Sep 042017
ಓಣಮ್ ಹಬ್ಬದ ಹೂವಿನ ರಂಗೋಲಿಯನ್ನು ವರ್ಣಿಸಿ ಪದ್ಯರಚಿಸಿರಿ. ಈ ಕೆಳಕಂಡ ಅಕ್ಷರಗಳನ್ನು ನಿರ್ದೇಶಿತ ಸ್ಥಾನದಲ್ಲಿ ಬಳೆಸಿರಿ.
1ನೇ ಸಾಲು: 3ನೇ ಅಕ್ಷರ ‘ಕ’
2ನೇ ಸಾಲು: 4ನೇ ಅಕ್ಷರ ‘ಚ’
3ನೇ ಸಾಲು: 5ನೇ ಅಕ್ಷರ ‘ತ’
4ನೇ ಸಾಲು: 6ನೇ ಅಕ್ಷರ ‘ಪ’
ಛಂದಸ್ಸು ನಿಮ್ಮ ಆಯ್ಕೆ (ಈ ಬಾರಿಯ ಪ್ರತಿಕ್ರಿಯೆಗಳನ್ನು ಗಮನಿಸಿ ಛಂದಸ್ಸನ್ನೂ ಮುಂದಿನ ನ್ಯಸ್ತಾಕ್ಷರಿಯ ಕಂತುಗಳಲ್ಲಿ ನಿರ್ದೇಶಿಸಲಾಗುವುದು)
ವರ್ಣಕಮಲ್ಲಿರಲ್ ವಿನುತಕಲ್ಪನೆಯಂತೆಯೆ ಚಿತ್ರಮುಂ ಸಲ
ಲ್ವರ್ಣನಚರ್ಯೆಯುಮ್ ಲಲಿತಲೇಖನಮೊಪ್ಪಿರೆ ಶೋಭಿಸಲ್ಕೆ ಮೇ
ಣರ್ಣವಮುಂ ತದೀಯಸುತನಂತೆಯೆ ಭಾಸುರರಕ್ಕೆ ಚುಕ್ಕಿಗಳ್
ಪರ್ಣಪರಾಜಿಪಲ್ಲವಿಪ ರೇಖೆಯ ಕಬ್ಬಮೆ ರಂಗವಲ್ಲಿ ತಾಂ //
ವರ್ಣಕ(ಬಣ್ಣ,ಛಂದಸ್ಸು) ಇರಲು, ಕಲ್ಪನೆ,ಚಿತ್ರವೂ ಕೂಡಿರಲು(ಚಿತ್ರ,ಚಿತ್ರಕಾವ್ಯ) ವರ್ಣನಚರ್ಯೆಯೂ (ಬಣ್ಣತುಂಬುವ,ವರ್ಣಿಸುವ ಕೆಲಸ),ಲಲಿತವಾದ ಬರವಣಿಗೆಯೂ ಒಪ್ಪಿರಲು, (ವರ್ಣನೆಗಳಲ್ಲಿ ಅವಶ್ಯವಾಗಿ ಬರಲೇಬೇಕಾದ) ಸಾಗರ,ಸೂರ್ಯ,ಚಂದ್ರಾದಿಗಳು ಚುಕ್ಕಿಗಳಾಗಿರಲು, ಉದ್ಯಾನವನದಂತಿರುವ ಚಿಗುರುವ ರೇಖೆಗಳಿರಲು ರಂಗೋಲಿಯು ಕಾವ್ಯವೇ ಆಗಿದೆ. ದುಷ್ಕರಪ್ರಾಸದಿಂದ(ನನಗೆ) ಪದ್ಯರಚನೆಯು ತ್ರಾಸವೇ ಆಗಿದೆ 🙁
ಉತ್ತರೋತ್ತರಘಟ್ಟದಲ್ಲಿ ಛಂದಸ್ಸನ್ನು ನೀವೇ ನಿರ್ದೇಶಿಸುವುದೆಂದರೆ, ನಮಗೆ ಇನ್ನೂ ಸುಲಭವಾಗಿಸಿದಂತೆ!
ಸಾಗುತ್ತೆ ಮುಂದಮುಂದಕ್ಕೆ ಅಭ್ಯಾಸಿಗಳ್
ಮೇಗಳ ಸ್ಥಾನಕ್ಕಮೇರಬೇಕೈ|
ಹೀಗೀಗ ಕ್ಲಿಷ್ಟಮಾಗಿಸಿ ಮುಂದೆ ಸೌಲಭ್ಯ-
ವಾಗಿಸುವುದೇಕೆಂಬ ಹಾದಿರಂಪಂ||
ಅಲ್ಲದೆ, ಉತ್ತರಾಕ್ಷರವು ಸಂಯುಕ್ತಾಕ್ಷರವಾದಾಗ ಲಘುನ್ಯಸ್ತಾಕ್ಷರವು ಗುರುವಾಗುವುದಾದರೂ, ವಿವಿಕ್ತವಾಗಿ ಅದರ ದೃಶ್ಯರೂಪವು ಲಘುವಾಗಿಯೇ ಉಳಿಯುವುದರಿಂದ, ಸರ್ವಲಘುನ್ಯಸ್ತಾಕ್ಷರಿಯು ಯಾವ ಛಂದಸ್ಸಿಗೂ ಒಗ್ಗುತ್ತದೆಯಲ್ಲವೆ?
che che.. koTTa sthaanadalli koTTa varNagaLu ellive endu huDukuttidde nimma padyadalli 🙁
You can’t have the pie and eat it too ಎಂಬ ಉಕ್ತಿಯ ಪ್ರಕಾರ, ನಿರ್ದಿಷ್ಟಸ್ಥಾನಗಳಲ್ಲಿ (’ಕೊಟ್ಟಸ್ಥಾನಗಳಲ್ಲಿ’ ಅರಿಯಲ್ಲವೆ?) ಇತರ ವರ್ಣಗಳನ್ನು ಹಾಗೂ, ನಿರ್ದಿಷ್ಟವರ್ಣಗಳನ್ನು ಇತರ ಸ್ಥಾನಗಳಲ್ಲಿ ಇರಿಸುವುದು ಸಾಧು.
ಕೊಟ್ಟ ಸ್ಥಾನ is not ari 🙂 “bengaloorige koTTa vadhu” ariyaguttaaLeye? koTTa vachana ariyaadeete? tinda anna ariye? banda mitra ariyaadaneye?!
Oh, I wanted to delete it. I delayed and got a mouthful from you 😉
ಕರಕಮಲದೊಳು ಕೊಯ್ದ ಹೂಗಳ
ಹರಿಯ ಚರಣಕೆ ಬಾಗಿದರಸನ
ಧರೆಯ ಗತವೈಭವವ ವನಿತೆಯರೆಲ್ಲ ನುತಿಸುತ್ತ I
ಕರಿತುಳಸಿ ಪತ್ರೆಗಳ ವೃತ್ತವ
ಬರೆದರಸಿನದ ಗೊಂಡೆ ಹೂಗಳ –
ನೆರಚಿ ದಾಸನ ,ತುಂಬೆ ರಥಪುಷ್ಪಗಳ ಜೋಡಿಸಲು II
ದೈವವು ನಿರ್ಮಿಸಿದ ಪುಷ್ಪದಲ್ಲಿ corolla(ದಳ), calyx(ಪುಷ್ಪಪಾತ್ರದಳ – ಸಾಮಾನ್ಯವಾಗಿ ಹಸುರುಬಣ್ಣದ್ದು), andraecium(ಪುರುಷಾಂಗ), gynaecium(ಸ್ತ್ರ್ಯಂಗ), peduncle(ಕಾವು) ಇತ್ಯಾದಿಗಳಿರುತ್ತವಷ್ಟೆ. ಇತರೆಲ್ಲವನ್ನುಳಿದು ಬರಿಯ ದಳಗಳನ್ನು ಮಾತ್ರ ಬಳಸಿಕೊಂಡು, ಸುಂದರವೇ ಆದರೂ ಪ್ರಕೃತಿಯಲ್ಲೆಲ್ಲಿಯೂ ಇಲ್ಲದ ಪುಷ್ಪದಲವಿನ್ಯಾಸವನ್ನು ಸೃಷ್ಟಿಸುವುದು ಪಾರ್ಶ್ವಗುಣಗ್ರಹಣ; ಮುಖಕ್ಕೆ ಅಸಾವಯವಶೃಂಗಾರವನ್ನು ಮಾಡಿದಂತೆ; ನೋಡಲು ಚಂದವಿರುವ ಮನುಷ್ಯರನ್ನು ಮಾತ್ರ ಪ್ರೀತಿಸಿದಂತೆ.
ಮಲ್ಲಿಕಾಮಾಲೆ|| ದೇವಕಲ್ಪಿತ ಪೂವದೋ ದಲ-ಪಾತ್ರ-ರೇಣುಸುಸಂಗಮಂ
ಕೇವಲಂ ಚಲುವಿಂಗೆ ಸಂಚಯಗೈದು ರೂಪಿಸೆ ವರ್ತುಲಂ|
ರಾವ ಬೀರುತ, (ಪ್ರ)ಸಾಧನಂ ಬೆಳಗಿರ್ಪವೋಲದಸಾವಯಂ
ಸೋವಿಯೆಂದೆನಿಪರ್ ವಿಧಾತನುಮಿತ್ತ ರೂಪವ ಪೊಂದಿದರ್!!
ಕರ್ಮಿತ ಸಾಧುವಲ್ಲ ಅನಸ್ತದೆ.
ಕರ್ಮಿತ ಸಾಧುವಾದರೂ, ದೈವಕರ್ಮಿತ ಪೂ ಅರಿ 🙂
ಸವರಿದ್ದೇನೆ. ಧನ್ಯವಾದಗಳು.
ಅರಿಯಿನ್ನೂ ತೊಲಗಿಲ್ಲ 🙂
ಕನಕಾಂಬರಮಂ ಪೋಲ್ದಿ-
ರ್ಪ ನೆಲಂ ಚಮಕಿರ್ಪುದೊಂಟಿ ದೀಪಂ ಮಧ್ಯಂ
ದಿನಪಂ ಜತೆಯಿತ್ತೋಣಂ(ಜಂ)
ಮನವಂ ರಂಜಿಪುದು ಪೂತು ಪೂವಲಿ ಪೂವಿಂ ।।
ಪೂವಲಿ = ರಂಗವಲಿ
ಹೂವಲಿ ಅರಳಿದ ಹೂವ ರಂಗೋಲಿ !!
ಸಾಮಾನ್ಯವಾಗಿ ಹಳದಿ / ಕೇಸರಿ ಹೂ ಗಳಲ್ಲಿ ಕಂಗೊಳಿಸುವ (ಮಧ್ಯದಲ್ಲಿ ಎತ್ತರದ ಹಿತ್ತಾಳೆ ದೀಪದ ಕಂಬ!) – “ಪೂಕಲಂ”ನ ಬಣ್ಣನೆ !!
ನ್ಯಸ್ತಾಕ್ಷರಿಯಲ್ಲಿ ಹೇಳಲ್ಪಟ್ಟ ಅಕ್ಷರವನ್ನೇ ಬಳಸಬೇಕೇ? ಅಥವಾ ಆ ವರ್ಣಮಾಲೆಯ ಯಾವ ಅಕ್ಷರವನ್ನೂ ಬಳಸಬಹುದೇ?
ಹೌದು ಮಂಜುನಾಥ್, ಗಮನಿಸಲಿಲ್ಲ ತಪ್ಪಾಗಿದೆ, ಅದೇ ಅಕ್ಷರಗಳನ್ನು ತರಬೇಕು, “ಸಂಧಿ”ಗೆ ಅವಕಾಶವಿರುವುದೇ ಎಂದು ತಿಳಿಯದು. (ಇರುವುದಾದರೆ ಸ್ವಲ್ಪ ಬದಲಾವಣೆಯೊಂದಿಗೆ)
ಕನಕಾಂಬರಮಂ ಪೋಲ್ದಿ-
ರ್ಪ ನೆಲಂ ಚಮಕಿರ್ಪುದೊಂಟಿ ದೀಪಂ ಮಧ್ಯಂ
ದಿನಪಂ, ವ್ರತಮಿಂತೋಣಂ(ಜಂ)
ಮನವಂ ರಂಜಿಪುದು ಪೂತು ಪೂವಲಿ ಪೂವಿಂ ।।
ಕನಕ,ಕುಂಕುಮ,ನೀಲ,ಹರಿತದ
ಮನಕೆ ಚಣದೊಳು ಮುದಮನೀಯುತ-
-ಲನವರತ ಪರಿಮಳವ ಬೀರುವ ಕುಸುಮವರ್ಣಿಕೆಯೀ
ವನಿತೆಯರ ಪರಿಪರಿಯ ನೃತ್ತದೊ-
-ಳಿನಿತು ಮೆರುಗನು ಪಡೆದು ಮೆರೆದಿಹ,
ನಿನದದಿಂದುಲ್ಲಸಿತವಾಗಿಹ ಸೊಬಗನೇನೆಂಬೆ
ಹೂವಿನ ರಂಗೋಲಿ ಸುತ್ತಲೂ ನಲಿಯುತ್ತಿರುವ ವನಿತೆಯರಿಂದ,ಅವರು ನಕ್ಕು ನಲಿಯುತ್ತಿರುವುದರಿಂದ ಉಂಟಾಗುವ ಶಬ್ದದಿಂದ ಹೊಸ ಮೆರುಗನ್ನೂ, ಉಲ್ಲಾಸವನ್ನೂ ಪಡೆದಿದೆ ಎನ್ನುವ ಪ್ರಯತ್ನ.
ಮಾಡೆನ್ನೆ ಒಂದನುಂ ಬೇರೇನನೋ ಮಾಳ್ಪ
ಖೋಡಿಯಾದೆಯ ನೀನನಂತಕೃಷ್ಣ|
ನೋಡಯ್ಯ ಬಗೆಯ ಪೂವಿನಲಂಕೃತಿಯನೆನ್ನೆ
ನಾಡು(ಟ್ಟು)ಪೆಣ್ಗಳೊಳೆಂತೊ ದಿಟ್ಟಿನೆಟ್ಟೆ!!
Other options for the last line:
ಚೂಡಿದಾರೇ ಚಕ್ಷುವಿಂಗಮಾಯ್ತೇಂ??/
ಲೇಡಿಗಳ ಲೇವಡಿಗಮೀಡಾಗುವೈ!!/
ವಾಡಿಕೆಯೆ ಮಿಗಿಲಾಯ್ತೆ, (bus stop)ಬಸ್ಸ್ಟಾಪಿದೇಂ??/
ಚೌಡಿಯಾದಾಳವಳು ಓಡಿಪೋಗೈ!!/
ತೋಡಿಕೊಂಡಿಹೆ ಮನದ ಹಪಹಪಿಯ ನೀಂ!!/
ಮೂಡಿತೇಂ ಮಾಧುರ್ಯಮೆದೆಗೂಡೊಳು??/
ಹೇಡಿಯಂದಿದ್ದೆ ನೀಂ ರೌಡಿಯೀಗಳ್!!/
ವೀಡದಾರಿಯ ನೀನು ಬೇಗ ಹಿಡಿಯೈ||/
ಬೇಡಿಕೊಳ್ಳುವೆ ಚಾಳಿಯಂ ಕೈಬಿಡೈ||
ಮೂಡಿಹುದು ಮನದೊಳಗೆ ಸಾಜದಲಿ ಭಾವವಿದು
ತೋಡಿಕೊಂಡಿಹೆನದಕೆ ಕೇಳಿ ಗುರುವೇ
ಹಾಡಿರುವೆನೀ ಕವನ ಖೋಡಿತನವೇನಿಲ್ಲ
ನೋಡುತಿಹ ದಿಟ್ಟಿಯೊಳು ಕೆಡುಕದಿಲ್ಲ _/_
ನೋಡುತಿಹ ’ದಿಟ್ಟಿ’ಯೊಳು ಕೆಡುಕದಿಲ್ಲ…….
ತನ್ಮಾತ್ರಗಳೊಳು ’ದೃಷ್ಟಿ’ಯನೊಂದ ಪರಿಗಣಿಸಿ
ಮನ್ಮಥನೆ ನೀ ಜಾಣತನವ ಮೆರೆದೈ|
ಸನ್ಮಿತ್ರ ರುಚಿ, ರವ, ಘ್ರಾಣ ಮೇಣ್ ಸ್ಪರ್ಶದೊಳ್
ತನ್ಮಯಂ ನೀನಾಗದಿರ್ದಪೆಯ ಪೇಳ್||
ಎಲ್ಲವಂ ಮೀರಿರುವ ಮಲ್ಲನಾನೇನಲ್ಲ
ಕಳ್ಳತನವಿಲ್ಲವೆನ್ನಯ ಭಾವದೊಳ್
ಹುಲ್ಲುಕಡ್ಡಿಯ ಮೇಲೆ ಬೊಮ್ಮನೀ ಬಾಣವನು(ಬ್ರಹ್ಮಾಸ್ತ್ರ)
ನಿಲ್ಲಿಸದೆ ಬಿಡುತಿರುವಿರೇಕೆ ಗುರುವೇ?
ಸಹಜಮಂ ಮೀರುತಲಿ ಸಾಧನೆಯಗೈಯಲ್ಕೆ
ವಹಿಸುತಲಿ ಶ್ರದ್ಧೆಯಂ ಕಾರ್ಯಗೈವೆಂ
ದಹಿಸುತಲಿ ಕಾಮನಂ ಕರ್ತವ್ಯವರಿಯುತಲಿ
ಸಹನೆಯಿಂ ಸರಸತಿಯ ಸೇವೆಗೈವೆಂ
ಚೌಪದಿಯಾದ್ದರಿಂದ ಹಳೆ-ಹೊಸ-ನಡುಗನ್ನಡಗಳನ್ನು ಬೆರೆಸುವ ಸ್ವಾತಂತ್ರ್ಯ ತೆಗೆದುಕೊಂಡಿದ್ದೇನೆ.
ಪದ್ಯ ನಿಮಗೆ ಅನುಚಿತವೆನಿಸಿದ್ದರಿಂದ ಸ್ವಲ್ಪ ಸಮಯ ತೆಗೆದುಕೊಂಡು ಇನ್ನೊಂದು ನ್ಯಸ್ತಾಕ್ಷರೀ ಪ್ರಯತ್ನ ಮಾಡುತ್ತೇನೆ.
ಅಯ್ಯೋ, ಅನುಚಿತವೇನೂ ಇಲ್ಲ. ನಿಮ್ಮ ಪದ್ಯವು ಚೆನ್ನಾಗಿಯೇ ಇದೆ. ಇದೆಲ್ಲ lateral ಪದ್ಯಸಂಭಾಷಣೆಯಷ್ಟೆ.
ಚೆನ್ನಾಗಿಲ್ಲ, ಇನ್ನೊಂದು ಪದ್ಯ ಬರಿ ಅಂತೀರಿ ಅಂತ ಖುಷೀಲಿ ನಾನಿದ್ರೆ ಹೀಗಂದ್ಬಿಟ್ರಲ್ಲಾ ಸರ್ 🙁
ಚಮಕವಚಸ್ಸ್ತುತಂ ನಟನಪಾಟವದೂಡಿದ ರಂಗಲೇಖೆಯೋ
ಭ್ರಮಣಚರಿಪ್ರಕಾಶನಮೆ ಸಂದುದೊ ಮಾರಶಿಖಿಪ್ರಯುಕ್ತಿಯಾ
ಕಮಲಿನಿ ತಂಗದಿರ್ಮಸುಳುತುಂ ಸಖಿಯರ್ ವೆರಸಿಂತು ನಲ್ದುದೋ
ಸಮನಿಸೆ ಸಂಪದಂ ಜನಮನಂ ಮಲರ್ದೀ ಸೊಬಗಾಯ್ತೊ ಪರ್ವದೊಳ್
ಚಮಕಸ್ತುತನಾದ ಶಿವನ ನಟನಪಾಟವದಿಂದ ಮೂಡಿದ ರಂಗಲೇಖೆಯೋ, ಮನ್ಮಥನು ಲೀಲಾಜಾಲವಾಗಿ ತನ್ನ ಬಾಣಗಳನ್ನು ತಿರುಗಿಸುತ್ತ ಪ್ರಯೋಗಿಸಿದಾಗ ಈ ಆಕೃತಿ ಉಂಟಾದದ್ದೋ, ಚಂದ್ರ ಮರೆಯಾದಾಗ ಕಮಲಿನಿಯು ತನ್ನ ಸಖಿಯರೊಡನೆ ಈ ರೀತಿ ನಲಿದಾಡಿದ್ದೋ, ಸಂಪತ್ತು ಬಂದಾಗ ಜನರ ಮನಸ್ಸು ಹಬ್ಬದ ಕಾಲದಲ್ಲಿ ಈ ರೀತಿ ಅರಳಿ ಚೆಲುವುಗೊಂಡಿತೋ!!
ಘಮಘಮಿಪಂತೆವೋಲ್ ಶಿವನ ಜೂಟಕೆ ಚಂದ್ರಮನೊರ್ವನೇ ಸದಾ
ಕಮನಮನೆಂತುಟೀವನೆನುತಿಂತು ಸುಬಂಧುರ ಪದ್ಯಪುಷ್ಪದಿಂ
ಸುಮಧುರ ಶೈಲಿಯಿಂ ತಿರಿಯುತಿತ್ತಿರೆ ಭಂಪತಿಭೂಷನಾದನೈ
ಸುಮನವಿಭೂಷಣಂ ಸಕಲಕಾಲಕೆ ಸಲ್ವುದು ನೀಲಕಂಠರೇ!!
Second line to be read as …………ಪದ್ಯಪುಷ್ಪಮಂ
Corrected as suggested by Neelakantha sir .
ಘಮಘಮಿಪಂತೆವೋಲ್ ಶಿವನ ಜೂಟಕೆ ತಂಗದಿರೊರ್ವನೇ ಸದಾ
ಕಮನಮನೆಂತುಟೀವನೆನುತಿಂತು ಮನೋಹರ ಪದ್ಯಪದ್ಮಮo ಸುಮಧುರ ಶೈಲಿಯಿಂ ತಿರಿಯುತಿತ್ತಿರೆ ಚಂದ್ರಕಲಾಪನದನೈ
ಕಮಲವಿಭೂಷಣಂ ಸಕಲಕಾಲಕೆ ಸಲ್ವುದು ನೀಲಕಂಠರೇ
_/\_
ಸುಗ್ಗಿಯ ಹಬ್ಬಕ್ಕೆ ಸೊಗಸಾದ “ಚಂಪಕಮಾಲೆ” ನೀಲಕಂಠ !!
3ನೇ ಸಾಲಿನ 5ನೇ ಅಕ್ಷರ “ತಂ” ತಂದುದು ಸಾಧುವೇ? ನ್ಯಸ್ತಾಕ್ಷರಿಯ ನಿಯಮಗಳನ್ನು ದಯವಿಟ್ಟು ತಿಳಿಸಿಕೊಡು.
_/\_ ಅಂ ಅಃ ಇವು ಸ್ವರಗಳ ಪೈಕಿ ಬಾರವು ಎಂದಿದೆ. ಅಂ ಅಃ ಥರ ಆಂ ಆಃ ಇಂ ಇಃ ಇತ್ಯಾದಿ ಇವೆಯಲ್ಲ! ಆದ್ದರಿಂದ ಅಕಾರ ಮಾತ್ರ ಅಲ್ಲಿರುವುದು. ತಙ್ಗದಿರ ಎಂದಂತಾಗುವುದು 🙂