ಪದ್ಯಸಪ್ತಾಹ ೨೯೮: ಚಿತ್ರಕ್ಕೆ ಪದ್ಯ ಚಿತ್ರಕ್ಕೆ ಪದ್ಯ, ಪದ್ಯ ಕಲೆ Add comments Mar 122018 8 Responses to “ಪದ್ಯಸಪ್ತಾಹ ೨೯೮: ಚಿತ್ರಕ್ಕೆ ಪದ್ಯ” ಹಾದಿರಂಪ says: March 12, 2018 at 11:31 pm ಬಿರುಸಿನಿಂದಾಚರಿಪ ಹೋಲಿಪಬ್ಬದ ಪಟದೆ ಬರಿದೆ ಕೈಗಳಿದೇಕೆ ಎಂದುಕೊಂಡೆ| ಕರಿಬಿಳಿಯ ವಸ್ತ್ರಗಳ ಕಂಡು ತೋಳುಗಳಲ್ಲಿ ಭರವಸೆಯು ಮೂಡಿ ಪರಿಹೃತವು ಶಂಕೆ|| Reply ಹಾದಿರಂಪ says: March 13, 2018 at 8:52 pm ಏನೆಲ್ಲಮಂ ರಾಜಕೀಯಕ್ಕೆ ಬಳಸುವರು ಐನಾತಿಹಬ್ಬಗಳ ಬಿಡುವರೇನೈ| ಊನಾಪಿಕಾಂಗ್ರೆಸ್ಸು ಹೋಲಿಯಂ ಬಳಸಿಹುದು ಭಾನಗಡಿಗಳ ಮುಚ್ಚೆ ತನ್ನದೆಲ್ಲಂ|| Reply ಅನಂತಕೃಷ್ಣ says: March 18, 2018 at 9:38 am 😉 Reply ಅನಂತಕೃಷ್ಣ says: March 14, 2018 at 11:25 pm ಹಾರಿಹಿಡಿಯುವೆವು ಕಾಮಚಾಪವನು ನಾವೆನುತ್ತೆ ಜನರು ತೂರಿ ಕೈಗಳನು ಬಾನಿನೆಡೆಗೆ ಬಿಟ್ಟಿರಲು ಮರುಳರವರು ಬೀರಿ ಬಣ್ಣಗಳ ಸೇರಿ ಹೋದುದಾ ಬಿಲ್ಲು ಕೈಗಳೊಳಗೆ ನೂರು ಭಾವಗಳ ಬಿತ್ತಿ ನಿಂತಿತೀ ಮನದ ಭಿತ್ತಿಯೊಳಗೆ Reply Usha says: March 15, 2018 at 11:29 am ಪರಿಪಾಟಮಿದು ಹೋಳಿಹಬ್ಬಕಿದೊ ಪರಿಕರಣ ಪರಿಪರಿಯ ಬಣ್ಣಮನೆ ಬಳಿಯೆ ಕಾಣು । ಪರಿಕಿಸುವ ತವಕಮೇತಕೆ ಬೆರೆತ ಬಣ್ಣನೆಗೆ ಪರಿಣಯಿಸುದೋಕುಳಿಗೆ ಕೇಸರಿಯ ಬಾನು ।। Reply ಹಾದಿರಂಪ says: March 16, 2018 at 7:56 pm ಮಞ್ಜುಭಾಷಿಣಿ|| ಎನಿತಿದ್ದೊಡೇನಹುದು ಬಣ್ಣಬಣ್ಣಗಳ್ ಬನಿಯಿದ್ದವೋಲಹುದು ಕೊಚ್ಚೆಗುಂಡಿಯೊಳ್| (God)ಬೆನಕಂಗೆ ಬಣ್ಣದಲರೆಷ್ಟದಿದ್ದೊಡೇಂ ಮಿನುಗಿರ್ಪ ಶ್ವೇತಸುಮಮಿಲ್ಲದಿರ್ದೊಡೈ|| Reply ಅನಂತಕೃಷ್ಣ says: March 18, 2018 at 9:35 am ಬಯಕೆಗಳವೊಲೆ ನೂರು ನೂರಿಹವು ಬಣ್ಣಗಳು ನಯನಗಳ ಸಳೆಯುತಲೆ ಬಗೆಬಗೆಗಳಿಂ ಹಯವಾಗಿಪುವು ಮನವ ಹಾರಿಸುತೆ ಗಾಳಿಯಲಿ ನಿಯಮಂಗಳೆಲ್ಲಮಂ ಮೀರಿಸುವುವು Reply ಹಾದಿರಂಪ says: March 18, 2018 at 10:59 pm These colours are transitory ಪಕಳೆ, ಚಿಟ್ಟೆಯು, ಕಪೋತ-ಮಯೂರ-ಶುಕಗಳೀ (ಶುಕಗಳ+ಈ) ಪ್ರಕೃತಿಗೇ ಸ್ಪರ್ಧೆಯೆಂಬುವವೋಲು ನೀಂ| ವಿಕೃತವರ್ಣಗಳ ಲೇಪಿಸಿಕೊಂಡೊಡೇನಹುದು ಶಕೆಸಾಸಿರಂಗಳವು ನಿಲ್ಲುವುವೆ ಪೇಳ್|| Reply Leave a Reply Cancel reply Your Comment You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong> Name (required) E-mail (required) URI Notify me of followup comments via e-mail. You can also subscribe without commenting. Check here to Subscribe to notifications for new posts
ಬಿರುಸಿನಿಂದಾಚರಿಪ ಹೋಲಿಪಬ್ಬದ ಪಟದೆ
ಬರಿದೆ ಕೈಗಳಿದೇಕೆ ಎಂದುಕೊಂಡೆ|
ಕರಿಬಿಳಿಯ ವಸ್ತ್ರಗಳ ಕಂಡು ತೋಳುಗಳಲ್ಲಿ
ಭರವಸೆಯು ಮೂಡಿ ಪರಿಹೃತವು ಶಂಕೆ||
ಏನೆಲ್ಲಮಂ ರಾಜಕೀಯಕ್ಕೆ ಬಳಸುವರು
ಐನಾತಿಹಬ್ಬಗಳ ಬಿಡುವರೇನೈ|
ಊನಾಪಿಕಾಂಗ್ರೆಸ್ಸು ಹೋಲಿಯಂ ಬಳಸಿಹುದು
ಭಾನಗಡಿಗಳ ಮುಚ್ಚೆ ತನ್ನದೆಲ್ಲಂ||
😉
ಹಾರಿಹಿಡಿಯುವೆವು ಕಾಮಚಾಪವನು ನಾವೆನುತ್ತೆ ಜನರು
ತೂರಿ ಕೈಗಳನು ಬಾನಿನೆಡೆಗೆ ಬಿಟ್ಟಿರಲು ಮರುಳರವರು
ಬೀರಿ ಬಣ್ಣಗಳ ಸೇರಿ ಹೋದುದಾ ಬಿಲ್ಲು ಕೈಗಳೊಳಗೆ
ನೂರು ಭಾವಗಳ ಬಿತ್ತಿ ನಿಂತಿತೀ ಮನದ ಭಿತ್ತಿಯೊಳಗೆ
ಪರಿಪಾಟಮಿದು ಹೋಳಿಹಬ್ಬಕಿದೊ ಪರಿಕರಣ
ಪರಿಪರಿಯ ಬಣ್ಣಮನೆ ಬಳಿಯೆ ಕಾಣು ।
ಪರಿಕಿಸುವ ತವಕಮೇತಕೆ ಬೆರೆತ ಬಣ್ಣನೆಗೆ
ಪರಿಣಯಿಸುದೋಕುಳಿಗೆ ಕೇಸರಿಯ ಬಾನು ।।
ಮಞ್ಜುಭಾಷಿಣಿ|| ಎನಿತಿದ್ದೊಡೇನಹುದು ಬಣ್ಣಬಣ್ಣಗಳ್
ಬನಿಯಿದ್ದವೋಲಹುದು ಕೊಚ್ಚೆಗುಂಡಿಯೊಳ್|
(God)ಬೆನಕಂಗೆ ಬಣ್ಣದಲರೆಷ್ಟದಿದ್ದೊಡೇಂ
ಮಿನುಗಿರ್ಪ ಶ್ವೇತಸುಮಮಿಲ್ಲದಿರ್ದೊಡೈ||
ಬಯಕೆಗಳವೊಲೆ ನೂರು ನೂರಿಹವು ಬಣ್ಣಗಳು
ನಯನಗಳ ಸಳೆಯುತಲೆ ಬಗೆಬಗೆಗಳಿಂ
ಹಯವಾಗಿಪುವು ಮನವ ಹಾರಿಸುತೆ ಗಾಳಿಯಲಿ
ನಿಯಮಂಗಳೆಲ್ಲಮಂ ಮೀರಿಸುವುವು
These colours are transitory
ಪಕಳೆ, ಚಿಟ್ಟೆಯು, ಕಪೋತ-ಮಯೂರ-ಶುಕಗಳೀ (ಶುಕಗಳ+ಈ)
ಪ್ರಕೃತಿಗೇ ಸ್ಪರ್ಧೆಯೆಂಬುವವೋಲು ನೀಂ|
ವಿಕೃತವರ್ಣಗಳ ಲೇಪಿಸಿಕೊಂಡೊಡೇನಹುದು
ಶಕೆಸಾಸಿರಂಗಳವು ನಿಲ್ಲುವುವೆ ಪೇಳ್||