ತಾದಾತ್ಮ್ಯದಿಂ ಬ್ರಹ್ಮನನಾಂತರೆಲ್ಲರ್-
ವೇದಾಂತದೊಳ್, ಬ್ರಹ್ಮರೆ, ಚೆಂಡಿನಾಟ
ಕ್ಕೀ ದೇವಿವಿಶ್ವಂಭರೆ ನೋಂತುದರ್ಕಂ
ಮೋದಂಬೊರುತ್ತುಂ ಸಲೆ ಚೆಂಡಿದಾಯ್ತೋ?!
ವೇದಾಂತದ ಪ್ರಕಾರ ಬ್ರಹ್ಮವನ್ನು ಕುರಿತು ಸದಾ ಧ್ಯಾನಿಸುವವರು ಬ್ರಹ್ಮವೇ ಆಗಿಬಿಡುತ್ತಾರೆ.ಹಾಗೇ ಇಡೀ ಭೂಮಿಯೂ ಫುಟ್ಬಾಲನ್ನು ಕುರಿತು ಧ್ಯಾನಿಸುತ್ತಿರುವುದರಿಂದಲೋ ಏನೋ ಇಡೀ ಭೂಮಿಯೇ ಕಾಲ್ಚೆಂಡಾಗಿಬಿಟ್ಟಿದೆ..
ಈ ಕ್ಷಿತಿಯನೀಕ್ಷಿಸಲ್ ಸಾವಯವದಣುಬಂಧ
ರಕ್ಷಿಸಿರ್ಪಂತಿರ್ಪುದದು ದಿಟದೆ ಸಾ-
ಪೇಕ್ಷ ಸಿದ್ಧಾಂತದೊಳ್ ಕಾಲ್ಪನಿಕ ಜಾಲಮೇ-
ಮಕ್ಷಾಂಶ ರೇಖಾಂಶದೋಲ್ ಭಾವಿಸಲ್ ?!
ಭೂಮಿಯನ್ನು (ಷಡ್ಭುಜಾಕೃತಿಯ) “ಕಾರ್ಬನ್ ರಿಂಗ್ “ಗಳ ಪದರ ಸುತ್ತುವರಿದಂತೆ ಕಂಡ ಕಲ್ಪನೆ / ಆದರೆ (ವೈಜ್ಞಾನಿಕವಾಗಿ – ಅಕ್ಷಾಂಶ/ರೇಖಾಂಶಗಳಂತೆ) ಆ ಜಾಲ ಕೇವಲ ಕಾಲ್ಪನಿಕವೇ ಎಂಬ ಪ್ರಶ್ನೆ
ಮನೆಮನೆಯದಾರಾರು ಬಗೆಭುಜದ , ನೆಲಜಲದ
ಘನಗೋಲಮಿದುವಾರ ಕಾಲಚೆಂಡು !
ಮನಮನದ ಸವಿಯೊಲವ ಹೀರಿ ಹಂಚುತಲಿರುವ
ಮನುಕುಲವದೊಡನಿರುವ ಜೇನಹಿಂಡು !!
ಷಡ್ಬುಜಾಕೃತಿಯ ಮನೆಗಳಿಂದಾದ – ಗೋಲ football ನಂತೆ – ಅದರಲ್ಲಿ ಒಟ್ಟಾಗಿರುವ ಮನುಕುಲ ಜೇನಹಿಂಡಿನಂತೆ – ಎಂಬ ಕಲ್ಪನೆಯ ಪದ್ಯ
ನಗೆಬೀರುತಿರ್ಪಳಿಂತು ಮು-
ಡಿಗೇರಿಹ ಧವಲ ಕಿರೀಟದೊಳ್ ಭಾರತಿಯುಂ
ಬಿಗು ಭುವನಸುಂದರಿಯವಳ್
ಜಗದಗಲದ ಜಾಲದೊಳ್ ಪ್ರಸಿದ್ಧಳ್ ಬಲ್ ತಾಂ !!
www (ವರ್ಲ್ಡ್ ವೈಡ್ ವೆಬ್ ) ~ “ಜಗದಗಲದ ಜಾಲ “ದಲ್ಲಿ ಕಿರೀಟ ತೊಟ್ಟ ಭುವನ ಸುಂದರಿ ಭಾರತಿ !!
( ಹಿಮಾಲಯ ಪರ್ವತ ವಜ್ರದ ಕಿರೀಟದಂತೆ ಕಂಡ ಕಲ್ಪನೆಯಲ್ಲಿ !!)
ಎರಡೂ ಪದ್ಯಗಳೂ ಚೆನ್ನಾಗಿವೆ ಮೇಡಂ
ಧನ್ಯವಾದಗಳು ಮಂಜು .
ಸೀಸ|| ಜಗಕೆಲ್ಲ ಜ್ಯೋತಿಯನು ನೀಡುವುದು ತಾನುರಿದು ಬೆಂದು ಭಸ್ಮವದಾದೊಡಂ ದೀಪವು
ಜನಕೆಲ್ಲ ನೆಳಲನ್ನೆ ನೀಡುವುದು ಪಾದಪವು ಕಾದೊಡಂ ಬಿಸಿಲಿನೊಳ್ ತಾಂ ನಿಲ್ಲುತುಂ|
ಮಳೆಯಾಗಿ ಬಂದ ನೀರ್ ಆವಿಯಾಗುವ ಮುನ್ನಮೆನಿತೊ ನಿನ್ನಯ ತೃಷೆಯ ಹಿಂಗಿಸಿರದೇಂ
ಚಲನಶೀಲವದಪ್ಪ ಗಾಳಿ ತಾಂ ತಡೆದು ನಿಲ್ಲದೆ ನೀನುಸಿರನೆಳೆದು ಬಿಡುವನಕ ಪೇಳ್||
ಆಟವೆಲದಿ|| ಛಾತಿಯನ್ನು ಒಡ್ಡಿ ಸ್ವೀಕರಿಸೊರ್ಮೊರ್ಮೆ(Players)
ಪುಟಿಪರ್ ಚೆಂಡ ತಮ್ಮ ಶಿರದಿನೊಮ್ಮೆ|
ಪಾದದಿಂದೆ ಒದೆಸಿಕೊಳ್ವುದೆ ಸಾಮಾನ್ಯಂ
ಒದೆಸಿಕೊಂಡುಂ ಜಗವ ಮೋಹಿಪುದದು(ಚೆಂಡು)||
ಚೆನ್ನಾಗಿದೆ..ಅಲ್ಲಲ್ಲಿ ವಿಸಂಧಿಯಾಗಿದೆಯಲ್ಲ.. !
ಧನ್ಯವಾದ. ಸೀಸದಲ್ಲಿ ಸರಿಪಡಿಸಿದ್ದೇನೆ. ಗೀತಿಯಲ್ಲಿ ಕರ್ಷಣಕ್ಕೆ ಅವಕಾಶವಿದೆ.
ತಾದಾತ್ಮ್ಯದಿಂ ಬ್ರಹ್ಮನನಾಂತರೆಲ್ಲರ್-
ವೇದಾಂತದೊಳ್, ಬ್ರಹ್ಮರೆ, ಚೆಂಡಿನಾಟ
ಕ್ಕೀ ದೇವಿವಿಶ್ವಂಭರೆ ನೋಂತುದರ್ಕಂ
ಮೋದಂಬೊರುತ್ತುಂ ಸಲೆ ಚೆಂಡಿದಾಯ್ತೋ?!
ವೇದಾಂತದ ಪ್ರಕಾರ ಬ್ರಹ್ಮವನ್ನು ಕುರಿತು ಸದಾ ಧ್ಯಾನಿಸುವವರು ಬ್ರಹ್ಮವೇ ಆಗಿಬಿಡುತ್ತಾರೆ.ಹಾಗೇ ಇಡೀ ಭೂಮಿಯೂ ಫುಟ್ಬಾಲನ್ನು ಕುರಿತು ಧ್ಯಾನಿಸುತ್ತಿರುವುದರಿಂದಲೋ ಏನೋ ಇಡೀ ಭೂಮಿಯೇ ಕಾಲ್ಚೆಂಡಾಗಿಬಿಟ್ಟಿದೆ..
ಈ ಕ್ಷಿತಿಯನೀಕ್ಷಿಸಲ್ ಸಾವಯವದಣುಬಂಧ
ರಕ್ಷಿಸಿರ್ಪಂತಿರ್ಪುದದು ದಿಟದೆ ಸಾ-
ಪೇಕ್ಷ ಸಿದ್ಧಾಂತದೊಳ್ ಕಾಲ್ಪನಿಕ ಜಾಲಮೇ-
ಮಕ್ಷಾಂಶ ರೇಖಾಂಶದೋಲ್ ಭಾವಿಸಲ್ ?!
ಭೂಮಿಯನ್ನು (ಷಡ್ಭುಜಾಕೃತಿಯ) “ಕಾರ್ಬನ್ ರಿಂಗ್ “ಗಳ ಪದರ ಸುತ್ತುವರಿದಂತೆ ಕಂಡ ಕಲ್ಪನೆ / ಆದರೆ (ವೈಜ್ಞಾನಿಕವಾಗಿ – ಅಕ್ಷಾಂಶ/ರೇಖಾಂಶಗಳಂತೆ) ಆ ಜಾಲ ಕೇವಲ ಕಾಲ್ಪನಿಕವೇ ಎಂಬ ಪ್ರಶ್ನೆ
ಇಂತುಮಿಂಗಾಲ ರೇಖಾರಹಸ್ಯo ಗಡಾ
ಮುಂತು ಕಾದಿರ್ಪುದೇo ಲೋಕವಂ ಸುತ್ತ ತಾಂ
ಚಿಂತಿಸಲ್ಕಂತು ಸಾಪೇಕ್ಷಸಿದ್ಧಾಂತದೊಳ್
ತಂತು ಸಂಕಲ್ಪಮಕ್ಷಾಂಶ ರೇಖಾಂಶ ದೋಲ್ !!
“ಸ್ರಗ್ವಿಣಿ”ಯಲ್ಲಿ ತರುವ ಪ್ರಯತ್ನ !!