Mar 092014
 

ಈ ಸಮಸ್ಯೆಯ ಸಾಲನ್ನು ಪರಿಹರಿಸಿ:

ಬೀರಂ ಬೀರಂ ಬೀರಂ ಬೀರಂ

  91 Responses to “ಪದ್ಯಸಪ್ತಾಹ ೯೯: ಸಮಸ್ಯಾಪೂರಣ”

 1. ಬೀರಂ ಬೀರಂ ಬೀರಂ ಬೀರಂ
  ತಾರಂ ಸೋಲಂ ತಾನೆಂದುಂ
  ಸಾರುತ ಪಂದ್ಯವ ಯುದ್ದಕೆ ನಿಂತರೆ
  ಮೀರುವ ಭೀಮನ ದಿಟದಾತಂ
  (ವೀರನು,ವೀರನು,ವೀರನು-ಬೀರನು)

 2. ವಿದ್ಯುನ್ಮಾಲಾ|| ಸಂದರ್ಭ ದಕ್ಷಯಜ್ಞ.
  ಆ ಭದ್ರಂ ತಾಂ ಗೈಯಲ್ ಕೃತ್ಯಂ
  ದೂರಾಧಂ ದಕ್ಷಘ್ನಂ ಮೇಣಾ
  ವೈರೋಧ್ಯಂ ಧರ್ಮೇಂದ್ರಾದ್ಯರ್ದೆಂ
  ಬೀ ರಂಬೀರಂ, ಬೀರಂ ಬೀರಂ|
  ವಿವರಣೆ ಅಗತ್ಯ. ವೀರಭದ್ರನು ಗೈಯಲು (1) ಕಷ್ಟಸಾಧ್ಯವಾದ ದಕ್ಷದಮನ ಮತ್ತು (2) ಯಮಧರ್ಮ-ಇಂದ್ರಾದಿಗಳ ನಾಶನವಿಂತೆಂಬ ಈ ರಂಬು (ರಂಬಾಟ/ರಂಪಾಟ) ಈರಂ (ಎರಡನ್ನು), ಈ ಬೀರನು (ಬೀರೇದೇವರು=ವೀರಭದ್ರ) ವೀರನು.

 3. ಆರೀ ಸಿದ್ಧ೦?ಪ್ರಾಜ್ಞ೦ ಶಾಂತಾ
  ಕಾರಂ ತೇಜೋಪುಂಜಮಿವo
  ಬೀರಂ ಬೀರಂ ಬೀರಂ ಬೀರಂ
  ಕಾರುಣ್ಯನಿಧಿಂ ನಿರ್ಭೀತಂ! II
  ಪುರಾಣ ಪ್ರಸಿದ್ಧ ವ್ಯಕ್ತಿಗಳಿಗೂ ಅನ್ವಯಿಸ ಬಹುದು . ನಾನು ಸ್ವಾಮಿ ವಿವೇಕಾನಂದರನ್ನು ಉದ್ದೇಶಿಸಿ ಬರೆದಿರುವೆ.

  • ನಾನೂ ‘ಆರೇಂ’ ಎಂದು ಆರಂಭಿಸಿದ್ದೆ. ಆಮೇಲೆ ಬದಲಾಯಿಸಬೇಕಾಯಿತು. ನಿಮ್ಮ ಕಲ್ಪನೆ ಚೆನ್ನಾಗಿದೆ. ಸಮಪಾದಗಳಲ್ಲಿ ಲಘುಗಳಿವೆ ಸವರಿಸಿ.
   ಕಾರುಣ್ಯನಿಧಿಂ = ಕಾರುಣ್ಯನಿಧಿಯಂ ಅಲ್ಲವೆ?
   ಸಂ.ಮ.ಗತಿ||
   ನಾಲ್ಕುಬಾರಿ ನೀಮಾತನನ್ನು ‘ವೀರಾಧಿವೀರ’ನೆಂದಾ
   ಕಲ್ಕಿಸಮನು ‘ನಿರ್ಭೀಕ’ನೆನ್ನುತಲಿ ಒತ್ತಿ ಪೇಳಲೇಕೌ?
   ಆ ಪುರಾಣಪ್ರಸಿದ್ಧವ್ಯಕ್ತಿಯು:
   ಶುಲ್ಕವಡೆದು ತಂದಿರ್ದು ಅಂಗನೆಯನಾಕೆಯೊಬ್ಬಳಿಂಗೆ
   ಕಾಲ್ಕೆರೆಯದೆಲಿರ್ದಿಹನೆ ಭೀತಿಯಿಂ ತ್ರಾಹಿತ್ರಾಹಿಯೆಂದುಂ?? 😉
   (please notice the difference in meanings between ನಿರ್ಭೀಕ and ನಿರ್ಭೀತ)
   ‘ಕಾ ತ್ವಂ ಬಾಲಾ’ ಪದ್ಯವು ವಿದ್ಯುನ್ಮಾಲಾಗೆ ಹತ್ತಿರವಿದೆ – ಕೆಲವು ಗುರುಸ್ಥಾನಗಳು ವಿಭಜಿತವಾಗಿವೆ, ಕೊನೆಯ ನಾಲ್ಕು ಅಕ್ಷರಗಳು ಲಘುವಾಗಿಯೇ ಇವೆ (ಕ ಖ ಗ ಘ – ಕರ್ಷಿಸಿ ಹೇಳಬೇಕೇನೋ). ಇದು ಅನುಷ್ಟುಭ್ ಅಲ್ಲ. ಯಾವ ಛಂದಸ್ಸಿದು?

   • ೧)ಸರ್ , ಪದ್ಯಪಾನದಲ್ಲಿ ಮೊದಲು ಬರೆದಿರುವ ಪದ್ಯಗಳನ್ನು ಆಧಾರವಾಗಿಟ್ಟು ನಾನಿದನ್ನು ಚತುರ್ಮಾತ್ರಾ ಚೌಪದಿಯಲ್ಲಿ ಬರೆದಿರುವೆ. ಈ ಚೌಪದಿಯ ಬಗ್ಗೆ ಹೆಚ್ಚೇನೂ ತಿಳಿದಿಲ್ಲ. ಹಾಗಿದ್ದಲ್ಲಿ ಇದು ತಪ್ಪಾಗಿದೆಯೇ ?
    ೨)ನಿಮ್ಮ ಪ್ರತಿಕ್ರಿಯಾ ಪದ್ಯವನ್ನು ನೀವು ಬರೆದ ದೃಷ್ಟಿಯಲ್ಲಿ ಅರ್ಥ ಮಾಡಿಕೊಳ್ಳಲು ಗದ್ಯದಲ್ಲಿ ಸ್ವಲ್ಪ ವಿವರಣೆ ಬೇಕಿತ್ತು .

  • ೧) ಅದೂ ಸರಿಯಾಗಿಯೇ ಇದೆ – ಮಂದಾನಿಲರಗಳೆಯಲ್ಲಿ. ನಿಮ್ಮ ಪದ್ಯವು ವಿದ್ಯುನ್ಮಾಲಾಗೆ ಹತ್ತಿರವಿದ್ದುದರಿಂದ ಈ ದೃಷ್ಟಿಯಿಂದ ಸೂಚಿಸಿದೆ.
   ೨) ಆ ಪುರಾಣಪ್ರಸಿದ್ಧವ್ಯಕ್ತಿಯನ್ನು ನಾಲ್ಕುಬಾರಿ ನೀವು ‘ವೀರ’ ಎಂದು ಹೇಳಿ, ಆ ಕಲ್ಕಿಸಮಾನನ್ನು (ವೀರನನ್ನು) ‘ನಿರ್ಭೀಕ’ ಎಂದುಬೇರೆ ಒತ್ತಿ ಹೇಳಲೇಕೆ? ಆತನು ಕನ್ಯಾಶುಲ್ಕ (ಡೌರಿ) ಪಡೆದು ತಂದ ತನ್ನ ವಧುವಿನೊಡನೆ ಭೀತಿಯಿಂದಿದ್ದು, ಕಾಲುಕೆರೆದು ಜಗಳಮಾಡದೆ, ತ್ರಾಹಿತ್ರಾಹಿಯೆಂದು ವಿನೀತಭಾವದಿಂದಿದ್ದಾನೆಂಬೊಂದು ಅಪವಾದ(exception)ವುಂಟೆ?

   • ನಾನಿಲ್ಲಿ ಪ್ರಸ್ತಾಪಿಸಿರುವುದು ಪುರಾಣ ಪ್ರಸಿದ್ಧ ವ್ಯಕ್ತಿಯನ್ನಲ್ಲ . ಅನ್ವಯಿಸ ಬಹುದು ಎ೦ದಷ್ಟೇ ಬರೆದ್ದಿದ್ದೆ . ನಾನು ಗೌಣವಾಗಿಸಿದ ವಸ್ತುವನ್ನು ನೀವು ಮುಖ್ಯ ವಸ್ತುವಾಗಿ ಕಲ್ಪಿಸಿರುವುದಕ್ಕೆ ನಾನು ಜವಾಬ್ದಾರಳಲ್ಲ .

    ನಾನು ಉದ್ದೇಶಿಸಿದ ವ್ಯಕ್ತಿ ಕನ್ಯಾಶುಲ್ಕ ಪಡೆಯದ ಸನ್ಯಾಸಿ . ತನ್ನ ಸಾಂಬಾರಿಗಾಗಿ ಕಂಬನಿ ಮಿಡಿಯದೆ ಸಮಾಜದ ದೀನ ದಲಿತರ ವಿದ್ಯಾಭ್ಯಾಸಕ್ಕಾಗಿ, ಶ್ರೇಯಸ್ಸಿಗಾಗಿ ಕಾರ್ಯೋನ್ಮುಖನಾದ ”ಕಾರುಣ್ಯನಿಧಿ ” ಮತ್ತು ನಿರ್ಭಯ ಸಂತ . ಹುಟ್ಟಿನಿ೦ದಲೇ ಧ್ಯಾನ ಸಿದ್ದ . ಶಸ್ತ್ರಾಸ್ತ್ರಗಳಿಲ್ಲದೆ ,ಮಾತಿನಿಂದಲೇ ಚಾಟಿಯೇಟು ಕೊಡುವ ವೀರ . ಅಂಥ ಸನ್ಯಾಸಿಯನ್ನು ೪ ಅಲ್ಲ ೮ ಬಾರಿಯೂ ”ವೀರ” ಅನ್ನಬಹುದು 🙂 . ತೇಜಸ್ಸು ಮತ್ತು ಪ್ರಶಾಂತತೆ ವಿವೇಕಾನಂದರ ಮುಖದ ಎದ್ದು ಕಾಣುವ ಲಕ್ಷಣ ಹೌದು ತಾನೇ ?

    • ಅದಕ್ಕೇ ನಾನು caveat ಹಾಕಿರುವುದು – ಇದು ಕಾಲ್ಪನಿಕ ವ್ಯಕ್ತಿಯೊಬ್ಬನನ್ನು ಉದ್ದೇಶಿಸಿದ್ದು ಎಂದು. ಸ್ವಾಮಿ ವಿವೇಕಾನಂದರಿಗೆ ಅನ್ವಯಿಸುವ ದಾರ್ಷ್ಟ್ಯ ನನಗಿಲ್ಲ.

     • . ಧನ್ಯವಾದಗಳು ಸರ್ . ಇದನ್ನು ಮೊದಲೇ ಈ ರೀತಿಯಲ್ಲಿ ತಿಳಿಸಿದರೆ ನನಿಗೆ ಅರ್ಥವಾಗುತ್ತಿತ್ತು 🙂

      ಡೌರಿಯ ವಿಷಯ ಬಂದಿರುವುದರಿಂದ ಮಾಹಿತಿಗಾಗಿ — ನಮ್ಮ ಪಂಗಡದಲ್ಲಿ ಡೌರಿ ಪಡೆದುಕೊಳ್ಳುವ /ಕೊಡುವ ಸಂಪ್ರದಾಯವಿಲ್ಲ . ಆದ್ದರಿಂದ ಡೌರಿ ಪಡೆದುಕೊಂಡು ತ್ರಾಹಿ ತ್ರಾಹಿ ಅನ್ನುವ ಗಂಡಸರ ಅರಿವಿಲ್ಲ .

   • ಡೌರಿಯಂ ಕೊಡದೆ-ಕೊಳ್ಳದೆಲುಮಿರ್ಪ ನಿಮ್ಮ ಪಂಗಡಮದೇಂ
    ಗೌರವದ ಯಕ್ಷ-ಕಿಂಪುರುಷ-ಕಿನ್ನರಮದುಮಪ್ಸರಸಮೋ?
    ಕೌರವರ ಕಾಲದಲ್ಲೆ ಶುಲ್ಕಪಾಣಿಗ್ರಹಣವ ಕಾಂಬೆಂ
    ಡೌರಿಯೂ ಇರದೆ ತ್ರಾಹಿತ್ರಾಹಿಯೆನ್ನುವರೆ ವರರು ನಿಮ್ಮೊಳ್?? 🙂

 4. (Same vidyunmAla)
  भाषाछात्रो गुम्बज्गोले
  तृष्णायुक्तो जल्पत्येकम् ।
  शब्दश्रेणिः तस्मिन् वै जम्-
  -बीरं बीरं बीरं बीरं ॥

  A student of language (in particular Samskrit) in the Gol Gumbaz is thirsty. He says a word and then the series of sounds heard in the dome is “jaMbIraM bIraM bIraM bIraM” (jambIra = lemon)

  🙂

  • Fine perception. But,
   असन्नपि सतृष्णासावसन्नपि च शास्त्रवेत्
   गुंबजेsनुरणत्येव शब्दश्रेणिस्तथा सदा॥ 😉

 5. (ವಿದ್ಯುನ್ಮಾಲಾ ವೃತ್ತ)

  ಚೋರಂ ಪೊಕ್ಕಂ ಚೌರ್ಯಂಗೈಯಲ್,
  ಬಾರಂ ಪಿಂತಿಂ,ಧೂರ್ತಂ,ಭೀತಂ |
  ನೇರಿಂ ಸಾರ್ದಂ,ಕಾಣಲ್ಕಾಹಾ,
  ಬೀರಂ ಬೀರಂ ಬೀರಂ ಬೀರಂ ||

  ( ಬಾರಂ= bar ಅನ್ನು, ಬೀರಂ= beer ಅನ್ನು )

  • ತುಂಬ ಚೆನ್ನಾಗಿದೆ. ಈ ಪದ್ಯದ ಜಾಡಿನಲ್ಲಿ ಆ ‘ಲ್ಕಾಹಾ’ ಎಂಬುದೂ ‘ಆಲ್ಕಾಹಾಲ್ ಎಂತಲೇ ಓದಿಸಿಕೊಳ್ಳುತ್ತೆ!
   ಪಿಂತಿಂ ಬಂದು ಭೀತಂ ನೇರಿಂ ಸಾರ್ದಂ? seems contradictory.

   • ಧನ್ಯವಾದಗಳು ಪ್ರಸಾದರೆ.ಪದ್ಯವನ್ನು ಸವರುತ್ತೇನೆ.ತಪ್ಪಿದ್ದಲ್ಲಿ ತಿಳಿಸಿರಿ.

    ಚೋರಂ ಪೊಕ್ಕಂ ಚೌರ್ಯಂಗೈಯಲ್,
    ಬಾರಂ ಪಿಂತಿಂ,ಧೂರ್ತಂ,ನೀಚಂ|
    ಘೋರಂ ಸಾರ್ದಂ ಕಾಣಲ್ಕಾಹಾ,
    ಬೀರಂ ಬೀರಂ ಬೀರಂ ಬೀರಂ ||

    • ಈಗ ಸರಿಯಾಯಿತು. ನಾನಾಗಿದ್ದರೆ ಮೂರನೆಯ ಪಾದವನ್ನು ಹೀಗೆ ಬರೆಯುತ್ತಿದ್ದೆ: ಘೋರಂ ಸಾರ್ದೇನಂ ಕಂಡಂ ತಾಂ?

     • ಧನ್ಯವಾದ. ನೀವು ಬರೆದ ಮೂರನೇ ಪಾದ ಚೆನ್ನಾಗಿದೆ. ಇದರಿಂದ ಪದ್ಯದ ಸ್ವಾರಸ್ಯ ಹೆಚ್ಚುವುದು ನಿಜ.

 6. ಪೌರರ ಕೊಲ್ಲುವ ತಿನ್ನುವ ಬಕಸಂ-
  ಹಾರವ ಮಾಡಿದ ಭೀಮನ ಶೌರ್ಯಕೆ
  ವಾರಿತ ಶೋಕದೆ ಪೊಗಳಿದರೆಲ್ಲರು
  ಬೀರಂ ಬೀರಂ ಬೀರಂ ಬೀರಂ ||

  • ಬಹಳ ದಿನದ ಮೇಲೆ ಹಿಂದಿರುಗಿರುವಿರಿ. ಮರುಸ್ವಾಗತ. ಪದ್ಯ ಚೆನ್ನಾಗಿದೆ. ಮತ್ತೆ ನಾಪತ್ತೆಯಾಗಬೇಡಿ. ಬರೆಯುತ್ತಿರಿ.

   • ಧನ್ಯವಾದಗಳು. ಕಾರಣಾಂತರಗಳಿಂದಾಗಿ ಸ್ವಲ್ಪ ಕಾಲ ಹೊರಗುಳಿಯಬೇಕಾದ ಪ್ರಸಂಗವೊದಗಿತ್ತು. ಇನ್ನು ನಿಯತಾಭ್ಯಾಸನಿರತನಾಗಲು ಪ್ರಯತ್ನಿಸುವೆ.

 7. [ಚತುರ್ಮಾತ್ರಾ ರಗಳೆ – ೪ + ೪ + ೪ + ೪]
  ಜಾರುವ ವಸ್ತ್ರವನುಟ್ಟೆಳೆಬಾಲಂ
  ಚೀರುತಲೋಡುತೆ ಬೀಳ್ವಂ ಬೀಳ್ವಂ |
  ಸಾರುವನೆದ್ದೋಡುತಲಹ ಶೂರಂ
  “ಬೀರಂ”, “ಬೀರಂ”, “ಬೀರಂ”, “ಬೀರಂ” |

  [ಓಡುವಾಗ ಮತ್ತೆ ಮತ್ತೆ ಬೀಳುವ ಎಳೆ ಬಾಲನು ಮತ್ತೆ ಎದ್ದು, ತಾನು ಬೀಳುವುದಿಲ್ಲ ಎಂದು ಸಾರುತ್ತ ಓಡುತ್ತಾನೆ.
  ಬೀಳ = ಬೀಳಲಾರ, ಬೀಳುವುದಿಲ್ಲ; ಬಾಲರ ಮುದ್ದು ಭಾಷೆಯಲ್ಲಿ, ಬೀಳಂ, ಬೀಳಂ, .. ಎಂಬುವದು, ಬೀರಂ, ಬೀರಂ, … ಎಂದಾಗಿದೆ]
  🙂

  • “ಬೀಳೆಂ” ಎನ್ನುವ ಉತ್ತಮಪುರುಷದ ಬದಲು “ಬೀಳಂ” ಎಂಬ ಪ್ರಥಮಪುರುಷವನ್ನು ಬಳಸಿರುವ ಈ ಶಿಶುವು ಎಳವೆಯಲ್ಲೇ ಆತ್ಮಜ್ಞಾನವನ್ನೂ ರೂಢಿಸಿಕೊಂಡಂತಿದೆ! 😉
   ಪದ್ಯವಂತೂ ಚೆನ್ನಾಗಿದೆ.

 8. “ಮಾರನ ಪೋಲುವ ಸುಂದರ ನೆನ್ನ ಕು-
  ಮಾರಂ” ವನಿತೆಯ ಮಾತಿಗೆ ಗೆಳತಿಯು
  ಮಾರೆಂ ದಳ್”ಧೃಡ ಕಾಯಂ ಕುವರ ಕ
  ಬೀರಂ, ಬೀರಂ;ಬೀರಂ ಬೀರಂ”

  (ವನಿತೆಯರಿಬ್ಬರ ಸಂವಾದ)
  (ಕಬೀರನು ವೀರನು; ಪರಾಕ್ರಮವನ್ನು ಪ್ರಕಟಪಡಿಸುವುದಿಲ್ಲ= ಕಡೆಯ ಸಾಲು)

  • ನಿಮ್ಮ ಪೂರಣ ಚೆನ್ನಾಗಿದೆ ಕಾಂಚನಾ.ಆದರೆ, ಪರಾಕ್ರಮವನ್ನು ಪ್ರಕಟಿಸುವುದಿಲ್ಲ ಎಂಬುದು ಬೀರಂ ಬೀರಂ ಎಂಬುದರ ಕಲ್ಪಿತಾರ್ಥವಾಗಿ ಮೂಡಿದೆಯಷ್ಟೆ?

   • ’ಕಬೀರನು beerಅನ್ನು ಬೀರುವುದಿಲ್ಲ (ಹಂಚುವುದಿಲ್ಲ)’ ಎಂಬರ್ಥದಲ್ಲಿ ಗ್ರಹಿಸಬೇಡಿ, ’ಪರಾಕ್ರಮವನ್ನು (ವೃಥಾ) ಪ್ರಕಟಿಸದಿರುವನು’ ಎಂಬರ್ಥದಲ್ಲಿ ಗ್ರಹಿಸಿರಿ ಎಂದು ಅವರ ನಿರ್ದೇಶ.
    ಕೀಲಕ ಚೆನ್ನಾಗಿದೆ.

    • ಕಬೀರನ ಬೀರನ್ನು ಹಂಚದ ದುರ್ಗುಣದ ಬದಲು, ಆತನ ಒಳ್ಳೆಯ ಗುಣವನ್ನು ಪ್ರಚುರಪಡಿಸಿರುವುದು 🙂
     ನಿಮಗೂ , ಶಕುಂತಲಾ ರವರಿಗೂ ಧನ್ಯವಾದಗಳು.

     • ಸರಿಯಾಗಿ ಹೇಳಿದಿರಿ. ಅವನ ದುರ್ಗುಣಗಳನ್ನು ಸದ್ಯಕ್ಕೆ ಪಕ್ಕಕ್ಕಿಟ್ಟು, ಸದ್ಗುಣಗಳನ್ನು ಮಾತ್ರ ಪ್ರಚುರಪಡಿಸಿದ್ದಾರೆ 😉

 9. ನಾರಿಯ ನೆಚ್ಚಂ ಗಳಿಸಲ್
  ಪೀರೆಂ ನಾ ಮದಿರೆಯೆನುತ ತೋರ್ಕೆಗೆ ರಸಜಂ-
  ಬೀರಂ, ಬೀರಂ ಬೀರಂ
  ಬೀರಂ, ಜಂಬೀರ ಬೆಸೆದ ಜಿನ್ನನೆ ಪೀರ್ವನ್

  ಪಾರ್ಟಿಗಳಲ್ಲಿ ತನ್ನ ಪ್ರಿಯತಮೆಗೆ ಸಾಚಾಸ್ವಭಾವ ತೋರಲು, ನಮ್ಮ ಬೀರಣ್ಣ, ನಿಂಬೆಹಣ್ಣಿನರಸದ ಲೋಟವನ್ನೇ ಕೈಗೆತ್ತಿಕೊಳ್ಳುವ. ಬೀರ, Beer ಅನ್ನು ಹಿಡಿದು ತೋರಿಸಿ ಬೀರುವವನಲ್ಲ. ತನ್ನ ಉಪಾಯ? ನೀರಿನಂತಿರುವ ಜಿನ್ನಿಗೆ ನಿಂಬೆರಸ ಬೆರತಿತ್ತು !

  • ಅರ್ಥಸ್ಪಷ್ಟತೆಗೆ, ಪದಗಳನ್ನು ಬಿಡಿಸಿತೋರಿಸಿದರೆ ಚೆನ್ನ ಎಂದ ಪ್ರಸಾದರು ಪ್ರತ್ಯೇಕವಾಗಿ ನನಗೆ ಸೂಚಿಸಿದ್ದರು. ಹಾಗೇ ಮಾಡಿದ್ದೇನೆ. ಪ್ರಸಾದರಿಗೆ ಧನ್ಯವಾದಗಳು

 10. ಬಾರಂ ಪೊಕ್ಕಂ ಜೋರಂ ತಾಂ ಭಂ
  ಡಾರದ ಮುದ್ರೆಯನೊಡೆದವ ಕುಡಿದುಂ
  ಬೀರಂ ಬೀರಂ ಬೀರಂ ಬೀರಂ
  ಬಾರದೆ ನಿದ್ರೆಯನೂಡಿದ ಕಡೆಗುಂ !!

  ಬಾರದೆ (=ಬಾಗಿಲಲ್ಲೆ) / ಭಾರದೆ, ಊಡು = ಹೂಡು

 11. ಕಿರಾತಾರ್ಜುನೀಯ ಪ್ರಸಂಗ: ಶಿವ-ಪಾರ್ಥರಂತೆ (ಓರಂತೆ) ಪರಾಕ್ರಮಿಯಾದ ಆ ದೈತ್ಯ ’ಮೂಕ’ನೆಂಬುವನು, ಅವರಿಬ್ಬರಿಂದ ಏಕಕಾಲದಲ್ಲಿ ಕೊಂಡು (ಗುರಿಯಾಗಿ) ಅಂಬು (ಬಾಣ) ಈರಂ (ಎರಡನ್ನು) ಬೀರಂ (ವೀರನು) ಸಾಯುಜ್ಯವನ್ನು ಹೊಂದಿದ. ವೀರನು ವೀರನೇ.
  ವಿದ್ಯುನ್ಮಾಲಾ||
  ಓರಂತಾ ರುದ್ರಂ-ಪಾರ್ಥರ್ಗೀ
  ಧೀರೋದಾತ್ತಂ ಮೂಕಂ, ಧನ್ಯಂ|
  ಪಾರಂ ಕಂಡಂ ದೈತ್ಯಂ ಕೊಂಡಂ-
  ಬೀರಂ ಬೀರಂ. ಬೀರಂ ಬೀರಂ||

 12. ಗಡಂಗಿನಿಂದ ಹಿಂದಿರುಗುವಾಗ ಕುಡುಕನೊಬ್ಬ ಮುಳ್ಳುಬೇಲಿಯಲ್ಲಿ ಬಿದ್ದ. ಮೈ ಎಲ್ಲ ರಂಧ್ರಮಯವಾಯಿತು. ಎಷ್ಟು ಬೀರ್ ಕುಡಿದಿದ್ದನೆಂದರೆ, ಟಾಂ & ಜೆರ್ರಿ ಕಾರ್ಟೂನಿನಲ್ಲೆಂಬಂತೆ ಆ ರಂಧ್ರಗಳಿಂದ ಕಾರಂಜಿಯಂತೆ ಬೀರ್ ಚಿಮ್ಮತೊಡಗಿತು.
  ಮಂದಾನಿಲರಗಳೆ||
  ಬಾರಿಂ ಹಿಂದಿರುಗುತ್ತಿರುವಾಗಳ್
  ತೂರಾಡಿರ್ದನ್ ದಸಿಬೇಲಿಯೊಳಂ|
  ಧಾರೆಯ ನೋಡಾ ರಂಧ್ರಗಳೂಟೆಯ
  ಬೀರಂ! ಬೀರಂ!! ಬೀರಂ!!! ಬೀರಂ!!!!

 13. ಶೂರಂ, ಪೆಂಡದ ದಾಸಂ, ಪಟ್ಟಣ
  ಪೋರಂ. ಬಿಡದಿರೆ ಜಪಿಸಲ್ ಕನಸೊಳ್-
  ಬೀರಂ,ರಮ್ಮಮದೀಪರಿ ಕೇಳಿತು-
  “ಬೀರಂ ಬೀರಂ ಬೀರಂ ಬೀರಂ”
  (ಬೀರು,ರಂ,ಬೀರು,ರಂ…..)

 14. ಬಾರೊಳ್ಬೇಕೇನೆನೆ ಮದ
  ಸಾರದ ವೈವಿಧ್ಯ ವಿತರಣ ಕ್ರಮ ನುಡಿದನ್
  ಬೀರಂ ಬೀರಂ ಬೀರಂ
  ಬೀರಂಮ್ಮೆಂದಷ್ಟಮಿತ್ರ ವಿಷಮಸ್ಥಿತರೊಳ್

  ಎಂಟುಮಂದಿ ಮದ್ಯಪಾನಿಗಳು ಬಾರಿನಲ್ಲಿ ಕುಳಿತ ಕ್ರಮ ಹೀಗೆ. ಒಬ್ಬ ಬೀರ್ ಪ್ರಿಯ ಪಕ್ಕದವ ರಮ್ ಆಸಕ್ತ. ವಿಷಮಸಂಖ್ಯೆಯವರು ಬೀರ್ ಮತ್ತು ಸಮಸಂಖ್ಯಾಸ್ಥಾನದಲ್ಲಿರುವವರು ರಮ್ ಹೀಗೆ ವಿತರಕ ಎಣಿಸಿ, beer-rum, beer-rum, beer-rum, beer-rum ಎಂದು ಎಂಟುಮಂದಿಯ ಪಾನೀಯ ವಿಶೇಷ ನಿರ್ಧರಣೆ ಮಾಡಿ ಹೇಳಿದ.

  • This is a clear case of plagiarism from SL. No. 13 above. And the 1hr 9min time gap between the two posts (13 & 14) is more than enough for recasting the idea.
   ಸ್ರಗ್ವಿಣೀ|| ಅಷ್ಟವಕ್ರರ್ಗಳಂ ಕಂಡಿಹೆಂ ನಾನುಮಾ
   ದುಷ್ಟರಂ ನಿಮ್ಮಯಾ ಸಂಗದೊಳ್ ಬಾರಿನೊಳ್|
   ನಾನು ಬರಿಯ ಸೋಡ ಕುಡಿಯುತ್ತಿದ್ದುದರಿಂದ, ಸರಿಯಾಗಿ ನೋಡಿದ್ದೇನೆ – ಬೆಸದವರು ರಂ, ಸರಿಯವರು ಬೀರ್. ಬೀರಂ-ಬೀರಂ ಅಲ್ಲ. ಉಲ್ಟ:
   ದೃಷ್ಟಿಯುಂ ನೇರಮುಂ ನನ್ನದಾಗಿರ್ದಿರ-
   ಲ್ಕಿಷ್ಟೆ: ’ರಂ-ಬೀರು’ ’ರಂ-ಬೀರು’ಮಿಂತನ್ವಯಂ|| 😉

   • While I was running in between to fix some water connection problem yesterday, I got this idea while waiting in a shop. As soon as I reached home I directly keyed in and did not check the other postings. Yes. Ms Kanchana has posted the idea first. Prasad’s logic of recasting time is true. But alas,it is not true in this case 🙂

 15. ಬೀರಂ ಕಂಡಾ ಕನಸೊಳ್ ತಾನೇ
  ಪಾರಲ್ನೀಲಾಕಾಶದೆ! ಕೂಗಳ್
  “ನೀರನ್ನೆರಚುವನೇಳೋ ಮಗನೇ
  ಬೀರಂ… ಬೀರಂ… ಬೀರಂ… ಬೀರಂ….”

  ತಪ್ಪಿದ್ದಲ್ಲಿ ಸವರಿಸಿ

 16. ಪೀರಲ್ ಮಧ್ಯಮ ನಶೆಪೆರ್ಚುತಿರಲ್
  ಬೀರಂ ಬೀರಂ ಬೀರಂ ಬೀರಂ
  ಬೀರಂ ತಾನೆನ್ನುತ್ತಿರೆ ನಿಶೆಯೊಳ್
  ಪೋರಂ ಕೆಸರಿನ ಕೊಂಡದೆ ಬಿದ್ದನ್

  • ಓಹ್! ನಾಲ್ಕು ಪೆಗ್‍ಗಳು ಕಮ್ಮಿಯಾದುವೆ ಚೀದಿ? ತಗೊಳಿ ಇನ್ನೊಂದೆರಡು:
   ಬೀರಂ ಬೀರಂ ಬೀರಂ ಬೀರಂ
   ಬೀರಂ ಪೀರ್ದುಂ ಮುಳುಗಲ್ ನಶೆಯೊಳ್|
   ಬೀರಂ ಪೀರಿದ ಲೆಖ್ಖವು ವೇದ್ಯಮೆ?
   ಬೀರಂ (ಅವನ ಹೆಸರು) ಕೆಸರೊಳ್ ಬಿದ್ದಂ ನಿಶೆಯೊಳ್||

 17. ಬೀರಂ ಬೀರಂ ಬೀರಂ ಬೀರಂ
  ಬೀರನೆನಲ್ಕಾ ಉತ್ತರನಂ
  ನಾರಿಯರಂತಃಪುರದೊಳ್ ನಾಣ್ಪಂ
  ತೋರುತೆ ಪಲ್ಕಿರಿದಂ ಶೌರೀ

  ನಾಣ್ಪಂ – ನಾಚಿಕೆಯನ್ನು
  ಶೌರೀ – ವ್ಯಂಗ್ಯಕ್ಕೆ

  • ಉತ್ತರನಂ? ಉತ್ತರನುಂ?
   ಪಲ್ಲವ||
   ನೀವು ಪೇಳಿದ ವೋಲು ’ಶೌರಿ’ಯು
   ಸೋವಿವ್ಯಂಗ್ಯವು ದಿಟದೆ ಕೇಳೈ
   ಕಾವುತಟ್ಟದೆ ಶೌರಿಯನುಜಗೆ
   ದೇವರಂತಹ ಶ್ರೀಶಗೆ?
   (’ಪಲ್ಕಿರಿದಂ ಶ್ರೀಶಂ’ ಎನ್ನುವ ಬದಲು ’ಪಲ್ಕಿರಿದಂ ಶೌರಿ’ ಎಂದಿರುವಿರಲ್ಲವೆ?)

 18. ವಿದ್ಯುನ್ಮಾಲಾ||
  ‘ಮಾರಂಬೋಲ್ವಂತಿರ್ಪಂ ಮೇಣ್ ಪೇಳಾರೀತಂ ದೇವಾ’ ಎನ್ನಲ್ ವಾ-
  ಙ್ನಾರೀಪಂ ಪೇಳ್ದಂ ಸೂಳಿಂದಂ “ಬೀರಂ ಬೀರಂ ಬೀರಂ ಬೀರಂ” ||

  (“ಮಾರನನ್ನು ಹೋಲುತ್ತಿರುವ ಈತನು ಯಾರು ದೇವಾ?” ಎಂದಾಗ ನುಡಿವೆಣ್ಣಿನ ಪತಿಯಾದ ಬ್ರಹ್ಮ ಕ್ರಮವಾಗಿ (ನಾಲ್ಕು ಮುಖಗಳಿಂದ) “ಬೀರಂ,ಬೀರಂ,ಬೀರಂ,ಬೀರಂ” ಎಂದ)

  • 4 ಎಂದಾಗಲೇ ಹೊಳೆಯಬೇಕಾಗಿದ್ದಿತು 🙁
   ‘ವಾಙಾರೀಪಂ’ ಚೆನ್ನಾಗಿದೆ. ’ಮೇಣ್’ ಶಬ್ದದ ಔಚಿತ್ಯ ತಿಳಿಯಲಿಲ್ಲ. ಅದು idiomatic ಪ್ರಯೋಗವೆ?

   • ಒಂದು ಗುರುವಿಗೋಸ್ಕರ (ಎರಡು ‘ಮಾತ್ರೆ’ಗಳಿಗೋಸ್ಕರ) ‘ಮೇಣ್’ ಬಂತು. ನಿಮಗೆ ‘ಮೇಣ್’ ಬೇಡದಿದ್ದರೆ ‘ದಲ್’ ಹಾಕಿಕೊಳ್ಳಿ 😉

    • ’ದಲ್’ ದಿವ್ಯವಾಗಿ ಹೊಂದುತ್ತೆ. ’ಮೇಣ್’ ಬೇಡ ಎಂದೇಕೆ ಹೇಳಲಿ. ಬೇಕು. ಅದನ್ನು ತೆಗೆದುಕೊಂಡು ನಿಮಗೆ ’ದಲ್’ ತಲುಪಿಸಿದ್ದೇನೆ. 😉

 19. ನೀರೊಳ್ ತೊಯ್ದಿರೆ ಪುಸ್ತಕಮಾಗ ಸ
  ಮೀರಕೆ ಪೇಳುತೆ ಪೋರ ಕಬೀರಂ(ಕಬೀರ+ಅಂ-
  ಬೀರಂಬೀರಂಬೀರಂಬೀರಂ
  (-ಬು+ಈರ್+ಅಂಬು+ಈರ್+ಅಂಬು+ಬೀರ್ +ಅಂಬು+ಈರ್ +ಅಂ-
  ಬು+ಈರ್ +ಎನುತಲಿ)ಬೀರೆನುತಲಿ ಹಸ್ತದೊಳೊತ್ತಿದನೈ ।

  (ಅಂಬು = ಒಣಗು, ಈರ್ = ತೇವ,ಒದ್ದೆ)
  ಚಿಕ್ಕಂದಿನ ಶಾಲೆಯ ದಿನಗಳು ನೆನಪಾಗಿವೆ. (ಪುಸ್ತಕದ ತೇವವಾರಿಸಲು ಮುಟ್ಟಿ-ಮುಟ್ಟಿ ಎದೆಗೊತ್ತಿಕೊಳ್ಳುತ್ತಾ “ಕಪ್ಪೆ ಕಪ್ಪೆ ಹಾಲ್ ಕೊಡ್ತೀನಿ, ನೀರ್ ಹೋಗು …. ಎನ್ನುತಿದ್ದುದು !?!?)

  • ವಿಭಿನ್ನವಾದ ಕೀಲಕ. ಎರಡು ಹೊಸಪದಗಳನ್ನು ಕಲಿತಂತಾಯಿತು. ಧನ್ಯವಾದಗಳು.

   • ಧನ್ಯವಾದಗಳು ಪ್ರಸಾದ್ ಸರ್,
    “ಬೀರಂ ಬೀರಂ” ಬಿಡಿಸಲು ಹೋಗಿ ಸಿಕ್ಕ “ಅಂಬು/ಈರ್”
    “ಸಂಧಿ”ಯಲ್ಲಿ ಲೋಪವಿರಬಹುದೇನೊ? ಸಂಧಿ ಮಾಡಿಕೊಳ್ಳೋಣ, ಅಲ್ಲವೇ?
    ಸ್ವಲ್ಪ ಬದಲಾವಣೆಯೊಂದಿಗೆ:

    ನೀರೊಳ್ ತೊಯ್ದಿರೆ ಪುಸ್ತಕಮಾಗಲ್
    ಪೋರ ಸಮೀರಂ ವ್ಯಸ್ತಂಗೊಂಡಂ(ಗೊಂಡು+ಅಂ-)
    ಬೀರಂಬೀರಂಬೀರಂಬೀರಂ
    (-ಬು+ಈರ್+ಅಂಬು+ಈರ್+ಅಂಬು+ಈರ್+ಅಂಬು+ಈರ್ +ಅಂ-)
    (-ಬು+ಈರ್ +ಎನುತಲಿ)ಬೀರೆನುತಲಿ ಹಸ್ತದೊಳೊತ್ತಿದನೈ ।

 20. ಸಾರುತೆ ವ್ಯೂಹದೆ ಕಾದ
  ಲ್ಕಾರಿರ್ಪರೆನಲಭಿಮನ್ಯುವಂ ಮೇಣ್ ಕಂಡಾಃ
  ಬೀರಂ ಬೀರಂ ಬೀರಂ
  ಬೀರನೆನುತೆ ಪೇಳ್ದರೆಲ್ಲರಾಜಿಯೊಳಾಗಳ್||
  (“ವ್ಯೂಹದಲ್ಲಿ ಹೋಗಿ ಕಾದಾಡುವವರು ಯಾರಿದ್ದಾರೆ?” ಎನ್ನಲು ಅಭಿಮನ್ಯುವನ್ನು ಕಂಡು “ಆಃ ವೀರಂ” ಎಂದು ಆ ಯುದ್ಧದಲ್ಲಿ ಎಲ್ಲರೂ ಹೇಳಿದರು.)

 21. ಸೇರಿಹ ನೋಟಕರಾಟದೊಳಂದುಂ
  ಪ್ರೇರಿಸಲಂಬಿಗ ಪೋರಗಮೀರಂ(ಪೋರಗಂ+ಈರ್+ಅಂ-
  ಬೀರಂಬೀರಂಬೀರಂಬೀರಂ
  (-ಬು+ಈರ್+ಅಂಬು+ಈರ್+ಅಂಬು+ಈರ್+ಅಂಬು+ಈರ್ +ಅಂ-
  ಬು+ಈರ್+ಎನು)ಬೀರೆನುತೊಕ್ಕೊರಲಲಿ ಚೀರಿದರೈ ।।

  (ಅಂಬು = ದೋಣಿ/ಬಾಣ,ಅಂಬಿಗ = ದೋಣಿನಡೆಸುವವ(ನಾವಿಕ)/ಅಂಬನ್ನು ಹಿಡಿದವ(ಬಿಲ್ಲುಗಾರ) ,ಈರ್ = ಎಳೆ/ಜಗ್ಗು)

 22. ”ಬೀ ರಂ ಬೀ ರಂ ಬೀ ರಂ ಬೀ ರಂ ”
  ಈರಂ ಕಾದಲ್ ಕೇರಿಯ ಬಾರೊಳ್
  ದೂರಿನು ನೀಡಲ್ ಬಾರಿನ ಧಣಿಯುಂ
  ಆರಕ್ಷಕ ಶೂರಂ ಕೊಂಡೊೈದಂ II

  ಕುಡಿದ ಮತ್ತಿನಲ್ಲಿ ಮತ್ತೂ , ಮತ್ತೂ ”ಬೀ ” ಎನ್ನುವ ಬ್ರಾಂಡ್ ನ ರಂ ಬೇಕೆಂದು ಈರ ಎನ್ನುವವನು ಬಾರಿ ನಲ್ಲಿ ಕಾದಾಡುವ ಸನ್ನಿವೇಶದ ಕಲ್ಪನೆ .

  • ಮೂರನೆಯ ಪಾದ: ಅನುಪ್ರಾಸ ಸಾಧಿಸಲು ಟೈಪೋ ಬೇಕಿತ್ತೆ? 😉 (ದೂರಿ ~ ಬಾರಿ)

   • ಕ್ಷಮಿಸಿ. ಅದು ಟಯಿಪ್ ಮಾಡಿದಾಗ ಆದ ತಪ್ಪು .

    ಬೀ ರಂ ಬೀ ರಂ ಬೀ ರಂ ಬೀ ರಂ
    ಈರಂ ಕಾದಲ್ ಕೇರಿಯ ಬಾರೊಳ್
    ದೂರನು ನೀಡಲ್ ಬಾರಿನ ಧಣಿಯುಂ
    ಆರಕ್ಷಕ ಶೂರಂ ಕೊಂಡೊೈದಂ II

    • ಓ! ಟೈಪೋ ಅಲ್ಲ. ಟಯಿಪ್! 🙂

     • ಓ ರಂಪರೆ ಪೇಳ್ವಿರೆ ಕನ್ನಡದಲಿ
      ಸಾರಸ್ವತ ಪದವಿದಕಾವುದು ಸರಿ ?
      ಸಾರುವರೆಲ್ಲರು ಚಣದೊಳ್ ನಿಮ್ಮನೆ
      ”ಬೀರಂ ಬೀರಂ ಬೀರಂ ಬೀರಂ ” II 🙂

      ಕನ್ನಡದಲ್ಲಿ ಟಯಿಪ್ /ಟೈಪೋ ಪದಕ್ಕೆ ಸರಿಯಾದ ಪದವೇನು ? ಗೊತ್ತಿಲ್ಲದಿರುವುದರಿಂದ ಕೇಳುತ್ತಿದ್ದೇನೆ .

  • ’ಟೈಪೋ’ ಎಂದರೆ ’ಟಂಕನದೋಷ’ವು
   ಸೈಪಹುದಾಂಗ್ಲರ ನಿಷ್ಪತ್ತಿ|
   ಭಾಪಹುದಲ್ತೆ ಖಡುಗಕಿಂ ಲೇಖನಿ (computer keyboard)
   ಭೂಪಂ ನಾನಪೆ ವೀರನಿಗಿಂ|| 😉

 23. (ವಿದ್ಯುನ್ಮಾಲಾ ವೃತ್ತ)

  ಬೋರಂ ಮೆಚ್ಚಲ್ ಪೆಣ್ಣಂ,ರಮ್ಮಂ,
  ಸಾರಲ್ ಶಯ್ಯಾಗಾರಕ್ಕಾತಂ,|
  ಜೋರಿಂ ಬೇಕೆಂಬಂ ಜಾರಂ-“ರಂ-
  ಬೀ ರಂಬೀ ರಂಬೀ ರಂಬೀ ರಂ” ||

  ರಮ್ಮಂ= rumಅನ್ನು
  ರಂಬೀ- ಬೋರನಿಗೆ ರಂಬೆಯು ” ರಂಬೀ ” ಆಗಿದ್ದಾಳೆ.
  ರಂ= rum

  • ವಸ್ತುತಃ ಉಚ್ಚಾರಣೆಯು ’ರಂಬಿ’ ಮಾತ್ರಮದು
   ಮಸ್ತಕಕೆ ರಮ್ಮೇರಿಯಾಯ್ತು ’ರಂಬೀ’|
   ಗ್ರಸ್ತನಾಗಿರೆ ಪೇಯದಮಲಿನಿಂದಂತವಳ (ಕರ್ಷಣದಿಂ)
   ರಸ್ತೆಗೆಳೆದಾಡನೇಂ – ಹಾದಿರಂಪ||

   • ಹಾದಿರಂಪರೆ,ರಸ್ತೆಯೊಳ್ ಭಾರಿ ಮೆಚ್ಚೇಕೆ?
    ಕಾದಾಟಕದೆ ಸರಿಯ ಜಾಗಮೆಂದೇಂ? |
    ಬೀದಿಯೊಳ್ ರಂಪಾಟದಿಂದಾರು ಶೋಭಿಪರ್ ?
    ವಾದದಿಂ ಸಮಯಮದು ಬರಿದೆ ವ್ಯರ್ಥಂ ||

    • ಕಂಡುಣ್ಣುತೆ ದಾಂಪತ್ಯದ ಸುಖಮಂ
     ಮಂಡಿಸೆ ನರಸಿಂಹಸ್ವಾಮಿ|
     “ಹೆಂಡತಿಯೊಬ್ಬಳು ಮನೆಯೊಳಗಿದ್ದರೆ
     ಗಂಡಗದೇ ಕೋಟಿ ರುಪಾಯಿ”||

     ಮೆರೆಸಲುಬೇಡವೆ ಹಾದಿಲೆ ರಂಪನು
     ಉರುಕೋಟಿಯು ಮನೆಯೊಳಗಿದ್ದೇಂ?
     !!ಆದರೆ ಆದದ್ದೇನು!!
     ಪೊರಮಟ್ಟೆನ್ನ ಹರಾಜಿಟ್ಟಿಹ ಸತಿ
     ಸರಹದ್ದೊಳು ಮಾತ್ರಮೆ ಕೋಟಿ|| 🙂
     (ಉರು = ದೊಡ್ಡ)
     ಈ ಕಲ್ಪನೆ ಪ್ರೊ|| ಅ. ರಾ. ಮಿತ್ರರವರದು

     • ಗಂಡನ ರಂಪಕೆ ನೊಂದಿರೆ ಭಾಮೆಯು,
      ಕಂಡಳುಪಾಯವ ರಸ್ತೆಯೊಳೇ|
      ಪಿಂಡುವ ರಂಪರನಲ್ಲೇ ಮಾರುವ
      ಗಂಡುಸತನಮಂ ಮೆರೆದಳದೋ||

      ಮನೆಯೊಳ್ ಪತಿದೇವಂ ತಾನಿರದಿರೆ,
      ತನಗದೆ ಕೋಟಿಯ ಪಣಮೆಂದಾ-|
      ಮನದನ್ನೆಯನಾಂ ಪೊಗಳದೆಯಿರ್ಪೆನೆ,
      ಮನದೊಳ್ ಮೆಚ್ಚುತೆ, ಸಂತಸದಿಂ?||

     • Click the REPLY tab below the first verse of the sl no. (24 in this case). Postings will then not taper into inconvenient widths. See below for my response to your above verses.

  • ಚೆನ್ನಾಗಿದೆ 🙂

   • ಧನ್ಯವಾದ ಕಾಂಚನಾ ಅವರೆ.

  • ಶಕುಂತಲಾರವರೆ,

   ಗಂಡನ ರಂಪಾಟದಿನಾರಂಭಂ
   ಗೊಂಡುದು ವಾದಮದೆನಲೇಕೌ|
   ಮಂಡೆಯನಾತನದಂತಾಗಿಸಿದಾ
   ಕಾಂಡಮನೆಲ್ಲಮನರಿಯರ್ದೆಲ್!!

   ನಿಮ್ಮಂತೋರ್ವಳ ವಿಷಯದೊಳೊಮ್ಮೆಗೆ
   ಉಮ್ಮಳಿಸಿದುದೇನನುಕಂಪಂ?
   ಹುಮ್ಮಸ್ಸಿನೊಳಿಡಿದಾಕೆಯ ಪಕ್ಷವ
   ತಮ್ಮನ ದೂರುವಿರೇಂ ಬರಿದೆ|| 🙂

  • ಪ್ರಸಾದರೆ,

   ಅಕ್ಕನ ಗಂಡನ ಪರಿಯಂ ಪೇಳ್ವೆಂ,
   ಚೊಕ್ಕದ ಗುಣಮಂ ಪೊಂದಿರ್ಪರ್ |
   ಸಕ್ಕರೆಯಂತೆಯೆ ಬಾಳೆಮ್ಮದು,ಸವಿ-
   ಯಕ್ಕರೆಯೆಮ್ಮಂ ಬಂಧಿಸಿರೆ ||

   ತಮ್ಮಂದಿರ ಸತಿಯಿರೆ ಸಂಕಟದೊಳ್,
   ಸುಮ್ಮನೆ ಮೂಗಂ ತೂರಿದೆನೇಂ?|
   ನಿಮ್ಮಯ ರಂಪಕೆ ಮದ್ದಿರದೆಂದೇ
   ನೆಮ್ಮುವೆನಾಂ ದೃಢನಿಶ್ಚಯದಿಂ ||

   • Clap clap. I thought I had the last word. You have bettered it! But I am not the one to concede:
    ಈಪರಿ ಸಿಹಿಯಾದೊಡೆ ನಿಮ್ಮಕ್ಕರೆ
    ಪಾಪದ ಭಾವಗೆ ಮಧುಮೇಹಂ|
    ಭಾಪಹುದೆನ್ನಯ ಸತಿಯಾಗೀಗಳ
    ಕೋಪವು ಪೆರ್ಚಿಪುದಕ್ಕರೆಯಂ||

    ನನ್ನೊಬ್ಬನನ್ನೇ ದೂಷಿಸುವುದಿದ್ದರೆ ’ನಿನ್ನಯ ರಂಪಕೆ’ ಎನ್ನುತ್ತಿದ್ದಿರಿ
    “ನಿಮ್ಮಯ ರಂಪಕೆ ಮದ್ದಿರದೆ”ನ್ನುತೆ
    ನೆಮ್ಮಿರುವಿರಿ ಈಗರಿತೆಲ್ಲಂ|
    ತಮ್ಮನು ಮತ್ತಿವನಾಕೆಯು ಮೀರಿರೆ
    ಹಮ್ಮಿನೊಳೊಬ್ಬರನೊಬ್ಬರು ತಾಂ|| 😉

  • ಪ್ರಸಾದರೆ, ನಿಮ್ಮ ಮೆಚ್ಚುಗೆಗೆ,ಚಪ್ಪಾಳೆಗೆ ಧನ್ಯವಾದ. ನಿಮ್ಮ ಪದ್ಯಗಳಿಗೆ ಪ್ರತಿಕ್ರಿಯೆ:

   “ಸವಿಯಕ್ಕರೆಯಿಂ ಮಧುಮೇಹಂ”- ಹಾ,
   ಕವಿಕಲ್ಪನೆಯದು,ಪುರುಳಿಲ್ಲಂ |
   ಬುವಿಯೊಳಗೆಲ್ಲರ ಬಿಡದೆಯೆ ಕಾಡುವ
   ತವಕದೊಳಿರ್ಪುದು ಸೀರೋಗಂ ||

   ತಮ್ಮಂದಿರ ಗುಣಮಂ ನಾನರಿತಿರೆ,
   “ನಿಮ್ಮಯ”ವೆಂದಿರಲದು ತಪ್ಪೇಂ?|
   ಬಿಮ್ಮನೆ ರಂಪವ ಮಾಡುವಿರೆಂದಾಂ
   ಸಮ್ಮಾನದ ಪದವನ್ನೊರೆದೆಂ ||

  • ತಮ್ಮಗಳೆಲ್ಲರುಮೊಂದೇ ತೆರನಿರೆ
   ಕಮ್ಮಿಯದೇನೆನ್ನೊಬ್ಬನದುಂ?
   ಬೊಮ್ಮನೆ ಸೃಷ್ಟಿಸಿಹನು ಈರ್ವರನುಂ (ತಮ್ಮ ಮತ್ತು ನಾದಿನಿ)
   ಸಮ್ಮತ ದೃಷ್ಟಿಯ ತಾಳಿರಿ ನೀಂ||

 24. Hello,
  Can you please recommend some books to start understanding into haLegannada literature?(gadhya and padya). The list that has been provided is very advanced, so is there some kind of beginner’s literature which one can start with(to get used to the dhaati, bhaashE and vyakaraNa) and further graduate into the ones mentioned in the list?

  I whole heartedly appreciate the effort that you guys have put in.

  Best,
  Rajesha

 25. ಮಾರ ಕುಮಾರಂ ಮಂದಿಯ ಕೂಡುತೆ
  ಕಾರೆಂದೋಡುತ ನಾಟಕ ಮಾಡಲ್
  ಗೇರಮ್ ಪಿಡಿದೇ ಬಾಯೊಳ್ ಪೇಳಿದ
  ಬೀರಂ ಬೀರಂ ಬೀರಂ ಬೀರಂ II

  ಮಾರ ಎಂಬವನ ಮಗ ಗೆಳೆಯರೊಂದಿಗೆ ಡೀಸೆಲ್ ನಿಂದ ಚಲಿಸುವ (ಬಸ್ /ಲಾರಿ ) ವಾಹನಗಳನ್ನು ಚಲಾಯಿಸುವ೦ತೆ ನಟಿಸುತ್ತಾ ಬಾಯಲ್ಲಿ ಅದರ ಸದ್ದನ್ನು ”ಬೀರಂ” ಎಂದು ಕೇಳಿಸಿದ . (ಆದಿ ಪ್ರಾಸಕ್ಕಾಗಿ ಕಾರು ಎಂಬ ಪದ ಪ್ರಯೋಗ )

 26. ದೂರದ ಕವಿಸೊರ್ಕಿನವೊಲ್ ಕೂಗ-
  ಲ್ಕಾರಿರ್ಪರ್ನಿಜ ಪುರುಷರ್ ನಿಮ್ಮೊಳ್
  ಪೂರಣಮಂ ನೀಡೆನುತುಂ ಕೇಳ್ದನ್
  “ಬೀರಂ ಬೀರಂ ಬೀರಂ ಬೀರಂ”

  ಈ ಪರಿಹಾರ ಯಾವ ಸಮಸ್ಯೆಗಾದರೂ ಆದೀತು..

  • ಇಲ್ಲ. ಮಂದಾನಿಲರಗಳೆಗಳೆಯಲ್ಲಿರುವ ಸಮಸ್ಯೆಗಳಿಗೆ ಮಾತ್ರ ಆಗುತ್ತದೆ 🙁

 27. ಹಾರಲ್ಕಾಗಸಕಂಹನುಮಂತಾ
  ನೇರುತೆ ಬೆಟ್ಟಮನೊಮ್ಮೆಲೆ ಕಪಿಗಳ್
  ಚೀರಿದವೈ ಸಂತಸದಿಂ ನೋಡಾ
  ಬೀರಂ ಬೀರಂ ಬೀರಂ ಬೀರಂ

  ಹನುಮಂತ ಆಗಸಕ್ಕೆ ಹಾರಿದ್ದನ್ನು ಕಂಡ ಕಪಿ ಸೈನ್ಯವು ವೀರ… ವೀರ… ಎಂದು ಕೂಗಿದವು

  • ಹನುಮಂತಾನೇರುತೆ – ಹನುಮಂತನುಮೇರಲು… ಎಂದು ತಿದ್ದಿ.

 28. ನೂರರೊಳರವತ್ತು ಪದವ ಬೀರಿದ
  ಭೂರಿ ಖ್ಯಾತಿಯು ಸಂದಿರೆ ರಂಪರೆ,
  ಸೂರಿರದೀ ಪದ್ಯದ ಬಾರೊಳ್, ನೀಂ
  ಬೀರಂ, ಬೀರಂ, ಬೀರಂ,ಬೀರಂ!! 🙂

  • 60% thanks 😉
   ವೀರನಿವನೆನ್ನುತಲಿ ಪೊಗಳುತಲಿ ಢಾಳಾಗಿ
   ಚೋರನೆನ್ನುತೆ ಜರೆವುದೇಂ ಮರ್ಮದಿಂ!
   ಪಾರಾಗಲೆಳಸಿಹನು ಪೇದೆಗಳಿನೆನಿಪವೋಲ್
   ಸೂರಿರದ ಬಾರೊಳಿರಿಸೆನ್ನನ್ನು ನೀಂ||

   ತುಂಬುಹೃದಯದ ಧನ್ಯವಾದಗಳು

   • ಕಾಂಚನ ಅವರಿಗೆ ನನ್ನನ್ನು ಅನುಮೋದಿಸಿದ್ದಕ್ಕೆ ಧನ್ಯವಾದಗಳು . ಪ್ರಸಾದ್ ಸರ್ , ಹೃತ್ಪೂರ್ವಕ ಅಭಿನಂದನೆಗಳು .

    • Thanks bha.la. ಭಾಲ=ಬ್ರಹ್ಮ=ಕವಿ

     • ಬರಹವನ್ನು ಬದಲಿಸಲು ಸಾಧ್ಯವಿರುವವನೇ ಬ್ರಹ್ಮ 🙂
      ಬರಹ = ಬರೆದುದನ್ನು

 29. ಛೀ ರಂ ಕುಡಿದಿರೆ ಸಾಗಿರಿ ದೂರಂ
  ಘೋರಂ ರಮ್ಮಿನ ವಾಸನೆ ತಾಳೆಂ
  ಏರಿಸಲೇಬೇಕೆಂದರೆ ಕುಡಿಯಿರಿ
  ಬೀರಂ ಬೀರಂ ಬೀರಂ ಬೀರಂ

  • ಶುದ್ಧವಿದೆ ರಗಳೆಯಿದುಮಭಿನಂದಿಸುವೆನು ಸ
   ನ್ನದ್ಧರಾಗಿರಿ ರಾಮ ಮತ್ತೊಂದಕೆ|
   ಇನ್ನೊಂದು ಮತ್ತೊಂದು ಪದ್ಯ ರಚಿಸಿರಿ.

   ರಂನ ವಾಸನೆಯು – ಕುಡಿಯುವಾಗ, ಬೀರಿನದು – ತುಸು ಹೊತ್ತಾದಮೇಲೆ. ಆಯ್ಕೆ ಅವಳದೇ.
   ಕ್ರುದ್ಧಳಾಗದೆಲುಳಿದು ರಮ್ಮ ವಾಸನೆಗೀಗ
   ಸಿದ್ಧಳಪ್ಪಳೆ ಬೀರಿನದಕೆ ತಡೆದು||

 30. ಸಾರಂಗಂ ಸುಳಿಯಲ್ ಪೆದೆಯೇರಿಸಿ
  ಸಾರಂಗಮನಂಬೀರಂ ಬೀರಂ
  ಬೀರಂ! ಬೀರಂ ಪೂಣ್ಡಂಬಂ! ಕಾಣ್
  ಸಾರಂಗಾಂಗನೆ ಕಣ್ಬೊಲ ಪೊಕ್ಕಳ್

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)