Oct 112011
 

ಇದು ಕನ್ನಡದಲ್ಲಿ, ಚತುರ್ಮಾತ್ರಾಗಣದ ವಿಶೇಷವಾಗಿ ಉಪಯೋಗಿಸಲ್ಪಟ್ಟ ಛಂದಸ್ಸು. ಇದರ ಹೆಸರಿನ ಉಗಮ ಸ್ಕಂದಕ → ಕಂದಅ → ಕಂದಹೀಗೆ ಆಗಿರಬಹುದು.

೪ ಪಾದಗಳಲ್ಲಿ ಮಾತ್ರಾಗಣ ವಿಭಾಗಗಳು ಇಂತಿವೆ ::

. + +

. + + + +

. + +

. + + + +

ಈ ಗಣಗಳಲ್ಲಿ, ಗುರುಲಘು ಜೋಡಣೆಗಳು ಈ ರೀತಿ ::

ಗಣ ಲಘು(U) – ಗುರು( _ ) ಜೋಡಣೆ
(ಸಾಮಾನ್ಯ) _ _
U U U U
_ U U
U U _
U _ U (ಜಗಣ)
U U U U (
ಸರ್ವ ಲಘು)
_ _
U U _
ಯಾವ ಜೋಡಣೆಯೂ ಆಗಬಹುದು
(ಸಾಮಾನ್ಯ ಅಥವ ಜಗಣ)

ಕಂದ ಪದ್ಯ ಬರೆಯಲು ಮೊದಲು ಚತುಷ್ಪಾದ ಪದ್ಯ ಬರೆದು, ಒಂದು (ಕೊನೆಯ) ಗಣವನ್ನು ಮೊದಲನೆಯ (ಹಾಗು ಮೂರನೆಯ) ಪಾದದಿಂದ ತೆಗೆದು ಎರಡನೆ (ಹಾಗೂ ನಾಲ್ಕನೆಯ) ಪಾದಕ್ಕೆ ಹೊಂದಿಸಿ ಪ್ರಯತ್ನ ಮಾಡಬಹುದು. ಹೀಗೆ ಮಾಡಿದಲ್ಲಿ ಗಣಗಳ ಸಂಖ್ಯೆ ಸರಿಯಾದರೂ, ಮೇಲೆ ತೋರಿಸಿದ ವಿಶೇಷ ಗಣಗಳಲ್ಲಿನ ಗುರು-ಲಘು ಹೊಂದಿಕೆಯನ್ನೂ ಗಮನಿಸಬೇಕು.

ಕಂದ ಪದ್ಯದ ಉದಾಹರಣೆಗಳು

೧.
ಕಂದವನೊರೆವುದು ಕಷ್ಟಂ
ಕುಂದಾಗುವುದೆಂಬ ಭೀತಿ ನಮಗಂ ನಿಚ್ಚಂ
|
ಚಂದಕೆ ಸಲ್ವೊಡೆ ಕವಿತೆಗ

ದೆಂದುಂ ಬಂಧವಿದು ಬೇಕು ಕನ್ನಡದೊಳಗಂ
||

೨.
ಆರವಮಂ ನಿರ್ಜಿತಕಂ 

ಠೀರವರವಮಂ ನಿರಸ್ತ ಘನರವಮಂ ಕೋ
|
ಪಾರುಣ ನೇತ್ರಂ ಕೇಳ್ದಾ
ನೀರೊಳಗಿರ್ದುಂ ಬೆಮರ್ದನುರಗ ಪತಾಕಂ
||

೩.
ಲಂಬೋದರ ಗಣಪತಿ ಹೇ

ರಂಬಾ ವಿಘ್ನೇಶ ಮೋದಕಪ್ರಿಯ ಕೇಳೈ
|
ನಂಬಿದೆನೈ ಕರಿವದನಾ
ತುಂಬಿಸಿ ಬಾಳಿಸುವುದೆನ್ನ ಮತಿಯಂ ದೇವಾ
||

 

  12 Responses to “ಕಂದ ಛಂದಸ್ಸು”

  1. Dear Sir,

    Its nice,I would like know about kuvempu mahakavya chandass in the way as you have explianed the kanda padya chanduss.

    Regards
    Mumukshu

    • Sure. But we are coming gradually to it. Pl be in touch with us and follow this site. In brief, I can say this much now; mahaacchandas is nothing but sarala ragale in basic quantification. But in Kuvempu it has taken the heights of great glory and beauty. Only in certain occasions where the poet intentionally wants to prove his stamp, the metre has fallen from the masterly dignity. For more details, pl listen to my five DVD-s that cover the lectures on the epic shriraamaayaNadarshanaM.

  2. Thank You very much, I will follow here and listen to DVD.

  3. Dear Sir

    I am very grateful to you, for providing this information here. It really helps me and many enthusiastic learners to learn the Kannada Chandassu as applied to kaavya.

    I am eagerly waiting for your lessons on other forms also like
    ಪಂಚಮಾತ್ರಾ ಚೌಪದಿ, ಭಾಮಿನಿ ಷಟ್ಪದಿ, ರಗಳೆ, ವಾರ್ಧಕ ಷಟ್ಪದಿ etc

    Regards
    Vinayak

  4. ದಿನಕರನೆ ಮನ್ನಿಸೆನ್ನಯ
    ಬಿನಪಂ, ನಿನ್ನುದಯಮಂ ತಡೆವೆಯೇನ್ ಕೊಂಚಂ
    ತನಿರಸಭರಿತಂ ಕಂದಂ
    ನಿನಗರ್ಪಿಸುವಾಸೆಯೈ ಕಡೆವೆನೈ ಶೀಘ್ರಂ

    • ರವೀಂದ್ರ – ಬಹಳ ಚೆನ್ನಾಗಿದೆ. ಅದೂ ಪದ್ಯ ಹಾಕಿದ ಸಮಯ ಗಮನಿಸಿದರೆ ಸೊಗಸು ಇನ್ನೂ ಹೆಚ್ಚು.

  5. ಸಹಜಂ ನದಿಗುಂ ಪಯಣಂ
    ವಿಹಗಂಗೆ ನೆಗೆವುದಮೀಸ್ವುದಂ ಜಲಚರಕುಂ
    ಬಹುದೇನೆಮ್ಮಯ ತನದೊಳ್
    ಅಹನ್ಯಹನಿ ಗಹನಪದ್ಯರಚನಾಧರ್ಮಂ

  6. ವಿಷಮಂ ಗಡ ಚಳಿಗಾಲಂ
    ವಿಷಣ್ಣತಾಮುಕ್ತಿಗಿದುವೆ ಛಂದೋಶರಣಂ
    ಉಷೆಯೊಳ್ ಪೊದೆದೀ ಛದಮಂ
    ವಿಷಯಂಜನಿತಾಂಡದಿಂಪಡೆವೆವೈ ಪದ್ಯಂ

  7. What is the answer

    • There is no question in this page, since this page gives the structure of a kanda padya with few examples. Hence, not sure about the answer you are seeking.
      Is your query concerned with any ಸಮಸ್ಯಾಪೂರಣ

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)