Jul 272014
ಬನ್(bun), ಗನ್(gun), ಪನ್(pun), ರನ್(run) ಪದಗಳನ್ನು ಬಳಸಿ ನಿಮ್ಮ ಇಚ್ಛೆಯ ಛಂದಸ್ಸಿನಲ್ಲಿ ನಿಮ್ಮ ಇಚ್ಛೆಯ ವೃಕ್ಷದ ವರ್ಣನೆಯನ್ನು ಮಾಡಿರಿ
ಬನ್(bun), ಗನ್(gun), ಪನ್(pun), ರನ್(run) ಪದಗಳನ್ನು ಬಳಸಿ ನಿಮ್ಮ ಇಚ್ಛೆಯ ಛಂದಸ್ಸಿನಲ್ಲಿ ನಿಮ್ಮ ಇಚ್ಛೆಯ ವೃಕ್ಷದ ವರ್ಣನೆಯನ್ನು ಮಾಡಿರಿ
ನೆರಳನೀಡುತಲಿರ್ಪೆ ಬಿಸಿಲ ಬನ್ನವ ಸಹಿಸೆ
ಪೊರೆಯುತಿಹೆ ಗಗನದಾ ಪಕ್ಕಿಗಳನು|
ನರನಹಿಂಸೆಗೆ ಸಿಲುಕಿದುರುಮಳುಕದಾ ಹೊಂಗೆ
ಮರದಸಂಪನ್ನವೆಲ್ಲಿಯು ಮೊಳಗಲಿ|
’ಗಗನದ’ ಮತ್ತು ’ಗಗನದಾ’ಗಳನ್ನು ಸಮಾನಾರ್ಥಕವಾಗಿ ಬಳಸಲಾಗದು. ಗಗನದಾ = ಗಗನದ+ಆ. ಇಲ್ಲಿ ’ಆ’ ಎಂದು ನಿರ್ದಿಷ್ಟವಾಗಿ ತೋರಿಸಲು ಸಂದರ್ಭವಿಲ್ಲ.
ಪೂರ್ವಾರ್ಧವು ಮರವನ್ನು ಸಂಬೋಧಿಸಿ ಹೇಳಿದ ಮಾತು; ಉತ್ತರರ್ಧವು ಸಮಾರೋಪವಾಕ್ಯ.
(ಸಿಲುಕಿದುರು…. Typo)
ಹೀಗೊಂದು ಸವರಣೆ:
ನೆರಳ ನೀಡುವುದೆಮಗೆ ಬಿಸಿಲ ಬನ್ನವ ಕಳೆದು,
ಪೊರೆದಿಹುದು ಗಗನಗಾಮಿಗಳನೆಂದುಂ|
ಕೊರಗದಿದೆ ನರನ ಘರ್ಷಣೆಗೆಂದುಮೀ ಹೊಂಗೆ-
ಮರದ ಸಂಪನ್ನತೆಯು ಮೊಳಗಲೆಲ್ಲು||
Thanks for the corrections 🙂
विहङ्गाहिबन्धुं मृगैः पूज्यमानं
प्रयाणे नराणां विपन्नाशकं तं।
गणेशेन तुल्यं सुपीनं मनोज्ञं
सृतेः पार्श्वतो वर्तमानं नमामि॥
[मार्गपार्श्ववर्तिनं वृक्षं नमामीति।]
हा हन्त। उपरि run-मुद्रणं न कृतम्।
विहङ्गाहिबन्धुं मृगैः पूज्यमानं
प्रयाणे विहारं मनोरञ्जकं तम्।
गणेशेन तुल्यं विपन्नाशकत्वात्
सृतेः पार्श्वतो वर्तमानं नमामि॥
विस्मृत्य मुद्रणं कर्तुं ’रन्’शब्दममुथा भवान्।
धावन्नागतवान् किं भो विश्वास वासुकिप्रसूः॥
——-
ದತ್ತಶಬ್ದಂಗಳನ್ತ್ಯಂ ಕೇಳ್ ’ತ’ವರ್ಗಾಕ್ಷರಮಲ್ಲಮೇಂ?
ಒತ್ತರಿಟ್ಟು ’ವಿಪನ್ನಾ’-’ಬನ್ಧು’ಮಿನ್ನು ಚ-ಟ-ವರ್ಗಣಂ!
ಚವರ್ಗ> रञ्जकं. ಟವರ್ಗ> गणेशेन 🙂
(ಚಾಟುಪದ್ಯವಾದ್ದರಿಂದ, ಪ್ರಾಸಹ್ರಾಸ ಹಾಗೂ ಯತಿ ಉಲ್ಲಂಘನೆಯನ್ನು ಮನ್ನಿಸಬೇಕೆಂದು ಕೋರಿಕೆ)
साधु, सोऽयं दोषो वर्तते मत्पूरणे 🙂
ಬನ್ನಗಳಂ ಕರಂ ಸಹಿಸುತುಂ ಬಿಸಿಲಿಂ ಮಳೆಯಿಂದುಮೆಂದಿಗುಂ
ಗನ್ನಿಗರಿಂಗುಮೊಲ್ಮೆಬಗೆಯಿಂ ಕುಡುತುಂ ನೆಳಲಂ ರಸಾರ್ದ್ರಮಂ |
ಪನ್ನತಗಳ್ ಮರಂಗಳುರೆ ಕಾರುಣಭಾವದಿನಿರ್ದು ಸತ್ಯದೊಳ್
ರನ್ನಗಳಲ್ತೆ ಭೂಮಿಭವಭಾಗ್ಯಮೆ ಬೀಜಮಿವಕ್ಕಮೆಂಬೆನಾಂ ||
ಗನ್ನಿಗರು = ಮೋಸಗಾರರು.
ತಾತ್ಪರ್ಯ – ಪನ್ನತ ( ಧೀರ ) ವೃಕ್ಷಗಳು ಬಿಸಿಲು ಮಳೆ ಮೊದಲಾದ ಕಷ್ಟಗಳನ್ನು ಸಹಿಸುತ್ತಾ ಸಜ್ಜನ-ದುರ್ಜನರೆಂಬ ಭೇದವಿಲ್ಲದೆ ಎಲ್ಲರಿಗೂ ರಸಾರ್ದ್ರವಾದ ನೆರಳನ್ನಿತ್ತು ಉಪಕರಿಸುತ್ತವೆ. ಇವೇ ನಿಜವಾದ ರತ್ನಗಳು. ಭೂಮಿವಾಸಿಗಳಾದ ಮನುಷ್ಯರ ಭಾಗ್ಯವೇ ಈ ವೃಕ್ಷಗಳ ಉತ್ಪತ್ತಿಗೆ ಬೀಜವೆಂದು ಭಾವಿಸುತ್ತೇನೆ.
ಮನೆಯಂಗಳವನೆ ಬನ ಗೈವ ಚೂತತರು ತಾಂ
ಮನದ ತಂಪನಗುರಿಸೆ ಸಹಕರಿಸದೇಂ?
ಇನಿಸು ಗುಂಗ ನವಗಬ್ಬಕೆನೆ ಬಸಿದೀವ ಮಿಡಿ,
ಬನಿದು ಕಳಿಗುಂ ಚಿನ್ನ-ರನ್ನರ್ಗೆನೆ!
A working woman is unable to tie her infant daughter’s plait daily. So she gets the child’s hair bobbed. This resembles a trimmed fence shrub.
ಬನ – garden
ಅಜಗನ್ಧಿಕಾ – a shrub
ವಾಟ – fence
ಗ್ರಂಥನ – ಹೆಣೆಯುವುದು
ಪುಷ್ಪಿತಾಗ್ರ|| ಬನಗಳೊಳು ವಿಭಕ್ತಗೊಳ್ಳುತೆಂತೋ
ಕೊನರಜಗನ್ಧಿಕ ವಾಟಮಿಂತುಮಾಯ್ತಯ್|
ವನಿತೆಯು ವಪನಂ ಮಗಳ್ಗೆ ಗೈದೊಲ್
ದಿನದಿನಮುಂ ಜಡೆಯನ್ನೆ ಗ್ರಂಥಗೈವಳ್?|
ಕೀಲಾಲಕ್ಕೆಣೆಯಪ್ಪ ಪಣ್ ಪನಸವಂ ವೃಕ್ಷಂ ಸದಾ ನೀಡಲುಂ
ಶಾಲಾಯಾಸವದೂರಕಟ್ಟುತಣುಗನ್ ತಿಂಬನ್ ಮಹಾಮೋದದಿಂ
ಸೋಲುಣ್ಣಂ ಸವಿಯುಂಡ ಜಾಣನಿದರಾ ಶೂರನ್ ದಿಟಂ ಭೂಮಿಯೊಳ್,
ಕೋಲಂತಾಗಲಿದುಂ ಕಲಾಭವನಕಂ, ಸತ್ತೀವುದೈ ಧಾರ್ಡ್ಯವಂ
ಕೀಲಾಲ=ಅಮೃತ
ಕೋಲು=ಬೆನ್ನ ಕೋಲು(ಕಟ್ಟಿಗೆಯನ್ನು ಕಟ್ಟಡಗಳಿಗೆ ಬಳಸುವದರಿಂದ 🙂 )
ಕೋಲಂ(ಳಂ)ತಾಗು= ಸಹಾಯವಾಗು
ನಿಜಮೇ ನೀಮೆನುಮೀ ವಚಂ ಭುವನದೊಳ್| ಕಂಡಿರ್ಪೆವೆಲ್ಲೆಲ್ಲು ನಾಂ
(ಇಹದಿಂ) ಬಿಜಯಂಗೈದೊಡಮಲ್ಲಮೇಂ ಕವಿವರರ್| ಸಂಭಾವಿತರ್ ವಿಶ್ವದೊಳ್ 🙂
ತಿಳಿದಿಲ್ಲವಲ್ಲ, ಪ್ರಸಾದ್.
’ಸತ್ತು ಈವುದೈ ದಾರ್ಢ್ಯಮಂ’ ಎಂದಿರುವಿರಿ. ಹೌದು, ಪ್ರಖ್ಯಾತ ಕವಿಗಳೆಲ್ಲ ಅವರ ಕಾಲವಾದಮೇಲೆಯೇ ಪ್ರಖ್ಯಾತರಾಗುವುದು ಎಂದು ಆ ಪದ್ಯದ ತಾತ್ಪರ್ಯ.
|| ಮಲ್ಲಿಕಾಮಾಲಾ ವೃತ್ತ, ಉಪಮಾಲಂಕಾರ ||
ರನ್ನದಂತೆಯೆ ರಾಜಿಸುತ್ತಿರೆ ಕಲ್ಪವೃಕ್ಷದ ಸೋಗೆಗಳ್,
ಪನ್ನಗಂ ಪೆಡೆಯೆತ್ತಿದೊಲ್ ಮೆರೆಯುತ್ತೆ,ಬಳ್ಕುತೆ ಮಾಟದಿಂ,|
ಚೆನ್ನಮಲ್ತೆಲೆ ಬಾಗುತುಂ ತೊನೆಯುತ್ತೆ ನಾಟ್ಯಮನಾಡೆ ತಾಂ,
ಬನ್ನಮಿಲ್ಲದೆ ಪಕ್ಕಿಗಳ್ ಗಗನಕ್ಕೆ ಪಾರ್ದಿರೆ ಕುಳ್ಳಿರಲ್ ||
Fortunately you have spared the fruit and chosen to tell us about the leaves of the coconut tree!
ಪುಣ್ಯಮೆಂಬೆನು! ಪರ್ಣವರ್ಣನೆ ಗೈಯದಿರ್ದೊಡೆ ನೀವು ಪ್ರಾ-
ಮಾಣ್ಯಮಾಗ ಕುಷಾಕು(ಕೋತಿ)ವಾಗ್ವುದು ಹಣ್ಣ ಕೊತ್ತುತೆ ತಿನ್ನುವಾ| 🙂
ಧನ್ಯವಾದಗಳು ಪ್ರಸಾದರೆ. 🙂
स्थाणुना मारनाराचम् भूषार्थम् चम्पकम् धृतम् ||
यद्गन्धबन्धमोहेन तिष्ठन्ते पन्नगा नगाः ॥
सुन्दरं पूरणम्। स्थाधातुः परस्मैपदी। तिष्ठन्तीति स्यात्। नगशब्देन कोऽभिप्रेतः?
नग – न गच्छन्ति इति
चम्पकगन्धमोहिता पन्नगा अन्यत्र न गच्छन्ति इति मया अभिप्रेतः | अत: शन्कर: चम्पकम धरति |
पन्नगैश्च पन्नगारिभिश् च पूजितं वटं
यात्रिकातपत्रभूतबन्धुरं हि सुन्दरम्।
मन्दवेगगन्धवाहसङ्गतं प्रमोदकं
नैकजीविशर्मणे दृढव्रतं नमाम्यहम्॥
हि सुन्दरम् -> धुरन्धरम्