ಪದ್ಯಸಪ್ತಾಹ ೨೮೨: ಸಮಸ್ಯಾಪೂರಣ ಕಾವ್ಯಕುತೂಹಲ, ಸಮಸ್ಯಾಪೂರಣ Add comments Nov 202017 ಬೆಳದಿಂಗಳಲ್ಲೆ ಕೃಕವಾಕು ಕೂಜಿಕುಂ ಕೃಕವಾಕು – ಕೋಳಿ 36 Responses to “ಪದ್ಯಸಪ್ತಾಹ ೨೮೨: ಸಮಸ್ಯಾಪೂರಣ” ನೀಲಕಂಠ says: November 20, 2017 at 9:31 pm ಬಳಗಕ್ಕೆ ಸೇರ್ದ ಮರಿಗೋಳಿಗೆಲ್ಲಮುಂ ಬೆಳಗಾಗೆ ಕೂಗೆ ತರಬೇತಿಯೀಯಲೆಂ- ದೊಳಿತಿಂದೆ ರಾತ್ರಿಯೊಳೆ ತೋರಿಸುತ್ತುಮಾ ಬೆಳುದಿಂಗಳಲ್ಲಿ ಕೃಕವಾಕು ಕೂಜಿಕುಂ Reply ಹಾದಿರಂಪ says: November 20, 2017 at 9:53 pm ತರ್ಬೇತಿಗ್ ಬರೋರೆಲ್ಲ ಹಳ್ಳಿಹೈದಗೋಳು. ಅದಕ್ಕೇಯ ’ಮರಿಗೋಳು’ ಎಂದಿರಾದು, ಅಲ್ವ್ರ? Reply ನೀಲಕಂಠ says: November 21, 2017 at 12:45 pm hahhaaa.. ಮರಿ + ಕೋಳಿ Reply ಹಾದಿರಂಪ says: November 24, 2017 at 8:20 pm ಬೆಳಗಾಯಿತೆಂದು ಜನವೆದ್ದು ನೋಡಿರಲ್ ಕಳೆದಿತ್ತು ನಿದ್ದೆಯನು (ಬೈಗುಳ)’ದೆವ್ವ’ಮೆನ್ನುತುಂ| ಒಳಿತಾಯ್ತು ಕುಯ್ದು ಮಡಗುತ್ತೆ ನಾಳೆಗಂ ಪುಳಿಕಾರವನ್ನರೆಯಲುಜ್ಜುಗಿರ್ಪರೈ|| Reply ಹಾದಿರಂಪ says: November 20, 2017 at 10:36 pm ಮಲ್ನಾಡಿನ್ಮೂಲೆನಾಗೆ ಇತ್ತೊಂದು ಸೋಮ್ನಹಳ್ಳಿ… ಸೆಳೆಯಲ್ ವಲಂ ಸಹವಿಹಂಗವನ್ನದೋ ಮೊಳಗಿರ್ಪುದುಂ (Nightingale)ಮದನದೂತಕಂಠಮೈ| ಬೆಳುದಿಂಗಳಲ್ಲಿ. ಕೃಕವಾಕು ಕೂಜಿಕುಂ ಬೆಳಗಲ್ಲಿ ಸೋಮಪುರದಲ್ಲಿ ನಿಚ್ಚಮುಂ|| Reply ಹಾದಿರಂಪ says: November 21, 2017 at 11:36 am ಸುಳಿಹೀನ ಜಾತಿಯದು! ಏನುಬಂದಿತೋ(ದೊಡ್ರೋಗ) ಬೆಳುದಿಂಗಳಲ್ಲಿ ಕೃಕವಾಕು ಕೂಜಿಕುಂ| ಕಳೆಯುತ್ತುಮೀಗದರ ಪ್ರಾಣವಾಯುವಂ ಪುಳಿ-ಖಾರವನ್ನರೆಯೆ ನಾಳೆಗೂಟಕಂ|| Reply ನೀಲಕಂಠ says: November 21, 2017 at 12:47 pm hahhaaa huLi-khaaravanneredu kOLige ariyaaguvudallade ಸುಳಿಹೀನ vannuu ariyaagisidiralla Reply ಹಾದಿರಂಪ says: November 21, 2017 at 2:50 pm ನಿಮಗಿಂತ ಅರಿಯುಂಟೆ! ಸುಳಿಗೆಟ್ಟ ಎಂದು ಸವರೋಣ. Reply ಜೀವೆಂ says: November 24, 2017 at 11:01 am Those who can, do. Those who can’t, versify. ಕೈಲಾಗಲವರು ಕೋಳಿಯನು ಸುಟ್ಟುಂಬರು ಕೈಲಾಗದವರು ಕಬ್ಬವನೊರೆವರೈ ಮೇಲಿನೆರಡರೊಳಾಯ್ತು ನಿಮ್ಮದಾವುದು ಬಗೆಯು ಸಾಲದೇಂ ಪುಳಿಚಾರು ಹಾದಿರಂಪ Reply ಹಾದಿರಂಪ says: November 24, 2017 at 7:54 pm ಪುಳಿಚಾರ ನಾಡೊಳಾನುಳಿದಿಹೆನು ಕೇಳೆಲವೊ ಪುಳಿಯೋಗರವದೆನ್ನ ನಿತ್ಯಖಾದ್ಯಂ| ಬೆಳೆಸೆಲ್ಲ ಮಿಗವನದರಂಗಮಂ ತಿಂಬೆಡೆಗೆ(ದೇಶಕ್ಕೆ) ಗುಳೆಯೆದ್ದು ಪೋಗಿರ್ಪನಾರೆಂಬೆಯೋ?? Reply ಜೀವೆಂ says: November 24, 2017 at 9:56 pm ಪುಳಿಖಾರವರೆದಿರೇಂ ಪುಳಿಯೋಗರೆಗೆ ಮತ್ತೆ ಕಳೆದು ಕೋಳಿಯ ಜೀವ ಸುಳ್ಳೆ ಸುಳ್ಳೆ ನೀವು ಹಿಡಿದ ಕೋಳಿಗೆ ಮೂರೇ ಕಾಲು, ಹಾಗಾಗಿ ಈ ಪದ್ಯಕ್ಕೆ ಎರಡೇ ಸಾಕು ಗುಳೆಯೆದ್ದು ಪೋದೊಡೇಂ ಇಳೆಯಲ್ಲಿ ಪರಿದಿರ್ಪ ಪುಳುವೆಲ್ಲಮಂ ತಿಂಬ ಲೋಗರತ್ತ ಪುಳಿಚಾರುತಿಳಿಯೆನಗೆ ಪರಮಪಾವನ ತೀರ್ಥ ಪುಳಿಹೋರವಾಗಾಗ ನೈವೇದ್ಯವು Reply ಹಾದಿರಂಪ says: November 25, 2017 at 11:50 am ಮೂರೇ ಕಾಲು? ಹಾದಿರಂಪ says: November 21, 2017 at 2:49 pm ಬೆಳ=ಬೆಳೆ. ಬೆಳದಿಂಗಳ=ಬೆಳೆದ ಇಂಗಳ/ಇಂಗುದಿವೃಕ್ಷ ಒಳಗೆಲ್ಲಿಯೋ ಮನೆಯ ಕೋಳಿಗೂಡೊಳೋ ಕುಳಿತೆಲ್ಲೊ ಜಂತೆ-ಹಸುಮೈಯ ಮೇಗಳೊಳ್| ಬಳಿಬಂದರಂ ಬೆದರಿಪಂದದೊಳ್ ವಲಂ ಬೆಳದಿಂಗಳಲ್ಲಿ ಕೃಕವಾಕು ಕೂಜಿಕುಂ|| Reply ಅನಂತಕೃಷ್ಣ says: November 21, 2017 at 7:25 pm ಸುಳಿಯುತ್ತಲೊರ್ಮೆ ಖಳಕಾಳಸರ್ಪನೇ- ರ್ದಿಳಿಯುತ್ತೆ ಸೇರ್ದು ಪರಿದಾಡೆ ಗೂಡೊಳಂ- ದುಳಿಯಲ್ಕೆ ಬೇಡುತಲೆ ಜೀವಭಿಕ್ಷೆಯಂ ಬೆಳದಿಂಗಳಲ್ಲೆ ಕೃಕವಾಕು ಕೂಜಿಕುಂ Reply ಹಾದಿರಂಪ says: November 22, 2017 at 12:59 pm Good imagination Reply ಅನಂತಕೃಷ್ಣ says: November 22, 2017 at 4:26 pm Thank you_/\_ Reply ನೀಲಕಂಠ says: November 22, 2017 at 1:22 pm Nice!! Reply ಅನಂತಕೃಷ್ಣ says: November 22, 2017 at 4:27 pm Thank you_/\_ Reply ಅನಂತಕೃಷ್ಣ says: November 22, 2017 at 4:27 pm _ Reply Usha says: November 22, 2017 at 8:41 am chaLigaaladondirulu, maaLeyoLge mai- kaLeditta tattiyolu, gundagoyya, mai- daLedirda Chandiranu kandiral gadaa beLadingaLalle krukavaaku kuujigum!! *maaLe – guudu gundagoyya – tunta Reply ಹಾದಿರಂಪ says: November 22, 2017 at 1:03 pm Fine imagination Reply Usha says: November 23, 2017 at 11:06 am Thank you sir Reply Usha says: November 23, 2017 at 1:36 pm ಧನ್ಯವಾದಗಳು ಪ್ರಸಾದ್ ಸರ್. Reply Usha says: November 23, 2017 at 4:50 pm ಚಳಿಗಾಲದೊoದಿರುಳು, ಮಾಳೆಯೊಳ್ಗೆ ಮೈ- ಕಳೆದಿಟ್ಟ ತತ್ತಿಯೊಲು, ಗುoಡಗೊಯ್ಯ, ಮೈ- ದಳೆದಿರ್ದ ಚoದ್ರಮನು ಕoಡಿರಲ್ ಗಡಾ ಬೆಳದಿಂಗಳಲ್ಲಿ ಕೃಕವಾಕು ಕೂಜಿಕುಂ|| *ಮಾಳೆ – ಗೂಡು ಗುoಡಗೊಯ್ಯ – ತುoಟ Reply Usha says: November 23, 2017 at 3:55 pm ಕಳೆಗಟ್ಟಿರಲ್ ಜರುಗಿ ಜಾತ್ರೆಯ0ದು ಕಾಣ್ ಗಳಮೊತ್ತಿ ಹುಣ್ಣಿಮೆಯ ರಾತ್ರಿಯೊಳ್ ಗಡಾ ಬಳಿಸಾರಿ ಸಿದ್ಧ ಬಲಿಪೀಠಮೇರಿಸಲ್ ಬೆಳದಿಂಗಳಲ್ಲಿ ಕೃಕವಾಕು ಕೂಜಿಕುಂ|| ಪೂರ್ಣಿಮೆಯ ರಾತ್ರಿ ನಡೆದ “ಕೋಳಿ ಬಲಿ”!! Reply K.B.S Ramachandra says: November 23, 2017 at 5:30 pm ತೊಳಗಿರ್ದ ಪೂರ್ಣಿಮೆಯ ರಾತ್ರೆಯೊಳ್ ಗಡಾ ಮುಳಿದಿರ್ದ ನೀರೆ ತಲೆನೋವೆನುತ್ತೆ ತಾಂ ಬಳಿಸೇರಲೀಯದೆಯೆ ರೇಗಲಕ್ಕಟಾ ಬೆಳುದಿಂಗಳಲ್ಲಿ ಕೃಕವಾಕು ಕೂಜಿಕುಂ || Reply ಹಾದಿರಂಪ says: November 23, 2017 at 8:02 pm hhahhahha Reply K.B.S Ramachandra says: November 23, 2017 at 5:48 pm ಚಳಿಗಾಲದೊಂದು ವರರಾತ್ರೆಯಲ್ಲಿ ತಾ – ನೊಳಸೇರ್ದ ಮದ್ಯ ಬಿಡಿಸಿರ್ದ ಕಂಠದಿಂ ಮೊಳಗಿತ್ತು “ಕೊಕ್ಕೊಕೊಕೊಕೋಕೊ” ಎನ್ನುತುಂ ಬೆಳುದಿಂಗಳಲ್ಲಿ ಕೃಕವಾಕು ಕೂಜಿಕುಂ Reply ಹಾದಿರಂಪ says: November 23, 2017 at 8:04 pm ಮದ್ಯದ ನಶೆಯಿದ್ದಾಗ ಛಂದಸ್ಸು-ಪ್ರಾಸಗಳು ತಪ್ಪುವುದು ಸಹಜವೇ! (ಮೊಳಗಿತ್ತು ಕೊಕ್ಕೊಕೊಕೊಕೋಕೊ ಎನ್ನುತುಂ) Reply K.B.S Ramachandra says: November 24, 2017 at 11:37 am Thanks for the suggestion. Reply Usha says: November 23, 2017 at 8:56 pm ಚೆನ್ನಾಗಿದೆ ಹೆನ್ಟೇಲ್ ಪಾರ್ಟಿ !! (ತೊಳಲುತ್ತೆ ಕೊಕ್ಕೊಕೊಕೊಕೋಕೊಮೆನ್ನುತುಂ) Reply ಹಾದಿರಂಪ says: November 23, 2017 at 10:04 pm Who is objecting? (Daytime) ಬೆಳಗಲ್ ದಿಗಂತವದು ಗೂಗೆ ಕೂಗುವೊಲ್ ಕುಳಿತಲ್ಲೆ ಆಕಳಿಸಪೂರ್ವಕೊಮ್ಮೆ ತಾಂ| ಬೆಳದಿಂಗಳಲ್ಲಿ ಕೃಕವಾಕು ಕೂಜಿಕುಂ ಖಳನಾವನೀಗಳಪವಾದಿಸಿರ್ಪನೋ!! Reply ಹಾದಿರಂಪ says: November 24, 2017 at 7:14 pm ಕೃಕವಾಕು=Game Cock ಇಳಿಸಂಜೆಲೊಳ್ ಮೊದಲುಗೊಂಡು ಕಾಳಗಂ ಬೆಳೆದಂತೆ ರಾತ್ರಿ ರುಧಿರಸ್ರವಂ ಮಗುಳ್| ಹಳವಂಡದಿಂ ದಣಿದು ಕಾಲುನೋವಿನಿಂ ಬೆಳದಿಂಗಳಲ್ಲಿ ಕೃಕವಾಕು ಕೂಜಿಕುಂ|| Reply ಹಾದಿರಂಪ says: November 24, 2017 at 7:24 pm ಬೆಳಗಲ್ಲಿ ಮಂದಿಯನು ಏಳಿರೇಳಿರೆಂ- ಬಳವುಂಟೆ ಕೋಳಿವೊಲು ಸರ್ವಜೀವಿಗಂ(animal)| ಬಳಿಬಂದ ಕೀಟವನು ತಿಂದುತೇಗುತುಂ ಬೆಳದಿಂಗಳಲ್ಲಿ ಕೃಕವಾಕು(Lizard) ಕೂಜಿಕುಂ|| Reply ಹಾದಿರಂಪ says: November 24, 2017 at 7:45 pm ಕೃಕವಾಕು=Capon – a cockerel castrated to improve the flesh for use as food ಬೆಳೆದಾಮಿಷಂ(meat) ಗಡಿದು ಕೊರ್ವಲೆನ್ನುತುಂ ಕಳೆದಿರ್ಪ ರೈತನು ಶಿಖಂಡಿರೋಹಮಂ(Cock’s testes)| ಮೊಳಗುತ್ತುಮಾರ್ತತಮಜೀವಹಾನಿಯಿಂ ಬೆಳದಿಂಗಳಲ್ಲಿ ಕೃಕವಾಕು ಕೂಜಿಕುಂ|| Reply ಹಾದಿರಂಪ says: November 24, 2017 at 8:09 pm ಕೂಜನ Vs ಗುಟುರು ಗೆಳೆಯಂ(Soma) ಗಡೇತಕೆಲೊ ಸುಳ್ಳಪೇಳುವೈ ಒಳಿತೊಂದ ಮಾಡಿದನು* ನೋಡುತೀಗಳೈ| ತಳಿಯೆಂತೊ ತಾಂ ’ಗುಟುರ’ಲೇತಕೆಂಬೆಯೋ “ಬೆಳದಿಂಗಳಲ್ಲಿ ಕೃಕವಾಕು(Chameleon) ಕೂಜಿಕುಂ”|| *Please watch the first 10 seconds of https://www.youtube.com/watch?v=9akbjh0Xpn8 Reply Leave a Reply to ಹಾದಿರಂಪ Cancel reply Your Comment You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong> Name (required) E-mail (required) URI Notify me of followup comments via e-mail. You can also subscribe without commenting. Check here to Subscribe to notifications for new posts
ಬಳಗಕ್ಕೆ ಸೇರ್ದ ಮರಿಗೋಳಿಗೆಲ್ಲಮುಂ
ಬೆಳಗಾಗೆ ಕೂಗೆ ತರಬೇತಿಯೀಯಲೆಂ-
ದೊಳಿತಿಂದೆ ರಾತ್ರಿಯೊಳೆ ತೋರಿಸುತ್ತುಮಾ
ಬೆಳುದಿಂಗಳಲ್ಲಿ ಕೃಕವಾಕು ಕೂಜಿಕುಂ
ತರ್ಬೇತಿಗ್ ಬರೋರೆಲ್ಲ ಹಳ್ಳಿಹೈದಗೋಳು. ಅದಕ್ಕೇಯ ’ಮರಿಗೋಳು’ ಎಂದಿರಾದು, ಅಲ್ವ್ರ?
hahhaaa.. ಮರಿ + ಕೋಳಿ
ಬೆಳಗಾಯಿತೆಂದು ಜನವೆದ್ದು ನೋಡಿರಲ್
ಕಳೆದಿತ್ತು ನಿದ್ದೆಯನು (ಬೈಗುಳ)’ದೆವ್ವ’ಮೆನ್ನುತುಂ|
ಒಳಿತಾಯ್ತು ಕುಯ್ದು ಮಡಗುತ್ತೆ ನಾಳೆಗಂ
ಪುಳಿಕಾರವನ್ನರೆಯಲುಜ್ಜುಗಿರ್ಪರೈ||
ಮಲ್ನಾಡಿನ್ಮೂಲೆನಾಗೆ ಇತ್ತೊಂದು ಸೋಮ್ನಹಳ್ಳಿ…
ಸೆಳೆಯಲ್ ವಲಂ ಸಹವಿಹಂಗವನ್ನದೋ
ಮೊಳಗಿರ್ಪುದುಂ (Nightingale)ಮದನದೂತಕಂಠಮೈ|
ಬೆಳುದಿಂಗಳಲ್ಲಿ. ಕೃಕವಾಕು ಕೂಜಿಕುಂ
ಬೆಳಗಲ್ಲಿ ಸೋಮಪುರದಲ್ಲಿ ನಿಚ್ಚಮುಂ||
ಸುಳಿಹೀನ ಜಾತಿಯದು! ಏನುಬಂದಿತೋ(ದೊಡ್ರೋಗ)
ಬೆಳುದಿಂಗಳಲ್ಲಿ ಕೃಕವಾಕು ಕೂಜಿಕುಂ|
ಕಳೆಯುತ್ತುಮೀಗದರ ಪ್ರಾಣವಾಯುವಂ
ಪುಳಿ-ಖಾರವನ್ನರೆಯೆ ನಾಳೆಗೂಟಕಂ||
hahhaaa huLi-khaaravanneredu kOLige ariyaaguvudallade ಸುಳಿಹೀನ vannuu ariyaagisidiralla
ನಿಮಗಿಂತ ಅರಿಯುಂಟೆ! ಸುಳಿಗೆಟ್ಟ ಎಂದು ಸವರೋಣ.
Those who can, do. Those who can’t, versify.
ಕೈಲಾಗಲವರು ಕೋಳಿಯನು ಸುಟ್ಟುಂಬರು
ಕೈಲಾಗದವರು ಕಬ್ಬವನೊರೆವರೈ
ಮೇಲಿನೆರಡರೊಳಾಯ್ತು ನಿಮ್ಮದಾವುದು ಬಗೆಯು
ಸಾಲದೇಂ ಪುಳಿಚಾರು ಹಾದಿರಂಪ
ಪುಳಿಚಾರ ನಾಡೊಳಾನುಳಿದಿಹೆನು ಕೇಳೆಲವೊ
ಪುಳಿಯೋಗರವದೆನ್ನ ನಿತ್ಯಖಾದ್ಯಂ|
ಬೆಳೆಸೆಲ್ಲ ಮಿಗವನದರಂಗಮಂ ತಿಂಬೆಡೆಗೆ(ದೇಶಕ್ಕೆ)
ಗುಳೆಯೆದ್ದು ಪೋಗಿರ್ಪನಾರೆಂಬೆಯೋ??
ಪುಳಿಖಾರವರೆದಿರೇಂ ಪುಳಿಯೋಗರೆಗೆ ಮತ್ತೆ
ಕಳೆದು ಕೋಳಿಯ ಜೀವ ಸುಳ್ಳೆ ಸುಳ್ಳೆ
ನೀವು ಹಿಡಿದ ಕೋಳಿಗೆ ಮೂರೇ ಕಾಲು, ಹಾಗಾಗಿ ಈ ಪದ್ಯಕ್ಕೆ ಎರಡೇ ಸಾಕು
ಗುಳೆಯೆದ್ದು ಪೋದೊಡೇಂ ಇಳೆಯಲ್ಲಿ ಪರಿದಿರ್ಪ
ಪುಳುವೆಲ್ಲಮಂ ತಿಂಬ ಲೋಗರತ್ತ
ಪುಳಿಚಾರುತಿಳಿಯೆನಗೆ ಪರಮಪಾವನ ತೀರ್ಥ
ಪುಳಿಹೋರವಾಗಾಗ ನೈವೇದ್ಯವು
ಮೂರೇ ಕಾಲು?
ಬೆಳ=ಬೆಳೆ. ಬೆಳದಿಂಗಳ=ಬೆಳೆದ ಇಂಗಳ/ಇಂಗುದಿವೃಕ್ಷ
ಒಳಗೆಲ್ಲಿಯೋ ಮನೆಯ ಕೋಳಿಗೂಡೊಳೋ
ಕುಳಿತೆಲ್ಲೊ ಜಂತೆ-ಹಸುಮೈಯ ಮೇಗಳೊಳ್|
ಬಳಿಬಂದರಂ ಬೆದರಿಪಂದದೊಳ್ ವಲಂ
ಬೆಳದಿಂಗಳಲ್ಲಿ ಕೃಕವಾಕು ಕೂಜಿಕುಂ||
ಸುಳಿಯುತ್ತಲೊರ್ಮೆ ಖಳಕಾಳಸರ್ಪನೇ-
ರ್ದಿಳಿಯುತ್ತೆ ಸೇರ್ದು ಪರಿದಾಡೆ ಗೂಡೊಳಂ-
ದುಳಿಯಲ್ಕೆ ಬೇಡುತಲೆ ಜೀವಭಿಕ್ಷೆಯಂ
ಬೆಳದಿಂಗಳಲ್ಲೆ ಕೃಕವಾಕು ಕೂಜಿಕುಂ
Good imagination
Thank you_/\_
Nice!!
Thank you_/\_
_
chaLigaaladondirulu, maaLeyoLge mai-
kaLeditta tattiyolu, gundagoyya, mai-
daLedirda Chandiranu kandiral gadaa
beLadingaLalle krukavaaku kuujigum!!
*maaLe – guudu
gundagoyya – tunta
Fine imagination
Thank you sir
ಧನ್ಯವಾದಗಳು ಪ್ರಸಾದ್ ಸರ್.
ಚಳಿಗಾಲದೊoದಿರುಳು, ಮಾಳೆಯೊಳ್ಗೆ ಮೈ-
ಕಳೆದಿಟ್ಟ ತತ್ತಿಯೊಲು, ಗುoಡಗೊಯ್ಯ, ಮೈ-
ದಳೆದಿರ್ದ ಚoದ್ರಮನು ಕoಡಿರಲ್ ಗಡಾ
ಬೆಳದಿಂಗಳಲ್ಲಿ ಕೃಕವಾಕು ಕೂಜಿಕುಂ||
*ಮಾಳೆ – ಗೂಡು
ಗುoಡಗೊಯ್ಯ – ತುoಟ
ಕಳೆಗಟ್ಟಿರಲ್ ಜರುಗಿ ಜಾತ್ರೆಯ0ದು ಕಾಣ್
ಗಳಮೊತ್ತಿ ಹುಣ್ಣಿಮೆಯ ರಾತ್ರಿಯೊಳ್ ಗಡಾ
ಬಳಿಸಾರಿ ಸಿದ್ಧ ಬಲಿಪೀಠಮೇರಿಸಲ್
ಬೆಳದಿಂಗಳಲ್ಲಿ ಕೃಕವಾಕು ಕೂಜಿಕುಂ||
ಪೂರ್ಣಿಮೆಯ ರಾತ್ರಿ ನಡೆದ “ಕೋಳಿ ಬಲಿ”!!
ತೊಳಗಿರ್ದ ಪೂರ್ಣಿಮೆಯ ರಾತ್ರೆಯೊಳ್ ಗಡಾ
ಮುಳಿದಿರ್ದ ನೀರೆ ತಲೆನೋವೆನುತ್ತೆ ತಾಂ
ಬಳಿಸೇರಲೀಯದೆಯೆ ರೇಗಲಕ್ಕಟಾ
ಬೆಳುದಿಂಗಳಲ್ಲಿ ಕೃಕವಾಕು ಕೂಜಿಕುಂ ||
hhahhahha
ಚಳಿಗಾಲದೊಂದು ವರರಾತ್ರೆಯಲ್ಲಿ ತಾ –
ನೊಳಸೇರ್ದ ಮದ್ಯ ಬಿಡಿಸಿರ್ದ ಕಂಠದಿಂ
ಮೊಳಗಿತ್ತು “ಕೊಕ್ಕೊಕೊಕೊಕೋಕೊ” ಎನ್ನುತುಂ
ಬೆಳುದಿಂಗಳಲ್ಲಿ ಕೃಕವಾಕು ಕೂಜಿಕುಂ
ಮದ್ಯದ ನಶೆಯಿದ್ದಾಗ ಛಂದಸ್ಸು-ಪ್ರಾಸಗಳು ತಪ್ಪುವುದು ಸಹಜವೇ! (ಮೊಳಗಿತ್ತು ಕೊಕ್ಕೊಕೊಕೊಕೋಕೊ ಎನ್ನುತುಂ)
Thanks for the suggestion.
ಚೆನ್ನಾಗಿದೆ ಹೆನ್ಟೇಲ್ ಪಾರ್ಟಿ !!
(ತೊಳಲುತ್ತೆ ಕೊಕ್ಕೊಕೊಕೊಕೋಕೊಮೆನ್ನುತುಂ)
Who is objecting?
(Daytime) ಬೆಳಗಲ್ ದಿಗಂತವದು ಗೂಗೆ ಕೂಗುವೊಲ್
ಕುಳಿತಲ್ಲೆ ಆಕಳಿಸಪೂರ್ವಕೊಮ್ಮೆ ತಾಂ|
ಬೆಳದಿಂಗಳಲ್ಲಿ ಕೃಕವಾಕು ಕೂಜಿಕುಂ
ಖಳನಾವನೀಗಳಪವಾದಿಸಿರ್ಪನೋ!!
ಕೃಕವಾಕು=Game Cock
ಇಳಿಸಂಜೆಲೊಳ್ ಮೊದಲುಗೊಂಡು ಕಾಳಗಂ
ಬೆಳೆದಂತೆ ರಾತ್ರಿ ರುಧಿರಸ್ರವಂ ಮಗುಳ್|
ಹಳವಂಡದಿಂ ದಣಿದು ಕಾಲುನೋವಿನಿಂ
ಬೆಳದಿಂಗಳಲ್ಲಿ ಕೃಕವಾಕು ಕೂಜಿಕುಂ||
ಬೆಳಗಲ್ಲಿ ಮಂದಿಯನು ಏಳಿರೇಳಿರೆಂ-
ಬಳವುಂಟೆ ಕೋಳಿವೊಲು ಸರ್ವಜೀವಿಗಂ(animal)|
ಬಳಿಬಂದ ಕೀಟವನು ತಿಂದುತೇಗುತುಂ
ಬೆಳದಿಂಗಳಲ್ಲಿ ಕೃಕವಾಕು(Lizard) ಕೂಜಿಕುಂ||
ಕೃಕವಾಕು=Capon – a cockerel castrated to improve the flesh for use as food
ಬೆಳೆದಾಮಿಷಂ(meat) ಗಡಿದು ಕೊರ್ವಲೆನ್ನುತುಂ
ಕಳೆದಿರ್ಪ ರೈತನು ಶಿಖಂಡಿರೋಹಮಂ(Cock’s testes)|
ಮೊಳಗುತ್ತುಮಾರ್ತತಮಜೀವಹಾನಿಯಿಂ
ಬೆಳದಿಂಗಳಲ್ಲಿ ಕೃಕವಾಕು ಕೂಜಿಕುಂ||
ಕೂಜನ Vs ಗುಟುರು
ಗೆಳೆಯಂ(Soma) ಗಡೇತಕೆಲೊ ಸುಳ್ಳಪೇಳುವೈ
ಒಳಿತೊಂದ ಮಾಡಿದನು* ನೋಡುತೀಗಳೈ|
ತಳಿಯೆಂತೊ ತಾಂ ’ಗುಟುರ’ಲೇತಕೆಂಬೆಯೋ
“ಬೆಳದಿಂಗಳಲ್ಲಿ ಕೃಕವಾಕು(Chameleon) ಕೂಜಿಕುಂ”||
*Please watch the first 10 seconds of https://www.youtube.com/watch?v=9akbjh0Xpn8