ಪದ್ಯಸಪ್ತಾಹ ೨೬೮: ವರ್ಣನೆ ಪದ್ಯ ಕಲೆ, ವರ್ಣನೆ Add comments Aug 142017 ಗೋಕುಲಾಷ್ಟಮಿಯ ಅಲಂಕಾರವನ್ನು ವರ್ಣಿಸಿ ಪದ್ಯ ರಚಿಸಿರಿ 10 Responses to “ಪದ್ಯಸಪ್ತಾಹ ೨೬೮: ವರ್ಣನೆ” ಅನಂತಕೃಷ್ಣ says: August 15, 2017 at 2:14 pm ಕರದಲಿ ಕೊಳಲನು ಶಿರದೊಳು ಗರಿಯನು ಧರಿಸುತಲಧರದಿ ಬೆಣ್ಣೆಯನು ಬಿರಿದಿಹ ಮಂದಸ್ಮಿತಕುಸುಮವನೀಂ ಕರವನು ಮುಗಿದರಿಗೀಯುತಿಹೆ Reply kupperao says: August 21, 2017 at 2:51 pm chennagide Reply ಅನಂತಕೃಷ್ಣ says: August 15, 2017 at 7:22 pm ಗಿರಿಯಂ ಬೆರಳುಂಗುರಮಾ- -ಗಿರಿಸುತೆ, ವಿಶ್ವಮನೆ ಕೃಷ್ಣ! ಬೆಣ್ಣೆಯ ತೆರದಿಂ- -ದಿರಿಸುತೆ ಬಾಯೊಳ್ ಮೆರೆಯೈ ಮರೆಸುತುಮೆಮ್ಮೀ ವಿರಿಂಚಿಕೃತ ಭವಭರಮಂ ಗಿರಿಯನ್ನು ಬೆರಳುಂಗುರವನ್ನಾಗಿಸಿ,ಜಗತ್ತನ್ನೇ ಬೆಣ್ಣೆಯಂತೆ ಬಾಯೊಳಗಿರಿಸಿಕೊಂಡ ಕೃಷ್ಣ(ಇವೆರಡನ್ನೇ ಕೃಷ್ಣ ಅಲಂಕಾರದಂತೆ ಧರಿಸಿದ ಎಂದುಕೊಂಡು:-) ) ನಮ್ಮ ಭವಬಂಧಗಳನ್ನು ಮರೆಸುತ್ತಾ ಮೆರೆಯಲಿ ಎನ್ನುವ ಪ್ರಯತ್ನ Reply ಮಂಜ says: August 15, 2017 at 8:22 pm ಚೆನ್ನಾಗಿದೆ. Reply ಅನಂತಕೃಷ್ಣ says: August 15, 2017 at 9:45 pm ಧನ್ಯವಾದಗಳು _/\_.. ನಿನ್ನ ಸಲಹೆಯಂತೆ ಜಗಮನ್ನೆ ಅನ್ನುವುದನ್ನು ವಿಶ್ವಮನೆ ಎಂದು ತಿದ್ದಿದ್ದೇನೆ Reply Kanchana says: August 16, 2017 at 6:15 pm ಮರೆಯಲಮ್ಮೆವುಧರೆಯೊಳೆಂದಿಗು ಹರಿಯ ಬಾಲ್ಯದ ಸೊಗದ ಚಣಗಳ ನರರೆ ಕಾಣುವೆವಲ್ತೆ ಕಂದನ ಮುಗ್ಧಕೇಳಿಯೊಳೇ ಕೊರಳ ಹಾರವೊ ,ಶಿರದೆ ಪಿಂಛವೊ, ಮೆರಗನೆಚ್ಚಿಪ ಪೀತವಸ್ತ್ರಮೊ ನೆರೆಯಲಪ್ಪೆವೆ ಬಾಲಕೃಷ್ಣನೆ ಕುವರನೆಮಗೆಂದು! Reply Neelakanth says: August 17, 2017 at 12:57 pm ಚೆನ್ನಾಗಿದೆ. ತುಂಟಕೇಳಿ is ari-samasa 🙂 Reply Kanchana says: August 18, 2017 at 9:59 pm Thank you:-) Reply usha says: August 19, 2017 at 5:45 pm ಲೋಕವನೆ ಸೇವಿಪಗೆ ಬೆಣ್ಣೆಯುಂಡೆಯು ತರವೆ ಸಾಕೆಂತು ಮುಡಿಗೊಂದು ನವಿಲುಗರಿಯುಂ । ನಾಕು ಸಾಲೊಳು ಸಿಂಗರಿಸಲಾಗಲದೊ ಪಾಡಿ ಗೋಕುಲಾಷ್ಟಮಿಯಂದು ಮಧುರಾಷ್ಟಕಂ ।। ಬಾಯಲ್ಲಿ ಜಗವನ್ನೇ ತೋರಿದ “ಶ್ರೀ ಕೃಷ್ಣ”ನಿಗೆ – ಬರಿ ಬೆಣ್ಣೆಯಿತ್ತು, ನವಿಲುಗರಿಯ ಕಿರೀಟವಿಟ್ಟರೆ ಸಾಕೇ ? ನಾಲ್ಕು ಸಾಲಿನಲ್ಲಿ ಅವನನ್ನು ಬಣ್ಣಿಸಲು ಸಾಧ್ಯವಾಗದು, ಹಾಗಾಗಿ ಪಾಡಿ – “ಗೋಕುಲ” ಅಷ್ಟಮಿಗೆ “ಮಧುರ” ಅಷ್ಟಕ !! (ಅವ ಹುಟ್ಟಿದ್ದು ಮಥುರೆಲಿ ಬೆಳೆದಿದ್ದು ಗೋಕುಲ) Reply ಹಾದಿರಂಪ says: August 27, 2017 at 12:11 pm ಕೆಂಪನೆಯ ಕೋಡುಬಳೆರಾಶಿಯು ಕಂಪ ಸೂಸುವ ಬೆಳ್ಮಿಠಾಯಿಯು ಸಂಪುಟಂ(ರಾಶಿ) ತಿಳಿಹಳದಿಬಣ್ಣದ ತೇಂಗೊಳಲ್ ಮೇಣಿಂ| ತಂಪನೀಯುವ ಹೆಸರಪಾಯಸ ಜೋಂಪು ಗಸಗಸೆಪಾಯಸದಿನಿಂ ’ರಂಪ’ಗಿಷ್ಟವು ಬಣ್ಣಬಣ್ಣದವೆಲ್ಲ ತಿನಿಸುಗಳು|| Reply Leave a Reply Cancel reply Your Comment You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong> Name (required) E-mail (required) URI Notify me of followup comments via e-mail. You can also subscribe without commenting. Check here to Subscribe to notifications for new posts
ಕರದಲಿ ಕೊಳಲನು ಶಿರದೊಳು ಗರಿಯನು
ಧರಿಸುತಲಧರದಿ ಬೆಣ್ಣೆಯನು
ಬಿರಿದಿಹ ಮಂದಸ್ಮಿತಕುಸುಮವನೀಂ
ಕರವನು ಮುಗಿದರಿಗೀಯುತಿಹೆ
chennagide
ಗಿರಿಯಂ ಬೆರಳುಂಗುರಮಾ-
-ಗಿರಿಸುತೆ, ವಿಶ್ವಮನೆ ಕೃಷ್ಣ! ಬೆಣ್ಣೆಯ ತೆರದಿಂ-
-ದಿರಿಸುತೆ ಬಾಯೊಳ್ ಮೆರೆಯೈ
ಮರೆಸುತುಮೆಮ್ಮೀ ವಿರಿಂಚಿಕೃತ ಭವಭರಮಂ
ಗಿರಿಯನ್ನು ಬೆರಳುಂಗುರವನ್ನಾಗಿಸಿ,ಜಗತ್ತನ್ನೇ ಬೆಣ್ಣೆಯಂತೆ ಬಾಯೊಳಗಿರಿಸಿಕೊಂಡ ಕೃಷ್ಣ(ಇವೆರಡನ್ನೇ ಕೃಷ್ಣ ಅಲಂಕಾರದಂತೆ ಧರಿಸಿದ ಎಂದುಕೊಂಡು:-) ) ನಮ್ಮ ಭವಬಂಧಗಳನ್ನು ಮರೆಸುತ್ತಾ ಮೆರೆಯಲಿ ಎನ್ನುವ ಪ್ರಯತ್ನ
ಚೆನ್ನಾಗಿದೆ.
ಧನ್ಯವಾದಗಳು _/\_.. ನಿನ್ನ ಸಲಹೆಯಂತೆ ಜಗಮನ್ನೆ ಅನ್ನುವುದನ್ನು ವಿಶ್ವಮನೆ ಎಂದು ತಿದ್ದಿದ್ದೇನೆ
ಮರೆಯಲಮ್ಮೆವುಧರೆಯೊಳೆಂದಿಗು
ಹರಿಯ ಬಾಲ್ಯದ ಸೊಗದ ಚಣಗಳ
ನರರೆ ಕಾಣುವೆವಲ್ತೆ ಕಂದನ ಮುಗ್ಧಕೇಳಿಯೊಳೇ
ಕೊರಳ ಹಾರವೊ ,ಶಿರದೆ ಪಿಂಛವೊ,
ಮೆರಗನೆಚ್ಚಿಪ ಪೀತವಸ್ತ್ರಮೊ
ನೆರೆಯಲಪ್ಪೆವೆ ಬಾಲಕೃಷ್ಣನೆ ಕುವರನೆಮಗೆಂದು!
ಚೆನ್ನಾಗಿದೆ. ತುಂಟಕೇಳಿ is ari-samasa 🙂
Thank you:-)
ಲೋಕವನೆ ಸೇವಿಪಗೆ ಬೆಣ್ಣೆಯುಂಡೆಯು ತರವೆ
ಸಾಕೆಂತು ಮುಡಿಗೊಂದು ನವಿಲುಗರಿಯುಂ ।
ನಾಕು ಸಾಲೊಳು ಸಿಂಗರಿಸಲಾಗಲದೊ ಪಾಡಿ
ಗೋಕುಲಾಷ್ಟಮಿಯಂದು ಮಧುರಾಷ್ಟಕಂ ।।
ಬಾಯಲ್ಲಿ ಜಗವನ್ನೇ ತೋರಿದ “ಶ್ರೀ ಕೃಷ್ಣ”ನಿಗೆ – ಬರಿ ಬೆಣ್ಣೆಯಿತ್ತು, ನವಿಲುಗರಿಯ ಕಿರೀಟವಿಟ್ಟರೆ ಸಾಕೇ ? ನಾಲ್ಕು ಸಾಲಿನಲ್ಲಿ ಅವನನ್ನು ಬಣ್ಣಿಸಲು ಸಾಧ್ಯವಾಗದು, ಹಾಗಾಗಿ ಪಾಡಿ – “ಗೋಕುಲ” ಅಷ್ಟಮಿಗೆ “ಮಧುರ” ಅಷ್ಟಕ !! (ಅವ ಹುಟ್ಟಿದ್ದು ಮಥುರೆಲಿ ಬೆಳೆದಿದ್ದು ಗೋಕುಲ)
ಕೆಂಪನೆಯ ಕೋಡುಬಳೆರಾಶಿಯು
ಕಂಪ ಸೂಸುವ ಬೆಳ್ಮಿಠಾಯಿಯು
ಸಂಪುಟಂ(ರಾಶಿ) ತಿಳಿಹಳದಿಬಣ್ಣದ ತೇಂಗೊಳಲ್ ಮೇಣಿಂ|
ತಂಪನೀಯುವ ಹೆಸರಪಾಯಸ
ಜೋಂಪು ಗಸಗಸೆಪಾಯಸದಿನಿಂ
’ರಂಪ’ಗಿಷ್ಟವು ಬಣ್ಣಬಣ್ಣದವೆಲ್ಲ ತಿನಿಸುಗಳು||