ಚೆನ್ನಾಗಿದೆ.
ಎಳವೆಯ ನೆನಪೈ ಎನ್ನುವುದು ಹೆಚ್ಚು ಸೂಕ್ತ.
ಸಿಂಗಂಪಳಗಿಸು – ವಿಭಕ್ತಿಪಲ್ಲಟವಾಗಿದೆ. ಪರವಾಗಿಲ್ಲವಾದರೂ ಆದಷ್ಟು ತಪ್ಪಿಸುವುದೊಳ್ಳಿತು.
ಭಲ್ಲೂಕಂಗಳಂ ಎಂದರೆ ಹಳೆಗನ್ನಡಕ್ಕೆ ಹೆಚ್ಚು ಬಿಗಿ ಬರುತ್ತದೆ.
ಪಾಡಿದರ್ ಆಗಬೇಕು.
ಹೀಗೆ ತಿದ್ದಬಹುದು
ಎಳವೆಯ ನೆನಪೈ ಹರಿಯಂ(ಕುದುರೆ-ಸಿಂಹ ಎರಡೂ ಆಗುತ್ತದೆ)
ಪಳಗಿಸಿ ಪೇರಾನೆ-ಕರಡಿಗಳನೆಲ್ಲಮುಮಂ /
ಬಳಿ ತಂದಿರ್ದರ್ ಹಾರಿದ
ರಿಳಿದರ್ ಪಾಡಿ ಪ್ರಭಾತ ಸರ್ಕಸ್ಸಿನವರ್//
ನಂಬುಗೆಯೇ ಜೀವನಮೆಂ
ದೆಂಬರ್ ತಿಳಿದರ್ಕಳೆಲ್ಲರೀ ತಿರೆಯೊಳ್ ತಾಂ /
ದೊಂಬಿಯ ನಡುವಿರ್ಪಾಗಳು
ಮಂಬರದೊಳ್ ಕೆಳೆಯನನ್ನೆ ನೆಮ್ಮುವರಿವರೈ//
ಭೂಮಿಯಲ್ಲಿ ಬಾಳಲು ನಂಬಿಕೆಯೇ ಬೇಕು ಎಂದು ತಿಳಿದವರು ಹೇಳುತ್ತಾರೆ. ಈ ಸರ್ಕಸ್ಸಿನವರು ಗಲಾಟೆಯ ನಡುವೆ, ಆಕಾಶದಲ್ಲಿದ್ದರೂ ಕೂಡ ಗೆಳೆಯನನ್ನೇ ನಂಬಿರುತ್ತಾರೆ.
ಈ ಚಿತ್ರಕ್ಕೆ ಯಾವ ಕಲ್ಪನೆಯೂ ಹೊಳೆಯುತ್ತಿಲ್ಲ. ಪ್ರತಿಬಾರಿಯೂ ಒಂದಾದರೂ ಪದ್ಯವನ್ನು ಬರೆದಿದ್ದೇನೆ. ಆದರೆ ಈ ಬಾರಿ ಈ ಪ್ರತಿಕ್ರಿಯಾಪದ್ಯವಷ್ಟೇ ನನ್ನ ವಂತಿಗೆ. (PS: I eventually penned a few verses)
ಗಮ್ಮತ್ತಿನಿಂದೆ ಕರವಿಡಿ-
ದೊಮ್ಮೆಗೆ ತೂಗುತ್ತೆ ಬೀಳದೊಲು ಕಾಯ್ದಿರ್ದುಂ|
ನೆಮ್ಮಿರ್ಪನಂ ತೊರೆಯುತುಂ
ಗುಮ್ಮೆನುತಿನ್ನೊರ್ವನತ್ತೆ ಕೈಚಾಚುವೆಯೇಂ||
ಹಗಲು-ರಾತ್ರಿಯ ಸಂಧಿಯ ಕಲ್ಪನೆ. ಆ make before break ಪದ್ಯದಲ್ಲಿ ಬಂದಿಲ್ಲ ಅಲ್ಲವೇ?
“ಹಗಲ” ಆಳಿನ ಕೈಹಿಡಿದು ಹೆಗಲೇರಲು ಹಿಂದಿರುಗಿ ಬಂದ “ಇರುಳ” ಬಾಲೆಯನ್ನು – ಬೆರಗು ಗಣ್ಣಿನಿಂದ ಕಂಡ ಚಂದಿರನು, (ನಕ್ಷತ್ರಗಳ ಗುರುತಿರುವ ) ಅವಳನ್ನು “ತಾರಾಮಣಿ” ಎಂದು ಭ್ರಮಿಸಿದನೇ ?!!
(“ತಾರೆ ” ಎಂದರೆ – “ನನ್ನ ಕೈ ಹಿಡಿಯೆ ಬಾರೆ” ಎಂಬ pun ಕೂಡಾ ತರುವ ಪ್ರಯತ್ನ !!)
ಆಹಾ! ಚೆನ್ನಾಗಿದೆ. ಇಲ್ಲಿ ಹಗಲನ್ನು ಆಳಿಗೆ ಹೋಲಿಸಿದ್ದೀರಿ. ಇದು ರೂಪಕ ಅಲಂಕಾರವಾಯ್ತಲ್ಲವೇ. ಅದರ ಬದಲಿಗೆ ಉಪಮಾ ಬಂದರೆ, ಅದರಂತೆ ಇದು ಎಂದು ಚಿತ್ರ ನೋಡುವನಿಗೆ ಅನಿಸುತ್ತಿತ್ತೋ ಏನೋ.. ಇದು ಪಾಮರನ ಜಿಜ್ಝಾಸೆ ಅಷ್ಟೇ..
ಧನ್ಯವಾದಗಳು ರವೀಂದ್ರ . ನೀನು ಹೇಳಿರುವುದು ಸರಿ , ಅರ್ಥಾಲಂಕಾರ ಭೂಷಿತ ಪದ್ಯ ರಚನೆ ಸಾಧ್ಯವಾಗುತ್ತಿಲ್ಲ . ಪ್ರಾಸ ಪದಗಳನ್ನು ಹೊಂದಿಸಿಕೊಂಡು (ಸ್ವಲ್ಪ ಶಬ್ದಾಲಂಕಾರದೊಂದಿಗೆ ) ಕಂದಪದ್ಯ ಇಲ್ಲವೇ ಚೌಪದಿಯ ರಚನೆಗೇ ಸೀಮಿತವಾಗುತ್ತಿದೆ . ಅಧ್ಯಯನದ ಕೊರತೆಯಿಂದಾಗಿ ಸುಧಾರಣೆಯೂ ಸಾಧ್ಯವಾಗುತ್ತಿಲ್ಲ !!
೧) ಹೌದು, ’ದಿವಿಜ’ಕ್ಕಿಂತ ’ಡಿವಿಜಿ’ ಎಂದರೆ ಸ್ಪಷ್ಟತೆಯಿರುತ್ತದೆ. ಮುಕ್ತಕವು ವಿವರಣನಿರಪೇಕ್ಷವಿರಬೇಕು, ಸರಿಯೆ. ಆಗ ’ನೋಟಕರುಮಾಟಕರೆ ಮಂಕುತಿಮ್ಮ’ ಎಂಬುದನ್ನು ಪದ್ಯದಲ್ಲೇ ಗೋಪನಮಾಡಬೇಕಾಗುತ್ತದೆ. ದೊಡ್ಡ ವೃತ್ತವನ್ನು ಆಯ್ದುಕೊಂಡು ಇದನ್ನೂ ಸಾಧಿಸಬಹುದು. ಚಾಟುಪದ್ಯವಾದ್ದರಿಂದ ಇಷ್ಟು ಸ್ವಾತಂತ್ರ್ಯವನ್ನು ವಹಿಸಿದೆ.
೨) ’ಮೇಣ್’ಶಬ್ದದ ಔಚಿತ್ಯ ತಿಳಿಯಲಿಲ್ಲ
೩) ಎರಡನೆಯ ಪಾದಕ್ಕೆ ಮಾತ್ರ ಉಕ್ತಿಚಿಹ್ನೆ(quotation mark) ಏಕೆ? ಇಡಿಯ ಪದ್ಯಕ್ಕೇ ಅದು ಬೇಕಲ್ಲವೆ?
ಆಹಾ! ಕಲ್ಪನೆ ತುಂಬಾ ಚೆನ್ನಾಗಿದೆ. ಸಾಧಾರಣ ಗುಣಗಳನ್ನಾಶ್ರಯಿಸಿಯೂ ಸುತ್ತಲಿನ ಕತ್ತಲೆಯ ನಡುವೆಯೂ ನಲಿಯುವ ಮನುಷ್ಯವೈಚಿತ್ರ್ಯದ ಕಲ್ಪನೆ ತರುತ್ತಿದೆ. ಸದ್ಗುಣ ಎನ್ನುವಲ್ಲಿ ನನಗೆ ಸ್ವಲ್ಪ ಅನ್ವಯಕ್ಲೇಷವಾಗುತಿದೆ. ನಿಮ್ಮೊಡನೆ ಫೋನ್ ಮಾಡಿ ಮಾತನಾಡುತ್ತೇನೆ.
If it all boils down to perfect timing/matching, how about this verse of mine in achieving the matching of prAsa-s at the perfect place?
ಅಲ್ಲಿಗಲ್ಲಿಗೆ ಚೇಷ್ಟಮಂ ಪೊಂದಿಪುದನೆ ನೀಂ
ತಲ್ಲಜತ್ವಮೆನುತ್ತರಿವೆಯಾದೊಡಂ|
ಬಲ್ಲಿದನೆ ತೋಲದಿಂ ಪೇಳು ಪ್ರಾಸಮನಿಲ್ಲಿ(ಶಿ.ದ್ವಿ.)
ಸಲ್ಲಿಸಿರ್ಪುದು ನಿಮ್ನಚೇಷ್ಟಮೇನೈ??
And akin to those two, I too have achieved it with both my hands (typing)!
ಎಳೆವೆಯ ನೆನಪೈ! ಹರಿಯಂ
ಪಳಗಿಸಿ ಪೇರಾನೆ-ಕರಡಿಗಳನೆಲ್ಲಮುಮಂ |
ಬಳಿತಂದಿರ್ದರ್! ಹಾರಿದ-
ರಿಳಿದರ್ ಪಾಡಿ ಪ್ರಭಾತ ಸರ್ಕಸ್ಸಿನವರ್! ||
ಚಿತ್ರ ನೋಡಿದ ತಕ್ಷಣ ನನಗೆ ನೆನಪು ಬಂದದ್ದು ನಾನು ಚಿಕ್ಕವನಾಗಿದ್ದಾಗ ನಮ್ಮೂರಿಗೆ ಬರುತ್ತಿದ್ದ ಪ್ರಭಾತ್ ಸರ್ಕಸ್ಸು. ಅದರ ಬಗ್ಗೆಯೇ ಬರೆದಿದ್ದೇನೆ.
ಚೆನ್ನಾಗಿದೆ.
ಎಳವೆಯ ನೆನಪೈ ಎನ್ನುವುದು ಹೆಚ್ಚು ಸೂಕ್ತ.
ಸಿಂಗಂಪಳಗಿಸು – ವಿಭಕ್ತಿಪಲ್ಲಟವಾಗಿದೆ. ಪರವಾಗಿಲ್ಲವಾದರೂ ಆದಷ್ಟು ತಪ್ಪಿಸುವುದೊಳ್ಳಿತು.
ಭಲ್ಲೂಕಂಗಳಂ ಎಂದರೆ ಹಳೆಗನ್ನಡಕ್ಕೆ ಹೆಚ್ಚು ಬಿಗಿ ಬರುತ್ತದೆ.
ಪಾಡಿದರ್ ಆಗಬೇಕು.
ಹೀಗೆ ತಿದ್ದಬಹುದು
ಎಳವೆಯ ನೆನಪೈ ಹರಿಯಂ(ಕುದುರೆ-ಸಿಂಹ ಎರಡೂ ಆಗುತ್ತದೆ)
ಪಳಗಿಸಿ ಪೇರಾನೆ-ಕರಡಿಗಳನೆಲ್ಲಮುಮಂ /
ಬಳಿ ತಂದಿರ್ದರ್ ಹಾರಿದ
ರಿಳಿದರ್ ಪಾಡಿ ಪ್ರಭಾತ ಸರ್ಕಸ್ಸಿನವರ್//
ತಿದ್ದಿದ್ದೇನೆ ಸರ್. ತುಂಬಾ ಧನ್ಯವಾದಗಳು.
ನಂಬುಗೆಯೇ ಜೀವನಮೆಂ
ದೆಂಬರ್ ತಿಳಿದರ್ಕಳೆಲ್ಲರೀ ತಿರೆಯೊಳ್ ತಾಂ /
ದೊಂಬಿಯ ನಡುವಿರ್ಪಾಗಳು
ಮಂಬರದೊಳ್ ಕೆಳೆಯನನ್ನೆ ನೆಮ್ಮುವರಿವರೈ//
ಭೂಮಿಯಲ್ಲಿ ಬಾಳಲು ನಂಬಿಕೆಯೇ ಬೇಕು ಎಂದು ತಿಳಿದವರು ಹೇಳುತ್ತಾರೆ. ಈ ಸರ್ಕಸ್ಸಿನವರು ಗಲಾಟೆಯ ನಡುವೆ, ಆಕಾಶದಲ್ಲಿದ್ದರೂ ಕೂಡ ಗೆಳೆಯನನ್ನೇ ನಂಬಿರುತ್ತಾರೆ.
ಈ ಚಿತ್ರಕ್ಕೆ ಯಾವ ಕಲ್ಪನೆಯೂ ಹೊಳೆಯುತ್ತಿಲ್ಲ. ಪ್ರತಿಬಾರಿಯೂ ಒಂದಾದರೂ ಪದ್ಯವನ್ನು ಬರೆದಿದ್ದೇನೆ. ಆದರೆ ಈ ಬಾರಿ ಈ ಪ್ರತಿಕ್ರಿಯಾಪದ್ಯವಷ್ಟೇ ನನ್ನ ವಂತಿಗೆ. (PS: I eventually penned a few verses)
ಗಮ್ಮತ್ತಿನಿಂದೆ ಕರವಿಡಿ-
ದೊಮ್ಮೆಗೆ ತೂಗುತ್ತೆ ಬೀಳದೊಲು ಕಾಯ್ದಿರ್ದುಂ|
ನೆಮ್ಮಿರ್ಪನಂ ತೊರೆಯುತುಂ
ಗುಮ್ಮೆನುತಿನ್ನೊರ್ವನತ್ತೆ ಕೈಚಾಚುವೆಯೇಂ||
ಚೆನ್ನಾಗಿದೆ.
ಧನ್ಯವಾದಗಳು ರವೀಂದ್ರರೇ.
@ಹಾದಿರಂಪ ;
ಚಿತ್ರಂ ತೋರಿರ್ಕುಮೀರ್ವರ್ಕಳನೆ ಪರಿಕಿಸಲ್ ಮೂರನೇಯಾತನಿಲ್ಲಂ!
-ಈರ್ವರ್ಕಳ್- ಪ್ರಯೋಗ ಸರಿಯೇ…?
Exactly my point – that he is so callous as to abandon a faithful friend for a stranger!
I got your point. But the picture depicts only two people, and one is ready to leave the pole, as he believes his friend.
ತಿರೋಧಾನಮಾರ್ಗದ್ದು. http://padyapaana.com/?p=844 ಇಲ್ಲಿನ ಸಂಖ್ಯೆ ೪ರ ಪದ್ಯವನ್ನು ನೋಡಿ, ಇದೇ ಜಾಡಿನಲ್ಲಿದೆ. ಕೊಳ್ಳೇಗಾಲರೊಂದಿಗಿನ ಪದ್ಯಪ್ರತಿಕ್ರಿಯೆಗಳೂ ಆಸ್ವಾದ್ಯ.
Thanks for sharing:-)
ಪಗಲಾಳ ಕೈ ಪಿಡಿದು ಪೆಗಲೇರುವಾಸೆಯಲಿ
ಮಗುಳೇಳು ತಿರಲಿರುಳ ಬಾಲೆಯಿಂತು |
ಬಿಗುರುಗೊಂಡದ ಕಂಡು ಬಿರುಗಣ್ಣ ಚಂದಿರನು
ಬಗೆವಡುತಿರ್ಪನಲ “ತಾರೆ”ಯೆಂದು !!
ಮಗುಳ್ = ತಲೆಕೆಳಗಾಗಿಬೀಳು
ಬಿಗುರ್ = ಬೆರಗು
ಬಗೆವಡು = ವಿಚಾರಮಾಡು
ಅರ್ಥವಾಗಲಿಲ್ಲ. 🙁
ಹಗಲು-ರಾತ್ರಿಯ ಸಂಧಿಯ ಕಲ್ಪನೆ. ಆ make before break ಪದ್ಯದಲ್ಲಿ ಬಂದಿಲ್ಲ ಅಲ್ಲವೇ?
“ಹಗಲ” ಆಳಿನ ಕೈಹಿಡಿದು ಹೆಗಲೇರಲು ಹಿಂದಿರುಗಿ ಬಂದ “ಇರುಳ” ಬಾಲೆಯನ್ನು – ಬೆರಗು ಗಣ್ಣಿನಿಂದ ಕಂಡ ಚಂದಿರನು, (ನಕ್ಷತ್ರಗಳ ಗುರುತಿರುವ ) ಅವಳನ್ನು “ತಾರಾಮಣಿ” ಎಂದು ಭ್ರಮಿಸಿದನೇ ?!!
(“ತಾರೆ ” ಎಂದರೆ – “ನನ್ನ ಕೈ ಹಿಡಿಯೆ ಬಾರೆ” ಎಂಬ pun ಕೂಡಾ ತರುವ ಪ್ರಯತ್ನ !!)
ಆಹಾ! ಚೆನ್ನಾಗಿದೆ. ಇಲ್ಲಿ ಹಗಲನ್ನು ಆಳಿಗೆ ಹೋಲಿಸಿದ್ದೀರಿ. ಇದು ರೂಪಕ ಅಲಂಕಾರವಾಯ್ತಲ್ಲವೇ. ಅದರ ಬದಲಿಗೆ ಉಪಮಾ ಬಂದರೆ, ಅದರಂತೆ ಇದು ಎಂದು ಚಿತ್ರ ನೋಡುವನಿಗೆ ಅನಿಸುತ್ತಿತ್ತೋ ಏನೋ.. ಇದು ಪಾಮರನ ಜಿಜ್ಝಾಸೆ ಅಷ್ಟೇ..
ಧನ್ಯವಾದಗಳು ರವೀಂದ್ರ . ನೀನು ಹೇಳಿರುವುದು ಸರಿ , ಅರ್ಥಾಲಂಕಾರ ಭೂಷಿತ ಪದ್ಯ ರಚನೆ ಸಾಧ್ಯವಾಗುತ್ತಿಲ್ಲ . ಪ್ರಾಸ ಪದಗಳನ್ನು ಹೊಂದಿಸಿಕೊಂಡು (ಸ್ವಲ್ಪ ಶಬ್ದಾಲಂಕಾರದೊಂದಿಗೆ ) ಕಂದಪದ್ಯ ಇಲ್ಲವೇ ಚೌಪದಿಯ ರಚನೆಗೇ ಸೀಮಿತವಾಗುತ್ತಿದೆ . ಅಧ್ಯಯನದ ಕೊರತೆಯಿಂದಾಗಿ ಸುಧಾರಣೆಯೂ ಸಾಧ್ಯವಾಗುತ್ತಿಲ್ಲ !!
ನೋಟಕರುಮಾಟಕರೆ ಮಂಕುತಿಮ್ಮ…
ಶ್ರದ್ಧೆಯಿದ್ದೊಡೆ ದಿವಿಜರುಕ್ತಿಯೊಳ್ ನೀನೀಗ
ಸಿದ್ಧಿಯಂ ಮೆರೆಯೆಲವೊ ಮಂಕುತಿಮ್ಮ|
ಪದ್ಧತಿಯನಾಖೇಟಕರ(gymnast) ನೋಡದೆಲೆ ಬರಿದೆ,
(Laziness)ಮಿದ್ಧಮಂ ತೊರೆದು ತೂಗಾಗಸದೊಳು||
ಸ್ಪಷ್ಟವಾಗಲಿಲ್ಲ 🙁
ಡಿವಿಜಿಯವರ ಆ ಉಕ್ತಿಯಲ್ಲಿ ನಿನಗೆ ವಿಶ್ವಾಸವಿದ್ದರೆ, ಆ ದೊಂಬರಾಟವನ್ನು ಬರಿದೆ ನೋಡುತ್ತಕೂಡಬೇಡ, ನೀನೂ(ನೋಟಕ) ತೂಗಾಡು(ಆಟಕ) ನೋಡೋಣ!
ಹೀಗೆ ಮಾಡಬಹುದೇ?
ಶ್ರದ್ಧೆಯಿರೆ ಡೀವೀಜಿಯುಕ್ತಿಯೊಳ್ ನಿನಗೆ ಮೇಣ್
“ಸಿದ್ಧಿಯಂ ಮೆರೆಯೆಲವೊ ಮಂಕುತಿಮ್ಮ”|
ಪದ್ಧತಿಯನಾಖೇಟಕರ ನೋಡದೆಲೆ ಬರಿದೆ,
ಮಿದ್ಧಮಂ ತೊರೆದು ತೂಗಾಗಸದೊಳು||
೧) ಹೌದು, ’ದಿವಿಜ’ಕ್ಕಿಂತ ’ಡಿವಿಜಿ’ ಎಂದರೆ ಸ್ಪಷ್ಟತೆಯಿರುತ್ತದೆ. ಮುಕ್ತಕವು ವಿವರಣನಿರಪೇಕ್ಷವಿರಬೇಕು, ಸರಿಯೆ. ಆಗ ’ನೋಟಕರುಮಾಟಕರೆ ಮಂಕುತಿಮ್ಮ’ ಎಂಬುದನ್ನು ಪದ್ಯದಲ್ಲೇ ಗೋಪನಮಾಡಬೇಕಾಗುತ್ತದೆ. ದೊಡ್ಡ ವೃತ್ತವನ್ನು ಆಯ್ದುಕೊಂಡು ಇದನ್ನೂ ಸಾಧಿಸಬಹುದು. ಚಾಟುಪದ್ಯವಾದ್ದರಿಂದ ಇಷ್ಟು ಸ್ವಾತಂತ್ರ್ಯವನ್ನು ವಹಿಸಿದೆ.
೨) ’ಮೇಣ್’ಶಬ್ದದ ಔಚಿತ್ಯ ತಿಳಿಯಲಿಲ್ಲ
೩) ಎರಡನೆಯ ಪಾದಕ್ಕೆ ಮಾತ್ರ ಉಕ್ತಿಚಿಹ್ನೆ(quotation mark) ಏಕೆ? ಇಡಿಯ ಪದ್ಯಕ್ಕೇ ಅದು ಬೇಕಲ್ಲವೆ?
ಗುಣಮೆಳಲುತ್ತಿರಲದಕೀ
ಯಣುವನವೋಲಿರ್ಪರಾಂತು ಸರ್ಕಸ್ಸಿನೊಳೇ/
ಯಣಮುಂ ಭಯಮಿಲ್ಲದೆ ಸ
ದ್ಗುಣಮೆಂಬಂತೆವೊಲೆ ರಂಜಿಪರ್ ಲೋಕಮನೇ//
ಗುಣ -ಹಗ್ಗ ಎಂಬರ್ಥವನ್ನು ಬಳಸಿಕೊಂಡಿದ್ದೇನೆ.
ಸಡಿಲವಾಗಿ ಜೋಲುತ್ತಿರುವ ಗುಣವನ್ನಾಶ್ರಯಿಸಿ ಜೀವಭಯವಿಲ್ಲದೇ ಲೋಕವನ್ನು ರಂಜಿಸುವ ಸದ್ಗುಣವನ್ನು ತೋರುತ್ತಿದ್ದಾರೆ.
ಆಹಾ! ಕಲ್ಪನೆ ತುಂಬಾ ಚೆನ್ನಾಗಿದೆ. ಸಾಧಾರಣ ಗುಣಗಳನ್ನಾಶ್ರಯಿಸಿಯೂ ಸುತ್ತಲಿನ ಕತ್ತಲೆಯ ನಡುವೆಯೂ ನಲಿಯುವ ಮನುಷ್ಯವೈಚಿತ್ರ್ಯದ ಕಲ್ಪನೆ ತರುತ್ತಿದೆ. ಸದ್ಗುಣ ಎನ್ನುವಲ್ಲಿ ನನಗೆ ಸ್ವಲ್ಪ ಅನ್ವಯಕ್ಲೇಷವಾಗುತಿದೆ. ನಿಮ್ಮೊಡನೆ ಫೋನ್ ಮಾಡಿ ಮಾತನಾಡುತ್ತೇನೆ.
ಓಹ್! ಸರಿ ಹೊಳ್ಳರೇ, ಖಂಡಿತವಾಗಿ ಮಾತನಾಡೋಣ.
ಛಂಗನೆ ಮರದಿಂ ಮರಕಂ
ಲಂಘಿಪ ಕಲೆಯಂ ಕಳೇಬರವೆ ಮರೆತಿರಲೀ
ಲಂಗಿಗರಾಟಂ ಕಾಣಲ್
ದಂಗಾಗುತೆ ನೋಳ್ಪರಲ್ತೆ ಕಪಿಕುಲಜಾತರ್
ಕಪಿಗಳಿಗೆ ಸಹಜವಾದ ಈ ಕಲೆಯನ್ನು ಕಾಲಕ್ರಮೇಣ ಮನುಷ್ಯರಾಗುತ್ತಾ ಮರೆತು, ಈಗ ಮತ್ತೆ ಅದೇ ಕಲೆಯನ್ನು ತಮ್ಮಂತಹ ಮನುಷ್ಯರೇ ಪ್ರದರ್ಶಿಸಿದಾಗ ಅಚ್ಚರಿಪಡುವ ವಿಡಂಬನೆಯ ಬಗ್ಗೆ.
ಚೆನ್ನು
ಧನ್ಯವಾದಗಳು_/\_
ಚೆನ್ನಾಗಿದೆ. I suggest a small change…
ದಂಗಾಗುತೆ ನೋಳ್ಪರಲ್ತೆ ಕಪಿಕುಲಜಾತರ್
ಧನ್ಯವಾದಗಳು ಹೊಳ್ಳರೇ_/\_. ನೀವಂದಂತೆ ತಿದ್ದಿದ್ದೇನೆ
ಪಿತನಾಸರೆಯಿಂದಾಗಳೆ
ಪತಿಯಾಶ್ರಯಕೆಂದುವರ್ಪ ವಧುವಿನ ತೆರದಿಂ|
ಹಿತದಿಂ ನೆಗೆವಳ್ ನಟಿಯಾ
ರತಜನರಾತಂಕಗೊಂಡನೋಟದೆದುರಿನೊಳ್||
ಆರತ = ಮೃದುಸ್ವಭಾವದ.
ಚೆನ್ನಾಗಿದೆ.
ಬಿಡಿಸಿಕೊಂಡಿದೆ ನೋಡಿಜಾರದೊಳ ಲಾಡಿಯದು (ಇಜಾರ=Trouser)
ಸಡಿಲವಾಗುತ್ತಿಹುದು ವಸ್ತ್ರವಯ್ಯೋ|
ತಡೆಯೆ ನಾನದನೆನ್ನ ತೋಳ ಸೆಳೆಯುವ ಮುನ್ನ
ತಡಗೈಯದೆಲೆ ಎನ್ನ ಹಿಡಿದು ಬಿಸುಡೋ(ನೇಪಥ್ಯಕ್ಕೆ)||
ಅವರ ಪತಲೂನಿನಲಿ ಲಾಡಿಯೆಲ್ಲಿರ್ಪುದೈ?
ರವಿಗಿಂತ ಮೇಲೆಂಬರಿದಕೆ ಲೋಗರ್
ಕವಿಕಲ್ಪನಾಚಕ್ಷುವಿಂತೈದೆ ತೋರಿರ
ಲ್ಕೆ ವಿಶಿಷ್ಟರೀತಿಯೊಳ್ ಚಿತ್ರಮನ್ನೇ//
_/\_
ಆಹ! ಎನ್ನುವೆಯೇಕೊ? ಕೆಳಗಿಹುದು ಬಲೆಯೊಂದು
ದೇಹಕೂನವದಿಲ್ಲವೆಂದರಿತಿಹರ್|
ಐಹಿಕವನಾಡಿಸುವ ದೇವಗೇನಿದೆ ವಿಮೆಯು?
ಸಾಹಸವನವನದಂ ನೀ ಮೆಚ್ಚೆಲೋ||
The converse
ದೇಹಕೂನವದಿಲ್ಲ, ಕೆಳಗಿಹುದು ಬಲೆಯೊಂದು
(God)ಪಾಹಿಪನಿಗಿಂ ಮನುಜ ಮತಿವಂತನೈ|
ಐಹಿಕವೆ ಮೊಟಕೊರ್ವ ಮಾನಿಸನದಹುದು ನಿ-
ರ್ವಾಹಕನ(God) ಹಸ್ತವದು ಸಡಿಲಗೊಳ್ಳಲ್ (Accidents/ disease)||