Loads and loads of shitiladvitva in this svAgata! My first English khaNDaprAsa-s are here!
Surgical remedy serves in a case whe-
re urgency is at the root o’(f) the matter|
Purging* and (ಸಚದ) such other herbally fine sy-
nergy handy in other sufferings, Ma’m||
(Transliteration: ಸರ್ಜಿಕಲ್ ರೆಮೆಡಿ ಸsವ್ಸ್ ಇನೆ ಕೇಸ್ ವ್ಹೇ-
ರರ್ಜೆನ್ಸಿs ಇಸೆದ ರೂಟ್ ಅ’ದ ಮ್ಯಾಟರ್|
ಪರ್ಜಿಙ್ಯಾಂಡ್ ಸಚದ ಹರ್ಬಲಿ ಫೈನ್ ಸಿs-
ನರ್ಜಿ ಹ್ಯಾಂಡಿ ಇನದರ್ ಸಫರಿಂಗ್ಸ್ ಮ್ಯಾಮ್||)
The first OTHER is ನನ (ಅದ); the second OTHER is ನನಾ (ಅದರ್) 🙂
*Purging (Virechana) is one of the detoxifying Panchakarma treatments in Ayurveda. The others are Vamana (regurgitation), Nasya (nasal), Basti (enema) and Raktamoskshana (blood letting).
ಮೂರನೇ ಪಾದ – “ಕತ್ತಿಯಂಚವಳ ಕಣ್ಣಿರೆ ತೀಕ್ಷ್ಣಂ ” ಎಂದಾಗಬೇಕೆ ?
ಎರಡನೇ ಪಾದವು ಒಂದನೇ ಪಾದದ ಮುಂದುವರಿಕೆಯೆ ?( ಅರ್ಥ ಸರಿಯಾಗಿ ತಿಳಿಯಲಿಲ್ಲ )
ಪುಷ್ಪ= ಕಣ್ಣಿನ ತುದಿಯ ಕಾಡಿಗೆಯ ಗೆರೆ- ಸರಿಯೆ ?
what is the equivalent phrase of “Catch 22” in Kannada? I know our literature has Catch 22 situations like Vikram-Vetala, etc, but is there a specific phrase like they have in english?
By default idioms and idiomatic phrases are and should be untranslatable. There may at best be a few exceptions where the literary translation is also idiomatic. Here is one:
Went down memory lane = अगात् स्मृतिपथं (भर्तृहरि)
There may be a few cases where the same message is conveyed but the phrasing is not similar.
उभयसंभव is the nearest literal equivalent for ‘catch 22’, but is very insipid and lacks punch!
Let me know what you want to say in the Kannada verse that is taking shape in your mind, and one of us may come out with the best phrasing for it; or decree that your expression is good enough.
ಇಷ್ಟುದಿನ ಗಮನಿಸಿಕೊಳ್ಳಲಿಲ್ಲ, ಕ್ಷಮಿಸಿ. ಕಲ್ಪನೆ-ರಚನೆಗಳು ಚೆನ್ನಾಗಿವೆ. ಈಗಲೂ ’ಸ’ಮಾವೃತ ಎಂದು ಓದಿಕೊಂಡು, ಪದ್ಯದಲ್ಲಿ ಹೂವೇ ಬರಲಿಲ್ಲವಲ್ಲ ಎಂದು ಕಣ್ಣಿಟ್ಟು ಓದಿದೆ. ’ಸು’ಮವು ಕಾಣಿಸಿತು. (ಕರಗಧಾರಿಯು ಪೇಳ್ದಂ)
ಆದರೆ, ನೀವು ವಿವರಣೆಯಲ್ಲಿ ಹೇಳಿರುವುದು ಪದ್ಯದಲ್ಲಿ ಬಂದಿಲ್ಲ. ಅದನ್ನು ಕುರಿತಾಗಿ ಇನ್ನೊಂದು ಪದ್ಯವನ್ನು ಬರೆಯಿರಿ. (ಸಮಸ್ಯಾಪಾದವು ಒಂದು ಪದ್ಯದಲ್ಲಿ ಬಂದರೆ ಸಾಕು.)
ಗತ್ತಿನಿಂದೆರಗಿ ವಳ್ಳಿಯ ಪೂವಿಂ
ತುತ್ತನಾರಿಸುವೆನೆಂದ ನೊಳ೦ ಮ I
ತ್ತತ್ತು ಚೀರಿತದು ಮುತ್ತಿಕೊಳಲ್ ಹಾ !
ಕತ್ತಿಗುಂ ಹರಿತಮಿರ್ಪುದು ಪುಷ್ಪಂ II
ಅದು=ಹೂವು
ಕೀಟಾಹಾರಿ ಸಸ್ಯದ ಬಾಯಿಯಿಂದ ತಪ್ಪಿಸಿಕೊಂಡು ಬದುಕಿದ ನೊಣದ ಮಾತು .
ಅಂಕಿತಾ ಬರೆಯುವುದಕ್ಕೆ ಒಂದು ದಿನ ಮೊದಲೇ ಬರೆದಿಟ್ಟಿದ್ದೆ . ಅವರು ಬರೆಯಬಹುದೆಂಬ ನಿರೀಕ್ಷೆ ಇದ್ದುದರಿಂದ ಹಾಕಿರಲಿಲ್ಲ . ಈಗ ಬರೆದದ್ದಕ್ಕಾಗಿಯೇ ಹಾಕುತ್ತಿದ್ದೇನೆ .ವಸ್ತುವಿನ ಆಯ್ಕೆ ಒಂದೇ ಆಗಿದ್ದರೂ ಪದ್ಯಕ್ಕೆ ಅಳವಡಿಸಿ ಕೊ೦ಡ ರೀತಿಯಲ್ಲಿ ವ್ಯತ್ಯಾಸ ಇರುವುದಕ್ಕಾಗಿ .
ಪ್ರಸಾದು ಸರ್ ,
”ಸ್ವಾಗತಂ ಸರಸ ಕಾವ್ಯಕೆ ಸಲ್ಗುಂ ” ಎಂದು ಪದ್ಯಪಾನದ ಸೂತ್ರವೇ ಹೇಳಿದೆಯಲ್ಲ . ನೀವು ಕೆಲವೊಮ್ಮೆ ಪದಕೋಶಗಳಿಂದ ಆಯ್ಕೆಮಾಡುವ ಪದಗಳಿಗೆ ರಸವೆಲ್ಲಿರುತ್ತದೆ ? ಅದನ್ನು ಓದಿದರೆ ಉಕ್ಕಿ ಬರುವ ನಗುವೇ ಔದಾರ್ಯದ್ದು .
ಖಂಡಿತ ವಾಗಿಯೂ ಅರ್ಥ ವಾಗಿದೆಯೆಂದು ತಿಳಿದುಕೊಳ್ಳುತ್ತೇನೆ .
ನಾನು ಬರೆಯುವ ಪದಗಳು ಪದಕೋಶದಲ್ಲಿ ಇಲ್ಲವೆಂದು ನಾನು ಹೇಳಿಲ್ಲ . ಸಂಧರ್ಭಕ್ಕೆ ಒದಗುವ ಪದಗಳನ್ನು ಬಳಸಿಕೊಳ್ಳುತ್ತೇನೆ . ಸಂಶಯವಿದ್ದಲ್ಲಿ ಪದಕೋಶ ನೋಡಿ ಕೊಳ್ಳುವುದು.
ಸರೋಜರವರಿಗೆ ಪದ್ಯಪಾನಕ್ಕೆ ಸ್ವಾಗತ. ನಿಮ್ಮ ಪದ್ಯದ ಎರಡನೆಯ ಹಾಗೂ ಮೂರನೆಯ ಪಾದಗಳು ಸ್ಪಷ್ಟವಿಲ್ಲ. ಅಲ್ಲದೆ ಮೂರೂ ಪಾದಗಳು ಸ್ವಾಗತವೃತ್ತದಲ್ಲಿಲ್ಲ (ನಾನನಾನನನನಾನನನಾನಾ). ಮೊದಲ ಪಾದವನ್ನು ಹೀಗೆ ಸವರಬಹುದು: ಶರ್ವಗೇ ಮದನಬಾಣವು ಚೋದ್ಯಂ. ಇಲ್ಲಿ ನಾನು ಆದಿಪ್ರಾಸವನ್ನು ಪಾಲಿಸಿಲ್ಲ. ಮೊದಲ ಒಂದೆರಡು ಪ್ರಯತ್ನಗಳಲ್ಲಿ ಪ್ರಾಸವಿನಾಯಿತಿಯಿರಲಿ. ಇತರ ಪದ್ಯಪಾನಿಗಳು ಪ್ರಾಸವನ್ನು ಪಾಲಿಸಿರುವ ರೀತಿಯನ್ನು ಗಮನಿಸಿಕೊಂಡರೆ ಅದು ತಾನೇ ಸಿದ್ಧಿಸುತ್ತದೆ. ಉಳಿದ ಪಾದಗಳನ್ನು ನೀವೇ ಸವರಲು ಯತ್ನಿಸಿ. ಈ ಪುಟದ ಆದಿಯಲ್ಲಿರುವ learn prosodyಯಲ್ಲಿ ಶ್ರೀ ರಾ. ಗಣೇಶರ ವಿಡಿಯೊಪಾಠಗಳಿವೆ. ಗಮನಿಸಿಕೊಳ್ಳಿ. ನಿಮಗೆ ಭಾಷಾಸಿದ್ಧಿಯಿದೆ. ಛಂದಸ್ಸೇನೂ ದೊಡ್ಡ ವಿಷಯವಲ್ಲ. ಬಿಡದೆ ಪದ್ಯರಚನೆಯನ್ನು ಮಾಡಿ.
ಧನ್ಯವಾದಗಳು ಎಲ್ಲರ ಪ್ರತಿಕ್ರಿಯೆಗೆ. ಛಂದ ಪ್ರಾಸಗಳೆಲ್ಲ ಹಳೆಯ ಕಾಲಕ್ಕೇ ಅಥವಾ ಗಣೇಶ್ರಂತವರಿಗೇ ಮೀಸಲು ಎಂದುಕೊಂಡಿದ್ದ ನನಗೆ ಕೊನೆಯ ಪಕ್ಷ ಪ್ರಯತ್ನಿಸಲಾದರೂ ಒಳ್ಳೆಯ ಅವಕಾಶ ಸಿಕ್ಕಿದೆ. ಇದನ್ನೆ ಮತ್ತೆ ನನ್ನ ಅಲ್ಪ ಪದಶಕ್ತಿಯಿಂದಲೇ ಪ್ರಯತ್ನಿಸುತ್ತೇನೆ. ತಪ್ಪುಗಳನ್ನು ತಿದ್ದಿದರೆ ನನಗೂ ಕಲಿಯಲು ಸಾಧ್ಯವಾಗುತ್ತದೆ. ಮತ್ತೊಮ್ಮೆ ಧನ್ಯವಾದಗಳು.
ಪ್ರಸಾದ್ರೆ… ನಿಮ್ಮ ಮಾತಿನಂತೆ ಪರಿಷ್ಕರಿಸಲು ಪ್ರಯತ್ನಸಿದ್ದೇನೆ. ನೋಡಿ ತಪ್ಪಿದ್ದರೆ ಹೇಳಿ. ನಾನು ಇಂತಹ ಪ್ರಯತ್ನವನ್ನು ಮಾಡಿದ್ದು ಇದೇ ಮೊದಲು. ಛಂದದ ಅಂಕೆಯಿಲ್ಲದೆ ಬರೆದೇ ಅಭ್ಯಾಸ. ನನಗೆ ಗಣೇಶ್ರ ಯೂಟ್ಯೂಬ್ ಲಿಂಕ್ಸ್ ಕೊಟ್ರೆ ಉಪಕಾರವಾಗುತ್ತದೆ. (ಎಲ್ಲ ಎಪಿಸೋಡ್ ನನಗೆ ಸಿಗಲಿಲ್ಲ)
ಸರೋಜಾ ಅವರೆ, ಪದ್ಯಪಾನಕ್ಕೆ ಸ್ವಾಗತ. ನಿಮ್ಮ ಮೊದಲ ಯತ್ನವು ಚೆನ್ನಾಗಿದೆ.ಒಳ್ಳೆಯ ಕಲ್ಪನೆಯ ಪದ್ಯ. “ಶಿವಚಿತ್ತಂ”‘ “ತನುತಾಪಂ” ಎಂಬಲ್ಲಿ ಪ್ರಥಮವಿಭಕ್ತಿಪ್ರತ್ಯಯದ ಬದಲು “ಶಿವಚಿತ್ತಮಂ”, “ತನುತಾಪಮಂ” ಎಂಬುದಾಗಿ ದ್ವಿತೀಯವಿಭಕ್ತಿಪ್ರತ್ಯಯವನ್ನು ಪ್ರಯೋಗಿಸಿದಲ್ಲಿ ಒಳಿತು. ಆದರೆ ಹಾಗಾದಾಗ ಛಂದಸ್ಸು ಕೆಡುವುದು. “ಚಿತ್ತಘಾತಕವದಾ “ಎಂಬುದು “ಚಿತ್ತಘಾತಕಮದಾ”( ಚಿತ್ತಘಾತಕಂ+ಅದು+ಆ) ಆದಲ್ಲಿ ಸರಿಯೆನಿಸುವುದು.”ಮದಚಾಪಂ” ಎಂಬುದನ್ನು ನೀಲಕಂಠರು ಸವರಿದಂತೆ “ಮದನಾಸ್ತ್ರಂ” ಎಂದು ಬರೆಯಬಹುದು.ನಾನು ಪದ್ಯವನ್ನು ಈ ಕೆಳಗಿನಂತೆ ಸವರಿದ್ದೇನೆ.
ಛಂದಸ್ಸು-ಪ್ರಾಸಗಳು ಸಾಧಿತವಾಗಿವೆ. ಅಭಿನಂದನೆಗಳು.
ಶಿವಚಿತ್ತಂ=ಶಿವಚಿತ್ತವು. ಶಿವಚಿತ್ತವನ್ನು>ಶಿವಚಿತ್ತಮಂ ಎಂದಾಗಬೇಕು. ಅಂತೆಯೇ ’ತಡೆವಳೇನ್ ತನುತಾಪಮಂ’ ಎಂದಾಗಬೇಕು. ಅಕಾರಾಂತದಲ್ಲಿ ಹೀಗೆ. ಉಕಾರಾಂತದಲ್ಲಾದರೆ ಪಾಡು>ಪಾಡಂ(ಹಾಡನ್ನು) ಎಂದಾಗುತ್ತದೆ. ಮತ್ತೆ ಪ್ರಯತ್ನಿಸಿ ಇದನ್ನು ಪೂರ್ತಿಯಾಗಿಯೇ ಸರಿಮಾಡಿ. ಬಹಳ ಪ್ರಯೋಜನಕಾರಿಯಾಗುತ್ತದೆ ಈ ಕಸರತ್ತು.
ಸುತ್ತ ಚೂಪೆಸಳ ಜೋಡಿಪ ಪೂವಂ
ಮೆತ್ತಗಂ ಅದನು ನೋಡುತೆ , ತಾಕಲ್
ಹತ್ತಿರ ಸುಳಿಯೆನೆಂದನು ಬಾಲಂ
ಕತ್ತಿಗುಂ ಹರಿತಮಿರ್ಪುದು ಪುಷ್ಪಂ
(ಕರಕುಶಲ ವಸ್ತು ತಯಾರಿಸುವ ಸ್ಪರ್ಧೆಯಲ್ಲಿ ಹಾಳಾದ ಬ್ಲೇಡುಗಳಿಂದ ತಯಾರಿಸಿ ಹೂವಿನ ಕುರಿತು )
ಹೌದು ಚೇದಿ, ಅಂಕಿತಾಳ ಹೊಸ ಹೊಸ ಕಲ್ಪನೆಗಳು, ಅವಳ ಪದ ಸಂಪತ್ತು – ಅವುಗಳನ್ನು ಛಂದಸ್ಸಿಗೆ ಹೊಂದಿಸುವ ಬಗೆ ಎಲ್ಲವೂ ತುಂಬಾ ಸುಂದರವಾಗಿದೆ. ನಾನಂತು ಅವಳ ಪದ್ಯಗಳಿಗೆ ಕಾಯುತ್ತಿರುತ್ತೇನೆ.
ಅಭಿನಂದನೆಗಳು ಅಂಕಿತಾ.
ನನಗೆ ಹಳೆಗನ್ನಡ ತಿಳಿದಿಲ್ಲ. ಸಂಸ್ಕೃತದ ಅರಿವಿಲ್ಲ. ನಿಜಕ್ಕೂ ನನ್ನ ಹತ್ತಿರ ಇರುವ ಪದಸಂಪತ್ತು ಕಡಿಮೆ. ವೃತ್ತದಲ್ಲಿ ಪದ್ಯ ರಚನೆ ಮಾಡುತ್ತಿರುವುದು ಮೊಟ್ಟಮೊದಲು ಪದ್ಯಪಾನದಲ್ಲಿಯೇ. ಪ್ರತಿ ಕವನದಲ್ಲೂ ಎಷ್ಟು ದೋಷಗಳಿವೆಯೋ ಎಂದು ಭಯ, ಮುಜುಗರದಿಂದಲೇ ನಾನು ಕವನ ಪೋಸ್ಟ ಮಾಡುತ್ತಿದ್ದೇನೆ.
ಪದ್ಯಪಾನವು ನನಗೆ ಒಂದು ಉತ್ತಮ ಪಾಠಶಾಲೆಯಾಗಿದೆ. ಪ್ರತೀ ಪದ್ಯಕ್ಕೂ ತಮ್ಮಿಂದ ಬರುವ ತಿದ್ದುಗೆಗಾಗಿ ನಾನು ಕಾಯುತ್ತಿರುತ್ತೇನೆ..
ತಮ್ಮ ಕವನಗಳಿಗಿಂತ ಸಪ್ಪೆಯಾಗಿದ್ದರೂ ಹರಸಿದ ತಮಗೆಲ್ಲ ನಮನಗಳು.
ತುಂಬಾ ಈರುಳ್ಳಿ ಹೂಗಳನ್ನು (spring onion )ಹೊಳಪಿರುವ stainless steel ಚಾಕುವಿನಿಂದ ತು೦ಡರಿಸಿದಾಗ ಅದು ತನ್ನ ಚೆಲುವಾದ ಹಸಿರು ಬಣ್ಣವನ್ನು ಕತ್ತಿಗೂ ಹಂಚಿ (reflection) ಅದರಿಂದ ಚೆನ್ನಾಗಿ ತಾನು ಹಸಿರು ಬಣ್ಣದಿಂದ ಶೋಭಿಸುತ್ತಿತ್ತು . ಹಲವು ಹೂಗಳ ಕೊಚ್ಚಲ ರಾಸಿಯನ್ನು ಒಂದು( ಪುಷ್ಪಂ ) ಹೂವೆಂದು ತಿಳಿದು ಕೊಳ್ಳಬೇಕಾಗಿ ವಿನಂತಿ
ಈ ಬಾರಿಯೇನೋ ನೀವು ಪಲಾವ್ ಮಾಡಲಿಲ್ಲ. ಇತರೆ ದಿನಗಳಲ್ಲಿ ಚಪಾತಿ, ಉಪ್ಪಿಟ್ಟು, ದೋಸೆ, ಇಡ್ಲಿಗಳನ್ನು ಮಾಡದಿದ್ದು, ಹೋಟೆಲಿಗೆ ಹೋಗಿ, ಅಲ್ಲಿನ ತಿನಿಸುಗಳ ರುಚಿಯನ್ನು ಯಜಮಾನರು ಮೆಚ್ಚಿದ್ದೆಲ್ಲ ಉಂಟೇಉಂಟಲ್ಲ 😉
ಅತ್ತೆಯ ಹೆಸರು ರಾಮಕ್ಕ, ಸೊಸೆಯ ಹೆಸರು ಪುಷ್ಪ. ರಾಮಕ್ಕತ್ತೆಯನ್ನು ಎತ್ತಿಯಾಡುವ ಅವಕಾಶವನ್ನು ಪುಷ್ಪ ಕಳೆದುಕೊಳ್ಳುವುದಿಲ್ಲ, ಏಕೆಂದರೆ ತಾನು ಅತ್ತೆಯಾದಾಗ ಮೆತ್ತಗಾಗಬೇಕಾಗುತ್ತೆನುತ್ತೆ ಅವಳಿಗೆ ಗೊತ್ತೇ!
ಕುತ್ತನಿತ್ತಿವರುಮೊರ್ವರಿಗೊರ್ವರ್
ಕಿತ್ತುತಿನ್ನುವರು ಕಾಯುತೆ ನಿಚ್ಚಂ|
ತೊತ್ತು ನೀನೆನುತೆ ಬೈದಿರೆ ರಾಮ-
ಕ್ಕತ್ತಿಗುಂ (ರಾಮಕ್ಕ+ಅತ್ತಿ) ಹರಿತಮಿರ್ಪುದು ಪುಷ್ಪಂ||
ಬೈಗುಳದಲ್ಲಿ ಪುಲ್ಲಿಂಗ-ಸ್ತ್ರೀಲಿಂಗಗಳೆಲ್ಲವೂ ನಪುಂಸಕಲಿಂಗವಾಗುತ್ತವೆ; ಪ್ರೀತಿಯಲ್ಲಿಯೂ ಅಷ್ಟೆ. All is fair in war and love.
ಧಾರವಾಡದ ಅತ್ತಿ. ಮೈಸೂರಿಗರ ಎಕಾರಗಳೆಲ್ಲ ಉತ್ತರದಲ್ಲಿ ಇಕಾರವಾಗುತ್ತವಲ್ಲ – ಇರವಿ, ನಮೂನಿ, ಬಟ್ಟಿ, ಶಾಲಿ, ಮನಿ, ಸಾಸಿವಿ… ಶ್ರೀ ಕಿಟ್ಟೆಲ್ ಹಾಗೂ ರೆವರೆಂಡ್ ನೀಲಕಂಠರು ಒಪ್ಪಿದ್ದಾರಲ್ಲ!
ಕಲ್ಪನೆಯು ಚೆನ್ನಾಗಿದೆ. ಆದರೆ ವಿವೃತಿಸಾಪೇಕ್ಷವಾದ ಪದ್ಯವಿದು. ಕಬ್ಬಿಣದ ಕಮಲ ಎಂಬುದನ್ನು ಪದ್ಯದಲ್ಲೇ ತಂದು, ಭಾಜಪವನ್ನು ಕೈಬಿಟ್ಟು, ಎರಡುಪದ್ಯಗಳಿಗೆ ಹಿಗ್ಗಿಸಿ ವಿವೃತಿನಿರಪೇಕ್ಷವಾಗಿಸಬಹುದಲ್ಲವೆ?
ಧನ್ಯವಾದಗಳು . ನೀವು ಹೇಳುವುದು ಸರಿಯೇ. ನನಗೂ ಹಾಗೆ ಅನ್ನಿಸಿದೆ . ಗೇಟ್ ಅನ್ನುವ ಆಂಗ್ಲ ಪದವನ್ನು ಬಳಸದೆ ಬರೆಯಲು ಪ್ರಯತ್ನಿಸಿರುವುದರಿಂದ ಹಾಗೆ ಆಗಿದೆ . ”ದ್ವಾರ ” ಅನ್ನುವ ಪದ ಛಂದಸ್ಸಿಗೆ ಒಗ್ಗುವುದಿಲ್ಲ ”ತಾವರೆ ” ಅನ್ನುವಲ್ಲಿ ”ಲೋಹದ” ಅನ್ನುವ ಪದ ಬಳಸಿದರೂ ಇದಕ್ಕಿಂತ ಹೆಚ್ಚು ಸರಿಯಾಗಬಹುದಿತ್ತು. ತಾವರೆ ಎಸಳು ಚೂಪಿರುವುದರಿಂದ ಅದನ್ನೇ ಆರಿಸಿದೆ . ಕುಡುಕನಿಗೆ ಭಾಜಪದ ಮೇಲೆ ಮೋಹ ಜಾಸ್ತಿ ಎಂದಿಟ್ಟುಕೊಳ್ಳಿ . ಎರಡಕ್ಕೆ ಯಾಕೆ ಹಿಗ್ಗಿಸಬೇಕು ?………ಒಂದನ್ನೇ ಬರೆಯಲು ಕಷ್ಟವಾಗಿ ರುವಾಗ 😉
ನಿಮ್ಮಿಂದ ಬಿರುದಾಂಕಿತರಾದ ಶ್ರೀ ಕಿಟ್ಟೆಲ್ ಹಾಗೂ ರೆವರೆಂಡ್ ನೀಲಕಂಠರಂತೆ ನಾನಿಲ್ಲ . ಹಳೆಗನ್ನಡದ ಒಂದೊಂದು ಪದವು ನನಗೆ ಭಾರತದ ರೂಪಾಯಿಯನ್ನು ಪೌಂಡ್ ಗೆ ಪರಿವರ್ತಿಸಿದವರ ಮನೋಸ್ಥಿತಿ . ಈ ಸಲ ಹಾಗಿರಲಿ
ಇದು ಹಳೆಗನ್ನಡ ಕಲಿಯುವ ಉದ್ದೇಶದಿಂದ ಬರೆದುದಾಗಿದೆ . ಪರಿಹಾರಗಳು ಎಷ್ಟು ಹೊಳೆದರೂ ಭಾಷೆಯ ಮೇಲೆ ಹತೋಟಿ ಇಲ್ಲದೆ ಅದೆಲ್ಲವನ್ನೂ ಅಂತೆಯೇ ಬರೆಯುವುದು ಕಷ್ಟ .
ಇತ್ತು ಪೂವನರೆ ಸುಂದರಿಗಾತಂ
ಬೆತ್ತದೊಂದು ರುಚಿಯಂ ನಿಜವುಂಡಂ!
ಕತ್ತನೆತ್ತದೆಯೆ ನಾಣ್ಚುತುಮೆಂದಂ
“ಕತ್ತಿಗುಂ ಹರಿತಮಿರ್ಪುದು ಪುಷ್ಪಂ!”
ಚೆನ್ನಾಗಿದೆ ಕಾಂಚನಾ.
ಧನ್ಯವಾದಗಳು
ಕತ್ತ ಮಾಲೆಗೆನೆ ಕೊಯ್ದಿರೆ, ಬಾಲಂ,
ನೆತ್ತರುರ್ಕೆ ಕರದಿಂ, ಕುರಿತೆಂಬಂ, |
“ಸುತ್ತಲಿರ್ಪ ಪಲ ಮುಳ್ಳುಗಳಿಂದಂ,
ಕತ್ತಿಗಿಂ ಹರಿತಮಿರ್ಪುದು ಪುಷ್ಪಂ” ||
ಪಿತ್ತದಿಂ ನಮೆವ ರೋಗಿಗೆ,ವೈದ್ಯಂ,
ಪಿತ್ತಿಲೊಳ್ ನಡೆಯುತಾಯುತೆ ಪೇಳ್ದಂ,|
“ಕೆತ್ತಿ ರೋಗಮನೆ ದೇಹದಿನಟ್ಟಲ್,
ಕತ್ತಿಗಿಂ ಹರಿತಮಿರ್ಪುದು ಪುಷ್ಪಂ” ||
ಬಹಳ ಚೆನ್ನಾಗಿದೆ
Loads and loads of shitiladvitva in this svAgata! My first English khaNDaprAsa-s are here!
Surgical remedy serves in a case whe-
re urgency is at the root o’(f) the matter|
Purging* and (ಸಚದ) such other herbally fine sy-
nergy handy in other sufferings, Ma’m||
(Transliteration: ಸರ್ಜಿಕಲ್ ರೆಮೆಡಿ ಸsವ್ಸ್ ಇನೆ ಕೇಸ್ ವ್ಹೇ-
ರರ್ಜೆನ್ಸಿs ಇಸೆದ ರೂಟ್ ಅ’ದ ಮ್ಯಾಟರ್|
ಪರ್ಜಿಙ್ಯಾಂಡ್ ಸಚದ ಹರ್ಬಲಿ ಫೈನ್ ಸಿs-
ನರ್ಜಿ ಹ್ಯಾಂಡಿ ಇನದರ್ ಸಫರಿಂಗ್ಸ್ ಮ್ಯಾಮ್||)
The first OTHER is ನನ (ಅದ); the second OTHER is ನನಾ (ಅದರ್) 🙂
*Purging (Virechana) is one of the detoxifying Panchakarma treatments in Ayurveda. The others are Vamana (regurgitation), Nasya (nasal), Basti (enema) and Raktamoskshana (blood letting).
ಕತ್ತಿಗುo ಹರಿತಮಿರ್ಪುದು (ನಿಮ್ಮ ಪದ್ಯ-) ಪುಷ್ಪo 🙂
’(ಕಂಠ)ಕತ್ತಿಗುಂ ಹರಿತಂ’ ಎಂದರೆ ಉಚ್ಚಾರಣೆಗೆ ಕಷ್ಟ ಎಂದೆ?
ಕಾಂಚನಾ, ಪ್ರಸಾದರು ಹಾಗೂ ನೀಲಕಂಠರಿಗೆ ಧನ್ಯವಾದಗಳು.ಸ್ವಾಗತವೃತ್ತದಲ್ಲಿ ಆಂಗ್ಲಭಾಷೆಯ ಸೊಗಸಾದ ಪದ್ಯವನ್ನು ರಚಿಸಿದ ಪ್ರಸಾದರಿಗೆ ಅಭಿನಂದನೆಗಳು.
ಧನ್ಯವಾದಗಳು
ಮೇಡಮ್, ನಾನು ಪ್ರತಿಕ್ರಿಯಿಸಿದ್ದು ಪ್ರಸಾದರ ಆಂಗ್ಲಪದ್ಯಕ್ಕೆ 🙂
ನೀಲಕಂಠರೆ,ನಾನು ನಿಮಗೆ ಪ್ರತಿಕ್ರಿಯಿಸಿದ್ದು ಪ್ರಸಾದರ ಪರವಾಗಿ 🙂
ಹೋಕ್ಕೊಳ್ಳಿ – ಧನ್ಯವಾದಗಳು ನೀಲಕಂಠ.
“ಚಿತ್ತಮಂ ಬಿರಿವೆನೆಂಬೆಯೆ?ಪೂವೊಳ್,
ಬಿತ್ತಿ ಕಾಂತಿಯನೆ!”ನೈದಿಲೆ ಪೇಳ್ಗುಂ
“ಪೊತ್ತಿನಾಣ್ಮನೆಲೆ,ನಿನ್ನಯ ಪೊನ್ ಕ
ಣ್ಗತ್ತಿಗುಂ ಹರಿತಮಿರ್ಪುದು ಪುಷ್ಪಂ!”
(ನೈದಿಲೆಯು ಸೂರ್ಯನಿಗೆ ಹೇಳಿದ್ದು)
ಕೊರಳಿಗೆ ತೊಡಿಸಬೇಕಾದ್ದು ಮೃದುವಾದ ಮಲ್ಲಿಕಾಮಾಲೆಯನ್ನು. ಸುಗಂಧರಾಜಪುಷ್ಪಮಾಲೆಯು ಕತ್ತನ್ನೇ ಕುಯ್ಯುತ್ತದೆ.
ಒತ್ತಿಕಟ್ಟಿರುವ ಮಲ್ಲಿಗೆಪೂವ-
ನ್ನಿತ್ತು ಮನ್ನಿಸಲು ಸಂತಸಗೊಂಬರ್|
ಬೆತ್ತದಂತಿಹ ಸುಗಂಧದಧೀಶಂ
(Neck)ಕತ್ತಿಗುo ಹರಿತಮಿರ್ಪುದು ಪುಷ್ಪo||
(ಕತ್ತಿಗುಂ=ಕತ್ತಿಗೆ. ’ಕತ್ತಿಗಿಂತ’ ಎಂಬರ್ಥದಲ್ಲಲ್ಲ. ವಸ್ತುತಃ ’ಕತ್ತಿಗಿಂತ’ ಎಂಬರ್ಥಕ್ಕಾಗಿ ’ಕತ್ತಿಗಿಂ’ ಎಂದಾಗಬೇಕು.)
ಪ್ರಸಾದರೆ, ” ಕತ್ತಿಗಿಂ( ಕತ್ತಿಯಿಂದ) ಹರಿತಮಿರ್ಪುದು ಪುಷ್ಪಂ” – ಸರಿಯೆಂದು ಸಮಸ್ಯೆಯ ಸಾಲನ್ನು ಓದಿದಾಗ ಅನಿಸಿತು. ಪೂರ್ವಕವಿಪ್ರಯೋಗವು ” ಕತ್ತಿಗುಂ “-ಎಂದೂ ಇರಬಹುದೇನೋ ಅಂದುಕೊಂಡೆ. ಸೋಮರು ಸ್ಪಷ್ಟಪಡಿಸುವರೆ ?
“ಇತ್ತು ಮೋದಮನೆ ಲೋಕಕೆ ನಿಚ್ಛಂ,
ಪೊತ್ತು ಪೂವನಹ!,ಶೋಭಿಸಲಕ್ಕೇಂ?
ಬತ್ತುವೆಂ ಬಿದಿರು ವರ್ಗಕೆ ಸೇರ್ದಾಂ!
ಕತ್ತಿಗುಂ ಹರಿತಮಿರ್ಪುದು ಪುಷ್ಪಂ!”
(ಬಿದಿರಿನ ಸ್ವಗತ,ಹೂಬಿಟ್ಟ ಬಿದಿರು ಸಾವುದು)
Good one. Your other verses too are.
Thanks ,Prasaadji!
ಪ್ರಸಾದರೇ, ನೀವಾವಾಗ ಜೀ ಆದಿರಿ, ನೇತಾಜಿ, ಗಾಂಧೀಜಿ ಥರ?
ಯಾರಿದು ಬಹುರೂಪಿಜಿ?
ಬಹುರೂಪ ಎಂದು ತಿಳಿದು ಹೇಳುತ್ತೀರಾದರೆ ನಿಮಗೆ ನಾನು ಯಾರು ಎಂದು ಗೊತ್ತಿರಬೇಕಲ್ಲವೇ?!
ಎತ್ತಲೋ ನೊಣವು ಸಾಗಲು ನೋಡೈ
ಸುತ್ತ ವೀನಸವು ಕೀಟವಕಾಣಲ್
ಮೆತ್ತನೆಂ ಸುಮವು ನುಂಗಲದಂತೈ
“ಕತ್ತಿಗುಂ ಹರಿತಮಿರ್ಪುದು ಪುಷ್ಪಂ”
( ಕೀಟಾಹಾರಿ ಸಸ್ಯ ವೀನಸ್ ಕುರಿತು)
Good idea. ಗೊತ್ತಿದ್ದರೂ ಹೊಳೆಯಲಿಲ್ಲ ನನಗೆ!
ಸುತ್ತ ಹಾಗೂ ಮೆತ್ತನೆಂ ಅಷ್ಟು ಯುಕ್ತವಾಗಿಲ್ಲ. ಹೀಗೊಂದು ಸವರಣೆ:
ಇತ್ತಲೊಂದು ಕೃಮಿಯೈದಿರೆ ನೋಡೆ-
ಚ್ಚೆತ್ತುಕೊಂಡು ಹಸಿದಿರ್ದಿಹ ವೀನಸ್|
ಮೊತ್ತಮಾಗದನು ನುಂಗಿರೆ ಪೇಳ್ವರ್
“ಕತ್ತಿಗುಂ ಹರಿತಮಿರ್ಪುದು ಪುಷ್ಪಂ”||
ಕೃಮಿಯೂ ಇದೆಯಾ? ಅದು ಕ್ರಿಮಿ ತಾನೆ?
(ಕೃಮಿ) ಇದೆ. ಅದನ್ನೇ ನೀವು ಕ್ರಿಮಿ ಎಂದಿರುವುದು 😉
ಎತ್ತಿ ಚೌರಿಯೊಡೆ ಕಟ್ಟಿದ ಕೇಶಂ
ಸುತ್ತಿತಾಂ ಮುಡಿದ ಹೂವಿನ ವೇಷಂ
ಕತ್ತುಕೊಂಕಿದ ವಿಶೇಷಮ ಕಾಣ್ ತಾ-
ಕತ್ತಿಗುಂ ಹರಿತಮಿರ್ಪುದು ಪುಷ್ಪಂ !!
ಹೊರೆ ಹೂ ಮುಡಿದು ಕತ್ತು ಬಾಗಿದ ನಾರಿಯ ಚಿತ್ರಣ !!
ಉಷಾ ಅವರೆ, ಕತ್ತು- ತಾಕತ್ತಾದ ಕಲ್ಪನೆ ಚೆನ್ನಾಗಿದೆ.
ಧನ್ಯವಾದಗಳು ಶಕುಂತಲಾ. “ಮೂಗಿಗಿಂತ ಮೂಗುತಿ ಭಾರ” ಎಂಬ ಅರ್ಥದಲ್ಲಿ ಬರೆದದ್ದು. ಸರಿಯಾಗಲಿಲ್ಲವೇನೋ ಎಂಬ ಅನುಮಾನವಿತ್ತು.
ಒತ್ತಿ ಬಂದಿರೆ ವಿವಾಹದ ಬಂಧಂ
ಚಿತ್ತಮಿಲ್ಲದ ವರಂ ಮುಡಿಸಲ್ಕೆಂ-
ದಿತ್ತ ಹಾರಮದು ತಾಗಿರೆ ಕತ್ತಂ
ಕತ್ತಿಗಿಂ ಹರಿತಮಿರ್ಪುದು ಪುಷ್ಪಂ
ಇಷ್ಟವಿಲ್ಲದ ವರನೊಡನೆ ಆಗುವ ಮದುವೆಯಲ್ಲಿ, ಗಂಡು ತಂದಿತ್ತು ಮುಡಿಸಿದ ಹೂವಿನ ಹಾರದಿಂದಾಗುವ ಸಂಕಟ!
” ಚಿತ್ತಮಿಲ್ಲದ ವರಂ ಮುಡಿಸಲ್ಕೆಂದಿತ್ತ”- “ಚಿತ್ತಮೊಲ್ಲದ ( ಅಥವಾ ಚಿತ್ತಮೊಪ್ಪದ, ಚಿತ್ತಕೊಪ್ಪದ) ವರಂ ಮುಡಿಸಲ್ತಂದಿತ್ತ” ಆದಲ್ಲಿ ಒಳಿತು.
ಆಹಾ, ಚೆನ್ನಾಗಿದೆ ಮೇಡಮ್ ಸವರಣೆ. ಧನ್ಯವಾದಗಳು.
ಚಿತ್ತಕೊಪ್ಪದ ವರಂ ವಧುವಿಂಗೆಂ-
ದಿತ್ತ ಹಾರಮಿರೆ ತೂಗುತೆ ಕತ್ತೊಳ್,
ಎಂಬುದಾಗಿ ಸವರಿದರೆ ಇನ್ನೂ ಒಳಿತು.
ನನಗೆ ಅದು ಸ್ವಲ್ಪ ಕತ್ತಿಗೆ ತಾಗಿದರೂ ಕತ್ತಿಯಂತೆ ಚುಚ್ಚುತ್ತದೆ ಎಂದು ಹೇಳಬೇಕಾಗಿದೆ 🙂
ಅಷ್ಟಕ್ಕೂ ಇನ್ನುಳಿದಿರುವುದು ಇನ್ನು ಒಂದೇ ಸಾಲು ತಿದ್ದಿಸಿಕೊಳ್ಳುವುದಕ್ಕೆ 🙁
ಮೂರನೇ ಸಾಲನ್ನು ಪರಿಷ್ಕರಿಸಿ, ಮೊದಲನೇ ಸಾಲನ್ನೂ ತಿದ್ದಿ ಹೀಗೆ ಬರೆಯಬಹುದು. 🙂
ಒತ್ತಿ ಬಂದಿರೆ ವಿವಾಹದ ಮೂರ್ತಂ,
ಚಿತ್ತಕೊಪ್ಪದ ವರಂ ವಧುವಿಂಗೆಂ-|
ದಿತ್ತ ಹಾರಮಿರೆ ತಾಗುತೆ ಕತ್ತಂ,
ಕತ್ತಿಗಿಂ ಹರಿತಮಿರ್ಪುದು ಪುಷ್ಪಂ ||
_/\_ 🙂
ಚಿತ್ತಮಿಲ್ಲದ ಎಂಬುದನ್ನು ಚಿತ್ತಕೊಪ್ಪದ (ಚಿತ್ತಕೊಲ್ಲದ) ಎಂದು ಶಕುಂತಲಾರವರು ಸವರಿರುವುದು ತೀರ ಸರಿಯಾಗಿದೆ.
ಧನ್ಯವಾದಗಳು.
ಮತ್ತ ನೇರಿಪಪರೂಪದ ರೂಪಂ
ಮುತ್ತಿ ಕಾಡುದದೊ ಜೋಡಿಯ ದೀಪಂ
ಕತ್ತಿಯಂಚವಳ ಕಂಗಳ ತೀಕ್ಷಂ
ಕತ್ತಿಗುಂ ಹರಿತಮಿರ್ಪುದು ಪುಷ್ಪಂ ।।
ಕಣ್ಣು ಕತ್ತಿಯ ಅಂಚು – ಅವಳ ಕಾಡಿಗೆ(=ಪುಷ್ಪ / ಕಣ್ಣ ತುದಿಗಿಡುವ ತೆಳುವಾದ ಗೆರೆ ) – ಕತ್ತಿಗಿಂತಲೂ ಹರಿತ !!
ಉಷಾ ಅವರೆ,
ಮೂರನೇ ಪಾದ – “ಕತ್ತಿಯಂಚವಳ ಕಣ್ಣಿರೆ ತೀಕ್ಷ್ಣಂ ” ಎಂದಾಗಬೇಕೆ ?
ಎರಡನೇ ಪಾದವು ಒಂದನೇ ಪಾದದ ಮುಂದುವರಿಕೆಯೆ ?( ಅರ್ಥ ಸರಿಯಾಗಿ ತಿಳಿಯಲಿಲ್ಲ )
ಪುಷ್ಪ= ಕಣ್ಣಿನ ತುದಿಯ ಕಾಡಿಗೆಯ ಗೆರೆ- ಸರಿಯೆ ?
ನಾನೂ ಅದನ್ನೇ ತಿದ್ದುತ್ತಿದ್ದೇನೆ ಶಕುಂತಲಾ !
ಶಕುಂತಲಾ, ತಿದ್ದಿದ ಪದ್ಯ, (ಸರಿಯಾಯಿತೇ?)
ಮತ್ತ ನೇರಿಪಪರೂಪದ ರೂಪಂ
ಇತ್ತ ಕಾಣವಳ ಕಂಗಳ ಛಾಪಂ
ಕತ್ತಿಯಂಚಿನೊಲು ನೋಟವು ತೀಕ್ಷ್ಣಂ
ಕತ್ತಿಗುಂ ಹರಿತಮಿರ್ಪುದು ಪುಷ್ಪಂ ।।
ಪುಷ್ಪ = ಕಣ್ಣಿಗೆ ಲೇಪಿಸುವ ಒಂದು ಬಗೆಯ ಕಾಡಿಗೆ (ನಿಘಂಟಿನ ಅರ್ಥ)
ಮತ್ತನೇರಿಸೆ ಸುಶೋಭಿತರೂಪಂ,
ಚಿತ್ತಮಂ ಸೆಳೆಯೆ ಪುರ್ಬಿನ ಚಾಪಂ,|
ಗತ್ತಿನಿಂದೆಸೆವ ಕಣ್ಣಿರೆ ತೀಕ್ಷ್ಣಂ,
ಕತ್ತಿಗಿಂ ಹರಿತಮಿರ್ಪುದು ಪುಷ್ಪಂ ||
ಎಂಬುದಾಗಿ ಸವರಬಹುದು.
ಧನ್ಯವಾದಗಳು ಶಕುಂತಲಾ, ನಿಮ್ಮ ಈ “ಸೈಡ್ ಪೋಸ್” (ಒಂದೇ ಬಾರಿ “ಕಣ್ಣು” ಇರುವುದಕ್ಕಾಗಿ !!) ಪದ್ಯ – ಹುಬ್ಬು,ಕಾಡಿಗೆ ಎಲ್ಲಾ ಹರಿತವಾಗಿ ಕಂಡು ಸುಶೋಭಿತವಾಗಿದೆ.
ಧನ್ಯವಾದಗಳು ಉಷಾ ಅವರೆ. ಸಮಸ್ಯೆಯಲ್ಲಿ “ಪುಷ್ಪಂಗಳ್” ಇಲ್ಲದೆ “ಪುಷ್ಪಂ ” ಇರುವುದರಿಂದ ಕಣ್ಣೂ ಒಂದೇ ಇದ್ದು,”ಸೈಡ್ ಪೋಸ್” ಸುಶೋಭಿಸಿದೆಯೆ? 🙂
ಓ… !! ಹೌದು, ಹೌದು ಶಕುಂತಲಾ !
ಅತ್ತ ತೀಕ್ಷ್ಣ ಕಡುಕೋಪಿಯು ಗಂಡಂ
ಇತ್ತ ಹೆಂಡತಿಯ ಹೂಮನವಂದಂ
ಪತ್ತಿ ಸಾಗಿದುದು ಬಾಳವಳಿಂದಂ
ಕತ್ತಿಗುಂ ಹರಿತಮಿರ್ಪುದು ಪುಷ್ಪಂ ।।
ಕತ್ತಿಯಂತ ತೀಕ್ಷ್ಣ ಪತಿ – ಪುಷ್ಪದಂತೆ ಸೂಕ್ಷ್ಮ ಸತಿ – ಸತಿಯಿಂದಾಗಿ ಹೊಂದಿ ಸಾಗುತ್ತಿರುವ ಸಂಸಾರ
what is the equivalent phrase of “Catch 22” in Kannada? I know our literature has Catch 22 situations like Vikram-Vetala, etc, but is there a specific phrase like they have in english?
By default idioms and idiomatic phrases are and should be untranslatable. There may at best be a few exceptions where the literary translation is also idiomatic. Here is one:
Went down memory lane = अगात् स्मृतिपथं (भर्तृहरि)
There may be a few cases where the same message is conveyed but the phrasing is not similar.
उभयसंभव is the nearest literal equivalent for ‘catch 22’, but is very insipid and lacks punch!
Let me know what you want to say in the Kannada verse that is taking shape in your mind, and one of us may come out with the best phrasing for it; or decree that your expression is good enough.
ಚಿತ್ತೆ ಹುಣ್ಣಿಮೆ ಸುಮಾವೃತ ಕುಂಭಂ
ಪೊತ್ತು ದುಂಬಿ ಶೆಖೆ ಶಬ್ದಗಳಿಂದಂ
ಮುತ್ತಿದಾ ಕರಗ ಧಾರಿಯಿದೆಂದಂ
ಕತ್ತಿಗುಂ ಹರಿತಮಿರ್ಪುದು ಪುಷ್ಪಂ
ಖ್ಯಾತ ಬೆಂಗಳೂರು ಕರಗ ಬೀಳದಿರಲೆಂದು
ವೀರರು ಮುಟ್ಟದೆ ಕತ್ತಿಯ ತುದಿಯಲ್ಲಿ ರಕ್ಷಿಸುತ್ತಾರೆ
ಇಷ್ಟುದಿನ ಗಮನಿಸಿಕೊಳ್ಳಲಿಲ್ಲ, ಕ್ಷಮಿಸಿ. ಕಲ್ಪನೆ-ರಚನೆಗಳು ಚೆನ್ನಾಗಿವೆ. ಈಗಲೂ ’ಸ’ಮಾವೃತ ಎಂದು ಓದಿಕೊಂಡು, ಪದ್ಯದಲ್ಲಿ ಹೂವೇ ಬರಲಿಲ್ಲವಲ್ಲ ಎಂದು ಕಣ್ಣಿಟ್ಟು ಓದಿದೆ. ’ಸು’ಮವು ಕಾಣಿಸಿತು. (ಕರಗಧಾರಿಯು ಪೇಳ್ದಂ)
ಆದರೆ, ನೀವು ವಿವರಣೆಯಲ್ಲಿ ಹೇಳಿರುವುದು ಪದ್ಯದಲ್ಲಿ ಬಂದಿಲ್ಲ. ಅದನ್ನು ಕುರಿತಾಗಿ ಇನ್ನೊಂದು ಪದ್ಯವನ್ನು ಬರೆಯಿರಿ. (ಸಮಸ್ಯಾಪಾದವು ಒಂದು ಪದ್ಯದಲ್ಲಿ ಬಂದರೆ ಸಾಕು.)
ಅತ್ತ ತೀಕ್ಷ್ಣ ಕಡುಕೋಪಿಯು ಗಂಡಂ
ಇತ್ತ ಹೆಂಡತಿಯ ಹೂಮನವಂದಂ
ಪತ್ತಿ ಸಾಗಿದುದು ಬಾಳವಳಿಂದಂ
ಕತ್ತಿಗುಂ ಹರಿತಮಿರ್ಪುದು ಪುಷ್ಪಂ ।।
ಕತ್ತಿಯಂತ ತೀಕ್ಷ್ಣ ಪತಿ – ಪುಷ್ಪದಂತೆ ಸೂಕ್ಷ್ಮ ಸತಿ – ಸತಿಯಿಂದಾಗಿ ಹೊಂದಿ ಸಾಗುತ್ತಿರುವ ಸಂಸಾರ
ಪದ್ಯಪಾನಿಗಳನ್ನು, ಅದರಲ್ಲೂ ಕಾಂಚನರನ್ನು ನೋಡಿದ ಉತ್ಸಾಹದಲ್ಲಿ ಬರೆದ ಪದ್ಯಗಳು 🙂
ನೆತ್ತರೇಂ ಪಿರಿದೊ ಭೂಪಗೆ ನೋಡಲ್
ಸತ್ತೆಯ ಪ್ರಖರ ಪುಷ್ಪಸುಪಟ್ಟಂ|
ಪೊತ್ತು ದಮ್ಮದಲಗೊಳ್ ಚರಿಪಂಗಾ
ಕತ್ತಿಗುಂ ಹರಿತಮಿರ್ಪುದು ಪುಷ್ಪಂ||
ಇಲ್ಲಿ ಪುಷ್ಪಪಟ್ಟ ಎಂಬುದು ರಾಜರು ಮತ್ತು ದೇವತೆಗಳು ಧರಿಸುವ ಶಿರೋವೇಷ್ಟನ.
ಬತ್ತಿದಂಗಳದಮಾತ್ಯನ ಕಂಡೋ-
ಡುತ್ತೆ ಬಂದು ನುತಿಸಲ್ ವಶವಾದಂ|
ಮತ್ತಿದೇಂ! ಚಣಕಪುತ್ರನ ಕೈಯೊಳ್
ಕತ್ತಿಗುಂ ಹರಿತಮಿರ್ಪುದು ಪುಷ್ಪಂ||
ಚಾಣಕ್ಯನು ಬುದ್ದಿವಂತಿಕೆಯಿಂದ ಅಮಾತ್ಯರಾಕ್ಷಸನನ್ನು ಒಲಿಸಿಕೊಂಡ ಪರಿ
Aahaa tumba adbhutavaada kalpane, amaatyaraakshasana bagge!!
First verse is fine. Second is good 😉
ಹೇಗಾದರೂ ಸರಿ !ಒಳ್ಳೆಯ ಪೂರಣಗಳು ಬಂದವಲ್ಲಾ:-)
ಇತ್ತ ಪೂವರಳೆ ವಲ್ಲಿಯೊಳತ್ತಂ
ಕತ್ತಿಯಾದುದಲ ಕರ್ಬುನದಿಂದಂ
ಕತ್ತಲಿಲ್ಲದೊಡೆ ಕಾಂಬುದು ನಿಚ್ಚಂ
ಕತ್ತಿಗುಂ ಹರಿತಮಿರ್ಪುದು ಪುಷ್ಪಂ
[ಹರಿತ = green – environmentally friendly, etc.]
ಅರ್ಥವಾಗಲಿಲ್ಲ ಸರ್ 🙁
ಚೆನ್ನಾಗಿದೆ ರಾಮಚಂದ್ರರೆ. ಹರಿತದ ಈ ಅರ್ಥವನ್ನು ನಾನೂ ಗಮನಿಸಿ, ಬಳಸಿಕೊಳ್ಳಬಹುದೆಂದುಕೊಂಡಿದ್ದೆ. 🙂
ಪದ್ಯದ ಅರ್ಥ: ಇತ್ತ ಬಳ್ಳಿಯಲ್ಲಿ ಹೂವರಳಿದರೆ, ಅತ್ತ ಕತ್ತಿಯು ಕಬ್ಬಿಣದಿಂದ ಆಗಿದೆ. ಕತ್ತಲಿಲ್ಲವಾದರೆ( ಬೆಳಕಿನಲ್ಲಿ) ಹೂವು ಹರಿತವಾಗಿರುವುದು ( ಪರಿಸರಕ್ಕೆ ಸಂಬಂಧಿಸಿರುವುದು) ನಿತ್ಯವು ಕಂಡುಬರುತ್ತದೆ.
ಗತ್ತಿನಿಂದೆರಗಿ ವಳ್ಳಿಯ ಪೂವಿಂ
ತುತ್ತನಾರಿಸುವೆನೆಂದ ನೊಳ೦ ಮ I
ತ್ತತ್ತು ಚೀರಿತದು ಮುತ್ತಿಕೊಳಲ್ ಹಾ !
ಕತ್ತಿಗುಂ ಹರಿತಮಿರ್ಪುದು ಪುಷ್ಪಂ II
ಅದು=ಹೂವು
ಕೀಟಾಹಾರಿ ಸಸ್ಯದ ಬಾಯಿಯಿಂದ ತಪ್ಪಿಸಿಕೊಂಡು ಬದುಕಿದ ನೊಣದ ಮಾತು .
ಅಂಕಿತಾ ಬರೆಯುವುದಕ್ಕೆ ಒಂದು ದಿನ ಮೊದಲೇ ಬರೆದಿಟ್ಟಿದ್ದೆ . ಅವರು ಬರೆಯಬಹುದೆಂಬ ನಿರೀಕ್ಷೆ ಇದ್ದುದರಿಂದ ಹಾಕಿರಲಿಲ್ಲ . ಈಗ ಬರೆದದ್ದಕ್ಕಾಗಿಯೇ ಹಾಕುತ್ತಿದ್ದೇನೆ .ವಸ್ತುವಿನ ಆಯ್ಕೆ ಒಂದೇ ಆಗಿದ್ದರೂ ಪದ್ಯಕ್ಕೆ ಅಳವಡಿಸಿ ಕೊ೦ಡ ರೀತಿಯಲ್ಲಿ ವ್ಯತ್ಯಾಸ ಇರುವುದಕ್ಕಾಗಿ .
ನಮ್ಮಗಳ ವಿಷಯದಲ್ಲಿ ಇಂತಹ ಔದಾರ್ಯವನ್ನು ತೋರುವುದಿಲ್ಲವಲ್ಲ ನೀವು!?
ದಶಭುಜಗಳಿಂದ ದಶಕೋಶಗಳನ್ನು ಹೊತ್ತು ನಿಂತ ನಿಮಗೆ ಔದಾರ್ಯ ಬೇಕೆ?
ಪ್ರಸಾದು ಸರ್ ,
”ಸ್ವಾಗತಂ ಸರಸ ಕಾವ್ಯಕೆ ಸಲ್ಗುಂ ” ಎಂದು ಪದ್ಯಪಾನದ ಸೂತ್ರವೇ ಹೇಳಿದೆಯಲ್ಲ . ನೀವು ಕೆಲವೊಮ್ಮೆ ಪದಕೋಶಗಳಿಂದ ಆಯ್ಕೆಮಾಡುವ ಪದಗಳಿಗೆ ರಸವೆಲ್ಲಿರುತ್ತದೆ ? ಅದನ್ನು ಓದಿದರೆ ಉಕ್ಕಿ ಬರುವ ನಗುವೇ ಔದಾರ್ಯದ್ದು .
ಹಹ್ಹಾ.. ರಸ ಏಕಿರುವುದಿಲ್ಲ ಭಾಲರೇ?! ಷಡ್ರಸವಾದರೆ ತಿಕ್ತ, ನವರಸವಾದರೆ ಭಯಾನಕ 🙂
hhahha. ಇಬ್ಬರೂ ಆಳಿಗೊಂದು ಕಲ್ಲಿನಂತೆ ಹಾಕಿದ್ದೀರಿ. ಇರಲಿ.
@ ನೀಲಕಂಠ,
ಷಡ್ರಸಗಳಲ್ಲಿ ಆರನೆಯದು ಕಷಾಯ, ಕಹಿಯಂತೂ ಅಲ್ಲ. ನವರಸಗಳಲ್ಲಿ ಒಂಭತ್ತನೆಯದು ಶಾಂತ.
@ ಭಾಲ,
ನಿರಸ, ನೀರಸ, ವಿರಸ, ಅ-ರಸ, ಅನೌರಸ ಇತ್ಯಾದಿ ಶಬ್ದಗಳೂ ಪದಕೋಶದಲ್ಲಿವೆಯಲ್ಲ!
ನಿಮ್ಮ ಪದ್ಯದಲ್ಲಿರುವ ಶಬ್ದಗಳು ಪದಕೋಶದಲ್ಲಿಲ್ಲ ಎಂದಾಯಿತು!
’ನಗುವುಕ್ಕಿಬಂದಿತು’ ಎಂಬುದು ನನ್ನ ಪದ್ಯಗಳು ಅರ್ಥವಾಗಿವೆ, ಚೆನ್ನಾಗಿಯೇ ಅರ್ಥವಾಗಿವೆ ಎಂಬುದಕ್ಕೆ ಸಾಕ್ಷಿ. ಇದಕ್ಕಿಂತ ಮಿಗಿಲಾದ ಪುರಸ್ಕಾರ-ವಿಮರ್ಶೆಗಳಿಲ್ಲ 😉 ಧನ್ಯವಾದಗಳು.
ಖಂಡಿತ ವಾಗಿಯೂ ಅರ್ಥ ವಾಗಿದೆಯೆಂದು ತಿಳಿದುಕೊಳ್ಳುತ್ತೇನೆ .
ನಾನು ಬರೆಯುವ ಪದಗಳು ಪದಕೋಶದಲ್ಲಿ ಇಲ್ಲವೆಂದು ನಾನು ಹೇಳಿಲ್ಲ . ಸಂಧರ್ಭಕ್ಕೆ ಒದಗುವ ಪದಗಳನ್ನು ಬಳಸಿಕೊಳ್ಳುತ್ತೇನೆ . ಸಂಶಯವಿದ್ದಲ್ಲಿ ಪದಕೋಶ ನೋಡಿ ಕೊಳ್ಳುವುದು.
ಚಿತ್ತದಾ ಮುನಿಸು ಭೀಮನ ಕೋಪಂ
ಕತ್ತಿಗುಂ ಹರಿತಮಿರ್ಪುದು , ಪುಷ್ಪಂ
ಮೆತ್ತಗಂ ಇಹುದು ಭೀಮನ ಚಿತ್ತಂ
ಮುತ್ತಿನಂತಿಹುದು ಮೃದುವು ನೋಡೈ
(ಸಿಟ್ಟುಗೊಂಡಾಗ ಭೀಮನ ಮನಸು ಕತ್ತಿಯಂತೆ ಹರಿತ. ಆದರೆ ನಿಜವಾಗಿ ಮೃದು ಸ್ವಭಾವ)
ಮೆತ್ತಗಂ+ಇಹುದು=ಮೆತ್ತಗಮಿಹುದು ಎಂದು ಸಂಧಿಯಾಗಿಸಲೇಬೇಕು. ಇಲ್ಲದಿದ್ದರೆ ವಿಸಂಧಿದೋಷವೆನಿಸುತ್ತದೆ.
ಶಿವನೆ ಬೆಚ್ಚಿದನ್ ಮದನನ ಪೂ ಬಾಣದಿಂ
ಶಿವೆಯಿನ್ನೆಂತು ತಾಳ್ವಳಾ ಪಾತಕಂ
ಪ್ರಣಯದಭಿಲಾಷೆಯಿಂ ಘಾಸಿಯವಳ್ ಮನಂ
“ಕತ್ತಿಗುಂ ಹರಿತಮಿರ್ಪುದು ಪುಷ್ಪಂ”
ಶಿವನೆ ಬೆಚ್ಚಿದನ್ ಮದನನ ಪೂ ಬಾಣದಿಂ
ಶಿವೆಯಿನ್ನೆಂತು ತಾಳ್ವಳಾ ಪಾತಕಂ
ಪ್ರಣಯದಭಿಲಾಷೆಯಂ ಘಾಸಿಯವಳ್ ಮನಂ
“ಕತ್ತಿಗುಂ ಹರಿತಮಿರ್ಪುದು ಪುಷ್ಪಂ
ಸರೋಜರವರಿಗೆ ಪದ್ಯಪಾನಕ್ಕೆ ಸ್ವಾಗತ. ನಿಮ್ಮ ಪದ್ಯದ ಎರಡನೆಯ ಹಾಗೂ ಮೂರನೆಯ ಪಾದಗಳು ಸ್ಪಷ್ಟವಿಲ್ಲ. ಅಲ್ಲದೆ ಮೂರೂ ಪಾದಗಳು ಸ್ವಾಗತವೃತ್ತದಲ್ಲಿಲ್ಲ (ನಾನನಾನನನನಾನನನಾನಾ). ಮೊದಲ ಪಾದವನ್ನು ಹೀಗೆ ಸವರಬಹುದು: ಶರ್ವಗೇ ಮದನಬಾಣವು ಚೋದ್ಯಂ. ಇಲ್ಲಿ ನಾನು ಆದಿಪ್ರಾಸವನ್ನು ಪಾಲಿಸಿಲ್ಲ. ಮೊದಲ ಒಂದೆರಡು ಪ್ರಯತ್ನಗಳಲ್ಲಿ ಪ್ರಾಸವಿನಾಯಿತಿಯಿರಲಿ. ಇತರ ಪದ್ಯಪಾನಿಗಳು ಪ್ರಾಸವನ್ನು ಪಾಲಿಸಿರುವ ರೀತಿಯನ್ನು ಗಮನಿಸಿಕೊಂಡರೆ ಅದು ತಾನೇ ಸಿದ್ಧಿಸುತ್ತದೆ. ಉಳಿದ ಪಾದಗಳನ್ನು ನೀವೇ ಸವರಲು ಯತ್ನಿಸಿ. ಈ ಪುಟದ ಆದಿಯಲ್ಲಿರುವ learn prosodyಯಲ್ಲಿ ಶ್ರೀ ರಾ. ಗಣೇಶರ ವಿಡಿಯೊಪಾಠಗಳಿವೆ. ಗಮನಿಸಿಕೊಳ್ಳಿ. ನಿಮಗೆ ಭಾಷಾಸಿದ್ಧಿಯಿದೆ. ಛಂದಸ್ಸೇನೂ ದೊಡ್ಡ ವಿಷಯವಲ್ಲ. ಬಿಡದೆ ಪದ್ಯರಚನೆಯನ್ನು ಮಾಡಿ.
ಧನ್ಯವಾದಗಳು, ಖಂಡಿತಾ ಪ್ರಯತ್ನಿಸ್ತೇನೆ
ಧನ್ಯವಾದಗಳು ಎಲ್ಲರ ಪ್ರತಿಕ್ರಿಯೆಗೆ. ಛಂದ ಪ್ರಾಸಗಳೆಲ್ಲ ಹಳೆಯ ಕಾಲಕ್ಕೇ ಅಥವಾ ಗಣೇಶ್ರಂತವರಿಗೇ ಮೀಸಲು ಎಂದುಕೊಂಡಿದ್ದ ನನಗೆ ಕೊನೆಯ ಪಕ್ಷ ಪ್ರಯತ್ನಿಸಲಾದರೂ ಒಳ್ಳೆಯ ಅವಕಾಶ ಸಿಕ್ಕಿದೆ. ಇದನ್ನೆ ಮತ್ತೆ ನನ್ನ ಅಲ್ಪ ಪದಶಕ್ತಿಯಿಂದಲೇ ಪ್ರಯತ್ನಿಸುತ್ತೇನೆ. ತಪ್ಪುಗಳನ್ನು ತಿದ್ದಿದರೆ ನನಗೂ ಕಲಿಯಲು ಸಾಧ್ಯವಾಗುತ್ತದೆ. ಮತ್ತೊಮ್ಮೆ ಧನ್ಯವಾದಗಳು.
ಚಿತ್ತಜಂ ಕದಡಿದನ್ ಶಿವಚಿತ್ತಂ
ಮತ್ತವಳ್ ತಡೆವಳೇನ್ ತನುತಾಪಂ
ಚಿತ್ತಘಾತಕವದಾ ಮದಚಾಪಂ
“ಕತ್ತಿಗುಂ ಹರಿತಮಿರ್ಪುದು ಪುಷ್ಪಂ”
ಪ್ರಸಾದ್ರೆ… ನಿಮ್ಮ ಮಾತಿನಂತೆ ಪರಿಷ್ಕರಿಸಲು ಪ್ರಯತ್ನಸಿದ್ದೇನೆ. ನೋಡಿ ತಪ್ಪಿದ್ದರೆ ಹೇಳಿ. ನಾನು ಇಂತಹ ಪ್ರಯತ್ನವನ್ನು ಮಾಡಿದ್ದು ಇದೇ ಮೊದಲು. ಛಂದದ ಅಂಕೆಯಿಲ್ಲದೆ ಬರೆದೇ ಅಭ್ಯಾಸ. ನನಗೆ ಗಣೇಶ್ರ ಯೂಟ್ಯೂಬ್ ಲಿಂಕ್ಸ್ ಕೊಟ್ರೆ ಉಪಕಾರವಾಗುತ್ತದೆ. (ಎಲ್ಲ ಎಪಿಸೋಡ್ ನನಗೆ ಸಿಗಲಿಲ್ಲ)
ಮೂರನೆಯ ಸಾಲಿನ ಕೊನೆಯ ಪದ “ಮದಚಾಪಂ” ಎಂದು
ಸರೋಜಾ ಅವರೆ, ಮದಚಾಪಂ ಎಂಬಲ್ಲಿ ಮದ ಎಂದರೇನು? ಅದು ಮದನಚಾಪಂ ತಾನೆ? ಛಂದಸ್ಸಿಗೆ ಹೊಂದಿಸುವಂತೆ ಮದನಾಸ್ತ್ರಂ ಎನ್ನಬಹುದು
ಸರೋಜಾ ಅವರೆ, ಪದ್ಯಪಾನಕ್ಕೆ ಸ್ವಾಗತ. ನಿಮ್ಮ ಮೊದಲ ಯತ್ನವು ಚೆನ್ನಾಗಿದೆ.ಒಳ್ಳೆಯ ಕಲ್ಪನೆಯ ಪದ್ಯ. “ಶಿವಚಿತ್ತಂ”‘ “ತನುತಾಪಂ” ಎಂಬಲ್ಲಿ ಪ್ರಥಮವಿಭಕ್ತಿಪ್ರತ್ಯಯದ ಬದಲು “ಶಿವಚಿತ್ತಮಂ”, “ತನುತಾಪಮಂ” ಎಂಬುದಾಗಿ ದ್ವಿತೀಯವಿಭಕ್ತಿಪ್ರತ್ಯಯವನ್ನು ಪ್ರಯೋಗಿಸಿದಲ್ಲಿ ಒಳಿತು. ಆದರೆ ಹಾಗಾದಾಗ ಛಂದಸ್ಸು ಕೆಡುವುದು. “ಚಿತ್ತಘಾತಕವದಾ “ಎಂಬುದು “ಚಿತ್ತಘಾತಕಮದಾ”( ಚಿತ್ತಘಾತಕಂ+ಅದು+ಆ) ಆದಲ್ಲಿ ಸರಿಯೆನಿಸುವುದು.”ಮದಚಾಪಂ” ಎಂಬುದನ್ನು ನೀಲಕಂಠರು ಸವರಿದಂತೆ “ಮದನಾಸ್ತ್ರಂ” ಎಂದು ಬರೆಯಬಹುದು.ನಾನು ಪದ್ಯವನ್ನು ಈ ಕೆಳಗಿನಂತೆ ಸವರಿದ್ದೇನೆ.
ಚಿತ್ತಜಂ ಕದಡಲೀಶನ ಧೀಯಂ,
ಮತ್ತೆಯಾಗಲುಮೆ ಕಾಮದ ಕಾಯ್ಪಿಂ,|
ಚಿತ್ತಘಾತಕಮಿರಲ್ ಮದನಾಸ್ತ್ರಂ,
ಕತ್ತಿಗಿಂ ಹರಿತಮಿರ್ಪುದು ಪುಷ್ಪಂ ||
ಶಕುಂತಲಾರ ಪದಗಳು ಹೆಚ್ಚು ಸಮಂಜಸ ಅನ್ನಿಸ್ತು. ಅವುಗಳನ್ನ ಬಳಸಿ ನನ್ನ ಶೈಲಿಯಲ್ಲಿ ತಿದ್ದಿ ಬರೆದಿದ್ದೇನೆ. ದಯವಿಟ್ಟು ತಪ್ಪಿದ್ದರೆ ಹೇಳಿ.
ಚಿತ್ತಜಂ ಕೆಣಕಲೀಶನ ಧೀಯಂ
ಚಿತ್ತವಾಂತಳುಮೆ ತಾಳದ ತಾಪಂ
ಚಿತ್ತಘಾತಕವು ಮಾರನ ಚಾಪಂ
ಕತ್ತಿಗುಂ ಹರಿತಮಿರ್ಪುದು ಪುಷ್ಪಂ
ಛಂದಸ್ಸು-ಪ್ರಾಸಗಳು ಸಾಧಿತವಾಗಿವೆ. ಅಭಿನಂದನೆಗಳು.
ಶಿವಚಿತ್ತಂ=ಶಿವಚಿತ್ತವು. ಶಿವಚಿತ್ತವನ್ನು>ಶಿವಚಿತ್ತಮಂ ಎಂದಾಗಬೇಕು. ಅಂತೆಯೇ ’ತಡೆವಳೇನ್ ತನುತಾಪಮಂ’ ಎಂದಾಗಬೇಕು. ಅಕಾರಾಂತದಲ್ಲಿ ಹೀಗೆ. ಉಕಾರಾಂತದಲ್ಲಾದರೆ ಪಾಡು>ಪಾಡಂ(ಹಾಡನ್ನು) ಎಂದಾಗುತ್ತದೆ. ಮತ್ತೆ ಪ್ರಯತ್ನಿಸಿ ಇದನ್ನು ಪೂರ್ತಿಯಾಗಿಯೇ ಸರಿಮಾಡಿ. ಬಹಳ ಪ್ರಯೋಜನಕಾರಿಯಾಗುತ್ತದೆ ಈ ಕಸರತ್ತು.
ನೀಲಕಂಠ, ’ಮದಚಾಪಂ’ ಸಾಧುವೆನಿಸದೆ?
ಮದ ಅಂದರೆ ಮದನ ಅಂತ ಅರ್ಥವಿದೆಯಾ?
ಸುತ್ತ ಚೂಪೆಸಳ ಜೋಡಿಪ ಪೂವಂ
ಮೆತ್ತಗಂ ಅದನು ನೋಡುತೆ , ತಾಕಲ್
ಹತ್ತಿರ ಸುಳಿಯೆನೆಂದನು ಬಾಲಂ
ಕತ್ತಿಗುಂ ಹರಿತಮಿರ್ಪುದು ಪುಷ್ಪಂ
(ಕರಕುಶಲ ವಸ್ತು ತಯಾರಿಸುವ ಸ್ಪರ್ಧೆಯಲ್ಲಿ ಹಾಳಾದ ಬ್ಲೇಡುಗಳಿಂದ ತಯಾರಿಸಿ ಹೂವಿನ ಕುರಿತು )
Ankita, mUranE pAda dalli chandassu tappide.. neenE saripaDisaballe… niininda olle pUraNagaLu badive, abhinandanegaLu..
ಹೌದು ಚೇದಿ, ಅಂಕಿತಾಳ ಹೊಸ ಹೊಸ ಕಲ್ಪನೆಗಳು, ಅವಳ ಪದ ಸಂಪತ್ತು – ಅವುಗಳನ್ನು ಛಂದಸ್ಸಿಗೆ ಹೊಂದಿಸುವ ಬಗೆ ಎಲ್ಲವೂ ತುಂಬಾ ಸುಂದರವಾಗಿದೆ. ನಾನಂತು ಅವಳ ಪದ್ಯಗಳಿಗೆ ಕಾಯುತ್ತಿರುತ್ತೇನೆ.
ಅಭಿನಂದನೆಗಳು ಅಂಕಿತಾ.
Very fine idea. Kudos.
ತುಂಬ ಚೆನ್ನಾಗಿದೆ ಅಂಕಿತಾ 🙂
ಧನ್ಯವಾದಗಳು.
ನನಗೆ ಹಳೆಗನ್ನಡ ತಿಳಿದಿಲ್ಲ. ಸಂಸ್ಕೃತದ ಅರಿವಿಲ್ಲ. ನಿಜಕ್ಕೂ ನನ್ನ ಹತ್ತಿರ ಇರುವ ಪದಸಂಪತ್ತು ಕಡಿಮೆ. ವೃತ್ತದಲ್ಲಿ ಪದ್ಯ ರಚನೆ ಮಾಡುತ್ತಿರುವುದು ಮೊಟ್ಟಮೊದಲು ಪದ್ಯಪಾನದಲ್ಲಿಯೇ. ಪ್ರತಿ ಕವನದಲ್ಲೂ ಎಷ್ಟು ದೋಷಗಳಿವೆಯೋ ಎಂದು ಭಯ, ಮುಜುಗರದಿಂದಲೇ ನಾನು ಕವನ ಪೋಸ್ಟ ಮಾಡುತ್ತಿದ್ದೇನೆ.
ಪದ್ಯಪಾನವು ನನಗೆ ಒಂದು ಉತ್ತಮ ಪಾಠಶಾಲೆಯಾಗಿದೆ. ಪ್ರತೀ ಪದ್ಯಕ್ಕೂ ತಮ್ಮಿಂದ ಬರುವ ತಿದ್ದುಗೆಗಾಗಿ ನಾನು ಕಾಯುತ್ತಿರುತ್ತೇನೆ..
ತಮ್ಮ ಕವನಗಳಿಗಿಂತ ಸಪ್ಪೆಯಾಗಿದ್ದರೂ ಹರಸಿದ ತಮಗೆಲ್ಲ ನಮನಗಳು.
ಕೊತ್ತಿರಲ್ ಪಸಿರುದ೦ಟುಗಳ೦ತುಂ
ಮೊತ್ತಮಾಗೆಸೆಯಲುಳ್ಳಿಯ ಪೂ ತಾ
ನಿತ್ತುದೇಂ ?ಚೆಲುವ ಪರ್ಚು ಗೊಳುತ್ತಲ್
ಕತ್ತಿಗುಂ ಹರಿತಮಿರ್ಪುದು ಪುಷ್ಪಂ II
ತುಂಬಾ ಈರುಳ್ಳಿ ಹೂಗಳನ್ನು (spring onion )ಹೊಳಪಿರುವ stainless steel ಚಾಕುವಿನಿಂದ ತು೦ಡರಿಸಿದಾಗ ಅದು ತನ್ನ ಚೆಲುವಾದ ಹಸಿರು ಬಣ್ಣವನ್ನು ಕತ್ತಿಗೂ ಹಂಚಿ (reflection) ಅದರಿಂದ ಚೆನ್ನಾಗಿ ತಾನು ಹಸಿರು ಬಣ್ಣದಿಂದ ಶೋಭಿಸುತ್ತಿತ್ತು . ಹಲವು ಹೂಗಳ ಕೊಚ್ಚಲ ರಾಸಿಯನ್ನು ಒಂದು( ಪುಷ್ಪಂ ) ಹೂವೆಂದು ತಿಳಿದು ಕೊಳ್ಳಬೇಕಾಗಿ ವಿನಂತಿ
ವಿವರಣೆಯ ಪ್ರಕಾರ ’ಕತ್ತಿಗುಂ ಹರಿತಮಂ ಕುಡೆ ಪುಷ್ಪಂ’ ಎಂದಾಗುತ್ತದಲ್ಲ!
ಜತ್ತದಿಂದದೊ ಪಲಾವಿಗೆ ಹೂಕೋ-
ಸೊತ್ತುತೆತ್ತರಿಸಿರಲ್ಕವಳಾಗಲ್
ಕತ್ತಿಯೇ ಮುರಿದಿರಲ್ಕುಸುರಿರ್ದಳ್
“ಕತ್ತಿಗುಂ ಹರಿತಮಿರ್ಪುದು ಪುಷ್ಪಂ” !!
ಜತ್ತ = ಜತನ / ಜೋಪಾನವಾಗಿ
ಎತ್ತರಿಸು = ಹೆಚ್ಚು
“ಪಲಾವ್” ಮಾಡಲು (cauliflower) ಹೂಕೋಸನ್ನು ಒತ್ತಿ ಹೆಚ್ಚುತ್ತಿರುವಾಗ ಚಾಕುವೇ ಮುರಿದ ಸಂದರ್ಭ !!
Fine idea and versification
Hahhhaaa… ಆಹಾ ಚೆನ್ನಾಗಿದೆ ಮೇಡಮ್!
ಧನ್ಯವಾದಗಳು ಪ್ರಸಾದ್ ಸರ್, ನೀಲಕಂಠ
(ಪಲಾವ್ ಮಾಡದಿದ್ದರೂ ಮೆಚ್ಚಿದ್ದಕ್ಕೆ !!)
ಈ ಬಾರಿಯೇನೋ ನೀವು ಪಲಾವ್ ಮಾಡಲಿಲ್ಲ. ಇತರೆ ದಿನಗಳಲ್ಲಿ ಚಪಾತಿ, ಉಪ್ಪಿಟ್ಟು, ದೋಸೆ, ಇಡ್ಲಿಗಳನ್ನು ಮಾಡದಿದ್ದು, ಹೋಟೆಲಿಗೆ ಹೋಗಿ, ಅಲ್ಲಿನ ತಿನಿಸುಗಳ ರುಚಿಯನ್ನು ಯಜಮಾನರು ಮೆಚ್ಚಿದ್ದೆಲ್ಲ ಉಂಟೇಉಂಟಲ್ಲ 😉
ಅತ್ತೆಯ ಹೆಸರು ರಾಮಕ್ಕ, ಸೊಸೆಯ ಹೆಸರು ಪುಷ್ಪ. ರಾಮಕ್ಕತ್ತೆಯನ್ನು ಎತ್ತಿಯಾಡುವ ಅವಕಾಶವನ್ನು ಪುಷ್ಪ ಕಳೆದುಕೊಳ್ಳುವುದಿಲ್ಲ, ಏಕೆಂದರೆ ತಾನು ಅತ್ತೆಯಾದಾಗ ಮೆತ್ತಗಾಗಬೇಕಾಗುತ್ತೆನುತ್ತೆ ಅವಳಿಗೆ ಗೊತ್ತೇ!
ಕುತ್ತನಿತ್ತಿವರುಮೊರ್ವರಿಗೊರ್ವರ್
ಕಿತ್ತುತಿನ್ನುವರು ಕಾಯುತೆ ನಿಚ್ಚಂ|
ತೊತ್ತು ನೀನೆನುತೆ ಬೈದಿರೆ ರಾಮ-
ಕ್ಕತ್ತಿಗುಂ (ರಾಮಕ್ಕ+ಅತ್ತಿ) ಹರಿತಮಿರ್ಪುದು ಪುಷ್ಪಂ||
ಬೈಗುಳದಲ್ಲಿ ಪುಲ್ಲಿಂಗ-ಸ್ತ್ರೀಲಿಂಗಗಳೆಲ್ಲವೂ ನಪುಂಸಕಲಿಂಗವಾಗುತ್ತವೆ; ಪ್ರೀತಿಯಲ್ಲಿಯೂ ಅಷ್ಟೆ. All is fair in war and love.
Hehhehheee
ಅತ್ತೆಯು ಅತ್ತಿಯಾಗಿದ್ದಾಳೆಯೆ ? 🙂
ಧಾರವಾಡದ ಅತ್ತಿ. ಮೈಸೂರಿಗರ ಎಕಾರಗಳೆಲ್ಲ ಉತ್ತರದಲ್ಲಿ ಇಕಾರವಾಗುತ್ತವಲ್ಲ – ಇರವಿ, ನಮೂನಿ, ಬಟ್ಟಿ, ಶಾಲಿ, ಮನಿ, ಸಾಸಿವಿ… ಶ್ರೀ ಕಿಟ್ಟೆಲ್ ಹಾಗೂ ರೆವರೆಂಡ್ ನೀಲಕಂಠರು ಒಪ್ಪಿದ್ದಾರಲ್ಲ!
ಕತ್ತಲಾವರಿಸೆ ಕಳ್ಗುಡಿ ಕಳ್ಳಾಳ್
ಮತ್ತಿನಿಂ ಪಿಡಿದು ತಾವರೆ ಪೂವಂ
ಮುತ್ತಿಡಲ್, ಮೊನೆಯು ಚುರ್ಚಿರೆ ಪೇಳ್ದಂ
ಕತ್ತಿಗುಂ ಹರಿತಮಿರ್ಪುದು ಪುಷ್ಪಂ II
ರಾತ್ರೆ ಕಳ್ಳು ಕುಡುಕ ಕಳ್ಳನೊಬ್ಬ ದಾರಿಯಲ್ಲಿ ಬರುತ್ತಾ ಗೇಟಿನಲ್ಲಿ ಮಾಡಿದ ಕಬ್ಬಿಣದ ತಾವರೆ ಹೂವನ್ನು ಭಾಜಪದ ಚಿನ್ಹೆ ಎಂದು ಪ್ರೀತಿಯಿಂದ ಮುತ್ತಿಟ್ಟ. ಎಸಳಿನ ತುದಿ ಚೂಪಾಗಿದ್ದು ಅದು ಚುಚ್ಚಿ ಕೊಂಡಾಗ ಹೂವು ಹರಿತವಿದೆಯೆಂದ ಭಾವಿಸಿದ .
ಕಲ್ಪನೆಯು ಚೆನ್ನಾಗಿದೆ. ಆದರೆ ವಿವೃತಿಸಾಪೇಕ್ಷವಾದ ಪದ್ಯವಿದು. ಕಬ್ಬಿಣದ ಕಮಲ ಎಂಬುದನ್ನು ಪದ್ಯದಲ್ಲೇ ತಂದು, ಭಾಜಪವನ್ನು ಕೈಬಿಟ್ಟು, ಎರಡುಪದ್ಯಗಳಿಗೆ ಹಿಗ್ಗಿಸಿ ವಿವೃತಿನಿರಪೇಕ್ಷವಾಗಿಸಬಹುದಲ್ಲವೆ?
ಧನ್ಯವಾದಗಳು . ನೀವು ಹೇಳುವುದು ಸರಿಯೇ. ನನಗೂ ಹಾಗೆ ಅನ್ನಿಸಿದೆ . ಗೇಟ್ ಅನ್ನುವ ಆಂಗ್ಲ ಪದವನ್ನು ಬಳಸದೆ ಬರೆಯಲು ಪ್ರಯತ್ನಿಸಿರುವುದರಿಂದ ಹಾಗೆ ಆಗಿದೆ . ”ದ್ವಾರ ” ಅನ್ನುವ ಪದ ಛಂದಸ್ಸಿಗೆ ಒಗ್ಗುವುದಿಲ್ಲ ”ತಾವರೆ ” ಅನ್ನುವಲ್ಲಿ ”ಲೋಹದ” ಅನ್ನುವ ಪದ ಬಳಸಿದರೂ ಇದಕ್ಕಿಂತ ಹೆಚ್ಚು ಸರಿಯಾಗಬಹುದಿತ್ತು. ತಾವರೆ ಎಸಳು ಚೂಪಿರುವುದರಿಂದ ಅದನ್ನೇ ಆರಿಸಿದೆ . ಕುಡುಕನಿಗೆ ಭಾಜಪದ ಮೇಲೆ ಮೋಹ ಜಾಸ್ತಿ ಎಂದಿಟ್ಟುಕೊಳ್ಳಿ . ಎರಡಕ್ಕೆ ಯಾಕೆ ಹಿಗ್ಗಿಸಬೇಕು ?………ಒಂದನ್ನೇ ಬರೆಯಲು ಕಷ್ಟವಾಗಿ ರುವಾಗ 😉
ನಿಮ್ಮಿಂದ ಬಿರುದಾಂಕಿತರಾದ ಶ್ರೀ ಕಿಟ್ಟೆಲ್ ಹಾಗೂ ರೆವರೆಂಡ್ ನೀಲಕಂಠರಂತೆ ನಾನಿಲ್ಲ . ಹಳೆಗನ್ನಡದ ಒಂದೊಂದು ಪದವು ನನಗೆ ಭಾರತದ ರೂಪಾಯಿಯನ್ನು ಪೌಂಡ್ ಗೆ ಪರಿವರ್ತಿಸಿದವರ ಮನೋಸ್ಥಿತಿ . ಈ ಸಲ ಹಾಗಿರಲಿ
ಇದು ಹಳೆಗನ್ನಡ ಕಲಿಯುವ ಉದ್ದೇಶದಿಂದ ಬರೆದುದಾಗಿದೆ . ಪರಿಹಾರಗಳು ಎಷ್ಟು ಹೊಳೆದರೂ ಭಾಷೆಯ ಮೇಲೆ ಹತೋಟಿ ಇಲ್ಲದೆ ಅದೆಲ್ಲವನ್ನೂ ಅಂತೆಯೇ ಬರೆಯುವುದು ಕಷ್ಟ .
ತ್ರಿಪದಿ|| ರೂಪಾಯ್ಗೆ ಒಂದಂತೆ, ಮೋಪಾದ ಬೋಂಡಮಂ
ಸಾಪಾಟು ಮಾಡಲ್ ದಿನವೂವೆ| ಎಕ್ಕಲ್ವೆ
ಭಾಪಿಂದೆ ಪೌಂಡೊಳ್ (0.453592 kg) ಮೈತೂಕಂ|| 😀
ನೀಲಕಂಠ ದೀಕ್ಷಿತ ಗೊತ್ತು. ಕುಲಕರ್ಣಿಯೂ ಗೊತ್ತು. ಇದಾರಿದು ರೆವೆರೆಂಡ್ ನೀಲಕಂಠ?? ಮತಾಂತರ ಹೊಂದಿರುವ ಪಂಡಿತನೇ?
See last post in No.22 chain
ಪೆತ್ತ ತಾಯ ಮೊಗದಂಥರವಿಂದಂ,
ಚಿತ್ತಮಂ ಕದಡೆ, ಶೋಕಿಸೆ ಪುತ್ರಂ, |
ಮತ್ತೆ ಕಾಣಲವಳಂ ಗತಿಸಿರ್ದುಂ,
ಕತ್ತಿಗಿಂ ಹರಿತಮಿರ್ಪುದು ಪುಷ್ಪಂ ||
ಓಹ್
“‘ಓಹ್” ಎಂದರೆ “ಆಹಾ” ದಂತಹ ಪ್ರತಿಕ್ರಿಯೆಯಿರಬಹುದೆಂದು ಭಾವಿಸಿ, ಧನ್ಯವಾದಗಳನ್ನು ಸಲ್ಲಸುತ್ತಿರುವೆನು. 🙂
ಬಿತ್ತೆ ನಲ್ಲೆಯೆದೆ ಮೇಗಡೆ ಪೂ ಮೇಣ್
ಬತ್ತಲೊಲ್ಮೆಯೊಡನೊತ್ತಲದುಂ ತಾ-
ನತ್ತಣತ್ತಳಗಮಂಬಡುತಂದಂ
“ಕತ್ತಿಗುಂ ಹರಿತ ಮಿರ್ಪುದು ಪುಷ್ಪಂ” ।।
**ಅತ್ತಣ(=ಆ ಸಂಬಂಧವಾಗಿ) + ಅತ್ತಳಗ (=ವ್ಯಥೆ)
ಪ್ರೀತಿಯ “ಸುಮ” – “ಚೂರಿ”ಯಂತೆ ಎದೆಗಿರಿದ “ಭಗ್ನ ಪ್ರೇಮದ” ಚಿತ್ರಣ.
“ಬಿತ್ತೆ ನಲ್ಲೆಯೆದೆ ’ಮೇಗಡೆ’ ಪೂ”!? 🙁
ಗೊತ್ತು ಗುಂಡಿಗೆಯ ಮಂದಿರ’ದೊಳ್’ ತಾಂ
ಬಿತ್ತುವಂ ಸುಮಮನೆನ್ನುತೆ ರಾಗನ್ (ಪ್ರೇಮಿ)|
ಬಿತ್ತಿ (ನಲ್ಲೆಯೆದೆ)’ಮೇಗಡೆ’ ಪ್ರಸೂನಮನಾತಂ
ಹತ್ತನಾಯ್ದು (harvest ಮಾಡಿ ಮಾರಿ) ಪಣಮೇಂ ಗಳಿಸಿರ್ಪಂ?!