ಶ್ರಾವಣವೆಂದರೆ ಹಬ್ಬಸಾಲು ಶುರು. ಒಂದು ದಿನ ಮುಂಚೆಯೇ ಸಂಭ್ರಮಾಚರಣೆಯನ್ನು ಆರಂಭಿಸಿದರೇನು ತಪ್ಪು?
ಕಂದರೇನಳದೆಲಿರ್ಪರೇನಹಾ
“ಚಂದದಾಟಿಕೆಯ ನಾಳೆ ಕೊಳ್ಳೆ”ನಲ್|
ಸಂದುವೆಂತೊ ದಿನ, ತಾಳೆವಿನ್ನು ನಾಂ
ಇಂದೆ ಶ್ರಾವಣಮನಾರಭಿರ್ಪೆವೈ||
Near the Chota Kurukshetra (the battleground where the Gograhana war was waged), there is a cave named after Bheema. Many natives of Virätanagara tehsil still pay obeisance to Bheema. Keechaka would coerce every woman that he could lay hands upon. As Bheema had killed him, the honour of other men was saved from being forfeited. People visit here for the first tonsure of the male progeny. Even today, newlywed couples go to Bheema cave temple and perform pooja. Ask a groom as to the purpose of his visit, and he will invariably say, “Bheema will give me the strength to kill any man that misbehaves with my wife.”
ವಂಶಸ್ಥವಿಲ|| ವೃಕೋದರಂ ನಾರಿಗಮಷ್ಟೆ ಪೂಜ್ಯನೇಂ
ಸುಕಾಲದೊಳ್* ಪುಂಗಳು ಪೂಜಿಪರ್ ವಲಂ|
ಬಕಾಸುರಾಹಂತಗುಹಾಂತಮಂದಿರ-
ಕ್ಕಕಾಲಮಿಲ್ಲಂ ನೆರೆವಂಥ ಮಂದಿಗಂ||
* ನವವಿವಾಹಿತರು, ಹುಟ್ಟುಕೂದಲು ಇತ್ಯಾದಿ
ಶ್ರಾವಣವೆಂದರೆ ಹಬ್ಬಸಾಲು ಶುರು. ಒಂದು ದಿನ ಮುಂಚೆಯೇ ಸಂಭ್ರಮಾಚರಣೆಯನ್ನು ಆರಂಭಿಸಿದರೇನು ತಪ್ಪು?
ಕಂದರೇನಳದೆಲಿರ್ಪರೇನಹಾ
“ಚಂದದಾಟಿಕೆಯ ನಾಳೆ ಕೊಳ್ಳೆ”ನಲ್|
ಸಂದುವೆಂತೊ ದಿನ, ತಾಳೆವಿನ್ನು ನಾಂ
ಇಂದೆ ಶ್ರಾವಣಮನಾರಭಿರ್ಪೆವೈ||
ಬಾಳ್ಗಳ್ತಲಂ ಕಳೆಯುತಂ
ತೇಳ್ಗೆಯ ಸೊಗಮೀವ ರಾಜನಾಗಲ್ ಪತಿತಾಂ
ಕೂಳ್ಗಜ್ಜಾಯಂಗಳನಹ
ಸೂಳ್ಗೆಡವುತೆ ಪರಿವುದಳ್ಕರೆಯಮೃತವೆ ಮೊದಲ್!!
(ಚಂದ್ರನಂತೇ ಏಳ್ಗೆಯಿಂದ ಬಾಳಲ್ಲಿ ಬೆಳಕೀವನಾದರೆ, ತಿಂಡಿ ತಿನಿಸುಗಳ ಸರದಿಯನ್ನು ಕೆಡವಿ ಅಕ್ಕರೆಯೇ ಮೊದಲ್ ಸ್ಥಾನವನ್ನು ಪೊಂದುಗುಂ)
ಗಂಡನ ಪೂಜೆ – Annually Vs. Weekly
ಭೀಮಪರ್ವವನು ಮಾಳ್ಪರಲ್ತೆ ಕೆಲರೊಂದುವರ್ಷಕೊಮ್ಮೆ
ಕಾಮಿನಿಯರನ್ಯರೆಂತೊ ಪೂಜಿಪರು ಪತಿಯ ವಾರವಾರಂ|
ಪ್ರೇಮಿಯೀರ್ವರೊಳು ಮೇಲುಮಿವಳಿಹಳ್ ಪತಿಯೊಳಿವಳು ಕಾಂಬಳ್
ನೇಮದಿಂ ಮನೆಯೊಳೇ ಶನೈಶ್ಚರನ, ದೂರಮಿರಲು ಗುಡಿಯು!!
Strongly vs weakly – maaduva Pooje!!
You mean Bheema is strong and Shani is weak 🙁
Gandanige salluva nitya pooje & varshada vishesha pooje bagge !!
’ಭೀಮನ ಅಮಾವಾಸ್ಯೆ’ ಎಂದರೆ ಅದು ಭೀಮನ ಆಸ್ತಿ ಎಂದಾಗುತ್ತದೆ. ವಸ್ತುತಃ ಅದು ಭೀಮಾಮಾವಾಸ್ಯೆ ಎಂದಾಗಬೇಕು, ಈ ಪರ್ವವು ಅದನ್ನು ಆಚರಿಸುವ ಸ್ತ್ರೀಯರದು; ಭೀಮನದಲ್ಲ!
ಮತ್ತಮಯೂರಮ್||
ಏಕೆಂದುಂ ನೀಂ ’ಭೀಮನಮಾವಾಸ್ಯೆ’ಯದೆಂಬೈ
ನೈಕಂಸ್ತ್ರೀರತ್ನರ್ಗಿದು ಸೇರ್ಗುಂ ದಿನರತ್ನಂ(festival)|
ಸಾಕೆಂಬೆಂ ಬೇಡೈ ತೆರದೀ ವ್ಯಾಕೃತಿದೋಷಂ|
’ಭೀಮಾಮಾವಾಸ್ಯಾ’ ಬರಿದೇ ಭೀಮನದಲ್ಲೈ||
ಮದುವೆಯಾದ ಮಹಿಳೆಯರು ಪತಿಯ ಆಯುಷ್ಯವೃದ್ಧಿಗಾಗಿ ಈ ವ್ರತವನ್ನು ಆಚರಿಸಿದರೆ, ಮದುವೆಯಾಗದ ಯುವತಿಯರು ತಮಗೆ ಒಳ್ಳೆಯ ಪತಿಯು ಸಿಗಲೆಂದು ಈ ವ್ರತವನ್ನು ಆಚರಿಸುವರು.
ಕನ್ಯೆಯೊರ್ವಳುಮಾಚರಿಸುತುಮೀ ಪರ್ವಮಂ
ಮಾನ್ಯವರನಂ ಭೀಮನಿಂ ಬೇಡಿಹಳ್|
ವಿನ್ಯಾಸದಿಂ ಬೇಡಿಹಳುಮೆಂದು ತಿಳಿಯಳೈ
ಅನ್ಯತ್ರಮಿನ್ನೊರ್ವಳಿದುವೆ ವರನಂ!!
Near the Chota Kurukshetra (the battleground where the Gograhana war was waged), there is a cave named after Bheema. Many natives of Virätanagara tehsil still pay obeisance to Bheema. Keechaka would coerce every woman that he could lay hands upon. As Bheema had killed him, the honour of other men was saved from being forfeited. People visit here for the first tonsure of the male progeny. Even today, newlywed couples go to Bheema cave temple and perform pooja. Ask a groom as to the purpose of his visit, and he will invariably say, “Bheema will give me the strength to kill any man that misbehaves with my wife.”
ವಂಶಸ್ಥವಿಲ|| ವೃಕೋದರಂ ನಾರಿಗಮಷ್ಟೆ ಪೂಜ್ಯನೇಂ
ಸುಕಾಲದೊಳ್* ಪುಂಗಳು ಪೂಜಿಪರ್ ವಲಂ|
ಬಕಾಸುರಾಹಂತಗುಹಾಂತಮಂದಿರ-
ಕ್ಕಕಾಲಮಿಲ್ಲಂ ನೆರೆವಂಥ ಮಂದಿಗಂ||
* ನವವಿವಾಹಿತರು, ಹುಟ್ಟುಕೂದಲು ಇತ್ಯಾದಿ
ನೆನ್ನೆಮೊನ್ನೆ ಬಂದ ಗಂಡಂಗೆ ಆಟೊಂದು ಭೋಮಾನ ಮಾಡದ್ನ ಏಟೂಂತ ತಡ್ಕಂಡಾರು ಅವಳ ಅಣ್ಣದೀರು?
ನಿನ್ನೆಮೊನ್ನೆ ಬಂದಿರ್ಪ ಗಂಡಗಿಷ್ಟೊಂದೆ ಪಾದಪೂಜೆ
ಬೆನ್ನಬಿದ್ದವರ್(ಅಣ್ಣ/ತಮ್ಮ) ತಡೆದುಕೊಂಬರೆಷ್ಟೆಂದುಪೇಕ್ಷೆಯನ್ನು|
ಬನ್ನಪಟ್ಟಿಹರು ನಾಲ್ಕುದಿನಗಳಿನ್ನೇನ ಮಾಡಲಕ್ಕುಂ
ಅನ್ನೆಗಂ ನಾಗಪಂಚಮಿಯು ಬಂದು ತಂಪದಾಯ್ತು ಬೆನ್ನು||
ಹೆಂಗಳೆಯರಿಗೆ ವಯಸ್ಸಾದಂತೆ ಕರ್ತವ್ಯಪ್ರಜ್ಞೆಯು ಹೆಚ್ಚುತ್ತದೆ (’ಕರ್ಯವ್ಯಪ್ರಜ್ಞೆಯು ಮಾತ್ರ ಉಳಿಯುತ್ತದೆ’ ಎಂದು ಓದಿಕೊಳ್ಳಿ 😉 )
ಮೊದಮೊದಲೆಂತೊ ನೇಮದೆ-ನಿರೀಕ್ಷೆಯಿನಿಂದೆ ಗಡಲ್ತೆ ಮಾಡುವಳ್
ಮದನೆಯು ಭರ್ತಪೂಜೆಯ ಚತುರ್ದಶ-ವಿಂಶತಿವರ್ಷದನ್ನೆಗಂ| (’ಹತ್ತು-ಹದಿನೈದು ವರ್ಷ’ ಎಂದಂತೆ)
ತದುಪರಿಯೊಳ್ ನಿರೀಕ್ಷೆಯದುಮಿಲ್ಲ ವಿನಾಯಕಪರ್ವದಂತಿದುಂ (ಯಾವುದೋ ಒಂದು ಹಬ್ಬದಂತ ಅಷ್ಟೆ)
ಸದರದೆ ಪೂಜೆಯಂ ಮುಗಿಸುತಲ್ಲೆ ದಢಾರನೆ ಬಿದ್ದುಕೊಳ್ಳುವಳ್||
ಬಾಳಬೆಂಗಾಡಿಗೆ ವಸಂತನಂತೆಯೆ ಬಂದು
ತೋಳಿನಿಂ ಬಂಧಿಸುತೆ ಪೊರೆದೆಯೆನ್ನಂ
ತಾಳಿಯಂ ಬಿಗಿದು ತಾಳುಮೆಯೆಂಬ ಪಾಠವನು
ಪೇಳಿರ್ಪ ಗುರುವೆ ನಿನ್ನಂ ಪೂಜಿಪೆಂ
ಚೆನ್ನಾಗಿದೆ (ಬಾಳಬೆಂಗಾಡಿಗೈದುತ್ತುಂ ವಸಂತನೊಲ್)
ಧನ್ಯವಾದಗಳು.._/\_ ವಸಂತನವೊಲ್ ಎಂದಾಗಬೇಕಲ್ಲವೆ? ಓಲ್ ಅನ್ನುವುದು ಅಷ್ಟೊಂದು ಶುದ್ಧ ರೂಪವಲ್ಲ, ವೋಲ್ ಎಂದಾಗಬೇಕೆಂದು ಪದ್ಯಪಾನದಲ್ಲೇ ಓದಿದ ನೆನಪು.. ದಯವಿಟ್ಟು ತಿಳಿಸುವಿರಾ?
Knock knock @ koppalatoTa
ಹರ ಪಾರ್ವತಿ ಸ್ವರೂಪದ ಜೋಡಿದೀಪಕಂ
ದರಿಶಿನದಕೊಂಬ ದಾರದೆ ಕಟ್ಟಿ ಪೂಜಿಪರು
ಕರಿಗಡುಬ ಪೂರಣದ ಭಂಡಾರದೊಡೆ ಪತಿಯ
ಪರಿಪೂರ್ಣದೇಳಿಗೆಯ ಬೇಡೆ ಭೀಮೇಶ್ವರನ ।।