Sep 282014
 

‘ಮಾಂಗಲ್ಯಮೇ ಮಂಗಲಂ’ ಎಂಬ ಮತ್ತೇಭ/ಶಾರ್ದೂಲವಿಕ್ರೀಡಿತ ಛಂದಸ್ಸುಗಳ ಪಾದಾಂತ್ಯದಿಂದ ಪದ್ಯಪೂರಣವನ್ನು ಮಾಡಿರಿ

  25 Responses to “ಪದ್ಯಸಪ್ತಾಹ ೧೨೮: ಪದ್ಯಪೂರಣ”

  1. ನರವೈವಾಹಿಕಬಂಧ ತಾಂ ಬೆಸೆಯಲೇಳೇಳು ಜನ್ಮಾಂತರಂ
    ತರವೈ ಮಂಗಳಸೂತ್ರ ಧಾರಣವುಕಾಣ್ ಸಂಸಾರ ಸಂಧಾನಕಂ
    ಸ್ಥಿರದಾಂಪತ್ಯದೊಳು ಪ್ರಮಾಣವಿದುವೈ ಧರ್ಮಾರ್ಥದಿಂಕಾರ್ಯ(ಮ)ಕಂ
    ವರಸಾವಿತ್ರಿಯೊಲುಂ ಪತಿವ್ರತೆಗದೋ ಮಾಂಗಲ್ಯಮೇ ಮಂಗಳಂ ।।

    • ಇದು ನಿಜಕ್ಕೂ ಒಳ್ಳೆಯ ಪ್ರಯತ್ನ. ಆದರೆ ಮೊದಲ ಪಾದದಲ್ಲಿ ಒಂದು ಗುರುವು ಕಡಮೆಯಾಗಿದೆ (ಬೆಸೆಯಲೇಳೇಳು…)
      ಚೀದಿಯ ತಿದ್ದುಗೆ ಸರಿಯಾಗಿದೆ. ಹಳಗನ್ನಡದ ಹದ ಮತ್ತಷ್ಟು ಬೇಕಿದೆ.

      • ಧನ್ಯವಾದಗಳು ಗಣೇಶ್ ಸರ್, ಚೇದಿ
        ಪಂಚಮಾತ್ರಾ ಚೌಪದಿಯ ಸಹಜ ಹಾದಿ ಹಿಡಿದಿದ್ದ ಪದ್ಯವನ್ನ ಪ್ರಯತ್ನಪೂರ್ವಕವಾಗಿ ತಿರುಗಿಸಿದ್ದರ ಫಲ ! ಸರಿಪಡಿಸಿಕೊಳ್ಳುತ್ತೇನೆ.
        ತಿದ್ದಿದ ಪದ್ಯ :
        ನರವೈವಾಹಿಕಬಂಧ ತಾಂ ಬೆಸೆದಿರಲ್ಕೇಳೇಳು ಜನ್ಮಾಂತರಂ
        ತರವೈ ಮಂಗಳಸೂತ್ರ ಧಾರಣವುಕಾಣ್ ಸಂಸಾರ ಸಂಧಾನಕಂ
        ಸ್ಥಿರದಾಂಪತ್ಯದೊಳು ಪ್ರಮಾಣವಿದುವೈ ಧರ್ಮಾರ್ಥದಿಂಕಾರ್ಯ(ಮ)ಕಂ
        ವರಸಾವಿತ್ರಿಯವೊಲ್ ಪತಿವ್ರತೆಗದೋ ಮಾಂಗಲ್ಯಮೇ ಮಂಗಳಂ ।।

  2. ಸಾವಿತ್ರಿಯೊಲುಂ – ಸಾವಿತ್ರಿಯವೊಲ್ ಆಗಬೇಕಲ್ಲವೇ

  3. ಗಗನಾಕರ್ಷಿತರಾಷ್ಟ್ರಸಂಕುಲದ ವಿಜ್ಞಾನಕ್ಕೆ ಮಾರಾಂತು ಕೇಳ್
    ಮುಗಿಲಂ ಭೇದಿಸುತೊರ್ಮೆ ಸೂರ್ಯನ ಗುರುತ್ವಾಕರ್ಷಣಂ ತಾಳ್ದೊಡಂ
    ಸೊಗದಿಂದೂರ್ಜೆಯ ನೀಗದಂತೆ ಚಲನಂಗಯ್ಯುತ್ತಮೌನ್ನತ್ಯಮಂ
    ಪೊಗಲಿಕ್ಕಪ್ಪುದುಮೆಂಬುದಂ ಪರಕಿಸಲ್ ಮಾಂಗಲ್ಯಮೇ ಮಂಗಲಂ

    ಇಸ್ರೋ ಅತಿ ಕಡಿಮೆಯ ಇಂಧನದ ಸೌರಮಂಡಲ ಯಾನದ ಸಿದ್ಧಾಂತವನ್ನು ಜಗತ್ತಿಗೆ ತಿಳಿಸಲು ಯಾವ ಗ್ರಹವನ್ನು ಪರೀಕ್ಷೆಗಾಗಿ ಆರಿಸಬಹುದು ಎಂದು ಚರ್ಚಿಸಿದಾಗ ಈ ಮಾತುಗಳಾಡಿರಬಹುದೆಂಬ ಕಲ್ಪನೆಯ ಪದ್ಯ

    • ಸೋಮ, ಒಳ್ಳೆಯ ಪದ್ಯವೇ ಹೊಮ್ಮಿದೆ.

    • What a simple solution sOma!

    • ತಂತ್ರಜ್ಞಾನಿಗಳೀವಿಧಂ ನುಡಿದಿರಲ್ ಮತ್ತೇಭವಿಕ್ರೀಡದೊಳ್
      ಮಂತ್ರಾಲೋಚನಕೀಗ ಸೇರುತಿಹರೇಂ ಛಂದೋವಿದರ್ ನೈಕರೈ(many)? 🙂

  4. ಧರೆಯ ದೇಶಂಗಳಿಗೆ ಮಾದರಿಯವೊಲ್ ನಿಲುತೆ
    ಪರಲೋಕದೊಳ್ ಕಾಲನಿತ್ತೊಡನೆಯೇಂ|
    ವೆರಳಿಕ್ಕೆ ನಾಸಿಕದೆ ಪೇಳ್ವರಮೆರಿಕೆ ಬುಧರ್
    “ಮೆರುಗಿದೇಂ? ಮಾಂಗಲ್ಯಮೇ ಮಂಗಲಮ್”|

    • ಒಳ್ಳೆಯ ಭಾಷೆ ಮತ್ತು ಶೈಲಿಯ ಪದ್ಯಕ್ಕಾಗಿ ಅಭಿನಂದನೆಗಳು.

    • ಪದ್ಯ ಚೆನ್ನಾಗಿದೆ ಚೀದಿ. ಒಳ್ಳೆಯ ಕಲ್ಪನೆ. ನಾಸಿಕ’ದೆ’ ಬದಲು ನಾಸಿಕ’ಕೆ’ ಎಂದರೆ ’ಮೇಲ್’ಅಲ್ಲವೆ?

    • ನಾಸಿಕದೆ ವೆರಳಿಟ್ಟರೆಲ್ಲ ಬುಧರಲ್ಲ ಸಖ!
      ಆ ಸುಖವು ತೋರುವುದಮಂಗಳವನೆ 🙂

      • ರಾಮ್,
        ಸಾಧುವದು ನಾಸಿಕದೆ ವೆರಳಿರಿಸೆ ಮಂಗಳದೆ
        ಬಾಧೆಯದು ಬುಧಗ್ರಹದೊಳೆಂದು ಮತಮೇಂ? 🙂

      • ಇಲ್ಲಿ ನಾಸಿಕದೆ ಎಂದರೆ, ಮೂಗಮೇಲೆ ಅಂತಲೇ ಅಲ್ಲವೇ? ನಾಸಿಕದೊಳ್ ಎಂದರೆ ಅಮಂಗಳವಾಗುವುದಲ್ಲವೆ? 🙂

  5. ಮಾಲಿನಿ|| ನುಡಿಗಳೆನಿತೊ ನೋಡಲ್ ಸಂಸ್ಕೃತಂ ಮೇಣಿನಿಂದಂ
    ಮಿಡಿದಿಹ ನುಡಿತಾನೊಂದಿರ್ಪುದೈ ಕನ್ನಡಂ ತಾಂ|
    ನುಡಿಯೆ ದಿವರು (ಸಂಸ್ಕೃತದಲ್ಲಿ) ’ಮಾಂಗಲ್ಯಂ’, ಗಡಂ ಕನ್ನಡಕ್ಕಂ
    ನುಡಿಯು ಸರಳಮಾ ಮಾಂಗಲ್ಯಮೇ(=)’ಮಂಗಲಂ’ ತಾಂ||

    ಮಂದಾಕ್ರಾಂತ|| ಬೇಕೆಂದೆನ್ನುತ್ತೆ ಮಗುವೆನುಗೇಂ ಪಾಲುಪಾಲೆಂದುಮಯ್ಯೋ
    ಏಕೈಕಂ ಶಬ್ದಮನು ತಿಳಿಯುತ್ತಾರ್ತದಿಂದಿಂತು ಕೂಗಲ್|
    ಸಾಕೆಂದೆಂಬನ್ನೆಗೆ ಜನನಿ ತಾ ಪಾಲ ನೀಡಲ್ಕಿದೊಂದೇ
    ತಾಕತ್ತಾ ಕಂದಗದು ರವ ’ಮಾಂ’, ಗಲ್ಯಮೇ ಮಂಗಲಂ ತಾಂ||

    ಶಾಲಿನೀ|| ಕತ್ತಲ್, ಶುಕ್ತಂ (deserted), ರಸ್ತೆಯೊಳ್ ರಕ್ಷೆಯಿಲ್ಲಂ
    ಕತ್ತಂ ಕುಯ್ದಂತಾಗಲಾಕ್ರಂದಿಸುತ್ತೆ-|
    ಚ್ಚೆತ್ತುಂ ತಾಂ “ಮಾಂಗಲ್ಯಂ!+ಏ’ ಮಂಗ! ಲಂಗೂರ್!
    ಪೊತ್ತೊಯ್ದಂ! ಕಳ್ಳಂ! ಜನರ್, ತ್ರಾಹಿ”ಯೆಂದಳ್||

    ಶಾರ್ದೂಲ|| ದಾಂಪತ್ಯಂ ಗಡ ಭಾವರಾಜ್ಯವಿಷಯಂ, ಭದ್ರಂಗೊಳಲ್ ಭಾವಗಳ್
    ಪೆಂಪಿಂ ಧರ್ಮಮೆ ಬೋಧಿಸಿರ್ಪುದಿದನುಂ ಸಪ್ತಾಂಘ್ರಿಸಾರ್ಧಕ್ರಮಂ
    ಶಂಪಾಭಾನ ಪದಾಂಗುಲೀ-ಮುಗುತಿಯುಂ, ಮಾಂಗಲ್ಯಮೇ ಮಂಗಲಂ?
    ಸಂಪತ್ತೆನ್ನಿಪ ಚಿನ್ಹೆಯೆಲ್ಲಮುವಿವುಂ ದಾಂಪತ್ಯಮಾನಂಗಳೇಂ?
    (ಮಾನ=proof ಎಂಬ ಅರ್ಥದಲ್ಲಿ)

    ಲಯಗ್ರಾಹಿ|| ಮುಂಗೋಪಗೊಳ್ಳರ್ದೆ ನೈಧಾನ್ಯದಿಂದಂ
    ತಂಗಾಳಿವೋಲಿತ್ತು ಸಾಮಸ್ಥ್ಯ(comfort)ಮಾರ್ಗುಂ|
    ನೀಂಗುತ್ತಲಾಪತ್ತ ಗೈದಿರ್ಪ ಕಾರ್ಯಂ
    ಪಾಂಗಿಂದೆ ಮಾಂಗಲ್ಯಮೇ, ಮಂಗಲಂ ತಾಂ||

    ಮ.ವಿ|| ವಧುವಾನೆಂಬುದನಾನುಮೆಂತೊ ತಿಳಿವೆಂ, ನನ್ನಂತರಂ ಭಿನ್ನಮೇಂ(alien)?
    ವಧುವೀ ಮಾನಿನಿಯೆನ್ನುತುಂ ಗಣಿಸಲೀ ಲೋಗರ್ಗಮಾಧಾರಮೈ|
    ವಿಧಿಯಿಂ(rites) ಕೀಲಿತ ಸಿದ್ಧ(sacred)ದಾಭರಣವೀ ಮಾಂಗಲ್ಯಮೇ. ಮಂಗಲಂ-
    ರಿಧಮಂ(love) ದಂಪತಿಯೊಳ್ ಸದಾಸುಖದಮೆಂಬೆಂ ಹರ್ಷದಿಂದಿಂದು ನಾಂ||

    ಮಂಗ> ಮಾಂಗ> ಮಾಂಗಲ್ಯ – ಇದು ಸಾಧುವೆಂದಾದರೆ:
    ಪಂ.ಮಾ|| ಸೀತೆಯಂ ಪುಡುಕುವುದು ಸುಲಭಕಾರ್ಯವೆ ಪೇಳಿ
    ಕ್ಯಾತೆಯಂ ತೊರೆಯದಿರ್ದಿರೆ ಮಂಗಗಳ್|
    ಭೀತಿಯಂ ತೊರೆಯುತಬ್ಧಿಯದಾಟಿ ಜಸವಡೆದ
    ರೀತಿಯೇಂ! ಮಾಂಗಲ್ಯಮೇ (ಮಂಗಗಳ ಕಾರ್ಯ) ಮಂಗಲಂ||

    There are 3 more vrtta-s that fit, but I have run out of ideas.

  6. ಜಗದೊಳ್ ಮಂದಿಯ ಭಾವಬಂದನಗಳುಂ ವೈವಿಧ್ಯಮಲ್ತೆ ಸದಾ
    ಮಗತಾಂ ವೇರೆಯ ಮಾರ್ಗಮಂ ಸವೆವನೈ ಪೆತ್ತಾತನಂ ಮೀರುತುಂ
    ಸೊಗಮಂ ನೀಳ್ವುದ ಪೋಷಿಪರ್ ಸಕಲರುಂ ತಾದಾತ್ಮ್ಯ ಮೇಣ್ ಶ್ರಧ್ಹೆಯಿಂ
    ಬಗೆಗಂ ತೋಷಮ ತೆತ್ತೊಡಂ ನಿಜಮದುಂ ಮಾಂಗಲ್ಯವೇ! ಮಂಗಲಂ!
    (ಜಗತ್ತಿನಲ್ಲಿ ಪ್ರತಿಯೊಬ್ಬನೂ ತಮಗಿಷ್ಟವಾದುದನ್ನು ಪಡೆದು ಪೋಷಿಸಿಕೊಳ್ಳುತ್ತಾರೆ. ಸ್ವಂತ ತಂದೆ, ಮಗನಲ್ಲಿಯೂ ವ್ಯತ್ಯಯಗಳುಂಟು. ಹೀಗಾಗಿ ಯಾರಿಗೆ ಯಾವುದು ಸಂತೋಷವನ್ನು ಕೊಡುವುದೋ ಅದೇ ಶುಭಕರವಾದುದು!ಶುಭವು ಕೂಡ.
    ಸೊಗ=ಸುಖ

  7. ನಸುನಾಚೆ ನಲವಿನಲಿ ಮೆಟ್ಟಕ್ಕಿವೇಳೆಯಲಿ
    ನೊಸಲೊಳಾ ಬಾಸಿಂಗಮೇ ಬಂಧುರಂ ।
    ಹೊಸಬಾಳ ಹೊಸಿಲಿನಲಿ ಗಟ್ಟಿಮೇಳದ’ನಡುವೆ
    ಹೊಸೆದುದಾ ಮಾಂಗಲ್ಯಮೇ ಮಂಗಳಂ ।।

    • ಭಾಷೆ-ಭಾವಗಳೆಲ್ಲ ಚೆನ್ನಿಹವು ಋಚದೆ(verse), ಪರಿ-
      ಭಾಷೆಯೇನೆಂಬೆ ’ಬಂಧುರ’ಶಬ್ದದಂ?
      ನಾಚಿದೊಡೆ ಮಾತ್ರ ಬಂಧುರಮೆ ಬಾಸಿಂಗವದು
      ಲೋಚವದು ನೇರಮಿದ್ದೊಡಮಲ್ಲಮೇಂ!! 🙂
      (ಮಿಶ್ರಪ್ರಾಸ)

      • ಧನ್ಯವಾದಗಳು ಪ್ರಸಾದ್ ಸರ್,
        “ಬಾಸಿಂಗ”ದೊಂದಿಗೆ ಅನುಪ್ರಾಸವಾಗಿ “ಬಂಧುರ” ಬಂದದ್ದು. ಅಂತರಪಟದ ಹಿಂದೆ ನಸುನಾಚಿ ಬಾಗಿದ ವಧುವಿನ ಬಾಸಿಂಗದ ವರ್ಣನೆ, ಬಂಧುರ = ಸುಂದರ, ಬಾಗಿದ, ಮುಕುಟ ಎಂಬೆಲ್ಲ ಅರ್ಥಗಳು ಹೊಂದುತ್ತಿವೆ, ಆದರೆ “ನೋವುಂಟುಮಾಡುವ” ಎಂಬ ಅರ್ಥವೂ ಇದೆ ?! ಹೀಗೆ ಕೆಲವೊಮ್ಮೆ, ಒಂದು ಪದಕ್ಕೆ ವಿರುದ್ಧ ಅರ್ಥಗಳಿದ್ದಾಗ ಗೊಂದಲಉಂಟಾಗುವುದುಂಟು.
        (ಪದ್ಯ ರೂಪದಲ್ಲಿ ಪ್ರತಿಕ್ರಯಿಸುವಾಸೆ, ಸಾಧ್ಯವಾಗುತ್ತಿಲ್ಲ.)

      • ಪದ್ಯಮೇಂ ಗದ್ಯಮೇಂ, ಕಾವ್ಯತ್ವ ಮುಖ್ಯಮೌ
        ಚೋದ್ಯಮಿದ್ದೊಡೆ ಹೃದ್ಯಮಾಲೇಖಮೌ|| ಹೃದ್ಯಂ+ಆಲೇಖ (write up)
        ಸಾದ್ಯಂತ ಕಾವ್ಯಮಯಮಿರಲು ಗದ್ಯದೆ ವಿವೃತಿ
        ಉದ್ಯಮವು ನಿಮ್ನಮೆಂದೆನ್ನಲೇಕೌ||

  8. ಸುದಿನಮನೆಣಿಸದವೊಲ್ ಲೋಕದೊಳ್ ದಿನಕರಂ
    ಹದದಿಂದೆ ಗೈಯುವೆಡೆ ಕಾರ್ಯಮಂ ತಾಂ
    ಸದರಮಂ ಕಜ್ಜದೊಳ್ ತಾಳದವಗೀ ಪ್ರಶ್ನೆ
    ಯುದಿಪುದೇಂ “ಮಾಂಗಲ್ಯಮೇ ಮಂಗಳಂ”?
    ಸದರ=ಅಸಡ್ಡೆ
    (ಮಂಗಳವಾರವು ಶುಭಕರವೋ ,ಅಲ್ಲವೋ ಎಂಬ ಪ್ರಶ್ನೆ ನಿಜವಾದ ಕೆಲಸಗಾರನಲ್ಲಿ ಉದಯಿಸದು)

    • ’ಸುದಿನಮನ್ನೆಣಿಸದೆಲ್’ ಎಂದು ಸವರಿದರೆ ಲಘುಗಳನ್ನು ಮಿತವಾಗಿಸಬಹುದು. ಪದ್ಯ-ಕಲ್ಪನೆಗಳು ಚೆನ್ನಾಗಿವೆ.

  9. ಕ್ರಿಶ್ಚನರ ವೈವಾಹವುಂಗುರವ ತೊಡಿಸಿದೊಡೆ
    ನಿಶ್ಚಯವು ಮಾಂಗಲ್ಯವೈ(WHY?) ಕಾಣದಂ ।
    ಪಶ್ಚಿಮದೊಳಾರಕ್ಷಕೆನೆ ಮಡದಿ ಧರಿಸಲ್ಕ-
    ನಿಶ್ಚಯದೆ ಮಾಂಗಲ್ಯಮೇ(MAY!) ಮಂಗಳಂ ।।

    (ಉಂಗುರ ಧಾರಣೆಯೊಂದಿಗೆ (ಮಾಂಗಲ್ಯಧಾರಣೆ ಇಲ್ಲದೆ) ವಿವಾಹದ ನಂತರ, ರಕ್ಷಣೆಗಾಗಿ ಅನಿವಾರ್ಯವಾಗಿ ಕರಿಮಣಿಸರ ಧರಿಸಿದ ವನಿತೆಯ ಕಲ್ಪನೆ – ಪದ್ಯಪೂರಣ ಸಮಸ್ಯಾಪೂರಣವಾಯಿತಲ್ಲವೇ ?! )

  10. ನಲವರಾಗವ ನುಡಿಸಿ ಬಾಳಿನೊಳ್ ವಧುವರರ
    ಮಿಲನ ಗೈಯಲು ಲಗ್ನಸಂಸ್ಕಾರವು,
    ಸಲಿಗೆಯೊಲುಮೆ ಸ್ನೇಹಮೊಂದಾಗುತೀರ್ವರೊಳ್
    ಫಲಿತಗೊಳೆ “ಮಾಂಗಲ್ಯಮೇ ಮಂಗಲಂ”
    ನಲವರಾಗ=ಸಂತೋಷದ ರಾಗ

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)