Oct 062014
 

drops

  61 Responses to “ಪದ್ಯಸಪ್ತಾಹ ೧೨೯: ಚಿತ್ರಕ್ಕೆ ಪದ್ಯ”

 1. ಬಲುಸೊಗಸಿನಿಂನೀರಪನಿಯಮುತ್ತುಗಳಿಂಕ
  ಮಲದೆಲೆಯಬಿಂದುವಿನವೊಲ್ ನೇರ್ಪಿನಿಂ|
  ಬಲೆಗಳಂ ಬನ್ನದಿಂ ಬೆಸೆದಿರ್ಪಜೇಡಮೀ
  ಕಲೆಯನಾರಿಂದ ಕಲೆತಿರ್ಪುದಣ್ಣಾ?

  • ಸೊಗಸಿಂದ ನಲ್ವಾತು ಪೇಳ್ದಿರೀ ಕಲೆಯಿಂದೆ
   ಜಗದೊಳಗೆ ಜೇಡಕ್ಕೆ ಮೌಲ್ಯಮಿರ್ಕುಂ|

 2. ಚಿಮುಕಿಸೆ ನೀರಿನಾಹನಿಗಳಂಟಿಹನಂಟಿದಕಾವಕಾರಣಂ ?
  ಗಮನಿಸೆ ಕಂಡುದಾಮಲಕಿಯೊಲ್ ಮಣಿಮಾಲೆಯ ಗೋಜಗೊಂಚಲುಂ ।
  ಚಮಕಿದುವೇನಕಾಲದೊಳು ಕಾರಣಕಾಣದ ಸಾಲುಸಾಲೊಳಿಂ-
  ದಮರಿದುದಿಂತಮೇರಿಕೆಯ ಸೋಗಿನತೂಗಿನ ದೀಪದಾಗತಿಂ ।।

  (ಜಗಮಗಿಸುವ ಸಾಲುದೀಪ – ಐಷಾರಾಮದ ಸಂಕೇತವಾಗಿ – “ಅಮೇರಿಕ ” ಬಂದದ್ದು !?)

  • ಸೊಗಸಿನ ಪದ್ಯಮಾಯ್ತು ವರಚಂಪಕಮಾಲೆಯ ವರ್ಣಹಾರದೊಳ್|
   (ದೀಪದಾಗತಿಂ? ‘ಗತಿ’ ಶಬ್ದ ‘ಇ’ಕಾರಾಂತವಾದ ಕಾರಣ ಬಿಂದು ಬರುವುದಿಲ್ಲವಲ್ಲವೇ!)

   • ಕೊಪ್ಪಲತೋಟ, “2” ಚಿತ್ರಕ್ಕೆ ಪದ್ಯ – “6” ಪದ್ಯಕ್ಕೆ ಪದ್ಯ – ಮುಗಿಸಿಬಿಟ್ಟೆಯಲ್ಲ “ಅಷ್ಟಾವಧಾನ” !! ಅಭಿನಂದನೆಗಳು. “ದೀಪದಾಗತಿಂ” ಬದಲು “ದೀಪಮಾಲೆಯುಂ” ಸರಿಯಾಗುವುದಲ್ಲವೇ?

 3. || ತರಲವೃತ್ತ, ರೂಪಕಾಲಂಕಾರ,ಉಪಮಾಲಂಕಾರ ||

  ಇರುಳ ಮೂಗಿನ ಬೆಳ್ಳಿಯಾಭರಣಂ ಸುಶೋಭಿಸಿ ಚಿಕ್ಕೆಯೊಲ್,
  ಕರಿಯ ಮುಂದಲೆಯೊಳ್ ಪ್ರಕಾಶಿಪ ರತ್ನದಂದದ ಮಾಲೆಯಂ,|
  ಪರಮಸುಂದರಮಾಗಿ ಕೂಡಿರೆ ಚೌಕದಿಂ, ತ್ರಿಭುಜಂಗಳೊಳ್,
  ಗರಿಮೆಯುಳ್ಳ ಕಲಾವಿದಂ ಸೃಜಿಸಿರ್ಪ ನೂತನಚಿತ್ರಮೇಂ ?! ||

  • ತರಲವೃತ್ತಮದೊಪ್ಪುತಿರ್ಪುದು ಹೃದ್ಯಪದ್ಯದೊಳೊಳ್ಪಿನಿಂ|

   • ಒರೆಯೆ ಕೊಪ್ಪಲರೆನ್ನ ಪದ್ಯಮನೊಪ್ಪಿ ಮೆಚ್ಚುತೆ,ವಂದಿಪೆಂ 🙂

 4. ಚಂದಿರನಂ ನೆಚ್ಚಿದಿರುಳ್
  ಪೊಂದಲ್ಕಾತಂಗೆ ಪೋಲ್ವ ಮುತ್ತಿನ ಸರಮಂ
  ಮಂದರದೊಲವಂ ತೋರ್ದವ
  ಳಂದದ ಮುಖಪಂಕ್ತಿ ಮೆರೆದುವೇಂ ತತ್ ಕ್ಷಣದೊಳ್?
  (ಚಂದಿರನ ಮೆಚ್ಚಿ ರಾತ್ರಿಯು ಅವನ ನೆನಪಿಗಾಗಿ, ಅವನನ್ನೇ ಹೋಲ್ವ ಮುತ್ತಿನ ಸರವನ್ನು ಧರಿಸಲಾಗಿ, ಇಷ್ಟು ದಟ್ಟವಾದ ಪ್ರೀತಿಯನ್ನು ಮೆರೆದ ಅವಳ ಮೊಗಪಂಕ್ತಿಯೂ ಮುತ್ತಿನೊಳೆ ಶೋಭಿಸಿತೆ?)

  • ರಜನಿಯೆ ಮುತ್ತಿನಸರಮಂ
   ದ್ವಿಜಪಂಬೋಲ್ತಂತು ಪಡೆದ ನವಕಲ್ಪನೆಯಂ
   ಸೃಜಿಸುತೆ ನವೀನತೆಯನೇ
   ನಜಸ್ರಮೊಂದಿರ್ಪಿರಿಂತು ಸೊಗಸೆನೆ ಪದ್ಯಂ|
   (ಮೊಗಪಂಕ್ತಿ ಅರಿಸಮಾಸವಲ್ಲವೇ? ‘ಮುಖಪಂಕ್ತಿ’ ಮಾಡಬಹುದು.’ಅವನನ್ನೇ ಹೋಲುವ’ ಎನ್ನಲು ‘ಪೊಂದಲ್ಕಾತಂಗೆ ಪೋಲ್ವ ಮುತ್ತಿನ ಸರಮಂ’ ಎಂದು ಬದಲಾಯಿಸಬಹುದು)

   • ಅರಿಸಮಾಸದ ಮತ್ತು ಸಾಲಿನ ಸವರಣೆಗಳಿಗಾಗಿ ಧನ್ಯವಾದಗಳು 🙂

 5. ತನ್ನಯ ತೇಜಮಂಡಲಮನರ್ಕ ವಿಲೋಕಿಪ ದರ್ಪಣಂಗಳೇಂ?
  ಸನ್ನುತಿಗೂರ್ಣನಾಭಿಕಲೆಗಿತ್ತಳೆ ಪ್ರಕೃತಿ ಸ್ಫಾಟಿಕೋಪಲಂ
  ಭಿನ್ನತೆಯಲ್ತು ಜೀವರನು ಚಾಲಿಪುದೇಕಮೆ ನೀರೊ? ತಂತುವೋ?
  ಸನ್ನಿಧಿಕೋಟಿಸೂರ್ಯರಿಳಿದಾಡುವ ಕಲ್ಪನೆಚಿತ್ರಮಾಯ್ತಲಾ !

  • ಕನ್ನಡಿಯಾದಿಯಿಂದ ಪರತತ್ತ್ವಕೆ ಪೋಗುವ ಪದ್ಯಮೊಪ್ಪುಗುಂ|

 6. Let’s say, it appears like an exotic flower. ಯೋಽಪಾಂ ಪುಷ್ಪಂ ವೇದ…
  ಶಾ.ವಿ.|| ನೀರಂ ಪುಷ್ಪಮೆನುತ್ತೆ ಮಾನಿಸರು ತಾಂ ಕೊಂಡಾಡಿರಲ್ ಭೂರಿಯಿಂ
  ಧಾರಾ-ವಾಹಿನಿ-ಮಂಜುಂ+ಆವಿ-ಮಳೆಯುಂ-ರತ್ನಾಕರಂ-ಪಲ್ವಲಂ|
  ನೂರಿದ್ದೇಂ ಗಡ ರೂಪಮೆಂತೊ ಇರದೆಲ್ ಪೂಗುಚ್ಛದೊಂದಂದಮುಂ
  ಸಾರಲ್ ಲೋಗರನಂತು*ಮಲ್ತೆಲುಚಿತಂ ಲೂತಾಕುಲಾಯಂ (spiderweb) ವಲಂ||
  *ಅಂತು = ಹೂವಿನ ರೂಪದಲ್ಲಿ

  • ನೀರಂ ಪೂವೆನುತಿಂತು ಚಿತ್ರಿಸುತೆ ನೀಮಾರ್ಷೇಯಮಾರ್ಗಸ್ಥರೈ!! 😉

   • ನೇರಂ ವಂದಿಪೆ ನಿಮ್ಮ ಶಂಸಕಿದಕಂ, ಯಾವ್ ಕೊಪ್ಲು ನೀಮಾದರೇನ್ 🙂

 7. ಕುಣಿಯುತಿರುಳ್ವೆಣ್ ಮುದದಿಂ
  ಮಣಿಹಾರಮುಮಂ ಪದಕ್ಕೆ ನೂಪುರಮುಮನೇಂ
  ಗಣಿಕೆಯವೊಲ್ ಕಟ್ಟಿರ್ಪಳೆ
  ಗಣಿಸಲ್ ಚಂದ್ರಿಕೆಯ ಕಾಂತಿ ನಗುವಿನ ಮೊಗಮೇಂ?

  • ಕಂಡಾ ನೂಪುರಪಾದವ
   ಖಂಡಿತಪೇಳ್ದೆಯ ಅನೀಕ(face)ಲಕ್ಷಣಮವಳಾ!
   ಕಂಡೆಯ ಬಹುಗಣಿಕೆಯರಂ
   ಪುಂಡನೆ ನೀಂ ಹದಿವಯಸ್ಸಿನೊಳೆ ಕೊಪ್ಪಲ ಭೇಷ್!! 😉

   • ಗುಣಗಣಿ ತೋಟನ ನೀಂ ಪರಿ-
    ಗಣಿಸಿಹರೇಂ ಪುಂಡನೆಂದವನ ಗುಣಿಸಿಹರೇಂ ?
    ಕುಣಿಕೆಯವೊಲ್ ಕಟ್ಟಿರ್ಪುದು
    “ಗಣಿಕೆ”ಯು ಪೆಣ್ಣಲ್ಲ “ಪಣ್ಣು” ಪರಿಭಾವಿಸಿರೈ !!

    • ಮಣಿದಪೆನಾನುಷೆಯವರೇ!
     ಗಣಿಸಲ್ ಮತ್ಪಕ್ಷಪಾತದಿಂದುಲಿವಾಗಳ್
     ಗುಣಿಯೆಂದೆನ್ನಂ ಪೇಳ-
     ಲ್ಕಣಮುಂ ಪಿನ್ನಡೆಯ ಪೊಂದದಿರ್ಪುದಕೀಗಳ್|

   • ಪುಂಡತನಮಲ್ತು ರಂಪರೆ!
    ಕಂಡಿರೆ ನಿಮ್ಮಂದದಿಂದೆ ಸಲ್ವರ್ವೇಳಲ್
    ಮಂಡಿಸಿದೆಂ ನಾಂ ಪದ್ಯದೆ
    ಮಂಡೆಗೆಡಿಸಿಕೊಳ್ವುದಲ್ತು ನಿಮಗುಚಿತಮಲಾ!

  • ಉಷಾರವರೆ, ’ಪಕ್ಷಪಾತಮಾಡುವುದು’ ಹಾಗೂ ’ಪಿನ್ನೆಡೆಯುವುದು’ ತಪ್ಪು ಎಂದು ಸೂಕ್ಷ್ಮವಾಗಿ ಹೇಳಿರುವ ಕೊಪ್ಪಲರ ಕೃತ್ರಿಮದ ಮಣಿತವನ್ನು ಸ್ವೀಕರಿಸುವಿರ?

   ಪಿನ್ನೆಡೆವುದ, ಮೇಣ್ ಸೂಕ್ಷ್ಮದಿ-
   ನೆನ್ನುತ್ತಲ್ ಪಕ್ಷಪಾತಮಘಮೆಂದತ್ತಲ್!
   (ಕೊಪ್ಪಲತೋಟ) ಚೆನ್ನಿಗನಿತ್ತಲ್ ಮಣಿದಿರೆ,
   ಘನ್ನದಿನೇಂ ನಿಮ್ಮ ವೋಲರುರುಬುವರೌ ಪೇಳ್|| 🙂

   • ಪಕ್ಷಪಾತ ಮಾಡುವುದು ಹಾಗೂ ಪಿನ್ನಡೆಯುವುದು ತಪ್ಪು ಎಂದು ಸೂಕ್ಷ್ಮವಾಗಿಯೂ/ಸ್ಥೂಲವಾಗಿಯೂಸೂಚಿಸಿಲ್ಲ ಪ್ರಸಾದು ಅವರೇ, ನನ್ನ ಪಕ್ಷಪಾತದಿಂದ ನನ್ನನ್ನು ಗುಣಿ ಎಂದು ಹೇಳುವಾಗ ಅಣಮುಂ(ಸ್ವಲ್ಪವೂ) ಹಿನ್ನಡೆ ಹೊಂದದೇ ಇರುವುದಕ್ಕೆ ನಿಮಗೆ ಮಣಿಯುತ್ತೇನೆ ಎಂದು ಹೇಳಿದ್ದಷ್ಟೆ.
    ಏನಿಂತು ರಂಗನಾಥಂ-
    ಗೀ ನೋಂಪಿಯೊ ಮೇಣ್ ಗಣೇಶನೊಳಗಹಿತತೆಯೋ!
    ಆನೆಂದು ಕಾಲನೆಳೆದೆಂ
    ಹಾನಿಯದಪ್ಪಂತೆ ನಿಮಗಮೆಂದರಿಯೆಂ ಪೇಳ್! :-);-)

   • ಪ್ರಸಾದ್ ಸರ್, ಮತ್ ಮತ್ ಪಕ್ಷಪಾತ ಮಾಡಿಸಬೇಡಿ,ಪ್ಲೀಸ್ !! ಪದ್ಯದಲ್ಲಿನ ಡಬಲ್ ನೆಗೆಟಿವ್ ನಲ್ಲಿನ ಪಾಸಿಟಿವ್ ಅಂಶ ಗಮನಿಸಿ (ಅದು ಹಿನ್ನೆಡೆಯ ನೆಡೆಯದಿದ್ದುದಕ್ಕೆ ಸಂದ “ಮಣಿತ”)
    ಇದೆಲ್ಲ ಇಷ್ಟದ (ಕಪ್ಪು) ಗಣಿಕೆಹಣ್ಣು ತಂದ ಅವಾಂತರ. ಕಾಶಿಗೆ ಹೋಗಿ ಬಿಟ್ಟು ಬಿಡಬೇಕು !?

 8. ನೆರೆಯಲ್ ತಾರೆಗಳೆಂಬ ಸೈನಿಕಗಣಂ ರಾಜಂ ಸ್ವಯಂ ರಾಜನುಂ
  ಮೆರೆಯಲ್ ನೆತ್ತರನುಂಡು ಕರ್ಪವಡೆದೀ ಶಸ್ತ್ರಂಗಳೇ ಕಳ್ತಲೆಂ-
  -ದೊರೆಯಲ್ ಭೂಮಿಪರಿಂದೆ ವಿಗ್ರಹದೆ ಮಾಡಲ್ಪಟ್ಟುದೀ ವ್ಯೂಹಮೇಂ
  ವರವೀರರ್ಕಳ ಮಸ್ತಕಾಭರಣಮೆಂತಾಭಾಸಿಕುಂ ಬಿಂದುಗಳ್||
  (ಆಕಾಶದಲ್ಲಿ)-ಸೈನಿಕರಾಗಿ ತಾರೆಗಳೂ ರಾಜನಾಗಿ ಚಂದ್ರನೂ ನೆತ್ತರನ್ನು ಉಂಡು ಕಪ್ಪಾದ ಕತ್ತಲೆ ಎಂಬ ಶಸ್ತ್ರಗಳ ಸಹಿತರಾಗಿ ಬಂದಾಗ (ಭೂಮಿಯಲ್ಲಿ)-ಭೂಮಿಪರು ಯುದ್ಧಕ್ಕೆಂದು ರಚಿಸಿದ ವ್ಯೂಹವೇ(ಈ ಚಿತ್ರ)! ವೀರರ ತಲೆಯ ಆಭರಣಗಳ ಹಾಗೆ ಈ ಬಿಂದುಗಳು ಭಾಸಿಸುತ್ತವೆ.

 9. प्रोते मणीनां तदनन्तजाले
  यूथो विदित्वापि गतिं समस्ताम् ।
  प्रत्येकभानं प्रभवेन्न सोढुं
  द्रव्यं यथासौ सहभावमेति ॥

  अन्वयः – तदनन्तजाले प्रोते मणीनां यूथः समस्तां गतिं विदित्वा अपि प्रत्येकभानं सोढुं न प्रभवेत् । (ततः) द्रव्यं यथा असौ (मणिगणः) सहभावम् एति ।
  (ಇಂದ್ರಜಾಲದಲ್ಲಿ ಮಣಿಗಳ ದೃಷ್ಟಾಂತವನ್ನು ಅವಲಂಬಿಸಿ ಈ ಚಿತ್ರಣ. ಆ ಅನಂತಜಾಲದಲಿ ಮಣಿಗಳು ಎಲ್ಲವನ್ನೂ ತಿಳಿದುಕೂಡ — ಪರಸ್ಪರ ಪ್ರತಿಭಾನದಿಂದ ಸರ್ವಜ್ಞ ಮಣಿಗಳು ಎಂಬ ಭಾವ — ಏಕಾಂತಸ್ಥಿತಿಯನ್ನು ಸಹಿಸಲು ಅಶಕ್ತರಾಗಿ ದ್ರವ್ಯವಂತೆ ಒಟ್ಟುಗೂಡಿದರು – ಅಂದರೆ ಬಿಂದುಗಳು ಪರಸ್ಪರ ಸೇರಿ ದೊಡ್ಡ ಬಿಂದುವಂತೆ ಆಗುವವು.)

 10. ಪಿಂದಿನದುಮುಂದಿನದಕಿಂತಚೆಲುವಿಂದಂ
  ಸುಂದರದಲಂಕರಿಸಿಕಣ್ಸೆಳೆಯುತಿರ್ಕುಂ
  ಬಿಂದುಗಳಜೋಡಣೆಗಳಿಂಸೊಬಗನೋಡೈ
  ಚಂದಮಿದುದೈವನಕಾಲಕೃತಿಯುಮಲ್ತೇ

  ಇದು ವನಮಯೂರವಲ್ಲವೇ?

  • Last line Typo corrected: ಚಂದಮಿದುದೈವನಕಲಾಕೃತಿಯುಮಲ್ತೇ

  • ನನಗೆ ತಿಳಿದಂತೆ ವನಮಯೂರವೆಂಬ ಹೆಸರೂ ಇದೆ, ಇಂದುನಂದನವೆಂಬ ಹೆಸರೂ ಇದೆ.

 11. ಆರಂ ಕಂಡೊಡನುಕ್ಕಿತೀ ನಗೆವೊನಲ್ ಕೃಷ್ಣಾಂಗಿಯೊಳ್ಕಾಣೆ,ಮ
  ತ್ತಾರ ಧ್ಯಾನದೆ ಸಂದು, ಪೊಣ್ಮಿತೆನಲೀ ಏಕಾಂಗಿಯೊಳ್ ಭಾಷ್ಪ!- ಹ
  ತ್ತಾರು ಪ್ರಶ್ನೆಗಳಂ ಭಲಾ!ಕಡೆಯುತುಂ ಹೊತ್ತಾರೆ ಮೂಡಿರ್ಪ ಚಿ
  ತ್ತಾರಂ ತಂದಿಹುದಲ್ತೆ ಸದ್ದಿರದೆ ತಾಂ ಸೊಂಪಾದ ಕಾಂತಾಮನಂ!

  • ಸಾರಂ ಪೊಣ್ಮಿಸುತಿರ್ಪ ಭಾವಕಮನೀಯತ್ವಂಗಳಿಂದೊಪ್ಪುಗುಂ

 12. ಹೊಸೆಯೆ ಜೇಡವು ಬಲೆಯ ತಾ ಬೆರಗೊಳೀಬಗೆಯೊ-
  ಳೊಸರುದೀ ಪರವಶದೆ ಬೆಮರಹನಿಯೇಂ ?
  ಹಿಸಿಯೆ ಜಾಲದ ನೆಲೆಯು ತಾ ಬೆದಕಲೀಪರಿಯೊ-
  ಳುಸುರುದೀ ಪರಿತಪದ ಕಂಬನಿಯಿದೇಂ ?

  (ಚಿತ್ರದಲ್ಲಿ ಹನಿದುದು : ಜೇಡ ಉಪಾಯವಾಗಿ ಬಲೆಯನ್ನು ಹೆಣೆಯಲು, ಜಿನುಗಿದ ಬೆವರೋ? ಹೆಣೆದ ಬಲೆಯ ನೆಲೆ ಹರಿದಿರಲು, ವಿವೇಚನೆಯಲ್ಲಿ ವ್ಯಕ್ತವಾದ ಕಣ್ಣೀರೋ?)

  • ಚೌಪದಿಯೊಳಷ್ಟಪದಿಯಂ(ಜೇಡ) ಚಿತ್ರಿಸುತ್ತಿರ-
   ಲ್ಕಾಪದಮದಿಲ್ಲದೆ ಸಸಂದೇಹಮಾಯ್ತು!

   • ಬಂಟsನು ಜೇಡsನು ಕುಂಟನಲ್ಲವsತಾ
    ನಂಟಿsನ ಜೋಡ ಧರಿಸಾನ । ತುಂಟಕಾಣ್
    ಹೊಂಟಾನ ಜಾಡ ಭರಿಸಾಕ ।।

    ಜೇಡsನ ಪಾದsದ ಜಾಡsನ ಹುಡುಕಿsಯೆ
    ನೋಡದಾಪಾದಮಸ್ತಕದೆ । ಮೂಢsನೆ
    ಓಡಾದ ಪಾದ ತೊಡೆಯಾಕ ।।

    * ಮೂಢ = ಮುಗ್ಧ (ಪ್ರಸಾದ್ ಸರ್ ಬೇರೆ ಅರ್ಥ ಹಚ್ಚಿಬಿಟ್ಟಾರು !)

 13. ಜೇಡನಿಳಿಸಿದ ಬಯಲಿನೆಳೆಯೊಳು
  ಸಿಲುಕಿನಿಂತಿಹ ನೀರಹನಿಯೊಳು
  ಬಾಲಭಾಸ್ಕರ ಬಿಂಬ ತುಂಬಿಹ
  ಸಾಲುಹನಿಗಳ ತುಂಬು ಹೊಳಪಿನ
  ಸೌರಬಿಂಬದ ಇಂದ್ರಚಾಪದ
  ಸುಪ್ತವಾಗಿಹ ಸಪ್ತವರ್ಣದ
  ಬಳುಕುತೇಳುವ ಎಳೆಯ ಬೆಳಕಿನ
  ಬಣ್ಣದಾಟದ ನೀರಹನಿಗಳ
  ಸಾಲುಮಣಿಗಳ ನಿಸರ್ಗನರ್ತನ.

  • ಜಯಪ್ರಕಾಶರಿಗೆ ಪದ್ಯಪಾನಕ್ಕೆ ಸ್ವಾಗತ:
   ಇಲ್ಲಿ ನೀವು ಛಂದಸ್ಸನ್ನು ಅಳವಡಿಸಿದಂತೆ ತೋರುತ್ತಿಲ್ಲ. ದಯವಿಟ್ಟು ಪದ್ಯವಿದ್ಯೆ ಪಾಠಗಳನ್ನು ಒಮ್ಮೆ ವೀಕ್ಷಿಸಿ ಮತ್ತೆ ಬರೆಯಿರಿ.. 🙂

  • 1) Your verse is in the ಭಾಮಿನಿ pattern, but without ಊನಗಣ. I am not sure if there is such a type of ರಗಳೆ. It would be better to adapt it to ಭಾಮಿನೀಷಟ್ಪದಿ as shown below.
   2) Your verse is a medley of ಗಜ, ಸಿಂಹ, ಗಜ, ಗಜ, ಗಜ, ಶರಭ, ಸಿಂಹ, ಹಯ and ಗಜಪ್ರಾಸ in that order.
   3) First phase of correction, wherein ಆದ್ಯಕ್ಷರಪ್ರಾಸ is corrected. Please note that all the 1st letters are ಗಜಪ್ರಾಸ and the next letter is not a ಸಂಯುಕ್ತಾಕ್ಷರ (Goes without saying that this last letter of ತ್ರಿಮಾತ್ರಾಗಣ can’t be a ಗುರ್ವಕ್ಷರ):
   ಜೇಡನಿಳಿಸಿದ ಬಯಲಿನೆಳೆಯೊಳು
   ತಾಗಿನಿಂತಿಹ ನೀರಹನಿಯೊಳು
   ಬಾಲಭಾಸ್ಕರಬಿಂಬತುಂಬಿಹ ಹನಿಯ ಗುಂಫನವು|
   ಸೌರಬಿಂಬದ ಇಂದ್ರಚಾಪದ
   ಬೀಳುತೇಳುವ ಎಳೆಯ ಬೆಳಕಿನ
   ಶೋಭೆಯಾಟದ ನೀರಹನಿಗಳ ಸಾಲುನರ್ತನವು||
   4) Second phase of correction, wherein ಆದಿಪ್ರಾಸ is corrected – for ’ಡ’ಕಾರ.
   ಜೇಡನಿಳಿಸಿದ ಬಯಲಿನೆಳೆಯೊಳು
   ಮೂಡಿನಿಂದಿಹ ನೀರಹನಿಗಳು
   ಮೂಡುಬಿಂಬವು ಮೂರ್ಛಗೈದಿಹ ಹನಿಯ ಗುಂಫನವು|
   ಕಾಡಿನೊಳಗಣ ಇಂದ್ರಚಾಪದ
   ತೀಡಿದೀಪರಿ ದಿವ್ಯಬೆಳಕಿನ
   ಖೋಡಿಯಾಟದ ನೀರಹನಿಗಳ ಸಾಲುನರ್ತನವು||
   It can be improved further (some errors persist here) by graduating this way. Keep up your effort. You only need to hone your skills.

   • ಕೂಳುಗಳಿಪ ಕಾಳಕೌಶಲದೆಳೆಯಬಲೆಯೊಳು
    ಸಿಲುಕಿ ನಿಂದಿಹ ನೀರಹನಿಗಳ ಗೋಳಗನ್ನಡಿ
    ಸಾಲುಸಾಲಲಿ ಬಿಂಬ ರೂಪದಿ ಬಾಲಭಾಸ್ಕರ ಬಂದಿ ಬಲೆಯಲಿ
    ಮಂದಮಾರುತ ಮುತ್ತನಿಕ್ಕಲು ಬಿಂಬ ಭಾಸ್ಕರ ಭಯದಿ ನಡುಗಲು
    ಭಾರಿಬೇಟೆಯ ಕವಳದಾಸೆಗೆ ಜೇಡನಿಳಿದನು ಎಳೆಯ ಜಾಡಲಿ
    ಹಿಡಿಯಲೇನಿದೆ ಕಾಳಗೋಳಿನ ನೀರಹನಿಗಳಜೊಳ್ಳುಗನ್ನಡಿ
    ಕಾಳಕೌಶಲ ಗೋಳಗನ್ನಡಿ ಬಿಂಬಭಾಸ್ಕರ ಮಂದಮಾರುತ
    ಶಬ್ದ ಬಿಂಬಿತ ಭಾವಚುಂಬಿತ ಅರ್ಥಗರ್ಭಿತ ಸ್ವಛ್ಛಂದ ಸರಳಗಬ್ಬಂ.

 14. ಇನನರ್ಧಂ ವಿಧುಛಾಯೆಯಿಂದೆ ಸೊರಗಲ್ಕಾಂ ಕಂಡೆನಾಂ ಕಂಡೆನೆಂ-
  ದೆನೆ ಸೊರ್ಕಿಂ ಗಡ ಪೇಳೆ ಮಂದಿ ಪಥದೊಳ್ ವಾತಾಯನಕ್ಕಾಂತ ತ-
  ನ್ನಿನಿಯಳ್ ಗರ್ಭದ ಕೂಸಿನೇಳ್ಗೆಗೆನುತುಂ ನಿರ್ಲಕ್ಷಿಸಲ್, ನೀರಿನಿಂ
  ದಿನಿಯಂ ಸೇಚಿಸೆ ತಂತುಜಾಲದೊಳಮೀ ಭವ್ಯಾದ್ಭುತಂ ಸಂದುದೇಂ?

  ಸೂರ್ಯನ ಅರ್ಧಭಾಗವನ್ನು ಚಂದ್ರನ ಛಾಯೆ ಸೊರಗಿಸಲು (ಸೂರ್ಯಗ್ರಹಣವಾಗಲು)… ನಾನು ಕಂಡೆ ನಾನು ಕಂಡೆ ಎಂದು ಬೀದಿಯ ಜನರು ಹೇಳಲು ಕಿಟಕಿಯನ್ನು ಒರಗಿ ಗರ್ಭದಲ್ಲಿರುವ ಮಗುವಿನ ಯೋಗಕ್ಷೇಮಕ್ಕೆ (ಹೊರಗೆ ಹೋಗದೆ ಗ್ರಹಣವನ್ನು) ನಿರ್ಲಕ್ಷಿಸಲು. ಅವಳ ಇನಿಯನು (ಅಲ್ಲೇ ಇದ್ದ) ಜೇಡರಬಲೆಯ ಮೇಲೆ ನೀರನ್ನು ಸಿಂಪಡಿಸಿದಾಗ ಈ ಭವ್ಯಾದ್ಭುತವಾಯಿತೆ?

  (ಒಟ್ಟು ಬಲೆಯ ಮೇಲಿನ ಹನಿಗಳಲ್ಲಿ ಗ್ರಹಣದ ಬಿಂಬ ಕಂಡಿತೆಂಬುದು ಸಾರಾಂಶ 🙂 )

  • ಸೋಮ idea ಸಕ್ಕತ್ತಾಗಿದೆ, ಆದರೆ ಎರಡನೇ ಪಾದದಲ್ಲಿ ಸೊಕ್ಕಿಂದ ಹೇಳಿದರು ಅಂತ ಏಕೆ ಹೇಳಿದುದು? ನಾ ಕಂಡೆ ನಾ ಕಂಡೆ ಅಂತ ಹಾಗೆಯೇ ಸಂತೋಷದಿಂದ ಹೇಳ್ಬಹುದು ಅಲ್ವಾ?

  • ಪ್ರಿಯ ಸೋಮ, ನಿನ್ನ ಪದ್ಯ ಸೊಗಸಾಗಿದೆ. ಆದರೆ “ವಿಧು + ಛಾಯೆ = ವಿಧುಚ್ಛಾಯೆ” ಎಂದಾಗಬೇಕು. ಹೀಗಾಗಿ ತಿದ್ದುಪಡಿ ಅವಶ್ಯ. ಹೀಗೆ ಮಾಡಿದರೆ ಛಂದಸ್ಸು ಕೆಡುವುದು. ಆದುರರಿಂದ ನೀನೇ ಯುಕ್ತರೀತಿಯಲ್ಲಿ ತಿದ್ದಿಕೋ:-)

  • ಸೊಗಸಾದ ಕಲ್ಪನೆ:-)

 15. ದಾನವ ಮೇಘಂಗಂಜುತೆ
  ತಾನೆತ್ತರಿಲುಗಳಕಟ್ಟಿ ಬಂಧಿಸೆ ನಿಶೆಯುಂ
  ಬಾನೊಳ್ ನಲಿದಾಡ್ವ ಘಳಿಗೆ
  ನೂನಗೊಳಲ್ನಗೆಯು ಬತ್ತಿತೇಮವರುಗಳೊಳ್!

 16. ಇರುಳು-ಹಗಲುಗಳ ಸಂಧ್ಯಾ(ವಿವಾಹ)ಸಮಯದಲ್ಲಿ ಇರುಳೆಂಬ ಕೃಷ್ಣಸುಂದರಿಗೆ ಕಟ್ಟಿದ ಬಾಸಿಂಗವೆ?

  ಸಂಧ್ಯಾಸಮಯದೊಳುದ್ವಹ(wedding)-
  ಶುಂಧ್ಯಂ(radiance) ಜರುಗಲ್ ಸದಾ ಪಗಲಿರುಳ ನಡುಮಂ|
  ಸಾಂಧ್ಯ(union)ದೊಳಿರುಳ್ವಧುವಿಗಂ
  ಬಂಧ್ಯಂ ಮುತ್ತಿನದಿದಲ್ತೆ ಮಣಿಬಾಸಿಂಗಂ||

 17. ಅಪ್ಪಳಿಸುತ್ತಿರ್ಪುವಲಾ
  ಕೊಪ್ಪಲತೋಟನ ಪ್ರತಿಕ್ರಿಯಾಪದ್ಯಂಗಳ್|
  ಸಪ್ಪೆಯೆನಿಸದ ಕವಿತ್ವದ
  ಕಪ್ಪಂ ವಾಗ್ದೇವಿಗೀಯುವವಧಾನಮಿದೇಂ?

  • ತಪ್ಪದೆ ನಿಮ್ಮಿಂ ಕಲಿತುದ-
   ಕೊಪ್ಪುವತೆರದಿಂದೆ ಬರೆಯದಿರ್ದೊಡೆ ಫಲಮೇಂ
   ಹಪ್ಪಳಸಂಡಿಗೆಗಳ ಜೊತೆ-
   ಗುಪ್ಪಿನಕಾಯಿಯುಮಿರಲ್ಕೆ ಭೋಜನಕಂದಂ||

  • ಹೌದು ಗಣೇಶ್ ಸರ್, ಅದು G.K ತೋಟ !!(A.K 47 ಥರ) – ಮೇಲೆ ನೋಡಿದೆವಲ್ಲ ಯುದ್ಧದ ವರ್ಣನೆ

 18. ಒಳ್ಳೊಳ್ಳೆಯ ಪದ್ಯಗಳು ಬರುತ್ತಿವೆ; ಅಧಿಕೋತ್ಸಾಹದಿಂದ ಪಾಲ್ಕೊಳ್ಳುತ್ತಿರುವ ಎಲ್ಲರಿಗೂ ಅಭಿನಂದನೆಗಳು. ತಡವಾಗಿಯಾದರೂ ನನ್ನದೊಂದು ಪದ್ಯ:

  ಪರಿಸರಮಾಲಿನ್ಯಕ್ಕೆಡೆ-
  ಯಿರಿಸದ, ಮೇಣ್ ದುಂದುವೆಚ್ಚಮೆನಿಸದ, ನಿಚ್ಚಂ|
  ಮುರಿಯಿಸಿ ಮೂಡಿಪ ಸುಕರತೆ-
  ಗೆರವಾಗದ ಹಾರಮಿದುವೆ ತಿರೆಗುಪಹಾರಂ||

  (ಇಬ್ಬನಿಗಳ ಮಣಿಗಳು ಜೇಡನ ಎಳೆಗಳಲ್ಲಿ ಕೋದುಕೊಂಡ ಪರಿಯು ಎಂಥ ಒಳ್ಳೆಯ ಹಾರವಾಗಿ ಈ ಭೂಮಿ(ತಿರೆ)ಗೆ ಸಂದ ಉಡುಗೊರೆ(ಉಪಹಾರ)ಯೆನಿಸಿದೆಯೆಂಬ ಕಲ್ಪನೆ ಇಲ್ಲಿದೆ.)

  • ಭೂಮಿಯಾದರೋ,
   ಬೇಡಮೆನಗಮಾ ಹಾರಂ
   ಬೇಡುವೆ ಬಾಯಾರಿ ಮಾತ್ರಮಾ ಬಿಂದುವಿಗಂ|
   ಜೇಡನೆ ಸೆಳೆಕೊಳ್ ಜಡೆಯಂ
   ಕೂಡಲಿ ಹನಿನೀರು ತಾನುಮೆನ್ನಯ ಮಡಿಲಂ||

  • ಆರಿತ್ತರ್ ಮೇಣ್ ಚೆಲ್ವಿನ
   ಹಾರಮನೀ ಧರೆಗೆ ಕಾಣ್ಬೊಡದರಿಂದೇಂ ದಲ್!
   ಸಾರಮನೊಂದಿದ ಕವಿತೆಯ
   ಹಾರಂ ತಾನೊಪ್ಪುತಿರ್ಕುಮಿದು ನುಡಿವೆಣ್ಗಂ||

  • ಅನ್ಯೋನ್ಯದೀ ಪರಿ-ಸರದೆ
   ಧನ್ಯರು ನಾವ್ ಪಡೆದನನ್ಯದೀ ಪರಿ-ಹಾರಂ !!

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)