Feb 262018
 

ಈ ಬಾರಿಯ ನಾಲ್ಕು ವಸ್ತುಗಳು:

೧. ಮಳೆಗಾಲದ ಕಪ್ಪೆ
೨. ಕಟುಕ
೩. ಕೋಳಿ
೪. ಬೆಂಕಿಪೊಟ್ಟಣ

  34 Responses to “ಪದ್ಯಸಪ್ತಾಹ ೨೯೬: ವರ್ಣನೆ”

  1. ಮಳೆಗಾಲದ ಕಪ್ಪೆ
    ಬಂಡೆಯಡಿಯಂ ಬಿಟ್ಟು ಹತ್ತಿರದ ಭಾವಿಗೋ
    ಹೊಂಡ-ನದಿಗೋ ಹೋಗಲೇನು ಧಾಡಿ|
    ದಂಡಪಿಂಡನ ವೋಲ್ದ್ವಿಧಾಗತಿಯೆ ಕಾಯುವೆಯ
    ಆಂಡವನು ನಿನ್ನೆಡೆಯೆ ಮಳೆಯ ಸುರಿಸಲ್||
    ದ್ವಿಧಾಗತಿ-Amphibian

  2. ದ್ಯಾವಾ-ಪೃಥ್ವಿಯರಿರ್ವರ
    ಭಾವುಕ ಕಲ್ಯಾಣಮಲ್ತೆ ವರ್ಷಮೆ ಬಗೆಯ
    ಲ್ಕಾ ವೈವಾಹಿಕ ಕಾರ್ಯಕ
    ಮೋವುತೆ ವಂದಿರ್ಪ ವಾದ್ಯದರ್ ಭೇಕ೦ಗಳ್//
    ಭೂಮಿ – ಆಕಾಶ ಇವುಗಳ ಮದುವೆಯೇ ಮಳೆ. ಈ ವಿವಾಹಕ್ಕೆ ನಲ್ಮೆಯಿಂದ ಬಂದ ವಾದ್ಯಗಾರರೇ ಈ ಕಪ್ಪೆಗಳು.

  3. ಕೋಳಿಯು ನೆಲದಿಂದ ಹೆಚ್ಚು ಹಾರಲಾರದು. ಕ್ರಮಕ್ರಮವಾಗಿ ನಡೆದು ಹತ್ತಿ ಎತ್ತರದ ಜಗುಲಿ/ಬೇಲಿ/ಗೋಡೆಯನ್ನು ತಲುಪಿ, ಆ ಎತ್ತರದಿಂದ ಒಮ್ಮೆಗೇ ಹಾರಿಬೀಳುತ್ತದೆ!
    ಬಹಳರಿಹರೆಮ್ಮೊಳಗೆ ಕೋಳಿವೊಲ್ ಜೀವಿಪರು
    ವಿಹಿತೋಪಮೇಯಮಿದಗಣ್ಯವೇಕೋ (By poets)||
    ಸಹನೆಯಿಂದೊಂದೊಂದೆ ಮೆಟ್ಟಲೇರುತೆ ಮತ್ತೆ
    ನಹುಷನೊಲ್ ಪಾರಿಬೀಳುವರು ತಿರೆಗೆ||

  4. ಉರಿಕಡ್ಡಿಯ ಮರ್ದೆಂಬರ್ ವಡವಾನಲಗರ್ಭಮಂ
    ಕಿರಿದಾದೊದಡೇಂ ಮೂರ್ತಿ ಪಿರಿದಪ್ಪುದು ಕೀರ್ತಿ ಕಾಣ್

  5. ನರನೀಸಮಯದ ಯಂತ್ರವು ಕೆಟ್ಟಿರೆ
    ಅರಿಯದೆ ಹೋದರು ಸಮಯವ ನಿಖರದಿ
    ಸರಿತಾ ಕೂಗುವ ಕೋಳಿಯು ಜಗತಿನ ನಿತ್ಯದ ಗಡಿಯಾರ
    ಮರೆಯದದೆಂದಿಗು ತನ್ನಯ ಕಾರ್ಯವ
    ಸುರರಿಗು ಮೇಲೈ ನೆನಪಿನ ಶಕ್ತಿಯು
    ಗರಿಗರಿ ನೋಟಿನ ಆಸೆಗೆ ಕೊಲುವರು ಧರ್ಮವದೆಲ್ಲಿಹುದು ?

  6. ಮಳೆಹನಿಯು ಬಿದ್ದೊಡನೆ ನವಿಲು ನಲಿವುದ ಕಂಡು
    ತಳಮಳವ ಮರೆಯುವರು ನಗುತೆ ಜನರು
    ಮುಳಿವರೇತಕೆ ನನ್ನ ಮಧುರಗಾನವ ಕೇಳಿ
    ತಿಳಿಯದಾಗಿಹುದೆನುತಲಿಹುದು ಕಪ್ಪೆ

    • ನೀರನ್ನು ಕೊಟ್ಟೊಡಂ ಕೋರುತಿರ್ದೊಡೆ ಕಪ್ಪೆ
      ಗಾರಾಗಿ “water waterರು”| ಎನ್ನುತ್ತೆ
      ಯಾರಿಂಗದಾಯ್ತೋ ಮಧುಗಾನಂ!!

  7. ಕೋಳಿ

    ಕೆಂಟಕಿಯ ಕೆ೦ಡದೊಳ್ ವೆಂದು ದೇವಾಲಯದ
    ನ೦ಟನಂಟಿಸಿಕೊಳದ ಪಕ್ಷಿ ಭೇದಮಲ್ತೆ೦ ?

    ಯಾವುದೇ ರಾಜಕೀಯ ದಾಳಕ್ಕೆ ಎಳೆದು ತರಲಾಗದ ನಿರುಪದ್ರವಿಯಲ್ಲವೇ ಎಂಬ ಸಾರ

    • ಛಂದಮಿದಾವುದಾವುದಿದು ಬಂಧಮಿದಾವುದು ವೃತ್ತಮಾವುದೌ?

      • ಅದೊಂದೂ ನನಗೆ ತಿಳಿಯದು . ನನ್ನ ಕಲ್ಪನೆಯ ಕೋಳಿಗೆ, ನನಗೆ ತಿಳಿದಿರುವ ಯಾವ ಛ೦ದವೂ ಸರಿಯಾಗದೆ ಇದನ್ನು ಆರಿಸಿದೆ . ಡಿ ವಿ. ಜಿ ಯವರು ”ಶ್ರೀರಾಮ ಪರೀಕ್ಷಣಂ” ನ ತಾರೆಯ ಪ್ರಶ್ನೆಯಲ್ಲಿ ಇದನ್ನ ಬಳಸಿರುತ್ತಾರೆ . ಪಂಚ ಮಾತ್ರೆಯ ದ್ವಿಪದಿ ಆಗಿರಬಹುದೆಂದು ನನ್ನ ಊಹೆ .

        • ಹೌದು, ಇದೂ ತಾರೆಯ ಪ್ರಶ್ನೆಯೂ ಪಂಚಮಾತ್ರಾ ದ್ವಿಪದಿಗಳೆ. ಹರಿಹರನ ಪುಷ್ಪರಗಳೆಯಲ್ಲಿಯೂ ಇದನ್ನು ಕಾಣಬಹುದು. ಆದರೆ ನಿಮ್ಮ ಪದ್ಯದ ಕೊನೆಯ ಗಣವು ’ಲಗಂ ದುಷ್ಟ’ವಾಗಿರುವುದರಿಂದ ಗತಿಯ ಹಳಿತಪ್ಪಿ ನನ್ನನ್ನೂ ಹಳಿತಪ್ಪಿಸಿತು 🙂 ’ಪಕ್ಷಿಭೇದಮಿದಲ್ತೆ” ಎಂದು ತಿದ್ದಿದರೆ ಸರಿಯಾದೀತು.

          • ಜೀವೆಂ ಅವರಿಗೆ ಧನ್ಯವಾದಗಳು . ಕ್ಷಮಿಸಿ . ಲಗ೦ ದೋಷ ಗಮನಕ್ಕೆ ಬಂದಿರಲ್ಲ್ಲ .

            ಕೆಂಟಕಿಯ ಕೆ೦ಡದೊಳ್ ವೆಂದು ದೇವಾಲಯದ
            ನ೦ಟನಂಟಿಸಿಕೊಳದ ಪಕ್ಷಿಭೇದಮಿದಲ್ತೆ?

    • ಏಳೇ ಗಣಗಳುಳ್ಳ ಏಳೆ ಎಂಬೊಂದು ಅಂಶಪ್ರಭೇಧವುಂಟು. ತ್ರಿಪದಿಯ ಮೂರನೆಯ ಪಾದವನ್ನು ಬಿಟ್ಟರೆ ಅದೇ ಏಳೆ:
      ವಿಷ್ಣು ವಿಷ್ಣು ವಿಷ್ಣು(ಅನುಪ್ರಾಸ) ವಿಷ್ಣು
      ವಿಷ್ಣು ಬ್ರಹ್ಮ ವಿಷ್ಣು|

      • ಧನ್ಯವಾದಗಳು ಪ್ರಸಾದ್ ಸರ್ . ಏಳೆಯ ಬಗ್ಗೆ ತಿಳಿದಿರಲಿಲ್ಲೆ

  8. ನಿರತಮು ತಪಮಮ್ ಗೈದ ಮು –
    ನಿ ರತ್ನನ೦ ಮಣಿಸಿ ಕರ್ಮಯೋಗದ ಬಲದಿಂ I
    ಗುರುವಾದ ವ್ಯಾಧನವಂ
    ಪರಮಾರ್ಥಮನರಿತು ಕೊಂದ ವರಕಟುಕ೦ ದಲ್ ? II

    ಇದು ಮಹಾಭಾರತದಲ್ಲಿ ಬರುವ ಧರ್ಮವ್ಯಾಧನ ಕುರಿತು .

  9. ಮಳೆಗಾಲದ ಕಪ್ಪೆ

    ಗುಂಡಿಗೆಯೊಡೆವ ಗುಡುಗು ಸಿಡಿಲನು
    ಮಂಡಲಕಿಳಿವ ಹನಿಯ ದಿಂಡನು
    ಕಂಡು ಹಾಡಿತು ಪೊಡವಿ ಮಳೆಯೊಡೆಯನಿಗೆ ಪೊಡಮಡುತ|
    ಬಂಡೆಯಡಿಯಡಗಿಂದ ಹೊರಗಡೆ
    ಗುಂಡು ಕಣ್ಣನು ದುಂಡು ಮಾಡುತ
    ಅಂಡಲೆದು ವಟವಟನೆ ಮಂಡೂಕಗಳು ಆಡಿದವು||

    • ಸಾಕಷ್ಟು ಸುಧಾರಿಸಿದೆ. ಅಭಿನಂದನೆಗಳು. (ಬಂಡೆಯಡಿಯೆಡೆಯಿಂದ)

    • ಮುಂದಿನ ಹಂತವಾಗಿ ಹೊರಗಡೆ/ಮಾಡುತ ಇತ್ಯಾದಿ ಆಡುಮಾತಿನ ಪದಗಳನ್ನು ಬಳಸದೆ ರಚಿಸಿ; ಅಥವಾ ಇದನ್ನೇ ತಿದ್ದಿ.

      • ಆಗಲಿ .ಪ್ರಯತ್ನಿಸುತ್ತೇನೆ.

      • ಆಥವಾ ಆಡುಮಾತುಗಳನ್ನು ಮಾತ್ರ ಬಳಸಿ ಬರೆಯಿರಿ. ಸಂಕರೋ ನರಕಾಯೈವ ಅಂತ ಕೇಳಿಲ್ಲವೆ?

    • ಹೀಗೊಂದು ಸವರಣೆ:
      ಗುಂಡಿಗೆಯ ಸೀಳ್ವಾಗಸಾರ್ಭಟ,
      ಖಂಡಕಿಳಿಯುವ ಪನಿಯನುಂ ಮೇಣ್
      ಕಂಡು ಪೊಡಮಟ್ಟುತಲಿ ಮಳೆಯೊಡೆಯಂಗೆ ಸಂತಸದಿಂ|
      ಬಂಡೆಯಡಿಯಿಂ ಪೊರಮಡುತ್ತುಂ
      ಗುಂಡುಗಣ್ಣನು ನೆತ್ತಿಗೇರಿಸು-
      ತಂಡಲೆದು ವಟವಟನೆ ಚೀರಿತು ಭೇಕಸಂಕುಲವು||

      • ಹಳೆಗನ್ನಡ ತಕ್ಕಮಟ್ಟಿಗೆ ಅರ್ಥವಾಗುತ್ತದೆ.ಆದರೆ ಬರೆಯಲು ಕಷ್ಟವಾಗುತ್ತದೆ. ಅಲ್ಲದೆ ಅನುಪ್ರಾಸ ಬರಿಸಬೇಕೆಂಬ ಇಚ್ಛೆಯಿಂದ ಮಾಡುತ ಇತ್ಯಾದಿ ಪದಗಳನ್ನು ಉಪಯೋಗಿಸಿದ್ದೇನೆ

        • ಬೇಡ, ಅನುಪ್ರಾಸ ಬೇಡ. ಪ್ರಾಸದ ತ್ರಾಸವೇ ಸಾಕು. ಒಂದಷ್ಟು ಸಿದ್ಧಿಯಾದಮೇಲೆ ಹಾಗೆ ಹೆಚ್ಚುಹೆಚ್ಚು ನಿರ್ಬಂಧಗಳನ್ನು ಒಡ್ಡಿಕೊಂಡು ಪದ್ಯರಚನೆಗೆ ಯತ್ನಿಸುವುದಾಗುತ್ತದೆ; ಅದಕ್ಕಾಗಿಯೇ ಅಶ್ವಧಾಟಿಯಂಥ ವೃತ್ತಗಳಿವೆ. ಪ್ರಸ್ತುತದಲ್ಲಿ ಮಾತ್ರಾ, ಅಂಶ ಹಾಗೂ ಪ್ರಸಿದ್ಧವೃತ್ತಗಳ ಪರಿಚಯವಾಗಲಿ. ಇವುಗಳ ಬಗೆಗೆ ಇಲ್ಲಿಯೇ ಪಾಠಗಳಿವೆ. ಹಳಗನ್ನಡಕಾವ್ಯಭಾಗಗಳೂ ಇವೆ. ಓದಿಕೊಳ್ಳಿ.

      • ತಿದ್ದಾಟದ ಆವೇಶದಲ್ಲಿ ಆಗಸಾರ್ಭಟ ಅಂತ ಅರಿಸಮಾಸ ಆಗಿಹೋಯಿತೇ….

  10. ಬೆಂಕಿಪಟ್ಟಣ:
    In the days of yore, life moved slow
    And Rishis’ ways (ಕಾಷ್ಠಘರ್ಷಣ) for long held glow
    Given today’s technology
    Let me draw an analogy
    That packable fire is arson for the foe

    • ಛಂದಸ್ಸು ಎಡವಿದೆ. ಲಿಮರಿಕ್ಕಿನ ೧,೨,೫ನೆಯ ಪಾದಗ್ಳು ಒಂದೇ ಗತಿಯದವಾಗಿರಬೇಕು (ಉದಾಹರಣೆಗೆ ೨ ೩+೩ ಗುರುಗಳು, ಕೊನೆಯದು ಊನಗಣ). ೩, ೪ ತೀರ ಉದ್ದವಾಯಿತು (ಉದಾ. ೩+೩ ಗುರುಗಳು, ಊನಗಣವಾದರೂ ಪರವಾಯಿಲ್ಲ. ಗಣಮೈತ್ರಿ ಮುಖ್ಯ). ದಯಮಾಡಿ ತಿದ್ದಿರಿ.

      • ನಾನು ಲಿಮರಿಕ್ಕಿನ ನಿಯಮಗಳನ್ನು ತಿಳಿದುಕೊಂಡಿಲ್ಲ. ಅಂದಾಜಿನಿಂದ ರಚಿಸಿದ್ದು. ನನಗೆ ಕಂಠಸ್ಥವಾಗಿರುವ ಒಂದು ಲಿಮರಿಕ್ ತುಸುಮಟ್ಟಿಗೆ ಹೀಗೆಯೇ ಇದೆ:
        I sat next to the Duchess at tea
        It was just as I thought it would be
        Her rumblings abdominal
        Were simply phenomenal
        Everyone thought it was me!

        • ಇದು ೩+೩ರ ಲಯವೇ, ಅನಾಗತಗ್ರಹವೂ ಸೇರಿದೆ. ನಿಮ್ಮ ಪದ್ಯದಲ್ಲಿ ಕೊಂಚ ಮಟ್ಟಿಗೆ ಪಾಲಿಸಿದ್ದೀರಿ.

  11. ಕಟುಕ:
    ಎಷ್ಟು ಕೊಯ್ದೊಡಮೇನು ಪ್ರಾಣಿಗಳ ದೇಹವನು
    ದೃಷ್ಟ್ಯಂಗ-ಹೃದಯ-ಪೊಡೆಯೆಂಬಂಗಮಂ|
    ಪಿಷ್ಟವಲ್ಲದೆಲಲ್ಲಿ ಕಟುಕಂಗೆ ಕಂಡಿತೇ-
    ನಷ್ಟಿಷ್ಟು ಭಯ(in the eyes)-ತೃಷ್ಣೆ(in the belly)-ಆತಂಕಗಳ್(in the heart)||

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)