Jan 252014
 

ಯತ, ನತ, ಕತ, ಪತ ಪದಗಳಿಂದ ರಾಮಾಯಣದ ಯಾವುದಾದರೂ ಪ್ರಸಂಗವನ್ನು ಕುರಿತು ನಿಮ್ಮ ಇಚ್ಛೆಯ ಛಂದಸ್ಸಿನಲ್ಲಿ ಪದ್ಯವನ್ನು ರಚಿಸಿರಿ

  32 Responses to “ಪದ್ಯಸಪ್ತಾಹ ೯೫: ದತ್ತಪದಿ”

  1. ನತದೃಷ್ಟೆ ಯಾಸೀತೆಗಾಯತನ ಕಾಡಾಯ್ತು
    ಕತವವಳ ಪಾಲಾಯ್ತು ಪತಿಯಿಂದಲೇ
    ಪತನಗೊಳೆ ಹಂಬಲದ ಹೊಂಬಾಳು ಘಳಿಗೆಯಲಿ
    ಗತಿತಪ್ಪಿ ಲತೆಯಂತೆ ಬಳುಕಿದಳು ತಾ

    • ಸರ್, ಪದ್ಯದಲ್ಲಿ ತಪ್ಪನ್ನು ತಿದ್ದುವ ಯತ್ನ ಮಾಡಿದ್ದೇನೆ. 🙂

  2. ನತಸನ್ನುತೆಯಂ ಪಡೆಯುವ
    ಕತದಿಂ,ಸೆಳೆಯುತ್ತೆ ರಾವಣನ್ ಕದ್ದೊಯ್ದನ್, |
    ಪತಮಂ ಕೆಯ್ದವಳನ್ನಾ-
    ಯತದಾ ಪುಷ್ಪಕದೆ ಲಂಕೆಯೆಡೆ, ದುರ್ಮತಿಯಿಂ||

    ನತಸನ್ನುತೆ(ಸೀತೆ), ಕತ=ಕಾರಣ, ಪತ=ಹಾರುವುದು,
    ಕೆಯ್ದು+ಅವಳಂ+ಆಯತದ+ಆ=ಕೆಯ್ದವಳನ್ನಾಯತದಾ,
    ಆಯತದ=ಸಿದ್ಧಗೊಂಡ/ದೊಡ್ಡದಾದ/ಆಯತಾಕೃತಿಯ.
    ಪುಷ್ಪಕ=ಹಾರುವ ವಿಮಾನ.

    • ಒಳ್ಳೆಯ ಪದ್ಯಕ್ಕಾಗಿ ಧನ್ಯವಾದಗಳು

      • ಪರಿಶೀಲಿಸಿ ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದ,ಗುರುಗಳೆ.

  3. ತೀಕ್ಷ್ಣೋಪಲಃ ಕಿಂ ಶಯನಾಯ ತಲ್ಪೋ?
    ಭೂಮ್ಯಾಸ್ತಲೇ ಸ್ತಭ್ಧನತೋಽಸಿ ವೀರ |
    ಉತ್ತಿಷ್ಠ ತಸ್ಮಾತ್ ಸಿಕತಾಭಿಲಗ್ನಾತ್
    ದೃಷ್ಟ್ವಾ ಪತಿಂ ಸಾ ವಿಲಲಾಪ ತಾರಾ ||

    ಉಪಲೋಪಚಿತೇ ವೀರ … ಎಂಬ ರಾಮಾಯಣದ ಶ್ಲೋಕವನ್ನು ಸ್ಮರಿಸಿ ಬರೆದದ್ದು.
    (ನತ, ಕತ, ಪತ ದ ಬದಲು ನತೋ, ಕತಾ, ಪತಿ ಅಂತ ಬಂದಿದೆ. ಹೀಗೆ ಮಾಡಬಹುದೇ ಅಂತ ಗೊತ್ತಿಲ್ಲ).

  4. ಶಂಭೌ ಸಂಯತಮಾನಸಶ್ಛಲಮನೋ ರಾಮಂ ರಣೇ ಭೀಷಣೇ
    ತಂ ಸರ್ವೋನ್ನತಭಾಸುರಂ ನಯನಯೋಸ್ತಾರಸ್ವರೇಣಾಭಣತ್ |
    ಏತೇಷಾಂ ಕತರಚ್ಚಿರೋ ನನು ಚ ಮೇ ತ್ವಂ ಘಾತಯೇದ್ದುರ್ಮತೇ
    ಸತ್ಯೇವಂ ದಶಕೇ ತತೋ ನಿಪತತಾತ್ ತಸ್ಮಿನ್ ನವಂ ವರ್ಧತೇ ||

    ಶಿವನಲ್ಲಿ ಸಂಯತಮನಸ್ಸುಳ್ಲ ಛಲದಿ, ಕಣ್ಣಿನೆದರು ಅತಿ ಭಾಸಮಾನವಾಗಿ ನಿಂತ ರಾಮನನ್ನು ಕುರಿತು ತಾರಸ್ವರದಲ್ಲಿ (ರಾವಣನು) ಹೀಗೆ ಹೇಳಿದನು. ಈ (ಹತ್ತು ತಲೆಗಳಲ್ಲಿ) ಯಾವ ತಲೆಯನ್ನು ತೆಗೆಯುವೆ ? ತಲೆ ಬಿದ್ದರೆ ಬೀಳಲಿ. ಅದರ ಸ್ಥಾನದಲ್ಲಿ ಇನ್ನೊಂದು ಹುಟ್ಟುವುದು.

    • ಮೊದಲಪಾದದಲ್ಲಿ ತಿದ್ದುಪಡಿಯೊಂದು – ಛಲಮನಾ ರಾಮಂ .. (ಮನಃ ಅಲ್ಲ, ಮನಾಃ)
      (ಇಂತ ಸಮಸ್ತಪದ ಅನುಮತವೇ ಅಂತ ಸಂಶಯಂ ಗಾಹತೇ ಮೇ ಮನಃ).

      • ಒಳ್ಳೆಯ ಪದ್ಯಗಳಿಗಾಗಿ ಅಭಿನಂದನೆಗಳು.ನಿಮ್ಮ ತಿದ್ದುಪಡಿಯ ಅನುಸಾರ ಅಂಥ ಸಮಾಸಗಳನ್ನು ಮಾಡಬಹುದು. ನ ಗಾಹಂತಾಂ ಕ್ವಾಪಿ ತಾದೃಕ್ಸಂಶೀತಯಃ 🙂

      • ಸಂಸ್ಕೃತರಚನೆಗಳ ಸೂಕ್ಷ್ಮಗಳನ್ನು ತಿಳಿಯಲಾರೆ. ಕಂಸದಲ್ಲಿರುವ ಸಂಕರಕ್ಕೆ ನನ್ನ ಪ್ರತಿಕ್ರಿಯೆ:
        ವೆರಸಲೇನು ಕಂನುಡಿಯೊಳಾಂಗ್ಲವನೊ ಭಾಷೆ ಸಂಸ್ಕೃತವನೋ|
        ಬರದು ಕನ್ನಡವೆನುತಲಿ ತಿಳಿವುದೈ ದೇವಭಾಷೆ ಕಾಪೇಂ|| 😉

  5. ಉನ್ನತನಾದಂ ರಾಮಂ
    ಚೆನ್ನದ ನಿಯತಮತಿಯಿಂಪತಂಗವಳಿಯೊಳ್ಂ|
    ಮನ್ನಿಸುತೆ ಪಿತೃ ವಚನವಂ-
    ಪನ್ನತ,ತೊರೆದುಕತಮಂತೆರಳ್ದನಡವಿಗಂ||
    {ತಿದ್ದುಪಡಿಯೊಂದಿಗೆ}

    • ಮೊದಲ ಪದ್ಯದಲ್ಲಿ ಒಂದೆಡೆ ಛಂದಸ್ಸು ಎಡವಿದೆ. ಈ ಪದ್ಯದಲ್ಲಿ ಕೆಲವೊಂದು ಭಾಷಾಲೋಪಗಳಿವೆ. ಅವನ್ನು ನಾಡದ್ದು ಮುಖಚತಃ ತಿಳಿಸುವೆ.

  6. ಅಶೋಕವನದಲ್ಲಿ ಸೀತೆಯ ಶೋಕ.
    विलोक्य स्वर्णैणं धवमवशचित्तानय तमि-
    त्यवोचं तद्बीजं नियतिनततैवास्त खलु मे ।
    असौ भ्रान्तिश्चेतस्यतिलषुकता च प्रखरता
    कुतोऽपूर्वाऽनिष्टा न्यपतदिति शोचाम्यहरहः ॥
    ತಾತ್ಪರ್ಯ – ಸ್ವರ್ಣಹರಿಣವನ್ನು ಕಂಡು ವಿವಶಳಾಗಿ ಅದನ್ನು ತರಬೇಕೆಂದು ಏನು ಹೇಳಿದೆನೋ ಅದಕ್ಕೆ ನನ್ನ ದೌರ್ಭಾಗ್ಯವೇ ಕಾರಣವಲ್ಲವೇ ! ಹಿಂದೆಂದೂ ಇರದ ಈ ಭ್ರಮೆ, ಅತ್ಯಾಶೆ, ಹಠ, ಪರುಷವಚನಗಳು ಹೇಗೆ ನನ್ನಲ್ಲಿ ಉತ್ಪನ್ನವಾದವೆಂದು ಪ್ರತಿದಿನವೂ ಮರುಗುತ್ತಿದ್ದೇನೆ.

  7. ವನವಾಸಿನಿ ಸೀತೆಯನ್ನು ಕಂಡ ಸಜ್ಜನರ ಅಂತರಂಗ –
    ಗುಡಿಯೊಳ್ ದೀವಿಯ ತಾಪದಿಂ ಬೆಮರುವಳ್ ಪೋಪಳ್ ಮಹಾಘರ್ಮದೊಳ್
    ನಡೆಯಲ್ಕಾನತಗಾತ್ರೆ ಹಾಸಿನೊಳುಮಾರಣ್ಯಾಧ್ವದೊಳ್ ಸಾರ್ದಪಳ್ |
    ಗಡಮಾ ಕ್ಷೌಮವರಂಗಳಿಂ ಕತಗೊಳುತ್ತಿರ್ದಳ್ ಮಗುಳ್ ಚೀರಮಂ
    ತೊಡುವಳ್ ವಂದ್ಯಪತಂಗವಂಶವಧುವಿಂಗೀ ಭಾಗ್ಯಮೇಂ ? ಅಕ್ಕಟಾ !
    ತಾತ್ಪರ್ಯ – ದೀಪದ ತಾಪಕ್ಕೇ ಬೆವರುತ್ತಿದ್ದವಳು ಈಗ ಸುಡುಬಿಸಿಲಿನಲ್ಲಿ ನಡೆಯುತ್ತಿದ್ದಾಳೆ. ಮೃದುವಾದ ಹಾಸಿನ ಮೇಲೆ ನಡೆಯುವಾಗಲೂ ಪಾದವೇದನೆಯಿಂದ ಸೊರಗುತ್ತಿದ್ದವಳು ಕಾಡಿನ ಕಲ್ಲುಮುಳ್ಳುಗಳ ದಾರಿಯಲ್ಲಿ ಸಾಗುತ್ತಿದ್ದಾಳೆ. ಉತ್ತಮಕ್ಷೌಮವೇ ಮೊದಲಾದ ಮೃದುವಸ್ತ್ರಗಳಿಂದಲೂ ಶರೀರವೇದನೆಯನ್ನನುಭವಿಸುತ್ತಿದ್ದವಳು ಒರಟಾದ ನಾರುಬಟ್ಟೆಯನ್ನುಟ್ಟಿದ್ದಾಳೆ. (ಕೋಮಲಶರೀರೆ ಸೀತೆ ಕಠಿನವಾದ ಅರಣ್ಯವಾಸವನ್ನು ಹೇಗೆ ಸಹಿಸಿಯಾಳು ಎಂಬ ಭಾವ) ಅಕಟಾ ! ಶ್ರೇಷ್ಠವಾದ ಸೂರ್ಯವಂಶದ ಸೊಸೆಗೆ ಇಂಥಾ ದೌರ್ಭಾಗ್ಯವೇ ?
    ಕತ – ವ್ಯಥೆ.

  8. ವಾರಿಯ ತಣ್ಪು ಹೃದ್ಯಪವನಪ್ರಸರಂ ಮಲರ್ಗಂಪು ಮೇಣ್ ಸದಾ-
    ಚಾರಪರಾಯಣತ್ವಮೃಷಿಗೇಹಗಳುನ್ನತತಾದಿಗಳ್ ಮಹೀ-
    ಧಾರಿಗಳಾ ಪತತ್ತ್ರಿಕಲನಾದಮಿವೆಲ್ಲಮುಮಾತ್ಮಚಿತ್ತಮಂ
    ಸೂರೆಯಗೆಯ್ದಿರಲ್ ಸ್ವಕತನೂಶ್ರಮಮಂ ಮರೆತರ್ ನೃಪಾತ್ಮಜರ್ ||
    ಅನ್ವಯ – ವಾರಿಯ ತಣ್ಪು, ಹೃದ್ಯಪವನಪ್ರಸರಂ, ಮಲರ್ಗಂಪು, ಋಷಿಗೇಹಗಳ ಸದಾಚಾರಪರಾಯಣತ್ವಂ ಮಹೀಧಾರಿಗಳ ಉನ್ನತತಾದಿಗಳ್, ಪತತ್ತ್ರಿಕಲನಾದಂ, ಇವೆಲ್ಲಮುಂ ಆತ್ಮಚಿತ್ತಮಂ ಸೂರೆಯಗೆಯ್ದಿರಲ್, ನೃಪಾತ್ಮಜರ್ ಸ್ವಕತನೂಶ್ರಮಮಂ ಮರೆತರ್.

  9. ಪೆಜತ್ತಾಯರೇ, ನಿಮ್ಮ ಪದ್ಯಗಳೆಲ್ಲ ಸಲೆಸೊಗಸಾಗಿವೆ. ಧನ್ಯವಾದಗಳು.

  10. ಗತ ರಾಮಾಯಣ ಕತನಂ
    ಕತಕವಿದುಂ ನತನತಾಂಗಿ ಮಂಥರೆ ಮಂತ್ರಂ ।
    ಶ್ರುತಕಠಿಣ ಪತ್ನಿ ವಾಕ್ಯದೆ
    ಪತನವಿದುಂ ಪ್ರಯತ ಪತಿ ಯತನದಾಮಂದ್ರಂ ।।

    (ದತ್ತ ಪದಗಳನ್ನು ಎರಡೆರಡು ಬಾರಿ ತೊದಲಿದ ಕಂದ !!)

    (ಕತಕ=ಕಪಟ/ಕೃತಕ, ನತ=ವಕ್ರ, ನತಾಂಗಿ=ಸ್ತ್ರೀ, ಪತನ=ಚ್ಯುತಿ/ಲೋಪ, ಪ್ರಯತ=ನಮ್ರ, ಯತನ=ಸಾಧನೆ, ಆಮಂದ್ರ=ಗಂಭೀರಧ್ವನಿ )

  11. chennagide

  12. ಆಯತವಕ್ಷಸಿ ಪ್ರಿಯಸಖೇ ನತತನುರಭವಂ (ಯತ, ನತ)
    ಶಂಕತ ಏವ ಕಿಂ ನ ಹಿ ಭವಾನ್? ಕೃತಖಗಪತನ ! (ಕತ, ಪತ)
    ಸಾ ಚ ಗತಿಸ್ತವಾಪಿ ಭವತಾತ್, ತಪ ತಪ ಸತತಂ
    ತಾಪಗತಾಶಪದ್ಗತಯತಾ ನಿಯತಶರಕರಮ್ ||

    ಆಯತವಕ್ಷಸಿ ವಿಶಾಲವಕ್ಷಸ್ಸುಳ್ಳ ಪ್ರಿಯಸಖೇ ನತತನುಃ ಅಭವಮ್ ಆಗಿದ್ದೆ (ಅಂತ) ಶಂಕತೇ ಏವ ಕಿಂ ನ ಹಿ ಭವಾನ್ (ಶಂಕಿಸಲಿಲ್ಲವೇ)? ಕೃತಖಗಪತನ ಎಲೈ ಪಕ್ಷಿಹಂತಕನೇ!
    ಸಾ ಚ ಗತಿಃ ತವ ಅಪಿ ಭವತಾತ್ – ನಿನ್ನ ಗತಿಯು ಹಾಗೇ ಆಗಲಿ. ತಪ ತಪ ಸತತಂ. ನೀನೂ ಕಷ್ಟಪಡು. ಎಂದು ತಾಪಗತಾ ಗತಯತಾ (ಸಂಯಮ ಕಳೆದುಕೊಂಡ ಅವಳು) ನಿಯತಶರಕರಮ್ (ಬಾಣ ಹೋಡಿದವನನ್ನು) ಅಶಪತ್.

    ವಂಶಪತ್ರಪತಿತಂ ವೃತ್ತಮ್ | (೧೦ + ೭ ಯತಿಃ)

    • ಅನುಪಮವೃತ್ತಕೌಶಲಮಪಿ ಸ್ಫುಟದತ್ತಪದ-
      ನ್ಯಸನಮಹೋ ನರೇಶ! ಭವತಾಂ ಭವಿಕಂ ಭವತೇ |

  13. yathathe sma kapeeshamunishcha sadaa natharamagurum prithoshayithum katharavanakaayasughamsudhiya supathniyutheekarane swapathim (dayavittu yaavudee reethiya doshaviddaroo thilsabekaagi hiriyaralli nivedane) totakavruttham

    • ಪದ್ಯಪಾನಕ್ಕೆ ಆದರದ ಸ್ವಾಗತ. ದಯವಿಟ್ಟು ದೇವನಾಗರಿ ಅಥವಾ ಕನ್ನಡಲಿಪಿಯಲ್ಲಿ ತಮ್ಮ ಪದ್ಯವನ್ನು ಪ್ರಕಟಿಸುವಿರಾ?

  14. ಜಾಣನೇಂ ನಾಲ್ಪತನು ಪಾಣಿನಿಗೆ ಪ್ರತಿನುಡಿಯೆ
    ಕಾಣ ಜೀವಕತರುವ ದ್ರೋಣಗಿರಿಯೊಳ್|
    ಊಣೆಯೇನಿಲ್ಲವೈ, ಭಕ್ತಿಗಾಯತನ ತಾಂ
    ಗೌಣಮೇಂ ಪವನತನಯನ ಶಕ್ತಿಯು||

  15. ಕಣಕಣತೋ ಜಲೇ – ಸಯತನಂ ತರಣಾಯ ತಲಂ (ಯತ)
    ಕೃತಿಪರರೋಮಶಾಃ – ಸಿಕತಯಾ ಮುದಿ ಚಕ್ರುರಿತಿ | (ಕತ)
    ರಘುಪತಿರಾನತಾನ್ – ತರುಗೃಹಾನ್ ಸ ಮಮರ್ಶ ಯದಾ (ನತಾ)
    ಸಪದಿ ಸಮೇಧಿರೇ – ನಿಪತನೇನ ಕರಸ್ಯ ಹರೇಃ || (ಪತ)

    ಕೃತಿಪರಾಃ ರೋಮಶಾಃ (ಕಾರ್ಯಸಾಧಕರಾದ ಅಳಿಲುಗಳು) ಕಣಕಣತಃ ಸಿಕತಯಾ ಜಲೇ ತರಣಾಯ ತಲಂ ಮುದಿ ಚಕ್ರುಃ ಇತಿ (ಕಣ ಕಣ ಕೂಡಿಸಿ ಮರಳಿನ ಸೇತುವನ್ನು ಸಂತೋಷದಿಂದ ಮಾಡಿದರೆಂದು) ರಘುಪತಿಃ ಆನತಾನ್ ತರುಗೃಹಾನ್ (ಆನತರಾದ ತರುವಾಸಿಗಳನ್ನು) ಯದಾ ಮಮರ್ಶ (ಸವರಿದನೋ) ಹರೇಃ ಕರಸ್ಯ ನಿಪತನೇನ (ಆ ಸ್ಪರ್ಶದಿಂದ) ಸಪದಿ ಸಮೇಧಿರೇ (ಧನ್ಯರಾದವು).
    (ಹೀಗೆ ತಮ್ಮ ಪ್ರೋತ್ಸಾಹದಿಂದ ಪದ್ಯಪಾನದ ಅಳಿಲುಗಳು ನಾವು ಕೂಡ).

    ನರ್ಕುಟಕಂ ವೃತ್ತಮ್.

    • कण कण तो जले!
      ಚಣವದೊಂದರೊಳೆನ್ನಿಸಿತೈ
      ಗೆಣೆಯ ತಾನಿದ ಹಿಂದಿಯೊಳಂ
      ಹೆಣೆದನೇಂ ಕವನಂ ಪೊಸದಂ
      ಕಣಕಣಂ ಜಲಿಸಲ್ ನನನುಂ 🙂

      ನರ್ಕುಟಕ ನನಗೆ ಹೊಸದು. ಅಕ್ಷರ ಹಾಕುವಾಗ ಯಾವುದೋ ಜ್ಞಾನದಲ್ಲಿ ’ಸಯತನಂ ತರಣಾಯ ತಲಂ’ ಎಂಬಷ್ಟನ್ನು ಮಾತ್ರ ಪರಿಗಣಿಸಿದೆ, ಅದಕ್ಕೊಂದು ಪದ್ಯ ಬರೆದೂಬಿಟ್ಟೆ. ಹಾಕಿಬಿಟ್ಟಿದ್ದೇನೆ. ಕ್ಷಮೆ ಇರಲಿ.

      • ಕಂಡು ಕಂಡು ನಾ ಪ್ರಸಾದು ಜಲ್ನಜಾಲದಲ್ಲಿಯಾ
        ವೈರಿಯನ್ನು ನೋಡಲಾರೆ; ಮಿತ್ರರನ್ನು ಹೇಗೆ ಪೇಳ್ ?!
        ಹಾಗು ಹೀಗು ದೇವಭಾಷೆಯಲ್ಲಿ ಪದ್ಯಯತ್ನವಾ
        ಮಾಡುವೇ ಪರಂತು ಹಿಂದಿಗಂಧವಿಲ್ಲ ಖಂಡಿತಾ ||

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)