ಪ್ರಕೃತಿಯ ವಿಕೋಪವು ಬಹಳ ವೇಗವುಳ್ಳದ್ದೆಂದು ಅದನ್ನು ಮೀರಿದ ವೇಗದಿಂದ, ನದಿಯ ತೀರದಲ್ಲಿ ಬೇಟೆಗೆಂದು ಕಾದುಕುಳಿತ ಮೊಸಳೆಯ ಯಶವೆಂಬ ಹಂಸಕ್ಕೆ ಮೋಡದಂತಿರುವ (ಮೋಡ ಮುಸುಕಿದಾಗ ಹಂಸಗಳು ಹಾರಿಹೋಗುತ್ತವೆ) ಧೂಳನ್ನು ಆಕಾಶದೆಲ್ಲೆಡೆ ಪಸರಿಸುತ್ತಾ ಸಾಗಿರಲು, ಇದ್ಯಾವುದೋ ಅರಣ್ಯ ಎಂಬ ಸೀಮೆಗೆ ಸೇರಿದ ಸೈನ್ಯವೋ ಎಂಬಂತೆ ಕಾಡೆಮ್ಮೆಗಳ ಹಿಂಡು ತೋರಿದೆ.
True, but very soon he will pick up on prAsa. That is how I learnt versification. Nevertheless, it is better to do such exercise in private, and post fully prosodic verses here. Here is a way to hasten it. First compose a verse without prAsa (as done above), and immediately thereafter make prAsa adjustments. E. g. your verse may be modified thus:
ಪಸಿವಿನ ಬೇಗೆಯ ತಾಳದೆ ಸಾರ್ದೆವು
ಪಸುರಿರ್ಪಪಗೆಯ ದಡಮನ್ನುಂ| (ಅಪಗೆ=ನದಿ)
ಕಸುವದು ಜಠರಕೆ ಮರಳುವ ಮುನ್ನಮೆ
ಮೊಸಳೆಯ ಪೊಡೆಯನು ಸೇರಿದೆವು||
That one wildebeest leaping high
ಬೆದರಿ ಧಾವಿಸುತಿದ್ದೊಡೇನು ಕಾನನಮಹಿಷ
ಹುದುಗಿಸಿಡುಗೇಂ ತೋರ್ಗೊಳದೆ ದೈಹಿಕಂ!
(Depleting)ಭಿದುರಸಂತತಿಸಂಖ್ಯೆಯಂ ಪೆಚ್ಚಿಸಲುಮಿಂತು
ಬೆದೆಯಿಂದೆ ವಿಶ್ವಸಂಕಲ್ಪದೀಕ್ಷಂ!!
ಯಮ ತನ್ನ ವಾಹನವಾದ ಕೋಣದ ಸಂತಾನಾಭಿವೃದ್ಧಿಗಾಗಿ ಎಮ್ಮೆಗಳ ಹಿಂಡನ್ನು ನರಕಕ್ಕೆ ಸಾಗಿಸುವ ಸನ್ನಾಹದಲ್ಲಿದ್ದಾಗ, ಮೊಸಳೆ ಎಮ್ಮೆಯೊಂದನ್ನು ನುಂಗಲಾಗಿ, ಆ ಎಮ್ಮೆಯೇ ಮೊದಲು ನರಕಕ್ಕೆ ತಲುಪಿ, ಕೋಣನನ್ನು ಸೇರಿದಳು
The size of a lion/tiger herd is but a fraction of the massive wildebeest herd.
(Rag/ಚಿಂದಿ)ಚೀವರಂ ವೃಷಭ(/ಮಹಿಷ)ಪಾದಘಾತದಿಂ
ಸೋವಿಸಿಂಹ-ಪುಲಿವಿಂಡುಮೆಂದಿಗುಂ|
ದೈವಕಲ್ಲದೆಲೆ ಅನ್ಯಕಿಂತುಮೇಂ
ಸಾವ ಲೆಕ್ಕಿಸದೆಲೋಡುಗುಂ ಮಿಗಂ||
ಅದು beastಎಂಬುದನಿಂತು beest ಎನುತೆ ನೀಂ ಸೋಮಾರ್ಯ ತಪ್ಪಿಂದಮೊ-
ಪ್ಪದ ಪಾಂಗಿಂ ಬರೆದಿರ್ಪ ದರ್ಪದೆಳೆಯಂ ಕಾಣುತ್ತುಮಾ ಪ್ರಾಣಿಗ-
ಳ್ಗೊದವಿರ್ಪತ್ಯವಮಾನದಿಂ ನೆರೆ ಪ್ರಕೋಪಂದಾಳಿರಲ್ಕೊಂದದೋ
ಮದದಿಂದೀ ಪದಮಂ ಬಿಸುಟ್ಟು ವಿಹಗತ್ವಂಗೊಳ್ಳೆ ಪಾರಿರ್ಪುದೇಂ! 🙂
ನಂತರ ತಿಳಿದುಬಂದ ಸಂಗತಿ, ಅದು ಸರಿಯಾದ ಪದ ಎಂಬುದು 🙂 ಆದರೂ ಪದ್ಯವನ್ನು ಉಳಿಸಿದ್ದೇನೆ.
ಬುದ್ಧಿವಂತರದಿಹುದು ಪರಿಮಾಣಮೆಂದಿಗುಂ
ಸಿದ್ಧಾಂತಮೆಂಬಂತೆ ಪಂಚಾಂಶಮೇ(5%)|
ಬುದ್ಧಿಮಾಂದ್ಯರೆ ಪೆರ್ಚು, ಎಗರಿರ್ಪುದೊಂದೆ ಮಿಗ
(indolent)ಮಿದ್ಧವೃಂದದೊಳೊರ್ವನಾದೆಯೈ ನೀಂ||
ನುಗ್ಗುತಿದೆ ರೋಷದಲಿ ಕಾಡೆಮ್ಮೆಗಳ ಹಿಂಡು
ತಗ್ಗಿಸಲು ಜೀವನದ ಸಂಕಷ್ಟವಂ |
ಕಗ್ಗವಾಗಿಹ ಚಣಿಕಸೊಗದ ಬೆನ್ನಟ್ಟಿ ನರ
ಕುಗ್ಗಿಸಿರ್ಪನು ತನ್ನ ಚಿತ್ತಬಲವಂ ||
(ವನಪ್ರಾಣಿಗಳಾದರೋ ತಮ್ಮ ಜೀವನವನ್ನು ನಡೆಸಲು ನುಗ್ಗಿ ನಡೆಯುತಿದೆ=migration.
ಆದರೆ ಮನುಜನು ಕೈಗೆಟುಕದ ಕ್ಷಣಿಕ ಸುಖದ ಬೆನ್ನಟ್ಟಿ ತನ್ನ ಆತ್ಮಬಲವನ್ನೂ ಕುಗ್ಗಿಸಿಕೊಂಡಿದ್ದಾನೆ!)
Unlike that of the rest, one wildebeest’s path is upward!
ಪಥಕ್ರಮಣಮೆಂಬುದುಂ ಬರಿದಿತಸ್ತತಂ ಪೋಪುದೇಂ?
ತಥಾಗತನ ವೊಲ್ ವಲಂ ಕ್ರಮಿಸುಗುಂ ಪರಂ ಮಾರ್ಗಮಂ|
ಯಥಾರ್ಥಬಲರಿರ್ಪರೈ ಪಲರು ಧನ್ಯರಲ್ಲಿಲ್ಲಿ, ಮೇಣ್
ಕಥಾನಕವು ಶೇಷಮೆಲ್ಲರದು ನಿಮ್ನಮೇ ಪ್ರಾಯಿಕಂ||
ಚಟುಳಂ ದಲ್ ಪ್ರಕೃತಿಪ್ರಕೋಪಮೆನುತುಂ ತದ್ವೇಗಮಂ ಮೀರುತುಂ
ತಟಿನೀತೀರದೊಳಿರ್ಪ ನಕ್ರದ ಯಶಃಕಾದಂಬಕಾದಂಬಿನೀ /
ಘಟೆಯಂ ಪೋಲ್ವವೊಲಂತರಿಕ್ಷಮನೆ ಧೂಳಿಂ ಮುರ್ಚಿ ಸಾಗಲ್ಕೆ ತಾ
ನಟವೀಸೀಮೆಯ ಸೈನ್ಯದಂತೆಸೆದುದೈ ಕಾಡೆಮ್ಮೆವಿಂಡೀಗಳಾ//
ಪ್ರಕೃತಿಯ ವಿಕೋಪವು ಬಹಳ ವೇಗವುಳ್ಳದ್ದೆಂದು ಅದನ್ನು ಮೀರಿದ ವೇಗದಿಂದ, ನದಿಯ ತೀರದಲ್ಲಿ ಬೇಟೆಗೆಂದು ಕಾದುಕುಳಿತ ಮೊಸಳೆಯ ಯಶವೆಂಬ ಹಂಸಕ್ಕೆ ಮೋಡದಂತಿರುವ (ಮೋಡ ಮುಸುಕಿದಾಗ ಹಂಸಗಳು ಹಾರಿಹೋಗುತ್ತವೆ) ಧೂಳನ್ನು ಆಕಾಶದೆಲ್ಲೆಡೆ ಪಸರಿಸುತ್ತಾ ಸಾಗಿರಲು, ಇದ್ಯಾವುದೋ ಅರಣ್ಯ ಎಂಬ ಸೀಮೆಗೆ ಸೇರಿದ ಸೈನ್ಯವೋ ಎಂಬಂತೆ ಕಾಡೆಮ್ಮೆಗಳ ಹಿಂಡು ತೋರಿದೆ.
Nice one!! antarikShadoLu needs to be made of halagannaDa form.
Thanks for the suggestion. HaLagannaDified. Is it ok now?
ಹಸಿವಿನ ಬೇಗೆಯ ತಾಳದೆ ಹೋದೆವು
ದೂರದ ಪಚ್ಚೆಯ ಹಂಬಲಿಸಿ
ಸೊರಗಿದ ಜಠರವ ತುಂಬುವ ಭರದಲಿ
ಮಾರಿಯ ನಕ್ರನೊಳಪ್ಪಿದೆವು
ನಕ್ರ ಮಸಳೆ
ಚೆನ್ನಾಗಿದೆ. (ಜಠರ, ಭರದಲಿ)
ಧನ್ಯವಾದಗಳು
ಚೆನ್ನಾಗಿದೆ!
ಆದರೆ, ಚತುರ್ಮಾತ್ರಾ ಚೌಪದಿಯ ಲಕ್ಷಣಕ್ಕೆ ಎಳ್ಳಷ್ಟೂ ಚ್ಯುತಿ ಇಲ್ಲದಿದ್ದರೂ ಆದಿಪ್ರಾಸವಿಲ್ಲದ್ದು ಕೊರತೆಯೆನಿಸುತ್ತದೆ !!
True, but very soon he will pick up on prAsa. That is how I learnt versification. Nevertheless, it is better to do such exercise in private, and post fully prosodic verses here. Here is a way to hasten it. First compose a verse without prAsa (as done above), and immediately thereafter make prAsa adjustments. E. g. your verse may be modified thus:
ಪಸಿವಿನ ಬೇಗೆಯ ತಾಳದೆ ಸಾರ್ದೆವು
ಪಸುರಿರ್ಪಪಗೆಯ ದಡಮನ್ನುಂ| (ಅಪಗೆ=ನದಿ)
ಕಸುವದು ಜಠರಕೆ ಮರಳುವ ಮುನ್ನಮೆ
ಮೊಸಳೆಯ ಪೊಡೆಯನು ಸೇರಿದೆವು||
That one wildebeest leaping high
ಬೆದರಿ ಧಾವಿಸುತಿದ್ದೊಡೇನು ಕಾನನಮಹಿಷ
ಹುದುಗಿಸಿಡುಗೇಂ ತೋರ್ಗೊಳದೆ ದೈಹಿಕಂ!
(Depleting)ಭಿದುರಸಂತತಿಸಂಖ್ಯೆಯಂ ಪೆಚ್ಚಿಸಲುಮಿಂತು
ಬೆದೆಯಿಂದೆ ವಿಶ್ವಸಂಕಲ್ಪದೀಕ್ಷಂ!!
ಜವನೇ ವಾಹನಸಂತತಿಪ್ರಗತಿಗೆಂದೀರಾಜಿಯಂ ತಂದಿರ
ಲ್ಕವನಂ ಮೆಚ್ಚಿಸಲಾನುಮುಂದೆನುತುಮೀ ಕಾಡೆಮ್ಮೆಗಳ್ ಸಂದಿರಲ್
ಸವಿಯಂ ನೋಡುವೆನೆನ್ನುತುಂ ಮೊಸಳೆತಾನೊಂದೆಮ್ಮೆಯಂ ನುಂಗಿರ
ಲ್ಕವಳೇ ಸೇರುತೆ ನಾರಕಕ್ಕೆ ಮೊದಲಾ ಗಂಡೆಮ್ಮೆಯನ್ನೈದಿದಳ್
ಯಮ ತನ್ನ ವಾಹನವಾದ ಕೋಣದ ಸಂತಾನಾಭಿವೃದ್ಧಿಗಾಗಿ ಎಮ್ಮೆಗಳ ಹಿಂಡನ್ನು ನರಕಕ್ಕೆ ಸಾಗಿಸುವ ಸನ್ನಾಹದಲ್ಲಿದ್ದಾಗ, ಮೊಸಳೆ ಎಮ್ಮೆಯೊಂದನ್ನು ನುಂಗಲಾಗಿ, ಆ ಎಮ್ಮೆಯೇ ಮೊದಲು ನರಕಕ್ಕೆ ತಲುಪಿ, ಕೋಣನನ್ನು ಸೇರಿದಳು
chennaagide
ಧನ್ಯವಾದಗಳು_/\_
The size of a lion/tiger herd is but a fraction of the massive wildebeest herd.
(Rag/ಚಿಂದಿ)ಚೀವರಂ ವೃಷಭ(/ಮಹಿಷ)ಪಾದಘಾತದಿಂ
ಸೋವಿಸಿಂಹ-ಪುಲಿವಿಂಡುಮೆಂದಿಗುಂ|
ದೈವಕಲ್ಲದೆಲೆ ಅನ್ಯಕಿಂತುಮೇಂ
ಸಾವ ಲೆಕ್ಕಿಸದೆಲೋಡುಗುಂ ಮಿಗಂ||
ಮುಗಿಬಿದ್ದು ಸಾಗಿದಪರೂಪ ಮಿಗಗಳ ಹಿಂಡ
ಬಗೆಯು, ನಾಗಾಸಾಧುಗಳ ಕುಂಭಮೇಳಾ !
ಬಿಗಿತ ಕಾಲ್ತುಳಿತಗಳು ಜರುಗಿ ಸಂದಿರುವೊಂದು
ಜಿಗಿತಮದು, ಜೀರುಗುಣಿಕೆಯದೆತ್ತ ಪೇಳಾ ?!
ಈ ಅದ್ಭುತ ಚಿತ್ರ ಕಂಡೊಡನೆ – “ಕುಂಭಮೇಳ”ಕ್ಕೆಂದೇ ಹಿಂಡು ಹಿಂಡಾಗಿ ಬರುವ “ನಾಗಾ”ಸಾಧುಗಳನ್ನು – ಆಗ ನಡೆಯುವ ಕಾಲ್ತುಳಿತವನ್ನು ನೆನಪಿಸಿತು . ಹಾಗಾಗಿ ಈ ಪದ್ಯ !!
ಚೆನ್ನಾಗಿದೆ. ಪೇಳಾ is okay, but ಕುಂಭಮೇಳ will do, for the ಅರ್ಧಾಂತ್ಯಾಕ್ಷರ will be reckoned as guru.
OKay Prasad SIr, dhanyavaadagalu.