Apr 022011
ವರುಷದಂತೆಯೆ ಮರಳಿ ವಾಸಂತಪಲ್ಲವವು
ಬರೆಯಲರಳುತಲಿಹುದು ಹೊಸಯುಗದ ಕಾವ್ಯವನು
ಖರಲೇಖನಿಯ ನಿಬ್ಬಿಗೆರೆಸಿ ಮಿದುಹಸಿರನ್ನು
ಬಾ ರಮಣಿ ಮಧುವೀಂಟು ಮೀಂಟು ವೀಣೆಯ ತನುವ.
ನೋವು ನಲಿವಿನ ಧರ್ಮ ಕಾಲನಿಬ್ಬಗೆಯಂತೆ
ಬೇವು ಬೆಲ್ಲದ ಹದವು ಬಾಳ ಋತವನಿವಾರ್ಯ
ಕಾವುದಾತನ ಕರ್ಮ ಕಾಯುವುದು ಭವಕಾರ್ಯ
ನಾವು ಬಯಸುವ ನೆಮ್ಮದಿಯ ಜೀವ ಸಂಕುಲಕೆ.
ತುಂಬು ಸಿಹಿ ಫಸಲುಕ್ಕಿ ಸುಗ್ಗಿ ತುಂಬಲಿ ಕಣಜ
ನಂಬುಗೆಯ ಪದ ಬಂಧಿಸಲಿಯೆಮ್ಮ ಜನಪದವ
ಅಂಬ! ಹಸಿವೆನ್ನುತಲಿ ಮಕ್ಕಳಳದಿರಲೆಂದು
ದುಂಬಿ ಗುನುಗುನುನಾದವರಳಲುದ್ಯಾನಗಳಲ್ಲಿ.
ಉತ್ತರೋತ್ತರಕೊಳಿತ ಬಯಸುತ್ತ ಸುಖಿಸೋಣ
ಮತ್ತೆ ಚೈತ್ರದ ಕಾಲಕಾನೊ ನೀನೋ ಕಾಣೆ..
ನವ ವಸಂತದ ಸಂತಸದ ಸಂತ ಮನದಂತೆ
ಕವಿತೆ ಮುದವಹವು ಶ್ರೀಖರನ ಶ್ರೀಕರದಂತೆ
ಸವೆಯದಮೃತ ತರಲಿ ರಾಘವೋಕ್ತಿಯದಂತೆ
ಬುವಿ ಕಾವ ಕಳೆದು ಮೊಳೆಯಲಿ ಶಾಂತಿ ಚಿಗುರಂತೆ
chandra mouliyavare,
nimma muddaada kaamentupadyavu sihiyaagide:-)
dhanyavaadagalu..