या ब्रह्माधरकण्ठचत्वरपथे सौख्येन याता पुरा
धारेव प्रतिकाव्यकर्तृरसने संशोभिता वाक्प्रदा |
विद्वद्वाक्यविचारसङ्गरभुवां जाज्वल्यमानाद्य सा
मद्वद्ग्राम्यकवेर्मुखे हि शुकवत् धिक्पञ्जरस्था विधिम् ||
this verse i think is off topic. but not having posted anything in the past 2-3 months. I hope people will pardon. the only relation is it contains samskRta words for parrot and cage somewhere 😛
the import is simple.
“she who used to travel through the crossway which is formed by the throat of brahma with ease, she who used flow without hindrance on the tongue all great poets, she who used to show her brilliance in the warfield of all debates concerning erudtion, Alas now she is trapped in my uncivilized mouth like a parrot and repeating only things which I’m able to say”
रटितं तु शुकेनेदं पद्यं यद्भणितं त्वया।
बाहुजः(parrot) को तदुक्त्याः सो उक्तः कस्य गिरं प्रभो।।
Please correct the errors if the meaning is somewhat clear
ಮೊದಲನೇ ಪದ್ಯ ಸಾಲ೦ಕಾರ ನಿಜಕ್ಕೂ ತು೦ಬ ಹಿಡಿಸಿತು. ಅಭಿನ೦ದನೆಗಳು!
ಎರಡನೆಯದ್ದು ಏಕೊ ಸಹಜವಾಗಿಲ್ಲ. ಸುಮ್ಮನೆ ಒ೦ದು ಅಲ೦ಕಾರವನ್ನು ತರಬೇಕು ಎ೦ದು ಒತ್ತಾಯದಿ೦ದ ಬರೆದ೦ತಿದೆ. ಗಿಳಿಗೂ ವಿಷಕ್ಕೂ ಎ೦ತಹ ಹೋಲಿಕೆ?!! ನಿಮ್ಮ ದೃಷ್ಟಿಯನ್ನು ವಿವರಿಸಿ..
ಮಾನ್ಯರು ಮನ್ನಿಸುವುದು…ಆದರೆ “ಗರಳಶುಕ” ಎಂಬಲ್ಲಿ ಅನ್ಯೋಕ್ತಿ ಅಲಂಕಾರವನ್ನು ಬಳಸಿದ್ದೇನೆ…ಹಾಗಾಗಿ ಇಲ್ಲಿ ಉಪಮೆಯ ಪ್ರಶ್ನೆ ಬರುವುದಿಲ್ಲವೆಂಬುದು ನನ್ನ ಮತ….ನಿರ್ದಿಷ್ಟವಾದ ಅಲಂಕಾರದೋಷವಿದ್ದಲ್ಲಿ ಅಥವಾ ಛಂದಸ್ಸಿನ ದೋಷವಿದ್ದಲ್ಲಿ ನನಗೆ ತಿಳಿಯದ ಕಾರಣ ತಾವು ತಿಳಿಸುವುದು… 🙂
ಪ್ರಿಯ ಮೌರ್ಯ! ಅತ್ಯುತ್ತಮವಾದ ಶೈಲಿಯಲ್ಲಿ ಅತಿಸುಂದರವಾದ ಅಲಂಕಾರಗಳ ಹೆಣಿಗೆಯಲ್ಲಿ ಹೊಮ್ಮಿದ ಈ ನಿನ್ನ ಕಂದಗಳು ಸ್ವಾರಸ್ಯವುಕ್ಕುವ ಮಾಕಂದಗಳೇ ಸರಿ.
ಪ್ರಿಯ ನೀಲಕಂಠರೇ! ನಿಮ್ಮ ಆಕ್ಷೇಪಕ್ಕೆ ಇಲ್ಲಿ ಎಡೆಯಿಲ್ಲ. ಮುಕ್ತಕಗಳಲ್ಲಿ ಉಪಮಾನೋಪಮೇಯಗಳ ಔಚಿತ್ಯನಿರ್ಧಾರಕ್ಕಾಗಿ ಯಾವುದೇ ಸಂದರ್ಭಗಳಿಲ್ಲದ ಕಾರಣ ಅತ್ಯಧಿಕವಾಗಿ ಕಲ್ಪನೆಯ ವೈಚಿತ್ರ್ಯವೇ ರಸಿಕರ ಪಾಲಿಗೆ ಆಕರ್ಷಕವಾಗುವುದು.
ನೀಲಕಂಠ ಎಂಬ ನಿಮ್ಮ ನಾಮಾಂಕಿತಂ
’ಕ್ಷ್ವೇಲಕೀರ’ ಎಂಬ ರೂಪಕದಿನೇಂ|
ಜಾಲಿಸಿರ್ಪವೋಲದೇನಾಯ್ತೆ ಪೇಳಿಮ್, ಓ!
ಲೀಲೆಯಲ್ತೆ ಮೌರ್ಯಲೇಖನಮಿದುಂ||:-):-) 🙂
ತಮ್ಮ ಹಾರೈಕೆಗೆ ಮನಸಾ ಧನ್ಯವಾದಗಳು ಗುರುಗಳೇ…
ಈ ಸಂದರ್ಭದಲ್ಲಿ ಒಂದು ಸಂಶಯವೆದ್ದಿದೆ…ಮುಕ್ತಕಗಳ ವಿಷಯದಲ್ಲಿ ಉಪಮಾನೋಪಮೇಯಗಳ ಔಚಿತ್ಯದ ಪ್ರಶ್ನೆ ಬರುವುದಿಲ್ಲವಾದಲ್ಲಿ ಮತ್ತಾವ ಸಾಹಿತ್ಯಿಕ ರಚನೆಯಲ್ಲಿ ಈ ಔಚಿತ್ಯದ ಪ್ರಶ್ನೆ ಬರಬಹುದಾಗಿದೆ? ದಯವಿಟ್ಟು ತಿಳಿಸಿಕೊಡುತ್ತೀರಾ?
ಮೌರ್ಯರೆ, ಹೌದು, ಸರ್ ತಿಳಿಸಿದ೦ತೆ ಈಗ ಅನ್ನಿಸುತ್ತಿದೆ ನಿಮ್ಮ ಅಲ೦ಕಾರ ಸ್ವಾರಸ್ಯ.. ವಿಶ್ವವನ್ನೇ ಸುಟ್ಟುಹಾಕಬಲ್ಲ ಭಯ೦ಕರ ವಿಷ ಶ೦ಭುವಿನ ಕೊರಳಲ್ಲಿ ಗಿಳಿಯ೦ತೆ ತಣ್ಣಗೆ ಕೂಡುವುದಾಯಿತು ಎ೦ದು! ನಾನು ಶುದ್ಧ ಶಾಕಾಹಾರಿಯಾಗಿದ್ದರೂ ನಿಮ್ಮ ಗರಲಶುಕದ ಸವಿಯನ್ನು ಸವಿಯುತ್ತಿದ್ದೇನೆ!! 🙂
(ಅ೦ದಹಾಗೆ ನಾನು ಮಾನ್ಯನಲ್ಲ :))
ಪದ್ಯಪಾನದ ಹಿರಿಯರೇ, ತಮ್ಮೆಲ್ಲರ ಹೊಗಳಿಕೆಯಿಂದಾಗಿ ನನ್ನಲ್ಲಿ ಧನ್ಯತಾಭಾವ ಮೂಡಿದೆ. ಆದರೆ ಅನುಪಮವಾದ ಸಾಲಂಕಾರಪೂರ್ಣ ವಾದ ಪ್ರಂಶಸೆಯಿಂದ ನನಗೆ ಬಹಳ ಗಲಿಬಿಲಿಯಾಗುತ್ತಿದೆ. ನಿಮ್ಮ ಹೊಗಳಿಕೆಯ ಮಾತುಗಳೇ ಪಂಜರದ ಸರಳುಗಳಾಗಿ ನನ್ನನ್ನು ಗಿಳಿಯಂತೆ ಬಂಧಿಸಿದೆ. ಹಳಗನ್ನಡದ ವಿಷಯದಲ್ಲಿ ಅಷ್ಟಾಗಿ ಪಾಂಡಿತ್ಯವಾಗಲೀ, ಪ್ರಭುತ್ವವಾಗಲೀ ಇರದ ನನ್ನಂಥ ಅರ್ಭಕನನ್ನು ನಿಮ್ಮಲ್ಲಿ ಒಬ್ಬನನ್ನಾಗಿಸಿ ಪ್ರೀತಿಯಿಂದ ಕಾಣುತ್ತಿರುವುದು ನಿಮ್ಮೆಲ್ಲರ ಸಹೃದಯತೆ.ಅದೇ ನನ್ನ ಪಾಲಿಗೆ ಅಮೃತಸದೃಶವಾದದ್ದು. ನಿಮ್ಮೆಲ್ಲರ ಪ್ರೀತಿಯು ಹೀಗೆಯೇ ಇರಲೆಂದು ಅರ್ಥಿಸುತ್ತೇನೆ. ಮತ್ತೆ ಮತ್ತೆ ಧನ್ಯವಾದಗಳು.
ಗಜ-ಸಿಂಹ-ಹಯಾದಿ ಪ್ರಾಸಗಳ ವೈವಿಧ್ಯದ ಪರಿಚಯಕ್ಕಾಗಿ ಇಲ್ಲಿಯೇ ಪಾಠಗಳನ್ನು ನೋಡುವುದು. ಮೌರ್ಯನ ಪದ್ಯಕ್ಕೆ ಪ್ರತಿಕ್ರಿಯೆ ನೀಡುವಾಗ ಕೊಪ್ಪಲತೋಟನ ಕಂದದ ಎರಡನೆಯ ಸಾಲಿನಲ್ಲಿ ಮೂರು ಮಾತ್ರೆಗಳು ಹೆಚ್ಚಾಗಿವೆ. ಇದಕ್ಕೆ ಉತ್ತರಿಸುವಾಗ ಮೌರ್ಯನ ಕಂದಪದ್ಯದ ಎರಡನೆಯ ಸಾಲಿನ ಕೊನೆಗೆ ಯತಿಭಂಗವಾಗಿದೆ. ವೃತ್ತಗಳಲ್ಲಿ ಮಾತ್ರ ಎರಡನೆಯ ಸಾಲಿನಲ್ಲಿ ಯತಿವಿಲಂಘನ ಸಂಮತ. ಕಂದ, ಸಾಂಗತ್ಯ, ಷಟ್ಪದಿ ಇತ್ಯಾದಿಗಳಲ್ಲಿ ಉತ್ತರಾರ್ಧದ ಬಳಿಕ ಯತಿ ಕಡ್ಡಾಯ.
ನಿಮ್ಮ ಈ ಪದ್ಯದಲ್ಲಿ ಮುಖ್ಯವಾಗಿರುವುದು ರೂಪಕಾಲಂಕಾರ. ಆಂಶಿಕವಾಗಿ ಅಪ್ರಸ್ತುತಪ್ರಶಂಸಾಲಂಕಾರವೂ ಇದೆ.
ಅಥವಾ ರೂಪಕದಿಂದ ಅಪ್ರಸ್ತುತಪ್ರಶಂಸಾಲಂಕಾರಧ್ವನಿಯೂ ವಸ್ತುಧ್ವನಿಯೂ ಹೊಮ್ಮಿವೆಯೆಂದೂ ಭಾವಿಸಬಹುದು.
ಚೀದಿ, ಉಷಾ ಮತ್ತು ಪ್ರಸಾದು ಅವರಿಗೆ ಧನ್ಯವಾದಗಳು. ನನ್ನ ಈ ಪದ್ಯದಲ್ಲಿ ರೂಪಕ ಮತ್ತು ಸಸಂದೇಹಗಳ ಸಂಸೃಷ್ಟಿಯೂ (ಎದ್ದುತೋರುವಂಥ ವ್ಯತ್ಯಾಸವಿರುವ ಮಿಶ್ರಣ) ವಸ್ತುಧ್ವನಿ-ರಸಧ್ವನಿಗಳೂ ಇವೆಯೆನ್ನಬಹುದು.
Fantastic sir! Every line is brilliant – I liked kAlAyasakAntArade – superb! A fine gangA-yamunA-sangama of classical style and contemporary perspective!
ಉಷಾ, ಕಂದನನ್ನು ಸಾಮಾನ್ಯವಾಗಿ ಎಲ್ಲರೂ ಗಿಣಿಗೆ ಹೋಲಿಸಿದರೆ, ನೀವು ಗಿಣಿಯನ್ನು ಕಂದನಿಗೆ ಹೋಲಿಸಿ ಅನ್ಯತೆಯನ್ನು ಮೆರೆದು ಒಳ್ಳೆಯ ಪದ್ಯವನ್ನು ನೀಡಿದ್ದೀರಿ.ನಿಮ್ಮೆಲ್ಲಾ ಪದ್ಯಗಳಿಗೆ ಧನ್ಯವಾದಗಳು.ಅಂದ ಹಾಗೆ, ನೀವು ಭಡ್ತಿ ಹೊಂದಲಿರುವುದಕ್ಕಾಗಿ, ನಾನು ಮುಂಚಿತವಾಗಿ ಸಲ್ಲಿಸುವ ಅಭಿನಂದನೆಗಳು. 🙂
haha. Parrot is the vehicle of Manmatha and crow is the vehicle of Shani.
ಎಲ್ಲಿಯ ಕೀರವದೆಲ್ಲಿಯ ಕಾಗೆಯು
ಬಲ್ಲೆಯೇಂ ಶುಕಪಂ ಮನ್ಮಥಂ| ಮೇಣಿನ್ನು
ಕಲ್ಲೆದೆಯ ಶನಿಯು ಕಾಕಪನು||
Same:
ಎಲ್ಲಿಯ ಕೋಣ(ಶನಿ)ನದೆಲ್ಲಿಯ ಕಾಮನು
ಬಲ್ಲೆಯೇನವನ ಯಾನವದು| ಕಾಗೆ ಮೇಣ್
ಸೊಲ್ಲುಳ್ಳ ಕೀರವಿವನದೈ||
This is a parrot reflecting on its current existence:
“I have enemy-free pleasure; timely good food; my consort is always with me (no viraha); and my home is made of gold (a gilded cage). But even then, I verily remember (or long for), those mangoes that I ate, perched on the beautiful mango tree in the forest”
रामनामरसनोsस्मि सन्ततं
पारतन्त्र्यपरमव्रती तथा।
पक्षपातरहितश्शुकोsप्यहं
मुक्तिमार्गरहितो हि पञ्जरे॥
This is a poem full of shEShaalaMkaara (pun). Here the parrot is equated with Suka, the born saint and son of sage Vyaasa. Though the parrot is always praising the holy name of Sri Rama, following the disciplines of a great tradition (para-tantra, which also means bondage) and never falling prey to partiality (pakShapaata, also meaning bating of the wings; i.e., unable to fly)
finds hard to get liberation (salvation or freedom).
ಚೆನ್ನಾಗಿದೆ ಸರ್! ಆದರೆ ಪದ್ಯ ಶುಕದೇವನ ಪರವಾಗಿ ಪೂರ್ಣ ಅರ್ಥವನ್ನು ಕೊಡುತ್ತಿಲ್ಲ ಎ೦ದೆನಿಸುತ್ತಿದೆ. ದಯವಿಟ್ಟು ವಿವರಿಸುತ್ತೀರ? ಕೊನೆಯ ಪಾದ ಗಿಳಿಗೆ ಮುಕ್ತಿ ಇಲ್ಲ ಎನ್ನುತ್ತದೆ. ಆದರೆ ಶುಕನ ಬಗ್ಗೆ ಎನೂ ಹೇಳುವುದಿಲ್ಲ. ಅಥವ ಅವನಿಗೆ (so called) ಮುಕ್ತಿ ಎನ್ನುವುದಿಲ್ಲ, ಅವನ ಸ್ಥಿತಿ ಅದಕ್ಕೂ ಅತೀತ ಎ೦ದೆ?
@ಚೀದಿ – _/\_
@ರಾಗ – ಒಂದು ಸಂಶಯ. “ಪ್ರಾಸಾದಿಕ” ಹಾಗೂ “ಪ್ರಾಸಾಧಿಕ” ಇವು “ನೈಘಂಟಿಕ” ಪದ್ಯ ಎಂದ ಹಾಗೆ ಮೆಚ್ಚುಗೆಯೋ ಅಥವ ಅಲ್ಲವೋ ತಿಳಿಯುತ್ತಿಲ್ಲ 🙂
ಅದೇನೇ ಇರಲಿ ತುಂಬ ಧನ್ಯವಾದ. _/\_ 🙂
ಇಲ್ಲ, ರಾಮ್; ಮನದಾಳದ ಮೆಚ್ಚುಗೆಯೇ ಹೌದು:-)
ಪ್ರಾಸಾಧಿಕ ಎಂಬುದು ಹೊಸಪದ; ಪ್ರಾಸಗಳು ಹೆಚ್ಚಾಗಿರುವ ಎಂದು ಅರ್ಥ…ಆದರೆ ನಿನ್ನ ತ್ರಿಪದಿಯ ಪ್ರಾಸಸಮೃದ್ಧಿಯು ಒಟ್ಟಂದದ ಅಂದವನ್ನೇನ್ನೇನನ್ನೂ ಕೆಡಿಸಿಲ್ಲ. ಇನ್ನು ಪ್ರಾಸಾದಿಕ ಎಂಬುದು ಆ ಪದ್ಯದ ತಿಳಿತನದ ದ್ಯೋತಕವಷ್ಟೇ
ಅಲ್ಲಪ್ಪಾ ಅಲ್ಲ .ನೀಲಕಂಠರ ಮಹಿಮೆ ವರ್ಣಿಸಲಸದಳ ! ತಿಳಿಯಾದ ಚಿತ್ತದಿಂದ ಮಾತ್ರ ಇಂತಹ ಕಲ್ಪನೆಗಳು ಬರಲು ಸಾಧ್ಯ ಅಂತ ನನ್ನ ಭಾವನೆ . ಆಲೋಚನೆಗಳನ್ನು( ಪಂಜರವಿಲ್ಲದ ಗಿಳಿಗಳು) ಹಿಡಿದಿಡುವುದೇ ಬಹಳ ಕಷ್ಟದ ಕೆಲಸ . ಅಂತಹದರಲ್ಲಿ ನೀವು ಏಕಾಗ್ರತೆಯಿಂದ ಚಿತ್ತವನ್ನೇ ಹಿಡಿದಿಟ್ಟು, ಅಷ್ಟೇಲ್ಲಾ ಹೋಲಿಕೆಗಳೊಂದಿಗೆ ಬರೆಯುವಾಗ ಪದ್ಯಪಾನವೆಂಬ ಪಂಜರದೊಳಗೆ ಇ(ಬಿ)ದ್ದಿರೆಂದು ಹೇಳಿದೆ . ಅದನ್ನು ಪ್ರಸಾದ್ ಸರ್ ಗೆ ಆರೋಪಿಸಿದೆ .
ಇದ್ಯಾವುದೂ ಅಲ್ಲ. ತುಂಬ ಆಲೋಚನೆಗೆ ದೂಡಿದ ಕಲ್ಪನೆ. ಬಂಧನ-ಸ್ವಾತಂತ್ರ್ಯಗಳ ನಡುವೆ ಅಂತರವೇ ಇಲ್ಲವೇನೋ ಎಂಬಂತಹ ಕಲ್ಪನೆ. ಭೈರಪ್ಪನವರ ಯಾನ ಮನಸ್ಸಿನಲ್ಲಿ ಸುಳಿದುಹೋಯಿತು. ಬಹಳ ಬಹಳ ಚೆನ್ನಾದ ಕಲ್ಪನೆ. ಅಭಿನಂದನೆಗಳು.
स्मारं स्मारं वटतरुपुटे संस्थितं बन्धुवर्गं
तां चार्वङ्गीं नवकिसलयारक्तचञ्चुं च जायाम्।
वारं वारं नयनसलिल-क्लिन्न-पक्षोप्यहं सन्
दीनो भृत्यो मधुरवचनान्यादिनं व्याहरामि ॥
ವಟವೃಕ್ಷದಲ್ಲಿ ವಾಸವಾಗಿರುವ ಬಂಧುವರ್ಗವನ್ನೂ ಚಾರ್ವಂಗಿಯಾದ, ಹೊಸ ಚಿಗುರಿನಂತೆ ಕೆಂಪಾದ ಕೊಕ್ಕನ್ನುಳ್ಳ ಆ ಪತ್ನಿಯನ್ನೂ ನೆನೆದು ನೆನೆದು, ಮತ್ತೆ ಮತ್ತೆ ಅಶ್ರುಜಲದಿಂದ ನೆನೆದ ರೆಕ್ಕೆಯುಳ್ಳವನಾದರೂ (ರೆಕ್ಕೆಯಿಂದ ಕಣ್ಣೊರೆಸಿಕೊಂಡೆ ಎಂದರ್ಥ) ದೀನನೂ ಕೇವಲ ಸೇವಕನೂ ಆದ ನಾನು ದಿನವಿಡೀ ಮಧುರವಾದ ಮಾತುಗಳನ್ನಾಡುತ್ತೇನೆ.
clap claಪ್
ತಿರುಗುತುಂ ಭೂಖಂಡವಿಸ್ತಾರದೊಳ್
ಕಲ್ಪಿತ ಎಂಬುದು ವೈದಿಕಾರ್ಥದಲ್ಲಿ (ಯಜ್ಞೇನ ಕಲ್ಪಂತಾಂ) ತುಂಬ ಚೆನ್ನಾಗಿದೆ
For once, ನಿಮ್ಮ ಎಂದಿನ ’ಕಾಣ್’ ಇಲ್ಲಿ ಚೆನ್ನಾಗಿ ಹೊಂದಿದೆ 😉
ಪೆಜತ್ತಾಯರೆ, ನನ್ನ ಸಂದೇಹಗಳಿಗೆ ನಿಮ್ಮ ವಿವರವಾದ ಉತ್ತರ ಸರಿಯೆಂದೇ ಭಾವಿಸುವೆ.ತಪ್ಪಿದ್ದಲ್ಲಿ,ಬಲ್ಲಿದರು ತಿದ್ದುತ್ತಿದ್ದರು:-) ನನಗೆ ತಿಳಿದಿರದಂಥ ವಿಚಾರಗಳನ್ನು ತಿಳಿಸಿರುವುದಕ್ಕಾಗಿ ಧನ್ಯವಾದಗಳು.
ಶಕುಂತಲಾ ಅವರೆ, ಅನಿಸಿಕೆಗಳನ್ನು ಹಂಚಿಕೊಳ್ಳುವುದೇ ಸರಿ, ಹೀಗೆ ವಿಚಾರವಿನಿಮಯ ಮಾಡುವುದರಿಂದ ಎಲ್ಲರಿಗೂ ಇತರರಿಗೂ ಲಾಭ 🙂
ಪ್ರಸ್ತುತ ವಿಷಯದಲ್ಲಿ ಪೆಜತ್ತಾಯರ ವಿವರಣೆ ಸರಿಯೆಂದು ನನಗನಿಸುತ್ತದೆ

It should be jaajvalyamaana and not jvaajvalyamaana…… so also madvadgraama….is correct and not madvatgraama
thank you sir,
So I’ve “graduated” from grammatical mistakes to just typos.. its a good development 😛 eventually I’ll become better
रटितं तु शुकेनेदं पद्यं यद्भणितं त्वया।
बाहुजः(parrot) को तदुक्त्याः सो उक्तः कस्य गिरं प्रभो।।
Please correct the errors if the meaning is somewhat clear
ನಿನ್ನ ಕಲ್ಪನೆ ಬಹಳಸೊಗಸಾಗಿದೆ ರಾಘವೇಂದ್ರ, ಸಂಸ್ಕೃತ ಕಲಿಯಲಿಲ್ಲವಲ್ಲ ಎಂದು ಸಂಕಟವಾಗುತ್ತಿದೆ.
ಧನ್ಯವಾದಗಳು
ಪದ್ಯ ಬಹಳ ಚೆನ್ನಾಗಿದೆ, ಆದರೂ ಪದ್ಯದಲ್ಲಿ ಕಡೆಯ ಸಾಲನ್ನು ನಾನು ಒಪ್ಪುವುದಿಲ್ಲ ಜಿ. ಎಸ್ 😉
ಪಸಿರರಂಗಿನುಡೆಯುಟ್ಟ ಮೈಯದೇ?
ಬಸಿದು ಕೆಂಪ, ಕಳೆಯಿತ್ತ, ಓಷ್ಠಮೇ?
ಕುಸುರಿಕೆತ್ತನೆಯ ಮಾತರೀತಿಯೇ?
ಪಸುಳೆ,ತಂದುದಲೆ ಬಂಧನಂ ನಿಜಂ!
(ಗಿಳಿಯನ್ನು ಕುರಿತ ಹೇಳಿಕೆ)
ಒಳ್ಳೆಯ ಪ್ರಿಯಂವದಾ ವೃತ್ತ; ಅಭಿನಂದನೆಗಳು.
ಪ್ರಿಯಂವದೆಯನ್ನು ಕಂಡು ಬಹಳ ಸಂತೋಷವಾಗಿದೆ. ಶಕುಂತಲೆಗಾಗಿ ಕಾಯುತಿದ್ದೇನೆ.
ಉಷೆಯಂತೆ ,ನಿತ್ಯವೂ ಬರಲಾಗುವುದೇ?
ಕಾಂಚನಾ, ನೀವೆಂದಿರುವುದು ಸರಿ. ನಿತ್ಯವೂ ಉಷೆ ಬಾರದೆ ಪದ್ಯಪಾನ ಬೆಳಗುವುದೆಂತು ? 🙂
ಉಷಾ, ಕ್ಷಮಿಸಿರಿ, ನಿಮ್ಮನ್ನು ತುಂಬ ಕಾಯಿಸಿದೆ. ನಿಮ್ಮಂತೆ ದಿನವೂ ಬರೆಯಬೇಕು,ಬರಬೇಕೆಂಬಾಸೆ ಇದೆಯಾದರೂ ಪದ್ಯಾಕಾಶದಲ್ಲಿ ಸ್ವೇಚ್ಛೆಯಿಂದ ಹಾರಲಾಗದ ಪಂಜರದ ಗಿಳಿಯಾಗಿದ್ದೇನೆ . 🙁
ರೂಪದಿಂದಲೇ ಗಿಳಿಗೆ ದುಗುಡವೆಂಬ ಪದ್ಯ ಚೆನ್ನಾಗಿದೆ
1.ಚೆಲ್ವೆಯೊಳೞ್ತಿಯಿರ್ದೊಡಮೇಂ ?
ನಲ್ವಾತಿನೊಳಿಂತೊಱಲ್ಚಲಣ್ಮುಗಿಡಲ್ ತಾಂ
ಗೆಲ್ವನದೇನೆರ್ದೆಗೂಡೆಂ
ಬೆಲ್ವಿನ ಗೂಡಲ್ಲೊಱಲ್ಗಿಳಿಯು ಬಂದಿಯಿರಲ್ ?
ಚೆಲುವೆಯಲ್ಲಿ ಪ್ರೀತಿಯಿದ್ದರೇನು ? ಚೆನ್ನಾದ ಮಾತುಗಳಲ್ಲಿ ಆಕೆಯನ್ನು ಮೆಚ್ಚಿಸಲು ಧೈರ್ಯ ಸಾಲದವನು ಗೆಲ್ಲುವನೇನು ? ಆತನ ಪ್ರೇಮವು ಎದೆಗೂಡೆಂಬ ಎಲುಬುಗಳ ಪಂಜರದಲ್ಲಿ ಬಂದಿಯಾದ ಗಿಳಿಯಿದ್ದಂತೆ !
2. ನಡೆಯಲ್ಕಂಬುಧಿಮಥನಂ
ಕಡಲೊಳ್ ಪುಟ್ಟಿರ್ಪ ನಂಜನುಣಲೈಕಿಲ್ವೆ
ಟ್ಟೊಡೆಯನ ಕಂಠಮೆನಿಪ್ಪಾ
ಗೂಡೊಳ್ ಗರಳಶುಕಮಿಂತು ಸೆರೆಯಾಯ್ತು ಗಡಾ
ಸಾಗರಮಥನದಲ್ಲಿ ಹಾಲಾಹಲವು ಉದ್ಭವಿಸಿದಾಗ ಹರನು ಆ ಘೋರವಿಷವನ್ನು ಪಾನಮಾಡಿದನು. ಆಗ ಆ ವಿಷವೆಂಬ ಗಿಳಿಯು ಪರಶಿವನ ಕಂಠವೆಂಬ ಪಂಜರದಲ್ಲಿ ಸೆರೆಯಾಯಿತು.
ಮೊದಲನೇ ಪದ್ಯ ಸಾಲ೦ಕಾರ ನಿಜಕ್ಕೂ ತು೦ಬ ಹಿಡಿಸಿತು. ಅಭಿನ೦ದನೆಗಳು!
ಎರಡನೆಯದ್ದು ಏಕೊ ಸಹಜವಾಗಿಲ್ಲ. ಸುಮ್ಮನೆ ಒ೦ದು ಅಲ೦ಕಾರವನ್ನು ತರಬೇಕು ಎ೦ದು ಒತ್ತಾಯದಿ೦ದ ಬರೆದ೦ತಿದೆ. ಗಿಳಿಗೂ ವಿಷಕ್ಕೂ ಎ೦ತಹ ಹೋಲಿಕೆ?!! ನಿಮ್ಮ ದೃಷ್ಟಿಯನ್ನು ವಿವರಿಸಿ..
ಮಾನ್ಯರು ಮನ್ನಿಸುವುದು…ಆದರೆ “ಗರಳಶುಕ” ಎಂಬಲ್ಲಿ ಅನ್ಯೋಕ್ತಿ ಅಲಂಕಾರವನ್ನು ಬಳಸಿದ್ದೇನೆ…ಹಾಗಾಗಿ ಇಲ್ಲಿ ಉಪಮೆಯ ಪ್ರಶ್ನೆ ಬರುವುದಿಲ್ಲವೆಂಬುದು ನನ್ನ ಮತ….ನಿರ್ದಿಷ್ಟವಾದ ಅಲಂಕಾರದೋಷವಿದ್ದಲ್ಲಿ ಅಥವಾ ಛಂದಸ್ಸಿನ ದೋಷವಿದ್ದಲ್ಲಿ ನನಗೆ ತಿಳಿಯದ ಕಾರಣ ತಾವು ತಿಳಿಸುವುದು… 🙂
ಪ್ರಿಯ ಮೌರ್ಯ! ಅತ್ಯುತ್ತಮವಾದ ಶೈಲಿಯಲ್ಲಿ ಅತಿಸುಂದರವಾದ ಅಲಂಕಾರಗಳ ಹೆಣಿಗೆಯಲ್ಲಿ ಹೊಮ್ಮಿದ ಈ ನಿನ್ನ ಕಂದಗಳು ಸ್ವಾರಸ್ಯವುಕ್ಕುವ ಮಾಕಂದಗಳೇ ಸರಿ.
ಪ್ರಿಯ ನೀಲಕಂಠರೇ! ನಿಮ್ಮ ಆಕ್ಷೇಪಕ್ಕೆ ಇಲ್ಲಿ ಎಡೆಯಿಲ್ಲ. ಮುಕ್ತಕಗಳಲ್ಲಿ ಉಪಮಾನೋಪಮೇಯಗಳ ಔಚಿತ್ಯನಿರ್ಧಾರಕ್ಕಾಗಿ ಯಾವುದೇ ಸಂದರ್ಭಗಳಿಲ್ಲದ ಕಾರಣ ಅತ್ಯಧಿಕವಾಗಿ ಕಲ್ಪನೆಯ ವೈಚಿತ್ರ್ಯವೇ ರಸಿಕರ ಪಾಲಿಗೆ ಆಕರ್ಷಕವಾಗುವುದು.
ನೀಲಕಂಠ ಎಂಬ ನಿಮ್ಮ ನಾಮಾಂಕಿತಂ
’ಕ್ಷ್ವೇಲಕೀರ’ ಎಂಬ ರೂಪಕದಿನೇಂ|
ಜಾಲಿಸಿರ್ಪವೋಲದೇನಾಯ್ತೆ ಪೇಳಿಮ್, ಓ!
ಲೀಲೆಯಲ್ತೆ ಮೌರ್ಯಲೇಖನಮಿದುಂ||:-):-) 🙂
ತಮ್ಮ ಹಾರೈಕೆಗೆ ಮನಸಾ ಧನ್ಯವಾದಗಳು ಗುರುಗಳೇ…
ಈ ಸಂದರ್ಭದಲ್ಲಿ ಒಂದು ಸಂಶಯವೆದ್ದಿದೆ…ಮುಕ್ತಕಗಳ ವಿಷಯದಲ್ಲಿ ಉಪಮಾನೋಪಮೇಯಗಳ ಔಚಿತ್ಯದ ಪ್ರಶ್ನೆ ಬರುವುದಿಲ್ಲವಾದಲ್ಲಿ ಮತ್ತಾವ ಸಾಹಿತ್ಯಿಕ ರಚನೆಯಲ್ಲಿ ಈ ಔಚಿತ್ಯದ ಪ್ರಶ್ನೆ ಬರಬಹುದಾಗಿದೆ? ದಯವಿಟ್ಟು ತಿಳಿಸಿಕೊಡುತ್ತೀರಾ?
ಮೌರ್ಯರೆ, ಹೌದು, ಸರ್ ತಿಳಿಸಿದ೦ತೆ ಈಗ ಅನ್ನಿಸುತ್ತಿದೆ ನಿಮ್ಮ ಅಲ೦ಕಾರ ಸ್ವಾರಸ್ಯ.. ವಿಶ್ವವನ್ನೇ ಸುಟ್ಟುಹಾಕಬಲ್ಲ ಭಯ೦ಕರ ವಿಷ ಶ೦ಭುವಿನ ಕೊರಳಲ್ಲಿ ಗಿಳಿಯ೦ತೆ ತಣ್ಣಗೆ ಕೂಡುವುದಾಯಿತು ಎ೦ದು! ನಾನು ಶುದ್ಧ ಶಾಕಾಹಾರಿಯಾಗಿದ್ದರೂ ನಿಮ್ಮ ಗರಲಶುಕದ ಸವಿಯನ್ನು ಸವಿಯುತ್ತಿದ್ದೇನೆ!! 🙂
(ಅ೦ದಹಾಗೆ ನಾನು ಮಾನ್ಯನಲ್ಲ :))
ಹಾ(ಲಾಹ)ಲಕೀರ ತರವೇ ?!
haalakheeradante 🙂
ಅಯ್ಯಯ್ಯೋ ನಾನು “ಸಾರ್” ಅಲ್ಲ ಸಾರ್…ನನ್ನ ವಯಸ್ಸಿನ್ನೂ ಇಪ್ಪತ್ತು ಸಂವತ್ಸರಗಳಷ್ಟೇ…ನಿಮ್ಮ ಮನೆಯ ಹುಡುಗನಂತೆ ನನ್ನನ್ನು ತಿಳಿಯಿರಿ…
I meant Ganesh sir 🙂
ಪ್ರಿಯ ಮೌರ್ಯ,
ಮುಕ್ತಕೇತರಸಾಹಿತ್ಯದಲ್ಲಿ (ಅಂದರೆ ಪ್ರಬಂಧರೂಪದ ಖಂಡಕಾವ್ಯ, ಗೀತಕಾವ್ಯ, ಮಹಾಕಾವ್ಯ, ಚಂಪೂ, ರೂಪಕಪ್ರಕಾರಗಳು ಇತ್ಯಾದಿ) ಸಂದರ್ಭೌಚಿತ್ಯದಿಂದ ಕೂಡಿರುವಂಥ ಉಪಮಾನೋಪಮೇಯವಿನ್ಯಾಸ ಮುಖ್ಯ.
ಬರಿಯ ಹೊಗಳಿಕೆಯ ಮಾತೇಕೆ. ಅಭಿನಂದನೆಗಳು. ’ಗರಳಶುಕ’ದಂತೆ ’ಕಂಠಮೆನಿಪ್ಪಾ ಗೂಡ’ನ್ನು ಸಾಮಾಸಿಕವಾಗಿಸಿದ್ದರೆ ಚೆನ್ನಾದ ರೂಪಕವೂ ಆಗುತ್ತಿತ್ತು.
Hmmmm….nija sir !
ಮೌರ್ಯ, ನಿನ್ನ ಪದ್ಯಗಲೆರಡೂ ಬಹಳ ಇಷ್ಟವಾದವು. (ಮೊದಲ ಪದ್ಯದ, ೨ನೇ ಗಣದಲ್ಲಿ ಸ್ವಲ್ಪ ತೊಡಕಿದೆ)
ನೋಡಿದಿರಾ ಪ್ರಸಾದ್ ಸರ್, ನಮ್ಮ ” ಅರರರರರೆ……. ಗಿಣೀ ರಾಮ”ನ ಕಲ್ಪನೆಯನ್ನು !!
ಮೌರ್ಯ, ಎರಡೂ ಪದ್ಯಗಳೂ ಹಿಡಿಸಿತು ಕಣೋಪ್ಪ
ಮೌರ್ಯರೆ, ಎಂದಿನಂತೆ ಒಳ್ಳೆಯ ಪದ್ಯಗಳನ್ನು ನೀಡಿರುವುದಕ್ಕಾಗಿ ಧನ್ಯವಾದಗಳು.
ಲೌಕಿಕಪೌರಾಣಿಕದವ-
ಲೋಕನಮಪ್ಪಂತೆ ಕಾಣ್ಬ ಪದ್ಯಯುಗಳಂ ಮೌರ್ಯಾ!
ಸಾಕೆನೆ ಬಿತ್ತರದಿಂ ತ್ವ-
ಲ್ಲೋಕಪ್ರೀತಿಯನೆ ತೋರ್ಕುಮೀ ಮಾರ್ಗದೊಳಂ
(ಸೊಗಸಾದ ಪದ್ಯಗಳು. ಕೊನೆಯ ಪದ್ಯದ ಕೊನೆಯ ಪಾದದ ಪ್ರಾಸಸ್ಥಾನದಲ್ಲಿ ಅನವಧಾನವಾಗಿದೆಯಲ್ಲ!!)
ಹಾಗಂದ್ರೆ ಏನ್ ಸಾರ್ ?
ಪೊಗಳುತ್ತುಮಿರ್ಪ ವರರೈ
ಮಿಗೆಯಾಯ್ತೀ ನಿಮ್ಮ ಶಂಸನದ ವಾಗ್ಝರಿಯಿಂ
ತು ಗಿಳಿಯನೇ ಮಾಡಿದಿರೆ
ನ್ನಂ ಗಡ ನಿಮ್ಮೀ ಪ್ರಗಲ್ಭ ವಾಕ್ಪಂಜರದೊಳ್
ಪದ್ಯಪಾನದ ಹಿರಿಯರೇ, ತಮ್ಮೆಲ್ಲರ ಹೊಗಳಿಕೆಯಿಂದಾಗಿ ನನ್ನಲ್ಲಿ ಧನ್ಯತಾಭಾವ ಮೂಡಿದೆ. ಆದರೆ ಅನುಪಮವಾದ ಸಾಲಂಕಾರಪೂರ್ಣ ವಾದ ಪ್ರಂಶಸೆಯಿಂದ ನನಗೆ ಬಹಳ ಗಲಿಬಿಲಿಯಾಗುತ್ತಿದೆ. ನಿಮ್ಮ ಹೊಗಳಿಕೆಯ ಮಾತುಗಳೇ ಪಂಜರದ ಸರಳುಗಳಾಗಿ ನನ್ನನ್ನು ಗಿಳಿಯಂತೆ ಬಂಧಿಸಿದೆ. ಹಳಗನ್ನಡದ ವಿಷಯದಲ್ಲಿ ಅಷ್ಟಾಗಿ ಪಾಂಡಿತ್ಯವಾಗಲೀ, ಪ್ರಭುತ್ವವಾಗಲೀ ಇರದ ನನ್ನಂಥ ಅರ್ಭಕನನ್ನು ನಿಮ್ಮಲ್ಲಿ ಒಬ್ಬನನ್ನಾಗಿಸಿ ಪ್ರೀತಿಯಿಂದ ಕಾಣುತ್ತಿರುವುದು ನಿಮ್ಮೆಲ್ಲರ ಸಹೃದಯತೆ.ಅದೇ ನನ್ನ ಪಾಲಿಗೆ ಅಮೃತಸದೃಶವಾದದ್ದು. ನಿಮ್ಮೆಲ್ಲರ ಪ್ರೀತಿಯು ಹೀಗೆಯೇ ಇರಲೆಂದು ಅರ್ಥಿಸುತ್ತೇನೆ. ಮತ್ತೆ ಮತ್ತೆ ಧನ್ಯವಾದಗಳು.
ಮೊದಲ ಮೂರು ಪಾದಗಳ ಆದ್ಯಕ್ಷರಗಳು ಸಿಂಹಪ್ರಾಸದಲ್ಲಿಯೂ ಕೊನೆಯದು ಗಜಪ್ರಾಸದಲ್ಲಿಯೂ ಇವೆ. ದ್ವಿತೀಯಾಕ್ಷರಪ್ರಾಸ ಸರಿಯಾಗಿದೆ.
ಕ್ಷಮಿಸಬೇಕು ಆದರೆ ಪ್ರಾಸವಿಚಾರದಲ್ಲಿ ನಾನು ಅಜ್ಞ….ಸಿಂಹಪ್ರಾಸ, ಗಜಪ್ರಾಸಾದಿಗಳ ಬಗೆಗೆ ಪೂರ್ಣ ವಿವರ ನೀಡುವುದಾದಲ್ಲಿ ನಾನು ಧನ್ಯ…
ಗಜ-ಸಿಂಹ-ಹಯಾದಿ ಪ್ರಾಸಗಳ ವೈವಿಧ್ಯದ ಪರಿಚಯಕ್ಕಾಗಿ ಇಲ್ಲಿಯೇ ಪಾಠಗಳನ್ನು ನೋಡುವುದು. ಮೌರ್ಯನ ಪದ್ಯಕ್ಕೆ ಪ್ರತಿಕ್ರಿಯೆ ನೀಡುವಾಗ ಕೊಪ್ಪಲತೋಟನ ಕಂದದ ಎರಡನೆಯ ಸಾಲಿನಲ್ಲಿ ಮೂರು ಮಾತ್ರೆಗಳು ಹೆಚ್ಚಾಗಿವೆ. ಇದಕ್ಕೆ ಉತ್ತರಿಸುವಾಗ ಮೌರ್ಯನ ಕಂದಪದ್ಯದ ಎರಡನೆಯ ಸಾಲಿನ ಕೊನೆಗೆ ಯತಿಭಂಗವಾಗಿದೆ. ವೃತ್ತಗಳಲ್ಲಿ ಮಾತ್ರ ಎರಡನೆಯ ಸಾಲಿನಲ್ಲಿ ಯತಿವಿಲಂಘನ ಸಂಮತ. ಕಂದ, ಸಾಂಗತ್ಯ, ಷಟ್ಪದಿ ಇತ್ಯಾದಿಗಳಲ್ಲಿ ಉತ್ತರಾರ್ಧದ ಬಳಿಕ ಯತಿ ಕಡ್ಡಾಯ.
ಎಲ್ಲರೆದೆ ಪಂಜರದೊಳಡಗಿ ಕುಳಿತಿಹ ಗಿಳಿಯೆ
ನಿಲ್ಲಿಸದೆ ವಿಭುಗುಣವ ಕುರಿತು ಹಾಡೈ ।
ಸೊಲ್ಲದುಡುಗಿರೆ ಕಡೆಗೆ ತೆರೆದೊಳಗಿನಗಳಿಯನು
ಮೆಲ್ಲ ಜರಪಂಜರವ ತೊರೆದು ಹಾರೈ ।।
**ಎಲ್ಲರೆದೆ ಗೂಡಿನೊಳಗಡಗಿ …..
ಪದ್ಯವೂ ಕಲ್ಪನೆಯೂ ಚೆನ್ನಾಗಿವೆ; ಅಭಿನಂದನೆಗಳು.
ಧನ್ಯವಾದಗಳು ಗಣೇಶ್ ಸರ್,
“ಒಳಗಿನ ಚಿಲಕದ ಪಂಜರ”ದ ಕಲ್ಪನೆ ನನಗೂ ಸಂತೋಷತಂದಿತು. ಪದ್ಯ ಅಲಂಕಾರಯುತವಾಗಿದೆಯೆ? (ಯಾವ ಅಲಂಕಾರ?) ಎಂದು ತಿಳಿಯುತ್ತಿಲ್ಲ.
ದಯವಿಟ್ಟು, ಎಲ್ಲ ಪದ್ಯಗಳಲ್ಲಿನ “ಅಲಂಕಾರ”ಗಳನ್ನು ಸ್ಪಷ್ಟಪಡಿಸಿಕೊಟ್ಟಲ್ಲಿ, ಕಲಿಕೆಗೆ ಬಹಳ ಅನುಕೂಲವಾಗುವುದು.
ನಿಮ್ಮ ಈ ಪದ್ಯದಲ್ಲಿ ಮುಖ್ಯವಾಗಿರುವುದು ರೂಪಕಾಲಂಕಾರ. ಆಂಶಿಕವಾಗಿ ಅಪ್ರಸ್ತುತಪ್ರಶಂಸಾಲಂಕಾರವೂ ಇದೆ.
ಅಥವಾ ರೂಪಕದಿಂದ ಅಪ್ರಸ್ತುತಪ್ರಶಂಸಾಲಂಕಾರಧ್ವನಿಯೂ ವಸ್ತುಧ್ವನಿಯೂ ಹೊಮ್ಮಿವೆಯೆಂದೂ ಭಾವಿಸಬಹುದು.
ಬಹಳ ಚೆನ್ನಾಗಿದೆ
ತಡವರಿಸದೆ ಸರಸತಿಯೇ
ನುಡಿದವೊಲಚ್ಚರಿಯ ಮೂಡಿಸುವ ಗಿಳಿಮರಿಯೇ|
ಕಡೆಗೀ ಬಂಧನ ಸುಖಮಂ
ಪಡೆದೆ ನಿನಗೆ ನಿನ್ನ ಗುಣವೇ ಕುತ್ತಾಯ್ತಲ್ತೇ|
*ಗುಣವೆ
ಪ್ರಿಯ ಚೀದಿ, “ಅಖಿಲೇಷು……” ಪದ್ಯದ ಛಾಯೆಯೇ ಅದರೂ ಪೂರ್ವಾರ್ಧದ ಸೊಗಸಾದ ಸ್ವೋಪಜ್ಞತೆ ಮತ್ತು ಆದ್ಯಂತ ಸಂದಿರುವ ಶೈಲಿಯ ಲಾಲಿತ್ಯ-ಆಭಿಜಾತ್ಯಗಳ ಕಾರಣ ಕಂದವಿದು ಚೆನ್ನಾಗಿದೆ.
ಹೌದು ಸರ್, ಬೇರೆ ಕಲ್ಪನೆಗಳು ತಕ್ಷಣ ತೋಚದ ಕಾರಣ ಅದನ್ನೇ ಸ್ವಲ್ಪ ಸಡಿಲಿಸಿ ಬರೆದಿದ್ದೇನೆ.. ಮೆಚ್ಚುಗೆಗೆ ಧನ್ಯವಾದಗಳು
ತಡವರಿಸದ ಸರಸಗೀತಿಕೆ ತುಂಬಾ ಚೆನ್ನಾಗಿದೆ ಚೇದಿ.
ಗಿಳಿಯು ‘ಮರಿ’ಯಾಗಿದ್ದಾಗಲೇ ಸರಸತಿಯ ಹಾಗೆ ನುಡಿದು ಬಂಧನಕ್ಕೊಳಗಾದ ಪದ್ಯ ಚೆನ್ನಾಗಿದೆ ಚೀದಿ 😉
ಚೀದಿಯವರೆ, ಒಳ್ಳೆಯ ಪದ್ಯಕ್ಕಾಗಿ ಧನ್ಯವಾದಗಳು.
ಕಬ್ಬಿಣ-ಕಾಂಕ್ರೀಟ್ ಕಾಡಿನಲ್ಲಿ ಹಸುರಿನ ಸ್ವಾತಂತ್ರವು ಹರಣವಾದಂತೆ, ಲೋಕವಾರ್ತಾಕೋಲಾಹಲದಲ್ಲಿ ಕವಿತೆಯು ಸೆರೆಯಾದಂತೆ ಪಂಜರದ ಗಿಳಿಯ ಗತಿಯೆಂದು ಈ ಕಂದದ ಭಾವ:
ಕಾಲಾಯಸಕಾಂತಾರದೆ
ಕೀಲಿತಮಾಯ್ತೇಂ ಸ್ವತಂತ್ರಸತ್ತ್ವಂ ಪಸುರಾ?
ಆಲಿಸಲಪ್ಪುದೆ? ಕವಿತಾ-
ಶೀಲತೆ ಸೆರೆಯಾಗೆ ವಾರ್ತೆಯೊಳ್ ಶುಕರೂಪಿಂ||
ತುಂಬಾ ಚೆನ್ನಾಗಿದೆ ಸರ್
ಸುಂದರ “ಕಾಲವಾಚಕ” ಪದ್ಯಕ್ಕೆ ಧನ್ಯವಾದಗಳು ಗಣೇಶ್ ಸರ್. ಮೊದಲನೆಯ ಸಾಲಂತೂ ಮತ್ತೆಮತ್ತೆ ಗುಣುಗುಣಿಸುವಂತಿದೆ.
A lesson in contemporizing. Thanks.
ಚೀದಿ, ಉಷಾ ಮತ್ತು ಪ್ರಸಾದು ಅವರಿಗೆ ಧನ್ಯವಾದಗಳು. ನನ್ನ ಈ ಪದ್ಯದಲ್ಲಿ ರೂಪಕ ಮತ್ತು ಸಸಂದೇಹಗಳ ಸಂಸೃಷ್ಟಿಯೂ (ಎದ್ದುತೋರುವಂಥ ವ್ಯತ್ಯಾಸವಿರುವ ಮಿಶ್ರಣ) ವಸ್ತುಧ್ವನಿ-ರಸಧ್ವನಿಗಳೂ ಇವೆಯೆನ್ನಬಹುದು.
Fantastic sir! Every line is brilliant – I liked kAlAyasakAntArade – superb! A fine gangA-yamunA-sangama of classical style and contemporary perspective!
ಕವಿತೆಯು ಆಲಿಸಲಪ್ಪುದು ಗಣೇಶ್ ಸರ್, ನಿಮ್ಮಂತಹ ಮಾರ್ಗದರ್ಶಕರಿರುವಾಗ ಲೋಕವಾರ್ತಾಕೋಲಾಹಲದಲ್ಲಿಯೂ ಪದ್ಯಪಾನ ವೇದಿಕೆಯಲ್ಲಿ ಕವಿತೆಯು ಆಲಿಸಲಪ್ಪುದು, ಕಬ್ಬಿಣದ-ಕಾಂಕ್ರೀಟಿನ ಮನೆಯಲ್ಲೂ rooftop gardening ನಿಂದ ಅದ್ಭುತ ಸಸ್ಯಪ್ರಪಂಚವನ್ನೂ ಹೊಂದಬಹುದು. ಪದ್ಯ ಬಹಳ ಚೆನ್ನಾಗಿದೆ ಸರ್ 🙂
ಹೆಬ್ಬಳಲು ಮತ್ತು ಸೋಮರ ಮೆಚ್ಚುಮಾತುಗಳಿಗಾಗಿ ಮನದಾಳದ ನೆನಕೆಗಳು.
ಸಹೋದರರೆ, ತುಂಬ ಸೊಗಸಾದ ಕಲ್ಪನಾಶುಕವನ್ನು ಪದ್ಯಪಂಜರದಲ್ಲಿ ಬಂಧಿಸಿದ್ದೀರಿ. ಧನ್ಯವಾದಗಳು.
ಮುಟ್ಟsಲಾಗದೆ ಮ್ಯಾಗೆ ಕಟ್ಟಿsಹ ಗಿಣಿಗೂಡ
ದಿಟ್ಟಿsಸೆ ಕೆಂದಿsನಲಾಗs ।
ತೊಟ್ಟ ಹಸಿರಂಗಿಯಲಿ ಪುಟ್ಟsನೆ ಗಿಣಿನೋಡ
ತೊಟ್ಟಿsಲ ಪಂಜsರದಾಗs !!
ಕೆಂದು = ಕೆಂಪು / ಪ್ರೀತಿ
ಆಹಾ! ಅದ್ಭುತಪದ್ಯ!! ತೊಟ್ಟಿಲ ಕಂದನನ್ನು ಧ್ವನಿಸುವ ಈ ಕವಿತೆ ಅಭಿರಾಮ.
ಚೆನ್ನಾಗಿದೆ,ಉಷಾ. ಸವಿನೆನಪು ಮರುಕಳಿಸಿದೆ ನಿಮ್ಮೀ ಪದ್ಯದಿಂದ 🙂
ತೊಟ್ಟಿಲ ಕಂದನನ್ನು, ಅರ್ಥಾತ್ ಸೊಂಪಾಗಿ ಮಲಗಿರುವ ಕಂದನನ್ನು ಧ್ವನಿ(ಅಳಿ)ಸುವುದೆ?
ತಂಪಾಗಿ ಮಲಗಿರ್ಪ ಕೆಂಪಽನೆ ಕಂದನ್ನ
ಜೊಂಪಿನಿಂದೆಬ್ಬಿಸುತ್ತಳಿಸಿ!ದವಳನ್ನು
’ಸಂಪನ್ನೆ’ ಎಂಬುವರದಾರೋ!! 😀
ಹೆಂಗರುಳಿಗೇ ಇಂತಹ ಪದ್ಯ ರಚಿಸಲು ಸಾಧ್ಯ, ಬಹಳ ಚೆನ್ನಾಗಿದೆ 🙂
ನನ್ನ ಪುಟ್ಟಗಿಣಿಯ ಸಾಂಗತ್ಯ ಮೆಚ್ಚಿದ ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು,
ಪ್ರಸಾದ್ ಸರ್, ’ಸಂಪನ್ನೆ’ ಎಂಬುವರದಾರೋ!!? ಅಂದಿರಾ? ನನಗೆ ಸಧ್ಯದಲ್ಲೇ GM ಪ್ರಮೋಷನ್ ಬರಲಿದೆ ….!!
ಆ ಸಂದರ್ಭಕ್ಕೆ ’ಸಂಪನ್ನೆ’ಗಿಂತ ’ಸಂಪಾದ್ನೆ’ ಎಂಬ ಮಾತು ಒಪ್ಪುತ್ತದೆ 😉
ಉಷಾ, ಕಂದನನ್ನು ಸಾಮಾನ್ಯವಾಗಿ ಎಲ್ಲರೂ ಗಿಣಿಗೆ ಹೋಲಿಸಿದರೆ, ನೀವು ಗಿಣಿಯನ್ನು ಕಂದನಿಗೆ ಹೋಲಿಸಿ ಅನ್ಯತೆಯನ್ನು ಮೆರೆದು ಒಳ್ಳೆಯ ಪದ್ಯವನ್ನು ನೀಡಿದ್ದೀರಿ.ನಿಮ್ಮೆಲ್ಲಾ ಪದ್ಯಗಳಿಗೆ ಧನ್ಯವಾದಗಳು.ಅಂದ ಹಾಗೆ, ನೀವು ಭಡ್ತಿ ಹೊಂದಲಿರುವುದಕ್ಕಾಗಿ, ನಾನು ಮುಂಚಿತವಾಗಿ ಸಲ್ಲಿಸುವ ಅಭಿನಂದನೆಗಳು. 🙂
ಓ ..ಯಾರಿಗೂ ಉದ್ಯೋಗಸ್ಥ ಮಹಿಳೆಯರ (ಉ. ಮ !) ಈ Code Word ತಿಳಿದಿರಲಿಕ್ಕಿಲ್ಲ. G.M = Grand Mother… !!
ನನಗೆ ಗಿಳಿಯನ್ನು ಪಂಜರದಲ್ಲಿಡುವುದು ಇಷ್ಟವಿಲ್ಲ ಅದನ್ನೇ ಬಿಂಬಿಸುವ ಪದ್ಯಗಳು:
ಮರನೊಳೆಳೆ ಮಾವ ಪಾಂಗಿಂ
ಶರದೃತುವಿನವೊಲೆಲೆ ಬಟ್ಟೆಯಂ ಶಿಶಿರದೊಳುಂ
ಮೆರಗಿಂ ಪಾದಪಕೀವನ
ವಿರಕ್ತಿಯಿಂ ಬಂಧಿಸಲ್ಕೆ ಮರುಗುತಲೊರೆವೆಂ
ರೆಂಕೆಯಿನವಶಮೆ ಸಾರ್ಗುಂ
ಶಂಕೆಯೆ ಪಿಡಿಯಲ್ಕನೀಡಶುಕನಂ ಮನುಜಂ
ನೂಂಕಿಪುದು ಪಂಜರದೆ ಹಾ
ಸಂಕುಚಿತದ ಭಾವಮಲ್ತೆ ಸಖನೇ ವೇಡಾ
ಸರಳಿನ ಪಂಜರದಿರ್ಕೆಯ-
ನುರಿಮೆಣಸಿನಕಾಯನೀವನರುಪಿದುದಂ ನೀ-
ನೊರೆದೊರೆದಪೆಯಲ್ತೆ ಪಸಿವಿ-
ನುರಿಯಂ ತಣಿಸಲ್ಕೆ, ನಿನ್ನ ನಿಜಮನದುಲಿಯೇಂ
ಗಿಳಿಯ ಸ್ವಗತ ತನ್ನನ್ನು ಬಂಧನದಲ್ಲಿಟ್ಟಿರುವವನನ್ನು ಕುರಿತು:
ಕಾಲ್ವೆರಳಿನುಗುರಿನಿಂ ಕೈ
ಸೋಲ್ವಂದದೆ ಗೀಱೆ, ಚಂಚುವಿಂ ವ್ರಣನಿಕರಂ
ಪೋಲ್ವೆನೆ ಕುಕ್ಕುತೆ, ಖಳನಂ
ಸೊಲ್ವಡೆತದೆ ಕಾಂತಿ ಮೊಗದಿನಿಳಿವೆನೆ ಮುಳಿಗುಂ
ಮರನೊಳೆಳೆ ಮಾವ ಪಾಂಗಿಂ = ಮರದಲ್ಲಿ ಎಳೆಯ ಮಾವಿನ ಆಕಾರದಲ್ಲಿ
ಶರದೃತುವಿನವೊಲೆಲೆ ಬಟ್ಟೆಯಂ ಶಿಶಿರದೊಳುಂ = ಎಲೆಯಿಲ್ಲದ ಶಿಶಿರದಲ್ಲಿ ಶರದೃತುವಿನ ಎಲೆಬಟ್ಟೆಯನ್ನು ಕೊಡುವಹಾಗೆ ಗಿಳಿಯ ಹಿಂದು ಇರುತ್ತವೆಯಲ್ಲವೇ
ರೆಂಕೆಯಿನವಶಮೆ ಸಾರ್ಗುಂ = (ಹಾರುವ) ರೆಕ್ಕೆಯು ಸ್ವಾತಂತ್ರ್ಯದ ಸಂಕೇತ
ಪಿಡಿಯಲನೀಡಶುಕನಂ = ಗೂಡನ್ನೇ ಕಟ್ಟದ ಗಿಳಿಯನ್ನು (ಪಂಜರದಲ್ಲಿಡುವುದು ಎಂತಹ ನ್ಯಾಯ)
ಸೊಲ್ + ಬಡೆತದೆ ಮುಳಿಗುಂ = ಮಾತಿನ ಹೊಡೆತ ತಾಗುವ ಹಾಗೆ ನಿಂದಿಸಬೇಕು
ಪ್ರಿಯಸೋಮ! ಹಳಗನ್ನಡದ ಇನಿ-ಬನಿಗಳು ಪೊಣ್ಮುವಂತೆ ಜಿಗಿ-ಬಿಗಿಗಳ ಬಿಣ್ಪಿನಿಂದ ರಚಿಸಿದ ಈ ಕಂದಗಳ ಸೊಗಸೇ ಸೊಗಸು!! ಅಭಿನಂದನೆಗಳು…..ನಿನ್ನ ಕಲ್ಪನೆಯಾಗಲಿ ಪದಪದ್ಧತಿಯಾಗಲಿ ಅನವದ್ಯ; ಹೃದ್ಯ..!!!
ಧನ್ಯೋಸ್ಮಿ ಸರ್ 🙂
ಸೋಮರೆ, ನಿಮ್ಮ ಪದ್ಯಗಳೆಲ್ಲವೂ ಎಂದಿನಂತೆ ಚೆನ್ನಾಗಿದೆ. ಪಂಜರದ ಗಿಳಿಯೆಂಬ ಪದ್ಯದ ವಸ್ತು ತುಂಬ ಇಷ್ಟವಾಯಿತು. ಧನ್ಯವಾದಗಳು.
Education is not directly proportional to academics.
ದ್ವೈವಿಧ್ಯಂ ಗಡ ರೀತಿ ಪಂಜರದೆ ವಾಸಂಗೈವ ಕೀರಂಗಳೊಳ್
ನೋವುಂಡಿರ್ಪುವು ದಾರಿಗಾಯುತಲಿರಲ್ ಸ್ವಾತಂತ್ರ್ಯಕಾಗೇಗಳುಂ|
(sky)ದೈವಕ್ಕೇರದವರ್ ಮಹಾವಿದಿತಕೀರಂಗಳ್ ಶಿವಾದೇಶಕ- (astrologer)
ರ್ಗಾ ವಾರೂಢಮೆ(cage) ಗಮ್ಯಮೈ ಅದಿತಿ(freedom)ಯಿದ್ದೇಂ ಧೀಬಲಂ ಲುಪ್ತಮೈ||
ಬಿಗಿಯಾದೀ ಘನವೃತ್ತಮೊಪ್ಪುಗುಮಲಾ ನೈಘಂಟುಕಪ್ರೌಢಿಯಿಂ!!
🙂 😀 dhanyavAdagaLu
ಪುಗಿಸಿರ್ದೇಂ ಸ್ತುತಿಯಂ ವಿಡಂಬನದೆ ನೀಂ| ಪಾದತ್ರದೊಲ್ ಶಾಲಿನೊಳ್
heavy weight padya prasAdu, cennAgide 🙂
ಧನ್ಯವಾದಗಳು ಸೋಮ.
‘ಸ್ವಾತಂತ್ರ್ಯಕಾಗೇಗಳುಂ’ ಎಂದು ಕಾಗೆಗಳು ಸ್ವತಂತ್ರವಾಗಿವೆ ಎಂದೂ ಹೇಳಿದ್ದೀರಾ 😛 ಸೊಗಸಾಗಿದೆ :
haha. Parrot is the vehicle of Manmatha and crow is the vehicle of Shani.
ಎಲ್ಲಿಯ ಕೀರವದೆಲ್ಲಿಯ ಕಾಗೆಯು
ಬಲ್ಲೆಯೇಂ ಶುಕಪಂ ಮನ್ಮಥಂ| ಮೇಣಿನ್ನು
ಕಲ್ಲೆದೆಯ ಶನಿಯು ಕಾಕಪನು||
Same:
ಎಲ್ಲಿಯ ಕೋಣ(ಶನಿ)ನದೆಲ್ಲಿಯ ಕಾಮನು
ಬಲ್ಲೆಯೇನವನ ಯಾನವದು| ಕಾಗೆ ಮೇಣ್
ಸೊಲ್ಲುಳ್ಳ ಕೀರವಿವನದೈ||
ಪ್ರಸಾದರೆ, ಸೋಮರೆಂದದ್ದು, ನಿಮ್ಮ ಪದ್ಯ ನಿಘಂಟಿನಂತೆಯೇ ಭಾರವಾದದ್ದೆಂದು. ಸ್ತುತಿಯೆಂದು ಮೋಸ ಹೋಗದಿರಿ . 🙂
ನಿಘಂಟುವನ್ನು ಪ್ರಸ್ತಾವಿಸಿರುವವರು ಶ್ರೀ ಗಣೇಶರು. ಸೋಮರ ಪ್ರಸ್ತಾವ ಗುರುತ್ವದ ಬಗೆಗೆ. ನೀವು ಹೀಗೆ ನನ್ನನ್ನು ವಿಭ್ರಮೆಗೊಳಿಸಿದರೆ, ನನಗೆ ಸುತ್ತಿಯ ಅಗತ್ಯ ಬಿದ್ದೀತು 🙂 😀
ಪಡೆದಳ್ಕರಿಂ, ರುಚಿಯ ಪಣ್ತಿರುಳಿಂ,
ಪೊಡಮಟ್ಟೆಯೈ ಹಿತದ ಬಾಳ್ತೆಗೆ ನೀಂ!
ಸೊಡರಿತ್ತ ಪೊನ್ ಪೊಡವಿಯಂ ಮರೆತುಂ
ಗುಡಿಯೆಂದೆಯೇಂ ಪೊಳೆದ ಪಂಜರಮಂ?
ಮೊದಲನೆಯ ಪಾದದಲ್ಲಿ ವೃತ್ತಭಂಗವಾಗಿದೆ. ಅದು “ಪಡೆದಳ್ಕರಿಂ…….” ಇತ್ಯಾದಿಯಾಗಿ ಇರಬೇಕಿತ್ತು.
ಸರಿಪಡಿಸಿದ್ದೇನೆ. ಧನ್ಯವಾದಗಳು.
ಪಂಜರದ, ಅವಲಂಬನೆಯ ಅಲ್ಪತೃಪ್ತಿಯಿಂದ ಕಾಡನ್ನೇ ಮರೆತ ಗಿಳಿಯ ಪದ್ಯ ಚೆನ್ನಾಗಿದೆ
Thanks Soma 🙂
सुखं शत्रुमुक्तं सकाले सुभोज्यं
सखीसाहचर्यं गृहं स्वर्णपूर्णम् |
तथाप्याम्रमारुह्य वन्यं च रम्यं
यदत्तानि चूतानि नूनं स्मरामि ||
This is a parrot reflecting on its current existence:
“I have enemy-free pleasure; timely good food; my consort is always with me (no viraha); and my home is made of gold (a gilded cage). But even then, I verily remember (or long for), those mangoes that I ate, perched on the beautiful mango tree in the forest”
ಸೊಗಸಾದ ಪದ್ಯ. ಒಳ್ಳೆಯ ಭಾವ-ಬಂಧಸಮಾಹಾರ. ಇಲ್ಲಿ ವ್ಯತಿರೇಕಾಲಂಕಾರವಿದೆ.
DhanyavAdagaLu, sir!
ಇಲ್ಲಿ ವ್ಯತಿರೇಕಾಲಂಕಾರವಿದೆ ಎಂಬುದು ಸರ್ವಸಿದ್ಧ. ನನ್ನಂಥವರ ಸಾಮರ್ಥ್ಯಕ್ಕೆ ತೀರ ವ್ಯತಿರೇಕವಾದ ರಚನಾಕೌಶಲ!
ಬಂಧನದ ಸಿರಿಗಿಂತ ಬನಸಿರಿಯನ್ನೇ ಸದಾ ನೆನೆಯುವ ಶುಕದ ಪದ್ಯ ಚೆನ್ನಾಗಿದೆ
ದಧಿಕ್ರಾವ್ಣೋ …. ದಧ್ನಾ ಸ್ನಪಯಾಮಿ – ಇದು ಸಾಧು ಎಂದಾದರೆ,
ಭುಜಂಗಪ್ರಯಾತಂ ತರಂ ಬಾಹುಜಕ್ಕಂ(parrot)
रामनामरसनोsस्मि सन्ततं
पारतन्त्र्यपरमव्रती तथा।
पक्षपातरहितश्शुकोsप्यहं
मुक्तिमार्गरहितो हि पञ्जरे॥
This is a poem full of shEShaalaMkaara (pun). Here the parrot is equated with Suka, the born saint and son of sage Vyaasa. Though the parrot is always praising the holy name of Sri Rama, following the disciplines of a great tradition (para-tantra, which also means bondage) and never falling prey to partiality (pakShapaata, also meaning bating of the wings; i.e., unable to fly)
finds hard to get liberation (salvation or freedom).
ಚೆನ್ನಾಗಿದೆ ಸರ್! ಆದರೆ ಪದ್ಯ ಶುಕದೇವನ ಪರವಾಗಿ ಪೂರ್ಣ ಅರ್ಥವನ್ನು ಕೊಡುತ್ತಿಲ್ಲ ಎ೦ದೆನಿಸುತ್ತಿದೆ. ದಯವಿಟ್ಟು ವಿವರಿಸುತ್ತೀರ? ಕೊನೆಯ ಪಾದ ಗಿಳಿಗೆ ಮುಕ್ತಿ ಇಲ್ಲ ಎನ್ನುತ್ತದೆ. ಆದರೆ ಶುಕನ ಬಗ್ಗೆ ಎನೂ ಹೇಳುವುದಿಲ್ಲ. ಅಥವ ಅವನಿಗೆ (so called) ಮುಕ್ತಿ ಎನ್ನುವುದಿಲ್ಲ, ಅವನ ಸ್ಥಿತಿ ಅದಕ್ಕೂ ಅತೀತ ಎ೦ದೆ?
ವಿಶೇಷಣಗಳೆಲ್ಲ ಶುಕನಿಗೂ ಸರಿಯಾಗಿ ಅನ್ವಯಿಸುತ್ತವೆಂಬುದನ್ನು ಮತ್ತೊಮ್ಮೆ ಗಮನಿಸಿ ನೋಡಿರಿ.
ಗಣೇಶ್ ಸರ್,
ಬಹಳ ಚೆನ್ನಾದ ಶ್ಲೇಷ, ತುಂಬಾ ಹಿಡಿಸಿತು.
ನೀಲಕಂಠರೆ,
ಶುಕದೇವನು ಜ್ಞಾನಿಯಾದರೂ ಮೋಕ್ಷಕ್ಕಾಗಿ ಪರಿತಪಿಸಿದನಲ್ಲವೇ, ಶುಕನ ಆ ಅವಸ್ಥೆಯನ್ನು ಪರಿಗಣಿಸಿ ಪದ್ಯವನ್ನು ಓದಿಕೊಂಡರೆ ಎಲ್ಲವೂ ಸರಿಹೊಂದುತ್ತದೆ, ಗಮನಿಸಿ
ಹೌದು, ಅದೇ ಅನ್ನಿಸಿತು. ಧನ್ಯವಾದಗಳು!!
ಅಲ್ಲದೆ ನೀಲಕಂಠರೆ, ’ಪರ’ ಪದಕ್ಕೆ ಅರ್ಥವೈಪರೀತ್ಯವಿರುವುದರಿಂದ, FOR ಆಗಿಲ್ಲದೆಡೆ AGAINST ಆಗಿದೆ ಎಂದುಕೊಂಡರಾಗುತ್ತಿತ್ತಲ್ಲವೆ?
ಬಂಧಮು ಪದ ಪಂಜರದೊಲ್
ಸಂಧಿಸಮಾಸದೆಲೆ ಸಂಕಲೆಯು ಬಗೆ ಬಿಗಿಯುಂ ।
ಸ್ಪಂದನಮು ಪದ ಪಡುವೊಡಲ್
ಸಂದಿನೊಳಗದೊ ಕವಿತಾಶುಕಮುಲಿದಿನಿದನಿಯುಂ ।।
ನಾಲ್ಕು ಪಾದಗಳ ಪಂಜರದಂತಾ ಕಟ್ಟುಪಾಡಿನ ನಡುವಿನ ಕಂಡಿಗಳಲ್ಲಿ ಕಾಣಸಿಗುವ “ಕವಿತಾಶುಕ”ದ ಕಲ್ಪನೆಯ ಪದ್ಯ
ಬಂಧಮು ಸ್ಪಂದನಮು ಅಂದಾಗ ತೆಲಗಿನ ಹಾಗೆ ಕೇಳಿಸುತ್ತದೆಯಲ್ಲವೇ 🙂
ಅಷ್ಟುಮಾತ್ರ ಸಾಮ್ಯವಿದೆಯಲ್ಲ ಆ ವಿರುದ್ಧಪದಗಳಲ್ಲಿ ಎಂಬುದಷ್ಟೇ ಸಮಾಧಾನ 🙁
ವಂದನಮು ಪ್ರಸಾದ್ ಸರ್ !
ನಿಮ್ಮ ಕಲ್ಪನೆ ತುಂಬ ಚೆನ್ನಾಗಿದೆ. ಆದರೆ ಸೋಮನು ಗುರುತಿಸಿದಂತೆ ಬಂಧವು ಮಾತ್ರ ಸ್ವಲ್ಪ ಸಡಿಲವಾಗಿದೆ. ದಯಮಾಡಿ ಸವರಿಸುವುದು.
ಧನ್ಯವಾದಗಳು ಗಣೇಶ್ ಸರ್, ನೀಕೂ ಸೋಮ!
ತಕ್ಕಮಟ್ಟಿಗೆ ಸವರಲು ಪ್ರಯತಿಸಿದ್ದೇನೆ :
ಬಂಧನಮೈ ಪಂಜರದೊಲ್
ಸಂಧಿಸಮಾಸದೊಡೆ ಸಂಕಲೆಯ ಬಗೆ ಬಿಗಿಯೊಳ್ ।
ಸ್ಪಂದನಮೈ ಪದಪದದಾ
ಸಂದಿನೊಳಗದೊ ಕವಿತಾಶುಕಮುಲಿದಿನಿದನಿಯುಂ ।।
ಸ್ವಲ್ಪ ಬದಲಾವಣೆಗಳೊಂದಿಗೆ :
ಬಂಧನಮೇಂ ಪಂಜರದೊಲ್
ಸಂಧಿಸಮಾಸದೊಡೆ ಸಂಕಲೆಯ ಬಗೆ ಬಿಗಿಯುಂ ?
ಸ್ಪಂದನಮೈ ಪದಪದದಾ
ಸಂದಿನೊಳಗದೊ ಕವಿತಾಶುಕಮುಲಿದಿನಿದನಿಯುಂ ।।
ಮರೆಯsದs ಹಸುರಿsನs ಕರಗsದs ಕೆಂಪಿsನs
ಮರುಗsದs ಒಡೆಯsನೊಡಲಿsನs – ಬರಡಿsನs
ಮೊರೆತಕ್ಕೆs ಸೊರಗಿs ಬಲಿಯಾದೆs
[ ಹಿಂದೆ ಸ್ವಚ್ಛಂದದಲ್ಲಿ ಹಾರಾಡಿ ಒಡಲೆಲ್ಲ ತುಂಬಿಕೊಂಡ ಹಸುರು ಮರೆತಿಲ್ಲ, ಸೂರ್ಯೋದಯ ಸೂರ್ಯಾಸ್ತಗಳನ್ನು ಯಥೇಷ್ಟವಾಗಿ ನೋಡಿ ತುಂಬಿಕೊಂಡ ಕೆಂಪು ಕಣ್ಣಿನಲ್ಲಿ ಕರಗಿಲ್ಲ. ಈ ನೆನಪುಗಳ ಜೊತೆ ಮರುಕವಿಲ್ಲದ ಒಡೆಯನ ಕರುಳಿನ ಬರಡು – ಇವೆಲ್ಲಗಳ ಮೊರೆತದಿಂದ ಸೊರಗಿ ಬಲಿಯಾದೆಯಲ್ಲ 🙁 ]
Very nice raam
ತುಂಬ ಪ್ರಾಸಾದಿಕವೂ ಪ್ರಾಸಾಧಿಕವೂ ಆದ ಚೆಲುವಿನ ತ್ರಿಪದಿ; ವಿಷಮಾಲಂಕಾರವನ್ನಿಲ್ಲಿ ಕಾಣಬಹುದು.
@ಚೀದಿ – _/\_
@ರಾಗ – ಒಂದು ಸಂಶಯ. “ಪ್ರಾಸಾದಿಕ” ಹಾಗೂ “ಪ್ರಾಸಾಧಿಕ” ಇವು “ನೈಘಂಟಿಕ” ಪದ್ಯ ಎಂದ ಹಾಗೆ ಮೆಚ್ಚುಗೆಯೋ ಅಥವ ಅಲ್ಲವೋ ತಿಳಿಯುತ್ತಿಲ್ಲ 🙂
ಅದೇನೇ ಇರಲಿ ತುಂಬ ಧನ್ಯವಾದ. _/\_ 🙂
ಇಲ್ಲ, ರಾಮ್; ಮನದಾಳದ ಮೆಚ್ಚುಗೆಯೇ ಹೌದು:-)
ಪ್ರಾಸಾಧಿಕ ಎಂಬುದು ಹೊಸಪದ; ಪ್ರಾಸಗಳು ಹೆಚ್ಚಾಗಿರುವ ಎಂದು ಅರ್ಥ…ಆದರೆ ನಿನ್ನ ತ್ರಿಪದಿಯ ಪ್ರಾಸಸಮೃದ್ಧಿಯು ಒಟ್ಟಂದದ ಅಂದವನ್ನೇನ್ನೇನನ್ನೂ ಕೆಡಿಸಿಲ್ಲ. ಇನ್ನು ಪ್ರಾಸಾದಿಕ ಎಂಬುದು ಆ ಪದ್ಯದ ತಿಳಿತನದ ದ್ಯೋತಕವಷ್ಟೇ
ನನ್ನ ಪ್ರಾಣದ ಅಲ್ಪತ್ವ-ಮಹತ್ತ್ವಗಳ ಬಗೆಗೆ ಜೋರಾದ ಚರ್ಚೆ ನಡೆದಂತಿದೆ!
ಅಲ್ಲ ಪ್ರಸಾದ್ ಸರ್, ಅದು ಸಾಧು(ದು)ವಾದ !!
ರಾಮಚಂದ್ರರೆ, ಒಳ್ಳೆಯ ಭಾವಭರಿತಪದ್ಯಕ್ಕೆ ಧನ್ಯವಾದಗಳು.
ರಾಮ್ ಬಹಳ ಚೆನ್ನಾಗಿದೆ
ಎಲ್ಲರ ಪದ್ಯಗಳೂ ಸೊಗಸಾಗಿವೆ.
ನನ್ನ ಒಂದೆರಡು ಪದ್ಯಗಳು-
೧.ಅರಗಿಳಿಯಾಲಾಪದೊಳಂ
ಬರಿಯೊಳ್ವಾತಿಂದಮಿರ್ಕುಮಲ್ತೇ ಕೋಪ-
ಸ್ಫುರಿತದ ಬಯ್ಗುಳಿನೇಗಳ್
ವರಮಾದತ್ತಲ್ತೆ ಬಿಡುವರೆಲ್ಲರ್ ಶೀಘ್ರಂ||
(ಅರಗಿಳಿ ಆಲಾಪದಲ್ಲಿ ಬರಿಯ ಒಳ್ಳೆಯ ಮಾತುಗಳಿಂದಲೇ(ಒಳ್ವಾತು) ಇರುತ್ತದೆಯಲ್ಲವೇ! ಕೋಪಸ್ಫುರಿತವಾದ ಬಯ್ಗುಳಿನಿಂದಲೇ ವರವಾಗುತ್ತದೆ.ಶೀಘ್ರದಲ್ಲೇ ಎಲ್ಲರೂ ಬಿಡುವರಲ್ಲ!)
೨.ದ್ರುತದೆ ಪಾರ್ದುದು ಬಂಧಿಸಿ ತಂದೊಡಂ
ಹಿತಮದಲ್ತೆನುತುಂ ಗಿಳಿ ದುಃಖದೊಳ್
ಸ್ತುತಿಪ ಕಾಲನೆ ಮೌನದೆ ಸಾಗಿರಲ್
ಹಿತಮದೆಂದು ಮರೀಚಮನುಂಡಿತೇ||
(ಮೊದಲು ಬಂಧಿಸಿ ತಂದಾಗ ದುಃಖದಲ್ಲಿ ಗಿಳಿ ಇದು ಹಿತವಲ್ಲ ಎಂದು ದ್ರುತದಲ್ಲಿ ಹಾರುತ್ತಿತ್ತು, ಸ್ತುತಿಪ ಕಾಲನೇ ಮೌನದಲ್ಲಿ ಸಾಗುತ್ತಿದ್ದಾಗ, ಅದೇ ಹಿತ ಎಂದು ಮೆಣಸನ್ನು ತಿಂದಿತೇ! )
೩.ಕಳುವಾಯ್ತು ನಿನ್ನಿಂದೆ ಬಾಲಕರ ಹೃದಯಂಗಳೆಲೆ ಗಿಳಿಯೆ ನಲ್ಲರೊಡನಿರ್ಪ ಸಖಿಯರ್
ಬಳಿ ವೇಳ್ದ ಗುಟ್ಟುಗಳನಿಲ್ಲೆ ತೆರೆದಿಟ್ಟು ನೀಂ ಕೊಲುತಿರ್ಪೆಯವರ ಸೊಗಮಂ ಮತ್ತಮೀ
ಪುಸಿವಾತುಗಳ ಜೊತೆಗೆ ಕೊಳ್ಳೆಯಂ ಪೊಡೆದಿರ್ಪೆ ಪಾಂಥರ್ಕಳೆಲ್ಲರಾ ಮನಮನಂತು
ಸ್ವಾದುಫಲಸಕ್ತರಿದಿರೇ ಮೆಣಸ ತಿನ್ನುತ್ತೆ ಮೋಸಮಂ ದಿಟದಿಂದೆ ಗೆಯ್ದೆಯಲ್ತೇ
ನಿರಪರಾಧಿಯಾಗಿರ್ದೊಡಂ ಕಾಡಿನೊಳ್ ಕೇಳ್
ಪಂಜರದೆ ಬಂಧಿಸಿಟ್ಟರೈ ಪಿಡಿದು ನಿನ್ನಂ
ಅಂತು ಬಂಧನಪ್ರಾಪ್ತನಾಗಿರ್ಪೊಡೀಗಳ್
ಖಲರ ಕೃತ್ಯಂಗಳಂ ಗೆಯ್ವುದೇಕೆ ಪೇಳೈ!
(ಸೀಸ- ಎಲೆ ಗಿಳಿಯೆ! ನಿನ್ನಿಂದ ಬಾಲಕರ ಹೃದಯಗಳು ಕದಿಯಲ್ಪಟ್ಟವು, ಸಖಿಯರು ನಲ್ಲರೊಡನೆ ಆಡಿದ ಗುಟ್ಟು ಮಾತುಗಳನ್ನೆಲ್ಲ ತೆರೆದಿಟ್ಟು ಅವರ ಸುಖವನ್ನು ಕೊಲ್ಲುತ್ತಿರುವೆ, ಸುಳ್ಳು ಮಾತಾಡುತ್ತ ದಾರಿಹೋಕರ ಮನಸನ್ನು ಕೊಳ್ಳೆಹೊಡೆಯುತ್ತಿರುವೆ, ಸ್ವಾದು ಫಲದಲ್ಲಿ ಆಸಕ್ತರಾದವರ ಎದುರೇ ಮೆಣಸನ್ನು ತಿನ್ನುತ್ತ ಮೋಸವನ್ನು ಮಾಡುತ್ತಿರುವೆ
ಗೀತಿಕೆ-ಕಾಡಿನಲ್ಲಿ ನಿರಪರಾಧಿಯಾಗಿದ್ದಾಗಲೇ ಹಿಡಿದು ನಿನ್ನನ್ನು ಬಂಧಿಸಿಟ್ಟರು,ಹಾಗೆ ಬಂಧಿಸಿದ್ದರೂ ಈಗ ನೀನೇಕೆ ಹೀಗೆ ಖಲರ ಕೃತ್ಯಗಳನ್ನು ಮಾಡುತ್ತಿದ್ದೀಯಾ?)
ನವ್ಯಭಾವದ ಮಾತು ಧಾತುಗಳಪ್ಪೆ ಪಂಜರಮೊಪ್ಪುಗುಂ
ಒಳ್ಳೆಯ ಪದ್ಯಗಳು ಕೊಪ್ಪಲತೋಟ! ಅಭಿನಂದನೆಗಳು; ಮುಖ್ಯವಾಗಿ ಸೀಸಪದ್ಯದ ಕಲ್ಪನೆ, ಹೆಣಿಗೆಗಳೆರಡೂ ಸೊಗಸಾಗಿವೆ.
ಕೊಪ್ಪಲತೋಟರೆ, ಗಿಳಿಯಂತೆ ಸುಂದರವಾದ ನಿಮ್ಮ ಪದ್ಯಗಳು ಎಂದಿನಂತೆ ನನ್ನ ಮನಸ್ಸನ್ನು ಆಕರ್ಷಿಸಿವೆ. ಧನ್ಯವಾದಗಳು.
ಚಂದ್ರಮೌಳಿಗಳೊಪ್ಪಿ ರಾಗರುಂ ಮೆಚ್ಚಿರಲ್
ಸಾಂದ್ರಭಾವದೆ ಶಕುಂತಲೆಯವರು ಮೇಣ್
ಮಂದ್ರರವದೊಳೆ ಪೇಳೆ ಧನ್ಯವಾದಂಗಳಿಂ-
ದಂ ದ್ರುತದೆ ಮಣಿದಪೆಂ ನಿಮಗಮೀಗಳ್
ಕೊಪ್ಪಲತೋಟ ಬಹಳ ಚೆನ್ನಾಗಿದೆ ಕಣೋಪ್ಪ
ಬಂಧsನs ತಂದಿsರೆs ಬಂಧsವs ಸಖನೊsಡೆs
ಅಂಧsಮೆs ಬಾಳs ತ್ಯಜಿಸsಲುs – ಪಂಜsರs
ಬಂಧುsರsದರವಾಸsಮಲ್ತೇ?
ಪಚ್ಚೆsಯs ಸೊಬಗsನುs ಮೆಚ್ಚಿsದs ಮಾನsವs
ನಿಚ್ಚsವುs ಅಂದs ಸವಿಯsಲುs – ನಿನ್ನsನುs
ಬಚ್ಚಿಟ್ಟುs ಕಾದಿರ್ಪsನೇನುs?
ಕಾಂಚನ, ನಿಮ್ಮ ಪದ್ಯದ ಭಾವ ತುಂಬ ಇಷ್ಟವಾಯಿತು.ನಿಮ್ಮೆಲ್ಲಾ ಒಳ್ಳೆಯ ಪದ್ಯಗಳಿಗಾಗಿ ಧನ್ಯವಾದಗಳು.
ಧನ್ಯವಾದಗಳು,ಶಕುಂತಲಾ 🙂
ಚಂದದ ಗಿಳಿಯಂ ಬಂಧಿಸಿ
ತಂದಿರಿಸಲ್ಕಿಟಕಿಯಿಂದಕಾಣುತೆ ಜಗಮಂ|
ನೊಂದರೆನಿಮಿಷದೊಳಂಭ್ರಮೆ
ಯಿಂದನಭದೆಪಕ್ಷಿಗುಂಪಿನೊಳ್ಪಾರಿರ್ಕುಂ|
ಕೆಂಪೇರಿರಲ್ಫಲದೊಡಂ ಸುಳಿದಿರ್ಪ ನಾಸಂ,
ಸೊಂಪಾಗಿರಲ್ ತಳಿರೊಡಂ ಸತುಮಿತ್ತ ಪಕ್ಷಂ,
ಇಂಪಾಗಿರಲ್ಕುದಯರಾಗದೊಡಚ್ಚ ಕಂಠಂ,
ಪೆಂಪಾದ ಚೈತ್ರನಿಧಿಯೇಂ ಗೃಹಬಂಧಿ ನೀನುಂ?
ಆಹಾ! ತುಂಬ ಸೊಗಸಾದ ಭಾವ-ಭಾಷೆಗಳ ಕವಿತೆ; ಅಭಿನಂದನೆಗಳು. ವಸಂತತಿಲಕವೃತ್ತವನ್ನೂ ಒಳ್ಳೆಯ ಕಲ್ಪನೆಯನ್ನೂ ಚೆನ್ನಾಗಿ ನಿರ್ವಹಿಸಿದ್ದೀರಿ.
ಧನ್ಯವಾದಗಳು 🙂
सर्वेन्द्रियाणां नयनं प्रधानं सर्वेषु गात्रेषु शिर: प्रधानम् – चाणक्यनीति
ಹೀಗಿರುವಾಗ ಪಂಜರದ ಗಿಳಿಯು ಬಂಧಿತವೆನ್ನಲಾದೀತೆ?
ಉಪೇಂದ್ರವಜ್ರಂ|| ಪ್ರಧಾನಮಾಗಿರ್ಪ ಶಿರಸ್ಸ ಮೇಣಿಂ-
ದಧೈರ್ಯಮಿಲ್ಲರ್ದೆ, ಪೊರಳ್ವ ಕಣ್ಣಂ|
ನಿಧಾನದಿಂ ಪಂಜರದಿಂ(ಸರಳುಗಳಿಂದ) ಪೊರಕ್ಕಂ
ವಿಧಾವನಂ ಗೈವ ಶುಕಂ ವಿಮುಕ್ತಂ||
ನಿಷ್ಕಾರುಣ್ಯವನ್ನು ಪದ್ಯವಸ್ತುವಾಗಿ ಬಳಸಿಕೊಂಡುದಕ್ಕೆ ಕ್ಷಮೆಯಿರಲಿ – ನಿಮ್ಮದೂ ಗಿಳಿಯದೂ.
ಶುಕದ ವಿಮುಕ್ತಿ ಹೇಗಾಯಿತೆಂದು ಸರಿಯಾಗಿ ಗೊತ್ತಾಗಲಿಲ್ಲ ಪ್ರಸಾದು
ಪ್ರಧಾನೇಂದ್ರಿಯವಾದ ಕಣ್ಣನ್ನೂ, ಶರೀರದ ಪ್ರಧಾನಭಾಗವಾದ ಶಿರಸ್ಸನ್ನೂ ಯಥೇಷ್ಟವಾಗಿ ಪಂಜರದಿಂದ ಹೊರಹಾಕುತ್ತಲ್ಲ, ಅದರಿಂದ. ಮಿಕ್ಕವು ಗೌಣ.
ವಿನೋದವಾಗಿ …!!
ಬಿರುಬಿದಿರ ಪುಟ್ಟಿಯೊಳಿರಿಸು-
ದುರಿಮೆಣಸಿನಕಾಯಿ ಪಳತದಾದುದು ಪಾರಿಂ ।
ಬೆರೆತುದದೊ ಕೆಂಚು ಹಸಿಯ ಹ-
ಸುರಿನೊಡೆ, ಕಾಣ್ಡುವವು ಪಂಜರದ ಗಿಣಿಗಳವೋಲ್ !!
ಅಂದಹಾಗೆ “ಉರಿಮೆಣಸಿನಕಾಯಿ” – ಸೋಮನ ಗಿಣಿಪಂಜರದಿಂದ ಕದ್ದು ತಂದದ್ದು !!
🙂
ಕೊಳೆಯಾದ ಮನಸ್ಸು ತನಗೆ ತಾನೆ ಬ೦ಧನವಾಗುತ್ತದೆ. ತಿಳಿಯಾದರೆ, ದಿಕ್ಕುಗಳೆ೦ಬ ಶಲಾಕೆಗಳುಳ್ಳ ಆಕಾಶವೆ ಅದಕ್ಕೆ ಪ೦ಜರವಾಗುತ್ತದೆ.
ಕೊಳೆಯಾದೊಡಮೀ ಚಿತ್ತದ
ಕೊಳ೦, ಮನಃಕೀರಕ೦ ಮನಮೆ ಪ೦ಜರಮೈ
ತಿಳಿಗೊಳಮಾಗೆ, ಮನದಲೆಯ
ಗಿಳಿಗ೦ ದಿಕ್ಶಾಲಮ೦ಡಲಮೆ ಬ೦ಧನಮೈ
ಮೇಲಿನದರೊ೦ದು ರೂಪಾ೦ತರ…
……… ದಿಕ್ಕುಗಳೆ೦ಬ ಶಲಾಕೆಗಳುಳ್ಳ ಆಕಾಶಪ೦ಜರದೊಳಗೆಲ್ಲ ಅದರ ರೆಕ್ಕೆಬಡಿತದ ಅಲೆಗಳು ತು೦ಬಿರುತ್ತವೆ.
ಕೊಳೆಯಾದೊಡಮೀ ಚಿತ್ತದ
ಕೊಳ೦, ಮನಃಕೀರಕ೦ ಮನಮೆ ಪ೦ಜರಮೈ
ತಿಳಿಯಾಗೆ, ಪಕ್ಷಖೇಲನ-
ದಲೆಗಳ್ ದಿಕ್ಶಾಲಮ೦ಡಲದೊಳೆಲ್ಲೆಡೆಯು೦
ಆಹಾ! ಸೊಗಸಾದ ಕಲ್ಪನೆ! ಮತ್ತೂ ಸೊಗಸಾದ ಬಂಧ!!
ಧನ್ಯವಾದಗಳು ಸರ್! ಇವತ್ತಿನ ಅಧ್ಯಯನ ಗೋಷ್ಠಿಯಿ೦ದ ಹೊರಬ೦ದಾಗ ಹೊಳೆದದ್ದು 🙂
hmm
ಹೂ೦ಕಾರದಿ೦ದ ಬೆದರಿಸುತ್ತಿದ್ದೀರ?
ಪಂಜರವಿಲ್ಲದ ಗಿಳಿಗಳು ಪದ್ಯ- ಪಾನದ ಪಂಜರಕ್ಕೆ ಬಿದ್ದಿವೆ ಎಂದು ನಿಟ್ಟುಸಿರು ಇರಬಹುದು 🙂
ಹ್ಮ, ಏನೊ ಗುಟ್ಟು ಗೊತ್ತಾಗುತ್ತಿಲ್ಲ. ಲ೦ಗು ಲಗಾಮಿಲ್ಲದೆ ಛ೦ದಸ್ಸು, ವ್ಯಾಕರಣ ಮೀರಿ ಬರೆಯುವವ ಎ೦ದೆ?
ಅಲ್ಲಪ್ಪಾ ಅಲ್ಲ .ನೀಲಕಂಠರ ಮಹಿಮೆ ವರ್ಣಿಸಲಸದಳ ! ತಿಳಿಯಾದ ಚಿತ್ತದಿಂದ ಮಾತ್ರ ಇಂತಹ ಕಲ್ಪನೆಗಳು ಬರಲು ಸಾಧ್ಯ ಅಂತ ನನ್ನ ಭಾವನೆ . ಆಲೋಚನೆಗಳನ್ನು( ಪಂಜರವಿಲ್ಲದ ಗಿಳಿಗಳು) ಹಿಡಿದಿಡುವುದೇ ಬಹಳ ಕಷ್ಟದ ಕೆಲಸ . ಅಂತಹದರಲ್ಲಿ ನೀವು ಏಕಾಗ್ರತೆಯಿಂದ ಚಿತ್ತವನ್ನೇ ಹಿಡಿದಿಟ್ಟು, ಅಷ್ಟೇಲ್ಲಾ ಹೋಲಿಕೆಗಳೊಂದಿಗೆ ಬರೆಯುವಾಗ ಪದ್ಯಪಾನವೆಂಬ ಪಂಜರದೊಳಗೆ ಇ(ಬಿ)ದ್ದಿರೆಂದು ಹೇಳಿದೆ . ಅದನ್ನು ಪ್ರಸಾದ್ ಸರ್ ಗೆ ಆರೋಪಿಸಿದೆ .
ಅಹ, ಸಲ್ಲದು ಭಾಲ ಮೇಡಮ್, ಭುಜಗಾಲ೦ಕಾರಭೂಷಣಗೆ ಅತಿಶಯೋಕ್ತಿ ಅಲ೦ಕಾರ ಸಲ್ಲದು 🙂
ನೀಲಕಂಠರೆ, ತುಂಬ ಚೆನ್ನಾದ ಪದ್ಯಗಳಿಗಾಗಿ ಧನ್ಯವಾದಗಳು.
ಮೆಚ್ಚುಗೆಗೆ ಧನ್ಯವಾದಗಳು!
ಇದ್ಯಾವುದೂ ಅಲ್ಲ. ತುಂಬ ಆಲೋಚನೆಗೆ ದೂಡಿದ ಕಲ್ಪನೆ. ಬಂಧನ-ಸ್ವಾತಂತ್ರ್ಯಗಳ ನಡುವೆ ಅಂತರವೇ ಇಲ್ಲವೇನೋ ಎಂಬಂತಹ ಕಲ್ಪನೆ. ಭೈರಪ್ಪನವರ ಯಾನ ಮನಸ್ಸಿನಲ್ಲಿ ಸುಳಿದುಹೋಯಿತು. ಬಹಳ ಬಹಳ ಚೆನ್ನಾದ ಕಲ್ಪನೆ. ಅಭಿನಂದನೆಗಳು.
ಹೌದು ಪ್ರಸಾದ ಸರ್, ನನಗೂ ಅದು ತು೦ಬ ಹಿಡಿಸಿತು. ತು೦ಬ subjective ಆಗಿರುವ೦ಥದ್ದು. ಮೆಚ್ಚುಗೆಗೆ ಧನ್ಯವಾದಗಳು!!
ಬಹಳ ಚೆನ್ನಾದ ಪದ್ಯ ನೀಲಕಂಠರೆ
ಪಂಜರದ ಗಿಳಿಯ ಸ್ವಗತ (ಕಂದಪದ್ಯ,ಪಂಚಮಾತ್ರಾಚೌಪದಿ, ವಾರ್ಧಕಷಟ್ಪದಿ, ಮತ್ತೇಭವಿಕ್ರೀಡಿತವೃತ್ತ, ತ್ರಿಪದಿ)
ಪುಟ್ಟಿ ಬನದೊಳಿರ್ದೆನ್ನಂ
ಕಟ್ಟಿ ಸೆಳೆದು ತಂದು ಪಂಜರದೊಳಿಟ್ಟರ್, ಹಾ ! |
ಸುಟ್ಟು ಮಸಿಯಪ್ಪುದೇನೆ-
ನ್ನೊಟ್ಟೈಸುತೆ ಬಾಳ್ದ ಬಂಧುಮಿತ್ರರ ಬಂಧಂ ?||
ಪರಮಾತ್ಮನಂ ಸೇರೆ,ದೇಹದೊಳ್ ಜೀವಾತ್ಮ-
ನಿರುತೆ ಬಯಸುತ್ತವನ ಜಾನಿಪ್ಪವೋಲ್,|
ಸೆರೆಯಾದ ಗಿಣಿಯಾಗಿ ಬರ್ದುಂಕನೆಳೆಯುತ್ತೆ,
ಪರಿಯನಾಲೋಚಿಪ್ಪೆನೈದೆ ಸಖರಂ ||
ರೆಂಕೆಗಳ ಪೊಂದಿಯುಂ ಪಾರಲಾಗದೆ ನೊಂದು
ಮಂಕಾಗಿ ಕುಳ್ಳಿರ್ಪೆನಾಂ ಕೈದಿಯಂ ಪೋಲ್ದು,
ಸಂಕಾಶಮಂ ಕುಂದಿ ಕಾಂಬ ರವಿಯಂತೆವೋಲ್,ಕಾಲಮೇಘದ ಲೀಲೆಯಿಂ |
ಬಿಂಕದಿಂ ನುಡಿವ ಸಾಮರ್ಥ್ಯಮಿರ್ದರುಮೆನ್ನ
ಸಂಕಟಂಗಳ ತೋಡಿಕೊಳ್ಳದಿರ್ಪಂಥ ಗತಿ,
ಲಂಕಾಧಿಪಂ ಕಳ್ದ ಸೀತೆಯದ್ದಾಗಿರಲ್, ದೈವೇಚ್ಛೆಯಿಂ ದಾರುಣಂ ||
ಅರರೇ ! ಪಚ್ಚೆಯ ಸೀರೆಯುಟ್ಟು ತುಟಿಗೆಂಪಿಂ ಶೋಭಿಸುತ್ತಿತ್ತಲೇ
ತ್ವರೆಯಿಂ ಬರ್ಪ ಲತಾಂಗಿಯೆನ್ನೊಡತಿಯೇನೆನ್ನಂದಮಂ ಪೋಲ್ವವಳ್ ? |
ನುರಿವೆಂ ಧೂರ್ತೆಯ ಕಣ್ಣಿನೊಳ್ ಮೆಣಸ,ಕೊಕ್ಕಿಂ ಸೀಳ್ದು, ರೋಷಾಂಧಕಂ ,
ಮರೆಯೆಂ ಸತ್ತರುಮಿಂಥ ದುಟ್ಟೆಯರ ನಿಷ್ಕಾರುಣ್ಯದುಷ್ಕೃತ್ಯಮಂ ||
ನೋಡಲ್ಕೆ ವಿಶ್ವವ ಪಾಡುತ್ತೆ,ಪಾರುತ್ತೆ,
ಮೋಡವನೆಂದು ಸೇರ್ವೆನಾಂ | ಗರಿವಿಚ್ಚಿ,
ಬಾಡಿರ್ಪ ಚಿತ್ತಂ ಪಸಿರಾಗಲ್ ||
ನಾನಾವೃತ್ತ-ಜಾತಿಗಳಲ್ಲಿ ಬಗೆಬಗೆಯ ಕಲ್ಪನೆಗಳನ್ನು ಹೆಣೆದ ಪರಿ ತುಂಬ ಸೊಗಸಾಗಿದೆ. ಅಭಿನಂದನೆಗಳು.
ಸಹೋದರರೆ,ನಿಮ್ಮ ಪ್ರೋತ್ಸಾಹದ ನುಡಿಗಳಿಗಾಗಿ ಹೃತ್ಪೂರ್ವಕಧನ್ಯವಾದಗಳು.
ಬಹಳಚೆನ್ನಾದ ಪದ್ಯಗಳು ಶಕುಂತಲಾ ಅವರೆ
स्मारं स्मारं वटतरुपुटे संस्थितं बन्धुवर्गं
तां चार्वङ्गीं नवकिसलयारक्तचञ्चुं च जायाम्।
वारं वारं नयनसलिल-क्लिन्न-पक्षोप्यहं सन्
दीनो भृत्यो मधुरवचनान्यादिनं व्याहरामि ॥
ವಟವೃಕ್ಷದಲ್ಲಿ ವಾಸವಾಗಿರುವ ಬಂಧುವರ್ಗವನ್ನೂ ಚಾರ್ವಂಗಿಯಾದ, ಹೊಸ ಚಿಗುರಿನಂತೆ ಕೆಂಪಾದ ಕೊಕ್ಕನ್ನುಳ್ಳ ಆ ಪತ್ನಿಯನ್ನೂ ನೆನೆದು ನೆನೆದು, ಮತ್ತೆ ಮತ್ತೆ ಅಶ್ರುಜಲದಿಂದ ನೆನೆದ ರೆಕ್ಕೆಯುಳ್ಳವನಾದರೂ (ರೆಕ್ಕೆಯಿಂದ ಕಣ್ಣೊರೆಸಿಕೊಂಡೆ ಎಂದರ್ಥ) ದೀನನೂ ಕೇವಲ ಸೇವಕನೂ ಆದ ನಾನು ದಿನವಿಡೀ ಮಧುರವಾದ ಮಾತುಗಳನ್ನಾಡುತ್ತೇನೆ.
ಪದ್ಯಭಾವವೂ ಭಾಷಾಪಾಕವೂ ಚೆನ್ನಾಗಿವೆ. ಆದರೆ ಚಂಚ್ವೀಂ ಎಂದು ತಿದ್ದುಗೆಯಾಗಬೇಕು.
ಧನ್ಯವಾದಗಳು ಸರ್. ಹಾಗೆಯೇ ತಿದ್ದಿದ್ದೇನೆ.
स्मारं स्मारं वटतरुपुटे संस्थितं बन्धुवर्गं
तां चार्वङ्गीं नवकिसलयारक्तचञ्च्वीं च जायां ।
वारं वारं नयनसलिल-क्लिन्न-पक्षोप्यहं सन्
दीनो भृत्यो मधुरवचनान्यादिनं व्याहरामि ॥
ಪ್ರಸಾದರೆ, ಧನ್ಯವಾದಗಳು.
Fine imagination. I can at best learn from the diction; not appreciate it.
ಲಲಿತಾ ಬಹಳ ಚೆನ್ನಾಗಿದೆ, ಮಧುರವಾದ ಮಾತನ್ನೇ ಆಡುವ ಗಿಳಿಯ ಮನದ ವ್ಯಥೆಯ ಚಿತ್ರಣದ ಪದ್ಯ
ಅಣಿಗೊಂಡುಂ ಋತುಚಕ್ರಮುಂ ತಿರುಗಲುಂ ಭೂಖಂಡವಿಸ್ತಾರಮಂ
ಮಣಿಸಲ್ ಕಾಲಮನುಂ ಕ್ಷಣಕ್ಷಣವದಂ ಭೂಗೋಲದೊಳ್ ಕೋನದಿಂ
ದಣಿದುಂ ಧಾರಿಣಿತಾಂ ಸದಾ ತಣಿದಿಹಳ್ ನಿಚ್ಚಂ ಹರಿದ್ವರ್ಣದೊಳ್
ಗಿಣಿಯೊಲ್, ಕಲ್ಪಿತಗೊಂಡುದಾ ಪಂಜರದೆ ಕಾಣಕ್ಷಾಂಶ ರೇಖಾಂಶದೊಳ್ ।।
(ಅಕ್ಷಾಂಶ-ರೇಖಾಂಶಗಳ ಕಾಲ್ಪನಿಕ ಪಂಜರದಲ್ಲಿ – ಹಸಿರುಟ್ಟು ಗಿಣಿಯಂತೆ ಕಂಡ ಭೂಮಿಯ ಕಲ್ಪನೆ )
clap claಪ್
ತಿರುಗುತುಂ ಭೂಖಂಡವಿಸ್ತಾರದೊಳ್
ಕಲ್ಪಿತ ಎಂಬುದು ವೈದಿಕಾರ್ಥದಲ್ಲಿ (ಯಜ್ಞೇನ ಕಲ್ಪಂತಾಂ) ತುಂಬ ಚೆನ್ನಾಗಿದೆ
For once, ನಿಮ್ಮ ಎಂದಿನ ’ಕಾಣ್’ ಇಲ್ಲಿ ಚೆನ್ನಾಗಿ ಹೊಂದಿದೆ 😉
ಆಹಾ! ತುಂಬ ನವನವೀನಕಲ್ಪನೆ!!….ಸ್ವಲ್ಪ ಭಾಷೆಯಲ್ಲಿ ಸವರಣೆ ಬೇಕಿದೆ; ಅಷ್ಟೆ.
ಧನ್ಯವಾದಗಳು ಗಣೇಶ್ ಸರ್ , ಪ್ರಸಾದ್ ಸರ್,
ಅಕ್ಷಾಂಶ ರೇಖಾಂಶದೊಳ್ – ನಾನಾನನಾನಾನನಾ ಹೊಂದಿತೆಂದು ” ಮತ್ತೇಭವಿಕ್ರೀಡಿತ”ದಲ್ಲಿ ಪ್ರಯತ್ನಿಸಿದ್ದು . ಪದ್ಯವನ್ನು ಸವರಿಸಿಕೊಡಿ ಸರ್, ಬದಲಾವಣೆಗಳನ್ನ ಗಮನಿಸಿಕೊಕೊಳ್ಳುತ್ತೇನೆ.
ಉಶಾ ಅವರೆ, ಕಡೆಯಸಾಲಿನಲ್ಲಿ ಛಂದಸ್ಸು ತಪ್ಪಿದೆಯಲ್ಲವೇ? ಪಂಜರದೇ – ನನನನಾ ಆಗಬೇಕು..
ಐಡಿಯಾ ಬಹಳ ಚೆನ್ನಾಗಿದೆ
ಪಸುರ ಪೂಬನ ಕಾನನಂ ರಸನಾಂತ ಪಣ್ಗಳ ಕೋದಿರಲ್,
ಪೊಸತುಸ್ವಾದಮನುಂಡು ಪಾಡುವ ಕಾಮವೆನ್ನೊಳಗುರ್ಕಿತೇಂ!
ಮಸೆದ ಚುಂಚಿರೆ, ಶಾಕ್ತರೆಂಕೆಯನೊಳ್ತ ಪೆರ್ವಲದಿಂದಲಾಂ
ಹಿಸುಕಿ ಕುರ್ಕಿರಲೆಲ್ಲಮಂ ವಿಧಿ ಬಂಧಿಸೀಪರಿ ನಕ್ಕಿತೇಂ!
(ಗಿಳಿಯ ಸ್ವಗತ)
——- ——— ——
ರೋಗವ ನೀಗಿಸಿ ಹಾಸಮನೀಯೆ ನಿ-
ರೋಗಿಯೆ ವೈದ್ಯನು ತಾನೆಂದುಂ?
ಮಾಗಿಪ ಚಿಂತೆಯ ಶಕುನವ ಪೇಳ್ದರು
ಬಾಗಿದೆಯಲ್ತೇ ವಿಧಿಗಿಂದು?
ಭಾಷೆಯಲ್ಲಿ ಮತ್ತೂ ಪರಿಷ್ಕಾರ ಬೇಕಿದೆ. ಅಲ್ಲದೆ ಸ್ವಲ್ಪ ಅರ್ಥಬೋಧೆಗೆ ತೊಡಕಾಗಿದೆ.
ಸರ್,ಸ್ವಲ್ಪ ಸವರಣೆಯನ್ನು ಮಾಡಿಕೊಂಡೆ. ಇದೀಗ ಅರ್ಥವು ಗೋಚರವಾಗಿದೆಯೆಂದುಕೊಂಡಿರುವೆ 🙂
1.
आरुह्य पत्त्रिणममुं मदनः समेत्य
बाधेत मां विरहिणीमिति दूनचेताः ।
तस्यागतिं कथमपीह निरोद्धुकामा
वाहं तदीयमकरोद् दृढपञ्जरस्थम् ॥
2.
ಪಂಜರದೊಳಿರ್ದೊಡಂ ಗಿಳಿ
ಮಂಜುಳವಾಕ್ಯಂಗಳಿಂ ಕುಡುವುದೈ ಸೊಗಮಂ |
ಜಂಜಡಗಳೊಳುಂ ಸುವಚಃ-
ಪುಂಜಮೆ ಪೊರಮಡುವುದಲ್ತೆ ಸಜ್ಜನಮುಖದಿಂ ||
ಜಂಜಡ – ಸಂಕಷ್ಟ.
ಪೆಜತ್ತಾಯರೆ, ನಿಮ್ಮ ಕನ್ನಡಪದ್ಯ ಚೆನ್ನಾಗಿದೆ.ಅದನ್ನು ಕುರಿತಾದ ನನ್ನ ಕೆಲವು ಸಂದೇಹಗಳನ್ನು ನಿಮ್ಮೊಡನೆ ಹಂಚಿಕೊಳ್ಳಬಹುದೆ? 🙂
ಪಂಜರದೊಳಿರ್ದೊಡಂ ಗಿಳಿ ಎಂಬುದು ಪಂಜರದೊಳಿರ್ದರುಂ ಗಿಳಿ -ಎಂದಾಗಬೇಕೆ? ಪಂಜರದೊಳಿಟ್ಟರುಂ ಗಿಳಿ -ಎಂದೂ ಆಗಬಹುದೇನೋ ?
ಜಂಜಡಗಳೊಳುಂ ಎಂಬುದು ಜಂಜಡಂಗಳೊಳುಂ ಎಂದಾಗಬೇಕಲ್ಲವೆ? ಹಾಗಾದಾಗ ಛಂದಸ್ಸು ಕೆಡುವುದು. ಜಂಜಡಮಿರೆಯುಂ ಎಂದು ಸವರಬಹುದೆ?
ಶಕುಂತಲಾರಿಗೆ ಧನ್ಯವಾದಗಳು 🙂
ಅತ್ತರುಂ – ಅತ್ತೊಡಂ, ಇರ್ದರುಂ – ಇರ್ದೊಡಂ, ಬಂದರುಂ – ಬಂದೊಡಂ ಇತ್ಯಾದಿಗಳಲ್ಲಿ ಎರಡನೆಯದಾಗಿ ತೋರಿಸಿದ ಶಬ್ದಗಳೇ ಹೆಚ್ಚು ಸೂಕ್ತವೆಂದು ಓದಿದ ನೆನಪು. ಆದ್ದರಿಂದ ಪ್ರಯೋಗಿಸಿದ್ದೇನೆ.
ಜಂಜಡಗಳೊಳ್ ಎಂಬುದೇ ಸರಿಯಲ್ಲವೇ ? ಸಂಸ್ಕೃತ ಶಬ್ದಗಳಲ್ಲಿ ಬಿಂದು ಅನಿವಾರ್ಯ. ಉದಾ – ವೃಕ್ಷಂಗಳ್, ಫಲಂಗಳ್ ಇತ್ಯಾದಿ. ಆದರೆ ಕನ್ನಡಶಬ್ದಗಳಲ್ಲಿ ಇದು ವಿಕಲ್ಪ. ಆದ್ದರಿಂದ ಮರಗಳ್ – ಮರಂಗಳ್, ಬನ್ನಗಳ್ – ಬನ್ನಂಗಳ್ – ಇತ್ಯಾದಿಯಾಗಿ ಎರಡು ರೂಪಗಳೂ ಸಾಧುವಾಗುವವು. ಪ್ರಕೃತ ಜಂಜಡ ಕನ್ನಡಶಬ್ದವಾದ್ದರಿಂದ ಬಿಂದುರಹಿತಪ್ರಯೋಗವೂ ಸಾಧುವೇ.
ಈ ವಿವರಣೆ ನನ್ನ ಮತಿಯ ಮಿತಿಯಲ್ಲಿ ಬಂದಿದ್ದು. ತಪ್ಪಿದ್ದಲ್ಲಿ ಬಲ್ಲಿಗರು ಬೋಧಿಸಿರೆಂದು ನಿವೇದನೆ 🙂
ಪೆಜತ್ತಾಯರೆ, ನನ್ನ ಸಂದೇಹಗಳಿಗೆ ನಿಮ್ಮ ವಿವರವಾದ ಉತ್ತರ ಸರಿಯೆಂದೇ ಭಾವಿಸುವೆ.ತಪ್ಪಿದ್ದಲ್ಲಿ,ಬಲ್ಲಿದರು ತಿದ್ದುತ್ತಿದ್ದರು:-) ನನಗೆ ತಿಳಿದಿರದಂಥ ವಿಚಾರಗಳನ್ನು ತಿಳಿಸಿರುವುದಕ್ಕಾಗಿ ಧನ್ಯವಾದಗಳು.
🙂
ಪೆಜತ್ತಾಯರೆ, ಪದ್ಯಗಳು ಚೆನ್ನಾಗಿದೆ.
ಶಕುಂತಲಾ ಅವರೆ, ಅನಿಸಿಕೆಗಳನ್ನು ಹಂಚಿಕೊಳ್ಳುವುದೇ ಸರಿ, ಹೀಗೆ ವಿಚಾರವಿನಿಮಯ ಮಾಡುವುದರಿಂದ ಎಲ್ಲರಿಗೂ ಇತರರಿಗೂ ಲಾಭ 🙂
ಪ್ರಸ್ತುತ ವಿಷಯದಲ್ಲಿ ಪೆಜತ್ತಾಯರ ವಿವರಣೆ ಸರಿಯೆಂದು ನನಗನಿಸುತ್ತದೆ
ಸೋಮರೆ, ಸದ್ಯಕ್ಕೆ ಪೆಜತ್ತಾಯರ ವಿವರಗಳು ಸರಿಯೆಂದೇ ಭಾವಿಸುವೆ. ಅವರೂ ಸ್ವಲ್ಪ ಅನುಮಾನದಿಂದ ಉತ್ತರಿಸಿರುವುದರಿಂದ, ನನ್ನ ಸಂದೇಹವೂ ಸ್ವಲ್ಪ ಹಾಗೆಯೇ ಉಳಿದಿದೆ. 🙂
ರೆಂಕೆಯ ಮಿಡಿದಾನಂದದೆ
ಶಂಕೆಯಿರದೆ ಪಾರ್ದ ಕೀರಮ ನುತಿಪುದೀಗಳ್,
ಪಂಕಜವ ಚಿವುಟಿ ಕೊಳದಿಂ
ಶಂಕರಶಿರದೊಳಿರಿಸಂದಮಂ ನೋಳ್ದಂತೇ
ನಾಲ್ಕನೇಯ ಸಾಲಿನ ಮೂರನೇಯ ಗಣವನ್ನು ಸವರಿಸಬೇಕು
ತಿದ್ದಿದ್ದೇನೆ ಸೋಮ,ಧನ್ಯವಾದಗಳು.
ಈ ವಸ್ತುವಿಗೆ ಹೆಚ್ಚು ಪದ್ಯಗಳು ಬರುತ್ತದೆಯೋ ಇಲ್ಲವೋ ಎಂಬ ಸಂದೇಹವಿತ್ತು. ಆದರೆ ಸಕ್ರಿಯವಾಗಿ ಭಾಗವಹಿಸಿ ಉತ್ತಮ ಪದ್ಯಗಳನ್ನೂ ಟಿಪ್ಪಣಿಗಳನ್ನೂ ಕೊಟ್ಟ ಎಲ್ಲರಿಗೂ ಧನ್ಯವಾದಗಳು 🙂
ಕಚ್ಚಿದ ಕೆಂಪುಕೊಕ್ಕೆ ಸೆಳೆಯಲು
ಹಚ್ಚ ಹಸಿರಿನ ರೆಕ್ಕೆ ನೋಡಲು
ಉಚ್ಚರಿಸುವ ನುಡಿಯ ಸವಿಯಲು
ಹುಚ್ಚನಂತೆ ಓಡಿಬಂದು ನಿಂತಿಹೆನು
ಪ್ರಭಂಜನರಿಗೆ ನಮಸ್ಕಾರ. ನಿಮ್ಮ ಪದ್ಯವನ್ನು ಹೀಗೆ ಛಂದೋಬದ್ಧವಾಗಿಸಬಹುದು:
ಕಚ್ಚಿದ/ ಕೆಂಪಿನ/ ಕೊಕ್ಕೆಯು/ ಸೆಳೆಯಲು/
ಹಚ್ಚನೆ/ ಹಸುರಿನ/ ರೆಕ್ಕೆಯು/ ಮೇಣ್|
ಉಚ್ಚರಿ/ಸುವ ನುಡಿ/ಯಂ ಸವಿ/ಯಲು ನಾಂ/
ಹುಚ್ಚನ/ ವೋಲೋ/ಡುತೆ ಬಂ/ದೆಂ||
ಇದು ಚತುರ್ಮಾತ್ರಾಛಂದಸ್ಸು. http://padyapaana.com/?page_id=570 ಹಾಗೂ ತದಿತರ ಪಾಠಗಳನ್ನು ನೋಡಿ-ಕೇಳಿ ತಮ್ಮ ನೈಪುಣ್ಯವನ್ನು ಹೆಚ್ಚಿಸಿಕೊಳ್ಳಿ. ಬಿಡದೆ ಬರೆಯಿರಿ.
ಸಾವರಿಸಿದ್ದಕ್ಕೆ ಧನ್ಯವಾದಗಳು .. ಛಂದಸ್ಸು ಯಾಕೋ ನನ್ನ ಜೊತೆ ಮುನಿಸಿಕೊಂಡಿದೆ
ಪ್ರಯತ್ನ ಮುಂದುವರಿಸುತ್ತೇನೆ …