Nov 062017
 

  54 Responses to “ಪದ್ಯಸಪ್ತಾಹ ೨೮೦: ಚಿತ್ರಕ್ಕೆ ಪದ್ಯ”

 1. That curved branch is a special perch. Those others are waiting in queue to occupy it by turns.
  (Curved)ಭುಗ್ನಶಾಖೆಯು ವಿಶೇಷಭೂಮಿಯೈ(place)
  ಲಗ್ನಮಾಗಲದರೊಳ್ ಕ್ರಮಕ್ರಮಂ|
  ಮಗ್ನದಿಂ ಸರದಿಯೊಳ್ ನಿರೀಕ್ಶೆಯಿಂ-
  ದಗ್ನಿವರ್ಣಗಳು ಕಾಯೆ ಟೊಂಗೆಯೊಳ್||
  (ಅಗ್ನಿವರ್ಣ=Flamingo; ‘bird’ in a generic sense)

 2. ಲೋಕದ ಹಂಗಂ ಮರೆತಂ
  ತೇ ಕರ್ಮಮಿದೆಂಬ ಪಾಂಗಿನಿಂ ನೋಂತಿರ್ಪೀ/
  ಐಕಿಲ್ವನಿಗಳ ವರ್ಷದೊ
  ಳೀ ಕೃಕವಾಕ್ತತಿಯಿವಲ್ತೆಯರ್ತಿಯ ಯತಿಗಳ್// ಲೋಕದ ಹಂಗನ್ನು ಮರೆತು ಇದುವೇ ತಮ್ಮ ಕರ್ಮ ಎಂಬ ರೀತಿಯಲ್ಲಿ ಹಿಮದ ಹನಿಗಳ ನಡುವೆಯೂ ವೃತತೊಟ್ಟು ನಿಂತ ಈ ಕೋಳಿಗಳ(ನೀರ್ಕೊಳಿ) ಸಮೂಹ ಸ್ನೇಹದ ಋಷಿಗಳ ಸಮೂಹವೇ ಆಗಿದೆ.

  ಮಂ.ಭಾ// ಪಿರಿಗುಂಪಿನೊಳ್ ಮುದುಡುತಂತೆ ಕೂತಿರಲ್
  ಭರಿಸಿಪ್ಪುದಲ್ತೆ ತವೆಶಾಖಮಾದೊಡಂ
  ಪರಿದಿರ್ಪ ನೇಹಮದು ತಾಪಮಿತ್ತುದೀ
  ಪರಿಯಿಂದೆ ತಾಂ ಬಿಸುಟ ಪಕ್ಷಿಯುಗ್ಮಕಂ//
  ಮೇಲೆ ದೊಡ್ಡ ಗುಂಪಿನಲ್ಲಿ ಕುಳಿತ ಹಕ್ಕಿಗಳಿಗೆ ಸಹಜವಾಗಿ ಶಾಖ ಸಿಗುತ್ತದೆ. ಆದರೆ ಅವುಗಳಿಂದ ದೂರಾದ ಪಕ್ಷಿ ಯುಗ್ಮಕ್ಕೆ ಅವುಗಳಲ್ಲಿ ಹರಿಯುತ್ತಿರುವ ನೇಹ/ಪ್ರೇಮವೇ ಶಾಖವನ್ನು ನೀಡಿದೆ

  • ಚೆನ್ನಾಗಿದೆ. ಮರೆತಂತೆಯೇ ಆಗಬೇಕು.
   ಲೋಕದ ಹಂಗುಳಿದಂತ-
   ರ್ಲೋಕದೆ ಚರಿಪಂಥ ಪಾಂಗಿನಿಂ… ಎಂದೇನಾದರೂ ಮಾಡಬಹುದು.

 3. ಕೆಳಗೆ ಕುಳಿತವು ಬಂದದ್ದು ಮೊದಲಾದರೆ/ಕೊನೆಗಾದರೆ, ಮೇಲೆ ಕುಳಿತವು ಅನುಕ್ರಮವಾಗಿ ದುರದೃಷ್ಟವಂತರು/ಪೆದ್ದುಗಳು.
  ಮೇಲೆ ಕೂತವಕೆ ಬುದ್ಧಿಮಂದಮೋ
  ಕಾಲವೀಗವರಿಗಿರ್ಪುದೋ ಧುರಂ|
  ಲೀಲೆಯಿಂ ಕೆಳಗೆ ಕೂತ ಜೋಡಿಯಂ
  ಪಾಲಿಸಿರ್ಪರಲೆ ಬೀಳದೊಲ್ ಹಿಮಂ||

 4. ತಂಬೆಲರೂಡಿ ಸಿಂಗರದ ಸುತ್ತುಡೆಯೀವ ಪಸಿರ್ಮುಸುಂಕಿನಿಂ
  ತುಂಬಿಗಳಿಂಬಿದೆಂಬಿನ ಮಲರ್ಗಳ ಕಂಪಿನ ಸೊಂಪಿನಿಂ ಮನಂ-
  ದುಂಬಿದ ವೃಕ್ಷಮಿಂದು ಬರಿದಾದುದೆನುತ್ತದನಿಂತು ಚೆಲ್ವಿನಿಂ
  ತುಂಬುವವೊಲ್ ಖಗಾವಳಿಯ ಸಾಲ್ ಸೃಜಿಸಿತ್ತಲ ಪರ್ಣರಾಜಿಯಂ

  ತಮಗೆಲ್ಲ ತಂಗಾಳಿಯಿತ್ತು, ಸಿಂಗಾರದ ಉಡೆಯೀವ ಹಸಿರ ಮುಸುಕಿತ್ತು, ತುಂಬಿಗಳಿಗಿಂಬೆಂಬ ಸುಮಾವಳಿಯ ಕಂಪಿನ ಸೊಂಪಿನಿಂದ ಮನವನ್ನು ತುಂಬಿದ ವೃಕ್ಷವಿಂದು (ಎಲೆಯುದುರಿ) ಬರಿದಾಗಿದೆ. ಅದಕ್ಕೆ ಸ್ವಲ್ಪ ಚೆಲುವನ್ನು ತುಂಬೋಣ ಎಂಬಾಸೆಯಿಂದ ಈ ಹಕ್ಕಿಗಳ ಸಾಲು ಪರ್ಣರಾಜಿಯನ್ನು ಸೃಜಿಸಿದೆ.

  • ಎಷ್ಟೆಷ್ಟೋ ಕೋನವನ್ನು ಬದಲಿಸಿಕೊಂಡು ನೋಡಿದೆ, ಚಿಂತಿಸಿದೆ, ಅದೆಷ್ಟನ್ನೋ ಕಲ್ಪಿಸಿಕೊಂಡೆ. (glaring)ನಯನೋಪಘಾತಿಯಾದ ಈ ಕಲ್ಪನೆಯೊಂದು ಹೊಳೆಯಲಿಲ್ಲ!
   ’ಸೃಜಿಸಿತ್ತಲ ಪರ್ಣರಾಜಿಯಂ’ ಎಂಬುದಕ್ಕಿಂತ ’ನೆರೆದಿತ್ತಲ ಪರ್ಣರಾಜಿವೊಲ್’ ಎಂದರೆ ಸೂಕ್ತವೆ?

   • ಗಣಿತಜ್ಞನಂತೆ ಕೋನದೆ,
    ಘನತತ್ತ್ವಜ್ಞಾನಿಯಂತೆ ಚಿಂತನದೆ ಮಗುಳ್
    ಗುಣಿ ಚಿತ್ರಕಾರನೊಲೆ ಕ-
    ಲ್ಪನೆಯಿಂ ನೋಡೆ, ಕವಿಹೃದಯದಿಂ ನೋಡಿದಿರೇಂ?! 😉

    ನೆರೆದಿತ್ತು.. ಎಂತಲೂ ಮಾಡಬಹುದು. ಆದರೆ ಅದು ಸಾಮಾನ್ಯವಾದ ಉಪಮೆಯಂತಾಗುತ್ತದೆ. ಸೃಜಿಸಿತ್ತು.. ಎಂದರೆ ಅವು ತಮ್ಮನ್ನೇ ತಾವು ಬಳಸಿಕೊಂಡು ಎಲೆಗಳನ್ನು ಸೃಷ್ಟಿಸಿದವು ಎಂಬ ವೈಚಿತ್ರ್ಯವೂ ಕಾಣುತ್ತದೆ.

 5. ಮುತ್ತಾಗಲೆಳಸಿರ್ದ ಮಳೆಹನಿಯು ಹಾದಿಯಲೆ
  ಹೊತ್ತುಮೀರುತಲಿರ್ಪುದೆಂದು ತಿಳಿದು
  ಸುತ್ತಿಸುಳಿಯುವ ಮುತ್ತದಾಯ್ತು ಖೇಚರಮಾಗಿ
  ಗತ್ತಿನಿಂ ಕೊಂಬೆಯೀ ಸರದೊಳಿರುತುಂ

  ಸಾಗರವನ್ನು ಸೇರಿ ಮುತ್ತಾಗಬಯಸಿದ್ದ ಮಳೆಹನಿಯು, ಅವಸರದಿಂದ ಮುತ್ತಿನಂಥಾ ಹಕ್ಕಿಯಾಗಿ ಕೊಂಬೆಯ ಹಾರವನ್ನು ಸೇರಿತು.

 6. ವಿವಿಕ್ತವಾಗಿರುವ ಆ ಎರಡು ಪ್ರಣಯಪಕ್ಷಿಗಳಿಗೆ ಲೋಕದ ಪರಿವೆಯೇ ಇಲ್ಲ. ವಸ್ತುತಃ ಆ ಚಿಕ್ಕ ಟೊಂಗೆಯನ್ನು ಮೇಲೆ ಕುಳಿತ ಹಕ್ಕಿಯೊಂದು ಕರುಣೆಯಿಂದ ಹಿಡಿದುಕೊಂಡಿದೆ.
  ಪರಿವೆಯೆಲ್ಲಾಯೆರಡು ಪ್ರಣಯಪಕ್ಷಿಗಳಿಂಗೆ
  ತಿರೆಯೊಳೇನಾಗುತಿರ್ಪುದುಮೆನ್ನುತುಂ|
  ಕರದೊಳಗೆ ಪಿಡಿದಿಹುದು ಮೇಲಣದ ಖಗವೊಂದು
  ಕರುಣೆಯಿಂದವು ಕುಳಿತ ಟೊಂಗೆಯಂ ಕಾಣ್||

 7. The two that are on the twig are very intimate. The rest are very non-communicative. Some are facing this way and some that way!
  ಅಂತಲ್ಲಿ ಕೂತಿರ್ಪ ಖಗಂಗಳೀರ್ವರ್
  ಸ್ವಾಂತಂ ನಿವೇದ್ಯಂಗೊಳುವೊಲ್ ಗಡೇಗಳ್|
  ತಂತಾವೆ ಮಾತೊಳ್ ಮುಳುಗಿರ್ಪರನ್ಯರ್
  ಪಿಂತಿಂತು ಮುಂತಿಂತಿರೆ ಮೌನದಿಂದಂ||

 8. Birds build nests to lay eggs and raise their young ones till they are independent enough. Nests are not homes to retire to at nights!
  ತತ್ತಿಯನಿಕ್ಕಲು ಮಕ್ಕಳ ಬೆಳೆಸಲು
  ತ್ತಿತ್ತಿರಿ ಗೂಡಂ ಕಟ್ಟುವುದು|
  ಚಿತ್ತಾರದ ಗೂಡಲ್ಲಂ ರಾತ್ರಿಯ
  ಹೊತ್ತಿನ ಬೆಚ್ಚನೆ ಮಲಗುಮನೆ||
  ನೆತ್ತಿಯ ಮೇಗಡೆ ಮಳೆಯೇ ಸುರಿಯಲಿ
  ತತ್ತರಿಪೊಲಿನಂ ಸುಡುತಿರಲಿ|
  ಅತ್ತಿತ್ತೆಲ್ಲೆಡೆ ಬಯಲೊಳೆ ವಾಸವು
  ಹೊತ್ತದು ಪಗಲೇಂ ಇರುಳೇನು||

 9. No need to consider whether the branch can withstand the weight of the flock.
  (Stout)ತೋರವದಿರದೊಡಮೇಂ ಕೊಂಬೆಗಳುಂ
  ಕೂರುವೆವಾಂ ನಿಶ್ಚಿಂತೆಯಿನಿಂ|
  ಭಾರವದಾದರೆ ಕೊಂಬೆಯೆ ಬೀಳ್ವುದು
  ಜಾರುತೆ ಪಾರ್ವೆವು ನಾವುಗಳು||

 10. It is evident from the ways they are facing, that the birds have arrived from different directions. But if there is a divine call to fly off, they all head in harmony in the same direction!
  ಕುಳಿತಿಹ ಪರಿಯಿಂ ತಿಳಿವುದು ಖಗಗಳು
  ಇಳಿದಿಹವಾಚೀಚೆಡೆಯಿಂದಂ|
  ಸುಳುಹಿಗೆ ಸ್ಪಂದಿಸಿ ಸಾಂಗತ್ಯದೊಳವು
  ಪುಳಕದೆ ಪಾರುವುವೊಂದೆಡೆಗೆ|

 11. ಕಾಳೇ ಕರ್ಮ
  ಮೇಣಿನಿಂದೆ ಮತ್ತಿಳಿವುದೇತಕೋ ಪಾರಿಪೋದ ಪಕ್ಷಿ
  ತ್ರಾಣಮನ್ನು ಪೋಷಿಸುವ ಕಾಳುಗಳ್ ಬುವಿಯೊಳಿರುವುದದಕೆ|
  ಪ್ರಾಣಪಕ್ಷಿಯದು ಪಾರಿಪೋಯಿತೆಂದೆಂಬ ಮಾತಿನಿಂದೇಂ
  ಮಾಣದೊಲ್ ಜನ್ಮವನ್ನುಮೆತ್ತಿ ಮತ್ತೆತ್ತಿಬಹನು ಕರ್ಮಿ (ಕರ್ಮಶೇಷವಿರುವವನು)||

  • ಕಾಳೆ ಕರ್ಮ ಎಂದರೆ?
   ಮಾಣದಂದದಲೆ ಜನ್ಮವೆತ್ತಿ ಮತ್ತೆತ್ತಿಬಹನು ಕರ್ಮಿ..
   ಜನ್ಮವನ್ನುಂ ಆಗದು.

   • ಮೇಲೆ ಹಾರಿದ ಪಕ್ಷಿಯು ಹೇಗೆ ಕಾಳು/ಧಾನ್ಯಕ್ಕಾಗಿ ಕೆಳಕ್ಕೆ ಇಳಿದು ಬರುತ್ತದೋ, ಹಾಗೆಯೇ ’ಮೇಲಕ್ಕೆ’ ಹೋದವನೂ ಕರ್ಮಶೇಷವನ್ನು ಸವೆಸಲು ಮತ್ತೆ ಜನ್ಮವೆತ್ತಿ ಬರುತ್ತಾನೆ. ನಿಮ್ಮ ಸವರಣೆ ಚೆನ್ನಾಗಿದೆ.

 12. That last bird seems to be precariously perched. Could it be that the rest are waiting to burst out laughing when eventually it falls out due to the pressure of the piled up queue? ವನಮಯೂರ/ಇಂದುನಂದನ||
  ಅಂಚೊಳಿರುವಂಡಜವದಧ್ರುವದಿನಿರ್ಕುಂ (ಅಧ್ರುವ=unstable)
  ಕ್ರೌಂಚಗಳು(Birds) ಜಗ್ಗುತಿರೆ ಪಾಪವದರತ್ತಂ|
  ಸಂಚಿತದ ಒತ್ತಡದೆ ಬೀಳಲದುಮೆಂದುಂ
  ಹೊಂಚುತಲಿ ಕಾದಿಹವೆ ಹಾಸವನು ಗೈಯಲ್||

 13. ಎಣಿಸಿಹೆನು ಒಂದಲ್ಲ ಎರಡಲ್ಲ ಮೂಬಾರಿ
  ಗಣಿತದೊಳು ಗಟ್ಟಿಗನು ನಾನುಮೆಂದುಂ|
  (Birds)ಗಿಣಿಯಿಹವು ಇಪ್ಪತ್ತು ಮೇಲೈದು ನೀನೆಣಿಸು
  ತಿಣುಕಿದೊಡೆ ಹೆಡ್ಡನಪೆ – ಹಾದಿರಂಪ||

  • ಎಣಿಸುವೆನು ನಾನೊಮ್ಮೆ ಹಾದಿರಂಪರೆ ಕೇಳಿ,
   ಗಣನೆಯಲಿ ಹೆಚ್ಚಿರಲು ಬಂದು ಕೂತಿಹವು,
   ಎಣಿಕೆಯಲಿ ಕಡಿಮೆಯಿರೆ ಹಾರಿ ಪೋದಪುವು ಮೇಣ್
   ಒಣಗಿರುವ ಮರವೆಂದು – ನೀಲಕಂಠ / ಬೀರಬಲ್ಲ!

   • ಗಣಿತದೊಳ್ ಗಟ್ಟಿತನ ಬೇಕಿಲ್ಲವೆಣಿಸಲಿಕೆ
    ಗಿಣಿಗಳಂ ಮೈಯಾಂತು ಕೂತಿರ್ಪವಂ /
    ದಣಿವುಗೊಳ್ಳದ ಕಂಗಳೇ ಮುಖ್ಯಮೈ ಕೇಳಿ
    ಸೆಣಿಪಿರೇತಕೆ? ಎಂದ -ಮಂಜುನಾಥಾ //

    • ಇದನ್ನೇ, ಎಂದರೆ, “ಗಣಿತದಲ್ಲಿ ಗಟ್ಟಿಗನು ಮೂರುಬಾರಿ ಎಣಿಸಬೇಕೆ ಎಂದಿದ್ದರೆ ಸಾಕಾಗಿತ್ತು” ಎಂದು ಹೇಳಬೇಕೆಂದಿದ್ದೆ ನೀಲಕಂಠರಿಗೆ!

     • ನಾನು ರಂಪೇಂಗೀತಜ್ಞನಾದ್ದರಿಂದಲೇ ಈ ಪದ್ಯವನ್ನು ಬರೆದದ್ದು 😉

 14. ಹರಹರ!ವಿಧಿಯಾಟಮಲಾ!
  ಗರಿವಿಚ್ಚಿ ಕುಣಿದ ಖಗಂಗಳಿಂದರೆ ನಿಜಕುಂ
  ಮರಗೆಟ್ಟು ಸಂದಿಹವಲಾ!
  ಕೊರಡಂದದ ಘನಹಿಮಂ ಗೆಲಿದು ನಲಿವಾಗಳ್!!

  (ಬಾಳಿನಲ್ಲಿ ಒಬ್ಬರಿಗೆ ಸಂತೋಷ,ಇನ್ನೊಬ್ಬರಿಗೆ ದು:ಖ —ಸಹಜವೇ !!ಇಲ್ಲಿ ಹಾರಾಡುತ್ತಿದ್ದ ಹಕ್ಕಿಗಳು ಮರಗೆಟ್ಟು ಹೋಗಿವೆ ,ಮರಗೆಟ್ಟ ಹಿಮ ನಲಿದಾಡುತ್ತಿದೆ)–ಅನ್ಯೋಕ್ತಿ

 15. ಗಳಿತ ಪಣ್ಗಳದಿಲ್ಲಮೆಂಬುವ
  ಹೊಳಹು ಹತ್ತಿರ ಸುಳಿಯಲಪ್ಪುದೆ
  ಬಳಗಮಿಂತುಟುಮಾನಿ ಕುಳಿತಿರಲರ್ತಿದೋಂಟದಲಿ!
  ಕುಳಿತು ಕಾಣುತುಮಂದಚೆಂದಮ
  ನೆಳಸಿದೀಪರಿ ಹಿಮದ ರಾಶಿಯಿ
  ನಳಿಸಿಕೊಳ್ಳರೆ ದಣಿವನಂ ಮೇಣ್ ಪೂರ್ವದೊಳ್ ಸಂದಾ!!

  • ಏನರ್ಥ? ಗಳಿತ ಪಣ್ ಅರಿಸಮಾಸ. ಎರಡನೇ ಸಾಲು ಗಣ ತಪ್ಪಿವೆ 🙂

   • ಗಮನಿಸಿಯೇ ಇದ್ದಿಲ್ಲ.ಧನ್ಯವಾದಗಳು .ಸರಿ ಮಾಡಿದೆ:-)
    ಬಲಿತ ಹಣ್ಣು—ಅರಿಯಲ್ಲವಲ್ಲಾ!
    —- ಆಹಾರದ (ಹಣ್ಣಿನ) ಬರವೂ ಕಾಡುತ್ತಿಲ್ಲ ಈ ಪಕ್ಕಿಗಳಿಗೆ, ಬಳಗವೆಲ್ಲಾ ಒತ್ತಾಗಿ ಸೇರಿ ಪ್ರೀತಿಯೆಂಬ ತೋಟದಲ್ಲಿ ಇರುತ್ತಿರಲಾಗಿ!ತಾವು ಕಾಣಬಯಸಿದ ಹಿಮದ ರಾಶಿಯನ್ನು ನೋಡುತ್ತ ,ದಣಿವಾರಿಸಿ ಕೊಳ್ಳುತ್ತಿವೆ.(ಹಿಮದ ರಾಶಿಯನ್ನು ನೋಡುತ್ತ ಸಂತಸಪಡುತ್ತಿವೆ)

    • 🙂 ಬಲಿತ ಹಣ್ಣು ಅರಿಯಲ್ಲದಿದ್ದರೂ ಸರಿ ಆಗುವುದಿಲ್ಲ. ಕಳಿತ ಹಣ್ಣಾದರೆ ಚೆನ್ನಾಗಿರುತ್ತದೆ. ಕಾಯಿ ಬಲಿತು ಕಳಿತಾಗ ಹಣ್ಣಾಗುವುದಲ್ಲವೇ!
     ಎರಡನೇ ಸಾಲು ಇನ್ನೂ ಸರಿಯಾಗಿಲ್ಲ 🙂

     • ಕಳಿತ = ಗಳಿತ 🙂 ಅರಿಸಮಾಸವಂತೂ ಆಗಿಲ್ಲ ಅಲ್ಲವೇ 🙂
      ಧನ್ಯವಾದಗಳು

 16. ಶುಷ್ಕವೃಕ್ಷಂ ಸಮಾರುಹ್ಯ
  ಕಷ್ಟಕಾಲೇಪಿ ಖೇಚರಾ:
  ದದಂತಿ ಪಶ್ಯ!ಸಂತೋಷಂ
  ಪ್ರೇಕ್ಷಕೇಭ್ಯೋ ನಿರಂತರಂ

  • ಖೇಚರಾಃ ಆಗಬೇಕಲ್ಲವೇ.. ಪ್ರಥಮಾ ವಿಭಕ್ತಿ. ಪ್ರೇಕ್ಷಕೇಭ್ಯೋ ನಿರಂತರಮ್ ಎಂದು ಸಂಧಿ ಆಗಬೇಕು.
   ಒಳ್ಳೆಯ ಕಲ್ಪನೆ 🙂

 17. ಮುಂಜಾನೆಯ ಹಿಮ ತನ್ನೀ
  ಮಂಜಿನ ಶುಭ್ರತೆಗೆ ಸಾಟಿಯಾರದೆನಲ್ I
  ಅಂಜದೆ ಕೂತಿವೆ ಖಗಕುಲ
  ಪಂಜರಪಕ್ಷಿಗಳೆ ನಾವೆಂಬೊಲ್ II

  ತನ್ನ ಶುಭ್ರತೆಗೆ ಯಾವ ಜೀವಸಂಕುಲ ಸಾಟಿಯಿದೆ ? ಎಂದು ಹಿಮ ಸವಾಲೆಸೆಯಲು ; ”ನಾವೇನು ಪಂಜರ ಪಕ್ಷಿಗಳೇ ನೀನೆಂದಂತೆ ಕುಣಿಯಲು” ?ಎಂದು ಆ ಖಗಕುಲ ಸಡ್ಡು ಹೊಡೆಯಿತು . ( ಮೇಲಿನವಕ್ಕೆ ಚಳಿ ಹಿಡಿದ ಪಕ್ಷದಲ್ಲಿ ಕೆಳಗರಡು ಹೆಚ್ಚುವರಿ ಹಕ್ಕಿಗಳನ್ನು ಇಟ್ಟುಕೊ೦ಡು —ಗಾಯಗೊಂಡ ಕ್ರೀಡಾಳುವಿನ ಬದಲು ಇನ್ನೊಬ್ಬ ಬರುವಂತೆ )

  • ಭಾಲರೇ, ತುಂಬ ಸೊಗಸಾದ ಕಲ್ಪನೆ. ಯಾವ ಛಂದಸ್ಸು? ಆರ್ಯಾ? ಕಂದಪದ್ಯದಂತೆ ಪೂರ್ಣವಾಗಿಲ್ಲ. ಅಲ್ಲದೆ ಕೊನೆಯ ಸಾಲಿನಲ್ಲಿ ಜಗಣವೂ ಇಲ್ಲ. ಮುಂಜಾವು ಶುದ್ಧವಾದ ಪದ.

  • ಧನ್ಯವಾಗಳು ನೀಲಕಂಠರೆ

   ಇದು ‘ಆರ್ಯಾ ‘ದಲ್ಲಿದೆ . ಇದರ ಲಕ್ಷಣ ಈ ರೀತಿ – ಪೂರ್ವಾರ್ಧದಲ್ಲಿ ೭ ಚತುರ್ಮಾತ್ರಾ ಗಣಗಳು + ಒಂದು ಗುರು = ೩೦ ಮಾತ್ರೆ .ಉತ್ತರಾರ್ಧದಲ್ಲಿ ೫ ಚತುರ್ಮಾತ್ರಾ ಗಣಗಳು + ಒಂದು ಲಘು +ಚತುರ್ಮಾತ್ರಾ ಗಣ + ಒಂದು ಗುರು = ೨೭ ಮಾತ್ರೆ . ಪದ್ಯದ ಮಾತ್ರಾ ಕ್ರಮ ೧೨ + ೧೮+೧೨+೧೫.ಎರಡೂ ಅರ್ಧಗಳಲ್ಲಿ ವಿಷಮ ಸ್ಥಾನದಲ್ಲಿ ಜಗಣ ಬರಕೂಡದು ಮತ್ತು ಪೂರ್ವಾರ್ಧದ ೬ ನೆಯ ಗಣ ಸ್ಥಾನದಲ್ಲಿ ಜಗಣ ಯಾ ನಲ ಬರಬೇಕೆಂಬ ನಿಯಮವಿದೆ;ಹೊರತು ೪ ನೆಯ ಚರಣಕ್ಕೆ ಆ ನಿಯಮವನ್ನು ಪ್ರಸ್ತಾಪಿಸಿಲ್ಲ . (ಡಾ . ಟಿ . ವಿ ವೆಂಕಟಾಚಲ ಶಾಸ್ತ್ರಿಯವರ ಕನ್ನಡ ಛಂದ:ಕೋಶ ) ಅದರಂತೆ ಬರೆದಿರುವೆ .ಕಂದ ಪದ್ಯ ‘ಆರ್ಯಾ ಗೀತಿ’ ಎಂಬುದರ ಸದೃಶಬಂಧ ಎಂಬ ಉಲ್ಲೇಖವಿದೆ .

   ಮುಂಜಾವಿನ ಹಿಮ ತನ್ನೀ
   ಮಂಜಿನ ಶುಭ್ರತೆಗೆ ಸಾಟಿಯಾರದೆನಲ್ I
   ಅಂಜದೆ ಕೂತಿವೆ ಖಗಕುಲ
   ಪಂಜರಪಕ್ಷಿಗಳೆ ನಾವೆಂಬೊಲ್II

 18. Matte padyapaanigalige enisuva kelasa!!

  Sooneyolagototti saalu kulitire pakki
  Taane tirumurugutaavruta gondudeem
  Gaana “naa nananaana naananaa naananaa
  Naananana nanananana naananananaa” l

  Ottu 25 hakkigalu!!
  Hinde tirugiruva kappu hakki haadide “naa”
  Mundə tirugitruva biliya hakki haadide “na”

  • ನಮಗೆ ಕಷ್ಟವಾದರೂ ಪರವಾಗಿಲ್ಲ. ನೀವು ಇಷ್ಟು ಸುಲಭವಾಗಿಸಿಕೊಂಡರೆ ಹೇಗೆ?

 19. ಚಳಿಗೆ ನಡುಗುವ ದಿನಗಳನ್ನು
  ಕಳೆಯಲೆಂದು ಹಕ್ಕಿಹಿಂಡು
  ಕುಳಿತಿಹವು ಒಂಟಿಕೊಂಬೆಯಲ್ಲಿ
  ಬಳಿಯ ಗೆಳೆಯ(ತಿ)ಯ ಅಂಟಿಕೊಂಡು (1)

  ಖಗಗಳ ಪ್ರತಿಬಿಂಬವನ್ನು
  ಮೊಗದ ಮೇಲೆ ಇರಿಸಿಕೊಂಡು
  ಲಗುಬಗೆಯಲಿ ಶರಧಿಯೆಡೆಗೆ
  ಸಾಗುತಿಹುದು ಮೌನಿನದಿಯು (2)

  ರವಿಯ ಬಲದ ನೆರವು ಪಡೆದು
  ದಿವಿಗೆ ಹಾರಿದ ನೆಲದ ನೀರು
  ಅವ್ವನ ಬಳಿ ಸೇರಲೆಂದು
  ಭುವಿಗೆ ಮರಳಿ ಬರುತಲಿರಲು (3)

  ಕಲಿಯತೊಡಗಿತು ನದಿಯ ನೀರು
  ಮೇಲೆ ಹಾರಲು,ಮಾತನಾಡಲು,
  ಕಿಲಕಿಲನೆ ಕೂಗುವ ಹಕ್ಕಿಗಳ
  ಬಾಲವನ್ನು ಮುಟ್ಟಿಬರಲು (4)

  ಕೆಳಗೆ ತೂಗಿಹ ಮರದ ತುಂಡಲಿ
  ಕುಳಿತಿಹವು ಆ ಜೋಡಿಹಕ್ಕಿ
  ಕಳೆಯುತ ಸುಖದಿ ಸಮಯವ
  ಬಳಿಯ ಘಟನೆಗಳನು ಮರೆಯುತ (5)

  ಕೇಳಿಬಂದರೂ ಸಿಡಿಲ ದನಿಯು
  ಚಳಿಗೆ ಹನಿಗಳು ಹಿಮವೆ ಆದರೂ
  ಕಳೆಯುವೆವು ಒಂದಾಗಿ ನಾವು
  ಉಳಿದ ದಿನಗಳ ಎನ್ನುತ (6)

  • ಪದ್ಯಗಳ ಒಟ್ಟಾರೆ ಭಾವವೂ,ಕಲ್ಪನೆಗಳೂ,ತಕ್ಕಮಟ್ಟಿಗೆ ಕೂಡಿ ಬಂದಿರುವ ಆದಿಪ್ರಾಸವೂ ಚೆನ್ನಾಗಿಯೇ ಇವೆ. ಆದರೆ ಛಂದೋನಿಯಮಗಳ ಪಾಲನೆಯಾಗಿಲ್ಲ.. ಪದ್ಯಪಾನದ ಪಾಠಗಳನ್ನೊಮ್ಮೆ ನೋಡಿಕೊಂಡು ಮತ್ತೆ ಪ್ರಯತ್ನಿಸಿದರೆ ಹಸಿ ಹಾಲಿನಂತಿರುವ ಪದ್ಯಗಳು ಬೆಣ್ಣೆ,ಮೊಸರು,ತುಪ್ಪಗಳಂತೆ ಇನ್ನೂ ರುಚಿಕರವಾಗುತ್ತವೆ.

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)