Oct 232017
 

ಮೊದಲ ಬಾರಿ ರಂಗಪ್ರವೇಶವನ್ನು ಮಾಡುತ್ತಿರುವ ಕಲಾವಿದನ(ದೆಯ) ಭಾವವನ್ನು ವರ್ಣಿಸಿ ಪದ್ಯರಚಿಸಿರಿ

  38 Responses to “ಪದ್ಯಸಪ್ತಾಹ ೨೭೮: ವರ್ಣನೆ”

  1. The reason for debut performance being not upto the mark.
    ಮಾಲಿನೀ|| ನಟಿಪುದು ನವಿಲೆಂದುಂ(ಎಂದಿಗೂ) ಚೆಂದದಿಂದಾಸ್ಥೆಯಿಂದಂ
    ಚಟುಲತೆಯನೆ ತೋರ್ಗುಂ ವೀಕ್ಷಿಪರ್ ದೇವರೆಂದೈ(Entire universe)|
    ವಟವಟರವಮಂ ತಾಂ ಗೈವ ಸಭ್ಯರ್ಕಳೈವರ್ (Just a few uninitiated spectators)
    ಸೆಟೆದುಕುಳಿತಿರಲ್ ನಾಂ ನಾಟ್ಯಮನ್ನೆಂತು ಗೈದೇಂ||

    • ತೋರ್ಗುಂ – torkuM, ವಟವಟರವಮನ್ನುಂ – ವಟವಟರವmaM taaM gaiva, ಸಭ್ಯರ್ಗಳೈವರ್ – sabhyarkaL…
      ಸೆಟೆದುಕುಳಿತಿralkaaM (for there is no naaM in halagaNNaDa), ಚಟುಲತೆಯನು – …yane

      • ಸೆಟೆದುಕುಳಿತಿರಲ್ಕೆ ಎಂದರೆ ಸೆಟೆದುಕುಳಿತಿರಲು ಎಂದಾಗುತ್ತದೋ, ಸೆಟೆದುಕುಳಿತುಕೊಳ್ಳಲಿಕ್ಕೆ ಎಂದಾಗುತ್ತದೋ?

    • ವೀಕ್ಷಿಪರ್ ದೇವರೆಂದುಂ – veekShikuM dEvavRndaM

      • ’ದೇವವೃಂದವು ನೋಡುತ್ತದೆ’ ಎಂದಷ್ಟೇ ಅಲ್ಲದೆ, ’ದೇವವೃಂದವು ನೋಡುತ್ತದೆಂದು’ ಎಂದು ಹೇಳಬೇಕಿದೆ. ಸವರಿದ್ದೇನೆ. ಸರಿಯಿದೆಯೆ ನೋಡಿ.

  2. ನಿಚ್ಚಮುಂ ಗುರುವಿಂಗಮೊಪ್ಪಿಸಿದರಾದತ್ತು
    ಮೆಚ್ಚುವೋಲವರು ಶಾಸ್ತ್ರದ ಭಾಗಮಂ|
    ಎಚ್ಚರಿದಿನೊಪ್ಪಿಸುಗುಮಿಂದು ನಾಂ ನೃತ್ಯವನು
    ಕೆಚ್ಚಿನಿಂ ಚಪ್ಪಳೆಯ ತಟ್ಟೆ ರಸಿಕರ್||

  3. ಕಲಾವಿದೆಯ ಭಾವ…..
    ಸ್ರಗ್ವಿಣೀ|| ಚೆಂದದಿಂ ನೃತ್ಯಮಂ ಗೈಯುತುಂ ವೇದಿಯೊಳ್
    ಹಿಂದೆಮುಂದಿರ್ಕೆಲಂ ಮೇಲೆ(Balcony) ಮೇಣ್ ಬಾಗಿಲೊಳ್|
    ಬಂದನೇನೆಂದು ನೋಡುತ್ತಲಿರ್ಪಳ್ ವಲಂ
    ಸುಂದರಂ ಕೇತಿತಂ* ತನ್ನ ನಲ್‘ಭಾವ’ನಂ||
    *ಕೇತನ=invitation

  4. Sri BKS Verma vis-à-vis a singer, speaker, dancer
    ತೊದಲುವುದು ನಾಲಗೆಯು ಮರೆತು ಪಾಡುಗಳನ್ನು/ಮಾತುಗಳನ್ನು-
    ಮದುರುವುದು ಕಾಲುಗಳ್ ಸೋತುಸೊರಗಿ|
    ಎದುರಿಗಿರ್ಪರನೆದುರಿಸದಿಹ ಕೋವಿದನಿಂಗೆ
    ಮೊದಲೇನು ಶತದೇನು ರಂಗಗಮನಂ||

  5. ಶ್ರೀ ಗಣೇಶರ ಪ್ರಥಮಾವಧಾನವಾರ್ತೆ: ಅವಧಾನವೆಂಬ ಕಲೆಯೊಂದುಂಟೆಂದು ಇವರು ತಿಳಿಯದಿದ್ದರು. ಮೊದಲಬಾರಿ ಅವಧಾನವನ್ನು ನೋಡಿದಾಗ, ಅದಕ್ಕೆ ಬೇಕಾದ ಎಲ್ಲ ಸಾಮರ್ಥ್ಯವು ತನ್ನಲ್ಲಿರುವುದರಿಂದ, ಮರುದಿನವೇ ಗೆಳೆಯರನ್ನು ಕೂಡಿಸಿ ಅವಧಾನವನ್ನು ಯಶಸ್ವಿಯಾಗಿ ಮಾಡಿಯೇಬಿಟ್ಟರು. ಇದನ್ನು ನೋಡಿದಾಗ, ’ಇವರು’ ರಂಗಪ್ರವೇಶಗೈದರೆನ್ನಲಾಗದು. ’ರಂಗವೇ’ ಇವರನ್ನರಸಿ ಬಂತೆನ್ನುವುದೇ ಸರಿ.

    ಸೀಸ|| ರಂಗಪ್ರವೇಶಮೆಂದೊಡಮೇನುಮದಕೆ ಸಿದ್ಧತೆಯು ಮೇಣ್ ತಾಲೀಮು ಹಲವು ಬಾರಿ!
    ಎಂತಾಗುವುದೊ ನಾಟ್ಯ(ಗಾನ)ಮೆಂಬೆಲ್ಲ ಆತಂಕಗಳುಮಂಜಿಕೆಗಳೆಂತೊ ಲಜ್ಜೆಯುಂ ಮೇಣ್|
    ಈ ಪರಿಯ ಕಲೆಯೊಂದಿಹುದುಮೆಂದರಿಯರಿವರು, ಪೊಂದಿಯುಂ ಸಾಮರ್ಥ್ಯಮವಧಾನದ
    ಕಂಡಂದೆ ಆ ಕಲೆಯ ಕೆಳೆಯರಂ ಬೆಸಗೊಂಡು ಅಂದಲ್ಲೆ ಗೈದರೊಂದವಧಾನಮಂ||

    ತೇಟಗೀತಿ|| ನೋಡೆ ಈ ಪರಿಯ ನಿರ್ವಾಹಮನ್ನು ನಾಂಗಳ್
    ಎನ್ನುಗೇಂ ವಧಾನಿಯು ವೇದಿಗೈದರೆಂದುಂ?
    ಬಂದತ್ತಾ ವೇದಿ ತಾನೇ ಕಲಾವಿದನನುಂ
    ಅರಸುತ್ತೂಮ್ಮೆ ಮತ್ತೊಮ್ಮೆ ಮಗದೊಮ್ಮಿನ್ನೊಮ್ಮೆ||

    • ಹಲವು ಮಹನೀಯರನ್ನು (ಡಿವಿಜಿ, ಸ್ವಾಮಿ) ನೋಡದೆಹೋದೆನೆಂಬ ಕೊರಗನ್ನು ತಗ್ಗಿಸಲು, ಈ ’ರಂಗ’ನೂ ಇವರನ್ನು ಅರಸಿಕೊಂಡುಹೋಗಿದ್ದರಿಂದ ಇಂದಿಲ್ಲಿ ಹೀಗೆ ಬರೆವುದಾಯ್ತು. ಕೃತಜ್ಞನಾಂ.

  6. ಇಬ್ಬಂದಿಯೊಂದುಂಟು ರಂಗಪ್ರವೇಶಕ್ಕ-
    ಮೊಬ್ಬ ಗಾಯಕನು ಸಜ್ಜಾಗಲಾಗಳ್|
    ಕಬ್ಬಮಂ (ಜಾಗರೂಕತೆಯಿಂ) ಪಾಡುಗೇಂ ಮೈಮರೆವವೊಲು ರಸಿಕ?
    ಉಬ್ಬಿ ತಾನೇ ಮೈಮರೆತು ಪಾಡುಗೇಂ??

  7. Rangapravesha is for performing artists like musicians (ಸಂಗೀತ), dancers (ನೃತ್ಯ) and thespians (ನಾಟ್ಯ). Artists like Sri BKS Verma have made a performing art out of the installation art ‘drawing’! For a sculptor rangapravesha is the occasion when his sculpture does a navaranga-pravesha in a temple (ಸಾಲಭಂಜಿಕೆಯರು/ ಕಂಭದಲ್ಲಿನ ಕೆತ್ತನೆ ಇತ್ಯಾದಿ)
    ತಂಗುತ್ತೆ ಮಾಸಗಳು ಗೇಹದೊಳೆ ಕೆತ್ತುವನು
    ರಂಗನಂ, ಸಾಲಭಂಜಿಕೆಯರನ್ನುಂ|
    ಸಾಂಗತ್ಯಮಾಗಲವು ದೇವಳಕೆ ಸಾಗೆ ನವ-
    ರಂಗಪ್ರವೇಶಮದೆ ಅವನ ಭಾಗ್ಯಂ||

  8. Mimicry artist should never do rangapravesha. Given that debut is always tentative, he becomes a laughing stock himself instead!
    ಅನುಕೃತಿಕಲಾವಿದನುಮೆಂದುಂ
    ಕನಸ ಕಾಣದೆಲಿದ್ದೊಡೊಳಿತುಂ
    ವಿನುತನಪ್ಪುಗೆ ಗೈವುದಂ ರಂಗಪ್ರವೇಶಮನುಂ|
    ಹೊನಲು ಹಾಸ್ಯದ ಹದವ ತಪ್ಪುತೆ
    ಬಿನದಮೊಂದೊಮ್ಮೆ ಕಳೆದುಕೊಳಲ್
    ಮೊನಚನಾಗಾಗುವನುಮಾತನೆ ನಗೆಯಪಾಟಲು ಹಾ!!

  9. ತನುವಿಲೇನೋ ಪುಳಕವೊಂದೆಡೆ
    ಮನಸಿನಲಿ ತುಸು ಭಯವು ತುಂಬಿರೆ
    ಜನರೆದುರಿನಲಿ ರಂಗವೇರುವ ಮೊದಲ ಹೆಜ್ಜೆಯಲಿ
    ತನನ ತಾನನ ಹಾಡಿಹುದು ನಲಿ
    ವಿನಲಿ ಕಳವಳ ಸೇರುತಲಿ ಗೆಲು
    ವಿನ ಬಯಕೆಯಲಿ ಹಲವು ಬಣ್ಣದ ಭಾವಗಳ ಸೇರಿ

  10. ತನುವಿಲೇನೋ ಪುಳಕವೊಂದೆಡೆ
    ಮನಸಿನಲಿ ತುಸು ಭಯವು ತುಂಬಿರೆ
    ಜನರೆದುರಿನಲಿ ರಂಗವೇರುವ ಮೊದಲ ಹೆಜ್ಜೆಯಲಿ
    ತನನ ತಾನನ ಹಾಡಿಹುದು ನಲಿ
    ವಿನಲಿ ಕಳವಳ ಸೇರುತಲಿ ಗೆಲು
    ವಿನ ಬಯಕೆಯಲಿ ಹಲವು ಬಣ್ಣದ ಭಾವಗಳ ಸೇರಿ

  11. ಕಲ್ಲೋಲಾಬ್ಧಿತರಂಗರಂಗದೊಳಗಂ ರಂಗಪ್ರವೇಶಂಗೊಳಲ್
    ಸಲ್ಲಲ್ ಭೀಕರ ವಾರ್ಧಿಯೊಳ್ ಸೆಣೆಸುವಂತಾ ಧೀವರರ್ ತೋರುತು
    ತ್ಫುಲ್ಲಂಗೈಯುತುಮಂತೆ ವಕ್ಷಮನೆ ತಾಂ ಜಾಲಪ್ರಯೋಗಂ ಸದಾ
    ನಿಲ್ಲಲ್ ಶಕ್ಯಮದಿಲ್ಲದಿರ್ಪ ಹರಿಗೋಲೊಳ್ ಗೈವವೋಲ್ ಚಿತ್ಕಲಾ
    ವಲ್ಲಿಪ್ರೋದ್ಭವ ಗಂಧವಂತ ಕುಸುಮಂಗಳ್, ಭೃಂಗಮಂ ಪೋಲುತುಂ
    ತಲ್ಲೀನರ್ಕಳರಾಗಿ ತಾಂ ನೆರೆದ ಹೃದ್ವಂತರ್ ಭಲಾ! ಎನ್ನುವಂ
    ತಲ್ಲೇ ಬೆಸ್ತರ ಪಾಂಗಿನಿಂ ನಯನಮಂ ಮತ್ಸ್ಯಂಬೊಲೋಲಾಡಿಸು
    ತ್ತಲ್ಲೇ ಶ್ರೀಶಿರಕೇರಲೆಂಬರಿದೊ ಸದ್ಯೋಜಾತಪುಷ್ಪನ್ಗಳಾ//

    ಒಂದೇ ಮತ್ತೇಭ ಸಾಲದ್ದರಿಂದ ಎರಡು ಮತ್ತೇಭಗಳು. ಹೀಗೆ ಮಾಡಬಹುದೋ ಇಲ್ಲವೋ ಅರಿಯೆ.
    ಮೀನು ಹಿಡಿಯುವವರು ಎದೆಯುಬ್ಬಿಸಿ ಬಲೆಬೀಸಿ ತಮ್ಮ ಕಣ್ಣುಗಳನ್ನೇ ಮೀನಿನಂತೆ ಆಡಿಸುವಂತೆ, ಹೊಸದಾಗಿ ಅರಳಿದ ಹೂವುಗಳು ಭೃಂಗಗಳನ್ನು ಆಕರ್ಷಿಸುತ್ತ, ತಾವು ಶ್ರೀಮುಡಿಗೇರಬೇಕೆಂಬ ಭಾವದಲ್ಲಿರುವಂತೆ ಕಲೆಯೆಮ್ಬ ಬಳ್ಳಿಯಲ್ಲಿ ಅರಳಿದ ಈ ಸದ್ಯೋಜಾತಕುಸುಮಗಳು ಸಹೃದಯರೆಂಬ ಭೃಂಗಗಳನ್ನು ಆಕರ್ಷಿಸುವ, ಔನ್ನತ್ಯಕ್ಕೇರಬೇಕೆಂಬ ಭಾವದಲ್ಲಿವೆ.

    • So nice!! But there are few corrections required. …ಫುಲ್ಲಂಗೊಳ್ಳಿಸುತಂತೆ – should be ತ್ಫುಲ್ಲಂಗೊಳಿಸುತಂತೆ. ಶ್ರೀಮುಡಿ is well known (and reserved to Naranappa) ari-samasa, and so is to be avoided 🙂
      >>ಹೀಗೆ ಮಾಡಬಹುದೋ ಇಲ್ಲವೋ ಅರಿಯೆ<< maalikeyante heege bareyabahudu.
      ಬೆಸ್ತರ ಪಾಂಗಿನಿಂ ನಯನಮಂ ಮತ್ಸ್ಯಂಬೊಲೋಲಾಡಿಸು… – Liked this very much.

      • ಮೆಚ್ಚುಗೆಗಾಗಿ ಹಾಗೂ ಸವರಣೆಗಳಿಗಾಗಿ ಧನ್ಯವಾದಗಳು ನೀಲಕಂಠರೆ. ಮೂಲದಲ್ಲಿಯೇ ಸವರಿದ್ದೇನೆ.
        ಅಂದಹಾಗೆ ತಮ್ಮ ನವರೂಪ ಭಯಾನಕವಾಗಿದೆ 🙂

        • ಏ! ಈಟ್ ದಿನ ಇದ್ದುದು ಟಂಪರ್ವರಿ ರೂಪ. ಈಗ ಇರಾದು ವರ್ಜಿನಲ್ (original ಎಂದು ಓದಿಕೊಳ್ಳಿ) ರೂಪ!

  12. ಅಮಮಾ ! ನಡುಕ !! ಎಂತಿಹುದೊ ರಂಗವೇದಿಕೆಯು
    ಸುಮಧುರದ ಕಂಠಮಿರ್ಪುದೆ ಬೆದರಿರಲ್
    ಅಮರವಾಗಲುಬಹುದೆ ನಟನ ವೈಖರಿಯಿಂದು
    ಸಮಯದೊಳ್ ತೋರಿಪೆಂ ಕೌಶಲ್ಯಮಂ

    • ರಂಗವೇದಿಕೆ – usually ರಂಗ and ವೇದಿಕೆ are used in the same sense. ಕೌಶಲ್ಯ – should be ಕೌಶಲ

  13. ಬರಿದೇ ಕಲ್ತೆನೊ! ಮಾಳ್ಪೆನೇಂ! ಗುರುಮನೋರಂಗಂ ವಿಶಾಲಂ ವಲಂ
    ಸರಿತಪ್ಪೆಲ್ಲವನೊಪ್ಪವಾಗಿಸುತುಮೀ ರಂಗಪ್ರವೇಶಕ್ಕೆ ತಾಂ
    ನೆರೆಗೊಟ್ಟಂ; ಬಳಿಕಿನ್ನು ಪ್ರೇಕ್ಷಕಮನೋರಂಗಪ್ರವೇಶಕ್ಕೆ ಸ-
    ಲ್ವರೆ ವೇಳ್ಕುಂ ಮಹದಾಶೆ ಈಶನೆಡೆಯಿಂ, ಮೇಣ್ ಮತ್ಪ್ರಯತ್ನಂ ಸದಾ!

    ಇಷ್ಟು ದಿನ ಏನು ಕಲಿತೆನೋ, ಈಗೇನು ಮಾಡುತ್ತೇನೋ! ಗುರುವಿನ ಮನೋರಂಗ ವಿಶಾಲವಾದದ್ದು. ನನ್ನ ಸರಿ ತಪ್ಪುಗಳೆಲ್ಲವನ್ನೂ ಒಪ್ಪವಾಗಿಸಿ ಈಗ ಈ ರಂಗಪ್ರವೇಶಕ್ಕೆ ಅನುವುಮಾಡಿಕೊಟ್ಟಿದ್ದಾನೆ. ಇನ್ನು ಪ್ರೇಕ್ಷಕರ ಮನೋರಂಗಪ್ರವೇಶ ಮಾಡಲು (ಅವರ ಮನಂಬುಗುವಂತೆ) ನನಗೆ ದೇವರ ಕೃಪೆಯೂ, ನನ್ನ ಸತತಪ್ರಯತ್ನವೂ ಬೇಕಾಗಿರುವಂಥದು.

  14. ಬಟ್ಟು ಸರಂ ಕರಂ ಚಿಕುರಮುಂಗುರಮಂ ಕ್ಷಣಕೊರ್ಮೆ ನೋಡುತಂ
    ಥಟ್ಟನೆ ಪುಟ್ಟಿದಂಜಿಕೆಯನಟ್ಟುತ ವೇದಿಕೆಮುಟ್ಟಿ ಬೇಡುತಂ
    ದಿಟ್ಟಡಿಯಿಟ್ಟು ಭಾವಮೆದೆಮುಟ್ಟುವವೋಲ್ ಲಯದೊಟ್ಟಿಗಾಡುತಂ
    ತಟ್ಟಿದ ಕೆಯ್ಯ ಸಪ್ಪಳಕೆ ರಂಗನಿವೇಷದೆ ನೀರೆ ಗೆದ್ದಪಳ್

  15. ಪಿಳಿಪಿಳಿರೆನ್ನುತುಂ ಮಡಿಲೊಳಾಡುತುಮಂಬೆಯನಪ್ಪುತುಂ ಸದಾ
    ಮುಳಿಯುತೆ, ಬಂದರೊಳ್ ಸುಳಿಯಲೊಲ್ಲದ ಕಂದನನೊಪ್ಪುತುಂ ಮುದಾ-
    -ವಳಿಯನೆ ನೀಡಿದಳ್ ನಲಿದು ಶಾರದೆಯೆಂಬವಳಂಬೆಯಾಗಿರಲ್
    ಬೆಳೆಯುತೆ ರಂಗಮೆಂಬ ಮಡಿಲೊಪ್ಪಿರೆ ಹಾಸಿಗೆಯಂತೆ ಕೋಮಲಂ

    ತನ್ನನ್ನು ನೋಡಲು ಬಂದವರನ್ನು ಬೆರಗುಗಂಗಳಿಂದ ನೋಡಿ ಕಕ್ಕಾಬಿಕ್ಕಿಯಾಗಿ ಅಮ್ಮನನ್ನಪ್ಪಿದ ಕಂದನು ಬಂದವರಿಗೆ ಮುದವನ್ನೇ ನೀಡುವಂತೆ, ಪ್ರೇಕ್ಷಕರನ್ನು ನೋಡಿ ಮೊದಲು ಸ್ತಬ್ಧಳಾದರೂ, ಶಾರದಾಂಬೆಯ ಮಡಿಲಾದ ರಂಗಸ್ಥಳದಲ್ಲಿ ತನಗೆ ತಿಳಿದಷ್ಟನ್ನೇ ಮಾಡಿದ್ದರಲ್ಲಿ ತಪ್ಪುಗಳಿದ್ದರೂ ಪ್ರೇಕ್ಷಕರಿಗ ಸಂತೋಷವನ್ನೇ ನೀಡಿದಳು ಅನ್ನುವ ಪ್ರಯತ್ನ.

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)