Jul 312017
 

ಜೀವಿಕ್ಕುಂ ಬೆಂಕಿಯೊಳ್ ಪತಂಗಂ ಬೀಳ್ದುಂ

  25 Responses to “ಪದ್ಯಸಪ್ತಾಹ ೨೬೬: ಸಮಸ್ಯಾಪೂರಣ”

  1. ಇದು ಯಾವ ವೃತ್ತದ ಲಕ್ಷಣವಾಯಿತು?

  2. ಕಂದ

    • And this is the shortest possible size of the evenline of a kanda – ನಾನಾನಾನಾನನಾನನಾನಾನಾನಾ. The range is 11 to 19 letters.

  3. ಪತಂಗಂ, ತಂಗಂ (ತಮಿಳಿನ ತಂಗಮ್ಮ)…. ಯಾರಾದರೂ ಅಷ್ಟೆ
    ಜೀವಿಯುಮಾವುದುಮಿದ್ದೇಂ
    ಜೀವಿತಮಂ ಜೀವಿಸಿರ್ಕುಮೈದಲ್ ಸಾವಂ|
    ನಾವೇಂ ತಂಗಮ್ಮಳುಮೇಂ
    ಜೀವಿಕ್ಕುಂ ಬೆಂಕಿಯೊಳ್ ಪತಂಗಂ ಬಿಳ್ದುಂ||

  4. ಭೂವನಿತಾಸುತೆಯೊಲ್ ನಿಜ
    ಜೀವನದೊಳ್ ಹಾದಿಯಂ ತುಳಿವೊಡಂ,ಪೆರತೇಂ!
    ಸಾವಂ ಗೆಲ್ಡುಂ ಸಾಜದೆ
    ಜೀವಿಕ್ಕುಂ ಬೆಂಕಿಯೊಳ್ ಪತಂಗಂ ಬಿಳ್ದುಂ!

  5. ಆವಂ ಶಾಶ್ವತನಾಗಂ
    ಕಾವನವೋಲಂತುಮೀ ಜನದ ಮಾನಸದೊಳ್!
    ಭಾವಂ ಬೆಸೆಸಲ್, ತಡೆಯೇಂ!
    ಜೀವಿಕ್ಕುಂ ಬೆಂಕಿಯೊಳ್ ಪತಂಗಂ ಬಿಳ್ದುಂ!!
    (ಜನರ ಮನಸ್ಸಿನಲ್ಲಿ ದೇವನಂತೆಯೇ ಯಾರು ತಾನೇ ಶಾಶ್ವತವಾಗಿ ಇರಲಾರರು? ಭಾವದ ಸಹಾಯವಿದ್ದರೆ ಬೆಂಕಿಯಲ್ಲಿ ಬಿದ್ದ ಪತಂಗವೂ ಜೀವಿಸಬಲ್ಲದು(ಮನದಲ್ಲಿ))

    • ಏನೀ ವಿಪರ್ಯಾಸ! ’ಕಾಮ’ನುಂ ’ಕಾವ’ನೇ!
      ಬೆಂಕಿಯುಂ-ಕಾವಂ, ಪತಂಗಂ-ಜನಗಳೆಂದ-
      ಲಂಕಾರಿಕರುಪಮಾನವ ಗೈದಿಹರ್|
      ಸಂಕೀರ್ಣಮಲ್ತೆಲೌ ’ಕಾವ’ಶಬ್ದಮದಿಲ್ಲಿ
      ಅಂಕುಶವನಿಕ್ಕಿದೊಡೆ ಲೇಸುಮದಕೆ||

  6. ಕಾವಿಂ (ಕೇವಲ)ರೆಂಕೆಯು ಸುಟ್ಟಿರೆ
    (ಸಾಯದೆ)ಜೀವಿಕ್ಕುಂ ಬೆಂಕಿಯೊಳ್ ಪತಂಗಂ ಬಿಳ್ದುಂ|
    ಜೀವಮನೆಂತುಂ ಕಾಯ್ಗುಂ?
    ಮೇವದು ದೊರಕದೆ ಪತಂಗವಳಿದಿತ್ತಯ್ಯೋ!!
    OR
    ಕಾವಿಂ (ಕೇವಲ)ರೆಂಕೆಯು ಸುಟ್ಟಿರೆ
    (ಸಾಯದೆ)ಜೀವಿಕ್ಕುಂ ಬೆಂಕಿಯೊಳ್ ಪತಂಗಂ ಬೀಳ್ದುಂ|
    ಜೀವಮನಾರೈ ಕಾಯ್ವರ್?
    ಮೇವಾಗನ್ಯಕೆ ಪತಂಗವಳಿದಿತ್ತಯ್ಯೋ!!

  7. ಧಾವಂತಂ, ಸಿವ! ಕೆಳೆಯೊಳ್
    ಜೀವಿಕ್ಕುಂ,ಬೆಂಕಿಯೊಳ್ ಪತಂಗಂ, ಬಿಳ್ದುಂ!
    ಜಾವಮಿನಿತದೊಳ್ ನವೆದುಂ!
    ಸಾವಂ ಕಂಡುದನೆ ವೀಕ್ಷಿಸುತ್ತಿರ್ಪೊಡನುಂ!

    (ತಾನೂ ಹಿಂಬಾಲಿಸಬೇಕೆಂಬ ತುಡಿತ ಪತಂಗದಲ್ಲಿ ಜೀವಿಸಿಯೇ ಇರುತ್ತದೆ,
    ಗೆಳೆಯ ಪತಂಗವು ಕಣ್ಣೆದುರಲ್ಲೇ ಬಿದ್ದೂ,ನವೆದೂ ,ಸಾಯುತ್ತಿದ್ದರೂ ಕೂಡ)

    • ರುಚಿರಾ|| ಪತಂಗಜೀವಿತಮವರಂ ಗಡೆಂದಿಗುಂ (ಅವರಂ=little, a few weeks only)
      ಹುತಾಶಗಾಹುತಿ ಸಖನೀಗಳಾಗಿಯುಂ|
      ಶತಾಬ್ದಪೂರ್ವದೆ ಘಟಿಸಿರ್ಪವೋಲದುಂ
      ಪ್ರತೀತವಾಗದದಕೆ ದುಃಖವೃತ್ತಿಯೊಲ್||

  8. ಈ ಜನ್ಮದಲ್ಲಿ ತನ್ನ ಪ್ರಾಚೀನಗಳನ್ನು ಕಳೆದುಕೊಳ್ಳಲಾಗಲಿಲ್ಲ ಆ ಪತಂಗಕ್ಕೆ. ಇನ್ನೊಂದು ಜನ್ಮವೆತ್ತಿ ಅದರಲ್ಲಿ ಜೀವಿಸಿ ತನ್ನ ಯತ್ನವನ್ನು ಮುಂದುವರಿಸಿತು.
    ಸಾವೇನಂತ್ಯಮೆ ಜೀವಿಗೆ?
    ಕೈವಲ್ಯಪ್ರಾಪ್ತಿಯಲ್ತೆಲನಿಬರ ಲಕ್ಷ್ಯಂ|
    ಭಾವಿಸಿದನನ್ಯಜನ್ಮದೆ (ಭಾವಿಸಿ/ಸಂಭಾವಿಸಿ/ಪೂರೈಸಿ ಇದನು – ಈ ಜನ್ಮವನು – ಅನ್ಯ ಜನ್ಮದೆ)
    ಜೀವಿಕ್ಕುಂ, ಬೆಂಕಿಯೊಳ್ ಪತಂಗಂ ಬಿಳ್ದುಂ||

  9. ಕಾವಿಂದಪ್ಪುದುಮಿನ್ನೇಂ?
    ಸಾವಲ್ತೆ – ಪ್ರಾಣಿಯೇಂ ಮನುಜನಾದೊಡಮೇಂ|
    ಗೈವೊಡೆ ಖೇಲನಮಂ ಹತ-
    ಜೀವಿಕ್ಕುಂ ಬೆಂಕಿಯೊಳ್ ಪತಂಗಂ ಬಿಳ್ದುಂ||
    (ಹತಜೀವ=Death)

  10. The lifespan of a locust is meager.
    ದೈವನಿಯಮದಿಂ ಸ್ವಲ್ಪಮೆ
    ಜೀವಿಕ್ಕುಂ, ಬೆಂಕಿಯೊಳ್ ಪತಂಗಂ ಬಿಳ್ದುಂ
    ಸಾವನ್ನಪ್ಪುವ ಮುನ್ನಂ|
    ಗೋವಿಂದಂ ಬಾಳ್ವೆಯಿತ್ತಿಹನೆನಿತೊ ಅನಿತೇ!!

  11. ಪತಂಗಕ್ಕೆ ಸಹಜಮರಣವಿಲ್ಲ. ಅತ್ಮಹತ್ಯೆಯೇ ಗತಿ. ಆತ್ಮಹತ್ಯೆಯು ಅಸಫಲವಾಗುವುದನ್ನು ತಪ್ಪಿಸಲು, ನೀರಲ್ಲಿ ಮುಳುಗುವರು ಕಾಲಿಗೊಂದು ಭಾರವನ್ನು ಕಟ್ಟಿಕೊಳ್ಳುವಂತೆ, ನೇಣುಬಿಗಿದುಕೊಳ್ಳುವವರು ಕೈಗಳನ್ನು ಬಿನ್ನಹಿಂದೆ ಕಟ್ಟಿಕೊಳ್ಳುವಂತೆ, ಪತಂಗವು ಮೊದಲು ತನ್ನ ರೆಕ್ಕೆಗಳನ್ನು ಸುಟ್ಟುಕೊಂಡು ನಾತಿಕಾಲದಲ್ಲಿ ಸಾಯುತ್ತದೆ!
    ಸ್ವಾಗತ|| ಸಾಜಸಾವದು ಪತಂಗಕಮುಂಟೇಂ
    ಯಾಜನಂ ಮೊದಲು ರೆಂಕೆಯು ಕೇಳೈ|
    ಈಜ ತಪ್ಪಿಸುಗು ಕಟ್ಟಿಹ ಭಾರಂ
    ಗೋಜಲಾಗದವೊಲಾತ್ಮವಿನಾಶಂ||

    • ಅಯ್ಯೋ! ಇದು ಸಮಸ್ಯಾಪೂರ್ತಿಯಾಗಲಿಲ್ಲ. ಕಲ್ಪನೆಯು ಬಂದಂತೆಯೇ ಕವನಿಸಿಬಿಟ್ಟೆನೆ! ಕ್ಷಮೆಯಿರಲಿ.

  12. ಈ ವಿಧದಾವಿಧಿಯಾಟದೆ
    ಬೇವಸನಂಬಟ್ಟು ಭಾವಿಸಿರ್ದುರಿ ತಟ್ಟಲ್
    ಕಾವಿಂ ಸುಟ್ಟದೊ ರೆಂಕೆಯು
    ಜೀವಿಕ್ಕುಂ ಬೆಂಕಿಯೊಳ್ ಪತಂಗಂ ಬೀಳ್ದುo !!

    ಉತ್ಕಟವಾದ ಬಯಕೆಯ ಬೆಂಕಿಯೊಡನಾಟದಲ್ಲಿ ರೆಕ್ಕೆ ಸುಟ್ಟ ಪತಂಗ “ಜೀವಿಕ್ಕುಂ” = ಜೀಗುಡುತ್ತಿದೆ ( ~ ಜೀ.. ಎಂದು ಶಬ್ದಮಾಡಿದೆ) !!

    • ಅನುಕರಣಶಬ್ದವನ್ನು ಗುರುತಿಸಿರುವುದು ಚೆನ್ನಾಗಿದೆಯಾದರೂ, ಕೀಟಗಳು ’ಜೀಗುಟ್ಟು’ವುದು ಅವುಗಳು ತಮ್ಮ ದೈನಂದಿನ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾಗ. ಸಾವಿನ/ನರಳಾಟದಲ್ಲಿ ಅವುಗಳ ಚೀರಾಟವು ಹೇಗಿರುತ್ತದೆ ಎಂದು ತಿಳಿಯದಿದ್ದರೂ, ಕಾವ್ಯದಲ್ಲಿ ಮನುಷರಿಗೆ ಬಳಸುವಂತೆ ’ಹಾ/ಅಯ್ಯೋ’ ಎಂದು ಬಳಸಬಹುದೇನೋ. ಅಲ್ಲದೆ, (ಜೀಗುಟ್ಟು ಎಂದಲ್ಲದೆ) ಜೀವಿಕ್ಕು ಎಂಬಲ್ಲಿ ’ಇಕ್ಕು’ವನ್ನು ಬೇರ್ಪಡಿಸಿದರೆ ಉಳಿಯುವುದು ’ಜೀ’ ಅಲ್ಲ, ’ಜೀವ್’. ಆಗ ಜೀವ್ಗುಟ್ಟು ಎಂಬ ನೂತನಶಬ್ದವನ್ನು ಆವಿಷ್ಕರಿಸಬೇಕಾಗುತ್ತದೆ 🙁

      • ಬೆಂಕಿಯಲ್ಲಿ ಬಿದ್ದ ಪತ್ಂಗವನ್ನು ನಾವಿಬ್ಬರೇ ಬದುಕಿಸುತ್ತಿದ್ದೆವು
        ಕೈಜೋಡಿಸಿದ್ದಕ್ಕೆ ಧನ್ಯವಾದ ಉಷಾ! 🙂

        • ಇಬ್ಬರೇ ಅಲ್ಲ. ಕಾರ್ತಿಕ ಕಾಮಣ್ಣರು, “ಯಾವ ’ವೃತ್ತ’ದ (Circle at intersection of roads) ದೀಪಸ್ಥಂಭದ ಕೆಳಗೆ ’ಲಕ್ಷಣ’ವಾದ ಹುಳುಗಳಿರುತ್ತವೆ? ಬನ್ನಿ ಅಲ್ಲಿಗೆ ಹೋಗಿ ಅವುಗಳನ್ನು ಕಾಪಾಡೋಣ.” ಎಂಬಂತೆ ಕರೆನೀಡಿದ್ದಾರಲ್ಲ 😉

      • ಹೌದು ಕಾಂಚನ ಇದು , ನಿಮ್ಮ “ಧಾವಂತಂ ಸಿವ!… ” ಪದ್ಯ ತಂದ “ತುಡಿತ” / ಪ್ರಸಾದ್ ಸರ್ ರವರ “ಸಮಸ್ಯಾಪೂರ್ತಿ ಸ್ವಾಗತ” ಪದ್ಯ ತಂದ “ಸ್ಫೂರ್ತಿ” !!
        ಜೀಗುಟ್ಟಿ ರೆಕ್ಕೆಸುಟ್ಟು ಜೀವ್ಗುಟ್ಟು ವಂತಾಗಿದೆ !!

  13. The Pompeii worm (Golden coloured) is the world’s most heat-tolerant multi-celled creature. It is able to withstand temperatures above 176°F (80°C). The temperature of fire is much more than this, but this worm’s tolerance is clearly superior to that of other living beings, and hence used as a simile in this verse. ಅನ್ವಯ: ಬೆಂಕಿಯೊಳ್ ಬಿಳ್ದುಂ ಸಾವನ್ನಪ್ಪದೆಲೆ ಜೀವಿಕ್ಕುಂ ಎನ್ನಲ್ ಪತಂಗಂ (ಏಂ) ಸೌವರ್ಣದ ಪಾಂಪೆಕೃಮಿಯೆ?
    ಸೌವರ್ಣದ ಪಾಂಪೆಕೃಮಿಯೆ,
    ಜೀವಿಕ್ಕುಂ ಬೆಂಕಿಯೊಳ್ ಪತಂಗಂ ಬಿಳ್ದುಂ
    ಸಾವನ್ನಪ್ಪದೆಲೆನ್ನಲ್?|
    ದೇವನುಮೀಡೈ ಹುತಾಶನನಿಗೆಂದೆಂದುಂ||

  14. ಗೋಷ್ಠಿಯಲ್ಲಿ ಮಾಡಿದ ಪೂರಣ.

    ಸಾವಂ ಪ್ರಶ್ನಿಸಿ ಜವನೊಳ್
    ಸೇವಿಸಿಯಮೃತತ್ವಮಧುವನಾ ನಚಿಕೇತಂ
    ದೀವಿಗೆಯಾದಂ ಜಗಕಂ
    ಜೀವಿಕ್ಕುಂ ಬೆಂಕೆಯೊಳ್ ಪತಂಗಂ ಬಿಳ್ದುಂ

    • ‘Bruce Almighty’ is a good movie. God befriends a man and gives him almighty powers for a week, at the end of which he discovers that God’s business is like any other – Complex! Eventually the man comes under a truck. God has plans to give him a lease of life, for he is a talented one. Nevertheless, when the man checks-in in the netherworld, God says, “You can’t kneel down in the middle of a highway and live to talk about it son!” (Watch this clipping from 14:07 to 14:23 – https://www.youtube.com/watch?v=GtNQ9SdVqNI )

  15. ದೇವಂಗಾವುದು ಕಷ್ಟಂ?
    ನೋವಂ ಕಳೆಯುತಲಸಾಧ್ಯಮಂ ಸಾಧಿಪ್ಪಂ
    ಕಾವಂ ಸುರಿಸಿರೆ ಮಳೆಯಂ
    ಜೀವಿಕ್ಕುಂ ಬೆಂಕಿಯೊಳ್ ಪತಂಗಂ ಬೀಳ್ದುಂ

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)