ನೀನು ನನಗೆ ನಾನು ನಿನಗೆ ಎಂಬ ಅನುನಯವೇ ಬೆಳೆಗ್ಗೆ ಹಾಗು ಸಂಜೆಯಷ್ಟೇ ನೈಜವಾದ ಬಾಲ್ಯವು. ನೀನೆನಗಿದ್ದರೆ ಮಾತ್ರ ನಾನು ಕೂಡಾ ನಿನಗೆ ಎಂದ ತತ್ಕ್ಷಣ ಲೋಕವನ್ನು (ಜನರನ್ನು) ನೈಜತೆಯು ಬಿಟ್ಟುಹೋಗುತ್ತದೆ
’ಕೈ’ಗೆಲಸ ಎಂದರೆ ಇದೇ 😉 Well, I hereby declare that this imagination shall remain the best this week. ಚಿತ್ರದಲ್ಲಿರುವುದೆಲ್ಲವನ್ನೂ ಸಮರ್ಥವಾಗಿ ಬಳಸಿಕೊಂಡಿದ್ದೀರಿ.
ಹತ್ತು ಪದ್ಯಗಳನ್ನು ಬರೆದೇನು, ಇಂಥ ಒಂದು ಸಾಕು. ಶರಭಪ್ರಾಸವನ್ನು ಚೆನ್ನಾಗಿ ನಿಭಾಯಿಸಿದ್ದೀರಿ (Close to heart ಎಂಬಲ್ಲಿ).
ನೀವು ೨೪ ಗಂಟೆ ಕಾದಿದ್ದರಾಗುತ್ತಿತ್ತು, ನನಗೇ ಈ ಕಲ್ಪನೆ ಬರುತ್ತಿತ್ತು 🙁
ತಮಗೆ ತುಂಬ ಇಷ್ಟವಾದುದನ್ನೇ ಇತರರಿಗೆ ದಾನ ಮಾಡುವವರು ಶ್ರೇಷ್ಠದಾನಿಗಳು (ಗಮನಿಸತಕ್ಕದ್ದು: ಈ ನಿಯಮವನ್ನು ಸಾಂದರ್ಭಿಕವಾಗಿ ಅನ್ವಯಿಸತಕ್ಕದ್ದು. ಅತ್ಯನ್ವಯಗೈಯಲಾಗದು)
ಜಡೆಯ ಹೆಣೆದುಕೊಂಬಳ್(ವವಳು) ಮೇಣಿನಿಂ ಮೋದಿಪಳ್(ವವಳು) ತಾಂ
ತುಡಿವಳಿತರರಿಂಗಂ ವೇಣಿಯಂ ಕಟ್ಟೆ ತನ್ನೊಲ್|
ಪಡೆದ ವಿಷಯ(ವಸ್ತು)ಮಿದ್ದುಂ ಮೋಹ್ಯಮೌದಾರ್ಯದಿಂದಂ
ಕುಡುವರಿತರರಿಂಗಾರ್ ಶ್ರೇಷ್ಠದಾತರ್ ಗಡೇಗಳ್||
ಅಲ್ಲೇ ಹೇಳಿದ್ದೇನಲ್ಲ ’ತಪ=ಬಿಸಿಲು’ ಎಂದು. (ಅಸೌ ವೈ ತಪನ್ನಪಾಮಾತನಂ ಆಯತನವಾನ್ ಭವತಿ) ಅನ್ವಯ ಹೀಗಿದೆ: ಇರುವ ಏಕೈಕ ಸೂರ್ಯನನ್ನು ಬಾಲೆಯು ಮುಡಿದರೆ, ಸೂರ್ಯತಾಪವನ್ನು ಇಚ್ಛಿಸುವವರು ಅವಳ ಹಿಂದೆ ಬೀಳಬೇಕು!
ಮಧ್ಯೆ ಬೈತಲೆ ತೆಗೆದು ಬಾಚಿದ್ದರೂ, ಅಸಮ ಪಾದಗಳಿಂದಾಗಿ ಜಡೆ(ಮೂರು ಕಾಲಿನದು) ಸ್ವಲ್ಪ ಸುರುಟಿ ಕೊಂಡಿದೆ ಅಲ್ಲವೇ? ನೀಲಕಂಠ, ನೀನಾದರೂ ಅದನ್ನು ಖಂಡಗೊಳಿಸಿ ಐದು ಕಾಲಿನ ವಿಶಿಷ್ಟ ಜಡೆ ಹೆಣೆಯುವಿ ಎಂದು ಕಾಯುತ್ತಿದ್ದೇನೆ !!
ಸೋಮ, ಕಾಂಚನ, ಅನಂತಕೃಷ್ಣರ “ಕಂದಮ್ಮ”ಗಳ ಮಲಕು-ಪಲುಕುಗಳು / ಮಂಜುನಾಥ ಮುಡಿಸಿರುವ ಚಂಪಕ ಮಾಲೆಯ ತಿರುವು-ಮುರುವು ಅಂದ / ಪ್ರಸಾದ್ ಸರ್ ಹೆಣೆದಿರುವ “ಮಾಲಿನಿ”ಯ ಜಡೆ ! (ಮೇಲಿನ ಆರು ಕಾಲುಗಳನ್ನು ಸಡಿಲವಾಗಿ ಹಾಕಿರುವ ಜಡೆಯ ವಿಶೇಷ ರೀತಿ-ನೀತಿ !!) ಎಲ್ಲವೂ ಬಹಳ ಸೊಗಸಾಗಿದೆ.
ಇವರೀರ್ವರಲ್ಲಿ ಬೆಳೆಯುತ್ತಿರುವ ಗಾಢವಾದ ಪ್ರೀತಿಯ ಬಂಧವನ್ನು ಗಣಿಸದೇ(ಉಪೇಕ್ಷಿಸಿ),–ಈ ಮಕ್ಕಳು ಹೆಣಿಕೆಯ ಕೌಶಲವನ್ನು ತೋರ್ದರೆಂಬರೇ? ಗೆಳತಿಯ ಕೂದಲಿನ ಜೊತೆ ಆಡುವಳೆಂಬರೇ? ಸಹಾಯ ನೀಡುವಳೆಂಬರೇ?
(ಈ ಚಿಕ್ಕ ಚಿಕ್ಕ ನಡೆಯು ವಾಸ್ತವವಾಗಿ ಉತ್ತಮವಾದ(ಭೇದಿಸಲಾರದ) ಸಂಬಂಧಕ್ಕೆ ಕಾರಣವಾಗುತ್ತದೆ)
ಇಲ್ಲಿ ಹೆರಳನನ್ನು ಹಾಕುತ್ತಿರುವವಳು ,ಇನ್ನೊರ್ವಳ ಮನೆಗೆ ದುಡಿಯುವಾಕೆ.ಅವಳು ಒಡತಿಗೆ ಬಾಗಿ ಜೀವಿಸುತ್ತಿರುವದನ್ನು ಕಂಡು ಸೂರ್ಯನು ಕರುಣೆ ತೋರನೇ! ಕತ್ತಲೆಯನ್ನು ನೂಕುವ ಮಾರ್ಗವನ್ನು ತೋರುತ್ತ ಜೊತೆಯಾಗಿ ಬೆಳಗಲು ,ಬಳಿಗೆ ಬಂದ್ದಿರುವನು.
ಸೂರ್ಯ ಮುಳುಗುತ್ತಿದ್ದಾನೆ, ಬಾ ನಿನ್ನ ಮೆಯ್ಯ ಸೊಬಗನ್ನು ತೆರೆದು ಮೆರೆಯಿಸು ಎಂದು ಸಂಧ್ಯೆ ತನ್ನ ಅಕ್ಕಳಂತಿರುವ ಇರುಳನ್ನು ಸಿಂಗರಿಸಲು ಕರೆತಂದು ಅವಳ ಹೆರಳನ್ನು ತೀಡುತ್ತಿದ್ದಾಳೆ. ಈ ಇರುಳ ತರಳೆ ತಳೆವ ರೂಪ ರಾತ್ರಿ ಪೂರ್ತಿ ರಾಜಿಸುವುದು.
ಮಕ್ಕಳ ಇಂತಹ ಮುದಾವಹ ಚಟುವಟಿಕೆಗಳನ್ನು ಈಗಿನ ಹಿರಿಯರು ಗಮನಿಸಿಕೊಳ್ಳರು (Silhouette is representative of their casual passing glance). ಇಂಥವನ್ನು ಗಮನಿಸಿ, ಹೊಗಳಿ, ಪ್ರೋತ್ಸಾಹಿಸಿದರೆ, ಚಿಣ್ಣರ ಇಂತಹ ಚರ್ಯೆಗಳನ್ನು ಕಣ್ಣೆದುರೇ ಸದಾ ನೋಡುವುದಾಗುತ್ತದೆ; ಬರಿದೆ ವ್ಯೋಮಜಾಲಗಳಲ್ಲಿ(Internet archives) ಅರಸಬೇಕಿಲ್ಲ!
ನೋಡಿಯೂ ಗಮನಿಸದಿಹರ್ ಪ್ರೌಢರೇತಕೋ
ಆಡಿಕೊಂಡಾಡುವೀ ಶಿಶುಚರ್ಯಮಂ|
ನೋಡುವುದು ಲೇಸವರ ಮೋದಗಳನಡಿಗಡಿಗೆ
ತೋಡಲೇಂ ಜಾಲಮಂ ಬರಿನೆರಳಿಗಂ(Silhouetted picture)||
ನೀನೆನಗಮಾನೆ ನಿನಗೆನಿ-
ಪನುನಯಮೇ ಬಾಲ್ಯಮಲ್ತೆ ಬೈಗುಬೆಳಗಿನೊಲ್
ನೀನೆನಗಿರ್ದೊಡಮಾನುಂ
ನಿನಗೆಂದುಲಿಯಲ್ಕೆ ನೈಜಮುಳಿಗುಂ ಜಗಮಂ
ನೀನು ನನಗೆ ನಾನು ನಿನಗೆ ಎಂಬ ಅನುನಯವೇ ಬೆಳೆಗ್ಗೆ ಹಾಗು ಸಂಜೆಯಷ್ಟೇ ನೈಜವಾದ ಬಾಲ್ಯವು. ನೀನೆನಗಿದ್ದರೆ ಮಾತ್ರ ನಾನು ಕೂಡಾ ನಿನಗೆ ಎಂದ ತತ್ಕ್ಷಣ ಲೋಕವನ್ನು (ಜನರನ್ನು) ನೈಜತೆಯು ಬಿಟ್ಟುಹೋಗುತ್ತದೆ
ಬೆಳಗಿನೊಲ್ – ಬೆಳಗಿನವೊಲ್
ಇನ್ನೊಂದಿಪ್ಪತ್ತು ವರ್ಷಗಳಾದಮೇಲೆ ಒಬ್ಬಳು ಇನ್ನೊಬ್ಬಳಿಗೆ ’ನೀನೆನಗಂ ಆನೆ’ ಎನ್ನಲಿ ನೋಡೋಣ!
ವೀಕ್ಷಿಸುತಿರ್ಪನೆ ನೇಸರ
ನಕ್ಷಿಗಳಿಂ ,ಸಂತಸಂಬಡುತೆ! ತನ್ನಂದಂ
ರಕ್ಷೆಯ ಕರಮೀಯುತ್ತುಂ
ವಕ್ಷಕೆ ಸಾಮಿಪ್ಯವೊಂದುತುಂ ,ಬೆಳೆವವರಂ!
(ತನ್ನಂತೇ ಕರವಿತ್ತು(ಸಹಾಯ ಮಾಡಿ),ಬೆಳೆಯುತ್ತಿರುವರನ್ನು,ಹೃದಯಕ್ಕೆ ಹತ್ತಿರವಾದವರನ್ನು(ನೆರವಾಗುತ್ತಿರುವರನ್ನು),-ನೇಸರನು ಸಂತೋಷದಿಂದ ನೋಡುತ್ತಿರುವನೆ?)
’ಕೈ’ಗೆಲಸ ಎಂದರೆ ಇದೇ 😉 Well, I hereby declare that this imagination shall remain the best this week. ಚಿತ್ರದಲ್ಲಿರುವುದೆಲ್ಲವನ್ನೂ ಸಮರ್ಥವಾಗಿ ಬಳಸಿಕೊಂಡಿದ್ದೀರಿ.
ಹತ್ತು ಪದ್ಯಗಳನ್ನು ಬರೆದೇನು, ಇಂಥ ಒಂದು ಸಾಕು. ಶರಭಪ್ರಾಸವನ್ನು ಚೆನ್ನಾಗಿ ನಿಭಾಯಿಸಿದ್ದೀರಿ (Close to heart ಎಂಬಲ್ಲಿ).
ನೀವು ೨೪ ಗಂಟೆ ಕಾದಿದ್ದರಾಗುತ್ತಿತ್ತು, ನನಗೇ ಈ ಕಲ್ಪನೆ ಬರುತ್ತಿತ್ತು 🙁
_/\_ 🙂
ಚೆನ್ನಾಗಿದೆ 🙂 ಸಮೀಪಮಾದರಂ ಆಗಬೇಕು. ಸಾಮೀಪ್ಯವೊಂದಿದರ್ ಆಗುತ್ತದೆ. ಸಾಮೀಪ್ಯವೊಂದುತುಂ ಬೆಳೆವವರಂ ಎಂದು ಮಾಡಬಹುದು.
ಧನ್ಯವಾದಗಳು ನೀಲಕಂಠರಿಗೆ
ಮಾಲಿನೀ|| ಎಳೆವೆಯೊಳೆ ವಿಶಾಖಾ(name) ವೇಣಿಸಂಹಾರದಕ್ಷಳ್
ಕಳೆಯುತಲೆ ಶಿಶುತ್ವಂ ಪಾಕಶಾಸ್ತ್ರಂ ಸುಸಾಧ್ಯಂ|
ಗಳಿಪಳಲೆ ಪಟುತ್ವಂ ಸರ್ವಗಾರ್ಹಸ್ತ್ಯದೊಳ್ ತಾಂ
(ಸೂರ್ಯನಂತೆ)ಬೆಳಗುವಳಲೆ ತೌರಂ ಪೊಕ್ಕ ಸಂವಾಸಮಂ(ಗಂಡನ ಮನೆ) ಮೇಣ್||
ಸುಕನ್ಯಳ್ ಆಗದು. ಸುಕನ್ಯೆಯೇ ಆಗಬೇಕು 🙂
ಈಚೆಗೆ ನೀವು ಈಕಡೆ ಸುಳಿದಿಲ್ಲವಾಗಿ ಸಂಶಯದಿಂದಲೇ ಹಾಕಿಬಿಟ್ಟಿದ್ದೆ 🙁 ಸವರಿದ್ದೇನೆ. ಧನ್ಯವಾದಗಳು.
ತಮಗೆ ತುಂಬ ಇಷ್ಟವಾದುದನ್ನೇ ಇತರರಿಗೆ ದಾನ ಮಾಡುವವರು ಶ್ರೇಷ್ಠದಾನಿಗಳು (ಗಮನಿಸತಕ್ಕದ್ದು: ಈ ನಿಯಮವನ್ನು ಸಾಂದರ್ಭಿಕವಾಗಿ ಅನ್ವಯಿಸತಕ್ಕದ್ದು. ಅತ್ಯನ್ವಯಗೈಯಲಾಗದು)
ಜಡೆಯ ಹೆಣೆದುಕೊಂಬಳ್(ವವಳು) ಮೇಣಿನಿಂ ಮೋದಿಪಳ್(ವವಳು) ತಾಂ
ತುಡಿವಳಿತರರಿಂಗಂ ವೇಣಿಯಂ ಕಟ್ಟೆ ತನ್ನೊಲ್|
ಪಡೆದ ವಿಷಯ(ವಸ್ತು)ಮಿದ್ದುಂ ಮೋಹ್ಯಮೌದಾರ್ಯದಿಂದಂ
ಕುಡುವರಿತರರಿಂಗಾರ್ ಶ್ರೇಷ್ಠದಾತರ್ ಗಡೇಗಳ್||
ಎಳವೆಯೊಳಿಂತುಟೀ ಬಗೆಯ ನೇಹಮನಾಂತವರೆಂತನಂತರಂ
ಬೆಳೆದೊಡನಾಡುವರ್ ಬಿಸದ ಪಾವಿನವೋಲ್ ಪೆರರನ್ನೆ ಕರ್ಚುತುಂ
ಮುಳಿಯುವರಲ್ತೆ ತಾಂ ನಸುಕಿನೊಳ್ ಹಿತಮಪ್ಪವೊಲಿತ್ತು ರಶ್ಮಿಯಂ
ಬಳಿಕಮಹಸ್ಕರಂ ಖರಮಯೂಖಮನೀವುದನೀಕ್ಷಿಸುತ್ತಲೇಂ?!//
ಆಹಾ! ಸೊಗಸಾಗಿದೆ. ನಂತರಂ ಸಾಧುವಲ್ಲ. ಅನಂತರಂ ಆಗಬೇಕು.
ಧನ್ಯವಾದಗಳು. ತಿದ್ದಿದ್ದೇನೆ.
ಮುಡಿಗಂ ಮುಡಿಸವೆನೀಗಳ್
ಗಡಿದಂ ಪೊಳೆವೀ ದಿನೇಂದ್ರ ಗಗನಕುಸುಮಮಂ
ನಡೆಯೌ ಕಳೆಯುತೆ ತಮಮಂ
ಪಡೆಯುಗೆ ನಿನ್ನಿಂ ಜಗತ್ತು ಪೊಸವೆಳಕೊಂದಂ
ಚೆನ್ನಿದೆ. ಆದರೆ…
ಮುಡಿದೊಡೆ ಬಾಲೆಯು ಕೇವಲ-(lone)
ಜಡಹರನಂ, (ಬಿಸಿಲು)ತಪಮನಿಚ್ಛಿಸುವರೆಲ್ಲರ್ಗಳ್|
ನಡೆಯಿಟ್ಟೆಡೆಯಾಕೆಯದೇ
ಎಡೆಗಡಿಯಿಡದನ್ಯಮಾರ್ಗಮದುಮಾವುದಲಾ||
ಪೂರ್ತಿ ಅರ್ಥವಾಗ್ಲಿಲ್ಲ..ತಪಮನಿಚ್ಛಿಸುವರ್ ಎಂದರೆ ತಪಸ್ವಿಗಳೆಂದರ್ಥವೆ?ದಯವಿಟ್ಟು ತಾತ್ಪರ್ಯ ತಿಳಿಸುವಿರಾ?
ಅಲ್ಲೇ ಹೇಳಿದ್ದೇನಲ್ಲ ’ತಪ=ಬಿಸಿಲು’ ಎಂದು. (ಅಸೌ ವೈ ತಪನ್ನಪಾಮಾತನಂ ಆಯತನವಾನ್ ಭವತಿ) ಅನ್ವಯ ಹೀಗಿದೆ: ಇರುವ ಏಕೈಕ ಸೂರ್ಯನನ್ನು ಬಾಲೆಯು ಮುಡಿದರೆ, ಸೂರ್ಯತಾಪವನ್ನು ಇಚ್ಛಿಸುವವರು ಅವಳ ಹಿಂದೆ ಬೀಳಬೇಕು!
ತುಂಬ ಸೊಗಸಾದ ಕಲ್ಪನೆ. ಪೊಸವೆಳಕು (ಸಂಧಿಯಾಗುತ್ತದೆ)
ಧನ್ಯವಾದಗಳು _/\_. ತಿದ್ದಿದ್ದೇನೆ
ಮೂರು ಕಾಲ್ಗಳಲೊಂದು ಜಡೆಯ ಹೆಣೆದಿಹ ಕಾರ್ಯ
ಸೂರಗನ್ನಡಿ ಮುಂದೆ ಬೆಡಗಿನಾಟಂ ।
ಮೂರು ಕಾಲದಲೊಂದು ದಿವಸವೆಸಗುವ ಸೂರ್ಯ
ತೋರುವಂದದಿ ನೆಳಲು ಬೆಳಕಿನಾಟಂ ।।
ಮೂರುಕಾಲಿನ ಒಂದು ಜಡೆ – ಮೂರುಕಾಲದ ದಿನದ ನಡೆ !!
ತುಂಬ ಚೆನ್ನಾಗಿದೆ 🙂 ನನಗೆ ಬಂದ ಕಲ್ಪನೆ. ಪದ್ಯ ಬರೆಯೋದಕ್ಕಿಂತ ಮೊದಲು ಇವರದೆಲ್ಲ ನೋಡೋಣ ಎಂದುಕೊಂಡೆ. ತಮ್ಮದೇ ಸಿಕ್ಕಿತು 🙂
ಮಧ್ಯೆ ಬೈತಲೆ ತೆಗೆದು ಬಾಚಿದ್ದರೂ, ಅಸಮ ಪಾದಗಳಿಂದಾಗಿ ಜಡೆ(ಮೂರು ಕಾಲಿನದು) ಸ್ವಲ್ಪ ಸುರುಟಿ ಕೊಂಡಿದೆ ಅಲ್ಲವೇ? ನೀಲಕಂಠ, ನೀನಾದರೂ ಅದನ್ನು ಖಂಡಗೊಳಿಸಿ ಐದು ಕಾಲಿನ ವಿಶಿಷ್ಟ ಜಡೆ ಹೆಣೆಯುವಿ ಎಂದು ಕಾಯುತ್ತಿದ್ದೇನೆ !!
ಸೋಮ, ಕಾಂಚನ, ಅನಂತಕೃಷ್ಣರ “ಕಂದಮ್ಮ”ಗಳ ಮಲಕು-ಪಲುಕುಗಳು / ಮಂಜುನಾಥ ಮುಡಿಸಿರುವ ಚಂಪಕ ಮಾಲೆಯ ತಿರುವು-ಮುರುವು ಅಂದ / ಪ್ರಸಾದ್ ಸರ್ ಹೆಣೆದಿರುವ “ಮಾಲಿನಿ”ಯ ಜಡೆ ! (ಮೇಲಿನ ಆರು ಕಾಲುಗಳನ್ನು ಸಡಿಲವಾಗಿ ಹಾಕಿರುವ ಜಡೆಯ ವಿಶೇಷ ರೀತಿ-ನೀತಿ !!) ಎಲ್ಲವೂ ಬಹಳ ಸೊಗಸಾಗಿದೆ.
_/|\_
ಹೆಣಿಕೆಯನಂತು ತಾನರಿತೆನೆನ್ನುತೆ ಬೇಗನೆ ತೋರ್ದಳೆಂಬರೇಂ?
ಗೆಣತಿಯ ಕೇಶಮಂ ಕರದೆ ನೀವುತುಮಾಡುವ ಪಾಂಗಿದೆಂಬರೇಂ?
ಗುಣವತಿ ಯೈ,ನಿಜಂ!ಮುದದೆ ಸಾಯಮನೀಯುವ ಬಾಲೆಯೆಂಬರೇಂ?
ಗಣಿಸದೆ ಸೂರ್ಯಸಾಕ್ಷಿಯೊಳಭೇದದ ಬಂಧಮನಿಂತು ನೇಯ್ದೊಡಂ!
ಏನರ್ಥ? ಮೂರನೆ ಸಾಲಿನಲ್ಲಿ ಛಂದಸ್ಸು ತಪ್ಪಿದೆ.
ಇವರೀರ್ವರಲ್ಲಿ ಬೆಳೆಯುತ್ತಿರುವ ಗಾಢವಾದ ಪ್ರೀತಿಯ ಬಂಧವನ್ನು ಗಣಿಸದೇ(ಉಪೇಕ್ಷಿಸಿ),–ಈ ಮಕ್ಕಳು ಹೆಣಿಕೆಯ ಕೌಶಲವನ್ನು ತೋರ್ದರೆಂಬರೇ? ಗೆಳತಿಯ ಕೂದಲಿನ ಜೊತೆ ಆಡುವಳೆಂಬರೇ? ಸಹಾಯ ನೀಡುವಳೆಂಬರೇ?
(ಈ ಚಿಕ್ಕ ಚಿಕ್ಕ ನಡೆಯು ವಾಸ್ತವವಾಗಿ ಉತ್ತಮವಾದ(ಭೇದಿಸಲಾರದ) ಸಂಬಂಧಕ್ಕೆ ಕಾರಣವಾಗುತ್ತದೆ)
ಮರೆತು ಪುಸ್ತಕದೋದು ಬರಹವ
ನಿರವಿಗಾಗಿಯೆ ಸಮೆದು ಬಾಲ್ಯವ
ನೆರೆದು ನಲ್ಮೆಯನೊಡತಿಗಂ, ಬಾಗುತ್ತೆ ಜೀವಿಪೊಡಂ
ಕರುಣೆ ತೋರುತೆ ಬಳಿಗೆ ಬಾರನೆ?
ಹರಿಸಿ ಬೆಳಕಂ ,ಜಗದ ಪಾಲಕ
ನಿರುಳು ನೂಂಕುವ ಹಾದಿ ತೋರುತೆ, ಬೆಳಗೆ ಜೊತೆಯಾಗೆ
ಏನು ತಾತ್ಪರ್ಯ?
ಇಲ್ಲಿ ಹೆರಳನನ್ನು ಹಾಕುತ್ತಿರುವವಳು ,ಇನ್ನೊರ್ವಳ ಮನೆಗೆ ದುಡಿಯುವಾಕೆ.ಅವಳು ಒಡತಿಗೆ ಬಾಗಿ ಜೀವಿಸುತ್ತಿರುವದನ್ನು ಕಂಡು ಸೂರ್ಯನು ಕರುಣೆ ತೋರನೇ! ಕತ್ತಲೆಯನ್ನು ನೂಕುವ ಮಾರ್ಗವನ್ನು ತೋರುತ್ತ ಜೊತೆಯಾಗಿ ಬೆಳಗಲು ,ಬಳಿಗೆ ಬಂದ್ದಿರುವನು.
ತರಣಿ ಮುಳುಗುತಿರ್ಪಂ ನಿನ್ನ ಮೆಯ್ಮಾಟದಂದಂ
ತೆರೆದು ಮೆರೆಯಲೆಂದಾ ಸಂಧ್ಯೆ ತನ್ನಕ್ಕಳಂತಿ-
ರ್ಪಿರುಳ ಹೆರಳ ಕಟ್ಟಂ ತಿದ್ದಿ ತೀಡುತ್ತುಮಿರ್ಪಳ್
ತರಳೆ ತಳರ್ದ ರೂಪಂ ರಾಜಿಕುಂ ರಾತ್ರಿಪೂರ್ಣಂ
ಸೂರ್ಯ ಮುಳುಗುತ್ತಿದ್ದಾನೆ, ಬಾ ನಿನ್ನ ಮೆಯ್ಯ ಸೊಬಗನ್ನು ತೆರೆದು ಮೆರೆಯಿಸು ಎಂದು ಸಂಧ್ಯೆ ತನ್ನ ಅಕ್ಕಳಂತಿರುವ ಇರುಳನ್ನು ಸಿಂಗರಿಸಲು ಕರೆತಂದು ಅವಳ ಹೆರಳನ್ನು ತೀಡುತ್ತಿದ್ದಾಳೆ. ಈ ಇರುಳ ತರಳೆ ತಳೆವ ರೂಪ ರಾತ್ರಿ ಪೂರ್ತಿ ರಾಜಿಸುವುದು.
(ಬೇಂದ್ರೆಯವರ “ಇರುಳ ಹೆರಳಿನ ಅರಳು ಮಲ್ಲಿಗೆ…” ಸಾಲಿನಿಂದ ಹೊಳೆದ ಕಲ್ಪನೆ) 🙂
Quite a competition to Smt. Kanchana’s verse (No. 2).
ಒಡನಾಡಿಗಳರರರೆ ! ಬಾಲೆಯರ್ ಸುಗುಣೆಯರ್
ಜಡೆಹೆಣೆದುಕೊಳ್ವರೈ ಬಲುಪೊರ್ಲು ಕಾಣ್
ಬಡವರೇಂ ? ಧನಿಕರೇಂ ? ರವಿರಶ್ಮಿಯಿಂ ಗೋಡೆ
ಬಡವಾದ ವೋಲ್ ಕೆನೆವ ಖುಷಿ . ಕೊರತೆಯೇಂ?
ಪೊರ್ಲು – ಚಂದ
ಬಡವಾ -ಹೆಣ್ಣು ಕುದುರೆ
ರವಿರಶ್ಮಿಯಿಂ ಗೋಡೆ
ಬಡವಾದ ವೋಲ್ ಕೆನೆವ ಖುಷಿ … ಎಂದರೇನು?
ಅಕ್ಕಕ್ಕುಂ, ತಂಗೆಯೆ ದಿಟ-
ಮಕ್ಕಗೆ ಮುಡಿಯಿಕ್ಕುತಿರ್ಪುದಂ ಗಡ ಬಳಿ ಕಂ-
ಡಕ್ಕಜದೊಳರುಣನುಲಿದಂ
“ಬಿಕ್ಕಟ್ಟು ಕುಮಾರಿಯರ್ಗೆ ಜಡೆಪೆಣೆಕೊಳ್ಳಲ್ “!!
ಹೌದುಹೌದು, ತಂಗಿಯೇ ಅಕ್ಕನಿಗೆ ಜಡೆ ಹೆಣೆಯುತ್ತಿರುವುದನ್ನು ಕಂಡ “ಅರುಣ ” ಅಕ್ಕಜ (=ಆಶ್ಚರ್ಯ / ಅಸೂಯೆ )ದಿಂದ “ಹೆಣ್ಣುಮಕ್ಕಳಿಗೆ ಜಡೆ ಹೆಣೆದುಕೊಳ್ಳುವುದು ಎಷ್ಟು ಕಷ್ಟ” ಎಂದುಕೊಂಡ !!
ಮಕ್ಕಳ ಇಂತಹ ಮುದಾವಹ ಚಟುವಟಿಕೆಗಳನ್ನು ಈಗಿನ ಹಿರಿಯರು ಗಮನಿಸಿಕೊಳ್ಳರು (Silhouette is representative of their casual passing glance). ಇಂಥವನ್ನು ಗಮನಿಸಿ, ಹೊಗಳಿ, ಪ್ರೋತ್ಸಾಹಿಸಿದರೆ, ಚಿಣ್ಣರ ಇಂತಹ ಚರ್ಯೆಗಳನ್ನು ಕಣ್ಣೆದುರೇ ಸದಾ ನೋಡುವುದಾಗುತ್ತದೆ; ಬರಿದೆ ವ್ಯೋಮಜಾಲಗಳಲ್ಲಿ(Internet archives) ಅರಸಬೇಕಿಲ್ಲ!
ನೋಡಿಯೂ ಗಮನಿಸದಿಹರ್ ಪ್ರೌಢರೇತಕೋ
ಆಡಿಕೊಂಡಾಡುವೀ ಶಿಶುಚರ್ಯಮಂ|
ನೋಡುವುದು ಲೇಸವರ ಮೋದಗಳನಡಿಗಡಿಗೆ
ತೋಡಲೇಂ ಜಾಲಮಂ ಬರಿನೆರಳಿಗಂ(Silhouetted picture)||
ನಾಲ್ಕನೆ ಸಾಲು ಮತ್ತೊಂದು ರೀತಿಯಲ್ಲಿ 🙂
ದೂಡೆ ಕಾಡುವ ಡಯಾಬಿಟಿಸನಂತು!