Nov 172014
 

ಶಿಲ್ಪಿಯ ಕಡೆಯ ಉಳಿಯ ಪೆಟ್ಟಿಗೆ ಕಾಯುತ್ತಿರುವ ಶಿಲ್ಪದ ಭಾವ

  73 Responses to “ಪದ್ಯಸಪ್ತಾಹ ೧೨೫: ವರ್ಣನೆ”

 1. ಕಲ್ಲು ತೊತ್ತಡಿಯ ತುಚ್ಛ ಜನ್ಮಕಿಂ
  ದಿಲ್ಲಿ,ಪೆಟ್ಟಿನೊಳಗಂತ್ಯ ವಂದುದೇಂ?
  ತಲ್ಲಣಂ! ಕಡೆಯ ಸಾವಿನೀಕ್ಷಣಂ
  ಸಲ್ಲುಗುಂ ಶುಭವದೆಂಬ ಹಂಬಲಂ

  ಶಿಲೆಯೆಂದೆನ್ನಂ ತುಳಿಯದೆ
  ಛಲದಿಂದೆನ್ನಲತಿತೇಜಮಂ ತುಂಬುತಿರಲ್
  ಕಲೆಗಾರಂ ಗುರುವಲ್ತೇ?
  ನಲವಿಂದೀವೊಂದು ಪೆಟ್ಟೆನಗೆ ವರಮಲ್ತೇ?

  • ಛಲದಿಂದೆನ್ನೊಳತಿತೇಜಮಂ…
   ಕಡೆಯ ಸಾಲಿನಲ್ಲಿ ’ಈವಂತ’ವನ್ನು ಸವರಿಸಿ.

   • “ನಲವಿಂದೀವೊಂದು ಪೆಟ್ಟೆನಗೆ ವರಮಲ್ತೇ”
    ಎಂದರೆ ಸರಿಯಾದೀತು.ಉಳಿದಂತೆ ಪದ್ಯಗಳೆರಡರ ಭಾವ-ಬಂಧ ಸೊಗಸಾಗಿವೆ. ಅಲ್ತೇಂ ಎಂದಲ್ಲಿ ಮತ್ತೆ ಏಂ ಎಂಬ ಪ್ರಶ್ನಾರ್ಥಕವು ಬರುವುದರಿಂದ ಅದು ಇಲ್ಲಿ ಅನಪೇಕ್ಷಿತ.

    • ಧನ್ಯವಾದಗಳು.
     ಸಾಲಿನಲ್ಲಿ ತಿದ್ದುಪಡಿಯನ್ನು ಮಾಡಿಕೊಂಡಿರುವೆ.

 2. ಸೆಣೆಸಲ್ ಸ್ಪರ್ಧೆಯನೀಕ್ಷಿಸಿ
  ಕಣದೊಳ್ ಕಾಯುತ್ತೆ ಕೂರ್ವ ಧಾವಕನೆಂಬೊಲ್
  ಗುಣಮಂ ತೋರಲ್ ಜಗಕಾ
  ಚಣಮಂ ಕಾಯ್ದಪುದೆ ಶಿಲ್ಪಮುಳಿಪೆಟ್ಟೆನುತುಂ

  Sculpture is waiting for the last stroke to showcase its value to the whole world like a runner waiting on the starting point in a lane waiting for the gunshot to showcase his might

  • ಉಳಿಪೆಟ್ಟು ಬಿದ್ದಿಹುದು ಶಿಲ್ಪಕಾದೊಡಮೆಂತೊ
   ನಳನಳಿಸಿ ಜೀವಂತಿಕೆಯಿನಿಂದಿರಲ್|
   ನಳಿಕೆಯಿಂ ಪೊರಮಟ್ಟ ಗುಂಡು ತಾಗಲು ಪಟುವ
   ಹೆಳವನಾಗನೆ ಸಾಯದುಳಿದುಕೊಳ್ಳಲ್|| 🙂

  • ಪದ್ಯ ಚೆನ್ನಾಗಿದೆ. ಧಾವಕನಂಬೋಲ್ ಎಂದರೆ ಸಾಧುರೂಪವಾಗುವುದು.

 3. ಗೋಡೆಯೊಳಗೆನ್ನನುಂ ಹುದುಗಿಸುಗೆ ಕಡೆದು ನೀಂ
  ತೀಡುವೆಯ ಕಡೆಯ ಉಳಿಪೆಟ್ಟಿನಿಂದಂ|
  ತೋಡಿಕೊಳ್ಳಲಿ ಬೆತೆಯ ನಾನಾರೊಳಗೆ ಪೇಳು
  ರಾಡಿಯಾಗುಳಿಸಿರುವೆ ಬೆನ್ನನೆಂದುಂ|| 🙂

 4. ಅಳಲದೇತಕೆ ಗೆಳೆಯ ತಡೆಯ, ಕಾಣದೊ ಕಡೆಯ
  ನುಳಿಯನಿತ್ತಿಹ ಕಾಲಕಲ್ಪಮತಿಯುಂ ।
  ಉಳಿಯಪೆಟ್ಟನು ಪಡೆದು ಕಳೆದು ಬೇಡದ ಶಿಲೆಯ
  ನುಳಿವುದಪ್ಪಟ ಕಡೆದ ಶಿಲ್ಪ ಕೃತಿಯುಂ ।।

 5. ಮಾತ್ರಾಸೀಸಪದ್ಯ||
  ಶತಶತಕದಂಚಿನೊಳ್ ಚರಮಧಾವನಕೆಂದು (ಚರಮಧಾವನ = Final run)
  ಸಂದಿರ್ಪ ದಾಂಡಿಗನ ದೀಕ್ಷೆಯಂತೆ
  ನಿಜಶಿಖಾಬಂಧನಕ್ಕೆಂದು ಮುಂದಾಗಿರ್ಪ
  ಚಾಣಕ್ಯನಾರ್ಷೇಯಚಿತ್ತದಂತೆ
  ಭೂಮಕಾವ್ಯಾಂತದೊಳ್ ಚರಮಪದ್ಯಮನೊರೆಯ-
  ಲಿರ್ಪ ಸತ್ಕವಿಯ ಕಲ್ಪನೆಯ ಪಾಗಿಂ
  ತುಲಸೀದಳಾಗ್ರದಿಂ ಕೃಷ್ಣನಂ ತೂಗಲ್ಕೆ
  ಬಂದಿರ್ಪ ರುಕ್ಮಿಣಿಯ ಬಗೆಯ ಬಲ್ಪಿಂ
  ಶಿಲ್ಪಿವರನಂತಿಮಾನಂದಟಂಕಹತಿಗಂ
  ಮೂರ್ತಿ ಮೆಯ್ವೆತ್ತು ನಿಂದತ್ತು ಮಹತಿಗೆಂದು|
  ಜನ್ಮಜಾಲಂಗಳಿಂ ಪಾರುಗೊಂಡು ಜೀವ-
  ನ್ಮುಕ್ತಿಗೆಳಸಿರ್ಪ ಜೀವನೆಂಬಂತೆ ಭವ್ಯಂ||

  • ಆ ಕ್ರಿಕೆಟ್ಟಾಟದಿಂ ಕೃಷ್ಣಕಥೆಯವರೆಗೆ
   ಚಕ್ರದಂತಿಲ್ಲಿ ಸುತ್ತುತ್ತೆ ಪೋಪ ಕವನಂ
   ವಕ್ರಮಾರ್ಗಕ್ಕೆ ಶೀರ್ಷಕಂ ಶಿಖಿಯೆ ನರ್ತಿ-
   ಪ ಕ್ರಮಕೆ ವರ್ಷದಂತೆಯ್ದು ತೋರ್ದುದಲ್ತೇ!!

  • ಸರ್ ,
   ”ತುಲಸೀದಳಾಗ್ರದಿಂ ಕೃಷ್ಣನಂ ತೂಗಲ್ಕೆ
   ಬಂದಿರ್ಪ ರುಕ್ಮಿಣಿಯ ಬಗೆಯ ಬಲ್ಪಿಂ” ಎಂಬದು
   ತೆಲುಗು ಸಾಹಿತ್ಯದಿಂದ ಆಯ್ಕೆ ಮಾಡಿಕೊಂಡಿರುವ ಸಾಲುಗಳೇ ? ಹಿಂದೊಮ್ಮೆ ಪ್ರಸಾದ್ ಸರ್ ”ಸಿರಿ ವೆನ್ನೆಲ” ಎಂಬ ಚಲನ ಚಿತ್ರದ ಹಾಡಿನ ಸಾಲುಗಳನ್ನು ಪದ್ಯ ಬರೆಯಲು ಉಪಯೋಗಿಸಿದ್ದಾಗಿ ಉಲ್ಲೇಖಿಸಿದ್ದರು . ಆದ್ದರಿಂದ ಕುತೂಹಲ… 🙂

   • ಈ ಬಾರಿಯೂ ಒಂದಷ್ಟು ತೆಲುಗು-ಉದ್ಧರಣವಿದೆ. ಸಂಖ್ಯೆ 21 ನೋಡಿ.

   • ನಾನು ನನ್ನ ಹಲವು ಕಲ್ಪನೆಗಳಿಗಾಗಿ, ಗೀತ-ನೃತ್ಯ-ನಾಟ್ಯಪ್ರಯೋಗಗಳ
    ಸಂದರ್ಭದಲ್ಲಿ, ಭಾರತೀಯಸಂಸ್ಕೃತಿಯ ಅನೇಕಮುಖಗಳನ್ನು ಅರಿಯಲು ಚಲನಚಿತ್ರಗಳಿಂದ (ಮುಖ್ಯವಾಗಿ ತೆಲುಗುನುಡಿಯಲ್ಲಿರುವ ಅಭಿಜಾತಚನಚಿತ್ರಗಳಿಂದ) ಸ್ಫೂರ್ತಿ ಪಡೆದದ್ದುಂಟು. ಆದರೆ ಈ ಪದ್ಯವು ಸರ್ವಥಾ ನನ್ನ ಸ್ವಂತದ ಕಲ್ಪನೆ. ಮುಖ್ಯವಾಗಿ ನಾನು ಶ್ರೀ ಸಿರಿವೆನ್ನೆಲ ಸೀತಾರಾಮಶಾಸ್ತ್ರಿಗಳ ಹಾಡುಗಳಿಗಿಂತ ಶ್ರೀ ವೇಟೂರಿ ಸುಂದರರಾಮಮೂರ್ತಿಯವರ ರಚನೆಗಳನ್ನು ಹೆಚ್ಚಾಗಿ ಮೆಚ್ಚುವೆ. “ಸಿರಿವೆನ್ನೆಲ” ಚಿತ್ರದಲ್ಲಿ ನನ್ನ ಮನಮುಟ್ಟಿದ ಹಾಡೆಂದರೆ “ವಿಪಂಚಿನೈ ವಿರಚಿಂಚಿತಿನಿ…” ಹಾಗೂ ಕೆಲಮಟ್ಟಿಗೆ “ಆದಿಭಿಕ್ಷುವು…” ಮಾತ್ರ.
    ಈ ಮುನ್ನ ಪ್ರಸಾದು ಅವರು ಹೀಗೆ ಹೇಳಿದ್ದಲ್ಲಿ ಅದು ಕೇವಲ ಪ್ರಾಮಾದಿಕ. ಅವರ ಅಭಿಪ್ರಾಯಕ್ಕೆ ನನ್ನ ಸಂಮತಿ ಇಲ್ಲ. ಏಕೆಂದರೆ ಅದು ಅವರ ಕಲ್ಪನೆಯೇ ಹೊರತು ವಾಸ್ತವವಲ್ಲ.

    • ಸರ್,
     ಧನ್ಯವಾದಗಳು . ಶತಾವಧಾನಿಗಳ ಪದ್ಯದಲ್ಲಿ ಇದನ್ನು ನೋಡಿ ಬಹಳ ಆನಂದವಾಯಿತು . ೨ ವರ್ಷಗಳ ಮೊದಲು ನಮ್ಮ ಭಾಷೆಯಲ್ಲಿ ನಾನು ಇದೇ ಸಾಲುಗಳ ಅರ್ಥವಿರುವ ವಾಕ್ಯವನ್ನು ಒಂದು ಲೇಖನಕ್ಕೆ ನನ್ನ ಅಭಿಪ್ರಾಯವಾಗಿ ಬರೆದಿದ್ದೆ .ಪುರಾಣ ಕಥೆಯ ಆಧಾರದಲ್ಲಿ ಉದಾಹರಿಸಿದ್ದೆ . ಅವಧಾನಿಗಳೂ ಕಥೆಯ ಅದೇ ಉದಾಹರಣೆಯನ್ನು ಕೊಟ್ಟಿರುವುದರಿಂದ ನಮ್ಮ ಮಾತೃ ಭಾಷೆಯ ಭವಿಷ್ಯವು ಉಜ್ವಲವಾಗಲಿದೆ ಎಂಬ ಸಂತೋಷ ..:-) ಈಗ ಆ ವಿಷಯದಲ್ಲಿ ಕುತೂಹಲ ಉಳಿದಿಲ್ಲ . ಅದರ ಲಿಂಕ್ … http://oppanna.com/oppa/bhavane-sambhavane/comment-page-2#comments ನಮ್ಮ ಭಾಷೆ ಕನ್ನಡ ಓದಲು ತಿಳಿದವರಿಗೆ ಅರ್ಥ ಆಗಬಹುದು …. ಇತರರೂ ಅದನ್ನು ಓದಿದರೆ ಸಾಹಿತ್ಯದ ಮಟ್ಟವನ್ನು ಇನ್ನೂ ಉತ್ತಮಗೊಳಿಸುವ ಸಾಧ್ಯತೆ ಇದೆಯಲ್ಲವೇ ?

 6. ಕೋಮಲಾನನೆ ಪಂಕಜಂ ಮಿಡಿವಂದದಿಂ ಮುದವಿತ್ತಗಂ
  ತಾಮಸಂ ಹೊರಸೂಸುತಂ ಜಗದಾರ್ಕನೊಂದೆಳೆ ರಶ್ಮಿಗಂ,
  ನೇಮದಿಂ ವರಶಿಲ್ಪಿ ತಾಂ ಹಿತಕಾಯವಂ ಸವಿಕೂರ್ಮೆಯಿಂ
  ಜಾಮವೊಂದರೊಳೀವುದಂ ಶಿಲೆಬಾಲೆಯೊಳ್ಮನ ಬೇಡದೇ?

  • ಕಾಡ್ವೊಡೆ (ಅಸಾಧುರೂಪ; ಇದು ಕಾಡುವೊಡೆ ಎಂದೇ ಅಗಬೇಕು), ಹಿತಮಾಟ (ಆರಿಸಮಾಸ)

   • ಸರ್,ಈಗ ,ಮಿಡಿವಂದದಲ್(ತಡಕಾಡ್ವೊಡೆ),ಹಿತಕಾಯ(ಹಿತಮಾಟ) ವೆಂದು ಸವರಣೆಯನ್ನು ತಂದಿದ್ದೇನೆ. ಇದು ಸರಿಯೆಂದು ಭಾವಿಸಿದ್ದೇನೆ .ಧನ್ಯವಾದಗಳು.

 7. ಮರುಪೆಟ್ಟುಗಳ ಪಡೆಯುತುಂ
  ಬೆರೆತಿರ್ಪುದುಶಿಲೆಯುಶಿಲ್ಪಿಯುಳಿಯೊಡನೆಯೊಳಿ-
  ನ್ನಿರದೀಬಂಧಮಿದಕೆ ಮುಂ
  ಬರುವಂತ್ಯಸ್ಪರ್ಷಮೆಲ್ಲದಕು ಮಿಗಿಲಾಯ್ತಯ್|

  ಶಿಲೆಯು ಎಷ್ಟೋ ಪೆಟ್ಟುಗಳನ್ನು ಪಡೆದು, ಉಳಿಯೊಂದಿಂಗೆ ಸ್ನೇಹ ಸಂಬಂಧವಾಗಿ, ಕಡೆಯ ಪೆಟ್ಟಿನ ನಂತರ ಇವರಡೂ ಬೇರೆಯಾಗುವ ಕಾರಣ ಇದುವರೆಗೂ ಕೊಟ್ಟ ಹೊಡೆತಕ್ಕಿಂತ ಈ ಕಡೆಯದು ಭಾವನೆಯ ದೃಷ್ಟಿಯಿಂದ ಮಿಗಿಲಾದುದು…

  ಇಲ್ಲಿ ಹೇಳಿದಷ್ಟನ್ನೂ ಮೇಲಿನ ಪದ್ಯದಲ್ಲಿ ತೋರಪಡಿಸಲಾಗದಿದ್ದಕ್ಕಾಗಿ ಕ್ಷಮೆ ಕೋರುತ್ತೇನೆ.

 8. ಕಾದಿರುವೆನೊಮ್ಮತದಿ ಸಹಿಸಿ ನೋವುಗಳನಾ
  ನೀದಿನವೆ ಕಡೆಯ ಪೆಟ್ಟಿಡುಮೆನ್ನುತ|
  ಖೇದಮೇಕಿರ್ಪುದಿನ್ನರ್ಧಮೇ ಭಾಗ ಚೆಂ
  ದಾದ ರೂಪವೆ ನಿಳ್ಪೆ ತಾಳು ಶಿಲೆಯೆ|

  ಶಿಲೆಯು ಪ್ರತಿದಿನವೂ ಕಡೆಯ ಪೆಟ್ಟಿನ ನಿರೀಕ್ಷಣೆಯಲ್ಲಿದೆ.. ಆದರೆ ಆ ಕಡೆಯ ಪೆಟ್ಟು ದೊರೆವುದೆಂತು ಎಂದು ಶಿಲ್ಪಿಗಲ್ಲದೆ ಶಿಲೆಗೆ ತಿಳಿಯದು..

  • ಭಾವ ತುಂಬ ಚೆನ್ನಾಗಿದೆ; ಭಾಷೆ ಸ್ವಲ್ಪ ಹದವಾಗಬೇಕಿದೆ.

 9. ಪ್ರಿಯಂವದಾ||
  ಕಡೆಯದೇಂ(last) ನಡುವ ಪೆಟ್ಟದೇಂ ಗಡಾ?
  ಕಡೆವನೇಂ ಶಿಲೆಯೊಳಾತ ಶಿಲ್ಪಮಂ?
  ತೊಡೆದು ಶಿಲ್ಪಕಮರಿರ್ಪ ಕಲ್ಲನುಂ
  ಬಿಡಿಸುವನ್ ಸೆರೆಯೊಳಿರ್ಪ ದೇವನಂ/ದೇವಿಯಂ/ದೈವಮಂ||

 10. ಪುಟ್ಟು ವೆಟ್ಟಿನ ತುದಿಗೊ, ಕಟ್ಟೆ ಕೆರೆಗಳ ಬದಿಗೊ, ನಟ್ಟಕಾಡೊಳಗಾಯ್ತೊ ಬಲ್ಲರಾರೋ!
  ಬಟ್ಟೆಗಾಣದೆ ನಿಂತ ಮೂಢನಂದದೊಳಲ್ಲಿ ಕೆಟ್ಟು ನಿಂತಿತ್ತೇನೊ ವರ್ಷಶತದಿಂ
  ಕೆಲದೊಳಿರ್ಪೆಲ್ಲ ಕಲ್ಗಳಿಗಿಂತ ಪೆರ್ಚಿರ್ಪ ಭಾಗ್ಯವಶದಿಂದೆಯ್ದುದಿಂದು ಶಿಲೆಯು
  ಪಡೆಯುತಿರ್ಕುಂ ಮೂರ್ತಿರೂಪಮಂ ಶಿಲ್ಪಿಯೊರ್ವನ ಹಸ್ತಲಾಘವದಿನಂತು ಪೇಳಲ್

  ಕಟ್ಟಕಡೆ ಪೆಟ್ಟಿಗೆಂದು ಕಾಯುತ್ತಿರಲ್ಕೆ
  ಉಳಿಯ ಮೊನಚ ಸಂಸ್ಪರ್ಶಮುಂ ಮೃದುಲಮಾಯ್ತೈ
  ಕವಿಯೆ ಸೃಷ್ಟಿಸಿರ್ಪಾ ಕೃತಿಗೆ ಜೀವಮೀಯಲ್
  ಕೊನೆಯ ಸ್ಪರ್ಶಮಂ ಮಾಳ್ಪಂತೆ ತೋರ್ದುದಲ್ತೆ!

  • ’ಬಟ್ಟೆಗಾಣದೆ ನಿಂತ ಮೂಢನಂದದೊಳಲ್ಲಿ ಕೆಟ್ಟು ನಿಂತಿತ್ತೇನೊ ವರ್ಷಶತದಿಂ’
   ಯೂರೋಪಿನೆಷ್ಟೊ ಶಿಲ್ಪಗಳಿದಕ್ಕಪವಾದ
   ನಾರಿ-ಪುರುಷರು ನಗ್ನರೂಪರಲ್ತೆ|
   ಆರ ನೀಂ ಮೂಢನೆಂದೆಂಬೆ ಆ ಈರ್ವರೊಳು
   ಚಾರುಶಿಲ್ಪಮನೊ ವರಶಿಲ್ಪಿಯನ್ನೋ? 🙂

   • ಒಳ್ಳೆಯ ಕಲ್ಪನೆ ಮತ್ತು ರಚನೆ; ಅಭಿನಂದನೆಗಳು.
    ಪ್ರಸಾದು ಅವರು ಬಟ್ಟೆಗೆಟ್ಟಂತಿದೆ!! 🙂
    ಆದರೆ ಅವರ ಚಮತ್ಕಾರ ಮಾತ್ರ ತುಂಬ ಚೆನ್ನಾಗಿದೆ. ’ಬಟ್ಟೆ’ ಪದದ ಶ್ಲೇಷವನ್ನೂ ಐರೋಪ್ಯಶಿಲ್ಪಗಳ ಬಟ್ಟೆಗೆಟ್ಟಿರುವಿಕೆಯನ್ನೂ ಸೊಗಸಾಗಿ ಬಳಸಿಕೊಂಡಿ(ದಿ)ದ್ದಾರೆ.

 11. ಅಂತಿಮಟಂಕಾಹತಿಯಿ-
  ನ್ನೆಂತಪ್ಪುದೊ? ಭಿನ್ನಮಾಗಳಶಿವಮೆನಿಪೆನೋ?
  ಕಾಂತಮೆನಲ್ ಜಗತೀನತಿ-
  ಯುಂ ತೀವುದೊ ಎನ್ನೊಳೆಂದು ಶಿಲ್ಪಂ ಬಗೆಗುಂ||

  ( ನಿರ್ಣಾಯಕವಾದ ಈ ಕೊನೆಯ ಉಳಿಯ ಪೆಟ್ಟಿನಿಂದ ನಾನು ಒಂದೋ ಭಿನ್ನಗೊಂಡು ಎಲ್ಲರಿಗೂ ಅಮಂಗಳಮೂರ್ತಿಯಾಗಿ ಅಳಿದೇನು ಅಥವಾ ಸರ್ವಲೋಕಾರಾಧ್ಯವಿಗ್ರಹವಾಗಿ ಮೆರೆದೇನು ಎಂದು ವಿಗ್ರಹವು ಕಳವಳಿಸುತ್ತದೆ)

  ಇನ್ನೆವರಮುಳಿಯ ಪೆಟ್ಟುಗ-
  ಳೆನ್ನೊಳಗೆನಿತಾದುವಿಲ್ಲಮಂಜಿದೆನಿಲ್ಲಂ|
  ಬನ್ನಂಬಟ್ಟಿಲ್ಲೀತನು-
  ಮಿನ್ನೇತಕೊ ನಾನುಮವನುಮಳುಕಿರ್ಪೆವಲಾ!!

  (ಇಲ್ಲಿಯವರೆಗೂ ಎಷ್ಟೋ ಉಳಿಪೆಟ್ಟುಗಳನ್ನು ನಾನೂ ಕೆಚ್ಚಿನಿಂದ ಎದುರಿಸಿದ್ದೇನೆ; ಈ ಶಿಲ್ಪಿಯೂ ನಿಸ್ಸಂಕೋಚವಾಗಿ ನೀಡಿದ್ದಾನೆ. ಆದರೆ ಇದೀಗ ಈ ಕೊನೆಯ ಉಳಿಪೆಟ್ಟಿನ ಹೊತ್ತಿಗೆ ನಮ್ಮಿಬ್ಬರಿಗೂ ಅದೇಕೆ ಯಾವುದೋ ಕಾಣದ ಅಳುಕು-ಆತಂಕಗಳು ಮೂಡಿವೆಯಲ್ಲಾ ಎಂದು ಮೂರ್ತಿಯ ಸ್ವಗತ)

  • ಶಿಲ್ಪಿಯಾದರೋ,
   ಮುಕ್ಕಾಗೆ ಶಿಲ್ಪಮೆಂದುಂ
   ಪಕ್ಕೇಂ ಶಿಲ್ಪಿಯು ನಿರಾಶೆಗಂ? ಕಾಣುತ್ತುಂ|
   ಪಕ್ಕೆ-ವೆರಲ ದೋಷಮನುಂ
   ತಕ್ಕುದೆ ಸಲ್ತೆಂದೆನುತ್ತೆ ಮಗುಳಿಂ ಕಡೆವಂ|| 🙂

   ಎರಡನೆಯ ಪದ್ಯದಲ್ಲಿ ’ಈತನು’ ಹಾಗೂ ’ಅವನು’ ಪುನರುಕ್ತಿಯಾಯಿತೆ? ಅಥವಾ, ’ಇಲ್ಲೀತನಂ’ ಎಂದರೆ ’ಇಲ್ಲಿಯವರೆಗೆ’ ಎಂದಾಗುತ್ತದೆಯೆ?

   • ಇಲ್ಲ, ಇಲ್ಲಿ ಪುನರುಕ್ತಿಯಿಲ್ಲ. ಪುನರುಕ್ತಿಯೆಂದರೆ ಒಂದೇ ಪದದ ಅನಪೇಕ್ಷಿತಪ್ರಯೋಗ. ಪ್ರಕೃತದಲ್ಲಿ ಹಾಗಿಲ್ಲ; ಮಾತ್ರವಲ್ಲ, ಇಂಥ ಪದಗಳೆರಡಿಲ್ಲದೆ ಪದ್ಯದ ಅರ್ಥವು ಸ್ಪಷ್ಟವಾಗದು. ಜೊತೆಗೆ ಅಪ್ರತೀತ ಎಂಬ ಮತ್ತೊಂದು ಕಾವ್ಯದೋಷವೂ ಬಂದೆರಗುವುದು!

 12. स्पर्शतः स महिलां शिलीकृतां
  केवलं किल मुमोच राघवः |
  स्त्रीकृतैव भवतास्त्यिसौ शिला
  नौमि कौशलमहं पितः तव ||

  Statue is imagined thinking:

  Rama’s touch only succeeded in liberating a petrified woman. However, yours has verily turned this rock into a lady. Father! I bow to your skill.

  • The poem is nice to an extent. But the second half has to be completely changed wrt both shabda and artha i.e., in terms of grammar and import it has to be modified. Let me do so over phone. Pl call me at around 9.30PM to day or tomorrow.

 13. ಕಿರಿಯನೆ,ನೀಂ ನೋವಿತ್ತಿರೆ,
  ಜರೆದೆಂ ಬಿರುನುಡಿಗಳಿಂ ಭರಿತ ಕಣ್ಣೀರಿಂ
  ಮರೆತೆಲ್ಲವಂ,ಪಥ ಕಡೆದು
  ಹಿರಿತನವಂ ಮೆರೆದೆ,ನಿನಗಿದೋ ನಮನಂಗಳ್
  (ಉಳಿಯನ್ನು ಕುರಿತಾದ ಶಿಲ್ಪದ ಅನಿಸಿಕೆ,ಬೀಳ್ಕೊಡುವ ಸಮಯದಲ್ಲಿ)

 14. ಸಿರಿತನಮಂ ಮೈವೊತ್ತುಂ
  ಪರಮ ಸುಖದೊಳಿರ್ಪರೆಯುಪವಾಸದ ನಡುವೊಳ್
  ಚಿರತಾಡಿತಗೊಂಡೆನ್ನಂ
  ಪರಿಪೂರ್ಣ ಸೊಬಗೆನುತುಂ ನುತಿಸುತಿರ್ಪರಲಾ!
  (ಚಿರತಾಡಿತಗೊಂಡ =ಪೆಟ್ಟನ್ನು ತಿಂದ,ಕಷ್ಟವನ್ನು ಅನುಭವಿಸಿದ)

 15. Dr. Shankar.R helped a great deal in improving the bandha of this verse. The final (golden) touch in this sculpture is all his.

  हाटक-टङ्क-स्पर्शाद्
  दरोन्मिषद्दृष्टिरुरगशायि-प्रतिमा |
  गण्ड -न्यस्तैकाङ्गुलि
  केनाहं बोधितेति चिन्तयतीव ||

  The icon of Vishnu reclining on the snake, has eyes half opened, after the sculptor’s final touch with a golden chisel. With a hand on the chin, it appears bemused, asking the question, ‘Who is it that awakens me?’

  The verse refers to the ritual of netronmeelana, wherein after sculpting the full icon, the sthapati invokes the prAna of the mUrti by chiseling the eyes open, with a golden needle.

  • नेत्रोन्मीलनकर्मणा सुकवितां तन्वन् कवे! कोमलां
   नेत्रोन्मीलनमेव तूर्णमकरोस्सौहार्दहृद्यात्मनाम्।
   एतत्कल्पनशिल्पनं मम मतावप्यावरोधीयस-
   त्युत्कण्ठायितवच्छनैः पदविधिं चर्कर्ति च स्म प्रियम्॥ 🙂

  • ಶಿಲ್ಪಶಾಸ್ತ್ರದ ಪ್ರಮುಖಾಂಶವೊಂದನ್ನು ತಿಳಿಸಿಕೊಟ್ಟುದಕ್ಕಾಗಿ ಧನ್ಯವಾದಗಳು. ಕೊನೆಯ ಉಳಿಪೆಟ್ಟನ್ನು ಭಾವುಕವಾಗಿ ಗ್ರಹಿಸುವುದೇ ಸರ್ವಸಾಮಾನ್ಯವಾಗಿರುವಾಗ, ಅದಕ್ಕಿರುವ ಶಾಸ್ತ್ರೀಯ ಮಾನ್ಯತೆಯನ್ನು ತಿಳಿಯಪಡಿಸಲು ಹೊಸೆದ ಪದ್ಯವು ಅನನ್ಯ.

  • जयति जयति पद्यं सुन्दरं चार्थपूर्णं
   तदिह मदभिधानान्निःसृतं, किं नु चित्रम् ? 🙂

 16. ಚಣಚಣವೂ ನೋವುಣುತಿರೆ,
  ಇಣುಕಿತೆ ?ಲೋಕಮಳಲೆನ್ನದರಿಯಲ್,ನುಡಿಯಲ್!
  ಕುಣಿದಿತ್ತ ಬಂದೊಡೆ ಯಶಂ
  ಕಣ ಬೆಲ್ಲಕೆ ಬಂದಿರುವೆಗಳಂತಪ್ಪರಲಾ!(ಲೋಕ)

 17. दिव्यादिव्यजगद्द्वय-
  सीमारेखैव लिख्यते चरमेण।
  टङ्काघातेन किमिति
  शङ्कामावहति मूर्तिरादृतकीर्तिः॥

  (The image feels that the last stroke of the chisel working on it is nothing but the dividing line that cuts between the celestial and terrestrial worlds)

  • You have spoken only of the celestial (ಅಧ್ಯಾತ್ಮಿಕ) and the terrestrial (ಅಧಿಭೌತಿಕ). Between them is the aerial (ಅಧಿದೈವಿಕ). If the feet of a figurine is reckoned as ಅಧಿಭೌತಿಕ, and it head as ಅಧ್ಯಾತ್ಮಿಕ, what then is the waist in between? Air-ial (thin air)!
   (Dear me = ಸಂಬೋಧನ. Hey, Mr, ಅಹೋ, ಓ ಭಾಯ್)
   ’ಟ್ವ’ಪ್ರಾಸ, Imperfect Vasantatilaka. Lots and lots of ಶಿದ್ವಿ.
   Between the cosmic and the te/rrestrial dear me
   Betwixed is ‘aerial’. If ye (you)/ reckon feet ‘terrestre’|
   Notwithstanding that at the top/ is the ’cosmic’ thereof
   Partways (in between) is waist. Do you Ganesh,/ consider it thin air|| 🙂

   ಶ್ರಾವ್ಯ(ಛಂದೋ)ರೂಪ. ಕೊನೆಯ ಪಾದದಲ್ಲಿನ ಶರಭಸಂಕರವನ್ನು ಮನ್ನಿಸಬೇಕು; ಉಚ್ಚಾರಣೆಯಲ್ಲಿ ಆ ರೇಫವು ಬರುವುದೂ ಇಲ್ಲ!

   ಬಿಟ್ವೀನ್ದ ಕಾಸ್ಮಿಕೆನ್ದ ಟೆಽ/ರೆಸ್ಟ್ರಿಯಲ್ ಡಿಯರ್ಮಿ
   ಬಿಟ್ವಿಕ್ಸ್ಡ್ ಇಸೇರಿಯಲಿಫ್ಯೆಽ/ ರೆಕನ್ ಫೀಟ್ ಟೆರೆಸ್ಟರ್
   ನಾಟ್ವಿತ್ಸ್ಟಣ್ಡಿಙ್ ದೆಟೆಟ್ದ ಟಾಪ್/ ಇಸ್ದ ಕಾಸ್ಮಿಕ್ದೇರಾಫ್
   ಪಾರ್ಟ್ವೇಸ್ ಇಸ್ ವೇಸ್ಟ್. ಡು ಯು ಗಣೇಶ್,/ ಕನ್ಸಿಡಽರಿಟ್ ಥಿನ್ ಏರ್

 18. धैर्यं द्राग्भज रे दॄशन्मयमनो! नेयं नु टङ्काहतिः
  कार्या या मयि शिल्पिनाद्य चरमा सा मां भवाद्वा शिवम्।
  नेतुं कल्पितभव्यभाग्यबहला रेखा परंत्वात्मनो
  धातुः प्रीतिवियोजनाय विहिता वैपाक्यपाली खलु॥

 19. ಕಾಡಿ ತಿನ್ನುತಿರೆ ಬೇಗೆ ಬಾಳನುಂ
  ದೂಡಿ ಕೊಂದುದಕೆ ಶಸ್ತಕಾಲವಂ,
  ಮೂಡಿಸೀವ ರಸಲೋಕಸಂಗಕಂ
  ಹಾಡಿ ವಂದಿಸೆನೆ ಶಿಲ್ಪಿದೇವನಂ?
  (ಬಿಸಿಲಿನಲ್ಲಿ ನಿಂದು ಕಾಲಹರಣ ಮಾಡಿದ ಬಂಡೆಯು ಮೂರ್ತಿಯಾಗುತ್ತಲಿರುವಾಗ ,ಅದರಲ್ಲಿ ಉದಿಸಿದ ಭಾವ)

  • ಪದ್ಯ ಚೆನ್ನಾಗಿದೆ. ಅಲ್ಪ ಸ್ವಲ್ಪ ಹಳಗನ್ನಡದ ಒಗ್ಗರಣೆ ಬೇಕು. :-೦

 20. || ವನಮಂಜರೀವೃತ್ತ ||

  ಶಿಲ್ಪಿಯೆ,ಸುಂದರರೂಪಕಲಾತ್ಮಕಮಂಗಲವಿಗ್ರಹಮೆಂದೆನಿಸಲ್,
  ಸ್ವಲ್ಪಮುಮಂಜದೆಯೊಡ್ಡಿದೆನೆನ್ನೊಡಲಂ ನಿನಗಳ್ತಿಯಿನಚ್ಚರಿಯೇಂ? |
  ಅಲ್ಪತನಕ್ಕಳಿವಪ್ಪುದು ಕಷ್ಟದ ಜೀವನದೊಳ್ ನವೆಯುತ್ತಿರೆ, ಸಂ-
  ಕಲ್ಪವ ಮೂಡಿಪುದಂತ್ಯಮನಾಶಿಸದಂತಿರೆ,ನೋಯದೆ ಪೆಟ್ಟುಗಳಿಂ ||

  • ಉತ್ತಮಕಲ್ಪನೆಯುತ್ತಮಬಂಧಮುಮುತ್ತಮಮೌ ವನಮಂಜರಿಯೇ!

   • ವಂದಿಪೆನೆನ್ನಯ ಪದ್ಯಮನುತ್ತಮಮೆಂದಿರೆ ಮೆಚ್ಚುತೆ ಸೋದರರೇ:-)

 21. ಕೊನೆಗಾರೆs ಪರಿಪೂರ್ಣsಳಾನಾದೇನೆನ್ನುತ್ತೆs
  ಮನದಲ್ಲೆs ಕಾದುs ಕುಳಿತಿರ್ಪs – ಸುಂದsರಿs
  ಕೊನೆಯೇಟಿನ್ನಿಲ್ಲs ಭವದೊsಳುs

  • పంచేంద్రియాలనే కాదు ప్రపంచాన్ని రాయిలా నిలిపేవాడు ఋషి, రాయిలా పడి ఉన్న ప్రపంచాన్ని అహల్య లా మలిచేవాడు మనిషి – In Jandhyala’s script for the movie Sagarasangamam
   ಕೊನೆಯೇಟು ನರರಿಂಗೆ ತಾನಲ್ತೆ ಪರದೊಳಗೆ
   ಘನಮಾಗಿ ಬಾಳಲ್ ಭವದೊಳಗೆ-ದೇವರ್ಗೆ
   ಕೊನೆಯೇಟು ಭವದೊಳ್ ನರಗೈಯೊಳ್|

 22. ಕಡಿದsನುs ಸುತ್ತsಣs ಕಡೆಯಿಂದs ತನುವsನುs
  ಕಡೆದಾನುs ಪರಿಪೂರ್ಣತೆಗೆನ್ನs – ಕೊನೆಗಂತುs
  ಬಡಿತsದs ನೋವs ಮರೆತೇನುs

  • ಕುಡಿ>ಕುಟಿ=ಪುರ=ದೇಹ
   ಕಡಿದಿಹ ಸುತ್ತಣಿಂ ಕುಡಿಯನ್ನು, ಮನವನ್ನು
   ಗಿಡಗಿದ ಸುದ್ದಿ ತಾನೆಲ್ಲೈ? – ಸುಮ್ಮನೆ
   ಬಿಡುವೆಯ ಬಂಡಿ, ನೋಯ್ತೆಂದು 🙂

  • ಮೂರಡಿಯಿಂದಲೆ ಈರೇಳು ಲೋಕವ-
   ನೋರಂತೆ ಅಳೆದಾ ವಿಕ್ರಮನ ಬಲ್ಮೆ ರಾಮ್!
   ಸಾರಿರ್ಪೆಯಲ್ತೇ ನೀನಿಲ್ಲಿ!!

 23. ತಂಗಾಳಿ,ವರ್ಷಂಗಳೈತಂದ ಮಾಧುರ್ಯ
  ಸಂಗೀತ ಸಾಗರದೆ ಮುಳುಗಿರ್ದಗೆ,
  ಅಂಗಾಂಗ ನುತಿ,ಚೇಷ್ಟೆಯಂ ಕೇಳುವಂತಕ್ಕೆ?
  ಸಿಂಗರದ,ಸಿರಿತಪ್ಪ ವೈಭೋಗದಿಂ
  (ಮೂರ್ತಿಯೆಂಬ ಆಡಂಬರದ ಸ್ಥಾನದಿಂದಾಗಿ,ಜನರಿಂದ ಸ್ತುತಿ,ಅಪಸ್ತುತಿಗಳನ್ನು ಕೇಳುವದಾಗುವದೇ?)
  (ಸ್ಥಾನ, ತರುವ ಗೋಳು 🙂 )

 24. ಕಷ್ಟದಿಂ ಕಾಪಾಡುತಿರಲೆನ್ನ ತಾಯವೊಲ್
  ಸೃಷ್ಟಿಸಿದೆ ಪರಿಪೂರ್ಣತೆಯ ಗುರುವಿನೊಲ್|
  ಮುಷ್ಟಿಯಿಂ ಸ್ಪಷ್ಟತೆಯ ತೋರ್ಪಡಿಸೆ ಕಡೆಗೆ ನನ
  ಗಿಷ್ಟದಪ್ಪುಗೆಯನುಂ ನೀಡದಾದೆ|

 25. ಗಮನೀಯ ವಿಷಯವಿದುಕಾಣ್
  ಕಮನೀಯ ಕುಶಲಕಲಾಕೃತಿಯೆದೆಯ ಮಿಡಿತಂ ।
  ಸಮೆಯಿಸೆ ತದ್ರೂಪವನು ನಿ-
  ಯಮವಿರದೊಡನೊದಗುದಾವುದು ಕೊನೆಯ ಬಡಿತಂ ?!

 26. दिनं दिनं सटङ्कनं करोमि रम्यशिल्पनं
  शिवार्थिने समर्पणं सतृप्तितोषभावनम् ।
  यदा कृतं भवेदिदं, भवानि किं मुदान्वितो ?
  भवानि मुग्धतां गतो? भवानि वोत्सुको नवे ? ॥

  (After many sculpting hits, now that I have happily given this piece of art, the sculptor wonders thus. Should I be happy? Should I be dumbstruck? Or should I carry on with the next project?)

  • लयोत्तरे गुरूत्तरेsत्र पञ्चचामरे वरे
   भवत्क्रिया समित्क्रिया रसाग्निधुक्षणाय मे।

 27. One more simple one ..

  हननेन दिनैर्बहुभी रचितं
  तनुतेऽद्य नवस्थितये पुरतः ।
  इदमेव नु वीक्ष्य जनास्तदितो
  गणयन्ति ममास्तितया फलितम् ॥

  (For many days I have toiled in creating this sculpture. Now it stands before me. From now on, people will look at this and judge the essence of my being by looking at this).

  • Apologies. I had read the topic incorrectly. I read it as shilpiya bhaava instead of shilpada bhaava.

   • यत्किमपि वस्तु वास्तु
    तत्किमपि रम्यमास्ते।
    प्रस्तुततीवरस्यं
    पद्यमिति मन्मनीषा॥

 28. मूर्तिः शिल्पिनं प्राह –
  हृदयहरमतिरुचिरमिह भवतात्
  प्रतिहननमनु तव नु मतिरभवत् ।
  इतरहतिरिव न हि भवति च यदा
  गणितमवमतिरपि जगति भवति ॥

  शशिकला वृत्तम् । सप्तभिर्यतिः ।
  (The sculpture tells the sculptor. “With every stroke, you have wanted to create something beautiful and breath-taking. When the time comes for the last stroke, know that everything – praise or ridicule – is in the hands of the world).

  • विरलप्रचुरे वृत्ते त्वखिलप्रचुरकठोरवास्तवं तन्वता भवता कापि कमनीयता प्रादर्शि। नूनमभिनन्दनमर्हतीयं कविता।

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)