Nov 202017
 

ಬೆಳದಿಂಗಳಲ್ಲೆ ಕೃಕವಾಕು ಕೂಜಿಕುಂ

 

ಕೃಕವಾಕು – ಕೋಳಿ

  36 Responses to “ಪದ್ಯಸಪ್ತಾಹ ೨೮೨: ಸಮಸ್ಯಾಪೂರಣ”

  1. ಬಳಗಕ್ಕೆ ಸೇರ್ದ ಮರಿಗೋಳಿಗೆಲ್ಲಮುಂ
    ಬೆಳಗಾಗೆ ಕೂಗೆ ತರಬೇತಿಯೀಯಲೆಂ-
    ದೊಳಿತಿಂದೆ ರಾತ್ರಿಯೊಳೆ ತೋರಿಸುತ್ತುಮಾ
    ಬೆಳುದಿಂಗಳಲ್ಲಿ ಕೃಕವಾಕು ಕೂಜಿಕುಂ

    • ತರ್ಬೇತಿಗ್ ಬರೋರೆಲ್ಲ ಹಳ್ಳಿಹೈದಗೋಳು. ಅದಕ್ಕೇಯ ’ಮರಿಗೋಳು’ ಎಂದಿರಾದು, ಅಲ್ವ್ರ?

    • ಬೆಳಗಾಯಿತೆಂದು ಜನವೆದ್ದು ನೋಡಿರಲ್
      ಕಳೆದಿತ್ತು ನಿದ್ದೆಯನು (ಬೈಗುಳ)’ದೆವ್ವ’ಮೆನ್ನುತುಂ|
      ಒಳಿತಾಯ್ತು ಕುಯ್ದು ಮಡಗುತ್ತೆ ನಾಳೆಗಂ
      ಪುಳಿಕಾರವನ್ನರೆಯಲುಜ್ಜುಗಿರ್ಪರೈ||

  2. ಮಲ್ನಾಡಿನ್ಮೂಲೆನಾಗೆ ಇತ್ತೊಂದು ಸೋಮ್ನಹಳ್ಳಿ…
    ಸೆಳೆಯಲ್ ವಲಂ ಸಹವಿಹಂಗವನ್ನದೋ
    ಮೊಳಗಿರ್ಪುದುಂ (Nightingale)ಮದನದೂತಕಂಠಮೈ|
    ಬೆಳುದಿಂಗಳಲ್ಲಿ. ಕೃಕವಾಕು ಕೂಜಿಕುಂ
    ಬೆಳಗಲ್ಲಿ ಸೋಮಪುರದಲ್ಲಿ ನಿಚ್ಚಮುಂ||

  3. ಸುಳಿಹೀನ ಜಾತಿಯದು! ಏನುಬಂದಿತೋ(ದೊಡ್ರೋಗ)
    ಬೆಳುದಿಂಗಳಲ್ಲಿ ಕೃಕವಾಕು ಕೂಜಿಕುಂ|
    ಕಳೆಯುತ್ತುಮೀಗದರ ಪ್ರಾಣವಾಯುವಂ
    ಪುಳಿ-ಖಾರವನ್ನರೆಯೆ ನಾಳೆಗೂಟಕಂ||

    • hahhaaa huLi-khaaravanneredu kOLige ariyaaguvudallade ಸುಳಿಹೀನ vannuu ariyaagisidiralla 😀

      • ನಿಮಗಿಂತ ಅರಿಯುಂಟೆ! ಸುಳಿಗೆಟ್ಟ ಎಂದು ಸವರೋಣ.

    • Those who can, do. Those who can’t, versify.

      ಕೈಲಾಗಲವರು ಕೋಳಿಯನು ಸುಟ್ಟುಂಬರು
      ಕೈಲಾಗದವರು ಕಬ್ಬವನೊರೆವರೈ
      ಮೇಲಿನೆರಡರೊಳಾಯ್ತು ನಿಮ್ಮದಾವುದು ಬಗೆಯು
      ಸಾಲದೇಂ ಪುಳಿಚಾರು ಹಾದಿರಂಪ

      • ಪುಳಿಚಾರ ನಾಡೊಳಾನುಳಿದಿಹೆನು ಕೇಳೆಲವೊ
        ಪುಳಿಯೋಗರವದೆನ್ನ ನಿತ್ಯಖಾದ್ಯಂ|
        ಬೆಳೆಸೆಲ್ಲ ಮಿಗವನದರಂಗಮಂ ತಿಂಬೆಡೆಗೆ(ದೇಶಕ್ಕೆ)
        ಗುಳೆಯೆದ್ದು ಪೋಗಿರ್ಪನಾರೆಂಬೆಯೋ??

        • ಪುಳಿಖಾರವರೆದಿರೇಂ ಪುಳಿಯೋಗರೆಗೆ ಮತ್ತೆ
          ಕಳೆದು ಕೋಳಿಯ ಜೀವ ಸುಳ್ಳೆ ಸುಳ್ಳೆ

          ನೀವು ಹಿಡಿದ ಕೋಳಿಗೆ ಮೂರೇ ಕಾಲು, ಹಾಗಾಗಿ ಈ ಪದ್ಯಕ್ಕೆ ಎರಡೇ ಸಾಕು

          ಗುಳೆಯೆದ್ದು ಪೋದೊಡೇಂ ಇಳೆಯಲ್ಲಿ ಪರಿದಿರ್ಪ
          ಪುಳುವೆಲ್ಲಮಂ ತಿಂಬ ಲೋಗರತ್ತ
          ಪುಳಿಚಾರುತಿಳಿಯೆನಗೆ ಪರಮಪಾವನ ತೀರ್ಥ
          ಪುಳಿಹೋರವಾಗಾಗ ನೈವೇದ್ಯವು

  4. ಬೆಳ=ಬೆಳೆ. ಬೆಳದಿಂಗಳ=ಬೆಳೆದ ಇಂಗಳ/ಇಂಗುದಿವೃಕ್ಷ
    ಒಳಗೆಲ್ಲಿಯೋ ಮನೆಯ ಕೋಳಿಗೂಡೊಳೋ
    ಕುಳಿತೆಲ್ಲೊ ಜಂತೆ-ಹಸುಮೈಯ ಮೇಗಳೊಳ್|
    ಬಳಿಬಂದರಂ ಬೆದರಿಪಂದದೊಳ್ ವಲಂ
    ಬೆಳದಿಂಗಳಲ್ಲಿ ಕೃಕವಾಕು ಕೂಜಿಕುಂ||

  5. ಸುಳಿಯುತ್ತಲೊರ್ಮೆ ಖಳಕಾಳಸರ್ಪನೇ-
    ರ್ದಿಳಿಯುತ್ತೆ ಸೇರ್ದು ಪರಿದಾಡೆ ಗೂಡೊಳಂ-
    ದುಳಿಯಲ್ಕೆ ಬೇಡುತಲೆ ಜೀವಭಿಕ್ಷೆಯಂ
    ಬೆಳದಿಂಗಳಲ್ಲೆ ಕೃಕವಾಕು ಕೂಜಿಕುಂ

  6. chaLigaaladondirulu, maaLeyoLge mai-
    kaLeditta tattiyolu, gundagoyya, mai-
    daLedirda Chandiranu kandiral gadaa
    beLadingaLalle krukavaaku kuujigum!!

    *maaLe – guudu
    gundagoyya – tunta

    • Fine imagination

    • ಚ‌ಳಿಗಾಲ‌ದೊoದಿರುಳು, ಮಾಳೆಯೊಳ್ಗೆ ಮೈ-
      ಕ‌ಳೆದಿಟ್ಟ‌ ತ‌ತ್ತಿಯೊಲು, ಗುoಡ‌ಗೊಯ್ಯ, ಮೈ-
      ದ‌ಳೆದಿರ್ದ‌ ಚ‌oದ್ರ‌ಮ‌ನು ಕ‌oಡಿರ‌ಲ್ ಗ‌ಡಾ
      ಬೆಳದಿಂಗಳಲ್ಲಿ ಕೃಕವಾಕು ಕೂಜಿಕುಂ||

      *ಮಾಳೆ – ಗೂಡು
      ಗುoಡ‌ಗೊಯ್ಯ‌ – ತುoಟ‌

  7. ಕ‌ಳೆಗ‌ಟ್ಟಿರ‌ಲ್ ಜ‌ರುಗಿ ಜಾತ್ರೆಯ‌0ದು ಕಾಣ್
    ಗ‌ಳ‌ಮೊತ್ತಿ ಹುಣ್ಣಿಮೆಯ‌ ರಾತ್ರಿಯೊಳ್ ಗ‌ಡಾ
    ಬ‌ಳಿಸಾರಿ ಸಿದ್ಧ‌ ಬ‌ಲಿಪೀಠ‌ಮೇರಿಸ‌ಲ್
    ಬೆಳದಿಂಗಳಲ್ಲಿ ಕೃಕವಾಕು ಕೂಜಿಕುಂ||

    ಪೂರ್ಣಿಮೆಯ‌ ರಾತ್ರಿ ನ‌ಡೆದ‌ “ಕೋಳಿ ಬ‌ಲಿ”!!

  8. ತೊಳಗಿರ್ದ ಪೂರ್ಣಿಮೆಯ ರಾತ್ರೆಯೊಳ್ ಗಡಾ
    ಮುಳಿದಿರ್ದ ನೀರೆ ತಲೆನೋವೆನುತ್ತೆ ತಾಂ
    ಬಳಿಸೇರಲೀಯದೆಯೆ ರೇಗಲಕ್ಕಟಾ
    ಬೆಳುದಿಂಗಳಲ್ಲಿ ಕೃಕವಾಕು ಕೂಜಿಕುಂ ||

  9. ಚಳಿಗಾಲದೊಂದು ವರರಾತ್ರೆಯಲ್ಲಿ ತಾ –
    ನೊಳಸೇರ್ದ ಮದ್ಯ ಬಿಡಿಸಿರ್ದ ಕಂಠದಿಂ
    ಮೊಳಗಿತ್ತು “ಕೊಕ್ಕೊಕೊಕೊಕೋಕೊ” ಎನ್ನುತುಂ
    ಬೆಳುದಿಂಗಳಲ್ಲಿ ಕೃಕವಾಕು ಕೂಜಿಕುಂ

    • ಮದ್ಯದ ನಶೆಯಿದ್ದಾಗ ಛಂದಸ್ಸು-ಪ್ರಾಸಗಳು ತಪ್ಪುವುದು ಸಹಜವೇ! (ಮೊಳಗಿತ್ತು ಕೊಕ್ಕೊಕೊಕೊಕೋಕೊ ಎನ್ನುತುಂ)

    • ಚೆನ್ನಾಗಿದೆ ಹೆನ್‍ಟೇಲ್ ಪಾರ್ಟಿ !!
      (ತೊಳ‌ಲುತ್ತೆ ಕೊಕ್ಕೊಕೊಕೊಕೋಕೊಮೆನ್ನುತುಂ)

  10. Who is objecting?
    (Daytime) ಬೆಳಗಲ್ ದಿಗಂತವದು ಗೂಗೆ ಕೂಗುವೊಲ್
    ಕುಳಿತಲ್ಲೆ ಆಕಳಿಸಪೂರ್ವಕೊಮ್ಮೆ ತಾಂ|
    ಬೆಳದಿಂಗಳಲ್ಲಿ ಕೃಕವಾಕು ಕೂಜಿಕುಂ
    ಖಳನಾವನೀಗಳಪವಾದಿಸಿರ್ಪನೋ!!

  11. ಕೃಕವಾಕು=Game Cock
    ಇಳಿಸಂಜೆಲೊಳ್ ಮೊದಲುಗೊಂಡು ಕಾಳಗಂ
    ಬೆಳೆದಂತೆ ರಾತ್ರಿ ರುಧಿರಸ್ರವಂ ಮಗುಳ್|
    ಹಳವಂಡದಿಂ ದಣಿದು ಕಾಲುನೋವಿನಿಂ
    ಬೆಳದಿಂಗಳಲ್ಲಿ ಕೃಕವಾಕು ಕೂಜಿಕುಂ||

  12. ಬೆಳಗಲ್ಲಿ ಮಂದಿಯನು ಏಳಿರೇಳಿರೆಂ-
    ಬಳವುಂಟೆ ಕೋಳಿವೊಲು ಸರ್ವಜೀವಿಗಂ(animal)|
    ಬಳಿಬಂದ ಕೀಟವನು ತಿಂದುತೇಗುತುಂ
    ಬೆಳದಿಂಗಳಲ್ಲಿ ಕೃಕವಾಕು(Lizard) ಕೂಜಿಕುಂ||

  13. ಕೃಕವಾಕು=Capon – a cockerel castrated to improve the flesh for use as food
    ಬೆಳೆದಾಮಿಷಂ(meat) ಗಡಿದು ಕೊರ್ವಲೆನ್ನುತುಂ
    ಕಳೆದಿರ್ಪ ರೈತನು ಶಿಖಂಡಿರೋಹಮಂ(Cock’s testes)|
    ಮೊಳಗುತ್ತುಮಾರ್ತತಮಜೀವಹಾನಿಯಿಂ
    ಬೆಳದಿಂಗಳಲ್ಲಿ ಕೃಕವಾಕು ಕೂಜಿಕುಂ||

  14. ಕೂಜನ Vs ಗುಟುರು
    ಗೆಳೆಯಂ(Soma) ಗಡೇತಕೆಲೊ ಸುಳ್ಳಪೇಳುವೈ
    ಒಳಿತೊಂದ ಮಾಡಿದನು* ನೋಡುತೀಗಳೈ|
    ತಳಿಯೆಂತೊ ತಾಂ ’ಗುಟುರ’ಲೇತಕೆಂಬೆಯೋ
    “ಬೆಳದಿಂಗಳಲ್ಲಿ ಕೃಕವಾಕು(Chameleon) ಕೂಜಿಕುಂ”||
    *Please watch the first 10 seconds of https://www.youtube.com/watch?v=9akbjh0Xpn8

Leave a Reply to ಹಾದಿರಂಪ Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)