ಕಲಾವಿದಂ ಕಾವಿಯನುಟ್ಟವಂ ದಿನಂ…
ಮಾತ್ರ ಹಗಲೊಳ್ ಕಾವಿಯನ್ನುಡುವರೆಲ್ಲರುಂ
ಕೃತ್ರಿಮದ ಮಸ್ಕರರ್ ತಾವ್ಗಳಲ್ತೆ|
ಚಿತ್ರವನಿತೆಯರ ಸಂಗವನಿರುಳು ಮಾಳ್ಪಂಥ
ಛತ್ರಿಗಳಿಗಿಂಥವರು ಮಾದರಿಯಲಾ!! 😉
ನಿಮ್ಮ ಕಲ್ಪನೆಯು ಚೆನ್ನಾಗಿದೆ. (ಮೊದಲ ಸಾಲಿನ ಮೂರನೆಯ ಅಕ್ಷರ ಗುರುವಾಗಿದೆ)
ಧನ್ಯವಾದಗಳು ಪ್ರಸಾದ್ ಸರ್,
ಕಲ್ಪನೆ “ಸಾದು”ವೋ ಅಲ್ಲವೋ ಎಂಬ ಅಳುಕಿನಲ್ಲೇ ಬರೆದ ಪದ್ಯ. ಕೇವಲ ಬಣ್ಣ / ರೂಪಗಳಿಂದ ಸಮಸ್ಯೆಯನ್ನು ಪೂರಯಿಸುವ ಪ್ರಯತ್ನ. (“ಕಲಾವಿದಂ” – ಎಂದದ್ದು ದಿನದಲ್ಲಿ ಆಗಾಗ್ಗೆ ಕಾವಿ ಧರಿಸಿರುವಂತೆ ಕಾಣುವನೆಂದು!!). ನೀವು ವಾಸನೆಯನ್ನೂ ಹಿಡಿದು “ಪ್ರಸಾದು”ವಾಗಿಸಿಬಿಟ್ಟಿದ್ದೀರಿ !!
ಹಾಗೇ, ದಯವಿಟ್ಟು ಆಗಿರುವ “ನಕ್ಷತ್ರ”ದೋಷಕ್ಕೊಂದು ಪರಿಹಾರ ಸೂಚಿಸಿ !!
ನಕ್ಷತ್ರಶಾಂತಿಹೋಮವನ್ನು ಮಾಡಬೇಕು. ನಾನೇ ಅಧ್ವರ್ಯುವಾಗಿ ನೆರವೇರಿಸಿಕೊಡುತ್ತೇನೆ. ಸುಮಾರು ರೂ.95,000/- ಖರ್ಚು ಕೈಕಚ್ಚೀತು ಅಷ್ಟೆ! (ಪ್ರಥಮಪಾದವನ್ನು ’ಭಲಾ! ಉಡುಂಗಳ್ ತವೆದೋರೆ ಸಾಂದ್ರದಿಂ’ ಎಂದು ಸವರಬಹುದು)
When he was young he disliked some vegetables. A decade later after gaining more knowledge, he began liking them.
ಕರಂಭ (ಇಂದ್ರವಂಶ+ವಂಶಸ್ಥ)||
ಕೋಲಾಹಲಂ ಗೈದಿರೆ ಬಾಲಕಂ ಮೊದಲ್,
ತಿಲಂ-ಸುಛತ್ರಾಕ(mushroom)-ಪಲಾಂಡುವಂ ಮಗುಳ್|
ಕಲಂಜಮಂ ಮೆಲ್ಲುವನಲ್ತೆ, ಮಸ್ಕರಂ(Knowledge)
ಬಲಂಗೊಳುತ್ತುಂ ಕಳೆಯಲ್ ದಶಾಬ್ದಗಳ್||
Notwithstanding the fact that his feet are soiled from playing in the mud, an infant typically unwittingly chews his foot!
ವಿಲಾಸಕೇಲೀತನದಿಂದೆ ದಾರಕಂ(infant)
ಕಲಂಕಮಿದ್ದುಂ ಮುಖ-ಹಸ್ತಮೇನು? ಪಂ-
ಕ-ಲಂಜಮಂ(foot) ಮೆಲ್ಲುವನಲ್ತೆ, ಮಸ್ಕರಂ(knowledge)
ವಿಲೋಮಮಿದ್ದಾಗೆಳೆಗಾಲದೊಳ್(Infancy) ವಲಂ||
When the level of Pitta falls in the body, there is a corresponding reduction in the digestive power, body temperature, color and luster in the skin, and also an increased sensitivity to cold. Garlic is a home remedy for restoring pitta level. This recluse prefers to eat the pungent garlic or even get bitten by leeches (therapeutic) etc., but abhors injections and other allopathy therapies.
ಬಲೀಕೃತಂಗೊಳ್ಳುಗೆ ಪಿತ್ತಲುಪ್ತಿಯುಂ
ಕಲಂಜಮಂ ಮೆಲ್ಲುವನಲ್ತೆ ಮಸ್ಕರಂ|
ಜಲೂಕದಿಂ ದಂಶಿತಗೊಂಬ(ಕಚ್ಚಿಸಿಕೊಂಬ) ತೋಷದಿಂ
ಶಲಾಕೆಯೆಂಬಂ ಗಡ ಸೂಜಿಮದ್ದನುಂ||
ಇಲ್ಲಿನ ಮೂರನೆಯ ಪಾದವನ್ನು ತುಸು ಬದಲಿಸಿ ಹಲವು ಪರಿಹಾರಗಳನ್ನು ಸಾಧಿಸಬಹುದು:
1. ’ಫಲಂಗಳೊಳ್ ಬೈತಿಡುತುಂ ಸದಾ ಸಟಾಂ-’ ಎಂದು ಬದಲಿಸಿದರೆ, ಸಿಂಹದ(ಸಟಾಂಕ) ಕಾಲನ್ನು(ಲಂಜ) ಬಳಸಿ ತಯಾರಿಸಿದ ಖಾದ್ಯವನ್ನು (lion leg meat) ಮೆದ್ದ
2. ’ಫಲಂಗಳೊಳ್ ಬೈತಿಡುತುಂ ಸದಾ ಮೃಡೀ-’ ಎಂದು ಬದಲಿಸಿದರೆ, ಜಿಂಕೆಯ(ಮೃಡೀಕ) ಕಾಲನ್ನು(ಲಂಜ) ಬಳಸಿ ತಯಾರಿಸಿದ ಖಾದ್ಯವನ್ನು (deer leg meat) ಮೆದ್ದ
3. ’ಫಲಂಗಳೊಳ್ ಬೈತಿಡುತುಂ ಸದಾ ಉಲೂ-’ ಎಂದು ಬದಲಿಸಿದರೆ, ಗೂಬೆಯ(ಉಲೂಕ) ಕಾಲನ್ನು(ಲಂಜ) ಬಳಸಿ ತಯಾರಿಸಿದ ಖಾದ್ಯವನ್ನು (owl leg meat) ಮೆದ್ದ
4. ‘ಫಲಂಗಳೊಳ್ ಬೈತಿಡುತೊಂದುಜೋಡಿ ಧಾ-’ ಎಂದು ಬದಲಿಸಿದರೆ ಎತ್ತಿನ(ಧಾಕ) ಕಾಲನ್ನು(ಲಂಜ) ಬಳಸಿ ತಯಾರಿಸಿದ ಖಾದ್ಯವನ್ನು (ox leg meat) ಮೆದ್ದ
5. ಹೇನಿನ(ಯೂಕ), ಕಪ್ಪೆಯ(ಭೇಕ), ಬಾತುಕೋಳಿಯ/ತೋಳದ(ಕೋಕ) ಕಾಲನ್ನು ಬಳಸಿ…. ಎಂಬ ಪರಿಹಾರಗಳನ್ನು ಮಾಡದಿರೋಣ!
ನೆಲಂ,ಜಲಂ,ವಾಯುಗಳೆಲ್ಲ ಮತ್ತಿದೇಂ
ಚಲಾಚಲಂಗಳ್, ಪರವಸ್ತುವೆನ್ನುತುಂ
ಸಲೆ ಪ್ರತೀತಂಗೊಳೆ ಪಣ್ಣಿನಂತೆಯೇ
ಕಲಂಜವಂ ಮೆಲ್ಲಿದನಲ್ತೆ ಮಸ್ಕರಂ/
ಎಲ್ಲವೂ ಪರವಸ್ತುವೇ ಎಂದು ಜ್ಞಾನೋದಯವಾದಾಗ…
ಪರ(ರ)ವಸ್ತು!
ಸನ್ಯಾಸಮೆಂದೊಡೆಲ್ಲವನು ತ್ಯಜಿಪುದಲ್ತೆ
ಧಾನ್ಯ-ಪೇಯಗಳುಳಿದು ಜೀವಿಪುದಕೆ|
ಅನ್ಯರ ಸ್ವಾಮ್ಯಖಾದ್ಯಂಗಳಂ ಕಸಿಯುವುದು
ಅನ್ಯಾಯರೀತಿಯದು – ಹಾದಿರಂಪ||
ಚಲಾಚಲಂಗಳ್ ಪರವಸ್ತು!
ಉಲಿಯಬಹುದೊಂದಿಲ್ಲ ತೊಂದರೆಯುಮೆಂದೆನುತ-
ಚಲಖಾದ್ಯಗಳ ಕಸಿದು ಹಾಳಾಗಲಿ|
ಚಲಿಪ ಪರವಸ್ತುವಿಗು ಮಸ್ಕವನು ಹಾಕುವನು
ಹುಲುಮಾನಿಸನುಮಲದೆ ಮಸ್ಕರನುಮೇಂ||
ಮೊದಲಿಗ…
ಸಾವಧಾನದೆ ಮಥಿಸಿ ಸಾಧುವೆನಿಸುವ ಪದವ
ತೀವಿ ಪೇಳದೆ ಮೊದಲಿಗನುಮೆನಿಸಲೇಂ|
ಈವವೋಲ್ ಏಳನೆಯ ತಿಂಗಳೊಳೆ ಗರ್ಭಿಣಿಯು
ತಾವೀಗಳಾತುರದ ಮಸ್ಕರಂ ಕಾಣ್||
‘ಪರ’ಮೆಂಬ ಶಬ್ದಕ್ಕದಗ್ಗಳಿಕೆಯೆಂಬೊಂದು,
ಪರಮಾತ್ಮನೆಂದರ್ಥಮುಂಟು ಕೇಳಿರ್
ಪರರ ವಸ್ತುವ ಕುರಿತ ಯೋಚನೆಯ ನೀವ್ ಬಿಟ್ಟು
ಪರಿಕಿಸುಗೆ ಮತ್ತೊಮ್ಮೆ -ಹಾದಿರಂಪ!
ಎರಡನೆಯ ಪದ್ಯದೊಳು ನೀವ್ ಪೇಳ್ದ ತಪ್ಪನಿದೊ
ವರಯತಿಯ ಚಿಹ್ನೆಯಿಂ(,) ತಿದ್ದಿರ್ಪೆನೈ
ಸರಸಮಾಯಿತೆ ಪದ್ಯ? ಇಲ್ಲದೊಡೆ ಮತ್ತೊಮ್ಮೆ
ಬರೆವೆನೆಂದಿಂತೊರೆದ-ಮಂಜುನಾಥ/
🙂
ಭಲಾ! ನಕ್ಷತ್ರoಗಳ ಭಾವಿಸಲ್ ಗಡಾ
ಪಲಾಂಡುವಂ ಪೋಲ್ವೊಡೆ ಬೆಳ್ಪು ರೂಪದೊಳ್ ।
ಕಲಾವಿದಂ ಕಾವಿಯನುಟ್ಟವಂ ದಿನಂ
ಕಲಂಜಮಂ ಮೆಲ್ಲುವನಲ್ತೆ ಮಸ್ಕರಂ !!
ಪಲಾಂಡು = ಬೆಳ್ಳುಳ್ಳಿ ~ ನಕ್ಷತ್ರ !
ಮಸ್ಕರ ~ ಭಾಸ್ಕರ !!
ಕಲಾವಿದಂ ಕಾವಿಯನುಟ್ಟವಂ ದಿನಂ…
ಮಾತ್ರ ಹಗಲೊಳ್ ಕಾವಿಯನ್ನುಡುವರೆಲ್ಲರುಂ
ಕೃತ್ರಿಮದ ಮಸ್ಕರರ್ ತಾವ್ಗಳಲ್ತೆ|
ಚಿತ್ರವನಿತೆಯರ ಸಂಗವನಿರುಳು ಮಾಳ್ಪಂಥ
ಛತ್ರಿಗಳಿಗಿಂಥವರು ಮಾದರಿಯಲಾ!! 😉
ನಿಮ್ಮ ಕಲ್ಪನೆಯು ಚೆನ್ನಾಗಿದೆ. (ಮೊದಲ ಸಾಲಿನ ಮೂರನೆಯ ಅಕ್ಷರ ಗುರುವಾಗಿದೆ)
ಧನ್ಯವಾದಗಳು ಪ್ರಸಾದ್ ಸರ್,
ಕಲ್ಪನೆ “ಸಾದು”ವೋ ಅಲ್ಲವೋ ಎಂಬ ಅಳುಕಿನಲ್ಲೇ ಬರೆದ ಪದ್ಯ. ಕೇವಲ ಬಣ್ಣ / ರೂಪಗಳಿಂದ ಸಮಸ್ಯೆಯನ್ನು ಪೂರಯಿಸುವ ಪ್ರಯತ್ನ. (“ಕಲಾವಿದಂ” – ಎಂದದ್ದು ದಿನದಲ್ಲಿ ಆಗಾಗ್ಗೆ ಕಾವಿ ಧರಿಸಿರುವಂತೆ ಕಾಣುವನೆಂದು!!). ನೀವು ವಾಸನೆಯನ್ನೂ ಹಿಡಿದು “ಪ್ರಸಾದು”ವಾಗಿಸಿಬಿಟ್ಟಿದ್ದೀರಿ !!
ಹಾಗೇ, ದಯವಿಟ್ಟು ಆಗಿರುವ “ನಕ್ಷತ್ರ”ದೋಷಕ್ಕೊಂದು ಪರಿಹಾರ ಸೂಚಿಸಿ !!
ನಕ್ಷತ್ರಶಾಂತಿಹೋಮವನ್ನು ಮಾಡಬೇಕು. ನಾನೇ ಅಧ್ವರ್ಯುವಾಗಿ ನೆರವೇರಿಸಿಕೊಡುತ್ತೇನೆ. ಸುಮಾರು ರೂ.95,000/- ಖರ್ಚು ಕೈಕಚ್ಚೀತು ಅಷ್ಟೆ! (ಪ್ರಥಮಪಾದವನ್ನು ’ಭಲಾ! ಉಡುಂಗಳ್ ತವೆದೋರೆ ಸಾಂದ್ರದಿಂ’ ಎಂದು ಸವರಬಹುದು)
ಧನ್ಯವಾದಗಳು ಪ್ರಸಾದ್ ಸರ್,
ಭಲಾ! ಉಡುಂಗಳ್ ತವೆದೋರೆ ಸಾಂದ್ರದಿಂ
ಪಲಾಂಡುವಂ ಪೋಲ್ವೊಡೆ ಬೆಳ್ಪು ರೂಪದೊಳ್ ।
ಕಲಾವಿದಂ ಕಾವಿಯನುಟ್ಟವಂ ದಿನಂ
ಕಲಂಜಮಂ ಮೆಲ್ಲುವನಲ್ತೆ ಮಸ್ಕರಂ !!
ಇಗೋ ನಿಮ್ಮ ಸಂಭಾವನೆ ರೂ.23,750/- ಪ್ರಥಮಪಾದ ದೋಷ ನಿವಾರಣೆಗಾಗಿ !!
1/4. hhahha
ಕಲಂಕಗಳ್ ಬೇಡವದೆಂದು, ಬಿಟ್ಟು ತಾಂ
ಕಲಂಜಮಂ, ಮೆಲ್ಲುವನಲ್ತೆ ಮಸ್ಕರಂ
ಫಲಂಗಳಂ ,ಸಾತ್ವಿಕಖಾದ್ಯವಸ್ತುವಂ,
ಕುಲಂಗಳಿಂಗಾಗುತೆ ಮಾರ್ಗದರ್ಶಕಂ!
😮 Good idea
ಅಯ್ಯೋ, ನಾನು ತಡಮಾಡಿಬಿಟ್ಟೆ. ಈ ತಂತ್ರವನ್ನು ಬಳಸಿ ಒಂದು ಪದ್ಯವನ್ನು ರಚಿಸಿಯೇ ತೀರುತ್ತೇನೆ.
ಒಮ್ಮೆ ಬಳಕೆಯಾದ ತಂತ್ರವನ್ನು ಮತ್ತೆ ಹೇಗೇ ಬಳಸಿದರೂ ಅದು Copy 😉
’ಹಿಂದೆಲ್ಲ ರಚಿಸಿಯೇ ಇದ್ದೇನೆ’ ಎಂದು ನನ್ನ ಮಾತಿನ ಅರ್ಥ.
ವಿಲಾಸಮಂ ಲೋಗರ ಮುಂದೆ ಬಿಟ್ಟಿರಲ್
ಲಲಾಟದೊಳ್ ಬೆಳ್ಳನಭಸ್ಮವಚ್ಚಿರಲ್,
ನಲುಂಗುತುಂ ವಾಂಛೆಗೆ ಸೋಲ್ಡು !ಗೌಪ್ಯದೊಳ್
ಕಲಂಜಮಂ ಮೆಲ್ಲುವನಲ್ತೆ ಮಸ್ಕರಂ!
ಕುಲಂಗಳೊಳ್ ಭೇದಮನೆಂದು ತೋರದಾ-
ಶಿಲಾಮಯಂ ಕೊಳ್ಳುವನೆಂದದೆಲ್ಲಮಂ,
ಸಲಲ್ಕಹಾ ಪ್ರೀತಿಯಭಕ್ತವೃಂದದಿಂ
ಕಲಂಜಮಂ ಮೆಲ್ಲುವನಲ್ತೆ ಮಸ್ಕರಂ!!
(ಶಿಲಾರೂಪಿಯಾದ ದೇವನೇ ಎಲ್ಲವನ್ನೂ ಎಲ್ಲರಿಂದಲೂ ಸ್ವೀಕರಿಸುವನೆಂದು,ಭಕ್ತರಿಂದ ಸಂದ ಕಲಂಜವನ್ನೂ….)_
ಕಲತ್ರವಾಂಛಾಧಿಕಮಾಗಿ ಸಂದಿರಲ್
ಕಳರ್ದುಕೊಂಡಾ ಕಟುವಾದ ದೀಕ್ಷೆಯಂ,
ಸಲೀಸಿನಿಂದಂ ಪರರಂತೆ ಲೋಕದೊಳ್
ಕಲಂಜಮಂ ಮೆಲ್ಲುವನಲ್ತೆ ಮಸ್ಕರಂ
When he was young he disliked some vegetables. A decade later after gaining more knowledge, he began liking them.
ಕರಂಭ (ಇಂದ್ರವಂಶ+ವಂಶಸ್ಥ)||
ಕೋಲಾಹಲಂ ಗೈದಿರೆ ಬಾಲಕಂ ಮೊದಲ್,
ತಿಲಂ-ಸುಛತ್ರಾಕ(mushroom)-ಪಲಾಂಡುವಂ ಮಗುಳ್|
ಕಲಂಜಮಂ ಮೆಲ್ಲುವನಲ್ತೆ, ಮಸ್ಕರಂ(Knowledge)
ಬಲಂಗೊಳುತ್ತುಂ ಕಳೆಯಲ್ ದಶಾಬ್ದಗಳ್||
ಕಲಂಜಮಂ ನಿತ್ಯವು ತಿಂಬ ನಾಡಿನೊಳ್
ಕಲಾಪಮಂ ಗೈಯುತೆ ಪೋಗಿರಲ್ಕಮಾ!
ಕಲಂಜಪಾಕಂ ಮೆರೆಯಲ್ಕೆ, ಮೂಗಿನಿಂ
ಕಲಂಜಮಂ ಮೆಲ್ಲುವನಲ್ತೆ ಮಸ್ಕರಂ!!
.
ಛಲಕ್ಕೆ ತಾಂ ಸಿಲ್ಕಿದನಂತೆವೋಲ್ ಮಹೀ-
-ತಲಂಗಳಿಂ ಸಂದುವಿವಲ್ತೆ ಸಾಜದೊಳ್
ಸಲೀಸಿನಿಂ ತಿನ್ನುವೆನೀಗಳೆನ್ನುತುಂ
ಕಲಂಜಮಂ ಮೆಲ್ಲುವನಲ್ತೆ ಮಸ್ಕರಂ
ಭೂತಲದಲ್ಲಿ ಬೆಳೆದ ಇತರ ಗೆಡ್ಡೆಗೆಣಸುಗಳಂತೆಯೇ ಇದೂ, ಎನ್ನುತ್ತಾ ಛಲಕ್ಕೆ ಸಿಕ್ಕಿದ ಸಾಧು ಬೆಳ್ಳುಳ್ಳಿಯನ್ನು ತಿಂದ
ಚೆನ್ನಾಗಿದೆ. ಒಂದೊಂದು ಸಾಲಿನಲ್ಲೂ ಬೇರೆ ಬೇರೆ ಛಂದೋಗತಿಗಳನ್ನು ತಂದುಬಿಟ್ಟಿದ್ದೀರಾ! 🙂
repaired 😉 thank you
—
Notwithstanding the fact that his feet are soiled from playing in the mud, an infant typically unwittingly chews his foot!
ವಿಲಾಸಕೇಲೀತನದಿಂದೆ ದಾರಕಂ(infant)
ಕಲಂಕಮಿದ್ದುಂ ಮುಖ-ಹಸ್ತಮೇನು? ಪಂ-
ಕ-ಲಂಜಮಂ(foot) ಮೆಲ್ಲುವನಲ್ತೆ, ಮಸ್ಕರಂ(knowledge)
ವಿಲೋಮಮಿದ್ದಾಗೆಳೆಗಾಲದೊಳ್(Infancy) ವಲಂ||
When the level of Pitta falls in the body, there is a corresponding reduction in the digestive power, body temperature, color and luster in the skin, and also an increased sensitivity to cold. Garlic is a home remedy for restoring pitta level. This recluse prefers to eat the pungent garlic or even get bitten by leeches (therapeutic) etc., but abhors injections and other allopathy therapies.
ಬಲೀಕೃತಂಗೊಳ್ಳುಗೆ ಪಿತ್ತಲುಪ್ತಿಯುಂ
ಕಲಂಜಮಂ ಮೆಲ್ಲುವನಲ್ತೆ ಮಸ್ಕರಂ|
ಜಲೂಕದಿಂ ದಂಶಿತಗೊಂಬ(ಕಚ್ಚಿಸಿಕೊಂಬ) ತೋಷದಿಂ
ಶಲಾಕೆಯೆಂಬಂ ಗಡ ಸೂಜಿಮದ್ದನುಂ||
ಧಾರ್ಮಿಕಜೀವನಕ್ಕೂ ಸನ್ಯಾಸಕ್ಕೂ ಸಂಬಂಧವಿಲ್ಲ. ಲೋಕದಲ್ಲಿನ ಬಹುತೇಕ ಸನ್ಯಾಸಿಗಳು ಕೇಂದ್ರಭ್ರಷ್ಟರು, ವಿಪಥಗಾಮಿಗಳು, ವಿಲಕ್ಷಣರು. ಗುಹೆಯಲ್ಲಿ ವಾಸಿಸುವುದು, ಮೈಗೆಲ್ಲ ಬೂದಿಯನ್ನು ಬಳಿದುಕೊಳ್ಳುವುದು, ಅತಿಯಾದ ಲಶುನಸೇವನ ಇತ್ಯಾದಿ ವಿಚಿತ್ರವರ್ತಿಗಳಿವರು 😉
ಪಲಾಯನಂ ಲೋಗರ ನಿತ್ಯರೀತಿಯಿಂ
ಕಲಾಪಮೀ ಗಿರಿವಾಸದೀಕ್ಷೆಯೈ|
ವಿಲೇಪನಂ ಗೈಯುತೆ ಮೈಗೆ ಬೂದಿಯಂ
ಕಲಂಜಮಂ ಮೆಲ್ಲುವನಲ್ತೆ ಮಸ್ಕರಂ||
“ಬೆಳ್ಳುಳ್ಳಿ”ಎಂದಮೇಲೆ “ಪಲಾವು”ಬರದಿದ್ದರೆ ಹೇಗೆ? ಅದೂ ಪ್ರಾಸಕ್ಕೆ ಹೊಂದುತ್ತಿರುವಾಗ !!
ತಲಾಂತರಂ ತಾಂ ಮುನಿವೇಷ ತೊಟ್ಟವಂ
ಕಲಾವಿದಂ ವೇದಿಕೆಯಂದು ಬಿಟ್ಟೊಡಂ
“ಪಲಾವು”ವಂ ಮೆದ್ದುದ ಕಂಡುಮೆಂದರೌ,
“ಕಲಂಜಮಂ ಮೆಲ್ಲುವನಲ್ತೆ ಮಸ್ಕರಂ” !!
ತೆರೆಯಹಿಂದೆ ಪಲಾವ್ ತಿಂದ ಮುನಿವೇಷಧಾರಿ !!
ಕಂಕ=Heron, a long-legged, long-necked, usually long-billed bird.
ಲಂಜ= feet/leg
ಪೂರ್ವಾಶ್ರಮದಲ್ಲಿ ಮಾಂಸಾಹಾರಿಯಾಗಿದ್ದ ಸನ್ಯಾಸಿಯು ಕದ್ದು ಕಂಕಪಾದಭಕ್ಷ್ಯವನ್ನು ತಿಂದ. Leg meat is non-vegetarians’ delight.
ಪಲಾಶನಂ: ಪಲ=ಮಾಂಸ, ಅಶನ=ಸೇವಿಸುವುದು, ಪಲಾಶನನು=ಪಲಾಶನಂ
ಪಲಾಶನಂ ಪಿಂತಣದಾಶ್ರಮಾಧ್ವದೊಳ್(ಪೂರ್ವಾಶ್ರಮ)
ಬಲಾದ್ವಿರಕ್ತಂ, ಮರೆಯಂ ಸುಖಂಗಳಂ|
ಫಲಂಗಳೊಳ್ ಬೈತಿಡುತೆಂಟುಜೋಡಿ ಕಂ-
ಕ-ಲಂಜಮಂ ಮೆಲ್ಲುವನಲ್ತೆ ಮಸ್ಕರಂ||
ಇಲ್ಲಿನ ಮೂರನೆಯ ಪಾದವನ್ನು ತುಸು ಬದಲಿಸಿ ಹಲವು ಪರಿಹಾರಗಳನ್ನು ಸಾಧಿಸಬಹುದು:
1. ’ಫಲಂಗಳೊಳ್ ಬೈತಿಡುತುಂ ಸದಾ ಸಟಾಂ-’ ಎಂದು ಬದಲಿಸಿದರೆ, ಸಿಂಹದ(ಸಟಾಂಕ) ಕಾಲನ್ನು(ಲಂಜ) ಬಳಸಿ ತಯಾರಿಸಿದ ಖಾದ್ಯವನ್ನು (lion leg meat) ಮೆದ್ದ
2. ’ಫಲಂಗಳೊಳ್ ಬೈತಿಡುತುಂ ಸದಾ ಮೃಡೀ-’ ಎಂದು ಬದಲಿಸಿದರೆ, ಜಿಂಕೆಯ(ಮೃಡೀಕ) ಕಾಲನ್ನು(ಲಂಜ) ಬಳಸಿ ತಯಾರಿಸಿದ ಖಾದ್ಯವನ್ನು (deer leg meat) ಮೆದ್ದ
3. ’ಫಲಂಗಳೊಳ್ ಬೈತಿಡುತುಂ ಸದಾ ಉಲೂ-’ ಎಂದು ಬದಲಿಸಿದರೆ, ಗೂಬೆಯ(ಉಲೂಕ) ಕಾಲನ್ನು(ಲಂಜ) ಬಳಸಿ ತಯಾರಿಸಿದ ಖಾದ್ಯವನ್ನು (owl leg meat) ಮೆದ್ದ
4. ‘ಫಲಂಗಳೊಳ್ ಬೈತಿಡುತೊಂದುಜೋಡಿ ಧಾ-’ ಎಂದು ಬದಲಿಸಿದರೆ ಎತ್ತಿನ(ಧಾಕ) ಕಾಲನ್ನು(ಲಂಜ) ಬಳಸಿ ತಯಾರಿಸಿದ ಖಾದ್ಯವನ್ನು (ox leg meat) ಮೆದ್ದ
5. ಹೇನಿನ(ಯೂಕ), ಕಪ್ಪೆಯ(ಭೇಕ), ಬಾತುಕೋಳಿಯ/ತೋಳದ(ಕೋಕ) ಕಾಲನ್ನು ಬಳಸಿ…. ಎಂಬ ಪರಿಹಾರಗಳನ್ನು ಮಾಡದಿರೋಣ!
ತಂಕ A kind of plant. ಶಾಕ=herb. ತಂಕ(/ಶಾಕ)-ಲಂಜ: ಆ ಗಿಡದ ಪಾದ/ ಬೇರು/ ಗಡ್ಡೆ
ಕುಲೀನನೀತಂ, ತವೆ ನೇಮದಿಂದೆ ತಾಂ
ಫಲಂಗಳಂ ಸೇವಿಪ ಸಾತ್ತ್ವಿಕಾದ್ಯಮಂ|
ನಲುಂಗದೆ ಕ್ಷಾಮಮಿರಲ್ ಗಡೀತ ತಂ(/ಶಾ)-
ಕ-ಲಂಜಮಂ ಮೆಲ್ಲುವನಲ್ತೆ ಮಸ್ಕರಂ||
’ಶಂಕ’ವೆಂಬೊಂದು ದಂಡಕಪ್ರಭೇದ. ಈ ಛಂದಸ್ಸಿನಲ್ಲಿ ಪದ್ಯರಚನೆಗೆ ತೊಡಗಿದ ಸನ್ಯಾಸಿಯೊಬ್ಬನು ಮೂರು (ಲಂಜ/)ಪಾದಗಳನ್ನು ರಚಿಸಿ, ಪ್ರಾಸದ ತೊಡಕಿನಿಂದಾಗಿ ನಾಲ್ಕನೆಯ ಪಾದವನ್ನು ರಚಿಸಲಾರದೆ ನುಂಗಿಬಿಟ್ಟ!
ಕಲಾವಿದಂ ಮಸ್ಕರನೀತ ನಾಮ(ಮಾತ್ರ)ಕಂ
ವಿಲಾಸದಿಂ ಲೇಖಿಸದಾದ ಪದ್ಯಮಂ|
ಸಲಲ್ ತ್ರಿಪಾದಂ ದಣಿದಿರ್ಪನೆಂತೊ. ಶಂ-
ಕ-ಲಂಜಮಂ ಮೆಲ್ಲುವನಲ್ತೆ ಮಸ್ಕರಂ||
ಕುಲೀನರೊಳ್ ಧರ್ಮಮೆ ನಾಶಮಾಗಿರಲ್
ಕಲೀಂದ್ರ ತಾಂ ತನ್ನಯ ಮೈಮೆ ತೋರಿರಲ್
ಫಲಂಗಳಂ ದೂರಕೆ ತಳ್ಳುತುಂ ಸದಾ
ಕಲಂಜಮಂ ಮೆಲ್ಲುವನಲ್ತೆ ಮಸ್ಕರಂ?
ಕಲಂಜಮಂ ಮೆಲ್ವುದಧರ್ಮಮೆಂದರಾರ್?
ಕಲೀಂದ್ರನೇಂ(ಕಲಿಗಾಲದ ಜನ) ನಿಮ್ನಮೆ ಉಳ್ಳಿ ತಿಂಬುದುಂ?
ಕಲಂಜಭಕ್ಷಾನ್ವಯಮನ್ನುಮೇತಕೋ (ಅನ್ವಯ=ಫಲ/result)
ಹಾಲಾಹಲೋಪಾದಿಯೊಳತ್ತ ತಳ್ಳುವಂ(sage) 😉