Oct 302017
 

ಮಾಲಿನೀ ಛಂದಸ್ಸಿನ ಸಮಸ್ಯೆಯ ಪೂರಣವನ್ನು ಮಾಡಿರಿ:
ನರಕನೊಡನೆ ಕೃಷ್ಣಂ ಸಂಧಿಯಂ ಗೆಯ್ದನಲ್ತೇ

  16 Responses to “ಪದ್ಯಸಪ್ತಾಹ ೨೭೯: ಸಮಸ್ಯಾಪೂರಣ”

  1. Narakasura’s mother Bhudevi earned Vishnu’s blessings for her son’s longevity and power.
    ದೊರೆಯೆ ಜನನಿಯಾಶಂಸಂ ಸುದೀರ್ಘಾಂತಕಾಲಂ
    ದೊರೆಯತನದೊಳಾಳ್ದಂ ನಾಕಮಂ ಭೂಮಿಯಂ ಮೇಣ್|
    ಕರಗುತಿರುಗೆ ಭಾಗ್ಯಂ, ಸಂಯುಗಕ್ಷೇತ್ರದೊಳ್ ತಾಂ
    ನರಕನೊಡನೆ ಕೃಷ್ಣಂ ಸಂಧಿಯಂ(Faced) ಗೆಯ್ದನಲ್ತೇ||

    • ನಂದೇ ಮೊದಲು ಅನಕೊಂಡೆ. ಅಷ್ಟರಲ್ಲಿ ನಿಮ್ಮದು ಕಂಡಿತು 🙂 ಇರಲಿ, ಪರಿಹಾರ ಅರ್ಥವಾಗಲಿಲ್ಲ. ವಿವರಿಸಿ.

      • ನರಕನು ಬಲಿಷ್ಠನಾಗಿಯೂ ದೀರ್ಘಾಯುವಾಗಿಯೂ ಬಾಳುವನೆಂದು ಅವನ ತಾಯಿಗೆ ಹಿಂದೆಂದೋ ವರವನ್ನಿತ್ತಿದ್ದ ವಿಷ್ಣುವು ಕೃಷ್ಣನಾಗಿ ಜನ್ಮವೆತ್ತುವ ಹೊತ್ತಿಗೆ ನರಕಾಸುರನ ಕರ್ಮವು ಸವೆದಿದ್ದು, ಆ ರಾಕ್ಷಸನನ್ನು ರಣರಂಗದಲ್ಲಿ ಸಂಧಿಸಿದ.

        • ಸಂಯುಗಕ್ಷೇತ್ರ? battle field?
          Also ಕ್ಷೇತ್ರದೆ+ಇಂದು+ಆ – we cannot make sandhi this way, which leads to ambiguity. It should become ಕ್ಷೇತ್ರದೆyiOದು only.

          • ಹೌದು ಸಂಯುಗಕ್ಷೇತ್ರ=battlefield. ಮೂರನೆಯ ಪಾದವನ್ನು ಸವರಿದ್ದೇನೆ. ಧನ್ಯವಾದಗಳು

  2. ಕರುಣೆಗಿರುಣೆ ಸಲ್ಲಲ್ಕಲ್ಲಮೆಂದುಂ ಖಳರ್ಕ-
    ಳ್ಗರಿದರಿದಿರೆ ಭಾಮಾಪುತ್ರನೆಂದೊಲ್ವಿನಿಂದಂ
    ನರಕನೊಡನೆ ಕೃಷ್ಣಂ ಸಂಧಿಯಂ ಗೆಯ್ದನಲ್ತೇ-
    ರ್ದುರಗರಿಪುವನಾಗಳ್ ಖೂಳನಂ ಕೊಂದನಲ್ತೇಂ?

    ಕರುಣೆ-ಗಿರುಣೆ ಖಳರಲ್ಲಿ ಒಪ್ಪುವುದಿಲ್ಲ. ಇವನು ತನ್ನ ಸತ್ಯಭಾಮೆಯ ಮಗ ಎಂದು ಅರಿದರಿದೂ ನರಕಾಸುರನ ಜೊತೆ ಕೃಷ್ಣನು “ಸಂಧಿಯಂ ಗೆಯ್ದನಲ್ತು, ಏರ್ದು” ಗರುಡನನ್ನು, ಆಗಲೇ ಆ ದುಷ್ಟನನ್ನು ಕೊಂದನಲ್ಲವೇ?!

  3. ತನ್ನ ಪತ್ನಿಯೊಡಗೂಡಿ ನರಕಾಸುರನನ್ನು ಸಂಹರಿಸಲು ಕೃಷ್ಣನು ಯಮನೊಡನೆ ಸಂಧಿಯಂ ಗೈದಂ
    ಬಿರುಬದೆನಿತು ಸಹ್ಯಂ? ಸಾಂತಮೈ ಅಟ್ಟಹಾಸಂ
    ಹರಿಸೆ ವ್ಯಥೆಯ ಕಾಯಲ್ ಪತ್ನಿ-ಭರ್ತರ್ಗಳೀರ್ವರ್ (ಕೃಷ್ಣ-ಸತ್ಯಭಾಮೆ)|
    ನರಕನೊಡನೆ, ಕೃಷ್ಣಂ ಸಂಧಿಯಂ ಗೆಯ್ದನಲ್ತೇ
    ಹರಣವೆಳೆವನೊಳ್ ಕಾಲಂ ಪ್ರಶಸ್ತಂ ಬರಲ್ ಕಾಣ್||
    (ಪುರ=ದೇಹ, ಪುರವ ಕಳೆವವ = ಯಮ)

    • ಕಾಯಲ್ ಪತ್ನಿ-ಭರ್ತರ್ಗಳೀರ್ವರ್ (ಕೃಷ್ಣ-ಸತ್ಯಭಾಮೆ)| ನರಕನೊಡನೆ, … this part is not clear.
      ಪುರವ ಕಳೆವನೊಳ್ – ಪುರ=ದೇಹ – this is done in a too saiddhaantika-artha. we can easily put haraNaveLevnoL meaning the one who draws the praaNa. (haraNa tadbhava of praaNa)

      Otherwise ಪುರವ ಕಳೆವನೊಳ್ – more tends to give meaning of puramathana – shiva.

      • Thanks for the review. ಕಾಯಲ್=ಕಾದಾಡಳು=ಯುದ್ದ ಮಾಡಲು. I have rectified the verse as suggested.

  4. ದುರುಳತನದೆ ಖೂಳಂ ಗೈದಿರಲ್ಕಟ್ಟಕಾಸಂ
    ಮೆರೆದು ಮರೆತಿರಲ್ಕಾ ತಂದೆಯಂ ತಾಯಿಯಂ ಮೇಣ್
    ಮೊರೆದು ಬಿರಿದ ಧಾತ್ರೀಮಾತೆಗಂ ತನ್ನ ತಾಯ್ಗಂ
    ನರಕನೊಡನೆ ಕೃಷ್ಣಂ ಸಂಧಿಯಂ ಗೈದನಲ್ತೇ

    ತನ್ನ ತಾಯಿತಂದೆಯರನ್ನು(ಭೂದೇವಿ-ವರಾಹ) ಮರೆತು ಅಟ್ಟಹಾಸಗೈದ ನರಕನನ್ನು ಕೊಂದು ಅವನ ದೇಹವನ್ನು ತಾಯಿಯಾದ ಭೂಮಿಯೊಡನೆಯೇ ಕೃಷ್ಣ ಸೇರಿಸಿದ ಎನ್ನುವ ಪ್ರಯತ್ನ(ಮಾಲಿನಿಯನ್ನು ಹೊಂದಿಸಿಕೊಳ್ಳುವ ಭರದಲ್ಲಿ ಮೂರು ಬಾರಿ ಆ ಅನ್ನಬೇಕಾಯ್ತು-ಮರೆತಿರಲ್ಕಾ,ತೆರೆದಂದಾ,ಭೂಮಿಯನ್ನಾ:-) )

    • ತುಂಬ ಒಳ್ಳೆಯ ಕಲ್ಪನೆ. ಹೊಸ ತೆರನ ಪೂರಣ. ಮೂರನೇ ಸಾಲಿನ ಅರ್ಥಸ್ಪಷ್ಟತೆ ಹೆಚ್ಚಬೇಕು. ಮೊರೆದು ಬಿರಿದ ಧಾತ್ರೀಮಾತೆಗಂ ತನ್ನ ತಾಯ್ಗಂ \ ನರಕನೊಡನೆ …ಎಂದೇನಾದರೂ ಮಾಡಬಹುದು.

      ರಾಮಾನಂದರ ಕೃಷ್ಣ ಇದರ ದೃಶ್ಯವನ್ನು ಕೊಟ್ಟು ಬಿರಿಸುತೆ ತೆರೆದ ಎಂದು ಬರೆದರೆ ಅದು ವಾಚ್ಯವಾಗಿ ನೀರಸವಾದೀತು 🙂

      • 🙂 ಧನ್ಯವಾದಗಳು..ನಿಮ್ಮ ಸಲಹೆಯಂತೆ ತಿದ್ದಿದ್ದೇನೆ.. ನರಕ ಸತ್ತು ಮೋಕ್ಷ ಪಡೆದು ವಿಷ್ಣುವನ್ನು ಸೇರಿದ ಅಂತೇನಾದ್ರೂ ಮಾಡೋಣ ಅಂದುಕೊಂಡು ಈ ದೃಶ್ಯವನ್ನು ಯೂಟ್ಯೂಬ್ ನಲ್ಲಿ ನೋಡಿದ್ದರಿಂದ ಅದನ್ನೂ ಹಾಕಿದೆ 🙂

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)