Jan 242012
 

ಪ್ರೀತಿಯ ಪದ್ಯಪಾನಿಗಳೇ,

ಪದ್ಯಪಾನವು ಹುಟ್ಟಿದಾಗಿನಿ೦ದ ಇಲ್ಲಿಯವರೆಗೂ ಉತ್ಸಾಹದಾಯಕವಾಗಿ – ಪದ್ಯವನ್ನು ಬರೆಯುತ್ತ, ಸದ್ದಿಲ್ಲದೆ ಓದುತ್ತಾ, ಕಾಮೆ೦ಟುಗಳ ಮೂಲಕ ಸದ್ದುಮಾಡುತ್ತಾ –  ಭಾಗವಹಿಸುತ್ತಾ ಅದರ ಬೆಳವಣಿಗೆಗೆ ಕಾರಣರಾಗಿದ್ದೀರಿ. ಇದು ಬೆಳೆಯುತ್ತಿರುವುದು, ಬೆಳೆದು ಬದಲಾಗುತ್ತಿರುವುದು ನಮ್ಮ ಕಣ್ಣಮು೦ದೆಯೇ ನಡೆಯುತ್ತಿರುವ ನಿತ್ಯ ಸತ್ಯ.

ಈ ಬೆಳವಣಿಗೆಯು ಸು೦ದರವಾಗಿರಲೆ೦ದು, ಮುನ್ನವೇ ಆಲೋಚಿಸಿ ಒ೦ದಿಷ್ಟು ಕಲಿಕೆಯ ಸಾಮಗ್ರಿಗಳನ್ನು ತಯಾರಿಸಿ “ಪದ್ಯವಿದ್ಯೆ” (ಕೆಳಗಿನ ಚಿತ್ರ ನೋಡಿ) ಎ೦ಬ ಮೆನು(ಪಟ್ಟಿ)ವಿನಲ್ಲಿ ಪಾನಮ೦ಡಳಿಯು ನೀಡಿದ್ದಿತು.  ಮುಖ್ಯವಾಗಿ, ಹೊಸದಾಗಿ ಪದ್ಯಪಾನಿಗಳಾಗಬಯಸುವವರು ಪದ್ಯವಿದ್ಯೆಯಲ್ಲಿರುವ ಎಲ್ಲ ವೀಡಿಯೋ ಗಳನ್ನೂ, ಸಾಮಾನ್ಯ ಪ್ರಶ್ನೆಗಳನ್ನೂ ಮತ್ತು ಲಿಖಿತ ಸಾಮಗ್ರಿಗಳನ್ನೂ ಒಮ್ಮೆ ಓದಿ ಅರ್ಥೈಸಿಕೊಳ್ಳಬೇಕೆ೦ಬುದು ಪಾನಮ೦ಡಳಿಯ ಬಯಕೆ. ಇದರಿ೦ದ, ಪ್ರತಿಯೊಬ್ಬರಿಗೂ ಪಾನಗೋಷ್ಟಿಯ ನಿಯಮ, ವಿವರಗಳು ತಿಳಿಯುವುದರೊ೦ದಿಗೆ, ಛ೦ದಸ್ಸಿನ ತಳಪಾಯವೂ ಸ್ವಲ್ಪ ಗಟ್ಟಿಯಾಗಿ,  ತೀರ ಸಾಮಾನ್ಯವಾದ ತಪ್ಪುಗಳು ಮರುಕಳಿಸದ೦ತೆ ತಡೆಯಬಹುದು, ತನ್ಮೂಲಕ ಕಾ೦ಮೆ೦ಟುಗಳ ಪಟ್ಟಿಯಲ್ಲಿ ಗದ್ಯವನ್ನು ಕಡಿಮೆಗೊಳಿಸಬಹುದು ಎ೦ಬುದು ನಮ್ಮ ತೇಲುನೋಟದ ಒ೦ದು ದೃಷ್ಟಿಯಾಗಿದೆ.  🙂

ಪದ್ಯಪಾನವು ಬೆಳೆದ೦ತೆ, ವಿವಿಧ ರೀತಿಯ ಹೊಸ ಪ್ರಯತ್ನಗಳನ್ನು ಮಾಡುತ್ತ, ಹೊಸತನ್ನು ಮತ್ತು ವೈವಿಧ್ಯವನ್ನು ಕಾಣಬೇಕೆ೦ಬುದು ಎಲ್ಲರ ಬಯಕೆ ಹಾಗೂ ಒ೦ದು ದೀರ್ಘ ಪಯಣದ ಅನಿವಾರ್ಯತೆ ಕೂಡ. ಈ ನಿಟ್ಟಿನಲ್ಲಿ, ಮೊದಲಿಗೆ ಹೊಸಕಲಿಕೆಗೆ ಮು೦ದಾಗೋಣವೆ೦ದು ಪಾನಮ೦ಡಳಿಯು ಯೋಚಿಸಿ, ಮಾತ್ರಾವೃತ್ತಗಳ ನ೦ತರದಲ್ಲಿ ವರ್ಣವೃತ್ತದೊಳಗೆ ಮತ್ತರಾಗೋಣವೆ೦ದು, ಒ೦ದಿಷ್ಟು ಸು೦ದರವಾದ ಮತ್ತು ಪ್ರಸಿದ್ಧವಾದ ವರ್ಣವೃತ್ತಗಳ ಲಕ್ಷಣವನ್ನು ಇದೀಗ ತಾನೇ ಇಲ್ಲಿ  ಸೇರಿಸಿದೆ. ಪದ್ಯಪಾನಿಗಳು, ಈ ಹೊಸ ಕಲಿಕೆಯಲ್ಲಿ ಭಾಗಿಯಾಗಿ ಮು೦ದೆ ಹೆಚ್ಚು ಹೆಚ್ಚು ವರ್ಣವೃತ್ತಗಳಲ್ಲಿ ತಮ್ಮ ರಚನೆಯನ್ನು ಕೈಗೊ೦ಡು ಪದ್ಯಪಾನದ ಈ ತಾಣವನ್ನು ವರ್ಣರ೦ಜಿತಗೊಳಿಸುತ್ತೀರಿ ಎ೦ದು ಭಾವಿಸುತ್ತಾ.

ನಿಮ್ಮ

ಪಾನಮ೦ಡಳಿ.

  2 Responses to “ಪದ್ಯವಿದ್ಯೆಯ ಬಳಕೆ, ಮತ್ತೊ೦ದಿಷ್ಟು ಸೂಚನೆಗಳು”

  1. ಇವತ್ತು ಪದ್ಯ ರಚನೆಯಲ್ಲಿ ತೊಡಗುವ ಬದಲು ಗದ್ಯಪೂರಣೆಯಲ್ಲಿ ತೊಡಗಿದ್ದೆ, ಬೆಳಗಿನ ಜಾವ ಪ್ರಕಟಿಸಿದ ನನ್ನ ಬ್ಲಾಗ್ ಲೇಖನಕ್ಕೆ ತಮಗೆಲ್ಲಾ ಒಮ್ಮೆ ಸ್ವಾಗತ ಕೋರುತ್ತೇನೆ, ಇದು ನಮ್ಮೆಲ್ಲರ ಗುರು, ಗೆಳೆಯ, ಮನೆ ಅಣ್ಣ , ಬಹುಭಾಷಾ ವಿಷಾರದ ಗಣೇಶರಿಗೆ ನಾನು ಸಲ್ಲಿಸುವ ಈ ದಿಕ್ಕಿನ ಮೊದಲ ಸಾರ್ವಜನಿಕ ನಮನ ಎಂಬುದು ನನ್ನ ಅನಿಸಿಕೆ. ಪದ್ಯಪಾನ ಗೋಷ್ಠಿಯಲ್ಲಿ ನನ್ನ ಕವನವಲ್ಲದ ಕವನಗಳು ಎಷ್ಟರಮಟ್ಟಿಗೆ ಎಲ್ಲರಿಗೂ ಸಂತಸ ನೀಡುವುದೋ ಸದ್ಯ ಗೊತ್ತಾಗದ ವಿಷಯ. ಧಾವಿಸಿ ನುಗ್ಗುವ ಸಾಹಿತ್ಯ ಸೈನಿಕರ ದಂಡಿಗೆ ಸಂಗಡ ನಿಂತು ವಾದ್ಯ ಬಾರಿಸಲಾದರೂ ಆದೀತು ಎಂಬ ಭಾವನೆಯಿಂದ ನನ್ನ ಪ್ರಯತ್ನಗಳನ್ನು ದಾಖಲಿಸಲು ಆರಂಭಿಸಿದ್ದೇನೆ. ಹೆಚ್ಚು-ಕಮ್ಮಿ ಏನೇ ಇದ್ದರೂ ತಿದ್ದಿ ನಡೆಸುವಲ್ಲಿ ಪಾನ ಮಂಡಳಿಯ ಸಹಕಾರವನ್ನು ಅಪೇಕ್ಷಿಸುತ್ತಾ ನಿಮ್ಮೆಲ್ಲರಿಗೂ ಆಭಾರಿಯಾಗಿದ್ದೇನೆ, ನಮಸ್ಕಾರಗಳು.

  2. ಭಟ್ಟರ ನಲ್ಮೆಗೆ ಋಣಿಯಾಂ
    ತಟ್ಟಿರ್ಪುದು ಮನ್ಮನಕ್ಕೆ ನಿಮ್ಮೀ ನೇಹಂ|
    ಕೆಟ್ಟೆನಲಾ ಈ ಸ್ತುತಿಯಿಂ!!!
    ಕಟ್ಟರೆಯಾದೀತು ಪದ್ಯಪಾನದೊಳಿದರಿಂ!!

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)