Jan 292012
 

ಕಂದ ಪದ್ಯದ ಎರಡನೆ ಅಥವಾ ನಾಲ್ಕನೆ ಪಾದ ಹೀಗಿದೆ ::

ದುರ್ಗಾ ಭರ್ಗರನುಪಾಸಿಸಲ್ ದುರಿತ ಫಲಂ

ಪದ್ಯದ ಉಳಿದ ಪಾದಗಳನ್ನು ಪೂರೈಸಿರಿ

  13 Responses to “ಪದ್ಯ ಸಪ್ತಾಹ – ೫ – ೨೦೧೨ ::‌ ಸಮಸ್ಯೆ”

 1. ಮಾರ್ಗಂ ಜೀವನದಕ್ಕುಮ-
  ಲರ್ಗಳವೊಲ್, ತಿಳಿದಿರಲ್, ಕ್ರಮವ ಭೋಜನದಲ್
  ಕಾರ್ಗತ್ತಲಕ್ಕದಕ್ಕುಂ
  ದುರ್ಗಾ ಭರ್ಗರನುಪಾಸಿಸಲ್ ದುರಿತ ಫಲಂ

  ದುರ್ಗಾ = ದುರ್ಗ + ಆ (ಈ ರೀತಿ ಸಂಧಿಯನ್ನು ಆರೋಪಿಸಿ ಪರಿಹಾರ ಮಾಡಬಹುದೆ?)
  ಭರ್ಗರ್ = burger

  • ತುಂಬ ಸೊಗಸಾಗದ ಪರಿಹಾರ:-) ಅತ್ಯಂತ ನವೀನಕಲ್ಪನೆ. ದುರ್ಗಾ ಎಂಬುದನ್ನು ಹಾಗೆಯೇ ಯಾರಿಗಾದರೂ ಸಂಬೋಧನೆಯಾಗಿ ಕೂಡ ತೆಗೆದುಕೊಳ್ಳಬಹುದು. ಆದರೆ ದುರ್ಗ+ಆ ಎಂದು ಸಂಧಿ ಮಾಡುವಂತಿಲ್ಲ 🙂 ಇಂದಿನ ಪಾಠವನ್ನು ಬಲುಸೊಗಸಾಗಿ ಇಲ್ಲಿಯೇ ಅಳವಡಿಸಿದ್ದೀರಿ! ಧನ್ಯವಾದಗಳು. ಇಲ್ಲಿ ಹಳಗನ್ನಡಶೈಲಿ ಸೊಗಸಾಗಿ ಎದ್ದು ಕಂಡಿದೆ.

   • ಸಮಸ್ಯೆಗೆ ಹೊಸ ತಿರುವು ತೋರಿ, ದಾರಿ ಕಾಣಿಸಿದ್ದಕ್ಕೆ ಧನ್ಯವಾದಗಳು.
    ಈಗ ಹೀಗೆ ಬದಲಿಸಿರುವೆ.
    ಮಾರ್ಗಂ ಜೀವನದಕ್ಕುಮ-
    ಲರ್ಗಳವೊಲ್, ತಿಳಿದಿರಲ್, ಕ್ರಮವ ಭೋಜನದಲ್
    ಕಾರ್ಗತ್ತಲಕ್ಕುದೀಗಳ್
    ದುರ್ಗಾ! ಭರ್ಗರನುಪಾಸಿಸಲ್ ದುರಿತ ಫಲಂ

    • Fine, but small corrections:
     ……………jIvanakakkuma-
     ……………………………bhOjanadoL
     ………..lappudIgaL
     …………………………………………

     • ಧನ್ಯವಾದಗಳು. ಸರಿಪಡಿಸಿದ್ದೇನೆ ::
      ಮಾರ್ಗಂ ಜೀವನಕಕ್ಕುಮ-
      ಲರ್ಗಳವೊಲ್, ತಿಳಿದಿರಲ್, ಕ್ರಮವ ಭೋಜನದೊಳ್
      ಕಾರ್ಗತ್ತಲಪ್ಪುದೀಗಲ್
      ದುರ್ಗಾ! ಭರ್ಗರನುಪಾಸಿಸಲ್ ದುರಿತ ಫಲಂ ||

 2. ದೊರ್ಗುಂ = ದೊರಕುವುದು. ಸಾಧುವೆ?

  ಭರ್ಗ ಪರಶು ಸುತ್ತೆ ಭುವಿಯ
  ವರ್ಗಕ್ಷಾತ್ರವ ಕೊಲುತ್ತೆ ತೀರದ ಪಗೆಯಿಂ|
  ದೊರ್ಗುಂ ನಮಗಂ ಕ್ಷಾತ್ರರೆ
  ದುರ್ಗಾ ಭರ್ಗರನುಪಾಸಿಸಲ್ ದುರಿತ ಫಲಂ||

  • ಆಗದು:-) ಉಳಿದಂತೆ ಶೈಲಿಯಲ್ಲಿ ತುಸು ಸವರಣೆಗಳು ಆವಶ್ಯಕ.

   • ಈಗ ವಾಸಿಯೆ?
    ಭರ್ಗಪರಶು ಸುತ್ತಿ ಭುವಿಯ
    ವರ್ಗಕ್ಷಾತ್ರವ ಸವರ್ದ ವೀರಂ ಖ್ಯಾತಂ|
    ಇರ್ಗುಮೆಮರ್ಗೆ ಕ್ಷಾತ್ರರೆ
    ದುರ್ಗಾ ಭರ್ಗರನುಪಾಸಿಸಲ್ ದುರಿತ ಫಲಂ||

    • Now the form is much better. But what is this “irguM”? is it irkuM?
     emarge is wrong. It should be emage or emagaM. But what is the total import of the verse? pl clarify it for me.

     • ಹಿನ್ನೆಲೆ: ಭೃಗು-ಕ್ಷತ್ರಿಯರ ಪಾರಂಪರಿಕ ಹಗೆ
      ಭಾರ್ಗವನಾದ ಪರಶುರಾಮನು ಭೂಮಿಯನ್ನು ಸುತ್ತಿ ಕ್ಷಾತ್ರವರ್ಗವನ್ನು ೨೧ ಬಾರಿ ಸಂಹಾರ ಮಾಡಿರುವಾಗ, ಕ್ಷತ್ರಿಯರೆದುರಿಗೆ ಆ ಭಾರ್ಗವರ ಉಪಾಸನೆಯನ್ನು ಕೈಗೊಂಡರೆ, ನಮಗೆ (ಎಮರ್ಗೆ) ದುರಿತಫಲವೇ ಒದಗುವುದು/ಇರುವುದು (ಇರ್ಗುಂ)

 3. ಸ್ವರ್ಗಿಗಳೊಳ್ ವಿಕಟರಿವರ್
  ವರ್ಗೀಕೃತಸರ್ವಸುರರನುಳಿದಕಟಕಟಾ!!
  ನಿರ್ಗತರಲ ಸುಡುಗಾಡಿಗೆ!!
  ದುರ್ಗಾಭರ್ಗರನುಪಾಸಿಸಲ್ ದುರಿತಫಲಂ||

  (ಇದು ಆದಿದಂಪತಿಗಳಾದ ಶಿವ-ಶಿವೆಯರ ಶ್ಮಶಾನವಾಸವನ್ನು ವಿಡಂಬಿಸುವ ನಿಂದಾಸ್ತುತಿಯನ್ನು ಧ್ವನಿಸುವ ಪರಿಹಾರ)

 4. ಅರ್ಗಳವ೦ ತಾ ಪಡೆದಳ್
  ದುರ್ಗಾ ಭರ್ಗರನುಪಾಸಿಸಲ್, ದುರಿತ ಫಲಂ
  ಪುರ್ಗು೦ ನಾಶವು ಮಾರಗೆ
  ದುರ್ಗದವೊಲ್ ಶಿವನಭೇದ್ಯಸ೦ಕಲ್ಪದೊಳು೦

  ಪುರ್ಗು೦ = pride

 5. ವರ್ಗಗಳಾರು ನಶಿಪುದೈ
  ದುರ್ಗಾ ಭರ್ಗರನುಪಾಸಿಸಲ್, ದುರಿತ ಫಲಂ
  ವರ್ಗದಿ ಜನರಂ ವಿಭಜಿಸಿ
  ನಿರ್ಗುಣ ಬ್ರಹ್ಮವನು ಕಾಣದಿರ್ದೊಡೆ ಮನದೊಳ್

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)