ಅಯ್ಯೋ ಬೇಡ. ನನಗಂತೂ ವಯಸ್ಸಾಯಿತೆಂದು ಹಾಗೆ ಮಾಡಿದೆ. ನೀವು ಎಳವೆಯಲ್ಲೇ ಅದಕ್ಕೆ ಬಲಿಬೀಳಬೇಡಿ. ಸಹಜವಾಗಿ ರಚಿಸಲು ತೊಡಗಿಕೊಳ್ಳಿ. ಕ್ರಮೇಣ ಸಿದ್ಧಿಸುತ್ತೆ. ಇದಂತಿರಲಿ, homework ಕೊಟ್ಟಿದ್ದೆನಲ್ಲ ’ಳ’ಪ್ರಾಸಪದ್ದು, ಎಲ್ಲಿಗೆ ಬಂತು? ಅದನ್ನೂ ನಾನೇ ಮಾಡಿದ್ದೇನೆ:
ಒಳಿತಾದ ನಿಜಕಾವ್ಯದಿಂ ತುಷಿಪ ಕವಿವೊಲು
ಪುಳಕಗೊಳ್ಳದೆಲೇಕೊ ಪೋರಂ|
ಒಳಗಣ ಬಿಂಬವ ಕಂಡು ಮುನಿಯಲೀಗ
ತಿಳಿವುದೆಂತಾಮಿದರ ಗುಟ್ಟ!!
ನನ್ನ “ಕಂದ”ಗೆ ದನಿಯಾದುದಕ್ಕೆ ಧನ್ಯವಾದಗಳು ಪ್ರಸಾದ್ ಸರ್ ,
ಆದರೆ “ಗುಮ್ಮ” ಪುಲ್ಲಿಂಗ ಅಲ್ಲವೇ ?!!
(ಪುಟ್ಟ ಕಂದನನ್ನು ಕನ್ನಡಿಯ ಮುಂದೆ ಆಡಲು ಬಿಟ್ಟು ಯಾವ ತಾಯಿ ತಾನೇ ದೂರವಿದ್ದಾಳು ?!)
@ Srihari: ಅಯ್ಯೋ ಕ್ಷಮಿಸಿ. ನಾನು ಅಂಶಛಂದಸ್ಸನ್ನು ಪರಿಗಣಿಸಲೇ ಇಲ್ಲ. ಇದು ಕೆಲವು ಬಾರಿ ಆಗಿದೆ ನನಗೆ. ಇನ್ನು ಜಾಗ್ರತೆಯಿಂದಿರುತ್ತೇನೆ. ನಿಮ್ಮ ಪದ್ಯವು ಸರಿಯಾಗಿದೆ.
@ Nandan: ಸೀಸಪದ್ಯವೊಂದರಲ್ಲಿ ಮಾತ್ರಾಸೀಸ ಎಂಬೊಂದಿದೆ. ಇದು ಪಂಚಮಾತ್ರವೇ. ಇಲ್ಲಿಯೂ ಗೀತಿಯನ್ನು (ಆಟವೆಲದಿ/ ತೇಟಗೀತಿ) ಅಂಶವಾಗೇ ರಚಿಸಲಾಗುತ್ತದೇನೋ. ಸೀಸರಹಿತ ಗೀತಿಯು ಅಪರೂಪವೇ. ಸಾಂಗತ್ಯ, ತ್ರಿಪದಿ, ಅಕ್ಕರ, ಸಂತುಲಿತಗತಿಗಳೆಲ್ಲ ಶುದ್ಧ ಅಂಶಗಳೇ; ಇವುಗಳ ಮಾತ್ರಾಪ್ರಕಾರಗಳಿಲ್ಲ.
ಸಾಂಗತ್ಯ||
ತನ್ನ ಕಾವ್ಯಕೆ ತಾನೆ ಕವಿಯೊಬ್ಬ ಮಣಿವಂತೆ
ಸಂತಸ ಪಡುವುದು ಬಿಟ್ಟು
ತನ್ನ ಬಿಂಬವ ಕಂಡು ಮುನಿಸಿಕೊಂಡಿಹನೀತ
ತಿಳಿಯುವುದೆಂತಿದರ ಗುಟ್ಟು!
ಚೆನ್ನಾಗಿದೆ ನಂದನರೇ. 2&4ನೇಸಾಲುಗಳಲ್ಲಿಯೂ ಆದಿಪ್ರಾಸವನ್ನ ಪಾಲಿಸಬೇಕು.
ಗತಿಸುಭಗತೆಯಿದೆ. ಅಭಿನಂದನೆಗಳು. (ಸಂತಸಬಡುವುದನುಳಿದು)
ಧನ್ಯವಾದಗಳು ಸರ್. ಪ್ರಾಸಕ್ಕಾಗಿ ತುಂಬಾ ಯೋಚಿಸಿದೆ. ಹೊಳೆಯಲಿಲ್ಲ ಅದಕ್ಕೆ ಅಂತ್ಯಪ್ರಾಸ ಮಾಡಿದೆ.
ಒಟ್ಟು ಇರುವ ಮೂರು ಪ್ರಾಸಗಳ ಪೈಕಿ ’ನ್ನ’ ಮತ್ತು ’೦ತ’ಗಳಿಗೆ ಹೊಂದಿಸಿದ್ದೇನೆ.
ತನ್ನ ಸೃಷ್ಟಿಗೆ ತಾನೆ ಕಲೆಗಾರ ಮೆರೆವಂತೆ
ಉನ್ನತಿಯನೇಕೀತ ಪೊಂದಂ|
ತನ್ನ ಬಿಂಬವ ಕಂಡು ಮುನಿಸಿಕೊಂಡಿರುವನ-
ದಿನ್ನೆಂತರಿವುದಯ್ಯೊ ಗುಟ್ಟ!!
ಕಂತಿಯು ಮೆರೆದಂತೆ ತನ್ನ ಕಾವ್ಯಕೆ ತಾನೆ
ಸಂತಸಬಡುವುದನುಳಿದು|
ಇಂತೀತ ನಿಜಬಿಂಬಕ್ಕೇತಕ್ಕೊ ಮುನಿದಿರ್ಪ-
ನೆಂತೀಗಳರಿವೆ ನಾ ಗುಟ್ಟ||
’ಳ’ಪ್ರಾಸವನ್ನು ನೀವೇ ಯತ್ನಿಸಿ. (’ಳ’ಪ್ರಾಸಕ್ಕೆ ಬಹಳಶಬ್ದಗಳಿವೆ: ಅಳುತಳುತ, ಅಳೆದಳೆದು, ಇಳಿದಿಳಿದು, ಇಳೆಗಿಳಿದು, ಎಳೆದೆಳೆದು, ಒಳಗೊಳಗೇಽ, ಕಳಕಳಿ, ಕೆಳಗಿಳಿದು, ಗಳಗಳನೆ, ಛಳಿಛಳಿ, ಜುಳುಜುಳು, ತಿಳಿತಿಳಿದು, ತುಳಿತುಳಿದು, ತೆಳುತೆಳುವ, ತೊಳೆತೊಳೆದು, ದಳದಳ, ನಳನಳಿಸು, ಪಿಳಿಪಿಳಿ, ಫಳಫಳ, ಬಿಳಿಬಿಳಿಯ, ಬುಳುಬುಳನೆ, ಸುಳಿಸುಳಿದು, ಸೆಳೆಸೆಳೆದು, ಹಳಹಳಿಸು, ಹಳಿಗಿಳಿದು, ಹುಳಿಯಿಳಿಸು 😀 )
ಹಾದಿರಂಪರ ಪ್ರಾಸದ ಪಟ್ಟಿಯ ಸಣ್ಣ ತುಣುಕು ಕಾಣಸಿಕ್ಕಿದ್ದು ನಮ್ಮ ಅದೃಷ್ಟ 😛
ಹ್ಹಹ್ಹ. ಇದು ಈಗ ಹೊಸದದ್ದಪ್ಪ. ಆರ್ಕೈವ್ ಅಲ್ಲ.
ಧನ್ಯವಾದಗಳು ಸರ್. ಪ್ರಾಸಗಳನ್ನು ಹೀಗೆ ಲಿಸ್ಟ್ ಮಾಡಿಕೊಳ್ಳುವುದು ಒಳ್ಳೆಯ ಉಪಾಯ. ಪ್ರಯತ್ನಿಸುವೆ.
ಅಯ್ಯೋ ಬೇಡ. ನನಗಂತೂ ವಯಸ್ಸಾಯಿತೆಂದು ಹಾಗೆ ಮಾಡಿದೆ. ನೀವು ಎಳವೆಯಲ್ಲೇ ಅದಕ್ಕೆ ಬಲಿಬೀಳಬೇಡಿ. ಸಹಜವಾಗಿ ರಚಿಸಲು ತೊಡಗಿಕೊಳ್ಳಿ. ಕ್ರಮೇಣ ಸಿದ್ಧಿಸುತ್ತೆ. ಇದಂತಿರಲಿ, homework ಕೊಟ್ಟಿದ್ದೆನಲ್ಲ ’ಳ’ಪ್ರಾಸಪದ್ದು, ಎಲ್ಲಿಗೆ ಬಂತು? ಅದನ್ನೂ ನಾನೇ ಮಾಡಿದ್ದೇನೆ:
ಒಳಿತಾದ ನಿಜಕಾವ್ಯದಿಂ ತುಷಿಪ ಕವಿವೊಲು
ಪುಳಕಗೊಳ್ಳದೆಲೇಕೊ ಪೋರಂ|
ಒಳಗಣ ಬಿಂಬವ ಕಂಡು ಮುನಿಯಲೀಗ
ತಿಳಿವುದೆಂತಾಮಿದರ ಗುಟ್ಟ!!
ಈಗ ಮೂರೂ ಪ್ರಾಸದಿಂದ ನೀವು ವಿಭಿನ್ನವಾಗಿ ಮಾಡಿ!
ಪ್ರಥಮಪಾಠಮಿದಲ್ತೆ ಲೋಕಶಾಲೆಯೊಳಂಗೆ
ವ್ಯಥೆಗೊಳ್ಳೆ ನೀಮನ್ಯರುಂ ವ್ಯಥಿಪರೈ|
ಶಿಥಿಲಗೊಳ್ಳದೆ ನೆಡೆಯೆ ದಢಮಾಗಿ ನೀ ನಿನ್ನ
ಪಥಮನೇ ಅನುಕರಿಪರೆಲ್ಲರಲ್ತೆ||
ಕನ್ನಡಿಯೆದಿರ್ ಬದಿಯೂಳಿಂ –
ತೆನ್ನವೊಲಿರ್ಪಗೆ ಬೆಸುವಾಗೆ ವೆರಳಂ ವೆರಳಿಂ |
ಸನ್ನೆಗುಡದಡಗಿದವ್ವೆಯ
ಮುನ್ನಮೆಣಿಸವ ಮಣಿಸಿರ್ಪ ಕರುಳಂ ವೆರಳೊಳ್ ||
ಬಿಂಬದಲ್ಲಿ ತನ್ನಂತಿರುವವನ ಬೆರಳಿಗೆ ಬೆರಳನ್ನು ಜೋಡಿಸುವಾಗ , ಮರೆಯಲ್ಲಿ ಅಡಗಿದ್ದ ಅಮ್ಮನನ್ನು ಕನ್ನಡಿಯಲ್ಲಿ ಕಂಡು ಅವಳನ್ನು ಬೆರಳಲ್ಲಿ ಮಣಿಸಿಹನೇ ?
ಅಮ್ಮನ ಕರೆಯದಿರೇ, ಗುಮ್ಮಾ ನೀಽಽ, ಅಮ್ಮನ ಕರೆಯದಿರೇ
ನನ್ನ “ಕಂದ”ಗೆ ದನಿಯಾದುದಕ್ಕೆ ಧನ್ಯವಾದಗಳು ಪ್ರಸಾದ್ ಸರ್ ,
ಆದರೆ “ಗುಮ್ಮ” ಪುಲ್ಲಿಂಗ ಅಲ್ಲವೇ ?!!
(ಪುಟ್ಟ ಕಂದನನ್ನು ಕನ್ನಡಿಯ ಮುಂದೆ ಆಡಲು ಬಿಟ್ಟು ಯಾವ ತಾಯಿ ತಾನೇ ದೂರವಿದ್ದಾಳು ?!)
ಹೌದು ಗುಮ್ಮ ಪುಲ್ಲಿಂಗ. ಅದಕ್ಕೇ ಗುಮ್ಮಾ ಎಂದು ಬರೆದಿದ್ದೇನೆ 😉
ಕನ್ನಡಿಯಲಾದ “ಎಡಬಲದ ” ಪಾರ್ಶ್ವ ಪಲ್ಲಟ (lateral inversion ) !!
ಮಮ್ಮು ಉಣ್ಣುವ ಕೈಯನೊಮ್ಮೆ ಪ(ಕ)ಕ್ಕದ ಕೈಲಿ
ನೆಮ್ಮುsದು ನೀನಿಂತು ತರವೆ ತಿಮ್ಮ !
ಸುಮ್ಮನಾಡುತಲಿರುವೆ ಹಮ್ಮುಬಿಮ್ಮನು ತೊರೆದು
ಅಮ್ಮsನ ಕರೆಯ ಬೇಡೆಲವೊ ಗುಮ್ಮ !!
ಮುಳಿವೆಯೇಕೆ ಮಗುವೆ ಮೊಗವದು ನಿನ್ನದೇ
ಇಳೆಗೆ ಮುದವನೀವ ಚೆಂದನುವಿದೇ
ಬಳಿಗೆ ಬಾರೋ ಕಂದ ಬಿಟ್ಟು ಕನ್ನಡಿಯನು
ಅಳುವೆಯೇಕೆ ಹೂರಗೆ ಬಾರನವನು
ಮಾತ್ರಾಗಣಿತವು ತಪ್ಪಿದೆ. ಹೀಗೊಂದು ಸವರಣೆ:
ಮುಳಿಯಲೇತಕೆ ಮಗುವೆ ತನುವಹುದು ನಿನ್ನದೇ
ಇಳೆಗೆ ಮುದವನ್ನೀವ ಆ ಮೊಗವು ಮೇಣ್|
ಬಳಿಯೆನ್ನ ನೀ ಸಾರೊ ಬಿಡೆಲವೋ ಕನ್ನಡಿಯ
ಅಳಲೇಕೆ ಪೊರಮಟ್ಟನವನು ಕೇಳೋ||
ಸರ್ ಪದ್ಯ ಆಟವೆಲದಿ ಛಂದಸ್ಸಿನಲ್ಲಿದೆ.
ಬ್ರಹ್ಮ ಬ್ರಹ್ಮ ಬ್ರಹ್ಮ ವಿಷ್ಣು ವಿಷ್ಣು
ಮುಳಿವೆ/ಯೇಕೆ/ ಮಗುವೆ/ ಮೊಗವದು/ ನಿನ್ನದೇ
ಸರಿಯಲ್ಲವೇ?
ಧನ್ಯವಾದಗಳು.
ಸರ್. ಆಟವೆಲದಿಯಲ್ಲಿ & ತೇಟಗೀತಿಯಲ್ಲಿ ಮಾತ್ರೆಗಳ ಲೆಕ್ಕ ಅಲ್ಲವೇ? ಕನ್ನಡದ ಅಂಶಗಣಗಳಂತೆ ಅಲ್ಲ ಎಂದು ನನ್ನ ಅನಿಸಿಕೆ. ತಪ್ಪಿದ್ದರೆ ತಿದ್ದಿ.
@ Srihari: ಅಯ್ಯೋ ಕ್ಷಮಿಸಿ. ನಾನು ಅಂಶಛಂದಸ್ಸನ್ನು ಪರಿಗಣಿಸಲೇ ಇಲ್ಲ. ಇದು ಕೆಲವು ಬಾರಿ ಆಗಿದೆ ನನಗೆ. ಇನ್ನು ಜಾಗ್ರತೆಯಿಂದಿರುತ್ತೇನೆ. ನಿಮ್ಮ ಪದ್ಯವು ಸರಿಯಾಗಿದೆ.
@ Nandan: ಸೀಸಪದ್ಯವೊಂದರಲ್ಲಿ ಮಾತ್ರಾಸೀಸ ಎಂಬೊಂದಿದೆ. ಇದು ಪಂಚಮಾತ್ರವೇ. ಇಲ್ಲಿಯೂ ಗೀತಿಯನ್ನು (ಆಟವೆಲದಿ/ ತೇಟಗೀತಿ) ಅಂಶವಾಗೇ ರಚಿಸಲಾಗುತ್ತದೇನೋ. ಸೀಸರಹಿತ ಗೀತಿಯು ಅಪರೂಪವೇ. ಸಾಂಗತ್ಯ, ತ್ರಿಪದಿ, ಅಕ್ಕರ, ಸಂತುಲಿತಗತಿಗಳೆಲ್ಲ ಶುದ್ಧ ಅಂಶಗಳೇ; ಇವುಗಳ ಮಾತ್ರಾಪ್ರಕಾರಗಳಿಲ್ಲ.
ಧನ್ಯವಾದಗಳು ಸರ್.
ಸಕಲರೆಲ್ಲರ ದೂರುವಾಗೆಲ್ಲ ನೀಂ ಮನದಿ
ಮುಕುರವೊಂದಂ ಕಲ್ಪಿಸಿಕೊಳೊ ನಡುವೆ|
ಚಿಕಿತವೈ! ’ಬ್ರಹ್ಮಾಸ್ಮ್ಯಹಂ’, ’ಸರ್ವಮಿದು ಬೊಮ್ಮ’ –
ಯುಕುತಿಯಿಂದರಿವೆ ಈ ಉಕ್ತಿಗಳ ನೀಂ||
ಕಂದಗೆ ಕಂದದ ಜೋಡಣೆ !!
ಕಂದಂ ಕನ್ನಡಿಸಿಹ ಬಗೆ
ಬಂದಂ , “ಜ”ಗಣ ಸ್ವರೂಪಮಿದು ಬಲ್ ಚಂದಂ
ತಂದುಕೊಳಲ್ ಬಿಂಬಂ ಭಲ
ಮೊಂದುದೆಡಂ ಬಲದ ಪಲ್ಲಟಂ ಗಣನೀಯಂ !!
ತಂದುಕೊಳಲ್ = ಉಂಟುಮಾಡಿಕೊಳ್ಳು
ಒಂದು = ಹೊಂದಿಕೆಯಾಗು
(“ಕಂದ “ದಲ್ಲಿ ಜಗಣ(u-u)ವಿರಲಾಗಿ , ಬಿಂಬದಲ್ಲಿ ಉಂಟಾಗುವ ಎಡ -ಬಲದ ಪಲ್ಲಟವು ಒಪ್ಪುವoತಹುದು )