನು ಮನದಟ್ಟು ಮಾಡಿಕೊಂಡರೆ ಬರೆವಣಿಗೆ ಸುಲಭವಾಗುತ್ತದೆಯೆಂಬುದು ನನ್ನ ಅನುಭವ 🙂
ನಿರಂತರವಾಗಿ ಕವನಿಸುತ್ತಿರಿ.
ಧನ್ಯವಾದಗಳು ಸರ್.