Mar 192011
 

ಆಟವಿದ ಬಹು ರೋಚಕದೆ ಜನ
ಗೂಟ ಹೊಡೆಯುತ ದೂರದರ್ಶನ
ನೋಟ ನೋಡಲು ಎಲ್ಲ ಸಮಯವ ಮೀಸಲಿಡುತಿಹರು!
ಸ್ಫೋಟದಲೆ ಬೆಳೆದಿರುವ ದೇಶದ
ಕಾಟದತಿ ಬಂಡಿಗಳ ಪಥಗಳು
ಮಾಟವೆನೆ ಸುಲಭದಲಿ ಕೆಲಸವ ಮಾಡೆ ತೆರೆದಿಹವು!!!

  3 Responses to “ಅನಾಸಕ್ತರಿಗೂ ‘ವಿಶ್ವಕಪ್ ಕ್ರಿಕೆಟ್’ನ ಕೊಡುಗೆ (ಭಾಮಿನಿ)”

  1. ಸೋಮನ ಕಾಲೆಳೆಯಲು ಭಾಮಿನಿಯಲೊಂದು ಉತ್ತರವನ್ನು ಕೊಡುತ್ತಿದ್ದೇನೆ…

    ಸಿಕ್ಕ ವಿಷಯವ ಹಿಡಿದು ಪದಗಳ
    ಪಕ್ಕ ಪಕ್ಕದಿ ಇಡುತ, ಸುಲಭದಿ
    ದಕ್ಕದಂತಹ ಕಾರ್ಯದಲಿ ನೀ ಮಘ್ನನಾಗಿರುವೆ |
    ಮಿಕ್ಕ ಯೋಚನೆ ಬಿಟ್ಟ ನಿನಗೆ
    ತಕ್ಕ ಪಾಠವ ಕಲಿಸಲೆಂದೇ
    ಚಿಕ್ಕ ಚಾಡಿಯ ಅತ್ತಿಗೆಗೆ ನಾ ಹೇಳಿ ಬಂದಿರುವೆ ||

  2. ವಿಶ್ವ – ನಿಮ್ಮ ಕಾಮೆಂಟ್ ಬಹಳ ಚೆನ್ನಾಗಿದೆ

  3. ಸೋಮ-ವಿಶ್ವರೆ ನಿಜಕು ಸುಂದರ
    ಭಾಮಿನಿಗಳಾತ್ಮೀಯ ಸಲುಗೆಯ
    ಪ್ರೇಮಭರಿತ ಕ್ರಿಡೆ ಪ್ರಸ್ತುತ ಭಾವ ಚೇಷ್ಟಿತವು.

    ವಿಶ್ವರ ಪದ್ಯದ ಕೊನೆಯಸಾಲು ಆಹ್ಲಾದದಾಯಕ. ನಾಲ್ಕನೇಸಾಲಿಗೆ ಒಂದು ಮಾತ್ರೆ ನುಂಗಿಸಿದರೆ, ಭಾಮಿನಿಯ ಸೌಷ್ಟವ ಮುದಿತವಾಗುವುದೇನೋ.

Leave a Reply to Vishwa Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)