ನನ್ನ ಹೆಸರು ರಂ.ಪ.=ರಂಗನಾಥ ಪ್ರಸಾದ್. (ಒಮ್ಮೆ ಭೇಟಿಯಾಗಿ ನೋಡಿ, ನಾನು ರಂಪದಂತೆ ಕುಯ್ಯುತ್ತೇನೋ ಇಲ್ಲವೋ ಎಂದು!). ’ಹಾದಿ’ಯನ್ನು ಪ್ರಿಫಿಕ್ಸ್ ಮಾಡಬೇಕಾಯಿತು, ಏಕೆಂದರೆ ಮನೆಯಲ್ಲಿ ಮಾತ್ರ ರಂಪಾಟ ಮಾಡದೆ ಹಾದಿಬೀದಿಯಲ್ಲಿಯೂ (ಪದ್ಯಪಾನ) ಹಾಗೆ ಮಾಡುವುದರಿಂದ. ಇನ್ನೊಂದು ಕಾರಣವೆಂದರೆ ಇದೂ ಸಹ ’ಮಂಕುತಿ/ಮ್ಮ’ದಂತೆ ಐದುಮಾತ್ರೆಗಳ ಒಂದು ಗಣ ಹಾಗೂ ಒಂದು ಗುರ್ವಕ್ಷರವನ್ನು ಹೊಂದಿದ್ದು, ಪದ್ಯಾಂತ್ಯದ ಅಂಕಿತಕ್ಕೆ ಒದಗಿಬರುವುದು.
ಪರಿವಾರವೆಂಬ ಕೀಲಕವನ್ನುಈ ಸಂಚಿಕೆಯಲ್ಲಿ ಪ್ರಥಮವಾಗಿ ನಾನು ಬಳಸಿದ್ದೆಂದು ಉಲ್ಲೇಖಿಸುವ ಅಗತ್ಯವಿಲ್ಲವಾದರೂ ಹಾಗೆ ಮಾಡಿರುವುದು ನಿಮ್ಮ ಶ್ರೇಷ್ಠತೆಯನ್ನು ಸಾರುತ್ತಿದೆ ಕಾಂಚನಾ. ಪದ್ಯಾಧ್ಯಯನದ, ಪದ್ಯರಚನೆಯ ಉದ್ದೇಶವನ್ನು ನೀವು ಚೆನ್ನಾಗಿ ಅರಿತು ಸಾಧಿಸಿರುವಿರಿ. ನಿಮ್ಮ ಹಿರಿತನಕ್ಕಾಗಿ ಧನ್ಯವಾದಗಳು. ನಿಮ್ಮ ಪದ್ಯ ಚೆನ್ನಾಗಿದೆ. 🙂
ನಾರಿಯು ದುರ್ಬಲಳೆಂಬಾ
ಸೂರಿಗಳಂ ತಾಂ ಮಹಾಜಿರಂಗದೆ ಮಣಿಸ/
ಲ್ಕಾರದ ವಿದ್ಯಾಪಾರಾ
ವಾರಾಂಗನೆಯಂತೆ ವಾಣಿ ವರ್ತಿಸುತಿರ್ಪಳ್ //
ನಾರಿಯು ಬಲಹೀನಳು ಎಂದು ಸಾರುವ ವಿದ್ವಾಂಸರನ್ನು ರಣರಂಗದಲ್ಲಿ(ವಿದ್ವಾಂಸರ ರಣರಂಗದಲ್ಲಿ ) ಸೋಲಿಸಲು ಒಣಗದ ವಿದ್ಯೆಯ ಸಾಗರದಂತೆ ವಾಣಿಯು ವರ್ತಿಸುತ್ತಿದ್ದಾಳೆ.
ತಪ್ಪಿದ್ದಲ್ಲಿ ದಯವಿಟ್ಟು ತಿದ್ದಬೇಕು
ಚೆನ್ನಾಗಿದೆ. ತಾನು ಮಹಾಶಕ್ತಿವಂತನೆಂದು ಪುರುಷನು ಕೊಚ್ಚಿಕೊಳ್ಳುತ್ತಾನಾಗಲೀ, ಆ ’ಶಕ್ತಿ’ ಎಂಬುದು ಫೆಮಿನೈನ್ ಎಂದು ಕಂಡುಕೊಳ್ಳಲಾರ.
ಧನ್ಯವಾದಗಳು ಶಾಕ್ತರೇ 🙂
ಚೆನ್ನಾಗಿದೆ
_/\_
ವಾಣಿ ಯಾರೋ ಮಹಿಳೆಯಂತೆ ಅಲ್ಲವೇ ಈ ಪೂರಣ ಚೆನ್ನಾಗಿದೆ
🙂 thanks
ಚೆನ್ನಾಗಿದೆ.
Thanks sir
ಚಾರುಬ್ರಹ್ಮಪುರಿಯವರ್
ಪಾರಂಗತರಲ್ತೆ ಸರ್ವವಿದ್ಯಾಂಗಗಳೊಳ್|
ಸಾರಸ್ವತಳಿವಳುಂ (ಅಲ್ಲಿನ) ಪರಿ-
ವಾರಾಂಗನೆಯಂತೆ ವಾಣಿ ವರ್ತಿಸುತಿರ್ಪಳ್||
———–
ಭೀರುಗಳೆಲ್ಲರ್ ಲಂಚವ
ಪೀರುತೆ ವಿದ್ಯಾಲಯಂಗಳೊಳ್ ಮೂಢರನುಂ|
ಸೇರಿಸಿಕೊಳ್ಳಲ್ ಪಕ್ಷ-
ದ್ವಾರಾಂಗನೆಯಂತೆ ವಾಣಿ ವರ್ತಿಸುತಿರ್ಪಳ್||
(ಪಕ್ಷದ್ವಾರ=backdoor)
—————
ಈ ಬಾರಿ ಸರಸ್ವತಿಪೂಜೆಯು ಶುಕ್ರವಾರದಂದು ಬಿದ್ದು…
ಆರಾಧನೆ ವಾಣಿಯದೀ-
ಬಾರಿಯುಮಾಗೆ ನವರಾತ್ರದೊಳ್ಶುಕ್ರದಿನಂ|
ಭೂರಿವಿಭೂಷಣದಿಂ ತ-
ದ್ವಾರಾಂಗನೆಯಂತೆ ವಾಣಿ ವರ್ತಿಸುತಿರ್ಪಳ್||
(ತದ್ವಾರ=ಆ ವಾರ ಎಂದರೆ ಶುಕ್ರವಾರ. ಶುಕ್ರವಾರ ಅಂಗನೆ = ಲಕ್ಷ್ಮಿ)
————-
ನೇರನುಡಿಯಂ ತಿಳಿವನೆ ಪು-
ಢಾರಿಯು? ನಾಲಗೆಯೊಳೆಂತು ಪೊರಳುವಳವನಾ?
ಜಾರುತೆ ಬೀಳುತೆ ತಾಂ ಮಧು-
ವಾರಾಂಗನೆಯಂತೆ ವಾಣಿ ವರ್ತಿಸುತಿರ್ಪಳ್||
(ಮಧುವಾರ+ಅಂಗನೆ=Drunk damsel)
_/\_
Thanks
ಪಕ್ಷದ್ವಾರ, ಮಧುವಾರಾಂಗನೆ ….ಚೆನಾಗಿದೆ ಕಲ್ಪನೆ!
Thank you
ಪ್ರಸಾದು ಬಹಳ ಚೆನ್ನಾಗಿದೆ ಎಲ್ಲಾ ಪೂರಣಗಳು
ಚೆನ್ನಾಗಿವೆ. ನಿಮಗೆ ಸರ್ಚ್ ಎಂಜಿನ್ ಪಂಡಿತರು ಎಂದು ಬಿರುದು ಕೊಡಬಹುದು
ಧನ್ಯವಾದಗಳು. ವಿಧ್ಯುಕ್ತವಾಗಿ ಇನ್ನೂ ಕೊಟ್ಟಿಲ್ಲ ಎಂದು ಸೂಚಿಸುತ್ತಿರುವಿರ!?
ಮಹನೀಯರೇ,
ನೀವು ನಿಮಗೆ ಹಾದಿರ೦ಪ ಎ೦ಬ ಅಭಿದಾನವನ್ನು ಯಾಕೆಕೊಟ್ಟದ್ದೆ೦ದು ತಿಳಿಯುತ್ತಿಲ್ಲ!
ಇದರಲ್ಲಿ ಏನಾದರೂ ಗೂಢಾರ್ಥವಿದೆಯೇ!?
ನನ್ನ ಹೆಸರು ರಂ.ಪ.=ರಂಗನಾಥ ಪ್ರಸಾದ್. (ಒಮ್ಮೆ ಭೇಟಿಯಾಗಿ ನೋಡಿ, ನಾನು ರಂಪದಂತೆ ಕುಯ್ಯುತ್ತೇನೋ ಇಲ್ಲವೋ ಎಂದು!). ’ಹಾದಿ’ಯನ್ನು ಪ್ರಿಫಿಕ್ಸ್ ಮಾಡಬೇಕಾಯಿತು, ಏಕೆಂದರೆ ಮನೆಯಲ್ಲಿ ಮಾತ್ರ ರಂಪಾಟ ಮಾಡದೆ ಹಾದಿಬೀದಿಯಲ್ಲಿಯೂ (ಪದ್ಯಪಾನ) ಹಾಗೆ ಮಾಡುವುದರಿಂದ. ಇನ್ನೊಂದು ಕಾರಣವೆಂದರೆ ಇದೂ ಸಹ ’ಮಂಕುತಿ/ಮ್ಮ’ದಂತೆ ಐದುಮಾತ್ರೆಗಳ ಒಂದು ಗಣ ಹಾಗೂ ಒಂದು ಗುರ್ವಕ್ಷರವನ್ನು ಹೊಂದಿದ್ದು, ಪದ್ಯಾಂತ್ಯದ ಅಂಕಿತಕ್ಕೆ ಒದಗಿಬರುವುದು.
ಕೋರಲ್ ಶ್ರದ್ಧೆಯಿನನಿಶಂ,
ಪಾರಂಗತರಾಗೆ ವಿದ್ಯೆಯೊಳ್ ಸಾಧನೆಯಿಂ,|
ಸಾರುತೆ ನತಜನರಂ, ಪರಿ-
ವಾರಾಂಗನೆಯಂತೆ ವಾಣಿ ವರ್ತಿಸುತಿರ್ಪಳ್ ||
( ಶ್ರದ್ಧೆಎಂಬಲ್ಲಿ ಮಹಾಪ್ರಾಣದ ಒತ್ತಕ್ಷರವಿದೆ.ಸರಿಯಾಗಿ ಟಂಕಿಸಲಾಗುತ್ತಿಲ್ಲ )
ಆಹಾ !
ಶ್ರೀನಾಥರಿಗೆ ಧನ್ಯವಾದಗಳು.
ಬಹಳ ಚೆನ್ನಾಗಿದೆ
ಸೋಮರಿಗೆ ಧನ್ಯವಾದಗಳು
ಚೆನ್ನಾಗಿದೆ. ಮಹಾಪ್ರಾಣ “ಧ” ಸರಿಯಾಗೇ ಬಂದಿದೆಯಲ್ಲ
ಕೊಪ್ಪಲತೋಟರಿಗೆ ಧನ್ಯವಾದಗಳು.
ಧಾರೆಯೆರೆವೆ ವಿದ್ಯೆಯೆನ-
ಲ್ಕೀರಸಿಕಂ ಗಾಯಕಂ ನಡೆಸೆ ಗುರುಕುಲಮಂ|
ಮಾರಲ್ಪಣದಾಸೆಗೆ ಛೇ!!
ವಾರಾಂಗನೆಯಂತೆ ವಾಣಿ ವರ್ತಿಸುತಿರ್ಪಳ್|
ನೂರಾರು ಜನರ ಮತಿಯೊಳ್
ಚಾರುಪದವನಿಡುತೆ ಮರ್ತೆ ವೇರೆಡೆಗಂ ತಾಂ|
ಜಾರಲ್ಕುತ್ಸುಕತೆಯೊಳಿಂ
ವಾರಾಂಗನೆಯಂತೆ ವಾಣಿ ವರ್ತಿಸುತಿರ್ಪಳ್|
ಜಾರೆಯರೊಡಿನಿರೆ ದಿನವುಂ
ಮೂರುಂ ಬಿಟ್ಟವನವೊಲ್ ಕುಡಿದು ಕಣ್ಮುಚ್ಚಲ್|
ತೋರಲವನ ಮನದೊಳಗಂ
ವಾರಾಂಗನೆಯಂತೆ ವಾಣಿ ವರ್ತಿಸುತಿರ್ಪಳ್|
ಚಾರುಸ್ವರ ಕಲ್ಪನೆಯಂ
ಧಾರೆಯವೊಲ್ ಪರಿಸೆ, ಪಲವು ವಾದ್ಯಗಳಿಂದಂ|
ಜಾರುಗಮಕಮಂ ಮೂಡಿಸೆ
ವಾರಾಂಗನೆಯಂತೆ ವಾಣಿ ವರ್ತಿಸುತಿರ್ಪಳ್|
ಧೀರತನದೊಳಾಸ್ಥಾನದೆ
ಚೀರಲ್ ಕವಿಯೊರ್ವನಿಂತುಮೆಸಗೆ ಸಮಸ್ಯಾ-
ಪೂರಣದ ಕಡೆಯ ಪಾದಂ –
“ವಾರಾಂಗನೆಯಂತೆ ವಾಣಿ ವರ್ತಿಸುತಿರ್ಪಳ್”|
ಮಾರಲ್ಕಿಟ್ಟ ಸರಕಿನಂ-
ತೂರ ಪೊರಗೆ ಸಂತೆಯೊಳ್ ಬೆಲೆಯಕಟ್ಟಿರೆ ನೂ-
ರಾರು ಬಗೆಯ ಪುಸ್ತಕದೊಳ್
ವಾರಾಂಗನೆಯಂತೆ ವಾಣಿ ವರ್ತಿಸುತಿರ್ಪಳ್|
ಆರ ಸ್ವತ್ತಲ್ಲಮಿವಳ್
ಸಾರಸ್ವತ ಲೋಕದೊಳ್ ಕಲೆಗೆದೈವವಿವಳ್|
ಆರುಂ ಮಣಿದೊಡನೊಲಿವಳ್
ವಾರಾಂಗನೆಯಂತೆ ವಾಣಿ ವರ್ತಿಸುತಿರ್ಪಳ್
ಚೆನ್ನಾಗಿವೆ. ನಿಮ್ಮ ೫ನೆಯ ಪದ್ಯವನ್ನು ಎಲ್ಲಾ ಸಮಸ್ಯಾಪೂರಣಗಳಿಗೂ ಬಳಸಿಕೊಳ್ಳಬಹುದು 🙂
ಚೀದಿ ಎಲ್ಲಾ ಪದ್ಯಗಳು ಚೆನ್ನಾಗಿದೆ, ೫ನೇ ಪದ್ಯದಲ್ಲಿ ಸಮಸ್ಯಾ ಪೂರಣ ಹೇಗಾಯ್ತು ತಿಳಿಯಲಿಲ್ಲ
ಎಲ್ಲವೂ ಚೆನ್ನಾಗಿವೆ. ಹಾದಿರಂಪರಿಗೇ ಪೈಪೋಟಿ ಕೊಡುತ್ತಿದ್ದೀರಾ ಹೇಗೆ?
ಹಾದಿರಂಪನೊಂದಿಗೆ ಬೀದಿಗಿಳಿದಿದ್ದಾರೆ ಎನ್ನೋಣವೆ?
ಧಾರೆಯೊಳತಿಶಯಬಲನೊಳ್,
ಮೇರುವಿನಂತಿರ್ಪ ಧಾರಣಾಕೃತಿಮತಿಯೊಳ್
ಸೇರುತೆ ಪರಿದಿರ್ಪ ಹರಿ-
-ದ್ವಾರಾಂಗನೆಯಂತೆ ವಾಣಿ ವರ್ತಿಸುತಿರ್ಪಳ್
ಧಾರೆ,ಧಾರಣೆಗಳನ್ನು ಸಿದ್ಧಿಸಿಕೊಂಡ ಕವಿಯಲ್ಲಿ, ಹರಿಯುವ ಹರಿದ್ವಾರಾಂಗನೆ=ಗಂಗೆಯಂತೆ ವಾಣಿ ವರ್ತಿಸುತ್ತಾಳೆ ಅನ್ನುವ ಪ್ರಯತ್ನ.
ತಪ್ಪುಗಳಿದ್ದಲ್ಲಿ ದಯವಿಟ್ಟು ತಿಳಿಸಿ.
(ref https://en.wikipedia.org/wiki/Haridwar#History)
ಪದ್ಯ ಚೆನ್ನಾಗಿದೆ ಅನಂತರೆ. ಸಮಾಸಪದಗಳಿರುವಲ್ಲಿ “ಧಾರೆಯೊಳತಿಶಯಬಲನೊಳ್” , “ಧಾರಣಾಕೃತಿಮತಿಯೊಳ್” ಹಾಗೂ ಹಳಗನ್ನಡಕ್ಕಾಗಿ “ಪರಿದಿರ್ಪ” ಎಂದು ಸವರಿದರೆ ಒಳಿತು.
ಧನ್ಯವಾದಗಳು ಶಕುಂತಲಾ ಅವರೆ _/\_.. ಮೂಲದಲ್ಲಿಯೇ ಸವರಣೆಗಳನ್ನು ಮಾಡಿದ್ದೇನೆ
ಕೀಲಕಕಲ್ಪನೆಯು ಚೆನ್ನಾಗಿದೆ
ಧನ್ಯವಾದಗಳು_/\_
ಹೌದು ಹರಿದ್ವಾರಾಂಗನೆ ಕೀಲಕಕಲ್ಪನೆಯು ಚೆನ್ನಾಗಿದೆ
ಧನ್ಯವಾದಗಳು _/\_
ಚೆನ್ನಾಗಿದೆ. ಇದೊಂದು ಹೊಸದಾದ ಕೀಲಕ. ಒಳ್ಳೆಯ ಪರಿಹಾರ
ಧನ್ಯವಾದಗಳು _/\_
ಜಾರದೆ,ಬಾರದೆಯಿಳೆಯೆಡೆ
ಬೀರಿರೆ ನೋಟಮನೊಲವನರಿಯದಾ ಕೆಲಬರ್
ಭೂರಿಯಸೂಯೆಯಿನೆಂದರ್-
“ವಾರಾಂಗನೆಯಂತೆ ವಾಣಿ ವರ್ತಿಸುತಿರ್ಪಳ್”
(ಸರಸ್ವತಿಯ ಒಲವನ್ನು ಕಾಣದವರು ಅಸೂಯೆಯಿಂದ ಹೇಳಿದರು…)
ಚೆನ್ನಾಗಿದೆ ಕಾಂಚನಾ. “ಬೀರಿರೆ ” ಎಂಬುದು ” ಬೀರ್ದಿರೆ ” ಆಗಬೇಕೇನೋ. ಹಾಗಿದ್ದಲ್ಲಿ ,ಪ್ರಾಸಕ್ಕಾಗಿ “ಬೀರಲ್ ” ಎಂದು ಸವರಬಹುದು. “ಬೂರಿ” ಯು “ಭೂರಿ”ಯಾಗಬೇಕಿದೆ.
ಸರಿಪಡಿಸಿದೆ 🙂 ನಿಮ್ಮ ಆಗಮನವು ಸಂತಸ ತಂದಿದೆ .
ಚೆನ್ನಾಗಿದೆ. “ಬೀರಿರೆ” ಸರಿಯಾಗೇ ಇದೆ ”ಬೀರ್ದಿರೆ”ಗಿಂತ “ಬೀರ್ದೊಡೆ” ಹೆಚ್ಚು ಸೂಕ್ತ.
ಧನ್ಯವಾದಗಳು ಕೊಪ್ಪಲತೋಟರೆ.
ಅಸೂಯೆಯನ್ನ ಬಳಸಿದ ಪದ್ಯ ಚೆನ್ನಾಗಿದೆ 🙂
ಮೀರಿದ ನಲ್ಮೆಯೊಳೆಲ್ಲರ
ಶಾರೀರಾಸನದೊಳಿರುತುಮರ್ಚಿನೆಗೊಳ್ಳ
ಲ್ಕಾರಿಂದು ಪೇಳುಗುಮಿದಂ-
“ವಾರಾಂಗನೆಯಂತೆ ವಾಣಿ ವರ್ತಿಸುತಿರ್ಪಳ್”
(ಎಲ್ಲರ ಹೃದಯಮಂದಿರದಲ್ಲಿ ನೆಲೆಸಿ, ಪೂಜಿಸಿಕೊಳ್ಳುತ್ತಿರುವಾಗ, ಯಾರುಹೀಗೆ ಹೇಳುವರು-“ವಾರಾಂ……ವರ್ತಿಸುತಿರ್ಪಳ್”)
(ಕೀಲಕವು ಶಕುಂತಲಾರಿಂದ ಬಳಸಲ್ಪಟ್ಟಿರುತ್ತಲೂ, ನನ್ನ ಪದ್ಯವನ್ನೂ ಬರೆದಿದ್ದೇನೆ:-))
ಬೀರುತುಮಕ್ಕರವೆಳಕಂ
ತೋರುವವೊಲ್ ಸರಿಯ ವಟ್ಟೆಯನೆನುತೆ ಚೆಲ್ವಿಂ,
ಕೀರುತಿವೆತ್ತ ಪಿರಿಯ ಪರಿ
ವಾರಾಂಗನೆಯಂತೆ ವಾಣಿ ವರ್ತಿಸುತಿರ್ಪಳ್!
(ಅಕ್ಷರಬೆಳಕನ್ನು ಚೆಲ್ಲಿ, ತಾನು ಸರಿಯಾದ ಹಾದಿಯನ್ನು ತೋರುವೆನೆನುತ್ತ, ಪರಿವಾರದ ಹಿರಿಯಳಂತೇ ವಾಣಿ ವರ್ತಿಸುತ್ತಿರುವಳು)
ಚೆನ್ನಾಗಿದೆ, ಮೊದಲನೆ ಪದ್ಯದ ಎರಡನೇ ಪಾದದ ಎರಡನೆಯ ಗಣ ಜಗಣವಾಗಿದೆ ಸವರಿಸಿರಿ
ಪರಿವಾರವೆಂಬ ಕೀಲಕವನ್ನುಈ ಸಂಚಿಕೆಯಲ್ಲಿ ಪ್ರಥಮವಾಗಿ ನಾನು ಬಳಸಿದ್ದೆಂದು ಉಲ್ಲೇಖಿಸುವ ಅಗತ್ಯವಿಲ್ಲವಾದರೂ ಹಾಗೆ ಮಾಡಿರುವುದು ನಿಮ್ಮ ಶ್ರೇಷ್ಠತೆಯನ್ನು ಸಾರುತ್ತಿದೆ ಕಾಂಚನಾ. ಪದ್ಯಾಧ್ಯಯನದ, ಪದ್ಯರಚನೆಯ ಉದ್ದೇಶವನ್ನು ನೀವು ಚೆನ್ನಾಗಿ ಅರಿತು ಸಾಧಿಸಿರುವಿರಿ. ನಿಮ್ಮ ಹಿರಿತನಕ್ಕಾಗಿ ಧನ್ಯವಾದಗಳು. ನಿಮ್ಮ ಪದ್ಯ ಚೆನ್ನಾಗಿದೆ. 🙂
ಚೆನ್ನಾಗಿದೆ. “ಶಾರೀರಾಸನದೊಳಿರುತುಂ….” ಎಂದು ಮಾಡಬಹುದು
ಬರೆಯುವಾಗಾಗಲೀ ಮಾತನಾಡುವಾಗಾಗಲೀ ನಿಧಾನಗತಿಯಲ್ಲಿ ಚಲಿಸುವ ವಾಣಿಯು, ಆಲೋಚನೆಯಲ್ಲಿ ನಾಗಾಲೋಟದಲ್ಲಿ (horse=ಪರುದ್ವಾರ) ಸಾಗುತ್ತಾಳೆ!
ಚೀರುತ್ತಿದ್ದೊಡಮುಂ ನಾಂ
ಸಾರುವಳಲ್ತೆಲೆ ನಿಧಾನಗತಿಯಿಂ ಮೇಣಿಂ|
ದೂರಾಲೋಚನೆಯೊ! ಪರು-
ದ್ವಾರಾಂಗನೆಯಂತೆ ವಾಣಿ ವರ್ತಿಸುತಿರ್ಪಳ್||
ನಾರಿಯಿವಳಾಗೆ ಕುಹುಕವೆ?
ವಾರಾಂಗನೆಯಂತೆ ವಾಣಿ ವರ್ತಿಸುತಿರ್ಪ-
ಳ್ದಾರಿ ವಿಡುತುಮೆಂಬಾ!ಹಾ!
ತೋರುತಿರೆ ಜ್ಞಾನಮಾರ್ಗಮಂ ,ಕರಮಿತ್ತುಂ!!
(ಹೆಣ್ಣಿವಳೆಂದು ,ದಾರಿಯನ್ನು ತೊರೆದ ವಾರಾಂಗನೆಯೆಂಬ ಕುಹಕವೇ?? ಎಲ್ಲರಿಗೂ ಜ್ಞಾನಪಥ್ಹವನ್ನು ತೋರುತ್ತಿರುವಾಗ,ಕೈ ಪಿಡಿದು)
ಇದೇನು ಸಹೋದರಿ ಸ್ತ್ರೀವಾದದ ಪದ್ಯ 😀
ತಾರೆಯವೊಲ್ ಮೆರೆಯೆ ಜನರ್,
ಪಾರಮಿರದ ಸದ್ಗುಣಂಗಳಂ ಕರುಣಿಸುತುಂ,|
ವಾರಿಸಿ ತಮಮಂ, ಶ್ರೇಷ್ಠನಿ-
ವಾರಾಂಗನೆಯಂತೆ ವಾಣಿ ವರ್ತಿಸುತಿರ್ಪಳ್ ||
( ನಿವಾರಾಂಗನೆಯೆಂಬ ಕೀಲಕವು ಈ ಮೊದಲಿನ ಪದ್ಯಗಳಲ್ಲಿಇದುವರೆಗೂ ಬಳಕೆಯಾಗಿಲ್ಲದ ಕಾರಣ ಈ ಪದ್ಯವನ್ನು ಬರೆದಿರುವೆ.)
ಮೀರಿರೆ ಪದ್ಯದ ಪಾನಂ
ಪೀರುತಲಾಸ್ವಾದಿಸುತ್ತೆ ಸೂರೆಯ ಗೈವೀ
ಚಾರುಕವಿಗಳಂತರದೊಳ್
ವಾರಂಗನೆಯಂತೆ ವಾಣಿ ವರ್ತಿಸುತಿರ್ಪಳ್
_/\_
ಧನ್ಯವಾದಗಳು. ತಮ್ಮ ಭಾವನೆಯನ್ನು ಮಾತ್ರ ಸ್ವೀಕರಿಸುತ್ತೇನೆ, ನಮಸ್ಕಾರವನ್ನಲ್ಲ. ಕಾರಣ, ನಾನು ಕವಿಯಲ್ಲ, ಪದ್ಯಕಾರ ಮಾತ್ರ!
ಸಾರಸ್ವತ ಲೋಕದೆ ತಾಂ
ವಾರಿಜಭವಸತಿ ಸರಸ್ವತಿ ಗಡ ! ಮರುಳ್ಗೊ-
ಳ್ದಾರ “ಬ್ರಹ್ಮಜ್ಞಾನ”ಕೆ
ವಾರಾಂಗನೆಯಂತೆ ವಾಣಿ ವರ್ತಿಸುತಿರ್ಪಳ್ !!
ಬ್ರಹ್ಮನ ಪತ್ನಿ ಸರಸ್ವತಿ – ಯಾರ “ಬ್ರಹ್ಮಜ್ಞಾನ”ಕ್ಕೆ ಮರುಳಾದಳೋ ?!!
ಮಾರಾಟಕ್ಕೆನುತನಿಶಂ
ನೂರೆನೆ ತೊದಲ್ನುಡಿಗಳಯ್ದು ನುಡಿದಪ ಪಣಿಕಂ-
ಗಾರಾಸರೆಯೀವರ್ ಛೀ
ವಾರಾಂಗನೆಯಂತೆ ವಾಣಿ ವರ್ತಿಸುತಿರ್ಪಳ್
ವೈರಿಯ ಪೊಗಳ್ದಪುದಂತೆ ಪಿ-
ತೂರಿಯನೆಸೆವರನುಮಂತೆ ಪೊಗಳ್ದಪರ್, ಹಳಿಯಲ್
ಭಾರತಮೆನೆ ಲೇಖಕರೊಳ್
ವಾರಾಂಗನೆಯಂತೆ ವಾಣಿ ವರ್ತಿಸುತಿರ್ಪಳ್