Jun 052016
 

farmer_rain

  33 Responses to “ಪದ್ಯಸಪ್ತಾಹ ೨೦೫: ಚಿತ್ರಕ್ಕೆ ಪದ್ಯ”

  1. ಮಡಿಲಂ ತನ್ನಯ, ಭರಿಸೆಂ
    ಬೊಡಲಾಸೆಯನವನಿ,ಮೊರೆದಳೇಂ,ದೀನತೆಯಿಂ,
    ಪೊಡವಿಯ ಪಾಲಕನೊಳಮಾ!
    ಸೊಡರಾಗಿರ್ಪ,ಕೃಷಿಯೋಗಿಯುರೆ ನೆರವಿಂದಂ?

  2. ನೀರಡಿಸಿರ್ದ ಪಾಳ್ನೆಲಕಮೀಯ್ವೊಡಮೆನ್ನೊಳೆ ಕಣ್ಕಣಂಗಳೇ
    ತೀರಿದುದಿಂತು ನಿಷ್ಕರುಣಿಯಾಗಸಮೇಕೆಲೆ? ನೀರನುಣ್ಣಿಸಲ್
    ಬಾರದೆ? ಬಾಯಿಯೊಂದರಿನೆ ಬೇಡಿದಪೆಂ, ತನುವೆಲ್ಲ ಬಾಯಿಯಾಗಿಯೇ
    ತೂರುವ ಗೋಳಿನಿಂ ಮೊರೆವ ಭೂಮಿಗೆ ದಕ್ಕದೆ ತಣ್ಪದೆಂದಿಗುಂ?!

  3. ಪ್ರೀತಿಯಂ ಸೃಜಿಸದಿರ್ಪ ಜೀವಮೋ!
    ಜ್ಯೋತಿಹೀನದುರೆ ದೀಪಶಿಖಿಯೋ!
    ಸೂತಕಂವಡೆದ ಶೋಕಗೇಹಮೋ!
    ನೀತಿಯಂ ತೊರೆದ ಬೋಧಮೋ!ಶಿವಾ!!

  4. ಕಾರ್ಯಂಗಳಂ ಬಿಡದೆಕೈಗೊಳುತಿರ್ಪರೆಲ್ಲರ್,
    ಸ್ಥೈರ್ಯಂ ದಿಟಂ ತೊರೆದು,ವಿಹ್ವಲರಾದುದೇಕೌ!
    ಸೂರ್ಯಂ,ನಿಜಂ ಕದನವಾಡಿರೆ ಧಾತ್ರಿಕೂಡಂ,
    ಪರ್ಯಾಪ್ತಗೊಂಡಿತೆಲೆ!ಮಕ್ಕಳಬಾಳ್ತೆ ಕಾಣೌ!
    (ಸೂರ್ಯ(ತಂದೆ) ಮತ್ತು ಭೂಮಿಯ(ತಾಯಿ) ಜಗಳದಲ್ಲಿ ,ಮಕ್ಕಳ ಬಾಳು..)

  5. ಅಭಿನವರಜನೀಕಾಂತ್!
    ಎನ್ನ ಪಾದಾಘಾತಕಿಂತುಂ
    ಬನ್ನಗೊಂಡಿರೆ ಭೂಮಿಯಿಂತಾಂ
    ಇನ್ನದೆಲ್ಲಿಂ ಜಿಗಿದೆನಕಟಕ-
    ಟೆನ್ನುತಲಿ ನೋಡಿರ್ಪನೈ||

    • ಯಾವ ಛಂದಸ್ಸು?

      • ಪಲ್ಲವ – ಗೋವಿನಹಾಡು. ಹಿಂದೆಯೇ ಹೇಳಿಲ್ಲವೆ ನಾನು, ಆರು ಪ್ರಾಸಗಳನ್ನು ಹೊಂದಿಸಿ ಭಾಮಿನಿಯಲ್ಲಿ ರಚಿಸುವ ಬದಲು ಚತುಶ್ಪಾದಿಪಲ್ಲವವೇ ನನಗೆ ಶರಣ್ಯ ಎಂದು?

        • ಇಲ್ಲಿ ಐದು ಪಾದಗಳಿವೆಯಲ್ಲ

          • saaaaaaaaaaar, ಮೊದಲಿನ ಸಾಲು ಶೀರ್ಷಿಕೆ!
            ಅದರದೆಂತು ಗೈದಿಹೆ ಗಣವಿಭಜನೆಯನೆಂದು ಕುತೂಹಲವೆನಗೈ ನೀಲ. ರಜನೀಕಾಂತನನೇ ಸೀಳಿದ ನೀನಾತನಿಗಿಂ ಮಿಗಿಲೈ 😉

  6. ಬಿರುಕುಗಳಂತೆ ಸಾಸಿರದ ಬಾಯ್ಗಳನೇ ತೆರೆಯುತ್ತೆ ಬಾನಿನಿಂ
    ಸುರಿವ ಜಲೋಪಸೇಚನಕೆ ಕಾಯ್ದುದಲಾ ಧರೆಯಿಂತು ನಿಟ್ಟುಸಿ-
    ರ್ಗರೆಯುತೆ ಜೀವಮಂ ತಳೆದುದೇನಸಹಾಯಪರಿಸ್ಥಿತಿ ಪ್ರಚಂ-
    ಡರವಿಕರಂಗಳಿಂ ವರುಣದೇವನೆ ಕಾಪಿಡು ಕಾಪಿಡೆನ್ನುತುಂ

  7. ಪಸುರು ಕೆಂಪಿನ,ನೀಲಿ ಹಳದಿಯ
    ಕುಸುಮ ಪಲ್ಲವ ಫಲಗಳಿಂ ಬಲ್
    ಪೊಸತನಮನಿತ್ತ ಭುವಿಯೊಳ್ ಬಂಜರಿನ ಬೆಳೆಯೇಕೋ!
    ಕಸುವನಮ್ಮಿದ ತೋಳ್ಗಳಿಂ ,ಕೃಷಿ
    ಯೆಸಗಿ ಲೋಕದ ಹಸಿವು ನೀಗುವ
    ಹಸಿತ ಮೊಗದೊಳ್ ಮಸಣ ಮನೆಮಾಡಿರ್ಪುದಿಂದೇಕೋ!

  8. ಮುದುಡಿ ನಿಂದ ಕಮಲಮೊಗ್ಗೆ
    ಯುದಿಸಿ ಪೂವ ರೂಪ ತಳೆಯ
    ಲೆದುರು ನೋಳ್ಪ ವೋಲೆ ,ರವಿಯು ಬರುವ ಹಾದಿಯಂ,
    ಕುದಿವ ಭುವಿಯ ಸುಖ ನಿರೀಕ್ಷೆ
    ಯೊದೆದು ನೀಗಿಸಲ್ ಬುಭುಕ್ಷೆ!
    ಯಿದುವೆ ಬಾಳ ನಡೆಗೆ ರಕ್ಷೆ!ಬೇರೆಯೇನಿದೆ!!
    (ಸುಖದ ನಿರೀಕ್ಷೆಯಿಂದೇ ಬಾಳು ಸಾಗುತ್ತಿದೆ…)

    • ಕಮಲಮೊಗ್ಗೆ ಅರಿಸಮಾಸ. ಕಮಲಮುಕುಲ / ಮುದಿಸಿ… ಅಂತ ಮಾಡಬಹುದು.

  9. ಬರಬಂದುಣಲ್ಕೆಲ್ಲಿ ? ಉರಿಯುತಿಹುದುದರ ತಾಂ
    ಬಿರಿದಿಹುದು ಪೊಡವಿನೀರ್ಕುಡಿಯಲೆಂದು
    ಸೊರಗಿಹುದು ಮೇಘ ಹೋರಾಡಿ ರವಿಜೊತೆಯಲ್ಲಿ !
    ಅರರೆ ಕಾಣ್! ಸಾಗಿಹುದು ದೂರದೂರ

  10. ನೀರಿರದಿರ್ಪ ನೆಲನ ಬಳಿ
    ಸಾರುವರಾರ್,ನೋಳ್ಪರಾರರೆಘಳಿಗೆಯುಂ?ಹಾ!
    ದೂರಮಿದಕ್ಕೆಲ್ಲದರಿಂ,
    ಸಾರರಸವಿಹೀನ ಕಾವ್ಯದೊಲ್ ಶೀಘ್ರಂ ಬಲ್!!

  11. ನೆಟ್ಟ ನೋಟದೊಳೋದುವನೆ ?ಗಗನವ೦ದು ಬ-
    ಚ್ಚಿಟ್ಟ ಸಂದೇಶವನು ಮೋಡದೋಟದೊಳು I
    ತೊಟ್ಟು ನೀರೊದಗದೀ ಕಾಲದೊಳು ಹೊರೆವೆನೇ
    ಹೊಟ್ಟೆ-ಬಟ್ಟೆಗೆ , ಪೋಷಣೆಗೆನಲಿಷ್ಟು II
    ಅಂದು =ಆ ದಿನ

  12. ಬರಿದೆ ನೆಲವನು ಬಿಡದಲುಳಲವ
    ಬಿರಿದ ಪಾದದ ಗುರುತು ಮೂಡುತೆ
    ಧರಣಿಯೊಡಲೊಳು ಬಿರುಕುಕಂಡುದೆ ಬಿಗಿದ ಬೇಗೆಯಲಿ ।
    ಸುರಿಯದಿರ್ದೊಡೆ ಮಳೆಯ ತನಿಹನಿ
    ಹರಿವ ನೆತ್ತರ ಹಸಿರಿನರಿವೆಯೊ-
    ಳೊರಸಲಾದುದೆ ಕೆಂಪು ತಾನದು ಬರದ ಬಾಳಿನಲಿ ।।

    (ಹಸಿರು ವಸ್ತ್ರ ಹೊದೆಯುವ ರೈತನ ಒಡೆದ ಪಾದಗಳ ಕಲ್ಪನೆಯಲ್ಲಿ)

  13. ಬಿರುಕು ಬಿರುಕಾಗಿರ್ಪ ನೆಲವ ತಣಿಸಲ್ಕೆಂದು
    ಬರದ ಮೋಡಗಳ ತಾನೀಕ್ಷಿಸಿರ್ಪಂ
    ಮರೆಯಾದ ಮಗನ ಬರವಿಂಗೆ ಕಾಯ್ವವೊಲು ನೇ
    ಸರನತ್ತ ಹಪಹಪಿಸೆ ನೋಡುತಿರ್ಪಂ

  14. ಎಲ್ಲರಿಗೂ ನಮಸ್ಕಾರ.. ನನ್ನ ಪ್ರಯತ್ನ

    ಚಿತ್ತವಿಡಿ ನಭದತ್ತ ಕರಪಿಡಿದರಸುತಿಹೆಂ
    ಹೊತ್ತು ನೆತ್ತಿಯನೇರಿ ಸುಡುತಿದ್ದರು
    ತುತ್ತಿಗೂ ಕುತ್ತಾದ ಬಿರಿದಡಿಯ ನೆಲದಿಂದೆ
    ಬತ್ತಲಾಗಿಹ ಮನಸ ದರ್ಪದಾರ್ಢ್ಯ ||

    • ತುಂಬ ಚೆನ್ನಾಗಿದೆ. ತಮಗೆ ಸ್ವಾಗತ. 🙂

    • ಪದ್ಯಪಾನಕ್ಕೆ ಸ್ವಾಗತ. ದ್ವಿತೀಯವಿಘ್ನವಾಗದಂತೆ ನೋಡಿಕೊಳ್ಳಿ 🙂 ತದನಂತರ ಪ್ರತಿವಾರವೂ ಕವನಿಸಿ.

  15. ಬರದಲ್ಲಿ ಬೇಯುತಿಹ ನೇಗಿಲಿನ ಯೋಗಿಯುಂ
    ಮರುಗುತುಂ ಮೋಡಕ್ಕೆ ತವಕಿಸಿದನೈ |
    ಕರುಣೆಯೊಳ್ ಭುವಿತಾಯಿ ಸೊರಗಿದಳು ದುಃಖದಲಿ
    ಕರಗಿದಳು ಕಣ್ಣೀರ ಹೊರಸೂಸದೇ ||

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)