Aug 302011
 

ನಗಜೆ ಭೂಮಿ ಲಕ್ಷ್ಮಿ ಪೆಸರ

ಸೇರಿಸಿದರೆ ನಾಲ್ಕಕ್ಷರ

ಕೊನೆಗೆಸೇರೆ ಒಂದಕ್ಷರ

ಹೆಸರೊಂದೇ ಐದಕ್ಷರ

ಎಡದಕ್ಷರವೂಂದೊಂದನು

ತೆಗೆದು ನೋಡಿ ಚೋದ್ಯವಿದನು

ಗಣಪ ಬ್ರಹ್ಮ ಷಣ್ಮುಖರು

ಮನ್ಮಥನಗ್ನಿಯು ಬಹರು

ಈ ವರ್ಣಚ್ಯುತಕದ ಸೂಚನೆ ಹೀಗಿದೆ.

ಪಾರ್ವತಿ, ಭೂಮಿ, ಮಹಾಲಕ್ಷ್ಮಿ ಇವರೆಲ್ಲರ ಹೆಸರನ್ನೂ ನಾಲ್ಕು ಅಕ್ಶರದಲ್ಲಿ ಹಿಡಿದಿಡಬಹುದು. ಅದಕ್ಕೆ ಇನ್ನೊಂದು ಅಕ್ಷರವನ್ನು ಸೇರಿಸಿದಾಗ ಐದು ಅಕ್ಷರಗಳಾಗುತ್ತವೆ. ಈ ಐದಕ್ಷರದ ಪದದ ಎಡಭಾಗದ ಒಂದೊಂದೇ ಅಕ್ಷರವನ್ನು ತೆಗೆಯುತ್ತಾ ಹೋದರೆ, ಬೇರೆ ಐವರ ಹೆಸರುಗಳು, ಅಂದರೆ, ಗಣೇಶ, ಬ್ರಹ್ಮ ಷಣ್ಮುಖ, ಮನ್ಮಥ ಮತ್ತು ಅಗ್ನಿ ಇವರ ಹೆಸರುಗಳು ಲಭ್ಯ. ಹಾಗಾದರೆ ಆ ಐದಕ್ಷರದ ಪದ ಯಾವುದು

  11 Responses to “ವರ್ಣಚ್ಯುತಕ : ಚಿತ್ರಕವಿತ್ವದ ಒಂದು ಸರಳ ಪ್ರಯೋಗ”

  1. ಸೂಚನೆಯಲ್ಲಿ ಒಂದು ತಿದ್ದುಪಡಿ

    ಪಾರ್ವತಿ, ಭೂಮಿ, ಮಹಾಲಕ್ಷ್ಮಿ ಇವರೆಲ್ಲರ ಹೆಸರನ್ನೂ ನಾಲ್ಕು ಅಕ್ಷರಗಳಲ್ಲಿ ಹಿಡಿದಿಡಬಹುದು. ಅದಕ್ಕೆ ಇನ್ನೊಂದು ಅಕ್ಷರವನ್ನು ಸೇರಿಸಿದಾಗ ಐದು ಅಕ್ಷರಗಳ ಒಂದು ನಾಮಪದವಾಗುತ್ತದೆ. ಈ ಪಂಚಾಕ್ಷರಿಯ ಎಡಭಾಗದ ಒಂದೊಂದೇ ಅಕ್ಷರವನ್ನು ತೆಗೆಯುತ್ತಾ ಹೋದರೆ,ಮತ್ತೆ ಬೇರೆ ನಾಲ್ವರ ಹೆಸರುಗಳು ಲಭ್ಯ. ಆ ಐದು ಹೆಸರುಗಳು ಇವು: ಗಣೇಶ, ಬ್ರಹ್ಮ, ಷಣ್ಮುಖ, ಮನ್ಮಥ ಮತ್ತು ಅಗ್ನಿ. ಹಾಗಾದರೆ ಆ ಐದಕ್ಷರದ ನಾಮಪದ ಯಾವುದು?

  2. ನನಗೆ ಹೆಸರು ಸಿಕ್ಕಿದೆ ಅಂದು ಕೊಂಡಿದ್ದೇನೆ. ಆದರೆ ಪಾರ್ವತಿ, ಭೂಮಿ ಹಾಗೂ ಲಕ್ಷ್ಮಿಯರ ಹೆಸರುಗಳನ್ನು ಇನ್ನೂ ಹೊಂದಿಸಲಾಗಿಲ್ಲ.

  3. ಗುಡ್.ಪ್ರಯತ್ನಿಸಿ.ಸೂಚನೆಯ ಎಲ್ಲಾ ನಿಯಮಗಳೂ ಅನ್ವಯವಾದಾಗ ಹೇಳಿ. ಅನುಮಾನವಿದ್ದರೆ ಪ್ರತ್ಯೇಕವಾಗಿ ಸಂಪರ್ಕಿಸಬಹುದು. ವಂದನೆ.

  4. ನನಗೊಂದು ಸಿಕ್ಕಿತು ಅದರಲ್ಲಿ ಪಾರ್ವತಿ, ಲಕ್ಷ್ಮಿ, ಭೂಮಿ, ಗಣೇಶ, ಷಣ್ಮುಖ, ಮನ್ಮಥ ಸಿಕ್ಕರು
    ನಿಯಮದ ಪ್ರಕಾರ ಬ್ರಹ್ಮ ಮತ್ತು ಅಗ್ನಿ (ಏಕಾಕ್ಷರ) ಸರಿಹೋಗತ್ತ ಗೊತ್ತಾಗ್ತಿಲ್ಲ

  5. ಸೋಮಶೇಖರ್,

    ನಿಮಗೆ ಉತ್ತರ ಸಿಕ್ಕಿದೆಯೆಂದು ಅನಿಸುತ್ತಿದೆ !

  6. ಚಂದ್ರಮೌಳಿಯವರೇ :),
    ನಿಮ್ಮ ಪ್ರಶ್ನೆ ಚೆನ್ನಾಗಿತ್ತು!

    ನಿಮಗೆ ಕಳುಹಿಸಿದ ಪರಿಹಾರವನ್ನು post ಮಾಡುತ್ತಿದ್ದೇನೆ.

    ನನ್ನ ಪರಿಹಾರ:
    ಉಮಾಕುಮಾರ : ಗಣೇಶ
    ಮಾಕುಮಾರ : ಬ್ರಹ್ಮ
    ಕುಮಾರ : ಷಣ್ಮುಖ
    ಮಾರ: ಮನ್ಮಥ
    ರ: ಅಗ್ನಿ
    ಮಾ: ಲಕ್ಷ್ಮಿ
    ಕು: ಭೂಮಿ
    ಉಮಾ: ಪಾರ್ವತಿ

    • november 18, 2012 at 1:36 am I tried viewing your website with my cellphone and the layout doesnt seem to be right. Might wanna check it out on WAP as well as it seems most smartphone layouts are not working with your web site.

  7. ಆನಂದಾಶ್ಚರ್ಯ ಪೂರ್ವಕವಾದ ಅಭಿನಂದನೆ.

  8. ಚಂದ್ರಮೌಳಿಯವರೇ ನೀವು ಕೊಟ್ಟ ಪ್ರಶ್ನೆ – ವರ್ಣಚ್ಯುತಕದ್ದು ಹಾಗು ಅಷ್ಟೇ ಜಾಣತನದಿಂದ ಸೋಮರವರು ಕೊಟ್ಟ ಉತ್ತರ ಎರಡೂ ತುಂಬಾ ಚೆನ್ನಾಗಿವೆ. ಪದ್ಯ ರಚನೆಯ ಹೊಸ ವಿಧಾನವನ್ನು ಪರಿಚಯಿಸಿದ್ದೀರ ಅದಕ್ಕಾಗಿ ಅಭಿನಂದನೆಗಳು.

  9. ವರ್ಣಚ್ಯುತಕವನೆಂತೋ
    ಪೂರ್ಣಂಗೆಯ್ದೆನಗೆ ಮುದಮನಿತ್ತೀ ಸೋಮಂ
    ಪೂರ್ಣೋದರನಿಗಮಿಂದುವು
    ತೂರ್ಣಾನಂದಮನೆ ನೀಳ್ದ ಪರಿಯಿ ತೋರ್ಪಂ
    (ಪೂರ್ಣೋದರ=ಗಣಪತಿ)

  10. ಧನ್ಯವಾದಗಳು ಸಾರ್ 🙂

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)