Jan 222018
 

ಪ್ರಾಣಾಯಾಮಂ ಪ್ರಣಯದೆ ಸದಾ ಗೆಯ್ದನಯ್ ವೇಶ್ಯೆಗೊಲ್ದಂ

  20 Responses to “ಪದ್ಯಸಪ್ತಾಹ ೨೯೧: ಸಮಸ್ಯಾಪೂರಣ”

  1. ಯಷ್ಟಿಪ್ರಾಣ = ಏದುಸಿರುಬಿಡುವುದು
    ತ್ರಾಣಂ ಕ್ಷೀಣಂಗೊಳುವುದು ದಿಟಂ ಸಂಗಮಾಂಗಂ ಗಡೆಂತೋ
    ಗೌಣಂ ತಾನಾಗಿರಲು ರತಿಯೂರ್ಜಂ ಪರಿಶ್ರಾಂತಯಷ್ಟಿ-
    ಪ್ರಾಣಾಯಾಮಂ ಪ್ರಣಯದೆ ಸದಾ ಗೆಯ್ದನಯ್ ವೇಶ್ಯೆಗೊಲ್ದಂ
    ಮೇಣಿಂ ತಾನುಂ ಸತಿಯೊಳೊಲಿದಂ – ಭೇದಮೇನಿಲ್ಲ ನೋಡೈ!!

    • ನಿಮ್ಮ ಪದ್ಯ ಸಾಲದೆ? ನೋಡೋದು ಬೇರೆ ಬೇಕೆ?

      ಆದರೆ ‘ತಾನುಂ’ ಕೊಂಚ ಕಷ್ಟಕ್ಕಿಟ್ಟುಕೊಳ್ಳುತ್ತಲ್ಲ, ಸಾಲದ್ದಕ್ಕೆ ‘ಭೇದಮೇನಿಲ್ಲ’ ಅಂದಿದ್ದೀರಿ ….

      • ವೇಶ್ಯೆಗೊಲಿದವನು ಅಂತು; ಸತಿಗೊಲಿದವನೂ ಅಂತು ಎಂಬರ್ಥದಲ್ಲಿ. ವಿಪರೀತಾರ್ಥವನ್ನು ಕಲ್ಪಿಸುವಿರೇಕೆ?

        • ಸಾಧ್ಯಾಸಾಧ್ಯಗಳೆಲ್ಲಮಂ ಕವನದೊಳ್ ತೋರಲ್ಕೆ ನೀಂ ಮತ್ಸಖೇ
          ಭಾಧ್ಯನ್ ನಾಂ ಸ್ಫುರಣಕ್ಕದೆಂತು? ಪುರುಳಿರ್ಕೆಂದುಂ ಭವನ್ಮುಷ್ಟಿಯೊಳ್
          ಬೋಧ್ಯಂ ಪಂಜರಮುಕ್ತಶಂಬರದವೋಲ್ ಕೈಮೀರದಿರ್ಕೆಂದುಂ ಆ
          ರಾಧ್ಯರ್ ನಿಮ್ಮೆಸೆದಂಬು ಗಮ್ಯಮನೆ ಸೇರ್ದಂತಿರ್ಕೆ ಪದ್ಯಂಗಳೊಳ್ 🙂

  2. ಕಾಣಲ್ ಸ್ವಾಸ್ಥ್ಯಂ ಮನದೊಳೆನೆ ಪಣ್ಯಾಂಗನೆ ಶ್ರದ್ಧೆಯಿಂದಂ
    ವಾಣೀಪುತ್ರಂ ಶಮದಮಯುತಂ ಸಾಧುವೊಳ್ ಛಾತ್ರೆಯಾದಳ್
    ತ್ರಾಣಂ ನೀಳ್ದಂ ಮನದ ಜಯಕೆಂದೀಕ್ಷಿಸೌ ಯೋಗಮೆಂದಂ
    ಪ್ರಾಣಾಯಾಮಂ ಪ್ರಣಯದೆ ಸದಾ ಗೆಯ್ದನಯ್ ವೇಶ್ಯೆಗೊಲ್ದಂ

    ತ್ರಾಣಂ – shelter
    ಪ್ರಣಯದೆ ಸದಾ – Continued good conduct

    • ಚೆನ್ನಾಗಿದೆ. ಸಾಧುವಿನೊಳ್ ಸಾಧುವಾಗಿರುತ್ತಿತ್ತು.

      • ಧನ್ಯವಾದ ಜೀವೆಂ, ಹೌದು ಸ್ವಲ್ಪ ಎಡವಟ್ಟಿದೆ, ನೀವೆಂದಂತೆ ಸಾಧುವಿಂಗೆ, ಸಾಧುವಿನೊಳ್ ಸರಿಯಾಗುತ್ತದೆ. ಛಂದಸ್ಸಿಗೆ ಸಾಧುವೊಳ್ ಎಂದು ಮಾಡಿದ್ದೆ ಅಷ್ಟು ಸರಿ ಇಲ್ಲ.. ಸಾಧುಗಂ ಆಗಬಹುದೇನೋ…

    • ಸಿದ್ಧನೊಳ್ ಶಿಷ್ಯೆಯಾದಳ್

  3. ಜಾಣಂ ಕಾಂಚಾಣಕೃಪಣನವಂ ಕಾಣಿ, ಕಾಮಾತುರಂ ಬಿ –
    ನ್ನಾಣಂಬಟ್ಟುo ಯಮನಿಯಮದೊಳ್ ಭೋಗವಂ ಪಾಲಿಸಿರ್ಪಂ |
    ಮೇಣುoಮೇಣ್ ವಾಸನೆಯನೆಣೆಸಲ್ ಯೋಗ್ಯವಿದ್ಯಾಧರಂ ತಾಂ
    ಪ್ರಾಣಾಯಾಮಂ ಪ್ರಣಯದೆ ಸದಾ ಗೆಯ್ದನಯ್ , ವೇಶ್ಯೆಗೊಲ್ದ o !!

    ಚಿತ್ತವೃತ್ತಿ ನಿರೋಧಕ್ಕೆ ಪ್ರಾಣಾಯಾಮವೇ “ಉಚಿತ”ವಲ್ಲವೇ ?!!

  4. “ಕ್ಷೀಣಂಗೈಯೆಂ ತನುಮನಗಳೊಳ್ ಶಕ್ತಿಯಂ ಯುಕ್ತಿಯಂ ಮೇಣ್”
    ಜಾಣಂ ತಾನಿಂತೆನುವನವನಿಂಗೆಂದಿಗೆಂದೆಂದು ಸಲ್ಗುಂ|
    ಪ್ರಾಣಾಯಾಮಂ. ಪ್ರಣಯದೆ ಸದಾ ಗೆಯ್ದನಯ್ ವೇಶ್ಯೆಗೊಲ್ದಂ
    ಪ್ರಾಣಹ್ರಾಸಂಗೊಳುವೊಲು ರತಿಕ್ರೀಡೆಯಂ ನಿಲ್ಲದೆಂದುಂ||

  5. ಕಾಣಲ್ಕಾತಂ ತರುಣಬಲದಿಂ ಮಿಂಚಿ ರಾರಾಜಿಸಿರ್ಪಂ
    ವೇಣೀಸ್ಪರ್ಶಂ ಕೆರಳಿಸೆಮನಂ ಚಂಚಲಂಗೊಳ್ಳುತಿರ್ಕುಂ
    ಮೇಣಾತಂಗಂ ರತಿಗೆ ಸರಿಯಲ್ಕುಬ್ಬಸಂ ಕಾಡಲಾಗಳ್
    ಪ್ರಾಣಾಯಾಮಂ ಪ್ರಣಯದೆ ಸದಾ ಗೈವನಯ್ ವೇಶ್ಯೆಗೊಲ್ದಂ

  6. ಗುರುಶಿಷ್ಯರು ಚಿತ್ರದ ದೃಶ್ಯವೊಂದರಿಂದ ಪ್ರೇರಿತವಾದದ್ದು.ವೇಶ್ಯಾಲೋಲುಪನಾದ ರಾಜ ಪೂಜಾಸಮಯದಲ್ಲಿ ಗೆಳತಿಯ ಕುಚೋತ್ತುಂಗವನ್ನೇ ಶಿವಲಿಂಗವೆಂದು ಪೂಜಿಸುತ್ತಾನೆ(ಆಗ ಪ್ರಾಣಾಯಾಮವನ್ನೂ ಮಾಡುತ್ತಾನೆ)

    ಪ್ರಾಣಾರೋಗ್ಯಾಯುಗಳನವಳಿಂಗೀಯಲಾಗುತ್ತುಮಂಧಂ
    ಜಾಣಂ ದೇವಂ ಬಿಡುವನೆ ಭವೋದ್ರಿಕ್ತನಂ ಭಕ್ತನಂ ತಾನ್?
    ಕಾಣಲ್ಕಾಗಳ್ ತರುಣಿಯಕುಚೋತ್ತುಂಗದೊಳ್ ಲೀಲೆಯಿಂದಂ
    ಪ್ರಾಣಾಯಾಮಂ ಪ್ರಣಯದೆ ಸದಾ ಗೈದನೈ ವೇಶ್ಯೆಗೊಲ್ದಂ

    • ಘೋರವಾದ ಪರಿಹಾರ 😀
      ತಮಸ್ ಉದ್ರಿಕ್ತ – ತಮ ಉದ್ರಿಕ್ತ ಎಂದು ಉಳಿಯುತ್ತದೆ. ಎರಡನೇ ಬಾರಿ ಸಂಧಿಯಾಗುವುದಿಲ್ಲ.

      • ಘೋರವೇ?ಭವೋದ್ರಿಕ್ತನಂ ಎಂದು ತೇಪೆ ಹಾಕಿದ್ದೇನೆ

  7. ಮೊಗದಂದ ಪೆರ್ಚಿಸಲ್ ದ್ರಷ್ಟಿಬೊಟ್ಟಿನತೆರದಿ
    ನಗುಮೊಗದಿ ಸೆಳೆಯುತಿದೆ ನಯನಂಗಳಂ
    ಸೊಗಸಾಗಿ ತೋರಲ್ಕೆ ಪದ್ಮಿನಿಯ ಮೊಗದಂದ
    ಜಗದೀಶನಿಟ್ಟಿಹನು ಚಂದ್ರಮೊಗಕೆ

    • ಪದ್ಯ time machineನಲ್ಲಿ ಕೂತು ಎರಡು ವಾರ ಹಿಂದಕ್ಕೆ ಬಂದಿದೆ:-) ದ್ರಷ್ಟಿ–>ದಿಟ್ಟಿ/ದೃಷ್ಟಿ

      • ಅದು ದಿಟ್ಟಿಬೊಟ್ಟೇ ಆಗಬೇಕು. ದೃಷ್ಟಿಬೊಟ್ಟು ಆರಿಸಮಾಸ.

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)