Aug 212017
 

ಧೂಮಪಾನಿಯೆನಿಪಂ ಜನಾರ್ದನಂ

  20 Responses to “ಪದ್ಯಸಪ್ತಾಹ ೨೬೯: ಸಮಸ್ಯಾಪೂರಣ”

  1. ಸೋಮವಂಶಭವ ಧೂರ್ತರಿಂ ದಯಾ
    ಕ್ಷಾಮದಿಂದಲಿಳೆ ತಪ್ತಮಾಗಿರ
    ಲ್ಕಾಮಯಾಸ್ರದಿಳಿದೇಳ್ದ ಧೂಳಿನಾ
    ಧೂಮಪಾನಿಯೆನಿಪಂ ಜನಾರ್ದನಂ //

    ಧುರ್ಯೋಧನಾದಿಗಳಿಂದಾಗಿ ದಯೆಯ ಕ್ಷಾಮದಿಂದ ಭೂಮಿ ತಪ್ತವಾಗಿದ್ದಾಗ (ಅವರ) ರೋಗಗ್ರಸ್ತ ರಕ್ತ ಭೂಮಿಯ ಮೇಲೆ ಬಿದ್ದು ಎದ್ದ ಧೂಳಿನ ಹೊಗೆಯನ್ನು ಸೇವಿಸಿದ ಕೃಷ್ಣ ಧೂಮಪಾನಿಯೆನಿಸಿದ.

  2. ಶ್ಯಾಮಛಾಯೆ ಬುವಿಯಪ್ಪುವಾಗಳೇ
    ಧಾಮಕೈಯುತಿರೆ ಗೋಗಳೊಂದಿಗಂ
    ಹೋಮಧೂಮದೊಲೆ ಧೂಲಿಯೆದ್ದಿರಲ್
    ಧೂಮಪಾನಿಯೆನಿಪಂ ಜನಾರ್ದನಂ!

  3. ತಾಮಸಾರಿಜಗದೇಕವೀರನಂ
    ರಾಮನಂ ಪತಿತಪಾವನಾಖ್ಯನಂ
    ಪ್ರೇಮದಿಂ ನುತಿಸೆ ಧೂಪಸೇವೆಯೊಳ್
    ಧೂಮಪಾನಿಯೆನಿಪಂ ಜನಾರ್ದನಂ

    ಪೂಜಾಸಮಯದ ಧೂಪಧೂಮದಿಂದ ಧೂಮಪಾನಿಯೆನಿಸಿದ ಎನ್ನುವರ್ಥದಲ್ಲಿ

  4. ಆಮಹಾಸುರನ ದಾಸ್ಯದಿಂ ದಿಟಂ
    ಕ್ಷೇಮದಿಂ ಬಿಡಿಸಿ ಬಾಳ್ತೆಯಿತ್ತಿರಲ್
    ಭಾಮೆಯರ್ಕಳಿನೆ ಸುಯ್ದ ರೋಷದಾ
    ಧೂಮಪಾನಿ,ಯೆನಿಪಂ ಜನಾರ್ದನಂ!

  5. ಹಳಗನ್ನಡದ ಹದವಿಲ್ಲ. ಹಾಗೇ ಒಂದು ಚಿಕ್ಕ ಪ್ರಯತ್ನ. ತಪ್ಪಿದರೆ ತಿದ್ದಬೇಕಾಗಿ ವಿನಂತಿ _^_

    ವ್ಯೋಮಕೇಶನನು ಭೇಟಿಯಾಗಲುಂ
    ಹೈಮಶೈಲವನು ಹತ್ತುತಿರ್ಪನಾ
    ಶ್ಯಾಮಸುಂದರನು ರೇಚಕಾಸ್ಯದೊಳ್
    ಧೂಮಪಾನಿಯೆನಿಪಂ ಜನಾರ್ದನಂ

    • ನಿಮ್ಮ ಪದ್ಯಭಾವ ಚೆನ್ನಾಗಿದೆ. ಭೇಟಿಯಾಗಲುಂ ಎಂದರೆ ಭೇಟಿಯಾಗಲೂ ಎಂಬ ಅರ್ಥ ಬರುತ್ತದೆ. ನಿಮ್ಮ ಪದ್ಯವನ್ನೇ ಸ್ವಲ್ಪ ತಿದ್ದಿ ಹೀಗೆ ಬರೆಯಬಹುದು,
      ಸೋಮಶೇಖರನನೆಂದು ಪಾರ್ವೆನೆಂ
      ದಾ ಮುರಾರಿ ಹಿಮಶೈಲಮೇರಿ ತಾಂ
      ನೇಮದೆಂಬವೊಲೆ ಮಂಜಿನೊಳ್ ಪುಗಲ್
      ಧೂಮಪಾನಿಯೆನಿಪಂ ಜನಾರ್ದನಂ/
      ನಿಮ್ಮ ಪದ್ಯದ ತಾತ್ಪರ್ಯ ಇದೇ ಎಂದುಕೊಂಡಿದ್ದೇನೆ. ಅಲ್ಲವೆಂದಾದರೆ ಹೊಸ ಪೂರಣವಾಯ್ತು 🙂

      • Please read second line as “ದಾ ಮಹಾನಗಮನೇರುತುಂ ಗಡಾ”

        • ಧನ್ಯವಾದಗಳು ಮಂಜು ಸರ್. ನಿಮ್ಮ ಪೂರಣ ಸುಂದರವಾಗಿದೆ. ದಯವಿಟ್ಟು ಪದ್ಯದ ತಾತ್ಪರ್ಯ ಮತ್ತು ಈ ಶಬ್ದಗಳ ಅರ್ಥ ತಿಳಿಸಿದರೆ ಉಪಕಾರವಾಗುವುದು.. _^_

          ಪಾರ್ವೆನೆಂದಾ
          ಪುಗಲ್
          ಗಡಾ

          • ತಾತ್ಪರ್ಯ- ಶಿವನನ್ನು ಭೇಟಿಯಾಗಲು ವಿಷ್ಣುವು ಹಿಮಗಿರಿಯನ್ನೇರುತ್ತಿರುವಾಗ ಪ್ರಕೃತಿಸಹಜವಾದ ಮಂಜಿನೊಳಗೆ ಹೊಕ್ಕನು.ಆ ಮಂಜೇ ಹೊಗೆಯಂತೆನಿಸಿ ಧೂಮಪಾನಿಯೆನಿಸಿದ.

            ಪಾರ್=> ನೋಡು ಅಲ್ಲಿ ನೋಳ್ಪೆನೆಂದಾ ಎಂದೂ ಬಳಸಬಹುದು.
            ಪುಗಲ್=> ಪ್ರವೇಶಿಸಲು
            ಗಡಾ/ಗಡಂ ಎಂಬುದು ಮೆಚ್ಚುಗೆ,ಆಕ್ಷೇಪ etc ಸೂಚಿಸಲು ಬಳಸುವ ಅವ್ಯಯ, ಸಂಸ್ಕೃತದ ಚ,ವೈ,ತು,ಹಿ ಗಳಂತೆಯೇ ಪಾದಪೂರಣಕ್ಕೆ ಬಳಸಬಹುದು. By the way ನಾನು ಸರ್ ಅಲ್ಲ 🙂

          • ಧನ್ಯವಾದಗಳು ಮಂಜ ಅವರೇ :), ಒಳ್ಳೆಯ ಪೂರಣ ಮತ್ತು ವಿವರಣೆಗೆ _^_

  6. ಭ್ರಾಮಕಂಗುಡುವ ಹುಕ್ಕ ಹೊಕ್ಕಳೊಳ್
    ಮೈಮೆಗಾರಗಿರೆ ಚುಟ್ಟ ಬೆಟ್ಟಿನೊಳ್
    ಶ್ಯಾಮಲಾಂಗಗದೊ ಕೆಂದುಟಿಂ ಗಡಾ
    ಧೂಮಪಾನಿಯೆನಿಪಂ ಜನಾರ್ದನಂ ।।

    ಹುಕ್ಕ/ಗುಡುಗುಡಿ ಸೇದುತ್ತಿರುವಂತೆ ಕಾಣುವ – ಪದ್ಮನಾಭ / ಸದಾ ಬೆಟ್ಟಿನಲ್ಲಿ ಕೊಳವೆ ಹಿಡಿದಿರವ – ಕೃಷ್ಣ / ತಾನು ಕಪ್ಪಗಿದ್ದು ತುಟಿ ಕೆಂಪಾಗಿರುವ – ಶ್ಯಾಮಸುಂದರ / “ಧೂಮಪಾನಿ” ಅನ್ನಿಸುವನಲ್ಲವೇ ಆ – ಜನಾರ್ದನ ?!!

  7. ಸೋಮ-ಮಂಜನುಂ-ಅನಂತರಾದ್ಯರುಂ
    ನೇಮಮೆಂಬವೊಲು ಗೈಯಲಂತೆಯೇ|
    ಸಾಮಿನಿಂದೆ ಸಹವಾಸದೋಷದಿಂ
    ಧೂಮಪಾನಿಯೆನಿಪಂ ಜನಾರ್ದನಂ (ಎಂಬೊಬ್ಬ; ದೇವನಲ್ಲ)||

    • I never spoiled anyone and even myself 👿

    • ಅನಂತಾದ್ಯರುಂ ಅಂದ್ರೆ ವಿಸಂಧಿ ದೋಷವಾಗುತ್ತದಲ್ಲ..ಹಾದಿರಂಪರುಂ ಅಂದ್ರೆ ಸರಿಹೋಗುತ್ತೆ 😉

      • ಅನಂತರೆಂಬೊಬ್ಬರ ಹೆಸರು ಸ್ಪಷ್ಟವಾಗಿ ಕಾಣಲೆಂದು ಶ್ರಾವ್ಯರೂಪದಲ್ಲಿ ಹಾಗೆ ಬರೆದೆ ಅಷ್ಟೆ. ಅದನ್ನು ಸಂಧಿಯಾಗಿಸಿದಾಗ ’ಮಂಜನುಮನಂತರಾದ್ಯರುಂ’ ಎಂದು ಸರಿಯಾದ ದೃಶ್ಯರೂಪವಾಗುತ್ತದೆ 😉 ನನ್ನ ಹೆಸರನ್ನು ವಾಚ್ಯವಾಗಿ ಹೇಳಬೇಕಿಲ್ಲ; ’ಆದ್ಯರುಂ’ ಎಂಬಲ್ಲಿ ಧ್ವನಿಮಾರ್ಗದಿಂದ ಹೇಳಿದ್ದೆ 🙂 (ನಿಮ್ಮ ಸವರಣೆಯು ಛಂದೋಬದ್ಧವಲ್ಲ ಎಂಬುದು ಚರ್ಚಾನಾಸ್ಪದ 😉 )

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)