Nov 132017
 

“ಶಕುನ”ವನ್ನು ವರ್ಣಿಸಿ ಪದ್ಯರಚನೆ ಮಾಡಿರಿ

  18 Responses to “ಪದ್ಯಸಪ್ತಾಹ ೨೮೧: ವರ್ಣನೆ”

  1. ವಸ್ತುಗಳನಿತ್ತಿತ್ತು ಕಾಡಿ ವಿಷಯಾಭಾವ
    ಗಸ್ತುತಿರುಗಿದರಿಲ್ಲ ಮುನ್ನರಿಗರೊಳ್(Astrologers)|
    ಬೇಸ್ತುಬಿದ್ದಿರಲುಮೇನೇನೂ ಸ್ಫುರಿಸದೆಲೀ
    ಕಿಸ್ತಿಗಿಂದುಳಿಯಿತೇಂ ’ಶಕುನ’ಮೊಂದೇ!!

  2. Under ‘ಚಿತ್ರಕ್ಕೆ ಪದ್ಯ’, we just penned verses for 25 birds perched on a branch. Split them into 25 parts and you will get a few poetic lines per ಶಕುನ/Bird!
    ’ಚಿತ್ರಕ್ಕೆ ಪದ್ಯ’ದೊಳಗೀಗಷ್ಟೆ ಸಂದಿಹವು
    ಪತ್ರಿವಿಂಶತ್ಯುತ್ತರಕೆ(>20) ಪದ್ಯಮೈ|
    (Split)ವಿತ್ರುಟಿಯನವನೆ ಗೈಯಲುಮಷ್ಟೆ(25) ಬಾರಿ ಕೇಳ್
    ಮಾತ್ರಮೊಂದೊಂದೆ (Bird)ಶಕುನಕ್ಕಮಾಯ್ತಯ್||

  3. ತಪ್ಪಾದ ಪದ್ಯ ಹಾಕಿದ್ದೆ. ಕ್ಷಮಿಸಿ

    • ಅಕ್ಕರದಲ್ಲಿ! Is it you alone that scripts a verse in letters/ಅಕ್ಕ(ಕ್ಷ)ರ?
      ಧೀಮಂತ ನೀಂ ಸರಿಯೆ, ಚೆನ್ನು ಪದ್ಯವು ಸರಿಯೆ
      ಪೂಮಾಲೆ ನೀವೇನೆ ಧರಿಸಬಹುದೇಂ?
      ಮೈಮೆಯೇನೋ ನಾನರಿಯದಾದೆ ಪದ್ಯದೊಳು
      ಸಾಮಿಂದಲೆಲ್ಲರಕ್ಷರದೊಳೊರೆವರ್|| (ಅಕ್ಷರ=ಅಕ್ಕರ)

    • ಅಯ್ಯೋ ರಾಮ- ಸರಿಯಾಗಿ ನೋಡದೆ ಯಾವುದನ್ನೋ ಹಾಕ ಹೊರಟು ಇನ್ಯಾವುದನ್ನೋ ಹಾಕಿಬಿಟ್ಟೆ. ಅಕ್ಕರ ಛಂದಸ್ಸು

      • ಕೊಡಲ್ಪಟ್ಟಿರುವ ವಸ್ತುವಿಗೆ ನಿಮ್ಮ ಪದ್ಯವನ್ನು ತಾಳೆಯಾಗಿಸಲು ಬಹಳ ಹೆಣಗಿದೆ. ಉಹೂಂ. ಸಮರ್ಥಕವಿಗಳ ಎದುರು ’ಅಜ್ಞಾನಪ್ರದರ್ಶನ’ವೇಕೆ ಎಂದುಕೊಂಡು ವಿಷಯಾಂತರದ ಆ ಕಗ್ಗವನ್ನು ತೆಗೆದೆ!

    • ಪಿರಿಯಕ್ಕರವೆ?ದಯವಿಟ್ಟು ಅಕ್ಕರವನ್ನೋದುವ ಧಾಟಿಯನ್ನು ತಿಳಿಸುವಿರಾ?

  4. ಕ್ವಣಿಸುತ್ತಮೂರಂ ಕಲೆಪಾಯ್ಕಿಯಿಂಪಾದ
    ಭಣಿತದಿಂ ಬಗೆಯಂ ಪತ್ತಿಕೊಂಬಳ್
    ಗಿಣಿಯೊಂದಂ ಬಿಟ್ಟು ಕೆಡೆದೋಲೆಕಂತೆಯ-
    ನೆಣೆಯಿಲ್ಲದೊಂದ ನೆಳೆತಾರೆಂಬಳ್

    ಮಣಿಹಾರಂಬಿಡಿದು ಮಮ್ಮಲಂ ತಿರುಪುತ್ತ
    ಗೊಣಗೋಣನೇನೋ ಗುಣಿಸಿಕೊಂಡು
    ಕಣಿವೇಳ್ವಳಿವಳಂ ಕಾಣಿರೋ ಬಂದೀಗಳ್
    ಅಣಿಯ ಶೃಂಗೇರಿ ಆಲಯದೊಳ್

    (ಗೀತಿಕೆಯ ಪ್ರಭೇದದಲ್ಲಿ ರಚಿಸಿದ ಪದ್ಯದ್ವಯ. ಶಾರದಾಂಬೆ ಕಣಿಹೇಳುವವಳು ಎನ್ನುವಂತೆ)

  5. ಸರಿ- ಆಡುಮಾತಿನ ಹೊಸಗನ್ನಡದಂತೆ ಹಾಕಲೆ (ಪಾಯ್ಕಲೇನ್)
    ಕೆಡೆ- ಬೀಳಿಸು, ಕೆಡವು

    ಕ್ವಣಿಸುತ್ತ ಊರನ್ ಕಲೆಹಾಕಿ ಇಂಪಾದ
    ಭಣಿತದಿ ಬಗೆಯ ಪಡೆದುಕೊಂಡು
    ಗಿಣಿಯೊಂದನ್ ಬಿಟ್ಟು ಕೆಡೆದೋಲೆಕಂತೆಯ
    ಎಣೆಯಿಲ್ಲದೊಂದ ನೆಳೆತಾರೆಂದು

    ಮಣಿಹಾರ ಹಿಡಿದು ಮಮ್ಮಲ ತಿರುವುತ್ತ
    ಗೊಣಗೋಣನೇನೋ ಗುಣಿಸಿಕೊಂಡು
    ಕಣಿ ಹೇಳೋ ಇವಳ ಕಾಣಿರೋ ಬಂದೀಗ
    ಅಣಿಯ ಶೃಂಗೇರಿ ಆಲಯದಿ

  6. (ತಂತಿಯನು) ಮೀಟುತ, ಊರನು ಕಲೆಹಾಕಿ, ಸವಿಮಾತಾಡಿ ಮರುಳುಮೀಡಿ ನನಸ್ಸನ್ನು ತುಂಬಿ, ಗಿಣಿಯನು ಬಿಟ್ಟು, ಓಲೆಯಕಂತೆಯನು ಅದರ ಮುಂದೆ ಕೆಡವಿ, “ಚೆನ್ನಾಗಿರೋ ಒಂದನ್ನು ತೆಗೆದು ಕೊಡು ಗಿಣಿಯೆ”- ಎಂದಳು

    ಆಮೇಲೆ, ಕೈಯಲಿ ಮಣಿಯ ಎಳೆ ಹಿಡಿದು, ತಿರುವುತ, ಗೆಣಗಿಕೊಂಡು ಲೆಕ್ಕಾಚಾರ ಮಾಡಿ ಕಣಿ ಹೇಶೃಳ್ತಾಳೆ- ಇವಳನ್ನು ಬಂದು ಶೃಂಗೇರಿಯಲಿ ನೋಡಿ

    • ಸುಸ್ಪಷ್ಟವಾಯಿತು. ಕಾಗುಣಿತದೋಷದ ಸ್ವರೂಪವು ಸುಸ್ಪಷ್ಟವಾಗಿರುವುದರಿಂದ ಅದು ದೋಷವೇ ಅಲ್ಲ 🙂

  7. ಏಣಿಹಾವುಗಳಾಟ ಬದುಕಾಗಲದರೊಳಗೆ
    ಜಾಣಬಿದಿಯುರುಳಿಸುತೆ ಶಕುನಾಕ್ಷಮಂ
    ಮಾಣವಕರವೊಲಿರಿಸಿ ನಮ್ಮೆಲ್ಲರಂ ದಿಟದೆ
    ವೇಣುಧರನಾಡಿಸುವನೀ ಜಗದೊಳಂ

    ಅಕ್ಷ=dice

    • Very nice, especially first line. ನಿಜದಿ(ಸ್ವಂತ) ಬದಲು ದಿಟದಿ ಎನ್ನಬಹುದು. (ಮಾಣವಕರಾಗಿಸುತೆ=ಮಾಣವಕರು+ಆಗಿಸುತೆ – ವಿಭಕ್ತಿಪಲ್ಲಟದಿಂದ ಇದು ಸಾಧುವಿರಬಹುದು. ’ಮಾಣವಕರನ್ನಾಗಿಸೆಮ್ಮಂ ದಿಟದಿನೆಂತೊ’ ಎಂದರಾದೀತು)

  8. ರವಿಶಶಿಗಳುದಯಿಪರೆ ಶಕುನವನು ಗಣಿಸುತಲಿ
    ಭುವಿ ತಿರುಗದುಳಿಯುವುದೆ ಕಾಲ ಕೆಡುಕೆಂದು?
    ಕವಿಯು ಬೇರಿಹನು ನೀಂ ಪಾತ್ರಧಾರಿಯೊ ಮನುಜ
    ಸವಿಯೊ ಬದುಕಿನ ಸಿಹಿಕಹಿಗಳೆರಡನುಂ

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)