ನಿಮ್ಮ ಪದ್ಯದಲ್ಲಿ ಲಘ್ವಕ್ಷರಗಳು ಹೆಚ್ಚಾದ ಕಾರಣ ಸ್ವಲ್ಪ ಗತಿ ಸರಿಯಾಗಿಲ್ಲ. ನನಗೆ ಅರ್ಥವಾದಂತೆ ತಿದ್ದಿರುವೆ.
ಚೆನ್ನೆ ಪುಗಲ್ ತಿಳಿಗೊಳನಂ
ಪೊನ್ನೇ ಬಿತ್ತರಿಸೆ ಕರಗೆ ಬೆಮರಾ ನಸುಕೊಳ್
ಖಿನ್ನಂ ರವಿಯಿಣುಕೀಕ್ಷಿಸೆ-
….
ನಿಮ್ಮೀ ಪೂರಣಮಾರ್ಗಂ
ಸಮ್ಮಾನಿತಮಾದ ವಾಣಿಯೂಹಾತೀತಂ
ಕಮ್ಮಗೆ ಪೇಳ್ವಾ ಭರದೊಳ್
ನೆಮ್ಮಿರ್ದಪಿರೊಂದು ಬನ್ನಮಂ ನೀವಿದರೊಳ್!
(ವಿನಹ – ಎಂಬುದು ಅಶುದ್ಧ- ಸಂಸ್ಕೃತದ ವಿನಾ ಎಂಬ ಅವ್ಯಯವೇ ಆಡುಮಾತಿನಲ್ಲಿ ವಿನಹ-ವಿನಃ ಎಂದೆಲ್ಲ ಆಗಿದೆ- ಹಾಗಾಗಿ ‘ಉಳಿಯಲ್’ ಎಂದೇ ಬಳಸಬಹುದು. ಅಥವಾ ‘ಈ ಪರಿಯ ವಿನಾ’ ಎಂದು ಮಾಡಬಹುದೇನೋ- ಗೊತ್ತಿಲ್ಲ.)
When the sense of touch says it all, there is no need for the sense of sight!
ಸನ್ನೆಯಿನಿಂ ಕರೆಯಲವಂ
ಕನ್ನೆಯು ಕೈಯಿಂದೆ ನೀಡಲುತ್ತರಮನ್ನುಂ|
ಕೆನ್ನೆಯುರುಬನುಂ ತಡಕಿಪ!
ಕನ್ನಡಿಯೇ ಬೇಡದಾಯ್ತು ಚೆಲುವಂಗಮಮಾ||
Her eyes do not serve as mirror only when she attains the peak of recognition. Air does not evidence its presence only when we breathe.
(Permeate)ಮಸಗಿರದೆ ಸರ್ವತ್ರಮಾವಗಂ ಗಾಳಿ ನಾ
ಮುಸಿರಾಡುವಾಗಮಲ್ಲದೆಲೆ ಮಾತ್ರಂ?
ಜಸದ ಹಂಗನು ತೊರೆದು ದುಡಿವ ಗೃಹಪತ್ನಿಯಳ
ಮಸಿಗಣ್ಣದಾಗದೇಂ ಕನ್ನಡಿಯು ಪೇಳ್??
ಪೆರ್ವೊಳಲ ರಾಘವೇಂದ್ರರೆ
ಪರ್ವಂ ಸಂದತ್ತು ನಿಮ್ಮ ಪದ್ಯದಿನೆಮಗಂ
ಸರ್ವರ್ ಮೆಚ್ಚುವರಲ್ತೇ-
ನುರ್ವರೆಯೊಳ್ ನಿಮ್ಮ ಪದ್ಯಪದ್ಧತಿಯಂ ಮೇಣ್||
(ಮೂರನೆ ಸಾಲಿನಲ್ಲಿ ಕೊನೆಯ ಗಣಕ್ಕೆ ಒಂದು ಮಾತ್ರೆ ಹೆಚ್ಚಿದೆ ನೋಡಿ)
Having climbed the pinnacle of success, and (subsequently) wooed by fair coquettes, their “unsaid” request was a mirror (to his success) and (hence) the handsome guy didn’t need a(n extra) mirror.
೧) ’ಬನದಿಂ ಬರುತಿರೆ ರಾಜನು’ ಎಂಬುದು ತುಂಬ ಧ್ವನಿಪೂರ್ಣವಾಗಿದೆ. ರಾಜರು ಆಗಾಗ ಬೇಟೆಗೆ ಹೋಗುವುದೊಂದು. ಯಾವ ಸಾಮ್ರಾಜ್ಯದ ಆಧಿಪತ್ಯಕ್ಕೂ ಒಳಪಡದೆ, ರಾಜ್ಯಗಳ ಗಡಿಗಳಲ್ಲಿರುವ ಋಷ್ಯಾಶ್ರಮಗಳಿಗೆ ಭೇಟಿ ನೀಡಿ ಆ ಋಷಿಗಳಿಂದ ಧರ್ಮಬೋಧೆಯನ್ನು ಹೊಂದಿದ ಇಲ್ಲವೆ ಜ್ಞಾನಸಾಮರ್ಥ್ಯಮಾನದಿಂದ ಆ ಋಷಿಗೇ ಸವಾಲೊಡ್ಡಿದ ರಾಜರುಗಳ ನಿದರ್ಶನಗಳಿವೆ.
೨) ಇತರ ಕನ್ನಡಿಗಳು ಜೇಬುಗಳಲ್ಲಿ, ವ್ಯಾನಿಟಿಬ್ಯಾಗಿನಲ್ಲಿ, ಕೋಣೆ-ಬಚ್ಚಲುಗಳ ಗೋಡೆಗಳಲ್ಲಿರುತ್ತವೆ. ನಿಜವಾದ ಕನ್ನ್’ಅಡಿ’ ಎಂದರೆ ಅಡಿಯೊಳಿರುವ ಜಲಮುಖವೇ ಅಲ್ಲವೆ? 😉
ದ್ರುತಪದ|| ಕಿಸೆಯೊಳುಂ ಕರದ ಸಂಚಿಯೊಳುಂ ಮೇಣ್
ವಸತಿಕೋಷ್ಠದೊಳು ಸ್ನಾನದ ಗೂಡೊಳ್|
ರಸದ ಕನ್ನಡಿಗಳಿದ್ದಿರಲೇಂ ಕೇಳ್
ಅಸಲುಗನ್ನ್’ಅಡಿ’ಯು ಸಾರಸವಕ್ತ್ರಂ||
‘ಮೊಗಮದು’, ’ಚೆಂದಮದೆನುತುಂ’, ‘ರಾಜಂ’, ‘ಪೀರಲ್ ‘ಎಂದಾದರೆ ಹಳಗನ್ನಡವಾದೀತು….. ೨ನೆಯ ಪಾದದ ಮೂರನೆಯ ಗಣವು ಸರ್ವಲಘುವಾದ್ದರಿಂದ, ಮೊದಲನೆಯ ಅಕ್ಷರವು ಹಿಂದಿನ ಪದಕ್ಕೆ ಸೇರಿ, ೨ನೆಯ ಗಣದಿಂದ ಹೊಸ ಪದದ ಆರಂಭವಾಗತಕ್ಕದ್ದು (ಯತಿಸ್ಥಾನ ನಿಯಮ) .. ಇಲ್ಲದಿದ್ದರೆ ೨ನೆಯ ಪಾದದ (ಇದು ನಾಲ್ಕನೆಯ ಪಾದಕ್ಕೂ ಅನ್ವಯಿಸುತ್ತದೆ) ಮೂರನೆಯ ಗಣಸ್ಥಾನದಲ್ಲಿ ಜಗಣವೇ (ನನಾನ, -U- ವಿನ್ಯಾಸ) ಬರಬೇಕು).. ವಿಡಿಯೋ ಪಾಠಗಳಲ್ಲಿ ಕಂದಪದ್ಯರಚನೆಯನ್ನು ವಿಶದವಾಗಿ ವಿವರಿಸಲಾಗಿದೆ…ಗಮನಿಸಿಕೊಂಡರೆ ಎಲ್ಲವೂ ತಿಳಿಯಾಗುವುದು ತಂಗಿ!
ಪದ್ಯಂ ಹೃದ್ಯಮೆನಿಪ್ಪುದು
ವೇದ್ಯಂ ಕೆಲವೊಂದು ದೋಷಮಿರ್ಪುದು ನೋಡೌ
ವಿದ್ಯಾರ್ಥಿ! ಗಣನೆಯೊಳ್ ಚತು-
ರಾದ್ಯೇ! ಮೂರನೆಯ ಪಾದಮಂ ಲೆಕ್ಕಿಪುದೌ!
(ಮೌರ್ಯ ಹೇಳಿದ ನಿಯಮವನ್ನೂ ಗಮನಿಸಬೇಕು. ಅಲ್ಲಿ “… ಬನದಿಂ ಬರುತ್ತೆ ರಾಜಂ ಕೊಳದೊಳ್” ಎಂದು ಮಾಡಬಹುದು.)
*Hind-blindness is a blessing in disguise mutually!
ಅನ್ಯೋನ್ಯದ ದಾಂಪತ್ಯಕ-
ನನ್ಯಂ ಕಾರಣಮಿದಲ್ತೆ*ಲೀ ದಂಪತಿಯೊಳ್|
ಧನ್ಯಂ ಮಾತ್ರನವನಹನೆ?
ಆ ನ್ಯೂನತೆಯಿಂದೆ ಪತ್ನಿಯುಂ ಧನ್ಯಳ್ ದಲ್||
Verrrrry good. Henceforth there will be at least one verse from you on this principle every week whatever the topic be. Beats me why you didn’t think on these lines all these years!
Dear Prasad,
Thanks for the appreciation. Unfortunately, this technique does not lend itself for samasyes of other types. If you take a couple of earlier samasye samples, this will be clear.
ಕಲ್ಪನೆಯಿಂ ಪೊಸತನದಿಂ
ಜಲ್ಪನಮೆಂಬಂತೆ ಬಂದ ಪದ್ಯದೆ ಸೊಗದಿಂ
ಬಲ್ಪಿಂ ಚೆನ್ನಾಗಿರ್ದುಂ
ದಲ್ ಪಣ್ಬುಳುವಂತೆ ದೋಷಮೆಯ್ದಿರ್ಕುಮಲಾ!!
(ಎರಡನೆ ಪದ್ಯದ ಮೊದಲ ಸಾಲು ಮಾತ್ರೆಗಳ ಲೆಕ್ಕ-ಶಬ್ದ ನೋಡಿದರೆ autocorrection ನಿಂದಾದ ದೋಷದಂತೆ ಕಾಣುತ್ತದೆ. ಮೊದಲ ಪದ್ಯ ಮೊದಲ ಸಾಲು- ಇಹರ್- ಇರ್ಪರ್ ಆದರೆ ಚೆನ್ನ. ಆರಿರ್ದಪರೆಂದೆನ್ನುತೆ- ಎಂದು ತಿದ್ದಬಹುದು.)
ಪದ್ಯಪಾನದಲ್ಲಿ ಒಂದು ಬಾಲಿಶ ಪ್ರಯತ್ನ. ಇಲ್ಲಿ ಇರುವ ಪದ್ಯಗಳನ್ನು ಓದಿ , ಸ್ಪೂರ್ತಿಯಿಂದ,
ವ್ಯಾಕರಣ ಬಗ್ಗೆ ಆರಿವು ಇಲ್ಲದೆ
ಛಂದಸ್ಸು ಬಿಟ್ಟು ಪ್ರಾಸ ಕೆಟ್ಟು | ಮನಸ್ಸು ಇಟ್ಟು ತ್ರಾಸ ಪಟ್ಟು,
ನಿವೃತ್ತ ವೃತ್ತದಲ್ಲಿ ( 🙂 ) , ತೋಚಿದಂತೆ ಗೀಚಿದ್ದೇನೆ
ತಪ್ಪಿದ್ದಲ್ಲಿ ಕ್ಷಮಿಸಿ ಮತ್ತು ತಿಳಿಸಿ.
ಪದ್ಯಪಾನಕ್ಕೆ ಸ್ವಾಗತ
ಒಳ್ಳೆಯ ಪ್ರಯತ್ನ. ಪದ್ಯಗಳನ್ನು ಛಂದಸ್ಸಿನ ಬಂಧಗಳಲ್ಲಿ ಹೊಂದಿಸಲು ಪ್ರಯತ್ನಿಸಿ. ನೀವು ಆದಿಪ್ರಾಸವನ್ನು ಹೊಂದಿಸಲು ಯತ್ನಿಸಿದ್ದೀರಿ.
ಈ ಸಮಸ್ಯೆಯು ಕಂದ ಎಂಬ ವೃತ್ತ / ಛಂದಸ್ಸಿನಲ್ಲಿದೆ. ಅದರ ರೂಪುರೇಷೆಗಳು ಪದ್ಯಪಾನದಲ್ಲಿಯೇ “ಪದ್ಯ ವಿದ್ಯೆ”ಯಡಿಯಲ್ಲಿ ವಿಡಿಯೋ ಪಾಠವಾಗಿ ಸಿಗುತ್ತದೆ.
ಪದ್ಯಪಾನಕ್ಕೆ ಸ್ವಾಗತ. ಛಂದೋಬದ್ಧ ಪದ್ಯರಚನೆಯ ನಿಮ್ಮ ಆಸಕ್ತಿ / ಪ್ರಯತ್ನಕ್ಕೆ ಅಭಿನಂದನೆಗಳು. ಭಾಮಿನಿ ಷಟ್ಪದಿ / ಚೌಪದಿಗಳಲ್ಲಿ ಪ್ರಯತ್ನಿಸಿದ್ದೀರಿ. ಛಂದಸ್ಸಿನ ನಿಯಮಗಳನ್ನು ಪೂರ್ಣ ಪಾಲಿಸಬೇಕಿದೆ. (ವಿನೋದವಾಗಿ ಹೇಳಬೇಕೆಂದರೆ pgdamleಅವರೇ = ಪದ್ಯವಿದ್ಯೆಯಲ್ಲಿ PGDಆದಮೇಲೆ ! ಪುನಃ ಪ್ರಯತ್ನಿಸಿ). ಛಂದೋಬದ್ಧತೆಯೇ ನಮ್ಮ ಕಲ್ಪನೆಗಳಿಗೆ ಒಂದು ನಿರ್ದಿಷ್ಟ / ವಿಶಿಷ್ಟ ರೂಪಕೊಡಲು ಸಹಕಾರಿಯಾಗುತ್ತದೆ.
But Ganesh, I will endorse her statement from another point of ‘view’:
ವಾಹನಾದರ್ಶದೊಳ್ ಲಾವಣ್ಯಯುವತಿಯರ
ಬೇಹಿನಿಂ ಕಾಂಬ ಯೋಗಮದಿರ್ದಿರಲ್|
ನೇಹಕಾಸ್ಪದವೀವಿದೊಂದುಳಿದು ಮತ್ತಮಿ-
ನ್ನಾಹಾರ್ಯಮೇನಿತರ ಕನ್ನಡಿಗಳೈ|| (ನಿಲುವುಗನ್ನಡಿ, ಕೈಗನ್ನಡಿ ಇತ್ಯಾದಿ)
ಇಲ್ಲಿಯೂ ಕೂಡ ಯತಿನಿಯಮ ಪಾಲಿತವಾಗಿಲ್ಲ. “ಸವಿಯುತ” ಎಂಬಲ್ಲಿ ಮೊದಲಕ್ಷರದ ಬಳಿಕ ಯತಿ ಬರಬೇಕು. ಅದರ ಬದಲು ” ತನ್ನಯ ಚೆಲ್ವಿಂಗೆ ಸೋಲುತನ್ನವ ತೊರೆವಂ” ಎಂದು ಮಾಡಬಹುದು. ಹಳಗನ್ನಡದ ಪ್ರತ್ಯಯಗಳು ಇನ್ನಷ್ಟು ಬಂದರೆ ಚೆನ್ನ. ನಿಧಾನಕ್ಕೆ ಅದು ಹೊಂದುತ್ತದೆ.
ಇಲ್ಲಿ ’ಚಿನ್ನದ’ ಎಂಬ ಪದವು ಪ್ರಾಸಕ್ಕಾಗಿ ಬಳಸಿರುವುದಷ್ಟೆ. ಆದರೆ ಅದನ್ನೇ ದೊಡ್ಡದುಮಾಡಿ ಈ ಪ್ರತಿಕ್ರಿಯೆ:
ಆನಾದೊಡನ್ನಮಂ ಮೇಣ್ ಮುಕುರಕಾಚನುಂ
ಹೀನಾಯದಿಂ ತೊರೆದು ಮಾತ್ರಮೊಂದಂ|
ವೈನಾದ ಆ ಕನ್ನಡಿಯಕಟ್ಟ ಕರಗಿಸುತೆ
ಪೌನುಗಳ ಗಳಿಸುವೆಂ ಸಂತೋಷದಿಂ||
Idea.
In the movie chachi 420, the hero goes for a feminine make up. The make-up man first shaves his leg and, by default, holds a mirror to show him his shaved leg! nAyakanu tale chachkOtAne.
(*ಬಣ್ಣಿಸಲ್ (ಬಿಂಬಿಸಲು) + ಕವನ + ಅದನು + ಅವ / ಬಣ್ಣಿಸಲ್ಕೆ(ಶೃಂಗಾರಮಾಡು) + ಅವನ + ವದನವ )
ಮೊದಲೇ ಅಲಂಕಾರಪ್ರಿಯ ಯುವಕವಿ – ಆದರೂ ತನ್ನ ಕವನ ಬಿಂಬಿಸಲು / ತನ್ನ ಮುಖಕ್ಕೆ ಶೃಂಗಾರ ಮಾಡಿಕೊಳ್ಳಲು – ಅವನಿಗೆ ಕನ್ನಡಿ ಬೇಡವಾಯ್ತು !!
(In a group of yoga practitioners, there is no need for such a strenuous exercise. They can see their faces in another’s back!
ಆಸನಪಟುನಿವಹದೊಳೀ
ಘಾಸಿಯ ಹತ್ತಿಕ್ಕುಗುಂ ಗೆಣೆಯ ನೀಂ ಕಾಣೈ|
ಲೇಸಿಂ ನೋಡುಗುಮಲ್ತೆ-
ಲೈಸಿರಿಮೊಗಗಳ ಪರಸ್ಪರರ ಪೊಳೆಬೆನ್ನೊಳ್||)
PS: Incorrect reaction. Ignore.
(ಸರ್, ನನಗೆ ಈ ಪದ್ಯ ಸರಿ ಇಲ್ಲ ಎಂದು ಹೆದರಿಕೆ ಇತ್ತು. ಆದರೆ. ತಾವೆಲ್ಲ ತಿದ್ದಿ ಕೊಡುತ್ತೀರಿ ಎನ್ನುವ ಧೈರ್ಯ ದಿಂದ ಬರೆದುಬಿಟ್ಟೆ.)
ಬಣ್ಣ ಮಾರುವ ಹುಡುಗನೊಬ್ಬನ ಕೆನ್ನೆ ಮತ್ತು ಮೊಗದಲ್ಲಿ ಬಣ್ಣ ತಾಗಿರಲು, ಸುಂದರ ಕನ್ನಡಿಯಲ್ಲಿ ತನ್ನ ಮುಖ ನೋಡಿ ಅವನಿಗೆ ಕನ್ನಡಿಯೇ ಬೇಡವಾಯ್ತು
ಕನ್ನಡ ಕಂದ೦ ಈಕ್ಷಿಸಿ
ಕನ್ನಡ ಮೊಹರ೦ ಅಪೇಕ್ಷೆಯಿ೦ ಮಾರ್ದನಿಸಲ್ I
ಕನ್ನಡ ನುಡಿಬಿಂಬಕಿದಿರ್
ಗನ್ನಡಿಯೇ ಬೇಡದಾಯ್ತು ಚೆಲುವಂಗಮಮಾ II
ಕನ್ನಡಿಗ ಬಾಲಕನೊಬ್ಬ ಕನ್ನಡದಲ್ಲಿ ಬರೆದ ಮುದ್ರೆ (seal )ಯನ್ನು ಇಷ್ಟ ಪಟ್ಟು ಬರಿಗಣ್ಣಿನಲ್ಲಿ ಓದಲು ತೊಡಗಿದ . ಕನ್ನಡ ಅವನಿಗೆ ಎಷ್ಟು ಚಿರಪರಿಚಿತವಾಗಿತ್ತು ಅಂದರೆ ಅದು ತಿರುವು – ಮುರುವಾಗಿದ್ದರೂ ಓದಲು ಅವನು ಕನ್ನಡಿಯ ಇದಿರು ಹಿಡಿಯ ಬೇಕಾಗಿರಲಿಲ್ಲ ಅನ್ನುವುದು ಪದ್ಯದ ಪದ್ಯದ ಸಾರ
ಚೆನ್ನಾದ ಕಲ್ಪನೆ. ಆದರೆ ಅನೇಕ ಕಡೆ ಸ೦ಧಿಯಾಗಬಹುದಾಗಿದ್ದು ಛ೦ದಸ್ಸು ಕೆಡುವ೦ತಿದೆ. ಅರಿಸಮಾಸಗಳಿವೆ. ಮಾರ್ದನಿಸು ಎ೦ಬುದನ್ನು ಪ್ರತಿಫಲಿಸು ಎ೦ಬರ್ಥದಲ್ಲಿ ಬಳಸಿದ್ದೀರಾ? ಅದು ಪ್ರತಿಧ್ವನಿಯ ಅರ್ಥ ಕೊಡುತ್ತದೆ. ಮಾರ್ತೊಳಗಲ್ ಎನ್ನಬಹುದೇನೊ.
ಹೌದು . ಪ್ರತಿಧ್ವನಿ ಎಂಬರ್ಥ ದಲ್ಲಿ . ಮೂಕವಾಗಿದ್ದ ಕನ್ನಡ ಅಕ್ಷರಗಳು ಅವನು ಓದಿದಾಗ ( ಸೈಲೆಂಟ್ ಆಗಿ ಅಲ್ಲ ) ಆ ಧನಿಯೇ ಅಲ್ಲಿ ಮಾರ್ದನಿಸಿತು ಎಂಬ ಅರ್ಥದಲ್ಲಿದೆ . ‘ವಾಗ್ಬಿಂಬ’ ಅರಿಸಮಾಸವನ್ನು ತೊಲಗಿಸುವುದೇ ?
ನಾನು ಆ ಬಾಲಕನಂತೆ ಅಲ್ಲ . ಆದ್ದರಿಂದ ನಾನು ಬರೆದ ಕನ್ನಡದಲ್ಲಿ ತಪ್ಪುಗಳು, ಸಾಕಷ್ಟು ಇರಬಹುದು 🙂
ನಡಿ = mean order in music
ಉನ್ನತವ್ಯಾಸಂಗಮಿಲ್ಲ ಸಂಗೀತದೊಳ್
ಚೆನ್ನಿನ ಸ್ವಾಧ್ಯಾಯದಾಸಕ್ತಿ ಮೇಣ್|
ಪನ್ನತಿಕೆಯಿನ್ನೆಲ್ಲರಸಿಕರ್ಗೆ (ಇನ್ನೆಲ್ಲಿ? ಅರಸಿಕರ್ಗೆ) ಪಾಡ್ವ ಮು-
ಕ್ಕನ್! ನಡಿಯೆ ಬೇಡಾಯ್ತು ಚೆಲುವ*ಗಮಮಾ||
He is just a *dandy (excessively concerned about dress, jewelry, appearance etc.) catering to base audience.
( ಹಾವು ಕೆನ್ನಾಲಿಗೆಯನ್ನು ಪ್ರದರ್ಶಿಸಿರುವ ಸಮಯದಲ್ಲಿ ಇಣಿಕಿ ಕನ್ನಡಿಯನ್ನು ವೀಕ್ಷಿಸಲು, ಸೊನ್ನೆಯ ರೂಪ(ಆಕಾರ)ದಲ್ಲಿರುವ ವೃತ್ತದ ಕನ್ನಡಿಯೇ ಚೆಲುವನಿಗೆ ಬೇಡದಾಯಿತು.ಕನ್ನಡಿಯ ಬಳಿಯಲ್ಲಿರುವ ಹಾವಿನ ಭಯದಿಂದಾಗಿ ಆ ಕನ್ನಡಿಯೇ ಬೇಡವಾಯಿತು ಎಂಬ ಕಲ್ಪನೆಯನ್ನು ಹೊಂದಿದ ಪದ್ಯ. )
Asking the visiting Vitthoba (Lord Vishnu) to wait till he is finished with his job of nursing his parents, Pundalika tosses a brick at him to stand on. The Lord still waits on. Later date poet Santa Tukaram sings in praise of Pundalika.
“ಇನ್ನುಂ ಮುಗಿಯದಿಹುದು ತಾಯ್ತಂದೆಯರ ಸೇವೆ
ಯನ್ನೆಗಂ ನಿಂದಿರೀ ಇಟ್ಟಿಗೆಯ ಮೇಲ್|”
ಉನ್ನತನ ಪುಂಡಲೀಕನ ಚರಿತೆ ಮುಟ್ಟಿತು ತು
ಕನ್ನ. (ವಿಠ್ಠೋಬನ)ಅಡಿಯೆ ಬೇಡಾಯ್ತೆ ಚೆಲುವ(ಪುಂಡಲೀಕ)ಗಮಮಾ!!
ಮುನ್ನಂ ವೃಂದಾವನದೊಳ್
ಕನ್ನೆಯ ಚುಬುಕಮನೆ ವೆರಳಿನಿಂ ಪೊರಳಿಸುತುಂ
ನನ್ನಿಯ ಕಣ್ಗಳ ಕಾಣಲ್
ಕನ್ನಡಿಯೇ ಬೇಡದಾಯ್ತು ಚೆಲ್ವಂಗಮಮಾ
ಚೆನ್ನಿಗನೊರ್ವಂ ತ್ವರೆಯಿಂ
ಕನ್ನಡಿಗೆಂದತ್ತಲಿತ್ತಲರಸಲ್ ಫೋನೊಳ್
ಚೆನ್ನಿನ (front)ಕೆಮೆರಾ ತೋರಲ್
ಕನ್ನಡಿಯೇ ಬೇಡದಾಯ್ತು ಚೆಲ್ವಂಗಮಮಾ!
Thanks for hijacking a pUraNa typically mine (2nd verse).
ನೀಲಕಂಠರು ನನ್ನನ್ನೂ ಹಾದಿರಂಪನೆಂದಿರುವರಲ್ಲ… Hence, it becomes my rightful duty to follow thy steps sir!
ಪೂರಣಯುಗಮೊಳ್ಪಿಂದಂ
ಸಾರಮನೊಂದಿರ್ಕುಮಿಂತು ಚಿಂತಿಪ ಪಾಂಗಿಂ
ದೋರಂತಾದೈ ನವ್ಯಂ
ಚಾರುಕವಿತ್ವದಿಂದೆ ಮಾರ್ಗೀಯಂ ಮೇಣ್!
ಕೊಪ್ಪಲತೋಟರೆ, ಕೊನೆಯ ಚರಣ ತಪ್ಪಿದೆ 🙂
ಅಕಟಾ!
“ಚಾರುತರಕವಿತ್ವದಿಂದೆ ಮಾರ್ಗೀಯಂ ಮೆಣ್”
ಧನ್ಯಾಭಿವಾದನೆಗಳು ಗಣೇಶಣ್ಣ…
ಚೆನ್ನಾಗಿದೆ ಕಣಪ್ಪ ಮೌರ್ಯ ಎರಡೂ ಪೂರಣಗಳು
Thanks a lot Somanna! _/\_
ಕನ್ನಿಕೆಯರ ನಲ್ನೋಟಂ
ಬೆನ್ನಂ ಬಿಡದಪ್ಪೆ,ಚಂದ್ರನಂ ಮುತ್ತಿದ ಚೆಲ್
ಪೊನ್ನರಿಲ ಕಾಂತಿವೊಲ್,ಬಿಡಿ
ಗನ್ನಡಿಯೇ ಬೇಡದಾಯ್ತು ಚೆಲ್ವಂಗಮಮಾ!
(ಸೌಂದರ್ಯವಿದೆ ಎನ್ನುವದು,ಎಲ್ಲರ ನೋಡುವಿಕೆಯಿಂದೇ ತಿಳಿದಿರುವಾಗ, ಆತನಿಗೆ ಬೇರೆ ಕನ್ನಡಿ ಬೇಡವಾಯಿತು)
ಅರರೇ ಬಹುವಿಧದಿಂ ಪರಿ-
ಹರಣಂಗೆಯ್ದಿರ್ಪುದಿಂತು ಸೊಗಸಾದತ್ತೀ
ಪೆರೆಯರಿಲ್ಗಳ ಪೋಲಿಕೆಯಿಂ
ಮೆರೆಗುಂ ವರಪದ್ಯಮಿದುವೆ ಬಲ್ಪಿಂದೊಳ್ಪಿಂ||
(ಪೊನ್ನರಿಲ್, ಕಾಂತಿವೊಲ್- ಎಂದು ಮಾಡಿದರೆ ಇನ್ನೂ ಚೆನ್ನ)
ಅತಿಶಯದ ರೂಪವಂತನ ಪೂರಣ ಚೆನ್ನಾಗಿದೆ
ಚನ್ನೆಯಿಳಿದ ತಿಳಿಯಗೊಳದೆ
ಹೊನ್ನು ಹರಡಿತು ಬೆಮರು ಕರಗುತೆ; ನಸುಕಿನಲೂ!
ಖಿನ್ನ ರವಿಯಿಣುಕಿ ನೋಡಲು
ಕನ್ನಡಿಯೇ ಬೇಡದಾಯ್ತು ಚೆಲುವಂಗಮಮಾ!
ನಿಮ್ಮ ಪದ್ಯದಲ್ಲಿ ಲಘ್ವಕ್ಷರಗಳು ಹೆಚ್ಚಾದ ಕಾರಣ ಸ್ವಲ್ಪ ಗತಿ ಸರಿಯಾಗಿಲ್ಲ. ನನಗೆ ಅರ್ಥವಾದಂತೆ ತಿದ್ದಿರುವೆ.
ಚೆನ್ನೆ ಪುಗಲ್ ತಿಳಿಗೊಳನಂ
ಪೊನ್ನೇ ಬಿತ್ತರಿಸೆ ಕರಗೆ ಬೆಮರಾ ನಸುಕೊಳ್
ಖಿನ್ನಂ ರವಿಯಿಣುಕೀಕ್ಷಿಸೆ-
….
ಪದ್ಯದ ಆಶಯವೂ ಕೊಪ್ಪಲತೋಟನ ಸವರಣೆಯೂ ಚೆನ್ನಾಗಿದೆ
ಚಿನ್ನರೆ! ಬಣ್ಣದ ಬದುಕೇ?
ಕನ್ನಡಿಯೇ? ಬೇಡದಾಯ್ತು ಚೆಲುವಂಗಮಮಾ,
ಪೊನ್ನಿನರಮನೆಯೆ!ಕೇಳ್ವುದು,
ಖಿನ್ನಂಗೊಳದಿಂದು ,ಬುದ್ಧನಿತಿಹಾಸಂ ನೀಂ!
ಹೊನ್ನದು ಪೊನ್ನಾಗಲ್ಕಿದು
ಚೆನ್ನಂ ತಾನಪ್ಪುದಲ್ತೆ ಪದ್ಯಂ ಪದದೊಳ್
ಮುನ್ನಂ ಪೇಳ್ದಾ ನುಡಿಗಳು-
ಮಿನ್ನಿಲ್ಲಿಗೆ ಸಲ್ಗುಮಂತೆ ಚೆಲ್ವಿರ್ದಪುದೌ||
Should it be ಮಿ’ನ್ನಿ’ಲ್ಲಿಗೆ?
ಹೌದು..
ಉಟ್ಟಂಕನದೋಷಕ್ರಮ
ಮೊಟ್ಟಜೆಯಿಂದಟ್ಟಿ ಕೆಟ್ಟು ಪದಕಂ ಬನ್ನಂ-
ಗೊಟ್ಟಂತಿಟ್ಟಿಂತಾಡಲ್
ಬೆಟ್ಟಿತ್ತಾದತ್ತು ತಿರ್ದಿ ತಟ್ಟಲ್ ಕುಟ್ಟಲ್ 🙂 😉 😛
ಹಾಗಾಗಿ ತಿದ್ದುವೆ.
ಅಕ್ಕಟ್ಟಕ್ಕಟ್ಟsss
ಕಂದಪಬ್ಬವೇನಿಂದು ಪದ್ಯಪಾನದೊಳ್!
ಪದ್ಯವನ್ನು ತಿದ್ದಿದ್ದೇನೆ,ಧನ್ಯವಾದಗಳು.
ಹೌದು. ಇದೇ ಮಾರ್ಗಶೀರ್ಷ ಶುಕ್ಲ ದಶಮಿ ಭಾನುವಾರದಂದು (20.12.2015) ಸೂರ್ಯೋದಯಾದಿ 10.56ಕ್ಕೆ ಸಲ್ಲುವ ಶುಭ ರೇವತಿನಕ್ಷತ್ರ, ವರಿಯಾಣಯೋಗ, ತೈತುಲಕರಣದಲ್ಲಿ ಸೋಮ ಎಂಬುವರು ಕಂದನ ಕಾಲೊಂದನ್ನು (ಕಂದದ ಪಾದವೊಂದನ್ನು) ಹೆತ್ತರು. ಅಲ್ಲಿಂದೀಚೆಗೆ ಇತರರು ಹಾಗೆ ಮಾಡದೆ ಪರಿಪೂರ್ಣಕಂದಗಳನ್ನೇ ಹೆರುತ್ತಿದ್ದಾರೆ.
ತನ್ನೊಲವಿನ ಸಖಿ,ಕೋಪದೆ
ನನ್ನಿಯ ಬಂಧಮನೆ ಸೀಳ್ದು ,ಬೇರಾದೊಡವುಂ,
ಮುನ್ನಿನ ನೆನಪಂ ತಂದಾ,
ಕನ್ನಡಿಯೇ ಬೇಡದಾಯ್ತು ಚೆಲುವಂಗಮಮಾ!
ಸೃತಿ ಅ೦ದರೆ?
ಸವರಿದ್ದೇನೆ !
Say ‘NO’ to dowry…
ಚಿನ್ನಮೆ? ವಸ್ತ್ರಮೆ? ಭಾಂಡಮೆ?
ಕನ್ನಡಿಯೇ*? ಬೇಡದಾಯ್ತು ಚೆಲುವಂಗಮಮಾ|
ಮನ್ನಣೆಗಳೀಪರಿ, ಉಳಿದು
ಕನ್ನೆಯೊರುವಳಂದಗಾತಿ ನಲ್ನುಡಿನುಡಿವಳ್(ನುಡಿಯುವಂಥವಳ್)||
*ಬರಲಿರುವ ಗಾರ್ಹಸ್ತ್ಯಕ್ಕಾಗಿ ಮದುವೆಮನೆಯ ಕೋಣೆಯೊಂದರಲ್ಲಿ ನಿತ್ಯದ ಬಳಕೆಯ ಸಾಮಾನುಗಳನ್ನು ಪ್ರದರ್ಶಿಸಿರುತ್ತಾರೆ – ಕನ್ನಡಿ, (ಸಾಂಕೇತಿಕವಾಗಿ) ಶೇವಿಂಗ್ ಕ್ರೀಂ/ಬ್ಲೇಡ್, (ತಲೆಗೆ ತಿಕ್ಕುವುದಕ್ಕೆ) ಕೊಬ್ಬರಿಎಣ್ಣೆ ಇತ್ಯಾದಿ.
ನಿಮ್ಮೀ ಪೂರಣಮಾರ್ಗಂ
ಸಮ್ಮಾನಿತಮಾದ ವಾಣಿಯೂಹಾತೀತಂ
ಕಮ್ಮಗೆ ಪೇಳ್ವಾ ಭರದೊಳ್
ನೆಮ್ಮಿರ್ದಪಿರೊಂದು ಬನ್ನಮಂ ನೀವಿದರೊಳ್!
(ವಿನಹ – ಎಂಬುದು ಅಶುದ್ಧ- ಸಂಸ್ಕೃತದ ವಿನಾ ಎಂಬ ಅವ್ಯಯವೇ ಆಡುಮಾತಿನಲ್ಲಿ ವಿನಹ-ವಿನಃ ಎಂದೆಲ್ಲ ಆಗಿದೆ- ಹಾಗಾಗಿ ‘ಉಳಿಯಲ್’ ಎಂದೇ ಬಳಸಬಹುದು. ಅಥವಾ ‘ಈ ಪರಿಯ ವಿನಾ’ ಎಂದು ಮಾಡಬಹುದೇನೋ- ಗೊತ್ತಿಲ್ಲ.)
Thanks and thanks. I have corrected the error.
Super Poorana. clap clap clap.
Tnx sreesha
When the sense of touch says it all, there is no need for the sense of sight!
ಸನ್ನೆಯಿನಿಂ ಕರೆಯಲವಂ
ಕನ್ನೆಯು ಕೈಯಿಂದೆ ನೀಡಲುತ್ತರಮನ್ನುಂ|
ಕೆನ್ನೆಯುರುಬನುಂ ತಡಕಿಪ!
ಕನ್ನಡಿಯೇ ಬೇಡದಾಯ್ತು ಚೆಲುವಂಗಮಮಾ||
ನಿಮ್ಮ ಪದ್ಯಗಳು ಚೆನ್ನಾಗಿವೆ ಪ್ರಸಾದು
Tnx soma
ಬಹಳ ದಿನಗಳನಂತರ ಒಂದು ಕನ್ನಡದಲ್ಲಿನ ಪ್ರಯತ್ನ:
ಮನ್ನಣೆಯ ತುದಿಯನೇರಲ್
ಬಿನ್ನಾಣದಬಲೆಯ ನಯನಬಿಂಬಾಭದೊಳಾ
ಕ್ಲಿನ್ನತೆಯಾದರ್ಶಮಾಗಳ್
ಕನ್ನಡಿಯೇ ಬೇಡದಾಯ್ತು ಚೆಲುವಂಗಮಮಾ ||
Her eyes do not serve as mirror only when she attains the peak of recognition. Air does not evidence its presence only when we breathe.
(Permeate)ಮಸಗಿರದೆ ಸರ್ವತ್ರಮಾವಗಂ ಗಾಳಿ ನಾ
ಮುಸಿರಾಡುವಾಗಮಲ್ಲದೆಲೆ ಮಾತ್ರಂ?
ಜಸದ ಹಂಗನು ತೊರೆದು ದುಡಿವ ಗೃಹಪತ್ನಿಯಳ
ಮಸಿಗಣ್ಣದಾಗದೇಂ ಕನ್ನಡಿಯು ಪೇಳ್??
ಪೆರ್ವೊಳಲ ರಾಘವೇಂದ್ರರೆ
ಪರ್ವಂ ಸಂದತ್ತು ನಿಮ್ಮ ಪದ್ಯದಿನೆಮಗಂ
ಸರ್ವರ್ ಮೆಚ್ಚುವರಲ್ತೇ-
ನುರ್ವರೆಯೊಳ್ ನಿಮ್ಮ ಪದ್ಯಪದ್ಧತಿಯಂ ಮೇಣ್||
(ಮೂರನೆ ಸಾಲಿನಲ್ಲಿ ಕೊನೆಯ ಗಣಕ್ಕೆ ಒಂದು ಮಾತ್ರೆ ಹೆಚ್ಚಿದೆ ನೋಡಿ)
ನಲ್ನುಡಿಗೆ ಮತ್ತು ಸವರಣೆಗೆ ಧನ್ಯವಾದಗಳು. ಬದಲಾಯಿಸಿದ್ದೇನೆ.
ಮನ್ನಣೆಯ ತುದಿಯನೇರಲ್
ಬಿನ್ನಾಣದಬಲೆಯ ನಯನಬಿಂಬಾಭದೊಳಾ
ಕ್ಲಿನ್ನತೆ ದರ್ಪಣಮಾಗಳ್
ಕನ್ನಡಿಯೇ ಬೇಡದಾಯ್ತು ಚೆಲುವಂಗಮಮಾ ||
Started with this initially.
Having climbed the pinnacle of success, and (subsequently) wooed by fair coquettes, their “unsaid” request was a mirror (to his success) and (hence) the handsome guy didn’t need a(n extra) mirror.
ಮನ್ನಣೆಯ ತುದಿಯನೇರಲ್
ಬಿನ್ನಾಣದಬಲೆಯರವನನೋಲೈಸಿರಿಲಾ
ಬಿನ್ನಪಮಾದರ್ಶಮಾಗಳ್
ಕನ್ನಡಿಯೇ ಬೇಡದಾಯ್ತು ಚೆಲುವಂಗಮಮಾ ||
Second attempt want to do add aardrate/klinnate to their request and looks like it got a fully different meaning. Will try to fix that one as well.
ರಾಘವೇಂದ್ರ, ಎರಡೂ ಪದ್ಯಗಳು ಚೆನ್ನಾಗಿವೆ
ಧನ್ಯವಾದ ಸೋಮ!
ತನ್ನಯ ಮೊಗವದು ಚೆಂದವ-
-ದೆನ್ನುತ ಬನದಿಂ ಬರುತಿರೆ ರಾಜನು, ಕೊಳದೊಳ್
ತನ್ನಯ ಚೆಲುವಂ ತಾನೇ ಹೀರಲು
ಕನ್ನಡಿಯೇ ಬೇಡವಾಯ್ತು ಚೆಲುವಂಗಮಮಾ
೧) ’ಬನದಿಂ ಬರುತಿರೆ ರಾಜನು’ ಎಂಬುದು ತುಂಬ ಧ್ವನಿಪೂರ್ಣವಾಗಿದೆ. ರಾಜರು ಆಗಾಗ ಬೇಟೆಗೆ ಹೋಗುವುದೊಂದು. ಯಾವ ಸಾಮ್ರಾಜ್ಯದ ಆಧಿಪತ್ಯಕ್ಕೂ ಒಳಪಡದೆ, ರಾಜ್ಯಗಳ ಗಡಿಗಳಲ್ಲಿರುವ ಋಷ್ಯಾಶ್ರಮಗಳಿಗೆ ಭೇಟಿ ನೀಡಿ ಆ ಋಷಿಗಳಿಂದ ಧರ್ಮಬೋಧೆಯನ್ನು ಹೊಂದಿದ ಇಲ್ಲವೆ ಜ್ಞಾನಸಾಮರ್ಥ್ಯಮಾನದಿಂದ ಆ ಋಷಿಗೇ ಸವಾಲೊಡ್ಡಿದ ರಾಜರುಗಳ ನಿದರ್ಶನಗಳಿವೆ.
೨) ಇತರ ಕನ್ನಡಿಗಳು ಜೇಬುಗಳಲ್ಲಿ, ವ್ಯಾನಿಟಿಬ್ಯಾಗಿನಲ್ಲಿ, ಕೋಣೆ-ಬಚ್ಚಲುಗಳ ಗೋಡೆಗಳಲ್ಲಿರುತ್ತವೆ. ನಿಜವಾದ ಕನ್ನ್’ಅಡಿ’ ಎಂದರೆ ಅಡಿಯೊಳಿರುವ ಜಲಮುಖವೇ ಅಲ್ಲವೆ? 😉
ದ್ರುತಪದ|| ಕಿಸೆಯೊಳುಂ ಕರದ ಸಂಚಿಯೊಳುಂ ಮೇಣ್
ವಸತಿಕೋಷ್ಠದೊಳು ಸ್ನಾನದ ಗೂಡೊಳ್|
ರಸದ ಕನ್ನಡಿಗಳಿದ್ದಿರಲೇಂ ಕೇಳ್
ಅಸಲುಗನ್ನ್’ಅಡಿ’ಯು ಸಾರಸವಕ್ತ್ರಂ||
‘ಮೊಗಮದು’, ’ಚೆಂದಮದೆನುತುಂ’, ‘ರಾಜಂ’, ‘ಪೀರಲ್ ‘ಎಂದಾದರೆ ಹಳಗನ್ನಡವಾದೀತು….. ೨ನೆಯ ಪಾದದ ಮೂರನೆಯ ಗಣವು ಸರ್ವಲಘುವಾದ್ದರಿಂದ, ಮೊದಲನೆಯ ಅಕ್ಷರವು ಹಿಂದಿನ ಪದಕ್ಕೆ ಸೇರಿ, ೨ನೆಯ ಗಣದಿಂದ ಹೊಸ ಪದದ ಆರಂಭವಾಗತಕ್ಕದ್ದು (ಯತಿಸ್ಥಾನ ನಿಯಮ) .. ಇಲ್ಲದಿದ್ದರೆ ೨ನೆಯ ಪಾದದ (ಇದು ನಾಲ್ಕನೆಯ ಪಾದಕ್ಕೂ ಅನ್ವಯಿಸುತ್ತದೆ) ಮೂರನೆಯ ಗಣಸ್ಥಾನದಲ್ಲಿ ಜಗಣವೇ (ನನಾನ, -U- ವಿನ್ಯಾಸ) ಬರಬೇಕು).. ವಿಡಿಯೋ ಪಾಠಗಳಲ್ಲಿ ಕಂದಪದ್ಯರಚನೆಯನ್ನು ವಿಶದವಾಗಿ ವಿವರಿಸಲಾಗಿದೆ…ಗಮನಿಸಿಕೊಂಡರೆ ಎಲ್ಲವೂ ತಿಳಿಯಾಗುವುದು ತಂಗಿ!
ಪದ್ಯಂ ಹೃದ್ಯಮೆನಿಪ್ಪುದು
ವೇದ್ಯಂ ಕೆಲವೊಂದು ದೋಷಮಿರ್ಪುದು ನೋಡೌ
ವಿದ್ಯಾರ್ಥಿ! ಗಣನೆಯೊಳ್ ಚತು-
ರಾದ್ಯೇ! ಮೂರನೆಯ ಪಾದಮಂ ಲೆಕ್ಕಿಪುದೌ!
(ಮೌರ್ಯ ಹೇಳಿದ ನಿಯಮವನ್ನೂ ಗಮನಿಸಬೇಕು. ಅಲ್ಲಿ “… ಬನದಿಂ ಬರುತ್ತೆ ರಾಜಂ ಕೊಳದೊಳ್” ಎಂದು ಮಾಡಬಹುದು.)
ಕೊಪ್ಪಲತೋಟರೆ, ಮೂರನೇ ಪಾದವು- “ವಿದ್ಯಾರ್ಥಿನಿ ! ಗಣಿತದೆ ಚತು-” ಆದಲ್ಲಿ ಒಳಿತಲ್ಲವೆ ?
ತನ್ನಯ ಮೊಗಮದು ಚೆಂದಮ-
ದೆನ್ನುತೆ ಬನದಿಂ ಬರುತ್ತೆ ರಾಜಂ ಕೊಳದೊಳ್
ತನ್ನಯ ಚೆಲುವಂ ಪೀರಲ್
ಕನ್ನಡಿಯೇ ಬೇಡವಾಯ್ತು ಚೆಲುವಂಗಮಮಾ
(ತಪ್ಪುಗಳನ್ನು ತಿದ್ದಿಕೊಳ್ಳುತ್ತ ಈ ಪ್ರಯತ್ನ)
ಈಗ ಸುಧಾರಿಸಿದೆ ಪದ್ಯ
ವಿನೋದವಾಗಿ !!
ಅನ್ಯೋನ್ಯದ ದಾಂಪತ್ಯದೆ
ಕಣ್ಣೆದುರದೊ ಅಕ್ಕಪಕ್ಕದಲೆ ಕನ್ನಡಿಯೋಲ್
ಕಣ್ಣೆರಡಿರೆ ಬೆನ್ನಿಗೆ ಮರು
ಗನ್ನಡಿಯೇ ಬೇಡದಾಯ್ತು ಚೆಲುವಂಗಮಮಾ ||
*Hind-blindness is a blessing in disguise mutually!
ಅನ್ಯೋನ್ಯದ ದಾಂಪತ್ಯಕ-
ನನ್ಯಂ ಕಾರಣಮಿದಲ್ತೆ*ಲೀ ದಂಪತಿಯೊಳ್|
ಧನ್ಯಂ ಮಾತ್ರನವನಹನೆ?
ಆ ನ್ಯೂನತೆಯಿಂದೆ ಪತ್ನಿಯುಂ ಧನ್ಯಳ್ ದಲ್||
ಅಕಟಾ! ನೀವೇ ಪ್ರಾಸದೆ
ವಿಕಟತೆಯಂ ತೋರಿ ದೂರಮಾಗಲ್ಕೆಂತೌ!
ಪ್ರಕಟಿತಸುರುಚಿರಕಲ್ಪನೆ
ಸಕಲಂ ಸಂದಿರ್ಪುದುಳಿದುದೀ ಪದ್ಯದೊಳಂ|
ಅನ್ನೆಯಮನ್ಯಾಯಮೆ ಗಡ-
ಮನ್ನಿಸಿತನ್ಯೋನ್ಯಮೆನಗದನ್ನೋನ್ಯದವೋಲ್ ।
ಎನ್ನಿಂದಾದನ್ಯಾಯವ
ಮನ್ನಿಸುತನ್ಯೋನ್ಯಕನ್ಯ ಮಾರ್ಗವತೋರೈ !!
ಅನ್ಯಾಯ = ಅನ್ನೆಯ ~ ಅನ್ಯೋನ್ಯ = ಅನ್ನೋನ್ಯ !?!
ಧನ್ಯವಾದಗಳು ಪ್ರಸಾದ್ ಸರ್, ಕೊಪ್ಪಲತೋಟ
ಮುನ್ನಮೆ ಸಿಂಗಾರಗಳಂ
ಚೆನ್ನಿಂದೆಯೆ ಮಾಡಿಕೊಳ್ಳುತಿರ್ದಂ ಸೊಗದಿಂ
ಚೆನ್ನಾಗಲಲಂಕಾರಂ
ಕನ್ನಡಿಯೇ ಬೇಡವಾಯ್ತು ಚೆಲುವಂಗಮಮಾ
[ಅಲಂಕಾರವಾದ ಮೇಲೆ ಕನ್ನಡಿ ಬೇಡವಾಯ್ತು 🙂 ]
Verrrrry good. Henceforth there will be at least one verse from you on this principle every week whatever the topic be. Beats me why you didn’t think on these lines all these years!
Dear Prasad,
Thanks for the appreciation. Unfortunately, this technique does not lend itself for samasyes of other types. If you take a couple of earlier samasye samples, this will be clear.
But still, do your best 😀
ಪೊನ್ನಿನವೋಲ್ ಪೊಳೆದಿತ್ತಾ
ನುಣ್ಣಗೆ ಕೆತ್ತಿರ್ದ ಮಂಡೆ ತಿಥಿಗೈವವನಾ
ಪಣ್ಣಾಗಿಸೆ ಪಿತೃಶೋಕಂ
ಕನ್ನಡಿಯೇ ಬೇಡವಾಯ್ತು ಚೆಲುವಂಗಕಟಾ 🙁
[ಮನ್ನಿಸಿ – ಸಂದರ್ಭಕ್ಕೆ ಹೊಂದಲು ಅಮಮಾ ಎಂಬುದನ್ನು ಅಕಟಾ ಎಂದು ಬದಲಿಸಿದ್ದೇನೆ. ಪ್ರಾಸದಲ್ಲಿಯೂ ಸಡಿಲತೆಯಿದೆ]
ತಂದೆಯ ಸಾವಿಂ ಮಾತ್ರಮಿ-
ದೊಂದೇಂ ಬನ್ನಂ ಸುತಂಗೆ ಮುಕುರವ್ಯಾಜಂ?
ಒಂದೆರಡುವಗಲುಮಾತನ
ಮುಂದೆಲೆಯನಿಬರ್ಗಮಾಯ್ತೆ ಕನ್ನಡಿಯಂತೊಲ್!
ಪಣ್ಣಾಗಿಸೆ ಎಂದರೆ ಹೆಚ್ಚು ಸೂಕ್ತ. ಹಾಗೆಯೇ ಮುಂಡಕ್ಕೆ ಬಿಂದು ಬರಬೇಕಿತ್ತು.
ಸೂಚನೆಗೆ ಧನ್ಯವಾದಗಳು.
ಮುಂಡಂ ಎಂದು ಮಾಡಿದರೆ ಛಂದಸ್ಸು ಹೊಂದದ್ದರಿಂದ, ಮಂಡೆ ಎಂದು ಮಾಡಿದ್ದೇನೆ
ಚೆನ್ನಾಗಿದೆ ರಾಮ್ 🙁
ತನ್ನಂತಿನ್ನಾರಿರದಿಹ-
ರೆನ್ನುವ ಸವಿಮಾತಕೇಳುತುತ್ಸಾಹದೊಳಿಂ
ಮನ್ನಿಸುತಿರೆ ಪೊಗಳಿಕೆಗಂ
ಕನ್ನಡಿಯೇ ಬೇಡಮಾಯ್ತು ಚೆಲುವಂಗಮಮಾ
ತನ್ನ ಸರಿಯಾದ ಮೃತ್ಯುವಿನಿಂ
ದಿನ್ನೀ ಜೀವನವೆ ಶೋಕದಿಂ ತುಂಬಿರುತುಂ
ಬನ್ನಮೆ ಕಾಣುತಲೆಲ್ಲುಂ
ಕನ್ನಡಿಯೇ ಬೇಡಮಾಯ್ತು ಚೆಲುವಂಗಮಮಾ
ಕಲ್ಪನೆಯಿಂ ಪೊಸತನದಿಂ
ಜಲ್ಪನಮೆಂಬಂತೆ ಬಂದ ಪದ್ಯದೆ ಸೊಗದಿಂ
ಬಲ್ಪಿಂ ಚೆನ್ನಾಗಿರ್ದುಂ
ದಲ್ ಪಣ್ಬುಳುವಂತೆ ದೋಷಮೆಯ್ದಿರ್ಕುಮಲಾ!!
(ಎರಡನೆ ಪದ್ಯದ ಮೊದಲ ಸಾಲು ಮಾತ್ರೆಗಳ ಲೆಕ್ಕ-ಶಬ್ದ ನೋಡಿದರೆ autocorrection ನಿಂದಾದ ದೋಷದಂತೆ ಕಾಣುತ್ತದೆ. ಮೊದಲ ಪದ್ಯ ಮೊದಲ ಸಾಲು- ಇಹರ್- ಇರ್ಪರ್ ಆದರೆ ಚೆನ್ನ. ಆರಿರ್ದಪರೆಂದೆನ್ನುತೆ- ಎಂದು ತಿದ್ದಬಹುದು.)
ಅಯ್ಯೋ ಹೌದು ಕೊ.ತೋಟಾ ನೋಡಿರ್ಲಿಲ್ಲ…ತನ್ನ ಸತಿಯ ಅಂತ ಆಗ್ಬೇಕಿತ್ತು.. ಸವರಣೆಗೆ ಧನ್ಯವಾದಗಳು
ಇನ್ನಿರದಿರಲ್ಕೆ ಸತಿಯೊಳ್
ಮುನ್ನಂ ಪೊಂದಿದನುರಾಗಮಿನಿತುಂ,ನಿಚ್ಚಂ
ತನ್ನಂ ಕಂಡವಳಾ ಕ
ಣ್ಗನ್ನಡಿಯೇ ಬೇಡದಾಯ್ತು ಚೆಲುವಂಗಮಮಾ!
ಎಲ್ಲರಿಗೂ ವಂದನೆಗಳು,
ಪದ್ಯಪಾನದಲ್ಲಿ ಒಂದು ಬಾಲಿಶ ಪ್ರಯತ್ನ. ಇಲ್ಲಿ ಇರುವ ಪದ್ಯಗಳನ್ನು ಓದಿ , ಸ್ಪೂರ್ತಿಯಿಂದ,
ವ್ಯಾಕರಣ ಬಗ್ಗೆ ಆರಿವು ಇಲ್ಲದೆ
ಛಂದಸ್ಸು ಬಿಟ್ಟು ಪ್ರಾಸ ಕೆಟ್ಟು | ಮನಸ್ಸು ಇಟ್ಟು ತ್ರಾಸ ಪಟ್ಟು,
ನಿವೃತ್ತ ವೃತ್ತದಲ್ಲಿ ( 🙂 ) , ತೋಚಿದಂತೆ ಗೀಚಿದ್ದೇನೆ
ತಪ್ಪಿದ್ದಲ್ಲಿ ಕ್ಷಮಿಸಿ ಮತ್ತು ತಿಳಿಸಿ.
ಚೆನ್ನಿಗ ಚೆಲುವೆಯ ಚೆಲುವಂ
ಬಣ್ಣಿಪ ಪರಿಯಂ ಕೇಳುತ ಬರೆದಿಹ ಚಿತ್ರದಿ
ತನ್ನಂ ಕಂಡಾ ಚೆಲುವೆಗೆ
ಕನ್ನಡಿಯೇ ಬೇಡದಾಯ್ತು ಚೆಲುವಂಗಾಮಮಾ!
ಪದ್ಯಪಾನಕ್ಕೆ ಸ್ವಾಗತ
ಒಳ್ಳೆಯ ಪ್ರಯತ್ನ. ಪದ್ಯಗಳನ್ನು ಛಂದಸ್ಸಿನ ಬಂಧಗಳಲ್ಲಿ ಹೊಂದಿಸಲು ಪ್ರಯತ್ನಿಸಿ. ನೀವು ಆದಿಪ್ರಾಸವನ್ನು ಹೊಂದಿಸಲು ಯತ್ನಿಸಿದ್ದೀರಿ.
ಈ ಸಮಸ್ಯೆಯು ಕಂದ ಎಂಬ ವೃತ್ತ / ಛಂದಸ್ಸಿನಲ್ಲಿದೆ. ಅದರ ರೂಪುರೇಷೆಗಳು ಪದ್ಯಪಾನದಲ್ಲಿಯೇ “ಪದ್ಯ ವಿದ್ಯೆ”ಯಡಿಯಲ್ಲಿ ವಿಡಿಯೋ ಪಾಠವಾಗಿ ಸಿಗುತ್ತದೆ.
ನನ್ನ ಸವರಣೆ:
“ನಿನ್ನೀ ಕಣ್ಣೇನ್ ಕೊರಳೇ-
ನಿನ್ನಾ ಮೈಬಣ್ಣ-ಕದಪ ಚೆಲುವಿನ್ನೇನೋ!”
ಚೆನ್ನಿಗನಿಂತೊರೆಯಲ್ ಕಾಣ್
ಕನ್ನಡಿಯೇ ಬೇಡದಾಯ್ತು ಚೆಲುವೆಗಮಮಮಾ||
(ಸಮಸ್ಯಾಪಾದದಲ್ಲಿ ’ಚೆಲುವ’ ಹೋಗಿ ’ಚೆಲುವೆ’ ಆಗಿದೆ!)
ಪದ್ಯಪಾನಕ್ಕೆ ಸ್ವಾಗತ. ಛಂದೋಬದ್ಧ ಪದ್ಯರಚನೆಯ ನಿಮ್ಮ ಆಸಕ್ತಿ / ಪ್ರಯತ್ನಕ್ಕೆ ಅಭಿನಂದನೆಗಳು. ಭಾಮಿನಿ ಷಟ್ಪದಿ / ಚೌಪದಿಗಳಲ್ಲಿ ಪ್ರಯತ್ನಿಸಿದ್ದೀರಿ. ಛಂದಸ್ಸಿನ ನಿಯಮಗಳನ್ನು ಪೂರ್ಣ ಪಾಲಿಸಬೇಕಿದೆ. (ವಿನೋದವಾಗಿ ಹೇಳಬೇಕೆಂದರೆ pgdamleಅವರೇ = ಪದ್ಯವಿದ್ಯೆಯಲ್ಲಿ PGDಆದಮೇಲೆ ! ಪುನಃ ಪ್ರಯತ್ನಿಸಿ). ಛಂದೋಬದ್ಧತೆಯೇ ನಮ್ಮ ಕಲ್ಪನೆಗಳಿಗೆ ಒಂದು ನಿರ್ದಿಷ್ಟ / ವಿಶಿಷ್ಟ ರೂಪಕೊಡಲು ಸಹಕಾರಿಯಾಗುತ್ತದೆ.
ತನ್ನಯ ವಾಹಮುಕುರದೊಳ್
ಕಣ್ಣಾಲಿಯನಿಟ್ಟು ತೃಪ್ತಿಯಂ ಪೊರೆಯುತಿರಲ್,
ಚೆನ್ನಾದ ಹೊಳೆಹೊಳೆವ ನಿಲು
ಗನ್ನಡಿಯೇ ಬೇಡವಾಯ್ತು ಚೆಲುವಂಗಮಮಾ!
ಅಹಹಾ! ವಾಹನಮುಕುರಂ
ಮಹಿಳೆಯರಾಸೀನರಪ್ಪ ಕಡೆಯೊಳ್ ಸಲ್ಗುಂ!
ಮಹನೀಯಪೀನದರ್ಪಣ-
ಗಹನಾಗತಬಿಂಬಮೊಂದೆ ಪುರುಷರ್ಗಿರ್ಕುಂ!!
But Ganesh, I will endorse her statement from another point of ‘view’:
ವಾಹನಾದರ್ಶದೊಳ್ ಲಾವಣ್ಯಯುವತಿಯರ
ಬೇಹಿನಿಂ ಕಾಂಬ ಯೋಗಮದಿರ್ದಿರಲ್|
ನೇಹಕಾಸ್ಪದವೀವಿದೊಂದುಳಿದು ಮತ್ತಮಿ-
ನ್ನಾಹಾರ್ಯಮೇನಿತರ ಕನ್ನಡಿಗಳೈ|| (ನಿಲುವುಗನ್ನಡಿ, ಕೈಗನ್ನಡಿ ಇತ್ಯಾದಿ)
ಚೆನ್ನಿರದಂತಾಗೆ,ಕೆಡುತೆ
ತನ್ನಯ ಮೊಗಮಂ ವಿಕಾರದಿಂ ಬಿಂಬಿಸಿರಲ್,|
ಮನ್ನಿಸುತೆ ಬಳಸುತಿರ್ದಾ
ಕನ್ನಡಿಯೇ ಬೇಡದಾಯ್ತು ಚೆಲ್ವಂಗಮಮಾ ||
( ಮನ್ನಣೆಯಿಂದ ಬಳಸುತ್ತಿದ್ದ ಕನ್ನಡಿಯು ಕೆಡುತ ಚೆನ್ನಾಗಿರದಂತಾಗಿ ತನ್ನ ಮುಖವನ್ನು ವಿಕಾರವಾಗಿ ಬಿಂಬಿಸಿರಲು, ಚೆಲುವನಿಗೆ ಆ ಕನ್ನಡಿಯೇ ಬೇಡದಾಯಿತು. )
ಚೆನ್ನನ ಬಗೆಯಂ ಸರ್ವರ್
ಮುನ್ನಂ ಚಿಂತಿಸುತೆ ಪದ್ಯಮಂ ರಚಿಸಿರಲೀ
ಕನ್ನಡಿ ಕಿಡುವುದನರುಪಲ್
ಚೆನ್ನಾದುದು ನಿಮ್ಮ ಮಾರ್ಗದೊಳ್ ಪರಿಹಾರಂ||
ವಂದನೆಗಳಂ ಸಲಿಪೆನಾಂ,
ಚಂದದ ಪದ್ಯದೆ ಮೆಚ್ಚಿರೆ ನೀಂ ಪೂರಣಮಂ 🙂
ಎನಿತೋ ವಿಕಾರಮುಖಗಳನ್ನು ಬಿಂಬಿಸಿದಾಗ ಸ್ವಲ್ಪವೂ ಪ್ರಕೋಪಗೊಳದಿದ್ದು, ಈಗೊಮ್ಮೆ ಇಂಪಾದ ಮುಖವೊಂದನ್ನು distort ಮಾಡಿದ ಮುಕುರವನ್ನು ದೂಷಿಸಬಹುದೆ?
ಕಲಹಂಸ|| ಎನಿತೋ ವಿಕಾರಮುಖಬಿಂಬನಗೈದಾ-
ಗಿನಿತುಂ ಪ್ರಕೋಪಗೊಳದಿರ್ದಿರುತೀಗಳ್|
ಕನಲಿರ್ಪೊಡೊಮ್ಮೆ ಮುಖಮಿರ್ದೊಡಮಿಮ್ಪಿಂ-
ದೆನುಗೇಂ ವಲಂ ಮುಕುರದೋಷಮೆನುತ್ತುಂ?|
” ವಿಕಾರಮುಖಬಿಂಬನಂಗೈದಾಗಳಿನಿತುಂ”, ಪ್ರಕೋಪಂಗೊಳದಿರ್ದಿರುತೀಗಳ್”- ಆದಲ್ಲಿ ಒಳಿತು. ಆದರೆ ಛಂದಸ್ಸಿಗೆ ಹೊಂದುವುದಿಲ್ಲ.
ಹೌದು.
ಅನ್ನವನರಸುವ ತಿರುಕಗೆ
ಕನ್ನಡಿಯೇ ಬೇಡವಾಯ್ತು , ಚೆಲುವಂಗಮಮಾ
ಚಿನ್ನದ ಮುಕುರವ ಪಿಡಿದಿರೆ
ತನ್ನಯ ಚೆಲುವನು ಸವಿಯುತಲನ್ನವ ತೊರೆವಂ
ಇಲ್ಲಿಯೂ ಕೂಡ ಯತಿನಿಯಮ ಪಾಲಿತವಾಗಿಲ್ಲ. “ಸವಿಯುತ” ಎಂಬಲ್ಲಿ ಮೊದಲಕ್ಷರದ ಬಳಿಕ ಯತಿ ಬರಬೇಕು. ಅದರ ಬದಲು ” ತನ್ನಯ ಚೆಲ್ವಿಂಗೆ ಸೋಲುತನ್ನವ ತೊರೆವಂ” ಎಂದು ಮಾಡಬಹುದು. ಹಳಗನ್ನಡದ ಪ್ರತ್ಯಯಗಳು ಇನ್ನಷ್ಟು ಬಂದರೆ ಚೆನ್ನ. ನಿಧಾನಕ್ಕೆ ಅದು ಹೊಂದುತ್ತದೆ.
ಇಲ್ಲಿ ’ಚಿನ್ನದ’ ಎಂಬ ಪದವು ಪ್ರಾಸಕ್ಕಾಗಿ ಬಳಸಿರುವುದಷ್ಟೆ. ಆದರೆ ಅದನ್ನೇ ದೊಡ್ಡದುಮಾಡಿ ಈ ಪ್ರತಿಕ್ರಿಯೆ:
ಆನಾದೊಡನ್ನಮಂ ಮೇಣ್ ಮುಕುರಕಾಚನುಂ
ಹೀನಾಯದಿಂ ತೊರೆದು ಮಾತ್ರಮೊಂದಂ|
ವೈನಾದ ಆ ಕನ್ನಡಿಯಕಟ್ಟ ಕರಗಿಸುತೆ
ಪೌನುಗಳ ಗಳಿಸುವೆಂ ಸಂತೋಷದಿಂ||
ಕಲ್ಪನೆ, ವ್ಯ೦ಗ್ಯ ತು೦ಬಾ ಚೆನ್ನಾಗಿದೆ 🙂
ಚೆನ್ನಾದ ಮೀಸೆ ಚಣದೊಳ್
ಖಿನ್ನತೆಯನ್ನುಳಿಸಿ ಪೋಯ್ತೆ ಮುಕ್ಕಾಗುತ್ತುಂ
ಹನ್ನೆರಡಾಣೆಯ ಮತಿಯೊಳ್
ಕನ್ನಡಿಯೇ ಬೇಡದಾಯ್ತು ಚೆಲ್ವಂಗಮಮಾ
[ಮೀಸೆ ಮುಕ್ಕಾಗಿ ಕೆತ್ತುಹೋಗಿರೆ ಮತಿ ಹನ್ನೆರಡಾಣೆಯಾಯ್ತು (ಕೆಟ್ಟುಹೋಯಿತು)]
ಭಲರೇ ರಾಮಚಂದ್ರರೆ ! 🙂
ಹಿತಮುಂ ಸೊಗಮುಂ ಪದ್ಯ-
ತ್ರಿತಯಂ ಸಂದಿರ್ಪುದಲ್ತೆ ನವಕಲ್ಪನೆಯಿಂ
ಮತಿಗೆಂತು ಗೋಚರಿಕುಮೀ
ಪ್ರತಿಯೊಂದುಂ, ನತಿಯ ನುತಿಯನೀವೆಂ ನಿಮಗಂ||
ಶಕುಂತಲಾರವರೆ, ಗಣೇಶ ಭಟ್ಟರೇ,
ಮೆಚ್ಚುಗೆಗೆ ಧನ್ಯವಾದಗಳು
_/\_
Fine. ಹನ್ನೆರಡಾಣೆ ಎಂಬ idiomನ್ನು ಕಲಿತಂತಾಯಿತು.
ರಾಮಚಂದ್ರ ಸರ್,
ನಿಮ್ಮ “ಮೀಸೆ ಮುಕ್ಕಾದ” ಪದ್ಯದ ಕಲ್ಪನೆ ತುಂಬಾ ಚೆನ್ನಾಗಿದೆ.
ಆದರೆ ಹೀಗೊಂದು ಅನುಮಾನ,
ಇನ್ನುಳಿದುದ ಕೆರೆಯಲ್ಕದೊ
ಕನ್ನಡಿಯೇ ಬೇಕದಲ್ತೆ ಚೆಲ್ವಂಗಮಮಾ !!
ಹ್ಹಹ್ಹ. ಹಾಗೇನಿಲ್ಲ. ಪೂರ್ತಿ ತೆಗೆದುಬಿಡುವುದು ಎಂದು ನಿರ್ಧರಿಸಿಕೊಂಡರೆ, ಕನ್ನಡಿಯ ಹಂಗಿಲ್ಲದೆ ನೆರವೇರಿಸಬಹುದು.
ಚೆನ್ನಾಗಿದೆ ರಾಮ್
ಸೂಪರ್!
ತನ್ನಂ ತಾಂ ಭಾವಿಸದಂ-
ದೆನ್ನಯ ನಾಲ್ಗಾಲಿವಂಡಿಯೋಡಿಸಲಮಲೊಳ್ ।
ಕನ್ನೆಯಿರಲೆಡದಲಿ ಬಲದ
ಕನ್ನಡಿಯೇ ಬೇಡದಾಯ್ತು ಚೆಲ್ವಂಗಮಮಾ ।।
“ಸೈಡ್ ಮಿರರ್” ಕಲ್ಪನೆ !!
ಚೆನ್ನಾಗಿದೆ ಉಷಾ ಅವರೇ
ಧನ್ಯವಾದಗಳು ಸೋಮ,
ಕಾರ್ ಡ್ರೈವ್ ಮಾಡುವ ಚೆಲುವರಿಗಷ್ಟೇ ಅರ್ಥವಾಗಲು ಸಾಧ್ಯ !!
“ಎಡ-ಎಡ, ಬಲ-ಬಲ, ನಿಲ್-ನಿಲ್,
ಗುಡುಗಿಸು (Honk), ವೇಗಂ, ನಿಧಾನವಯ್ಯಾs, ಅಕಟಾ!”
ಅಡಿಗಡಿಗಿಂತೆನೆ ಕನ್ನೆಯು
ಕನ್ನಡಿಯೇ ಬೇಡದಾಯ್ತು ಚೆಲ್ವಂಗಮಮಾ||
ಅಡಿಯಿಡುದೇ ಬೇಡದಾಯ್ತೇ ಚೆಲ್ವಂಗಮಮಾ ?!!
ಆಹಾ..! ನಿಮ್ಮ ಎಡ-ಬಲದ-ನಿಲುವು ತುಂಬಾ ಚೆನ್ನಾಗಿದೆ ಪ್ರಸಾದ್ ಸರ್ !!
ಖಿನ್ನತೆಯಾಂತಂ ಯುದ್ಧದೆ
ತನ್ನಿಂದಳಿಯಲ್ ವಿಶಾಲಸೈನ್ಯಂ ಕೊರಗ-
ಲ್ಕನ್ನೆಗೆ ವಿರಕ್ತನಾದಂ
ಕನ್ನಡಿಯೇ ಬೇಡದಾಯ್ತು ಚೆಲುವಂಗಮಮಾ
ಕನ್ನೆಗೆ ವಿರಕ್ತನಾದಂ – ಇಂತಹ ವೈರಾಗ್ಯವನ್ನು ನಾನು ಈವರೆಗೆ ನೋಡಲೇ ಇಲ್ಲ 😉
ಅನ್ನೆಗೆ ಪ್ರಸಾದು 🙂
ತನ್ನಯ ಚರ್ಯೆಯನನಿಶಂ
ಮುನ್ನಂ ತೋರ್ದಪುದು ದೂರದರ್ಶಕಯಂತ್ರಂ
ಚನ್ನಿಗನೀಕ್ಷಿಸೆ ಸತತಂ
ಕನ್ನಡಿಯೇ ಬೇಡದಾಯ್ತು ಚೆಲುವಂಗಮಮಾ
’ತನ್ನಯ’ ಎಂದರೆ ’ದೂರದರ್ಶಕದ’ ಎಂದೇ ವೇದ್ಯವಾಗುತ್ತದೆ.
‘ಎಂದೇ’ ಎನಿಸುತ್ತದೆ ಅನ್ನುವುದಕ್ಕಿಂತ ‘ಎಂದೂ’ ಎನಿಸಬಹುದು ಎನ್ನುವುದಾನ್ನು ಒಪ್ಪುತ್ತೇನೆ 🙂 ಆದರೆ Context ಗೆ ಸರಿಹೊಂದುವುದಿಲ್ಲವಲ್ಲಾ ಪ್ರಸಾದು
ತನ್ನಯ ಸತಿಯೊಳೆ ರಕ್ತಿಯ-
ನೆನ್ನೆಗುಮಿರ್ಪಂತೆ ಕಾಯ್ವನನವಳ್ ಸೆಳೆದಳ್
ಖಿನ್ನಂ ಮನದೊಳೆ ಮುಳಿದಂ
ಕನ್ನಡಿಯೇ ಬೇಡದಾಯ್ತು ಚೆಲುವಂಗಮಮಾ
ಚೆನ್ನೆಗೆ ಮೋಸಂಗೆಯ್ದಂ
ತನ್ನೀ ವರ್ತನೆಗೆ ನಾಣ್ಚುತುಂ ಕೂಳ್ನಡೆಗೆಂ-
ದಿನ್ನೆಗುಮಳ್ಕುತಲಿರ್ಪಂ
ಕನ್ನಡಿಯೇ ಬೇಡದಾಯ್ತು ಚೆಲುವಂಗಮಮಾ
ಮನ್ನಣೆಯಂ ತನ್ನಜ್ಜಂ
ಮುನ್ನಂ ಪಡೆದಿರ್ದ ಪಂದ್ಯದೊಳ್ ತಾನೀಗಳ್
ಸೊನ್ನೆಯನಾಂತಂ ನೋಯುತೆ
ಕನ್ನಡಿಯೇ ಬೇಡದಾಯ್ತು ಚೆಲುವಂಗಮಮಾ
ಮುನ್ನಿನ ಕಾಲದಿನಿ೦ದು೦
ಚೆನ್ನಿಗನೀ ನಾಪಿತ೦ ಕುಲಜನರ ತಲೆಗ೦
ಚೆನ್ನಮೆ ಮಾಳ್ಪನೆನುತ್ತು೦
ಕನ್ನಡಿಯೇ ಬೇಡದಾಯ್ತು ಚೆಲುವ೦ಗಮಮಾ
ಕ್ಷೌರಿಕನ ಮೇಲೆ ಅಷ್ಟು ಭರವಸೆ ಅವನಿಗೆ 🙂
ಚೆನ್ನಾಗಿದೆ ಭರವಸೆಯ ಪುರಸ್ಕಾರ 🙂
ಧನ್ಯವಾದಗಳು 🙂
Idea.
In the movie chachi 420, the hero goes for a feminine make up. The make-up man first shaves his leg and, by default, holds a mirror to show him his shaved leg! nAyakanu tale chachkOtAne.
Hahhhaaahaa
ಬಿನ್ನಪದಿಂಬಿನೊಲವನುಂ
ಬಿನ್ನಾಣದೆ ನೂಂಕುತುಂ ಕೆಳೆತನಮನುಳಿದಳ್
ತನ್ನಯ ಮೊಗಮನೆ ಮುಳಿವಂ
ಕನ್ನಡಿಯೇ ಬೇಡದಾಯ್ತು ಚೆಲುವಂಗಮಮಾ
ತನ್ನಂ ಕರ್ಪಿನ ಮೊಗದಾ
ಕನ್ನೆಗೆ ಪಿರಿಯರ್ ವಿವಾಹದೊಳ್ ಬಂಧಿಸೆ ಕ-
ರ್ಬೊನ್ನಿನ ಕೆನ್ನೆಯೆ ಪೊಳೆಯಲ್
ಕನ್ನಡಿಯೇ ಬೇಡದಾಯ್ತು ಚೆಲುವಂಗಮಮಾ
ಕರ್ಬೊನ್ – ಕಬ್ಬಿಣ
ಯಾವ ಭಾಷೆ?
ಕರ್ ಪೊನ್ – ಕರ್ಬೊನ್
ಚೆನ್ನಾಗಿದೆ 🙂
ಚೆನ್ನಾಗಿದೆ ಸೋಮ,
ತನ್ನಂ ಕರ್ಪಿನ ಮೊಗದಾ
ಕನ್ನೆಗೆ ಪಿರಿಯರ್ ವಿವಾಹದೊಳ್ ಬಂಧಿಸಿರಲ್ ।
“ಇನ್ನೇತಕಲಂಕಾರಂ” ?!
ಕನ್ನಡಿಯೇ ಬೇಡದಾಯ್ತು ಚೆಲುವಂಗಮಮಾ।।
ಅಲ್ಲವೇ !!
ಉಷಾ ಅವರೇ, ನಿಮ್ಮ ಪದ್ಯ ಮೂಲಕ್ಕಿಂತ ಚೆನ್ನಾಗಿದೆ 🙂
ಕಾರ್ಬನ್ ಎಂದು ಬಗೆದಿದ್ದೆ 🙂
🙂
ಚೆನ್ನಿಗನಾಹವಕೆನುತುಂ
ಚೆನ್ನಾದಲುಗಿರ್ಪ ಖಡ್ಗಮಂ ಝಳುಪಿಸಲಾ
ಪೊನ್ನಮೊಗಮನಸಿ ಬಿಂಬಿಸೆ
ಕನ್ನಡಿಯೇ ಬೇಡದಾಯ್ತು ಚಲುವಂಗಮಮಾ
ಸಂತುಲಿತಮಧ್ಯಾವರ್ತಗತಿ||
ಒಮ್ಮೆ ನೋಡಿಕೊಳ್ಳುವುದುಮೊಮ್ಮೆ ಎಡಮೀಸೆ ತಿದ್ದುವುದು ಮ-
ತ್ತೊಮ್ಮೆ ನೋಡಿಕೊಂಡಸಿಯೊಳದರೊಳೇ ಬಲದ ಮೀಸೆಯನ್ನುಂ (ತೀಡಿ)|
ಕಮ್ಮಿಯಾದುದಿದು ಕಮ್ಮಿಯಾದುದದು ಅರರೆ! ತರಿದು-ತರಿದು
ತಿಮ್ಮಚಾರ್ಲಿಯೊಲು ಕಡೆಗೆ ಉಳಿದುದೈ ಚುಕ್ಕೆಮೀಸೆಯನಿತೇ||
🙂 ಚೆನ್ನಾಗಿದೆ ಪ್ರಸಾದು
ಚೆನ್ನಾಗಿದೆ!
ಧನ್ಯವಾದಗಳು
ಸೂಪರ್ ಸ್ಟಾರ್ ರಜನಿಕಾಂತನದೊಂದು ಅಸಾಧ್ಯ ಸಾಧ್ಯತೆ !!
ಕನ್ನಡಿಗ ರಜನಿಕಾಂತಂ
ಚೆನ್ನೈನೊಳ್ ಚಲನಚಿತ್ರ ಜಗಕೆಂದಿಹನೈ ।
ಕನ್ನಡಿಸಲ್ಕೆಂತಿರವಂ*
ಕನ್ನಡಿಯೇ ಬೇಡದಾಯ್ತು ಚಲುವಂಗಮಮಾ !!
*ENTHIRAN ಚಿತ್ರವನ್ನು ಕನ್ನಡದಲ್ಲಿ ರಿಮೇಕ್ ಮಾಡುವ ಸಾಧ್ಯತೆ / ಕನ್ನಡ ಚಿತ್ರರಂಗದಲ್ಲಿ ತನ್ನ “ಇರವ”ನ್ನು ತೋರುವ ಸಾಧ್ಯತೆಯೂ !!
ಸ್ವಲ್ಪ ಬದಲಾವಣೆಯೊಂದಿಗೆ:
ಕನ್ನಡಿಗ ರಜನಿಕಾಂತಂ
ಚೆನ್ನೈನಲ್ ಚಲನಚಿತ್ರ ಜಗಕೆಂತಿರ(*)ನೈ ।
ಕನ್ನಡಿಸಲ್ ತನ್ನಿರವಂ
ಕನ್ನಡಿಯೇ ಬೇಡದಾಯ್ತು ಚಲುವಂಗಮಮಾ !!
*ENTHIRAN ಚಿತ್ರವನ್ನು ಕನ್ನಡದಲ್ಲಿ ರಿಮೇಕ್ ಮಾಡುವ ಸಾಧ್ಯತೆ / ಚಿತ್ರರಂಗದಲ್ಲಿ ತನ್ನ “ಇರವ”ನ್ನು ತೋರುವ ಸಾಧ್ಯತೆಯೂ !!
ತನ್ನೆದೆಯ ಮೇಲ್ಕೊರೆದ ಮನ-
ದನ್ನೆಯ ಹೆಸರ ತಿರುಮುರುಗು ತಂದಿರೆ ಬಿಂಬಂ |
ಖಿನ್ನಗೊಳೆತಾಂ ವಿರೂಪಕೆ
ಕನ್ನಡಿಯೇ ಬೇಡದಾಯ್ತು ಚೆಲುವಂಗಮಮಾ ।।
(ಹೆಸರಿನ ಹಚ್ಚೆ – ಪ್ರತಿಫಲನದಲ್ಲಿ ಪಾರ್ಶ್ವಪಲ್ಲಟಗೊಂಡ ಕಲ್ಪನೆ)
Hehhee.. chennagide madam. ಖಿನ್ನಗೊಳೆ ಎ೦ಬುದು ಸಾಧುವಲ್ಲ ಅನಸ್ತದೆ. ಖನ್ನತೆ ಬಳಸಬೇಕೇನೊ.
ಧನ್ಯವಾದಗಳು ನೀಲಕಂಠ.
ಖಿನ್ನ = ಖೇದ / ಖೇದಗೊಂಡವ ಎರಡೂ ಆಗುವುದಲ್ಲವೇ ?
ತಿದ್ದಿದ ಪದ್ಯ :
ತನ್ನೆದೆಯ ಮೇಲ್ಕೊರೆದ ಮನ-
ದನ್ನೆಯ ಹೆಸರ ತಿರುಮುರುಗು ತಂದಿರೆ ಬಿಂಬಂ ।
“ಖಿನ್ನಂ ತಾಂ ವಿಹ್ವಲದೊಳ್”,
ಕನ್ನಡಿಯೇ ಬೇಡದಾಯ್ತು ಚೆಲುವಂಗಮಮಾ ।।
ಖಿನ್ನನ ಭಾವ ಖಿನ್ನತೆ. ಖೇದ, ಖಿನ್ನತೆ ಸರಿದೂಗುತ್ತವೆ.
ಜೀವನ್ಮುಕ್ತ
ತನ್ನಾತ್ಮಮೆ ಜಗಮಾಗಿರ
ಲಿನ್ನೇತಕಮೀ ಶರೀರಮೀ ವೇಶಂಗಳ್
ಭಿನ್ನತೆ ತಾನದೊ ಸರಿಯಲ್
ಕನ್ನಡಿಯೇ ಬೇಡದಾಯ್ತು ಚೆಲುವಂಗಮಮಾ ||
ಅದನ್ನೇ ಸ್ವಲ್ಪ ಬದಲಿಸಿ:
ತನ್ನಾತ್ಮಮೆ ಜಗಮಾಗಿರ
ಲಿನ್ನಾರಿಹರೀಯಲಂಕೃತಿಯನೀಕ್ಷಿಸುವರ್
ಭಿನ್ನತೆ ತಾನದೊ ಮಡಿಯಲ್
ಕನ್ನಡಿಯೇ ಬೇಡದಾಯ್ತು ಚೆಲುವಂಗಮಮಾ ||
ತನ್ನ ಆತ್ಮವೇ ಜಗವಾಗಿರಲು ಶರೀರ-ವೇಶಭೂಷಣಗಳಿಂದ ಪ್ರಯೋಜನ ಕಾಣಲಿಲ್ಲ. ಭಿನ್ನತೆ ಸರಿದಾಗ ಕನ್ನಡಿಯು ಬೇಕಾಗುವುದಿಲ್ಲ.
ಬಹಳ ಚೆನ್ನಾಗಿದೆ ರಾಘವೇಂದ್ರ
ಬನ್ನಿಂ ಕುಳ್ಳಿರಿ ಸೌಖ್ಯಮೆ-
ಯೆನ್ನುತೆ ನೇಹಿಗನ ತಂಗಿ ಪೇಳಲ್ ಹ್ರೀಸಂ-
ಪನ್ನಂ ಬೆದರ್ದಂ ಗೋಡೆಯ
ಕನ್ನಡಿಯೇ ಬೇಡದಾಯ್ತು ಚೆಲ್ವಂಗಮಮಾ
ಹೆಣ್ಣು ಅಂದರೆ ನಾಚುವ ಮಹಾಪುರುಷನ ಪೂರಣ 🙂
ಉನ್ನತಿಯನೇರ್ದ ಯುವಕವಿ
ಮುನ್ನಮಲಂಕಾರಪ್ರೀತ ಛಂದೋಬದ್ಧಂ।
ಬಣ್ಣಿಸಲ್ಕವನವದನವ*
ಕನ್ನಡಿಯೇ ಬೇಡದಾಯ್ತು ಚೆಲುವಂಗಮಮಾ ||
(*ಬಣ್ಣಿಸಲ್ (ಬಿಂಬಿಸಲು) + ಕವನ + ಅದನು + ಅವ / ಬಣ್ಣಿಸಲ್ಕೆ(ಶೃಂಗಾರಮಾಡು) + ಅವನ + ವದನವ )
ಮೊದಲೇ ಅಲಂಕಾರಪ್ರಿಯ ಯುವಕವಿ – ಆದರೂ ತನ್ನ ಕವನ ಬಿಂಬಿಸಲು / ತನ್ನ ಮುಖಕ್ಕೆ ಶೃಂಗಾರ ಮಾಡಿಕೊಳ್ಳಲು – ಅವನಿಗೆ ಕನ್ನಡಿ ಬೇಡವಾಯ್ತು !!
ಚೆನ್ನನ ವಿರೂಪಗೈದಿರೆ
ಗನ್ನದಿ ಶತ್ರುಚಯಮೈಯೆನಿಪ ಕೆಟ್ಟಣುವಿಂ । (ಶತ್ರುಚಯಂ + ಐ + ಎನಿಪ )
ಪನ್ನದಬಾಳ್ ನಶಿಸಿರಲುಂ
ಕನ್ನಡಿಯೇ ಬೇಡಮಾಯ್ತು ಚೆಲ್ವಂಗಮಮಾ ।।
– ಐ ಚಿತ್ರದಲ್ಲಿ ವಿಕ್ರಮ್ ಗೆ ಐ ವೈರಸ್ ಕೊಟ್ಟು ಕುರೂಪಿಯಾಗಿಸಿದಾಗ, ಗೋಡೆಯ ಪೂರ್ತಿ ಇರುವ ಕನ್ನಡಿಗಳನ್ನು ಒಡೆಯುವ ದೃಶ್ಯವನ್ನು ನೆನೆದು.
ಇನ್ನಾರಲೊ ಮನಮೆನೆ ಮನ-
ದನ್ನೆಯನಣುಕಿಪನ ಮೊಗದ ಲಜ್ಜೆಯೆ ಪೇಳ್ಗುಂ
ನನ್ನಿಯನವಳಾ ಕಣ್ಗಳ
ಕನ್ನಡಿಯೇ ಬೇಡದಾಯ್ತು ಚೆಲ್ವಂಗಮಮಾ
ನನಗೆ ಬೇರೆ ಹೆಣ್ಣಿನಲ್ಲಿ ಮನವಿದೆ ಎಂದು ಪ್ರಿಯೆಯನ್ನು ಅಣುಕಿಸುವಾಗ ಅವಳ ಕಂಗಳ ಕನ್ನಡಿಯಲ್ಲಿ ನಾಚಿರುವ ತನ್ನ ಬಿಂಬವು ಹೇಳುತ್ತಿರುವ ಸತ್ಯವನ್ನು ಕಂಡವನ ಪೂರಣ
ರನ್ನನ ಮುದ್ದಣ್ಣನ ಮೇಣ್
ಪೊನ್ನನ ಪಂಪನ ಗಣೇಶರಿಂ ಪಳ್ನುಡಿಯೊಳ್
ಚೆನ್ನದ ಕಾವ್ಯಾದರ್ಶದೆ
ಕನ್ನಡಿಯೇ ಬೇಡದಾಯ್ತು ಚೆಲ್ವಂಗಮಮಾ
ಚೆನ್ನಂ ಗಾಢದೆ ಮಲಗಿರ್ಪ-
ನ್ನೆಗೆ ಕರಿ ಕುಣಿದರುಂ ತಿಳಿಯನೆನೆ ಮಿತ್ರರ್
ಕೆನ್ನೆಗೊರೆದವೆಸರಿಂದಂ
ಕನ್ನಡಿಯೇ ಬೇಡದಾಯ್ತು ಚೆಲ್ವಂಗಮಮಾ
ಕಿತಾಪತಿಯ ಮಿತ್ರರ ಪೂರಣ
ತಿನ್ನಲ್ಕಕಿರದಿರ್ದಪ ಕೂ-
ಳನ್ನಕೆ ತಿರುಕಂ ಪಗಲ್ಕಳೆಯೆ ಸಿರಿವಂತಂ
ಚೆನ್ನದೆ ತೇಗಲ್ ನನ್ನಿಯ
ಕನ್ನಡಿಯೇ ಬೇಡವಾಯ್ತು ಚೆಲ್ವಂಗಮಮಾ
ಗುನ್ನಂಗೆಯ್ದಾ ಬುಗುರಿಯೊಳಿ-
ನ್ನೆಗುಮಾಡಲ್ಕೆ ನೇಹಿಗಂ ಪೋಳಾದಾ
ತನ್ನಯ ಬುಗುರಿಗಳೀಕ್ಷಿಸೆ
ಕನ್ನಡಿಯೇ ಬೇಡದಾಯ್ತು ಚೆಲ್ವಂಗಮಮಾ
ಚೆನ್ನಾದ ಪದ್ಯಗಳಿಗಿಂ
ದಿನ್ನಾವದೆ ಹರವು ಬೇಕಿರದವೊಲ್,ಸತ್ಯಂ!(ಪದ್ಯಪಾನವಿರುವಾಗ)
ತನ್ನಂಗೈ ವೀಕ್ಷಣೆಗಂ
ಕನ್ನಡಿಯೇ ಬೇಡವಾಯ್ತು ಚೆಲ್ವಂಗಮಮಾ!
Madam, ಯಾವ ಛ೦ದಸ್ಸು? ವಿಚಿತ್ರವಾಗಿದೆಯಲ್ಲ 🙂
ಹೌದು 🙂 ತುಂಬ ವಿಚಿತ್ರವೇ ಆಗಿತ್ತು!
ಚೆನ್ನಿಗನಾಸನಪಟುವಯ್
ಚೆನ್ನದ ಬಳ್ಳಿಯವೊಲಿರ್ಪ ಕಾಯಮನಾಂತಂ
ತನ್ನಯ ಬೆನ್ನಂ ಕಾಣಲ್
ಕನ್ನಡಿಯೇ ಬೇಡದಾಯ್ತು ಚೆಲ್ವಂಗಮಮಾ
(In a group of yoga practitioners, there is no need for such a strenuous exercise. They can see their faces in another’s back!
ಆಸನಪಟುನಿವಹದೊಳೀ
ಘಾಸಿಯ ಹತ್ತಿಕ್ಕುಗುಂ ಗೆಣೆಯ ನೀಂ ಕಾಣೈ|
ಲೇಸಿಂ ನೋಡುಗುಮಲ್ತೆ-
ಲೈಸಿರಿಮೊಗಗಳ ಪರಸ್ಪರರ ಪೊಳೆಬೆನ್ನೊಳ್||)
PS: Incorrect reaction. Ignore.
ಪ್ರಸಾದು, ಒಬ್ಬ ಆಸನಾಭ್ಯಾಸಿಯು ತನ್ನ ಬೆನ್ನನ್ನು ತಾನೇ ನೋಡಿದನು ಎನ್ನುವುದು ಪದ್ಯ, ತನ್ನ ಮೊಗದ ಪ್ರತಿಬಿಂಬವನ್ನು ಬೆನ್ನಲ್ಲಿ ಕಂಡನೆಂದಲ್ಲ 🙂
Hehheheee
Oh! I had not understood your verse correctly. Now I get it. Good verse. I overrule my own objection.
ಕೆನ್ನೆಯ್ದಿಲೆಗಳ ವಿಕಸನ-
ಮನ್ನಂತೆ ಶರಧಿಯ ಕರದೊಳೌನ್ನತ್ಯಮನೇ
ಚನ್ನದೆ ಚಂದ್ರಂ ಕಾಣಲ್
ಕನ್ನಡಿಯೇ ಬೇಡದಾಯ್ತು ಚೆಲ್ವಂಗಮಮಾ
ಸೋಮರೇ, ಏನೋ ಚೆನ್ನಾಗಿದೆ ಅನ್ನಿಸಿತು. ಆದರೆ ಅರ್ಥವಾಗಲಿಲ್ಲ. ದಯವಿಟ್ಟು ಅರ್ಥ ತಿಳಿಸಿ.
ನೀಲಕಂಠ, ಚಂದ್ರನ ಬಗ್ಗೆ ಬರೆಯಲು ಹೋದ ಪದ್ಯ ಚಂದ್ರನೆಂದೇ ತಂದಿರಲಿಲ್ಲ ಸ್ವಲ್ಪ ಸವರಿಸಿದ್ದೇನೆ, ಈಗ ನೋಡಿರಿ
ಮುನ್ನಿನ ಕಾರ್ಯಕ್ರಮಮೇ
ಚೆನ್ನನ ನಾಟಕದ ಸಮಯಮಂ ನುಂಗಲ್ ಹಾ
ತನ್ನುದರಂ ಪಸಿದಿರಲುಂ
ಕನ್ನಡಿಯೇ ಬೇಡದಾಯ್ತು ಚೆಲ್ವಂಗಮಮಾ
ಇನ್ನೆಗಮವರ್ ಪೊಗಳ್ದರ್ ಗಡ
ತನ್ನಯ ಬಂಧುಗಳೆ ಪೊಸತಲಂಕೃತಿ ಕಾಣಲ್
ಕುನ್ನಿಯೆನುತ್ತುಂ ಜರಿದರ್
ಕನ್ನಡಿಯೇ ಬೇಡದಾಯ್ತು ಚೆಲ್ವಂಗಮಮಾ
ಬಣ್ಣವ ಮಾರುವ ಬಾಲನ
ಕೆನ್ನೆಯಲಿ – ಮೊಗದಲಿ ರಂಗು ತಾಕಿರೆ ಚೆಲುವಾ
ಕನ್ನಡಿಯು ತೋರಲವನಿಗೆ
ಕನ್ನಡಿಯೇ ಬೇಡವಾಯ್ತು ಚೆಲ್ವಂಗಮಮಾ
ಅ೦ಕಿತಾ, ತಾತ್ಪರ್ಯ ಏನು?
(ಸರ್, ನನಗೆ ಈ ಪದ್ಯ ಸರಿ ಇಲ್ಲ ಎಂದು ಹೆದರಿಕೆ ಇತ್ತು. ಆದರೆ. ತಾವೆಲ್ಲ ತಿದ್ದಿ ಕೊಡುತ್ತೀರಿ ಎನ್ನುವ ಧೈರ್ಯ ದಿಂದ ಬರೆದುಬಿಟ್ಟೆ.)
ಬಣ್ಣ ಮಾರುವ ಹುಡುಗನೊಬ್ಬನ ಕೆನ್ನೆ ಮತ್ತು ಮೊಗದಲ್ಲಿ ಬಣ್ಣ ತಾಗಿರಲು, ಸುಂದರ ಕನ್ನಡಿಯಲ್ಲಿ ತನ್ನ ಮುಖ ನೋಡಿ ಅವನಿಗೆ ಕನ್ನಡಿಯೇ ಬೇಡವಾಯ್ತು
ಈವರೆಗೆ ನಾವೆಲ್ಲರೂ ’ಬೇಕಿಲ್ಲ’ ಎಂದೇ ಕನ್ನಡಿಯನ್ನು ಅರ್ಥೈಸಿದ್ದೇವೆ. ’ಇದ್ದರೂ ಬೇಡವಾಯಿತು’ ಎಂಬ ನಿನ್ನ ಅರ್ಥೈಸುವಿಕೆಯು ಅನನ್ಯವಾಗಿದೆ. ತನ್ನ ಹೋಲಿಮುಖವು ಅವನಿಗೆ ಬೇಸರ ತಂದಿತು ಎಂದು ಪದ್ಯದಲ್ಲಿ ವಾಚ್ಯ/ಸೂಚ್ಯವಾಗಿ ತಿಳಿಸುವುದೊಳ್ಳೆಯದು. ಹೀಗೊಂದು ಸವರಣೆ (Comprehension ದೃಷ್ಟಿಯಿಂದ; ಹಳಗನ್ನಡವಿಲ್ಲ):
ಬಣ್ಣವ ಮಾರುವ ಬಾಲನ
ಕೆನ್ನೆ-ಕಿವಿ-ತುಟಿ-ಹಣೆ-ಮೂಗದೊ ವಿಚಿತ್ರಂ ಧಿಕ್|
ಖಿನ್ನಂಗೊಳಿಸಿರೆ ಬಿಂಬಂ,
ಕನ್ನಡಿಯೇ ಬೇಡವಾಯ್ತು ಚೆಲ್ವಂಗಮಮಾ||
ಮನ್ನಿಪುದೆನ್ನಕುಚೋದ್ಯಮ !!
ಜನ್ನವಿರವದಾಭರಣಂ
ದಿನ್ನೆಯವೋಲುಬ್ಬಿದುದರದೆ ವದನವಂ ಕಾಂ-
ಬನ್ನೆವರಂ ನುಣ್ಪವಗಂ
ಕನ್ನಡಿಯೇ ಬೇಡದಾಯ್ತು ಚೆಲ್ವಂಗಮಮಾ !!
ಜನ್ನವಿರ = ಜನಿವಾರ, ಅನ್ನೆವರಂ = ಅಲ್ಲಿಯವರೆಗೆ
ಜನಿವಾರವೊಂದೇ ಅವನ ಆಭರಣ – (ಹಾಗೆ ಕಾಣುವಷ್ಟು) ದಿಣ್ಣೆಯಂತೆ ಉಬ್ಬಿದ ಹೊಟ್ಟೆ – ಅದು ಮುಖ ಕಾಣುವಷ್ಟು ನುಣುಪು – ಅಲ್ಲಿಯವರಗೆ ಅವನ ಸೊಗಸು – ಕನ್ನಡಿ ಇನ್ನೇಕೆ ?!
ಕನ್ನಡ ಕಂದ೦ ಈಕ್ಷಿಸಿ
ಕನ್ನಡ ಮೊಹರ೦ ಅಪೇಕ್ಷೆಯಿ೦ ಮಾರ್ದನಿಸಲ್ I
ಕನ್ನಡ ನುಡಿಬಿಂಬಕಿದಿರ್
ಗನ್ನಡಿಯೇ ಬೇಡದಾಯ್ತು ಚೆಲುವಂಗಮಮಾ II
ಕನ್ನಡಿಗ ಬಾಲಕನೊಬ್ಬ ಕನ್ನಡದಲ್ಲಿ ಬರೆದ ಮುದ್ರೆ (seal )ಯನ್ನು ಇಷ್ಟ ಪಟ್ಟು ಬರಿಗಣ್ಣಿನಲ್ಲಿ ಓದಲು ತೊಡಗಿದ . ಕನ್ನಡ ಅವನಿಗೆ ಎಷ್ಟು ಚಿರಪರಿಚಿತವಾಗಿತ್ತು ಅಂದರೆ ಅದು ತಿರುವು – ಮುರುವಾಗಿದ್ದರೂ ಓದಲು ಅವನು ಕನ್ನಡಿಯ ಇದಿರು ಹಿಡಿಯ ಬೇಕಾಗಿರಲಿಲ್ಲ ಅನ್ನುವುದು ಪದ್ಯದ ಪದ್ಯದ ಸಾರ
ಚೆನ್ನಾದ ಕಲ್ಪನೆ. ಆದರೆ ಅನೇಕ ಕಡೆ ಸ೦ಧಿಯಾಗಬಹುದಾಗಿದ್ದು ಛ೦ದಸ್ಸು ಕೆಡುವ೦ತಿದೆ. ಅರಿಸಮಾಸಗಳಿವೆ. ಮಾರ್ದನಿಸು ಎ೦ಬುದನ್ನು ಪ್ರತಿಫಲಿಸು ಎ೦ಬರ್ಥದಲ್ಲಿ ಬಳಸಿದ್ದೀರಾ? ಅದು ಪ್ರತಿಧ್ವನಿಯ ಅರ್ಥ ಕೊಡುತ್ತದೆ. ಮಾರ್ತೊಳಗಲ್ ಎನ್ನಬಹುದೇನೊ.
ಹೌದು . ಪ್ರತಿಧ್ವನಿ ಎಂಬರ್ಥ ದಲ್ಲಿ . ಮೂಕವಾಗಿದ್ದ ಕನ್ನಡ ಅಕ್ಷರಗಳು ಅವನು ಓದಿದಾಗ ( ಸೈಲೆಂಟ್ ಆಗಿ ಅಲ್ಲ ) ಆ ಧನಿಯೇ ಅಲ್ಲಿ ಮಾರ್ದನಿಸಿತು ಎಂಬ ಅರ್ಥದಲ್ಲಿದೆ . ‘ವಾಗ್ಬಿಂಬ’ ಅರಿಸಮಾಸವನ್ನು ತೊಲಗಿಸುವುದೇ ?
ನಾನು ಆ ಬಾಲಕನಂತೆ ಅಲ್ಲ . ಆದ್ದರಿಂದ ನಾನು ಬರೆದ ಕನ್ನಡದಲ್ಲಿ ತಪ್ಪುಗಳು, ಸಾಕಷ್ಟು ಇರಬಹುದು 🙂
Good idea. My rephrasing:
ಕನ್ನಡದಣುಗಂ ಪಠಿಸಲ್
ಕನ್ನಡಮೊಹರಂ ವಿಲೋಮದಿಂದಂ ಶಕ್ತನ್I
ಕನ್ನುಡಿಯಿನಕ್ಕರಕಿದಿ-
ರ್ಗನ್ನಡಿಯೇ ಬೇಡದಾಯ್ತು ಚೆಲುವಂಗಮಮಾII
ಅರಿಸಮಾಸಗಳಿವೆ 🙂
’ನುಡಿಬಿಂಬ’ವನ್ನು ತಿದ್ದಿದ್ದೇನೆ. ಉಳಿದವಾವುವು?
ಕನ್ನಡಮೊಹರ೦, ಮೊಹರ್ ಹಿ೦ದಿ ಅಲ್ಲವೇ?
ಪ್ರಸಾದು ಸರ್ ಅವರ ಮಾರ್ಗದರ್ಶನಕ್ಕೆ ಧನ್ಯವಾದಗಳು .
ತೊನ್ನಿನ ರೋಗಂ ಬಾಧಿಸೆ,
ಕೆನ್ನೆಯ ಚರ್ಮಂ ವಿರೂಪಮಾಗಿ, ದುಗುಡದಿಂ, |
ಖಿನ್ನತೆಯಂ ಪೊಂದುತಿರಲ್,
ಕನ್ನಡಿಯೇ ಬೇಡದಾಯ್ತು ಚೆಲುವಂಗಮಮಾ ||
ತನ್ನಯ್ಯನಣತಿಯೊಲ್ ,ಗುರು
ಸನ್ನಿಧಿಯೊಳ್ ವಿದ್ಯೆಯಂ ಪಡಕೊಳುತ್ತುಮದೋ
ಸನ್ನಡೆತೆಗಳಂ ಮೆರೆದಿರೆ
ಕನ್ನಡಿಯೇ ಬೇಡದಾಯ್ತು ಚೆಲ್ವಂಗಮಮಾ!
ಇಜಾರ=Pant, ನಡಿ=Belt/Waistband (ಪಂಚಮಾತ್ರಕ್ಕೆ ಅಳವಡಿಸಿಕೊಂಡಿದ್ದೇನೆ. ಕ್ಷಮೆ ಇರಲಿ.)
ಚೆನ್ನಿಗನ ಸೊಂಟದಳತೆಗೆ ತಗುವಿಜಾರಮ-
ನ್ನಿನ್ನಿಲ್ಲದೊಲು ಪುಡುಕಿ ಬೇಸತ್ತಿರಲ್|
ಖಿನ್ನನಾದಷ್ಟರೊಳಗೆಂತೊ ಸಿಕ್ಕಲದು ನ-
ಕ್ಕನ್; ನಡಿಯೆ ಬೇಡಾಯ್ತು ಚೆಲುವಗಮಮಾ||
ನಡಿ = mean order in music
ಉನ್ನತವ್ಯಾಸಂಗಮಿಲ್ಲ ಸಂಗೀತದೊಳ್
ಚೆನ್ನಿನ ಸ್ವಾಧ್ಯಾಯದಾಸಕ್ತಿ ಮೇಣ್|
ಪನ್ನತಿಕೆಯಿನ್ನೆಲ್ಲರಸಿಕರ್ಗೆ (ಇನ್ನೆಲ್ಲಿ? ಅರಸಿಕರ್ಗೆ) ಪಾಡ್ವ ಮು-
ಕ್ಕನ್! ನಡಿಯೆ ಬೇಡಾಯ್ತು ಚೆಲುವ*ಗಮಮಾ||
He is just a *dandy (excessively concerned about dress, jewelry, appearance etc.) catering to base audience.
ಪನ್ನಗನಿಣಿಕುತುಮೀಕ್ಷಿಸೆ,
ಕೆನ್ನಾಲಿಗೆಯಂ ಪ್ರದರ್ಶಿಸಿರ್ಪ ಸಮಯದೊಳ್,|
ಸೊನ್ನೆಯ ರೂಪದ,ವೃತ್ತದ
ಕನ್ನಡಿಯೇ ಬೇಡದಾಯ್ತು ಚೆಲುವಂಗಮಮಾ ||
( ಹಾವು ಕೆನ್ನಾಲಿಗೆಯನ್ನು ಪ್ರದರ್ಶಿಸಿರುವ ಸಮಯದಲ್ಲಿ ಇಣಿಕಿ ಕನ್ನಡಿಯನ್ನು ವೀಕ್ಷಿಸಲು, ಸೊನ್ನೆಯ ರೂಪ(ಆಕಾರ)ದಲ್ಲಿರುವ ವೃತ್ತದ ಕನ್ನಡಿಯೇ ಚೆಲುವನಿಗೆ ಬೇಡದಾಯಿತು.ಕನ್ನಡಿಯ ಬಳಿಯಲ್ಲಿರುವ ಹಾವಿನ ಭಯದಿಂದಾಗಿ ಆ ಕನ್ನಡಿಯೇ ಬೇಡವಾಯಿತು ಎಂಬ ಕಲ್ಪನೆಯನ್ನು ಹೊಂದಿದ ಪದ್ಯ. )
ತನ್ನೊಲವ ತೋರದೆಲೆ ಮನ-
ದನ್ನೆಯಿರಿಸಿರೆ ಸಮದೂರವೆನ್ನೊಳಗವಗಂ
ನಿನ್ನವೊಲೆ, ಬದುಂಕದೊ, ಕಾಣ್
ಕನ್ನಡಿಯೇ, ಬೇಡದಾಯ್ತು ಚೆಲುವಂಗಮಮಾ !!
ಕನ್ನಡಿಯೇ ನೋಡು ! ನಿನ್ನಹಾಗೆ (ಒಲವನ್ನು ತೋರದೆ) ಮನದನ್ನೆ ಹೊರಗೂ / ಮನದೊಳಗೂ ತನ್ನನ್ನು ಸಮದೂರ ಇರಿಸಿರಲು – ಚೆಲುವನಿಗೆ ಬದುಕೇ ಬೇಡವಾಯ್ತೇ ?!!
Anxious about avian flu, he foregoes his favourite ‘chicken legs’ and goes for an ordinary cereal food.
ಬನ್ನಗೊಂಡಿರೆ ಕುಕ್ಕುಟದ ಸಂಕುಲವುಮೆಂತೊ
ಸನ್ನಿಯೀ ’ಏವಿಯನ್ ಫ್ಲೂ’ವಿನಿಂದಂ|
ಜೊನ್ನಮೇ* ಸಾಕೆಂದನಾತಂಕದಿಂದೆ ಚಿ-
ಕ್ಕನ್ನ್ ಅಡಿಯೆ (Chicken legs) ಬೇಡಾಯ್ತು ಚೆಲುವಗಮಮಾ||
*ಜೊನ್ನ=ಜೋಳ (ಕಿಟ್ಟೆಲ್ ನಿಘಂಟುವಿನಲ್ಲಿ ನಮೂದಿತವಾಗಿಲ್ಲ)
Asking the visiting Vitthoba (Lord Vishnu) to wait till he is finished with his job of nursing his parents, Pundalika tosses a brick at him to stand on. The Lord still waits on. Later date poet Santa Tukaram sings in praise of Pundalika.
“ಇನ್ನುಂ ಮುಗಿಯದಿಹುದು ತಾಯ್ತಂದೆಯರ ಸೇವೆ
ಯನ್ನೆಗಂ ನಿಂದಿರೀ ಇಟ್ಟಿಗೆಯ ಮೇಲ್|”
ಉನ್ನತನ ಪುಂಡಲೀಕನ ಚರಿತೆ ಮುಟ್ಟಿತು ತು
ಕನ್ನ. (ವಿಠ್ಠೋಬನ)ಅಡಿಯೆ ಬೇಡಾಯ್ತೆ ಚೆಲುವ(ಪುಂಡಲೀಕ)ಗಮಮಾ!!
ಅಯ್ಯಯ್ಯೋ ಎಲ್ಲಿ೦ದೆಲ್ಲಿಗೆ …!! 🙂
ತನ್ನೊಳಿರೆ ಬುಧ್ಧಿಮುಕುರಂ,
ಭಿನ್ನಂಗೊಳದಿರ್ಪ ಸುಸ್ಥಿತಿಯೊಳೇ,ದಿಟಮೈ
ನನ್ನಿಯನರಿಯಲ್,ಬೇರೆಯ
ಕನ್ನಡಿಯೇ ಬೇಡದಾಯ್ತು ಚೆಲ್ವಂಗಮಮಾ!
(ತಿದ್ದಿರುವೆ,ನೀಲಕಂಠರೇ)
ಮೇಡಮ್, ಎರಡನೇ ಸಾಲು ತಪ್ಪಿದೆ
ತನ್ನೊಲವಿನ ಕಾದಲಿ ನಲ-
ವಿನ್ನೋಡೆರಡುಕ್ಷಣ ಮುನ್ನ ಜನಿಸಿದ ಶಿಶುವಂ
ತನ್ನೆಡೆ ತೋರ್ದದನೀಕ್ಷಿಸೆ
ಕನ್ನಡಿಯೇ ಬೇಡದಾಯ್ತು ಚೆಲ್ವಂಗಮಮಾ
Fine verse. If he nursed such an expectation, the mother would have sighed in relief: “Thank God, the child did not resemble me!” 😉